ಅಡಿಲೇಡ್: ಐಸಿಸಿ ಟಿ20 ವಿಶ್ವ ಕಪ್(T20 World Cup)ನ ಸೂಪರ್-12 ಹಂತದ 5 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿ ಸೆಮಿಫೈನಲ್ ತಲುಪಿರುವ ಟೀಮ್ ಇಂಡಿಯಾ ಗುರುವಾರ (ನವೆಂಬರ್ 10) ಇಂಗ್ಲೆಂಡ್ ವಿರುದ್ಧ ಸೆಮಿ ಕಾದಾಟ ನಡೆಸಲಿದೆ. ಈ ಸಿದ್ಧತೆಗಾಗಿ ರೋಹಿತ್ ಪಡೆ ಸೋಮವಾರ ಅಡಿಲೇಡ್ ತಲುಪಿದ್ದು ಮಂಗಳವಾರದಿಂದ ಅಭ್ಯಾಸ ನಡೆಸಲಿದೆ.
ಟೀಮ್ ಇಂಡಿಯಾ ಸೋಮವಾರ ಅಡಿಲೇಡ್ ತಲುಪಿರುವ ವಿಡಿಯೊವನ್ನು ಬಿಸಿಸಿಐ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು “ಟಚ್‌ಡೌನ್ ಅಡಿಲೇಟ್” ಎಂದು ಬರೆದುಕೊಂಡಿದೆ. ಜಿಂಬಾಬ್ವೆ ವಿರುದ್ಧದ ಕಳೆದ ಪಂದ್ಯದಲ್ಲಿ ಭರ್ಜರಿ ೭೧ ರನ್ ಗೆಲುವು ದಾಖಲಿಸಿದ ರೋಹಿತ್ ಶರ್ಮಾ ಪಡೆ ಅಡಿಲೇಡ್ ತಲುಪಿ ಒಂದು ದಿನದ ವಿಶ್ರಾಂತಿ ಪಡೆದಿದೆ. ಆದರೆ ಮಂಗಳವಾರದಿಂದ ನೆಟ್ಸ್‌ನಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಲಿದೆ. ಉಳಿದಂತೆ ಇಂಗ್ಲೆಂಡ್ ತಂಡವು ಕೂಡ ಅಡಿಲೇಡ್ ತಲುಪಿದೆ.
ಮಂಗಳವಾರ ಬೆಳಗ್ಗೆ 10.30ರಿಂದ ಭಾರತ ಮತ್ತು ಇಂಗ್ಲೆಂಡ್ ತಂಡಗಳು ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ ಬಳಿಕ ಉಭಯ ತಂಡಗಳ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಸೆಮಿಫೈನಲ್‌ಗೆ ಮುನ್ನ ತಂಡಗಳು ನಡೆಸುವ ಪೂರ್ವಸಿದ್ಧತೆ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ |T20 World Cup 2024| ಮುಂದಿನ ವಿಶ್ವ ಕಪ್‌ನಲ್ಲಿ ನೆದರ್ಲೆಂಡ್ಸ್ಗೆ ನೇರ ಅರ್ಹತೆ! ಉಳಿದ ತಂಡಗಳ ಪಟ್ಟಿ ಪ್ರಕಟ