Hotel Business : ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಹೋಟೆಲ್‌ ತೆರೆದ ಭಾರತ ತಂಡದ ಮಾಜಿ ಕ್ರಿಕೆಟಿಗ Vistara News
Connect with us

ಕ್ರಿಕೆಟ್

Hotel Business : ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಹೋಟೆಲ್‌ ತೆರೆದ ಭಾರತ ತಂಡದ ಮಾಜಿ ಕ್ರಿಕೆಟಿಗ

ಭಾರತೀಯ ಥೀಮ್‌ ಇರುವಂಥ ಹೋಟೆಲ್‌ ಆರಂಭಿಸಿರುವ ಸುರೇಶ್‌ ರೈನಾ ಹೊಸ ಉದ್ಯಮಕ್ಕ ಕೈ ಹಾಕಿದ್ದಾರೆ.

VISTARANEWS.COM


on

Suresh Raina Hotel
Koo

ನವದೆಹಲಿ: ಭಾರತ ಕ್ರಿಕೆಟ್‌ ತಂಡ ಮಾಜಿ ಬ್ಯಾಟ್ಸ್‌ಮನ್‌ ಸುರೇಶ್ ರೈನಾ ಜೂನ್ 23 (ಶುಕ್ರವಾರ) ನೆದರ್‌ಲ್ಯಾಂಡ್ಸ್‌ನ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಭಾರತೀಯ ಥೀಮ್ ರೆಸ್ಟೋರೆಂಟ್ ಅನ್ನು ತೆರೆದಿದ್ದಾರೆ. ಮಾಜಿ ಆಲ್‌ರೌಂಡರ್‌ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೊಸ ರೆಸ್ಟೋರೆಂಟ್ ಕೆಲವು ಚಿತ್ರಗಳನ್ನು ಅಪ್ ಲೋಡ್ ಮಾಡಿದ್ದಾರೆ. ವಿಶೇಷವೆಂದರೆ, ರೈನಾ ಇತ್ತೀಚೆಗೆ ತಮ್ಮ ಪತ್ನಿಯ ಜನ್ಮದಿನವನ್ನು ಡಚ್ ರಾಜಧಾನಿಯಲ್ಲಿ ಆಚರಿಸಿದ್ದರು. ಅದೇ ರೀತಿ ಜೂನ್ 21 ರಂದು ಆಮ್‌ಸ್ಟರ್‌ಡ್ಯಾಂನಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ವೀಡಿಯೊವನ್ನು ಅವರು ಹಂಚಿಕೊಂಡಿದ್ದರು. ಇವೆಲ್ಲದರ ಬಳಿಕ ಇದೀಗ ಹೋಟೆಲ್‌ ಆರಂಭಿಸಿರುವ ಸುದ್ದಿಯನ್ನೂ ನೀಡಿದ್ದಾರೆ.

ಹೊಸ ರೆಸ್ಟೋರೆಂಟ್ ಆರಂಭಿಸಿರುವುದನ್ನು ಟ್ವಿಟರ್‌ ಮೂಲಕ ಅವರು ಘೋಷಿಸಿದ್ದಾರೆ. ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಇಂಡಿಯನ್ ರೆಸ್ಟೋರೆಂಟ್ ಅನ್ನು ಪರಿಚಯಿಸಲು ನಾನು ಸಂಪೂರ್ಣವಾಗಿ ಉತ್ಸುಕನಾಗಿದ್ದೇನೆ. ಅಲ್ಲಿ ಆಹಾರ ಮತ್ತು ಅಡುಗೆಯು ನನ್ನ ಉತ್ಸಾಹ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ : INDvsWI 2023 : ವಿಂಡೀಸ್ ಪ್ರವಾಸಕ್ಕೆ ಟೆಸ್ಟ್, ಏಕದಿನ ತಂಡ ಪ್ರಕಟ; ಯಾರಿಗೆಲ್ಲ ಸಿಕ್ತು ಚಾನ್ಸ್‌?

ನೀವು ಆಹಾರದ ಮೇಲಿನ ನನ್ನ ಪ್ರೀತಿಯನ್ನು ನೋಡಿದ್ದೀರಿ. ನನ್ನ ಪಾಕಶಾಲೆಯ ಸಾಹಸಗಳಿಗೆ ಸಾಕ್ಷಿಯಾಗಿದ್ದೀರಿ, ಈಗ, ಭಾರತದ ವಿವಿಧ ಭಾಗಗಳ ನಿಜವಾದ ರುಚಿಗಳನ್ನು ನೇರವಾಗಿ ಯುರೋಪಿನ ಮಂದಿಗೆ ಪರಿಚಯಿಸುವ ಧ್ಯೇಯ ಹೊಂದಿದ್ದೇನೆ. ಎಂದು ರೈನಾ ಹೇಳಿಕೊಂಡಿದ್ದಾರೆ.

