T20 World Cup 2024| ಮುಂದಿನ ವಿಶ್ವ ಕಪ್‌ನಲ್ಲಿ ನೆದರ್ಲೆಂಡ್ಸ್​​ಗೆ ನೇರ ಅರ್ಹತೆ! ಉಳಿದ ತಂಡಗಳ ಪಟ್ಟಿ ಪ್ರಕಟ - Vistara News

Latest

T20 World Cup 2024| ಮುಂದಿನ ವಿಶ್ವ ಕಪ್‌ನಲ್ಲಿ ನೆದರ್ಲೆಂಡ್ಸ್​​ಗೆ ನೇರ ಅರ್ಹತೆ! ಉಳಿದ ತಂಡಗಳ ಪಟ್ಟಿ ಪ್ರಕಟ

ವೆಸ್ಟ್​ ಇಂಡೀಸ್​ ಮತ್ತು ಯುಎಸ್ಎ ಆತಿಥ್ಯದಲ್ಲಿ ನಡೆಯಲಿರುವ 2024ರ ಟಿ20 ವಿಶ್ವ ಕಪ್​ಗೆ ಕ್ವಾಲಿಫೈ ಆದ ತಂಡಗಳ ಪಟ್ಟಿಯಲ್ಲಿ ಅಚ್ಚರಿ ಎಂಬಂತೆ ನೆದರ್ಲೆಂಡ್ಸ್​ ತಂಡ ಅವಕಾಶ ಪಡೆದಿದೆ.

VISTARANEWS.COM


on

t20
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದುಬೈ: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವ ಕಪ್‌ ಕೂಟ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಅದರಂತೆ 2 ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳು ಸೇರಿ ಒಟ್ಟು ಮೂರು ಪಂದ್ಯಗಳು ನಡೆದರೆ ಕ್ರಿಕೆಟ್​ ವಿಶ್ವ ಸಮರಕ್ಕೆ ತೆರೆ ಬೀಳಲಿದೆ. ಇದಕ್ಕೂ ಮುನ್ನ ಮುಂದಿನ 2024ರ ಟಿ20 ವಿಶ್ವ ಕಪ್​(T20 World Cup 2024)ನ ಸೂಪರ್​-12ಗೆ ನೇರವಾಗಿ ಅರ್ಹತೆ ಪಡೆದ ತಂಡಗಳ ಪಟ್ಟಿ ಬಿಡುಗಡೆಗೊಂಡಿದೆ.

2024ರ ಟಿ20 ವಿಶ್ವ ಕಪ್​ ಕೂಟ ವೆಸ್ಟ್‌ ಇಂಡೀಸ್‌ ಮತ್ತು ಯುಎಸ್‌ಎ ಆತಿಥ್ಯದಲ್ಲಿ ನಡೆಯಲಿದೆ. ಇದೀಗ ಈ ಕೂಟದ ಸೂಪರ್​-12 ಪಂದ್ಯಕ್ಕೆ ಅಚ್ಚರಿ ಎಂಬಂತೆ ನೆದರ್ಲೆಂಡ್ಸ್​ ಕೂಡ ಆಯ್ಕೆಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಆಶ್ಚರ್ಯಕರ ರೀತಿಯಲ್ಲಿ ಗೆದ್ದ ಪರಿಣಾಮ ಈ ಬಾರಿಯ ವಿಶ್ವ ಕಪ್​ನ ಸೂಪರ್‌ 12ನ ಗ್ರೂಪ್‌ 2ನಲ್ಲಿ ಟಾಪ್‌ 4ರಲ್ಲಿ ನೆದರ್ಲೆಂಡ್ಸ್​ ತಂಡ ಸ್ಥಾನ ಪಡೆಯಿತು. ಇದರಿಂದ 2024ರ ಟಿ20 ವಿಶ್ವಕಪ್‌ನ ಸೂಪರ್‌ 12ಗೆ ನೇರವಾಗಿ ಅರ್ಹತೆ ಪಡೆದಿದೆ.

ನಿಯಮಗಳ ಪ್ರಕಾರ ಈ ಬಾರಿಯ ವಿಶ್ವ ಕಪನ್​ನ ಗ್ರೂಪ್ 1 ಮತ್ತು ಗ್ರೂಪ್‌ 2ನಲ್ಲಿ ಅಗ್ರ ನಾಲ್ಕು ತಂಡಗಳು ಮುಂದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯುತ್ತವೆ. ಗ್ರೂಪ್​ ಹಂತವನ್ನು ಹೊರತುಪಡಿಸಿ ಅತಿ ಹೆಚ್ಚು ಶ್ರೇಯಾಂಕ ಹೊಂದಿರುವ ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ತಂಡಗಳು ಕೂಡ ಸೂಪರ್‌ 12 ಪ್ರವೇಶಿಸಿವೆ.

ವೆಸ್ಟ್ ಇಂಡೀಸ್ ಮತ್ತು ಅಮೆರಿಕ 2024ರ ವಿಶ್ವ ಕಪ್​ ಕೂಟದ​ ಆತಿಥ್ಯ ವಹಿಸುತ್ತಿರುವ ಕಾರಣದಿಂದ ಈ ಎರಡು ತಂಡಗಳು ಕೂಡ ನೇರವಾಗಿ ಸೂಪರ್ 12 ಪ್ರವೇಶಿಸಿವೆ. ಐಸಿಸಿ ಟಿ20 ವಿಶ್ವಕಪ್‌ 2024ರ ಟೂರ್ನಮೆಂಟ್‌ಗೆ ಅರ್ಹತೆ ಗಿಟ್ಟಿಸಿರುವ 12 ತಂಡಗಳ ಹೆಸರು ಈ ಕೆಳಗೆ ನೀಡಲಾಗಿದೆ.

ತಂಡಗಳು: ಯುಎಸ್‌ಎ, ವೆಸ್ಟ್ ಇಂಡೀಸ್, ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಶ್ರೀಲಂಕಾ, ಅಫಘಾನಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್ ಆಸ್ಟ್ರೇಲಿಯಾ, ನೆದರ್ಲೆಂಡ್ಸ್​

ಇದನ್ನೂ ಓದಿ | IND VS ZIM | ಜಿಂಬಾಬ್ವೆ ವಿರುದ್ಧ 71 ರನ್​ ಭರ್ಜರಿ ಗೆಲುವು ದಾಖಲಿಸಿದ ಟೀಮ್​ ಇಂಡಿಯಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Politicians Scandals : ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಲೈಂಗಿಕ ಹಗರಣಗಳಿವು!

Politicians Scandals: ರಾಜಕೀಯ ನಾಯಕರ ಮೇಲೆ ಆರೋಪಗಳು ಕೇಳಿ ಬರುವುದು ಸಾಮಾನ್ಯ. ಆದರೆ ಲೈಂಗಿಕ ಕಿರುಕುಳದ ಆರೋಪವು ಹಲವಾರು ಜನ ನಾಯಕರ ರಾಜಕೀಯ ಜೀವನವನ್ನು ತತ್ತರಿಸುವಂತೆ ಮಾಡಿತ್ತು. ಇದರಲ್ಲಿ ಪ್ರಮುಖ ಪ್ರಕರಣಗಳ ಹಿನ್ನೋಟ ಇಲ್ಲಿದೆ.

