ಟೆನ್ನಿಸ್: ಕ್ರಿಕೆಟ್ ಆಟದಲ್ಲಿ ಈ ಹಿಂದೆ ಅನೇಖ ಬಾರಿ ಕೇಳಿ ಬಂದಿದ್ದ ಮ್ಯಾಚ್ ಫಿಕ್ಸಿಂಗ್ ಕರಾಳ ವಿಚಾರ ಟೆನ್ನಿಸ್ ಕ್ಷೇತ್ರವನ್ನೂ ಬಾಧಿಸುತ್ತಿದೆ. ಅಂತಾರಾಷ್ಟ್ರೀಯ ಟೆನ್ನಿಸ್ ಇಂಟಿಗ್ರಿಟಿ ಏಜೆನ್ಸಿಯು (ITIA) 6 ಟೆನ್ನಿಸ್ ಆಟಗಾರರನ್ನು ಮ್ಯಾಚ್-ಫಿಕ್ಸಿಂಗ್ ಆರೋಪದಲ್ಲಿ ದೀರ್ಘಾವಧಿವರೆಗೆ ಬ್ಯಾನ್ ಮಾಡಿದೆ. ಬ್ಯಾನ್ ಆದ 6 ಆಟಗಾರರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಅವರು ಟೆನ್ನಿಸ್ ಆಡದಂತೆ ನಿಷೇಧಾಜ್ಞೆ ವಿಧಿಸಿ ಮೇ 6 ರಂದು ಆದೇಶಿಸಿದೆ.
ಜಾರ್ಜ್ ಮಾರ್ಸೆ ವಿದ್ರಿ, ಮಾರ್ಕ್ ಫೊರ್ನೆಲ್ ಮೆಸ್ಟ್‌ರೆಸ್, ಪೆಡ್ರೊ ಬೆರ್ನಬೆ ಫ್ರಾಂಕೊ, ಕಾರ್ಲೊಸ್ ಒರ್ಟೆಗಾ, ಜೈಮೆ ಒರ್ಟೆಗಾ ಹಾಗೂ ಮಾರ್ಕೊಸ್ ಟೊರ್ರಾಲ್ಬೊ ಎಂಬ 6 ಆಟಗಾರರನ್ನು ಬ್ಯಾನ್ ಮಾಡಲಾಗಿದೆ. ಈ ಆಟಗಾರರು ಮ್ಯಾಚ್ ಫಿಕ್ಸಿಂಗ್ ಮಾಡಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿ ಸ್ಪೇನ್ ನ್ಯಾಯಾಲಯವು ಆದೇಶ ಹೊರಡಿಸಿದೆ.
ಜಾರ್ಜ್ ಮಾರ್ಸೆ ವಿದ್ರಿ ಹಾಗೂ ಮಾರ್ಕ್ ಫೊರ್ನೆಲ್ ಮೆಸ್ಟ್‌ರೆಸ್ ಇಬ್ಬರು ಟೆನ್ನಿಸ್ ಆಟಗಾರರು ವಿಶ್ವದ ಟೆನ್ನಿಸ್ ಆಟಗಾರರ ಪಟ್ಟಿಯಲ್ಲಿ ರ‍್ಯಾಂಕ್ ಪಡೆದವರು. ಫೊರ್ನೆಲ್ ಮೆಸ್ಟ್‌ರೆಸ್‌ಗೆ 2007ರಲ್ಲಿ ವಿಶ್ವಕ್ಕೆ 236ನೇ ಸ್ಥಾನದಲ್ಲಿದ್ದರು. ಹಾಗೂ ಎರಡು ಬಾರಿ ATP ಚಾಲೆಂಜರ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರು. ಮಾರ್ಸೆ ವಿದ್ರಿ 2008ರಲ್ಲಿ ವಿಶ್ವಕ್ಕೆ 562ನೇ ಸ್ಥಾನ ತಲುಪಿದ್ದರು.
ಈ 6 ಆಟಗಾರರಿಗೆ 2 ವರ್ಷಗಳ ನಿಷೇಧ ಹಾಗೂ ಜೈಲುಶಿಕ್ಷೆ ವಿಧಿಸಲಾಗಿದೆ. ಮಾರ್ಕ್ ಫೊರ್ನೆಲ್ ಮೆಸ್ಟ್‌ರೆಸ್‌ಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಲಾಗಿದೆ. 22 ವರ್ಷ ಹಾಗೂ 6 ತಿಂಗಳ ಕಾಲ ನಿಷೇಧ ಮಾಡಲಾಗಿದೆ. ಹಾಗೂ $2,50,000 ದಂಡ ವಿಧಿಸಲಾಗಿದೆ.
ಬ್ಯಾನ್ ಆದ ಸಂದರ್ಭದಲ್ಲಿ ಯಾವುದೇ ಆಟಗಾರರು ಅಂತಾರಾಷ್ಟ್ರೀಯ ಸಂಸ್ಥೆಗಳು ಆಯೋಜಿಸುವ ಯಾವುದೇ ಟೆನ್ನಿಸ್ ಪಂದ್ಯ ಆಡುವಂತಿಲ್ಲ. ಹಾಗೂ ಯಾರಿಗೂ ಟನ್ನಿಸ್ ಕೋಚ್ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ.
ಇದನ್ನೂ ಓದಿ: ಕ್ರೀಡೆ ಮೇಲೆ ಯುದ್ಧದ ನೆರಳು: ವಿಂಬಲ್‌ಡನ್ ಟೂರ್ನಿಯಿಂದ ರಷ್ಯಾ ಆಟಗಾರರು ಬ್ಯಾನ್ !