ನನ್ನ ರುಚಿಕರವಾದ ಸಾಹಸದ ಪ್ರಯಾಣದಲ್ಲಿ ಜತೆಯಾಗಿರಿ ಎಂದು ರೈನಾ ಬರೆದುಕೊಂಡಿದ್ದಾರೆ. ನೆದರ್ಲೆಂಡ್‌ನ ರಾಜಧಾನಿಯಲ್ಲಿ ರೈನಾ ಅವರ ಸಂಬಂಧವು ಹೊಸದೇನಲ್ಲ . ಅವರ ಪತ್ನಿ ಪ್ರಿಯಾಂಕಾ ಆಮ್‌ಸ್ಟರ್‌ಡ್ಯಾಂನ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ಆಗಾಗ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಹೊಸ ರೆಸ್ಟೋರೆಂಟ್‌ ಆರಂಭಿಸುವ ಕಾರಣ ಬರುತ್ತಿರುವುದರಿಂದ ರೈನಾ ಆನಗರಕ್ಕೆ ಹೆಚ್ಚಿನ ಭೇಟಿ ನೀಡುವ ನಿರೀಕ್ಷೆಯಿದೆ. ಆಮ್‌ಸ್ಟರ್‌ಡ್ಯಾಮ್‌ನಲ್ಲಿರುವ ರೈನಾ ಇಂಡಿಯನ್ ರೆಸ್ಟೋರೆಂಟ್ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ತೆರೆದಿರುತ್ತದೆ, ಟೇಕ್ಅವೇ ವಿಭಾಗ ಮತ್ತು ಉನ್ನತ ಊಟದ ಅನುಭವ ನೀಡುವ ವಿಭಾಗವೂ ಇಲ್ಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

World Cup 2023 : ಭಾರತ ವಿರುದ್ಧ ಗೆದ್ದವರು ವಿಶ್ವ ಕಪ್​ ಗೆಲ್ತಾರೆ; ಪಾಕ್​ ತಂಡ ಮಾಜಿ ಆಟಗಾರನ ಭವಿಷ್ಯ

ಹಾಲಿ ವಿಶ್ವ ಕಪ್​ನಲ್ಲಿ (World Cup 2023) ಆಡುವ ತಂಡಗಳಲ್ಲಿ ಭಾರತ ತಂಡ ಅತ್ಯಂತ ಬಲಿಷ್ಠವಾಗಿದೆ ಎಂಬುದಾಗಿ ಪಾಕಿಸ್ತಾನದ ಮಾಜಿ ಆರಂಭಿಕ ಬ್ಯಾಟರ್​ ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

Team India
Koo

ನವ ದೆಹಲಿ: ಏಕದಿನ ವಿಶ್ವ ಕಪ್​ 2023 ರ (World Cup 2023) ಆವೃತ್ತಿಯು ಎರಡು ವಾರಗಳಿಗಿಂತ ಕಡಿಮೆ ದೂರದಲ್ಲಿದೆ. ಕ್ರಿಕೆಟ್​​ ಅಭಿಮಾನಿಗಳ ಉತ್ಸಾಹದ ಮಟ್ಟವು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ತಜ್ಞರು ಅವಿಸ್ಮರಣಿಯ ಈವೆಂಟ್​ನ ಫಲಿತಾಂಶವನ್ನು ಊಹಿಸುವಲ್ಲಿ ನಿರತರಾಗಿದ್ದರೆ, ಕೆಲವರು ತಮ್ಮ ನೆಚ್ಚಿನ ತಂಡಗಳನ್ನು ಹೆಸರಿಸುವಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಕೆಲವು ಕ್ರಿಕೆಟ್​ ಪಂಡಿತರ ಎಲ್ಲ ತಂಡಗಳ ಬಲ ಮತ್ತು ದುರ್ಬಲ ಅಂಶಗಳನ್ನು ವಿಶ್ಲೇಷಿಸುವಲ್ಲಿ ನಿರತರಾಗಿದ್ದಾರೆ.

ಇಂಗ್ಲೆಂಡ್​​ ಮಾಜಿ ನಾಯಕ ಮೈಕಲ್ ವಾನ್ ಇತ್ತೀಚೆಗೆ ಟ್ವೀಟ್​​ನಲ್ಲಿ ಆತಿಥೇಯ ಭಾರತವು ಪಂದ್ಯಾವಳಿಯಲ್ಲಿ ಗೆಲ್ಲುವ ತಂಡ ಎಂದು ಹೇಳಿದ್ದರು. ಅದನ್ನು ಹೊರತುಪಡಿಸಿದರೆ ‘ಮೆನ್ ಇನ್ ಬ್ಲೂ’ ಅನ್ನು ಸೋಲಿಸುವ ತಂಡವು ಪ್ರಶಸ್ತಿಯನ್ನು ಗೆಲ್ಲಬಹುದು ಎಂದು ಹೇಳಿದ್ದರು. ಈಗ, ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ ವಾನ್ ಅವರ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಭಾರತವು ತಪ್ಪುಗಳನ್ನು ಮಾಡದಿದ್ದರೆ ಇತರ ತಂಡಗಳಿಗೆ ಅವರನ್ನು ಸೋಲಿಸುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ.

ವಿಶ್ವ ಕ್ರಿಕೆಟ್​​ನಲ್ಲಿ ಎಲ್ಲ ರೀತಿಯಲ್ಲಿ ಸಮತೋಲನ ಹೊಂದಿರುವ ಏಕೈಕ ತಂಡ ಭಾರತ. ಮುಂಬರುವ ವಿಶ್ವಕಪ್​​ನಲ್ಲಿ ಗಮನಿಸಬೇಕಾದ ನಾಲ್ಕು ತಂಡಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದಾಗ್ಯೂ, ಭಾರತವನ್ನು ಸೋಲಿಸುವ ತಂಡವು ವಿಶ್ವಕಪ್ ಗೆಲ್ಲುತ್ತದೆ ಎಂದು ನಾನು ನಂಬುತ್ತೇನೆ. ಭಾರತ ಅತ್ಯುತ್ತಮ ತಂಡ. ಅವರ ಬ್ಯಾಟಿಂಗ್ ಪರಿಪೂರ್ಣವಾಗಿದೆ ಅವರ ಬೌಲಿಂಗ್ ಅಲ್ಲಿನ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತವಾಗಿದೆ. ಅವರು ಸ್ವಯಂ ತಪ್ಪುಗಳನ್ನು ಮಾಡದ ಹೊರತು, ಯಾವುದೇ ತಂಡವು ಅವರ ಹತ್ತಿರವೂ ಹೋಗುವುದು ಅಸಂಭವ ಎಂದು ಬಟ್ ತಮ್ಮ ಯೂಟ್ಯೂಬ್ ಚಾನೆಲ್​​ನಲ್ಲಿ ಹೇಳಿದ್ದಾರೆ.