VISTARANEWS.COM


on

By

Sex Scandals
Koo

ನವದೆಹಲಿ: ರಾಜಕಾರಣದಲ್ಲಿ (politics) ಆರೋಪ, ಪ್ರತ್ಯಾರೋಪಗಳು (Politicians Scandals) ಸಾಮಾನ್ಯ. ಕೆಲವೊಮ್ಮೆ ಈ ಆರೋಪಗಳು ಎಷ್ಟು ಗಂಭೀರವಾಗಿರುತ್ತದೆ ಎಂದರೆ ರಾಜಕಾರಣಿಗಳ ರಾಜಕೀಯ ಭವಿಷ್ಯವನ್ನೇ ಬುಡಮೇಲು ಮಾಡಿ ಬಿಡುತ್ತವೆ. ಇಂತಹ ಆರೋಪಗಳಲ್ಲಿ ಮುಖ್ಯವಾದದದ್ದು ಲೈಂಗಿಕ ಹಗರಣಗಳು.

ಆಕ್ಷೇಪಾರ್ಹ ಸಿಡಿಗಾಗಿ (CD case) ಆಪ್ ನ (AAP) ಸಚಿವ ಸಂಪುಟದಲ್ಲಿ ಮಕ್ಕಳ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯದ ಸಚಿವರಾಗಿದ್ದ ಸಂದೀಪ್ ಕುಮಾರ್ (sundeep kumar) ಅವರನ್ನು ದೆಹಲಿ (delhi) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 2016ರಲ್ಲಿ ಸಚಿವ ಸಂಪುಟದಿಂದ ವಜಾಗೊಳಿಸಿದ್ದರು. ಲೈಂಗಿಕ ಹಗರಣದಿಂದಾಗಿ ರಾಜಕೀಯ ಜೀವನ ತತ್ತರಿಸಿ ಹೋದ ದೊಡ್ಡ ರಾಜಕಾರಣಿ ಇವರು ಮೊದಲೇನಲ್ಲ. ಲೈಂಗಿಕ ಹಗರಣ ಅನೇಕ ರಾಜಕಾರಣಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಭಾರತೀಯ ರಾಜಕೀಯವನ್ನು ಅಲುಗಾಡಿಸಿರುವ 15 ಪ್ರಮುಖ ಲೈಂಗಿಕ ಹಗರಣಗಳ ಪಟ್ಟಿ ಇಲ್ಲಿದೆ.

ಇದನ್ನೂ ಓದಿ: PM Narendra Modi: ಸಂಪತ್ತು ಮರುಹಂಚಿಕೆಯ ರಾಹುಲ್ ಗಾಂಧಿ ಐಡಿಯಾ ನಗರ ನಕ್ಸಲ್ ಚಿಂತನೆ: ಪಿಎಂ ಮೋದಿ


ರಾಘವಜಿ ಲಖಂಸಿ ಸವಲಾ

2013ರಲ್ಲಿ ಮಧ್ಯಪ್ರದೇಶದ ಹಣಕಾಸು ಸಚಿವ ರಾಘವಜಿ ಲಖಂಸಿ ಸವಾಲಾ ವಿರುದ್ಧ ಮನೆಕೆಲಸಗಾರನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿತ್ತು. ಕಾಯಂ ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ಸಚಿವರು ತನಗೆ ಕಿರುಕುಳ ನೀಡಿರುವುದಾಗಿ ಸಂತ್ರಸ್ತ ವ್ಯಕ್ತಿ ಆರೋಪಿಸಿದ್ದ. ಆಗ ರಾಘವಜಿಗೆ 79 ವರ್ಷ. ಸಿಡಿ ಹೊರಬಿದ್ದ ಕೂಡಲೇ ರಾಘವಜಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಬಾಬುಲಾಲ್ ನಗರ್

2013ರಲ್ಲಿ ಜೈಪುರದ ಮಹಿಳೆಯೊಬ್ಬರು ರಾಜಸ್ಥಾನದ ಮಾಜಿ ಸಚಿವ ಬಾಬುಲಾಲ್ ನಗರ್ ವಿರುದ್ಧ ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಸಚಿವರು ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಸಚಿವರ ವಿರುದ್ಧ ಬೆದರಿಕೆ ಆರೋಪವೂ ಕೇಳಿ ಬಂದಿತ್ತು. ಈ ಆರೋಪಗಳ ಹಿನ್ನೆಲೆಯಲ್ಲಿ ನಾಗರ್ ರಾಜೀನಾಮೆ ನೀಡಬೇಕಾಯಿತು.

ಗೋಪಾಲ್ ಕಾಂಡಾ

ಗಗನಸಖಿ ಗೀತಿಕಾ ಶರ್ಮಾ ಅವರು ಹರಿಯಾಣದ ಮಾಜಿ ಸಚಿವ ಗೋಪಾಲ್‌ ಕಾಂಡಾ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಗೀತಿಕಾ MLDR ಏರ್‌ಲೈನ್ಸ್‌ನಲ್ಲಿ ಉದ್ಯೋಗಿಯಾಗಿದ್ದರು. ಆದರೆ ಕಾಂಡಾ ನೀಡಿದ ಲೈಂಗಿಕ ಕಿರುಕುಳದ ಅನಂತರ ಅವರು 2012ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಪತ್ರದಲ್ಲಿ ಗೀತಿಕಾ ಅವರು ತಮ್ಮ ಜೀವನ ಕೊನೆಯಾಗಲು ಕಾಂಡಾ ಅವರೇ ಕಾರಣ ಎಂದು ಆರೋಪಿಸಿದ್ದರು. ಬಳಿಕ ಕಾಂಡಾ ಅವರನ್ನು ಬಂಧಿಸಲಾಗಿದ್ದು, 2014ರಲ್ಲಿ ಅವರಿಗೆ ದೆಹಲಿ ಹೈಕೋರ್ಟ್‌ನಿಂದ ಜಾಮೀನು ನೀಡಲಾಯಿತು.

ಮಹಿಪಾಲ್ ಮಡೆರ್ನಾ

2011ರಲ್ಲಿ ಭನ್ವಾರಿ ದೇವಿ ಲೈಂಗಿಕ ಹಗರಣದಲ್ಲಿ ಆಗಿನ ರಾಜಸ್ಥಾನದ ಜಲಸಂಪನ್ಮೂಲ ಸಚಿವ ಮಹಿಪಾಲ್ ಮಡೆರ್ನಾ ಭಾಗಿಯಾಗಿದ್ದು, ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಅಲುಗಾಡಿಸಿತು. ಭನ್ವಾರಿ ದೇವಿ ಸಹಾಯಕ ನರ್ಸ್ ಆಗಿದ್ದರು. ಆಕೆ ನಾಪತ್ತೆಯಾಗಿದ್ದು, ಮಡೆರ್ನಾ ಆಕೆಯನ್ನು ಅಪಹರಿಸಿದ್ದಾರೆ ಎಂದು ಆಕೆಯ ಪತಿ ಆರೋಪಿಸಿದಾಗ ಪ್ರಕರಣ ಬೆಳಕಿಗೆ ಬಂದಿತು. ಭನ್ವಾರಿ ದೇವಿ ಅವರೊಂದಿಗೆ ಮಡೆರ್ನಾ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದರು. ಅಂತಿಮವಾಗಿ, ಗೆಹ್ಲೋಟ್ ಸರ್ಕಾರದಿಂದ ಮಡೆರ್ನಾ ಅವರನ್ನು ವಜಾಗೊಳಿಸಲಾಯಿತು.


