ಕ್ರೀಡೆ
ಟೆನ್ನಿಸ್‌ಗೂ ತಟ್ಟಿದ Match Fixing ಬಿಸಿ: 6 ಫಿಕ್ಸರ್ಸ್ ಬ್ಯಾನ್!
ಈ 6 ಆಟಗಾರರಿಗೆ 2 ವರ್ಷಗಳ ನಿಷೇಧ ಹಾಗೂ ಜೈಲುಶಿಕ್ಷೆ ವಿಧಿಸಲಾಗಿದೆ. ಮಾರ್ಕ್ ಫೊರ್ನೆಲ್ ಮೆಸ್ಟ್‌ರೆಸ್‌ಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಲಾಗಿದೆ.
ಟೆನ್ನಿಸ್: ಕ್ರಿಕೆಟ್ ಆಟದಲ್ಲಿ ಈ ಹಿಂದೆ ಅನೇಖ ಬಾರಿ ಕೇಳಿ ಬಂದಿದ್ದ ಮ್ಯಾಚ್ ಫಿಕ್ಸಿಂಗ್ ಕರಾಳ ವಿಚಾರ ಟೆನ್ನಿಸ್ ಕ್ಷೇತ್ರವನ್ನೂ ಬಾಧಿಸುತ್ತಿದೆ. ಅಂತಾರಾಷ್ಟ್ರೀಯ ಟೆನ್ನಿಸ್ ಇಂಟಿಗ್ರಿಟಿ ಏಜೆನ್ಸಿಯು (ITIA) 6 ಟೆನ್ನಿಸ್ ಆಟಗಾರರನ್ನು ಮ್ಯಾಚ್-ಫಿಕ್ಸಿಂಗ್ ಆರೋಪದಲ್ಲಿ ದೀರ್ಘಾವಧಿವರೆಗೆ ಬ್ಯಾನ್ ಮಾಡಿದೆ. ಬ್ಯಾನ್ ಆದ 6 ಆಟಗಾರರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಅವರು ಟೆನ್ನಿಸ್ ಆಡದಂತೆ ನಿಷೇಧಾಜ್ಞೆ ವಿಧಿಸಿ ಮೇ 6 ರಂದು ಆದೇಶಿಸಿದೆ.
ಜಾರ್ಜ್ ಮಾರ್ಸೆ ವಿದ್ರಿ, ಮಾರ್ಕ್ ಫೊರ್ನೆಲ್ ಮೆಸ್ಟ್‌ರೆಸ್, ಪೆಡ್ರೊ ಬೆರ್ನಬೆ ಫ್ರಾಂಕೊ, ಕಾರ್ಲೊಸ್ ಒರ್ಟೆಗಾ, ಜೈಮೆ ಒರ್ಟೆಗಾ ಹಾಗೂ ಮಾರ್ಕೊಸ್ ಟೊರ್ರಾಲ್ಬೊ ಎಂಬ 6 ಆಟಗಾರರನ್ನು ಬ್ಯಾನ್ ಮಾಡಲಾಗಿದೆ. ಈ ಆಟಗಾರರು ಮ್ಯಾಚ್ ಫಿಕ್ಸಿಂಗ್ ಮಾಡಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿ ಸ್ಪೇನ್ ನ್ಯಾಯಾಲಯವು ಆದೇಶ ಹೊರಡಿಸಿದೆ.
ಜಾರ್ಜ್ ಮಾರ್ಸೆ ವಿದ್ರಿ ಹಾಗೂ ಮಾರ್ಕ್ ಫೊರ್ನೆಲ್ ಮೆಸ್ಟ್‌ರೆಸ್ ಇಬ್ಬರು ಟೆನ್ನಿಸ್ ಆಟಗಾರರು ವಿಶ್ವದ ಟೆನ್ನಿಸ್ ಆಟಗಾರರ ಪಟ್ಟಿಯಲ್ಲಿ ರ‍್ಯಾಂಕ್ ಪಡೆದವರು. ಫೊರ್ನೆಲ್ ಮೆಸ್ಟ್‌ರೆಸ್‌ಗೆ 2007ರಲ್ಲಿ ವಿಶ್ವಕ್ಕೆ 236ನೇ ಸ್ಥಾನದಲ್ಲಿದ್ದರು. ಹಾಗೂ ಎರಡು ಬಾರಿ ATP ಚಾಲೆಂಜರ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರು. ಮಾರ್ಸೆ ವಿದ್ರಿ 2008ರಲ್ಲಿ ವಿಶ್ವಕ್ಕೆ 562ನೇ ಸ್ಥಾನ ತಲುಪಿದ್ದರು.
ಈ 6 ಆಟಗಾರರಿಗೆ 2 ವರ್ಷಗಳ ನಿಷೇಧ ಹಾಗೂ ಜೈಲುಶಿಕ್ಷೆ ವಿಧಿಸಲಾಗಿದೆ. ಮಾರ್ಕ್ ಫೊರ್ನೆಲ್ ಮೆಸ್ಟ್‌ರೆಸ್‌ಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಲಾಗಿದೆ. 22 ವರ್ಷ ಹಾಗೂ 6 ತಿಂಗಳ ಕಾಲ ನಿಷೇಧ ಮಾಡಲಾಗಿದೆ. ಹಾಗೂ $2,50,000 ದಂಡ ವಿಧಿಸಲಾಗಿದೆ.