ಉನ್ನತ ದರ್ಜೆಯ ಕ್ರಿಕೆಟ್​​

ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಕ್ರಿಕೆಟ್ ವಾತಾವರಣವು ಗಣನೀಯವಾಗಿ ಸುಧಾರಿಸಿದೆ. ಆಟಗಾರರು ಫಿಟ್ನೆಸ್​​ಗೆ ಹೆಚ್ಚಿನ ಒತ್ತು ನೀಡುತ್ತಾರೆ. ಫೀಲ್ಡಿಂಗ್ ಗುಣಮಟ್ಟವನ್ನು ಹೆಚ್ಚಿಸುತ್ತಾರೆ ಎಂದು ಬಟ್ ಹೇಳಿದ್ದಾರೆ. ಭಾರತದ ಮೂಲಸೌಕರ್ಯ ಮತ್ತಿತರ ವ್ಯವಸ್ಥೆಗಳನ್ನು ಬಟ್​ ಶ್ಲಾಘಿಸಿದರು.

ಇದನ್ನೂ ಓದಿ : Asian Games 2023 : ಶೂಟಿಂಗ್ ಸ್ಕೀಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಭಾರತ ಪುರುಷರ ತಂಡ

“ಕಳೆದ ಕೆಲವು ವರ್ಷಗಳಲ್ಲಿ ಭಾರತವು ಗಮನಾರ್ಹವಾಗಿ ಸುಧಾರಿಸಿದೆ. ಈ ಆಟಗಾರರ ಫಿಟ್ನೆಸ್ ಮಟ್ಟವು ನಾವು 15 ವರ್ಷಗಳ ಹಿಂದೆ ಹೇಳಿದ್ದಕ್ಕಿಂತ ಉತ್ತಮವಾಗಿದೆ. ಅಂತೆಯೇ, ಫೀಲ್ಡಿಂಗ್ ಗುಣಮಟ್ಟವೂ ಸುಧಾರಿಸಿದೆ. ಮೂಲಸೌಕರ್ಯದಿಂದ ಹಿಡಿದು ವೀಕ್ಷಕವಿವರಣೆಗಾರರು, ತಜ್ಞರು ಸೇರಿದಂತೆ ಭಾರತದಲ್ಲಿ ಕ್ರಿಕೆಟ್​ಗೆ ಸಂಬಂಧಿಸಿದ ಎಲ್ಲವೂ ಉನ್ನತ ದರ್ಜೆಯದ್ದಾಗಿದೆ, “ಎಂದು ಪಾಕಿಸ್ತಾನದ ಮಾಜಿ ನಾಯಕ ಹೇಳಿದರು.

ರೋಹಿತ್ ಶರ್ಮಾ ಮತ್ತು ತಂಡವು ಏಕದಿನ ವಿಶ್ವಕಪ್​​ನ ಎಲ್ಲಾ ಮೂರು ಸ್ವರೂಪಗಳಲ್ಲಿ ನಂ.1 ತಂಡವಾಗಿ ಪ್ರವೇಶಿಸಲಿದೆ. ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ 10 ತಂಡಗಳ ಟೂರ್ನಿಯಲ್ಲಿ ಅವರ ಅಭಿಯಾನ ಪ್ರಾರಂಭವಾಗುತ್ತದೆ.

Continue Reading

ಕ್ರಿಕೆಟ್

Cricket Record : T20ಯಲ್ಲಿ 314 ರನ್‌, 9 ಬಾಲ್‌ನಲ್ಲಿ ಫಿಫ್ಟಿ, 34 ಬಾಲ್‌ಗಳಲ್ಲಿ ಸೆಂಚುರಿ! ಯಾರ ದಾಖಲೆ ಇದು?

ಮಂಗೋಲಿಯಾ ವಿರುದ್ಧದ ಏಷ್ಯನ್ ಗೇಮ್ಸ್ ನ ತನ್ನ ಆರಂಭಿಕ ಪಂದ್ಯದಲ್ಲಿ ನೇಪಾಳವು ಅದ್ಭುತ ಪವರ್ ಹಿಟ್ಟಿಂಗ್ ಪ್ರದರ್ಶನದೊಂದಿಗೆ ಅನೇಕ ಕ್ರಿಕೆಟ್​ ದಾಖಲೆಗಳನ್ನು (Cricket Record) ಮುರಿದಿದೆ.