ಎನ್‌ ಡಿ ತಿವಾರಿ

ಹಿರಿಯ ಕಾಂಗ್ರೆಸ್ ನಾಯಕ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿಯಾಗಿದ್ದ ಎನ್ ಡಿ ತಿವಾರಿ ಅವರು 2009ರಲ್ಲಿ ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದರು. ಆಗ ಅವರಿಗೆ 85 ವರ್ಷ. ರಾಜಭವನದಲ್ಲಿ ಲೈಂಗಿಕ ಕಿರುಕುಳದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದ ಅನಂತರ ತಿವಾರಿ ರಾಜೀನಾಮೆ ನೀಡಿದ್ದರು.
2008ರಲ್ಲಿ ರೋಹಿತ್ ಶೇಖರ್ ತಿವಾರಿ ಅವರು ಎನ್ ಡಿ ತಿವಾರಿ ಅವರು ತಮ್ಮ ತಂದೆ ಎಂದು ಹೇಳಿಕೊಂಡು ಪಿತೃತ್ವ ಮೊಕದ್ದಮೆಯನ್ನು ಹೂಡಿದರು. ತಿವಾರಿ ಅವರ ಡಿಎನ್‌ಎ ಮ್ಯಾಪಿಂಗ್ ಮಾಡುವಂತೆ ಕೋರ್ಟ್ ಆದೇಶಿಸಿತ್ತು. 2012ರಲ್ಲಿ ಡಿಎನ್‌ಎ ಪರೀಕ್ಷೆಯಿಂದ ತಿವಾರಿ ರೋಹಿತ್ ಶೇಖರ್ ತಿವಾರಿಯ ಜೈವಿಕ ತಂದೆ ಎಂದು ದೃಢಪಡಿಸಿತು.


ಸಂಜಯ್ ಜೋಷಿ

2005ರಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಆಗಿದ್ದ ಸಂಜಯ್ ಜೋಶಿ ಅವರಿಗೆ ಲೈಂಗಿಕ ಹಗರಣ ಆರೋಪ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಭಾರಿ ಹಿನ್ನಡೆ ಉಂಟು ಮಾಡಿತ್ತು. ಬಿಜೆಪಿಯಲ್ಲಿ ಅವರು ಆರ್‌ಎಸ್‌ಎಸ್‌ ಪ್ರತಿನಿಧಿಯಾಗಿದ್ದರು. ಆದರೆ ಲೈಂಗಿಕ ಹಗರಣದಿಂದಾಗಿ ಅವರು ತಮ್ಮ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಕಳೆದುಕೊಳ್ಳಬೇಕಾಯಿತು. ಅನಂತರ ಅವರನ್ನು ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳಲಾಯಿತು. ಆದರೆ ಅವರ ಮೇಲಿನ ಆರೋಪದಿಂದ ಅವರಿಗೆ ಹಿಂದಿದ್ದ ಅಧಿಕಾರ ಮರಳಿ ಸಿಗಲಿಲ್ಲ. ಜೋಶಿ ಅವರು ಮಹಿಳೆಯೊಂದಿಗಿದ್ದ ಸಿಡಿ ಭಾರಿ ಸದ್ದು ಮಾಡಿತ್ತು. ಆ ಬಳಿಕ ತನಿಖೆ ನಡೆದು, ಅದು ನಕಲಿ ಸಿಡಿ ಎಂಬ ವರದಿ ಬಂದಿತ್ತು.

ಅಮರಮಣಿ ತ್ರಿಪಾಠಿ

ಉತ್ತರ ಪ್ರದೇಶದ ಮಾಜಿ ಸಚಿವ ಅಮರಮಣಿ ತ್ರಿಪಾಠಿ ಅವರು ಕವಯಿತ್ರಿ ಮಧುಮಿತಾ ಶುಕ್ಲಾ ಅವರನ್ನು ಕೊಂದಿದ್ದಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಮಧುಮಿತಾರನ್ನು ತ್ರಿಪಾಠಿ ಪದೇಪದೇ ಬೆದರಿಕೆ ಹಾಕಿದ ಮತ್ತು ಗರ್ಭಪಾತ ಮಾಡಿಸಿಕೊಳ್ಳಲು ಬಲವಂತಪಡಿಸಿದ ಆರೋಪ ಕೇಳಿ ಬಂದಿತ್ತು. ಮಧುಮಿತಾ 2003ರಲ್ಲಿ ಗುಂಡೇಟಿಗೆ ಬಲಿಯಾಗಿದ್ದರು. ಈ ಹತ್ಯೆ ಉತ್ತರ ಪ್ರದೇಶದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದು, ಮಾಯಾವತಿ ಸಂಪುಟದಿಂದ ತ್ರಿಪಾಠಿ ನಿರ್ಗಮನಕ್ಕೆ ಕಾರಣವಾಗಿತ್ತು.

ಹರಕ್ ಸಿಂಗ್ ರಾವತ್

ಉತ್ತರಾಖಂಡದ ಕಂದಾಯ ಸಚಿವರ ಮೇಲೆ 2003ರಲ್ಲಿ ಅಸ್ಸಾಮಿ ಮಹಿಳೆಯೊಬ್ಬರು ತನ್ನ ನವಜಾತ ಮಗುವಿನ ತಂದೆ ಎಂದು ಆರೋಪಿಸಿದರು. ಮಗುವಿನ ಡಿಎನ್‌ಎ ಕಾಂಗ್ರೆಸ್ ನಾಯಕನ ಡಿಎನ್‌ಎಗೆ ಹೊಂದಿಕೆಯಾಗುತ್ತಿಲ್ಲ ಎಂದು ಸಿಬಿಐ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರಿಂದ ಪ್ರಕರಣ ಆ ಬಳಿಕ ಮಹತ್ವ ಕಳೆದುಕೊಂಡಿತ್ತು.

