Site icon Vistara News

WBBL 2023 : ಟವೆಲ್​ನಲ್ಲಿ ಚೆಂಡು​ ಹಿಡಿದ ಕ್ರಿಕೆಟ್​ ಆಟಗಾರ್ತಿಗೆ ಐದು ರನ್​ ದಂಡ!

WBBL

ಬೆಂಗಳೂರು: ಮಹಿಳಾ ಬಿಗ್ ಬ್ಯಾಷ್ ಲೀಗ್ 2023 ರ 49ನೇ ಪಂದ್ಯದಲ್ಲಿ ಬ್ರಿಸ್ಬೇನ್​ ಹೀಟ್ಸ್ ತಂಡದ ಆಟಗಾರ್ತಿ ಅಮೆಲಿಯಾ ಕೆರ್ ಟವೆಲ್ ಬಳಸಿ ಚೆಂಡನ್ನು ಹಿಡಿದ ನಂತರ ಆ ತಂಡಕ್ಕೆ ಐದು ರನ್​ಗಳ ದಂಡ ವಿಧಿಸಲಾಯಿತು. ಹತ್ತನೇ ಓವರ್​ನ ಎರಡನೇ ಎಸೆತದಲ್ಲಿ ಎದುರಾಳಿ ತಂಡದ ಬ್ಯಾಟರ್​ ಆಶ್ಲೆ ಗಾರ್ಡನರ್ ಚೆಂಡನ್ನು ಲಾಂಗ್ ಆನ್ ಕಡೆಗೆ ಹೊಡೆದಿದ್ದರು. ಫೀಲ್ಡರ್ ಚೆಂಡನ್ನು ಸಂಗ್ರಹಿಸಿ ನಾನ್​ ಸ್ಟ್ರೈಕ್​ಗೆ ಎಸೆದಿದ್ದರು. ಅಲ್ಲಿದ್ದ ಅಮೆಲಿಯಾ ಕೆರ್ ಅದನ್ನು ಟವೆಲ್ ಬಳಸಿ ಹಿಡಿದುಕೊಂರು. ತಪ್ಪನ್ನು ಗಮನಿಸಿದ ಅಂಪೈರ್ ತಕ್ಷಣ ಸಿಡ್ನಿ ಸಿಕ್ಸರ್​ ತಂಡಗಳಿಗೆ ಐದು ರನ್​ಗಳನ್ನು ನೀಡಲಾಯಿತು. ಹೀಗಾಗಿ ಟಾರ್ಗೆಟ್ ಕಡಿಮೆಯಾಯಿತು.

ಇದು ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರ್ತಿಯ ತಪ್ಪು ಕಕ್ಷಣವಾಗಿತ್ತು. ಇದು ಅವರ ತಂಡಕ್ಕೆ ಐದು ಹೆಚ್ಚುವರಿ ರನ್​ಗಳ ಪೆನಾಲ್ಟಿ ಸಿಗುವಂತೆ ಮಾಡಿತು. ಎಂಸಿಸಿ ಕಾನೂನು 28.2.1 ರ ಪ್ರಕಾರ ಆಟ ನಡೆಯುತ್ತಿರುವಾಗ ಅವನು / ಅವಳು ಚೆಂಡನ್ನು ಫೀಲ್ಡ್ ಮಾಡಲು ಅವನು ಅಥವಾ ಅವಳ ದೇಹದ ಭಾಗವನ್ನು ಹೊರತುಪಡಿಸಿ ಬೇರೆ ಏನನ್ನಾದರೂ ಉದ್ದೇಶಪೂರ್ವಕವಾಗಿ ಬಳಸಿದರೆ, ಅವನು ಅಥವಾ ಅವಳು ಬಟ್ಟೆಗಳನ್ನು ವಿಸ್ತರಿಸಿದರೆ ಮತ್ತು ಚೆಂಡನ್ನು ಫೀಲ್ಡ್ ಮಾಡಲು ಬಳಸಿದರೆ ಫೀಲ್ಡಿಂಗ್ ಅನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ. ಅಂಥ ಸಂದರ್ಭದಲ್ಲಿ ದಂಡ ಹಾಕಬೇಕಾಗುತ್ತದೆ.