VISTARANEWS.COM


on

Nepal Team
Koo

ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ (Asian Games 2023) ಕ್ರಿಕೆಟ್​ ಸ್ಪರ್ಧೆಯ ಗ್ರೂಪ್ ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ ಪುರುಷರ ತಂಡ ಇತಿಹಾಸ ಸೃಷ್ಟಿಸಿದೆ. ಪುರುಷರ ಟೂರ್ನಮೆಂಟ್ ಆರಂಭವಾಗುತ್ತಿದ್ದಂತೆ ಸರಣಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಾಖಲೆಗಳ (Cricket Record) ಮೇಲೆ ದಾಖಲೆಗಳು ಸೃಷ್ಟಿಯಾಗಿವೆ. ನೇಪಾಳ ತಂಡವು ಮಂಗೋಲಿಯಾ ವಿರುದ್ಧ 20 ಓವರ್​ಗಳಲ್ಲಿ 314/3 ರ ನಂಬಲಸಾಧ್ಯವಾದ ಸ್ಕೋರ್ ದಾಖಲಿಸಿತು. ಕೇವಲ 120 ಎಸೆತಗಳಲ್ಲಿ 300 ರನ್​ ದಾಖಲಿಸಿ ಅಚ್ಚರಿ ಮೂಡಿಸಿತು. ಕ್ರಿಕೆಟ್​ ಆಟದ ಕಿರು ಸ್ವರೂಪದಲ್ಲಿ 300 ರನ್​ಗಳ ಗಡಿಯನ್ನು ದಾಟಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು ನೇಪಾಳ. ಏಷ್ಯನ್​ ಗೇಮ್ಸ್ ನಲ್ಲಿ ನಡೆಯುವ ಪಂದ್ಯಗಳಿಗೆ ಟ್ವೆಂಟಿ-20 ಸ್ಥಾನಮಾನ ನೀಡಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈ ಹಿಂದೆ ದೃಢಪಡಿಸಿತ್ತು. ಹೀಗಾಗಿ ನೇಪಾಳ ಮಾಡಿದ್ದೆಲ್ಲವೂ ಕ್ರಿಕೆಟ್​ ಇತಿಹಾಸದ ದಾಖಲೆ ಪುಸ್ತಕ ಸೇರಿಕೊಂಡವು.

2007ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಯುವರಾಜ್ ಸಿಂಗ್ ಅವರ ದೀರ್ಘಕಾಲದ ದಾಖಲೆಯನ್ನು ನೇಪಾಳ ಬ್ಯಾಟರ್​ ದೀಪೇಂದ್ರ ಸಿಂಗ್ ಐರಿ ಮುರಿದರು. ಅವರು 9 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ 10 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರು, ಅದರಲ್ಲಿ 48 ರನ್​ಗಳು ಸಿಕ್ಸರ್​ಗಳ ಮೂಲಕೇ ಬಂದಿದ್ದವು.

ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯೂ ಮುರಿಯಿತು. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್​​ ಡೇವಿಡ್ ಮಿಲ್ಲರ್ ಅವರನ್ನು ಹಿಂದಿಕ್ಕಿದ ನೇಪಾಳ ಬ್ಯಾಟರ್​​ ಕುಶಾಲ್ ಮಲ್ಲಾ ಕೇವಲ 34 ಎಸೆತಗಳಲ್ಲಿ ಟಿ 20 ಐನಲ್ಲಿ ವೇಗವಾಗಿ ಶತಕ ಗಳಿಸಿದರು. ಇಬ್ಬರೂ ಬ್ಯಾಟರ್​ಗಳಲ್ಲಿ 35 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಟಿದ್ದರು. ಮಲ್ಲಾ 8 ಬೌಂಡರಿ ಮತ್ತು 12 ಸಿಕ್ಸರ್​ಗಳನ್ನು ಬಾರಿಸಿ ಕೇವಲ 50 ಎಸೆತಗಳಲ್ಲಿ 137 ರನ್ ಗಳಿಸಿ ಅಜೇಯರಾಗಿ ಉಳಿದರು.

ಇತಿಹಾಸದಲ್ಲಿ ಅತಿ ಹೆಚ್ಚು ಟಿ 20 ಸ್ಕೋರ್ ಗಳ ಪಟ್ಟಿ ಇಲ್ಲಿದೆ

  1. ನೇಪಾಳ – ಮಂಗೋಲಿಯಾ ವಿರುದ್ಧ 314/4 (2023)
  2. ಅಫ್ಘಾನಿಸ್ತಾನ – ಐರ್ಲೆಂಡ್ ವಿರುದ್ಧ 278/3 (2019)
  3. ಜೆಕ್ ಗಣರಾಜ್ಯ – ಟರ್ಕಿ ವಿರುದ್ಧ 278/4 (2019)
  4. ಆಸ್ಟ್ರೇಲಿಯಾ – ಶ್ರೀಲಂಕಾ ವಿರುದ್ಧ 263/3 (2016)
  5. ಕೀನ್ಯಾ ವಿರುದ್ಧ ಶ್ರೀಲಂಕಾ 260/6 (2007)

ಕುತೂಹಲಕಾರಿ ಸಂಗತಿಯೆಂದರೆ, ಹ್ಯಾಂಗ್ಝೌನ ಝೆಜಿಯಾಂಗ್ ಯುನಿವರ್ಸಿಟಿ ಆಫ್ ಟೆಕ್ನಾಲಜಿ ಕ್ರಿಕೆಟ್ ಫೀಲ್ಡ್​​ನಲ್ಲಿ ನೇಪಾಳವು ತಮ್ಮ ಇನ್ನಿಂಗಗ್ಸ್​ಗೆ ನಿಧಾನಗತಿಯ ಆರಂಭವನ್ನು ನೀಡಿತು, ಇಬ್ಬರೂ ಆರಂಭಿಕರು 100ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್​​ನಲ್ಲಿ ಆಡಿದ್ದರು. ಆದರೆ, ಬಳಿಕ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು ನೇಪಾಳ ಬ್ಯಾಟರ್​ಗಳು.