ಸಾಧು ಯಾದವ್

ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಸೋದರ ಮಾವ ಸಾಧು ಯಾದವ್ ಅವರಿಗೆ ಸಂಬಂಧಿಸಿ 1999ರಲ್ಲಿ ಹೈ ಪ್ರೊಫೈಲ್ ಲೈಂಗಿಕ ಹಗರಣಕ್ಕೆ ಬಿಹಾರ ಸಾಕ್ಷಿಯಾಯಿತು. ಬಾಲಕಿ ಶಿಲ್ಪಿ ಜೈನ್ ಮತ್ತು ಆಕೆಯ ಸ್ನೇಹಿತ ಗೌತಮ್ ಅವರ ಕೊಲೆ ನಡೆದಿತ್ತು. ಶಿಲ್ಪಿ ಮತ್ತು ಗೌತಮ್ ಇಬ್ಬರೂ ಸಾಧುಗೆ ಸ್ನೇಹಿತರಾಗಿದ್ದರು. ಅವರ ದೇಹಗಳು ಅರೆ ನಗ್ನ ಸ್ಥಿತಿಯಲ್ಲಿ ಕಾರಿನೊಳಗೆ ಪತ್ತೆಯಾಗಿದ್ದವು. ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಅಂತಿಮವಾಗಿ ವರದಿ ನೀಡಿತು. ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ ಮತ್ತು ಗೌತಮ್ ಆಕೆಯ ರಕ್ಷಣೆಗೆ ಬಂದಾಗ ಅವರಿಬ್ಬರಿಗೆ ಬಲವಂತವಾಗಿ ವಿಷ ಕುಡಿಸಲಾಯಿತು ಎಂದು ಆರೋಪಿಸಲಾಗಿತ್ತು.


ಗೋಪಿನಾಥ್ ಮುಂಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಗೋಪಿನಾಥ್ ಮುಂಡೆ ಮತ್ತು ನೃತ್ಯಗಾರ್ತಿ ಬರ್ಖಾ ಪಾಟೀಲ್ ಅಕ್ರಮ ಸಂಬಂಧ 1997ರಲ್ಲಿ ಬಹಿರಂಗವಾಗಿತ್ತು. ಮುಂಡೆ ಈ ಆರೋಪಗಳನ್ನು ನಿರಾಕರಿಸಿದ್ದರು. ಆದರೆ ಆ ದಿನಗಳಲ್ಲಿ ಈ ಪ್ರಕರಣ ಭಾರಿ ಸದ್ದು ಮಾಡಿತ್ತು.

ಜಲಗಾಂವ್ ಅತ್ಯಾಚಾರ ಪ್ರಕರಣ

ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಮತ್ತು ಅಧಿಕಾರಿಗಳು ಜಲಗಾಂವ್ ಪಟ್ಟಣದಲ್ಲಿ ಲೈಂಗಿಕ ದಂಧೆಯನ್ನು ನಡೆಸುತ್ತಿದ್ದ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇವರ ಗ್ಯಾಂಗ್‌ ಶಾಲಾ-ಕಾಲೇಜಿಗೆ ಹೋಗುವ ಹುಡುಗಿಯರನ್ನು ತಮ್ಮ ಬಲೆಗೆ ಬೀಳಿಸಿ, ಅವರ ಮೇಲೆ ಅತ್ಯಾಚಾರ ನಡೆಸಿ ಬಳಿಕ ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಕಾಂಗ್ರೆಸ್ಸಿಗರನ್ನು ಬಂಧಿಸಲಾಯಿತು. ಆದರೆ ಸಾಕ್ಷ್ಯಾಧಾರದ ಕೊರತೆಯಿಂದ ಹಲವು ವರ್ಷಗಳ ಬಳಿಕ ಖುಲಾಸೆಗೊಳಿಸಲಾಯಿತು.

ಬಿಹಾರದಲ್ಲಿ ಬಾಬಿ ಕೊಲೆ

1980ರಲ್ಲಿ ನಡೆದ ಬಾಬಿ ಕೊಲೆ ಪ್ರಕರಣದಲ್ಲಿ ಮಾಜಿ ಸ್ಪೀಕರ್ ಪುತ್ರ ಸೇರಿದಂತೆ ಹಲವು ಯೂತ್ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು ಎನ್ನಲಾಗಿತ್ತು. ಬಾಬಿ ಸೆಕ್ರೆಟರಿಯೇಟ್‌ನಲ್ಲಿ ಟೆಲಿಫೋನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಳು. ಆಕೆ ನಿಗೂಢವಾಗಿ ಕೊಲೆಯಾಗಿದ್ದಳು. ಇವರನ್ನು ಯುವ ಕಾಂಗ್ರೆಸ್‌ ಮುಖಂಡರು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆಪಾದಿಸಲಾಗಿತ್ತು.


ಪಿಕೆ ಕುನ್ಹಾಲಿಕುಟ್ಟಿ

1997ರಲ್ಲಿ ಐಸ್ ಕ್ರೀಮ್ ಪಾರ್ಲರ್ ಲೈಂಗಿಕ ಹಗರಣವು ಕೇರಳವನ್ನು ಬೆಚ್ಚಿಬೀಳಿಸಿತು. ಈ ಪ್ರಕರಣದಲ್ಲಿ ಐಯುಎಂಎಲ್‌ಗೆ ಸೇರಿದ ಸಚಿವ ಪಿ.ಕೆ.ಕುನ್ಹಾಲಿಕುಟ್ಟಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಯುವತಿಯರನ್ನು ವೇಶ್ಯಾವಾಟಿಕೆಗೆ ಸೆಳೆಯಲು ಕೋಝಿಕ್ಕೋಡ್‌ನಲ್ಲಿರುವ ಐಸ್‌ಕ್ರೀಂ ಪಾರ್ಲರ್‌ ಅನ್ನು ಬಳಸಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಕುನ್ಹಾಲಿಕುಟ್ಟಿ ಕೈಗಾರಿಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅವರು ಈ ಪ್ರಕರಣದಿಂದ ಖುಲಾಸೆಯಾಗಿದ್ದರು.

ಸುರೇಶ್ ರಾಮ್

1978ರಲ್ಲಿ ಜಗಜೀವನ್ ರಾಮ್ ಅವರ ಮಗ ಸುರೇಶ್ ರಾಮ್ ಲೈಂಗಿಕ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇದರಿಂದಾಗಿ, ಸ್ವತಂತ್ರ ಭಾರತದ ಮೊದಲ ದಲಿತ ಪ್ರಧಾನಿ ಆಗುವ ಅವಕಾಶದಿಂದ ಜಗಜೀವನ್ ರಾಮ್ ವಂಚಿತರಾದರು ಎಂದು ವ್ಯಾಖ್ಯಾನಿಸಲಾಗುತ್ತದೆ. ಸುರೇಶ್ ಅವರ ನಗ್ನ ಚಿತ್ರಗಳನ್ನು ನಿಯತಕಾಲಿಕವೊಂದರಲ್ಲಿ ಪ್ರಕಟಿಸಲಾಯಿತು. ಈ ಹಗರಣವನ್ನು ಬಯಲು ಮಾಡುವಲ್ಲಿ ಇಂದಿರಾ ಗಾಂಧಿಯವರ ಸೊಸೆ ಮೇನಕಾ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದರು.

Continue Reading

EXPLAINER

Dubai Airport : ದುಬೈನಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಏರ್​ಪೋರ್ಟ್​​; ಏನಿದರ ವಿಶೇಷತೆ? ಎಲ್ಲ ಮಾಹಿತಿ ಇಲ್ಲಿದೆ

Dubai Airport: ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಅತಿದೊಡ್ಡ ಸಾಮರ್ಥ್ಯವನ್ನು ಹೊಂದಿರುತ್ತದೆ, 2.6 ಕೋಟಿ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸಲಿದೆ. ಇದು ಪ್ರಸ್ತುತ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗಾತ್ರಕ್ಕಿಂತ ಐದು ಪಟ್ಟು ದೊಡ್ಡದಾಗಿರುತ್ತದೆ.