ಇದನ್ನೂ ಓದಿ : ICC Meeting : ತೃತಿಯ ಲಿಂಗಿಗಳಿಗೆ ಮಹಿಳಾ ಕ್ರಿಕೆಟ್​ ತಂಡದಲ್ಲಿ ಇಲ್ಲ ಚಾನ್ಸ್​

177 ರನ್ ಚೇಸ್ ಮಾಡಿ ಗೆದ್ದ ಸಿಕ್ಸರ್​ ತಂಡ

ಅಮೆಲಿಯಾ ಅವರ ಕೃತ್ಯವು ಮೇಲೆ ತಿಳಿಸಿದ ಕಾನೂನನ್ನು ಉಲ್ಲಂಘಿಸಿತು. ಇದರ ಪರಿಣಾಮವಾಗಿ ಅಂಪೈರ್ ನಿಯಮಗಳ ಪ್ರಕಾರ ಫೀಲ್ಡಿಂಗ್ ತಂಡಕ್ಕೆ ಐದು ರನ್ ದಂಡ ವಿಧಿಸಿದರು. 19.5 ಓವನ್​ಗಳ 177 ರನ್​​ಗಳ ಗುರಿ ಬೆನ್ನತ್ತಿದ ಸಿಡ್ನಿ ಸಿಕ್ಸರ್ಸ್ 6 ವಿಕೆಟ್​ಗಳ ಜಯ ಸಾಧಿಸಿತು. ಗಾರ್ಡನರ್ (30 ಎಸೆತಗಳಲ್ಲಿ 36 ರನ್) ಮತ್ತು ಎರಿನ್ ಬರ್ನ್ಸ್ (20 ಎಸೆತಗಳಲ್ಲಿ 35 ರನ್) ಮೂರನೇ ವಿಕೆಟ್​ಗೆ 61 ರನ್​ಗಳನ್ನು ಸೇರಿಸಿ ತಂಡದ ಮೊತ್ತವನ್ನು 100 ರನ್ ಗಡಿ ದಾಟಲು ನೆರವಾದರು.

ಮ್ಯಾಥಿಲ್ಡಾ ಕಾರ್ಮೈಕಲ್ (20 ಎಸೆತಗಳಲ್ಲಿ 28* ರನ್) ಮತ್ತು ಮೈಟ್ಲಾನ್ ಬ್ರೌನ್ (15 ಎಸೆತಗಳಲ್ಲಿ 21* ರನ್) ಐದನೇ ವಿಕೆಟ್ಗೆ ಅಜೇಯ 51 ರನ್ಗಳ ಜೊತೆಯಾಟದಲ್ಲಿ ಭಾಗಿಯಾಗಿ ತಂಡಕ್ಕೆ ಗೆಲುವಿನ ದಡ ಸೇರಿಸಲು ನೆರವಾದರು.

ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್​ನಲ್ಲಿ ಅಮೆಲಿಯಾ ಕೆರ್ (44 ಎಸೆತಗಳಲ್ಲಿ 64 ರನ್) ಮತ್ತು ಮಿಗ್ನಾನ್ ಡು ಪ್ರೀಜ್ (27 ಎಸೆತಗಳಲ್ಲಿ 42 ರನ್) ಅವರ ಅರ್ಧಶತಕಗಳ ನೆರವಿನಿಂದ ಬ್ರಿಸ್ಬೇನ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಸಿಕ್ಸರ್ಸ್ ಪರ ಎಲಿಸ್ಸೆ ಪೆರ್ರಿ 4 ಓವರ್​ಗಳಲ್ಲಿ 40 ರನ್ ನೀಡಿ 3 ವಿಕೆಟ್ ಪಡೆದರೆ, ಜೆಸ್ ಕೆರ್ (20ಕ್ಕೆ 2) 2 ವಿಕೆಟ್ ಪಡೆದರು.

Exit mobile version