ಒಂದೇ ಪಂದ್ಯದಲ್ಲಿ 26 ಸಿಕ್ಸರ್​ಗಳು

ನೇಪಾಳದ ಬ್ಯಾಟರ್​​ಗಳು ಒಂದೇ ಇನ್ನಿಂಗ್ಸ್​​ನಲ್ಲಿ 26 ಸಿಕ್ಸರ್​ಗಳನ್ನು ಬಾರಿಸುವ ಮೂಲಕ ತಮ್ಮ ಹಿಟ್ಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಈ ಗಮನಾರ್ಹ ಸಾಧನೆಯು ಈಗ ಟಿ 20 ಐ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್​​ನಲ್ಲಿ ಯಾವುದೇ ತಂಡವು ಅತಿ ಹೆಚ್ಚು ಸಿಕ್ಸರ್​ಗಳ ದಾಖಲೆಯಾಗಿದೆ. ಇದು 2019 ರಲ್ಲಿ ಅಫ್ಘಾನಿಸ್ತಾನವು 278/3 ಸ್ಕೋರ್ ಮಾಡಿದಾಗ 22 ಸಿಕ್ಸರ್​ಗಳ ದಾಖಲೆಯನ್ನೂ ಮುರಿದಿದೆ.

ಇದನ್ನೂ ಓದಿ :Asian Games 2023 : ಶೂಟಿಂಗ್​ನಲ್ಲಿ ಭಾರತಕ್ಕೆ ಚಿನ್ನ, 25 ಮೀಟರ್​ ಪಿಸ್ತೂಲ್​ ಸ್ಪರ್ಧೆಯಲ್ಲಿ ಮಹಿಳೆಯರ ಸಾಧನೆ

ಭಾರತ ನೇರ ಕ್ವಾರ್ಟರ್​ಫೈನಲ್ಸ್​ಗೆ

ಏಷ್ಯನ್ ಗೇಮ್ಸ್ ನ ಪುರುಷರ ಕ್ರಿಕೆಟ್​​ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ತಲಾ ಮೂರು ತಂಡಗಳನ್ನು ಹೊಂದಿರುವ ಮೂರು ಗುಂಪುಗಳಿವೆ. ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್​ಗೆ ಅರ್ಹತೆ ಪಡೆಯುತ್ತವೆ. ಅಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಂತಹ ತಂಡಗಳು ಸೇರಿಕೊಳ್ಳುತ್ತವೆ.

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಭಾಗವಾಗಿದ್ದ ಋತುರಾಜ್ ಗಾಯಕ್ವಾಡ್ ಭಾರತವನ್ನು ಮುನ್ನಡೆಸಲಿದ್ದಾರೆ.

Continue Reading

ಕ್ರಿಕೆಟ್

Shubman Gill : ಅಂತಿಮ ಪಂದ್ಯದಲ್ಲಿ ಗಿಲ್​ಗೆ ವಿಶ್ರಾಂತಿ? ಪಾಕ್​ ನಾಯಕ ಬಾಬರ್ ಅಜಮ್​ಗೆ ನೆಮ್ಮದಿ

ಶುಭ್​ಮನ್​ ಗಿಲ್​ಗೆ ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯದಲ್ಲಿ ವಿಶ್ರಾಂತಿ ನೀಡುತ್ತಿರುವ ಕಾರಣ ಅವರಿಗೆ ಬಾಬರ್ ಅಜಮ್ ನಂಬರ್​ 1 ಸ್ಥಾನವನ್ನ ಅಕ್ರಮಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.

VISTARANEWS.COM


on

Shubhman Gill
Koo

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಕ್ರಿಕೆಟ್​ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯಕ್ಕೆ ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್​​ಗೆ (Shubman Gill) ವಿಶ್ರಾಂತಿ ನೀಡಲಾಗಿದೆ. ಇದರಿಂದಾಗಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಉಳಿಯಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಶುಬ್ಮನ್​ ಗಿಲ್ 74 ಮತ್ತು 104 ರನ್ ಗಳಿಸಿದ್ದಾರೆ. ಮೂರು ಏಕದಿನ ಪಂದ್ಯಗಳಿಗೆ ಮೊದಲು, ಬಲಗೈ ಬ್ಯಾಟರ್​ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಬಾಬರ್ ಅಜಮ್ ಅವರನ್ನು ಹಿಂದಿಕ್ಕಲು ಸುವರ್ಣಾವಕಾಶವಿತ್ತು. ರಾಜ್​ಕೋಟ್​ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕಳೆದ ಎರಡು ಹಣಾಹಣಿಗಳಲ್ಲಿ ಶತಕ ಹಾಗೂ ಅರ್ಧಶತಕಗಳನ್ನು ಗಳಿಸಿರುವ ಗಿಲ್​​ಗೆ ಖಂಡಿತವಾಗಿಯೂ ಮತ್ತೊಂದು ದೊಡ್ಡ ಸ್ಕೋರ್ ಗಳಿಸುವ ಅವಕಾಶವಿತ್ತು. ಆದಾಗ್ಯೂ, ಮೂರನೇ ಏಕದಿನ ಪಂದ್ಯಕ್ಕೆ ಯುವ ಆಟಗಾರನಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಅಜಮ್​ ದಾಖಲೆ ಮುರಿಯುವ ಅವಕಾಶ ತಪ್ಪಿದೆ.