VISTARANEWS.COM


on

Dubai Airport
Koo

ನವದೆಹಲಿ: 2.92 ಲಕ್ಷ ಕೋಟಿ ರೂಪಾಯಿ (35 ಬಿಲಿಯನ್ ಡಾಲರ್) ವೆಚ್ಚದಲ್ಲಿ 400 ಗೇಟ್ ಗಳು ಮತ್ತು ಐದು ಸಮಾನಾಂತರ ರನ್ ವೇಗಳಿರುವ ವಿಶ್ವದ ಅತ್ಯಂತ ದೊಡ್ಡ ಏರ್​ಪೋರ್ಟ್​​ ನಿರ್ಮಾಣ (Dubai Airport) ಮಾಡುವುದಾಗಿ ದುಬೈ ಆಡಳಿತ ಭಾನುವಾರ ಪ್ರಕಟಿಸಿದೆ. ಅದಕ್ಕೆ ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ಎಂದು ಹೆಸರಿಡುವುದಾಗಿ ಹೇಳಿದೆ.

“ಇಂದು, ನಾವು ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಪ್ರಯಾಣಿಕರ ಟರ್ಮಿನಲ್​ಗಳ ವಿನ್ಯಾಸಗಳನ್ನು ಅನುಮೋದಿಸಿದ್ದೇವೆ. ದುಬೈ ಏವಿಯೇಷನ್ ಕಾರ್ಪೊರೇಷನ್​​ನ ಕಾರ್ಯತಂತ್ರದ ಭಾಗವಾಗಿ 128 ಬಿಲಿಯನ್ ಡಾಲರ್ ವೆಚ್ಚದಲ್ಲಿ ಕಟ್ಟಡದ ನಿರ್ಮಾಣವನ್ನು ಪ್ರಾರಂಭಿಸಿದ್ದೇವೆ” ಎಂದು ದುಬೈ ಆಡಳಿತಗಾರ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಪ್ರಕಟಿಸಿದ್ದಾರೆ.

“ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಅತಿದೊಡ್ಡ ಸಾಮರ್ಥ್ಯವನ್ನು ಹೊಂದಿರುತ್ತದೆ, 2.6 ಕೋಟಿ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸಲಿದೆ. ಇದು ಪ್ರಸ್ತುತ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗಾತ್ರಕ್ಕಿಂತ ಐದು ಪಟ್ಟು ದೊಡ್ಡದಾಗಿರುತ್ತದೆ. ಮುಂಬರುವ ವರ್ಷಗಳಲ್ಲಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಎಲ್ಲಾ ಕಾರ್ಯಾಚರಣೆಗಳನ್ನು ಅದಕ್ಕೆ ವರ್ಗಾಯಿಸಲಾಗುವುದು” ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ.

ಈ ವಿಮಾನ ನಿಲ್ದಾಣ ವಿಶ್ವದ ಅತಿ ದೊಡ್ಡ ನಿಲ್ದಾಣವಾಗುವ ವೇಳೆ ಅಲ್ಲಿ ಇರಬಹುದಾದ ಕೆಲವೊಂದು ಸೌಲಭ್ಯಗಳು ಹಾಗೂ ಇನ್ನಿತರ ಮಾಹಿತಿಗಳ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ. ಆ ಕುರಿತು ಇಲ್ಲಿದೆ ಸಂಕ್ಷಿಪ್ತ ವಿವರ ಇಲ್ಲಿದೆ.

ಸಾಮರ್ಥ್ಯ ಎಷ್ಟು?


ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಹೆಚ್ಚು ಸಾಮರ್ಥ್ಯ ಹೊಂದಿರುವ ವಿಮಾನ ನಿಲ್ದಾಣವಾಗಲಿದೆ. ವಾರ್ಷಿಕವಾಗಿ 2.6 ಕೋಟಿ (260 ಮಿಲಿಯನ್) ಪ್ರಯಾಣಿಕರು ಈ ವಿಮಾನದ ಮೂಲಕ ಪ್ರಯಾಣ ಮಾಡಲಿದ್ದಾರೆ.

ಗಾತ್ರ ಎಷ್ಟು?
ಇದು ಪ್ರಸ್ತುತ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಂತ ಐದು ಪಟ್ಟು ದೊಡ್ಡದಾಗಿರುತ್ತದೆ.

ಮೂಲಸೌಕರ್ಯ ಹೇಗಿರುತ್ತದೆ?

ವಿಮಾನಗಳ ಸುಗಮ ಕಾರ್ಯಾಚರಣೆಗೆ ಅನುಕೂಲವಾಗುವಂತೆ ವಿಮಾನ ನಿಲ್ದಾಣವು 400 ವಿಮಾನ ಗೇಟ್ ಗಳನ್ನು ಹೊಂದಿರುತ್ತದೆ. ಏಕಕಾಲಕ್ಕೆ ಇಲ್ಲಿ ಅಷ್ಟೊಂದು ವಿಮಾನಗಳು ಪ್ರವೇಶಿಸಬಹುದು.

ರನ್ ವೇಗಳು ಎಷ್ಟು?

ವಿಮಾನಗಳ ಸಂಚಾರವನ್ನು ಸಮರ್ಥವಾಗಿ ನಿರ್ವಹಿಸಲು ಇದು ಐದು ಸಮಾನಾಂತರ ರನ್ ವೇಗಳನ್ನು ಹೊಂದಿರುತ್ತದೆ. ಒಂದೇ ಬದಿಯಲ್ಲಿ ಅಷ್ಟೊಂದು ವಿಮಾನಗಳು ಏಕಕಾಲಕ್ಕೆ ಟೇಕ್​ಆಫ್​ ಅಥವಾ ಲ್ಯಾಂಡಿಂಗ್ ಆಗಬಹುದು.

ಹೊಸತೇನು?

ಈ ವಿಮಾನ ನಿಲ್ದಾಣದಲಲಿ ಹೊಸ ವಾಯುಯಾನ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ ಎಂದು ಅವರು ಹೇಳದಿ್ದಾರೆ. ಇದು ವಾಯುಯಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಎಂದು ಹೇಲಾಗಿದೆ.

ವೆಚ್ಚ ಎಷ್ಟು?

ಈ ಯೋಜನೆಗೆ ಸುಮಾರು 2.9 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ.

ಮುಗಿಯುವುದು ಯಾವಾಗ?

ವರ್ಷಕ್ಕೆ 150 ಮಿಲಿಯನ್ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸುವ ಸಾಮರ್ಥ್ಯವಿರುವ ಮೊದಲ ಹಂತವು 10 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಮುಂದುವರಿದ ಭಾಗವು ಆ ಬಳಿಕ ಸಾಗಲಿದೆ.

