Site icon Vistara News

Tejashwi Yadav: ನಟಿ ಜತೆ ಬ್ಯಾಡ್ಮಿಂಟನ್ ಆಡಿ ಕ್ರೀಡೆಯ ಮಹತ್ವ ಸಾರಿದ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್

#image_title

ಪಾಟ್ನಾ: ಯಾವುದೇ ವ್ಯಕ್ತಿಯಾಗಿರಲಿ ಅವರಿಗೆ ದೈಹಿಕವಾಗಿ ಶ್ರಮ ಅತ್ಯಗತ್ಯ. ಅದಕ್ಕೆ ಅತ್ಯುತ್ತಮ ಮಾರ್ಗವೆಂದರೆ ಅದು ಕ್ರೀಡೆ. ಅದಕ್ಕಾಗಿಯೇ ರಾಜಕಾರಣಿಗಳಿಂದ ಹಿಡಿದ ನಟ ನಟಿಯವರೆಗೆ ಎಲ್ಲ ಗಣ್ಯರು ಆಗಾಗ ಕೆಲವು ಕ್ರೀಡೆಗಳನ್ನು ಆಡಿ ಸುದ್ದಿಯಾಗುತ್ತಿರುತ್ತಾರೆ. ಅದೇ ರೀತಿ ಇದೀಗ ಬಿಹಾರದ ಉಪ ಮುಖ್ಯಮಂತ್ರಿಗಳಾಗಿರುವ ತೇಜಸ್ವಿ ಯಾದವ್ (Tejashwi Yadav) ಅವರು ನಟಿಯೊಂದಿಗೆ ಬ್ಯಾಡ್ಮಿಂಟನ್ ಆಡಿದ್ದು, ಸುದ್ದಿಯಾಗಿದ್ದಾರೆ(Viral Video).

ಇದನ್ನೂ ಓದಿ: ಬಿಹಾರ 2025ರ ಚುನಾವಣೆ ತೇಜಸ್ವಿ ಯಾದವ್​ ನೇತೃತ್ವದಲ್ಲಿ, ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯೂ ಅಲ್ಲ: ಸಿಎಂ ನಿತೀಶ್​ ಕುಮಾರ್​

ತೇಜಸ್ವಿ ಅವರು ಬಿಹಾರ ಮೂಲದ ಬಾಲಿವುಡ್ ನಟಿ ಆಗಿರುವ ನೀತು ಚಂದ್ರ ಅವರೊಂದಿಗೆ ಜತೆಯಾಗಿ ಬ್ಯಾಡ್ಮಿಂಟನ್ ಆಟವಾಡಿದ್ದಾರೆ. ಅದರ ವಿಡಿಯೊ ಅನ್ನು ಟ್ವಿಟರ್ ಅಲ್ಲಿ ಹಂಚಿಕೊಂಡಿರುವ ಅವರು, “ಬಿಹಾರದ ಮಗಳು, ಬಹುಮುಖಿ ಬಾಲಿವುಡ್ ಸಿನಿ ತಾರೆ ನೀತು ಚಂದ್ರ ಅವರೊಂದಿಗೆ ಬ್ಯಾಡ್ಮಿಂಟನ್ ಆಡಿದೆ. ಜೀವನದಲ್ಲಿ ಕ್ರೀಡೆಯ ಮಹತ್ವವನ್ನು ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ. ಕ್ರೀಡೆಗಳು ನಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡುವುದರ ಜೊತೆಗೆ, ನಮ್ಮ ವ್ಯಕ್ತಿತ್ವ ಮತ್ತು ಚಾರಿತ್ರ್ಯ ನಿರ್ಮಾಣ ಮತ್ತು ನಾಯಕತ್ವದ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತವೆ” ಎಂದು ಬರೆದುಕೊಂಡಿದ್ದಾರೆ.

ತೇಜಸ್ವಿ ಯಾದವ್ ಅವರ ಟ್ವೀಟ್


ತೇಜಸ್ವಿ ಅವರ ಟ್ವೀಟ್ ಅನ್ನು ಮರುಟ್ವೀಟ್ ಮಾಡಿರುವ ನಟಿ ನೀತು ಚಂದ್ರ, “ಬಿಹಾರದ ಹಾಗೂ ಇಲ್ಲಿನ ಜನರ ಭವಿಷ್ಯ ತೇಜಸ್ವಿ ಯಾದವ್ ಅವರ ಕೈಯಲ್ಲಿದೆ ಎನ್ನುವುದು ತೃಪ್ತಿದಾಯಕ ವಿಚಾರ. ಇವರ ಸರ್ಕಾರ ವರ್ಷಗಟ್ಟಲೆ ಸ್ಥಗಿತಗೊಂಡಿದ್ದ ಬಿಹಾರದ ಕ್ರೀಡಾ ನೀತಿಯನ್ನು ಕೇವಲ 6 ತಿಂಗಳಲ್ಲಿ ಅಂಗೀಕರಿಸಿದೆ. ಪ್ರತಿ ಕ್ಷೇತ್ರದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ” ಎಂದು ತೇಜಸ್ವಿ ಯಾದವ್ ಅವರನ್ನು ಶ್ಲಾಘಿಸಿದ್ದಾರೆ.

Exit mobile version