ಅದ್ಭುತ ಫಾರ್ಮ್​ನಲ್ಲಿರುವ ಗಿಲ್​

ಕಳೆದ ಬುಧವಾರ ಐಸಿಸಿ ಶ್ರೇಯಾಂಕ ಅಪ್​ಡೇಟ್ ಆದ ನಂತರ ಭಾರತದ ಆರಂಭಿಕ ಆಟಗಾರ ಪ್ರಸ್ತುತ ಏಕದಿನ ಬ್ಯಾಟರ್​ಗಳ ಐಸಿಸಿ ಶ್ರೇಯಾಂಕದಲ್ಲಿ 814 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಪಾಕ್​ ನಾಯಕ ಬಾಬರ್ ಅಜಮ್ ಅವರಿಗಿಂತ ಕೇವಲ 43 ರೇಟಿಂಗ್ ಪಾಯಿಂಟ್​ಗಳಿಂದ (857 ರೇಟಿಂಗ್ ಪಾಯಿಂಟ್ಗಳು) ಹಿಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗಿಲ್ 63 ಎಸೆತಗಳಲ್ಲಿ 74 ರನ್ ಗಳಿಸಿದ್ದರು ಮತ್ತು ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 97 ಎಸೆತಗಳಲ್ಲಿ 104 ರನ್ ಗಳಿಸಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಲು ಹೆಣಗಾಡಿದ್ದ ಗಿಲ್ ಏಷ್ಯಾ ಕಪ್ 2023 ರ ಸಮಯದಲ್ಲಿ ಸಂಪೂರ್ಣವಾಗಿ ಫಾರ್ಮ್​ಗೆ ಮರಳಿದ್ದರು. ಅಲ್ಲಿ ಅವರು ಪ್ರಮುಖ ಗರಿಷ್ಠ ಸ್ಕೋರರ್ ಆಗಿ ಆಟ ಮುಗಿಸಿದ್ದರು. ಅವರು ಆಸೀಸ್ ವಿರುದ್ಧವೂ ತಮ್ಮ ಫಾರ್ಮ್​​ ಉಳಿಸಿಕೊಂಡರು. ಅಂತರರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಮುಂದಿನ ದೊಡ್ಡ ಸ್ಟಾರ್​ ಎಂಬ ಹೆಗ್ಗಳಿಕೆಗೆ ತಕ್ಕ ಹಾಗೆ ಬ್ಯಾಟ್​ ಬೀಸಿದರು. ಇದೇ ವೇಳೆ ಏಕದಿನ ಮಾದರಿಯಲ್ಲಿ ನಂ.1 ಬ್ಯಾಟರ್​​ ಎಂಬ ಟ್ಯಾಗ್ ಪಡೆಯುವ ಅವಕಾಶವೂ ಗಿಲ್​ಗೆ ಸಿಕ್ಕಿತ್ತು. ಆದಾಗ್ಯೂ, ಅವರು ಸ್ಥಾನವನ್ನು ಪಡೆಯಲು ವಿಶ್ವಕಪ್ ವರೆಗೆ ಕಾಯಬೇಕಾಗಿದೆ ಎಂದು ತೋರುತ್ತದೆ.

ಇದನ್ನೂ ಓದಿ : Shubman Gill: ಗಿಲ್​ ಶತಕಕ್ಕೆ ಸಚಿನ್​ ಸೇರಿ ಹಲವು ದಿಗ್ಗಜರ ದಾಖಲೆ ಪತನ

ಬಾಬರ್ ಅಜಮ್ ಕೊನೆಯ ಬಾರಿಗೆ ಶ್ರೀಲಂಕಾ ವಿರುದ್ಧದ ಏಷ್ಯಾ ಕಪ್ ಸೂಪರ್ 4 ಪಂದ್ಯದ ವೇಳೆ ಕಾಣಿಸಿಕೊಂಡಿದ್ದರು. ಸ್ಪರ್ಧೆಯಲ್ಲಿ ಬಾಬರ್ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಪಾಕಿಸ್ತಾನದ ನಾಯಕ ಮುಂಬರುವ ವಿಶ್ವಕಪ್ ನಲ್ಲಿ ಮತ್ತೆಕಾಣಿಸಿಕೊಳ್ಳಲಿದ್ದಾರೆ. ತಮ್ಮ ಅದ್ಭುತ ರನ್​ ಗಳಿಸುವ ಸಾಮರ್ಥ್ಯ ಪ್ರದರ್ಶನ ಮಾಡಲಿದ್ದಾರೆ. ಮೆನ್ ಇನ್ ಗ್ರೀನ್ ತಂಡವು ತನ್ನ ಆರಂಭಿಕ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ಪ್ರಶಸ್ತಿ ಗೆಲ್ಲುವ ಅವಕಾಶದಲ್ಲಿ ಬಾಬರ್ ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಉಳಿಸಿಕೊಳ್ಳುವ ಭರವಸೆ ಕೂಡ ಹೊಂದಿದ್ದಾರೆ.