ಇದನ್ನೂ ಓದಿ: Pro-Khalistan slogan : ಕೆನಡಾ ಪ್ರಧಾನಿ ಟ್ರುಡೊ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ!

ಲಾಜಿಸ್ಟಿಕ್ಸ್ ಮತ್ತು ವಾಯು ಸಾರಿಗೆ ಕ್ಷೇತ್ರಗಳಲ್ಲಿ ವಿಶ್ವದ ಪ್ರಮುಖ ಕಂಪನಿಗಳಿಗೆ ಆತಿಥ್ಯ ವಹಿಸುವ “ದುಬೈ ದಕ್ಷಿಣದ ವಿಮಾನ ನಿಲ್ದಾಣದ ಸುತ್ತಲೂ” ಅವರು ಇಡೀ ನಗರವನ್ನು ನಿರ್ಮಿಸುತ್ತಿದ್ದಾರೆ. ಒಂದು ಮಿಲಿಯನ್ ಜನರಿಗೆ ಉಳಿದುಕೊಳ್ಳುವುದಕ್ಕೂ ಅವಕಾಶ ಮಾಡಿಕೊಡುತ್ತೇವೆ ಎಂದು ಆಡಳಿತಗಾರ ಹೇಳಿದ್ದರೆ.

“ನಾವು ಭವಿಷ್ಯದ ಪೀಳಿಗೆಗಾಗಿ ಹೊಸ ಯೋಜನೆಯನ್ನು ನಿರ್ಮಿಸುತ್ತಿದ್ದೇವೆ ನಮ್ಮ ಮಕ್ಕಳು ಮತ್ತು ಅವರ ಮಕ್ಕಳಿಗೆ ನಿರಂತರ ಮತ್ತು ಸ್ಥಿರ ಅಭಿವೃದ್ಧಿಯನ್ನು ಖಾತ್ರಿಪಡಿಸುತ್ತಿದ್ದೇವೆ. ದುಬೈ ವಿಶ್ವದ ವಿಮಾನ ನಿಲ್ದಾಣ, ಅದರ ಬಂದರು, ಅದರ ನಗರ ಕೇಂದ್ರ ಮತ್ತು ಅದರ ಹೊಸ ಜಾಗತಿಕ ಕೇಂದ್ರವಾಗಲಿದೆ.

Continue Reading

Latest

Pro-Khalistan slogan : ಕೆನಡಾ ಪ್ರಧಾನಿ ಟ್ರುಡೊ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ!

Pro-Khalistan slogan :

VISTARANEWS.COM


on

Pro-Khalistan slogan
Koo

ಟೊರೊಂಟೊ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಜನಸಮೂಹವನ್ನುದ್ದೇಶಿಸಿ ಮಾತನಾಡಿದ್ದ ಕಾರ್ಯಕ್ರಮವೊಂದರಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು (Pro-Khalistan slogan) ಕೂಗಿದ ಪ್ರಸಂಗ ನಡೆದಿದೆ. ಭಾನುವಾರ ಅಲ್ಲಿನ ಸಿಖ್​ ಸಮುದಾಯದವರು ಖಾಲ್ಸಾ ದಿನಾಚರಣೆ ಆಯೋಜಿಸಿದ್ದರು. ಅಲ್ಲಿ ಟ್ರುಡೊ ಮಾತನಾಡುತ್ತಿದ್ದ ವೇಳೆ ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಲಾಗಿದೆ. ಕೆನಡಾ ಸರ್ಕಾರವು ಸಿಖ್ ಸಮುದಾಯದ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಯಾವುದೇ ವೆಚ್ಚದಲ್ಲಿ ರಕ್ಷಿಸುತ್ತದೆ ಎಂಬುದಾಗಿಯೂ ಟ್ರುಡೊ ತಮ್ಮ ಭಾಷಣದಲ್ಲಿ ಭರವಸೆ ನೀಡಿದ್ದಾರೆ.

ಕನ್ಸರ್ವೇಟಿವ್ ನಾಯಕ ಪಿಯರೆ ಪೊಯಿಲಿವ್ರೆ, ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್ಡಿಪಿ) ನಾಯಕ ಜಗ್ಮೀತ್ ಸಿಂಗ್ ಮತ್ತು ಟೊರೊಂಟೊ ಮೇಯರ್ ಒಲಿವಿಯಾ ಚೌ ಟೊರೊಂಟೊದಲ್ಲಿ ಖಾಲ್ಸಾ ದಿನಾಚರಣೆಯಲ್ಲಿ ಭಾಗಿಯಾಗಿದ್ದರು. ಖಾಲ್ಸಾ ದಿನವನ್ನು ವೈಸಾಕಿ ಎಂದು ಕರೆಯಲಾಗುತ್ತದೆ. ಇದು ಸಿಖ್ ಹೊಸ ವರ್ಷದ ಹಬ್ಬವಾಗಿದೆ.

ಖಾಲ್ಸಾ ಡೇ ಕಾರ್ಯಕ್ರಮದಲ್ಲಿ ಟ್ರುಡೊ ಜನರನ್ನುದ್ದೇಶಿಸಿ ಮಾತನಾಡಲು ನಡೆದಾಗ ಖಲಿಸ್ತಾನ್ ಪರ ಘೋಷಣೆಗಳು ಪ್ರಾರಂಭವಾಗಿದ್ದವು.

ಕೆನಡಾದ ಅತಿದೊಡ್ಡ ಶಕ್ತಿಗಳಲ್ಲಿ ಒಂದಾಗಿರುವ ಸಿಖ್ ಸಮುದಾಯದ ವೈವಿಧ್ಯತೆ ಎಂದು ನೆನಪಿಟ್ಟುಕೊಳ್ಳಲು ನಾವು ಇಂದು ಇಲ್ಲಿ ಸೇರಿದ್ದೇವೆ. ನಮ್ಮ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾವು ಬಲಶಾಲಿಯಾಗಿದ್ದೇವೆ. ಸಿಖ್ ಸಮುದಾಯದ ಮೌಲ್ಯಗಳು ಕೆನಡಾದ ಮೌಲ್ಯಗಳಾಗಿವೆ ಎಂದು ನಾವು ನೆನಪಿಟ್ಟುಕೊಳ್ಳಬೇಕು” ಎಂದು ಟೊರೊಂಟೊದಲ್ಲಿ ನಡೆದ ಖಾಲ್ಸಾ ದಿನದ ಆಚರಣೆಯಲ್ಲಿ ಜಸ್ಟಿನ್ ಟ್ರುಡೊ ಹೇಳಿದರು.

ನಗರದ ಅತಿದೊಡ್ಡ ವಾರ್ಷಿಕ ಕೂಟಗಳಲ್ಲಿ ಒಂದಾದ ಟೊರೊಂಟೊ ಡೌನ್​ಟೌನ್​ನಲ್ಲಿ ಭಾನುವಾರ ಸಾವಿರಾರು ಜನರು ಜಮಾಯಿಸಿದ್ದರು.

