Site icon Vistara News

T20 World Cup | ಭಾರತ-ನೆದರ್ಲೆಂಡ್ಸ್​ ಪಂದ್ಯದ ವೇಳೆ ಯುವಕನ ಪ್ರೇಮ ನಿವೇದನೆ, ಒಪ್ಪಿದಳಾ ಯುವತಿ?

t20

ಸಿಡ್ನಿ: ಗುರುವಾರ ಸಿಡ್ನಿಯಲ್ಲಿ ನಡೆದ ಟಿ20 ವಿಶ್ವ ಕಪ್​(T20 World Cup) ನ ಸೂಪರ್​-12 ಪಂದ್ಯದಲ್ಲಿ ಭಾರತ ತಂಡ ನೆದರ್ಲೆಂಡ್ಸ್​ ವಿರುದ್ಧ 56 ರನ್​ ಭರ್ಜರಿ ಗೆಲುವು ದಾಖಲಿಸಿದೆ. ಆದರೆ ಈ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದದ್ದು ಪಂದ್ಯ ವೀಕ್ಷಿಸುತ್ತಿದ್ದ ಭಾರತದ ಯುವಕನೊಬ್ಬ ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲೇ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿದ ವಿಡಿಯೊ ಎಲ್ಲಡೆ ವೈರಲ್​ ಆಗಿದೆ.

ನೆದರ್ಲೆಂಡ್ಸ್​ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ 7ನೇ ಓವರ್‌ ವೇಳೆ ಈ ಪ್ರಸಂಗ ನಡೆದಿದೆ. ಕ್ರಿಕೆಟ್ ಪಂದ್ಯಾವಳಿ ವೇಳೆ ವೀಕ್ಷಕರು ಕ್ರೇಜಿಯಾಗಿ ವರ್ತಿಸುವುದು ಹೊಸದೇನಲ್ಲ. ಸಿಡ್ನಿಯಲ್ಲಿ ನಡೆದ ಭಾರತ–ನೆದರ್ಲೆಂಡ್ಸ್ ನಡುವಿನ ಟಿ–20 ವಿಶ್ವಕಪ್ ಪಂದ್ಯದ ವೇಳೆಯೂ ಅಂಥದ್ದೇ ಘಟನೆ ನಡೆದಿದೆ. ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಯೊಬ್ಬ ಸ್ಟ್ಯಾಂಡ್‌ನಲ್ಲೇ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಯುವತಿ ಆತನ ಪ್ರೇಮ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ್ದಾಳೆ. ಯುವತಿ ಆತನ ಪ್ರೇಮ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ್ದಾಳೆ. ಇದೇ ಸಂದರ್ಭ ಯುವತಿಗೆ ಉಂಗುರ ತೊಡಿಸಿದ ಯುವಕ ನಿಶ್ಚಿತಾರ್ಥವನ್ನೂ ಮುಗಿಸಿದ್ದಾನೆ. ಈ ವಿಡಿಯೊವನ್ನು ಐಸಿಸಿ ತನ್ನ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ | Bhuvneshwar Kumar | ಒಂದೇ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಿಸಿದ ವೇಗಿ ಭುವನೇಶ್ವರ್​ ಕುಮಾರ್​

Exit mobile version