Continue Reading

ಕ್ರಿಕೆಟ್

WPL 2023 : ಮಹಿಳೆಯರ ಐಪಿಎಲ್​ನಲ್ಲಿ ಬಿಸಿಸಿಐಗೆ ಸಿಕ್ಕ ಆದಾಯ ಕಡಿಮೆಯೇನಲ್ಲ

VISTARANEWS.COM


on

Womens IPL
Koo

ಮುಂಬಯಿ: ವರದಿಗಳ ಪ್ರಕಾರ ಈ ವರ್ಷದ ಆರಂಭದಲ್ಲಿ ಮುಂಬೈನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್ 2023) ನ ಉದ್ಘಾಟನಾ ಆವೃತ್ತಿಯಿಂದ (WPL 2023 ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 377.49 ಕೋಟಿ ರೂ.ಗಳಿಸಿದೆ. ಗೋವಾದಲ್ಲಿ ಸೋಮವಾರ ನಡೆದ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್ ತಮ್ಮ ವರದಿಯಲ್ಲಿ ಈ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಶೆಲಾರ್ ಅವರ ವರದಿಯಲ್ಲಿನ ಆದಾಯ ವಿಶ್ಲೇಷಣೆಯ ಪ್ರಕಾರ, 2022-23ರ ಹಣಕಾಸು ವರ್ಷದಲ್ಲಿ ಬಿಸಿಸಿಐನ ಒಟ್ಟು ಆದಾಯದ ಆರು ಶೇಕಡಾ ಮಹಿಳೆಯರ ಪ್ರೀಮಿಯರ್ ಲೀಗ್​ನಿಂದ ಬಂದಿದೆ.

ಬಿಸಿಸಿಐ ಆದಾಯಕ್ಕೆ ಐಪಿಎಲ್​ ದೊಡ್ಡ ಕೊಡುಗೆ ಕೊಟ್ಟಿದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಶೇಕಡಾ 37 , ಮಾಧ್ಯಮ ಹಕ್ಕುಗಳ ಮಾರಾಟದಿಂದ ಶೇಕಾಡ 38 . ಹಿರಿಯ ಪುರುಷರ ಕ್ರಿಕೆಟ್ ತಂಡದ ಅಂತಾರಾಷ್ಟ್ರೀಯ ಪ್ರವಾಸಗಳಿಂದ ಶೇ 10 ಪ್ರತಿಶತದಷ್ಟು ಆದಾಯ ಬಂದಿದೆ ಎಂದು ವಿವರಣೆ ನೀಡಲಾಗಿದೆ.

2022-23ನೇ ವರ್ಷವು ದೇಶೀಯ ಋತುವನ್ನು ಉತ್ಸಾಹದಿಂದ ನಡೆಸಲು ವಿಶ್ವಾಸವನ್ನು ನೀಡಿದೆ. ಅಧಿಕಾರವನ್ನು ಅನ್ನು ನನ್ನ ಹಿಂದಿನವರು ಆರೋಗ್ಯಕರ ಆರ್ಥಿಕ ಸ್ಥಿತಿಯಲ್ಲಿ ನನಗೆ ಹಸ್ತಾಂತರಿಸಿದರು. ಸಮಯ ಕಳೆದಂತೆ ಅದು ಬಲಗೊಳ್ಳುತ್ತದೆ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ. ಎಲ್ಲಾ ಸಂದರ್ಭಗಳಲ್ಲಿ ಗುಣಮಟ್ಟವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಬಿಸಿಸಿಐ ಕ್ರೀಡಾ ಜಗತ್ತಿಗೆ ಸಾಬೀತುಪಡಿಸಿದ ಎಂದು ಶೆಲಾರ್ ರಾಜ್ಯ ಅಸೋಸಿಯೇಷನ್ ಸದಸ್ಯರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

“ನನ್ನ ಹಿಂದಿನವರು ನನಗೆ ಅಧಿಕಾರ ಹಸ್ತಾಂತರ ಮಾಡುವಾಗ ಬಿಸಿಸಿಐ ಹಣಕಾಸು ಸ್ಥಿತಿ ಆರೋಗ್ಯಕರವಾಗಿತ್ತು. ದಿನ ಕಳೆದಂತೆ ಅದು ಇನ್ನಷ್ಟು ಅಭಿವೃದ್ಧಿಯಾಗುತ್ತಾ ಬಂತು ಎಂಬುದನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ. ಬಿಸಿಸಿಐ ಈ ಮಟ್ಟಕ್ಕೆ ಏರುವುದುಕ್ಕೆ ಎಲ್ಲಾ ಮಾಜಿ ಮತ್ತು ಪ್ರಸ್ತುತ ಅಧಿಕಾರಿಗಳ ಸಾಮೂಹಿಕ ಪ್ರಯತ್ನವೇ ಕಾರಣ. ನಾಯಕತ್ವದ ದೂರದೃಷ್ಟಿ ಮತ್ತು ಬಿಸಿಸಿಐನ ಎಲ್ಲಾ ಸದಸ್ಯರ ಬಲವಾದ ಬದ್ಧತೆಯು ಕೆಲವೇ ವರ್ಷಗಳ ಅವಧಿಯಲ್ಲಿ ಕ್ರಿಕೆಟ್ ಕ್ರೀಡೆಯನ್ನು ಗೌರವಾನ್ವಿತ ಎತ್ತರಕ್ಕೆ ಕೊಂಡೊಯ್ದಿದೆ. ಇದು ಇನ್ನಷ್ಟು ಅಭಿವೃದ್ಧಿ ಕಾಣಲಿದೆ ಎಂಬುದಾಗಿ ಶೆಲಾರ್ ಅವರು ಹೇಳಿಕೊಂಡಿದ್ದಾರೆ.