ಇದನ್ನೂ ಓದಿ: Lok Sabha Election: ಇಂದೋರ್​ ಕಾಂಗ್ರೆಸ್​ ಅಭ್ಯರ್ಥಿ ಕಣದಿಂದ ಹಿಂದಕ್ಕೆ; ಚುನಾವಣೆಗೆ ಮೊದಲೇ ಬಿಜೆಪಿಗೆ ಮತ್ತೊಂದು ಸೀಟು!

ಈ ದೇಶಾದ್ಯಂತದ ಸಿಖ್ ಪರಂಪರೆಯ ಸುಮಾರು 800,000 ಕೆನಡಿಯನ್ನರಿಗೆ, ನಿಮ್ಮ ಹಕ್ಕುಗಳು ಮತ್ತು ನಿಮ್ಮ ಸ್ವಾತಂತ್ರ್ಯಗಳನ್ನು ರಕ್ಷಿಸಲು ನಾವು ಯಾವಾಗಲೂ ಇರುತ್ತೇವೆ. ದ್ವೇಷ ಮತ್ತು ತಾರತಮ್ಯದ ವಿರುದ್ಧ ನಿಮ್ಮ ಸಮುದಾಯವನ್ನು ನಾವು ಯಾವಾಗಲೂ ರಕ್ಷಿಸುತ್ತೇವೆ ಎಂದು ಟ್ರುಡೊ ಹೇಳಿದರು.

ಸಮುದಾಯ ಕೇಂದ್ರಗಳು ಮತ್ತು ಗುರುದ್ವಾರಗಳಂತಹ ಪೂಜಾ ಸ್ಥಳಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡಲಾಗುತ್ತದೆ. ಭದ್ರತೆ ಮತ್ತು ಮೂಲಸೌಕರ್ಯಗಳನ್ನು ಸುಧಾರಿಸುತ್ತೇವೆ ಎಂದು ಕೆನಡಾದ ಪ್ರಧಾನಿ ಉಲ್ಲೇಖಿಸಿದರು.

ನಿಮ್ಮ ಧರ್ಮವನ್ನು ಮುಕ್ತವಾಗಿ ಮತ್ತು ಬೆದರಿಕೆಯಿಲ್ಲದೆ ಆಚರಿಸುವ ನಿಮ್ಮ ಹಕ್ಕು ಕೆನಡಾದಲ್ಲಿ ಖಾತ್ರಿಯಿದೆ. ನಿಮ್ಮ ಮೂಲಭೂತ ಹಕ್ಕುಗಳನ್ನು ನಾವು ರಕ್ಷಿಸುತ್ತೇವೆ. ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಹ್ಯಾಪಿ ಬೈಸಾಖಿ! ವಹೇಗುರು ಜಿ ಕಾ ಖಾಲ್ಸಾ ವಹೇಗುರು ಜಿ ಕಿ ಫತೇಹ್” ಎಂದು ಟ್ರುಡೊ ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Lok Sabha Election: ಇಂದೋರ್​ ಕಾಂಗ್ರೆಸ್​ ಅಭ್ಯರ್ಥಿ ಕಣದಿಂದ ಹಿಂದಕ್ಕೆ; ಚುನಾವಣೆಗೆ ಮೊದಲೇ ಬಿಜೆಪಿಗೆ ಮತ್ತೊಂದು ಸೀಟು!

Lok Sabha Election: ಬಾಮ್ ಕಣದಿಂದ ತಮ್ಮ ಉಮೇದುವಾರಿಕೆ ವಾಪಸ್​​ ಸ್ವಲ್ಪ ಸಮಯದ ನಂತ, ಮಧ್ಯಪ್ರದೇಶ ಹಿರಿಯ ಬಿಜೆಪಿ ಮುಖಂಡ ಮತ್ತು ಇಂದೋರ್​​ನ ಶಾಸಕ ಕೈಲಾಶ್ ವಿಜಯವರ್ಗಿಯಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ರಾಜ್ಯ ಅಧ್ಯಕ್ಷ ವಿ.ಡಿ.ಶರ್ಮಾ ಅವರ ನಾಯಕತ್ವ ನೆಚ್ಚಿ ಇಂದೋರ್​​ನ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಬಿಜೆಪಿ ಸೇರಿದ್ದಾರೆ ” ಎಂದು ಅವರು ಬರೆದಿದ್ದಾರೆ.

VISTARANEWS.COM


on

Lok Sabha Election
Koo

ಇಂದೋರ್: ಲೋಕಸಭಾ ಚುನಾವಣೆಯ (Lok Sabha Election) ನಾಲ್ಕನೇ ಹಂತದಲ್ಲಿ ಮತದಾನ ನಡೆಯಬೇಕಾಗಿದ್ದ ಮಧ್ಯಪ್ರದೇಶದ ಇಂದೋರ್​ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ (Akshay Kanti Bam) ತಮ್ಮ ಉಮೇದುವಾರಿಕೆ ವಾಪಸ್​ ಪಡೆದುಕೊಂಡಿದ್ದಾರೆ. ಆ ಬಳಿಕ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ತಾವು ಚುನಾವಣಾ ಕಣದಿಂದ ಹಿಂದಕ್ಕೆ ಸರಿದು ಮೋದಿ ನೇತೃತ್ವದ ಬಿಜೆಪಿ ಸೇರಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಮೇ 13ರಂದು ಇಂದೋರ್​ನಲ್ಲಿ ಮತದಾನ ನಡೆಯಬೇಕಾಗಿತ್ತು. ಹಾಲಿ ಬಿಜೆಪಿ ಸಂಸದ ಶಂಕರ್ ಲಾಲ್ವಾನಿ ವಿರುದ್ಧ ಕಾಂಗ್ರೆಸ್ ಬಾಮ್ ಅವರಿಗೆ ಟಿಕೆಟ್​ ನೀಡಿ ಇದೀಗ ಪರಿತಪಿಸುವಂತಾಗಿದೆ. ಈ ಕ್ಷೇತ್ರದಲ್ಲಿ ಈಗ ಬಿಜೆಪಿ ಪ್ರಬಲ ಸ್ಪರ್ಧೆಯೇ ಇಲ್ಲದಂತಾಗಿದೆ. ಹಾಗಾಗಿ ಬಹುತೇಕ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದಂತಾಗಿದೆ.

ಬಾಮ್ ಕಣದಿಂದ ತಮ್ಮ ಉಮೇದುವಾರಿಕೆ ವಾಪಸ್​​ ಸ್ವಲ್ಪ ಸಮಯದ ನಂತ, ಮಧ್ಯಪ್ರದೇಶ ಹಿರಿಯ ಬಿಜೆಪಿ ಮುಖಂಡ ಮತ್ತು ಇಂದೋರ್​​ನ ಶಾಸಕ ಕೈಲಾಶ್ ವಿಜಯವರ್ಗಿಯಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ರಾಜ್ಯ ಅಧ್ಯಕ್ಷ ವಿ.ಡಿ.ಶರ್ಮಾ ಅವರ ನಾಯಕತ್ವ ನೆಚ್ಚಿ ಇಂದೋರ್​​ನ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಬಿಜೆಪಿ ಸೇರಿದ್ದಾರೆ ” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

ಈ ತಿಂಗಳ ಆರಂಭದಲ್ಲಿ, ಗುಜರಾತ್​ನ ಸೂರತ್ ನ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರು ಇದೇ ರೀತಿ ಬಿಜೆಪಿ ಸೇರಿದ್ದರು. ಅನುಮೋದಕರ ಸಹಿಯಲ್ಲಿ ವ್ಯತ್ಯಾಸಗಳನ್ನು ಕಂಡುಕೊಂಡ ನಂತರ ಜಿಲ್ಲಾ ಚುನಾವಣಾಧಿಕಾರಿ ಅವರ ಉಮೇದುವಾರಿಕೆಯನ್ನು ತಿರಸ್ಕರಿಸಿದ್ದರು. ಅಲ್ಲದೆ ಈ ಸ್ಥಾನಕ್ಕೆ ಪಕ್ಷದ ಬದಲಿ ಅಭ್ಯರ್ಥಿ ಸುರೇಶ್ ಪಡ್ಸಾಲ ಅವರ ನಾಮಪತ್ರವನ್ನೂ ತಿರಸ್ಕರಿಸಲಾಗಿತ್ತು.

Fact Check: ಅಮಿತ್‌ ಶಾ ಎಸ್​​ಸಿ, ಎಸ್​ಟಿ ಮೀಸಲು ರದ್ದು ಮಾಡ್ತೀವಿ ಎಂದಿದ್ದು ನಿಜವೆ?​​

ನವ ದೆಹಲಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ (Fact Check) ನೀಡಲಾಗುತ್ತಿರುವ ಮಿಸಲಾತಿಯನ್ನು ತೆಗೆದು ಹಾಕಲಾಗುವುದು ಎಂದು ಅಮಿತ್ ಶಾ (Amit Shah) ಹೇಳಿದ್ದಾರೆ ಎಂದು ತಿರುಚಿದ ವಿಡಿಯೊ ಹರಿಬಿಟ್ಟ ಪ್ರಕರಣದಲ್ಲಿ ಡೆಲ್ಲಿ ಪೊಲೀಸರು (Delhi Police) ಎಫ್​ಐಆರ್​ ದಾಖಲಿಸಿದ್ದಾರೆ. ಇದೇ ವೇಳೆ ಪೊಲೀಸರು ವಿಡಿಯೊದ ಕುರಿತು ಮಾಹಿತಿ ನೀಡುವಂತೆ ಸೋಶಿಯಲ್ ಮೀಡಿಯಾ ಫ್ಲ್ಯಾಟ್​ಫಾರ್ಮ್​ ಎಕ್ಸ್​​ಗೆ (X) ಮನವಿ ಮಾಡಿದೆ. ಅದರ ಪ್ರಕಾರ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ. ಇದು ನಕಲಿ ಸೃಷ್ಟಿ ಎಂದು ಅಮಿತ್‌ ಶಾ ಸ್ಪಷ್ಪಪಡಿಸಿದ್ದಾರೆ.

ನಕಲಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್​​ಫಾರ್ಮ್​ಗಳಲ್ಲಿ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಭಾನುವಾರ ಎಫ್ಐಆರ್ ದಾಖಲಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಗೃಹ ಸಚಿವಾಲಯ (ಎಂಎಚ್ಎ) ಈ ಸಂಬಂಧ ದೂರು ದಾಖಲಿಸಿದೆ. ಅದರ ಆಧಾರದ ಮೇಲೆ ದೆಹಲಿ ಪೊಲೀಸರ ವಿಶೇಷ ಸೆಲ್ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳು ಮತ್ತು ಐಟಿ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ.

Continue Reading
Advertisement
Vinay Gowda Got three Film Offer
ಸ್ಯಾಂಡಲ್ ವುಡ್7 mins ago

Vinay Gowda: ಮೂರು ಸಿನಿಮಾಗಳಿಗೆ ಸಹಿ ಮಾಡಿದ ʻಬಿಗ್‌ ಬಾಸ್‌ʼ ಖ್ಯಾತಿಯ ವಿನಯ್‌ ಗೌಡ!

Hassan Pen Drive Case
ಕರ್ನಾಟಕ10 mins ago

ಪ್ರಜ್ವಲ್‌ ರೇವಣ್ಣ ವಿಡಿಯೊಗಳ ಕುರಿತು ಕೆಲ ತಿಂಗಳ ಮೊದಲೇ ಎಚ್ಚರಿಸಿದ್ದ ಬಿಜೆಪಿ ನಾಯಕ! ಯಾರವರು?

Sex Scandals
Latest19 mins ago

Politicians Scandals : ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಲೈಂಗಿಕ ಹಗರಣಗಳಿವು!

MS Dhoni
ಕ್ರೀಡೆ19 mins ago

MS Dhoni: ಗೆಳತಿಯ ಹೆಸರಿನಲ್ಲಿ 7 ಅಕ್ಷರಗಳಿಲ್ಲದ ಕಾರಣ ಬ್ರೇಕಪ್ ಆದ ಧೋನಿ ಅಭಿಮಾನಿ

Hassan Pen drive case
ಕರ್ನಾಟಕ35 mins ago

Hassan Pen Drive Case: ಪ್ರಜ್ವಲ್‌, ರೇವಣ್ಣ ಹಾಗೆ ಮಾಡಿಯೇ ಇಲ್ಲ ಎಂದ ದೂರುದಾರೆಯ ಅತ್ತೆ!

Actor Dharmendra not spending enough time with parents
ಸಿನಿಮಾ35 mins ago

Actor Dharmendra: ಪೋಷಕರ ಜತೆ ಸಾಕಷ್ಟು ಸಮಯ ಕಳೆಯಲೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ರಾ ನಟ ಧರ್ಮೇಂದ್ರ?

Cleric
ದೇಶ47 mins ago

Cleric: ಮಸೀದಿಯಲ್ಲಿ ಮಲಗಿದ್ದ 30 ವರ್ಷದ ಮೌಲ್ವಿಯನ್ನು ಬಡಿದು ಕೊಂದರು; ಹತ್ಯೆಗೆ ಕಾರಣ?

Congress fears defeat over EVMs Congress will not win a single seat in Karnataka says PM Narendra Modi
ರಾಜಕೀಯ48 mins ago

Narendra Modi: ಪ್ರಧಾನಿ ಮೋದಿ ಅನರ್ಹತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ

T20 World Cup 2024
ಕ್ರೀಡೆ57 mins ago

T20 World Cup 2024: ಆಸ್ಟ್ರೇಲಿಯಾದಿಂದ ಹಡಗಿನಲ್ಲೇ 3 ಕ್ರಿಕೆಟ್ ಪಿಚ್ ತಂದ ಅಮೆರಿಕ

Revanth Reddy
ದೇಶ1 hour ago

Revanth Reddy : ಅಮಿತ್​ ಶಾ ತಿರುಚಿದ ವಿಡಿಯೊ ಪ್ರಕರಣ; ತೆಲಂಗಾಣ ಸಿಎಂಗೆ ಡೆಲ್ಲಿ ಪೊಲೀಸರಿಂದ ಸಮನ್ಸ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 20244 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ12 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 20241 day ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20241 day ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