ಬಿಸಿಸಿಐನ ಸಮರ್ಪಣೆ ಮತ್ತು ದೃಢನಿಶ್ಚಯವು ಬಿಸಿಸಿಐ ಎಲ್ಲಾ ಸಮಯದಲ್ಲೂ ನೈತಿಕವಾಗಿ ಮತ್ತು ಆರ್ಥಿಕವಾಗಿ ಸದೃಢವಾಗಿರುವಂತೆ ನೋಡಿಕೊಂಡಿದೆ. ಎಲ್ಲಾ ಸಂದರ್ಭಗಳಲ್ಲಿ ಗುಣಮಟ್ಟವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಬಿಸಿಸಿಐ ಕ್ರೀಡಾ ಜಗತ್ತಿಗೆ ಸಾಬೀತುಪಡಿಸಿದೆ ಎಂದು ಶೆಲಾರ್​ ಅವರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

2023 ಮಾರ್ಚ್ 4 ರಿಂದ 26 ರವರೆಗೆ ನಡೆದ ಡಬ್ಲ್ಯುಪಿಎಲ್ 2023 ರಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಭಾಗವಹಿಸಿದ್ದವು. ಹರ್ಮನ್​ಪ್ರೀತ್​ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಫೈನಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್​ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಯಶಸ್ಸಿನ ಹಿನ್ನೆಲೆಯಲ್ಲಿ ಮುಂದಿನ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್​ ಅನ್ನು ಇನ್ನಷ್ಟು ಅದ್ಧೂರಿಯಾಗಿ ಆಚರಿಸಲು ಬಿಸಿಸಿಐ ಸಿದ್ಧತೆ ಮಾಡಿಕೊಂಡಿದೆ ಎಂಬುದಾಗಿ ಹೇಳಲಾಗಿದೆ.

Continue Reading
Advertisement
Madhya Pradesh Rape News
ಕ್ರೈಂ4 mins ago

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಮನೆ ಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು!

CM siddaramaiah at Chamarajanagar
ಕರ್ನಾಟಕ15 mins ago

CM Siddaramaiah: CWRC ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ಧಾರ ಎಂದ ಸಿದ್ದರಾಮಯ್ಯ

Google
EXPLAINER16 mins ago

ವಿಸ್ತಾರ Explainer: Google Birthday: ಗೂಗಲ್‌ನ 25 ವರ್ಷದ ಇತಿಹಾಸ ಹೇಗಿತ್ತು? ಒಂದು ನೋಟ ಇಲ್ಲಿದೆ

HD DeveGowda HD Kumaraswamy and PM Narendra Modi on BJP JDS alliance
ಕರ್ನಾಟಕ25 mins ago

BJP JDS alliance : ವಿಜಯದಶಮಿ ನಂತರ ಜೆಡಿಎಸ್‌ ಸೀಟು ಹಂಚಿಕೆ ಅಂತಿಮ ಮಾತುಕತೆ!

Nayanthara Vignesh Shivan twin
South Cinema31 mins ago

Actress Nayanthara: ನಯನತಾರಾ -ವಿಘ್ನೇಶ್ ಶಿವನ್ ಅವಳಿ ಮಕ್ಕಳ ಮೊದಲ ಬರ್ತ್‌ಡೇ; ಕ್ಯೂಟ್‌ ಫೋಟೊಸ್ ಔಟ್‌!

Murder case in Kolara
ಕರ್ನಾಟಕ32 mins ago

Murder Case : ಕುಡಿದ ಮತ್ತಿನಲ್ಲಿ ಮೂತ್ರ ಸಿಡಿಸಿದ; ಪ್ರಶ್ನೆ ಮಾಡಿದ ವ್ಯಾಪಾರಿಯ ಮನೆಗೆ ನುಗ್ಗಿ ಕೊಂದ ಕಿರಾತಕ!

Team India
ಕ್ರಿಕೆಟ್52 mins ago

World Cup 2023 : ಭಾರತ ವಿರುದ್ಧ ಗೆದ್ದವರು ವಿಶ್ವ ಕಪ್​ ಗೆಲ್ತಾರೆ; ಪಾಕ್​ ತಂಡ ಮಾಜಿ ಆಟಗಾರನ ಭವಿಷ್ಯ

ದೇಶ52 mins ago

Stadium row: ಕ್ರೀಡಾಂಗಣದಲ್ಲಿ ನಾಯಿ ಜತೆ ವಾಕಿಂಗ್‌ ಮಾಡಿದ್ದ ಅಧಿಕಾರಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ!

Nithya Menen
South Cinema57 mins ago

Nithya Menen: ʻಮೈನಾʼ ನಟಿ ನಿತ್ಯಾ ಮೆನನ್‌ಗೆ ತಮಿಳು ಹೀರೊನಿಂದ ಕಿರುಕುಳ; ಸ್ಪಷನೆ ಕೊಟ್ಟ ನಟಿ!

Narendra Modi
ದೇಶ1 hour ago

Lok Sabha Election 2024: 2.5 ಲಕ್ಷ ಗ್ರಾಮಗಳಲ್ಲಿ ಬಿಜೆಪಿ ‘ರಥ’ಯಾತ್ರೆ; ‘ಲೋಕ’ ಸಮರಕ್ಕೆ ರಣತಂತ್ರ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

bangalore bandh
ಕರ್ನಾಟಕ1 day ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

dina bhavishya
ಪ್ರಮುಖ ಸುದ್ದಿ8 hours ago

Dina Bhavishya : ನಿಮಗೆ ಆಗದವರು ಪಿತೂರಿ ಮಾಡ್ಬಹುದು ಎಚ್ಚರ!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ2 days ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ2 days ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ2 days ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ2 days ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ3 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

ಟ್ರೆಂಡಿಂಗ್‌