ಬ್ಯಾನ್ ಆದ ಸಂದರ್ಭದಲ್ಲಿ ಯಾವುದೇ ಆಟಗಾರರು ಅಂತಾರಾಷ್ಟ್ರೀಯ ಸಂಸ್ಥೆಗಳು ಆಯೋಜಿಸುವ ಯಾವುದೇ ಟೆನ್ನಿಸ್ ಪಂದ್ಯ ಆಡುವಂತಿಲ್ಲ. ಹಾಗೂ ಯಾರಿಗೂ ಟನ್ನಿಸ್ ಕೋಚ್ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ.
ಇದನ್ನೂ ಓದಿ: ಕ್ರೀಡೆ ಮೇಲೆ ಯುದ್ಧದ ನೆರಳು: ವಿಂಬಲ್‌ಡನ್ ಟೂರ್ನಿಯಿಂದ ರಷ್ಯಾ ಆಟಗಾರರು ಬ್ಯಾನ್ !
ಕ್ರಿಕೆಟ್
Team India : ಕೊಹ್ಲಿ ಮನವಿ ಮಾಡದೇ ಹೋಗಿದ್ದರೆ ಹೆಡ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಿರಲಿಲ್ಲ
ಅನಿಲ್ ಕುಂಬ್ಳೆ ಹಾಗೂ ವಿರಾಟ್ ಕೊಹ್ಲಿಯ ನಡುವೆ ಉತ್ತಮ ಬಾಂಧವ್ಯ ಇಲ್ಲ ಎಂಬ ಕಾರಣಕ್ಕೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ನನಗೆ ಮನವಿ ಮಾಡಿದ್ದರು ಎಂದು ಸೆಹ್ವಾಗ್ ಹೇಳಿದ್ದಾರೆ.
ನವ ದೆಹಲಿ : ಅನಿಲ್ ಕುಂಬ್ಳೆ ಭಾರತ ತಂಡದ (Team India) ಕೋಚ್ ಹುದ್ದೆಯಿಂದ ಕೆಳಕ್ಕೆ ಇಳಿದ ಮೇಲೆ ವೀರೇಂದ್ರ ಸೆಹ್ವಾಗ್ ಹೆಡ್ ಕೋಚ್ ಆಗಬೇಕಿತ್ತು ಎಂಬ ಮಾತುಗಳು ಕೇಳಿ ಬಂದಿತ್ತು. ಆಗ ನಾಯಕರಾಗಿದ್ದ ವಿರಾಟ್ ಕೊಹ್ಲಿಯೇ ನೇರವಾಗಿ ಸೆಹ್ವಾಗ್ ಬಳಿ ಕೋಚ್ ಆಗುವಂತೆ ಮನವಿ ಮಾಡಿದ್ದರು ಎಂದೂ ವರದಿಗಳಾಗಿದ್ದವು. ಆದರೆ, ಆ ವೇಳೆ ವೀರೇಂದ್ರ ಸೆಹ್ವಾಗ್ ಅವರು ಯಾವುದೆ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಇದೀಗ ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ ಭಾರತದ ಮಾಜಿ ಸ್ಫೋಟಕ ಬ್ಯಾಟರ್. ನಾನು ಟೀಮ್ ಇಂಡಿಯಾದ ಕೋಚ್ ಆಗಲು ಬಯಸಿದ್ದು ಕೊಹ್ಲಿಯ ಮನವಿ ಮೇರೆಗೆ ಎಂದು ಹೇಳಿದ್ದಾರೆ.
2016ರಲ್ಲಿ ಅನಿಲ್ ಕುಂಬ್ಳೆ ಭಾರತ ತಂಡಕ್ಕೆ ಹೆಡ್ ಕೋಚ್ ಆಗಿದ್ದರು. ಆ ವೇಳೆ ಭಾರತ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ಸಿನ ಉತ್ತುಂಗದಲ್ಲಿತ್ತು. ಆದರೆ, ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಆಟಗಾರುವ ಅನಿಲ್ ಕುಂಬ್ಳೆ ಕೋಚಿಂಗ್ ವಿರುದ್ಧ ನಿಂತರು. ಅನಿಲ್ ಕುಂಬ್ಳೆ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಭಾರತ ಸೋಲು ಅನುಭವಿಸಿದ ಬಳಿಕ ಹೆಡ್ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಈ ವೇಳೆ ಸೆಹ್ವಾಗ್ ಅರ್ಜಿ ಸಲ್ಲಿಸಿದ್ದರು ಎಂದು ಹೇಳಲಾಗಿತ್ತು. ಆದರೆ, ಅವರು ಕೋಚ್ ಆಗಲಿಲ್ಲ. ಆದರೆ, ತಾವು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವುದಕ್ಕೆ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಕಾರಣ ಎಂದು ನ್ಯೂಸ್18 ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ನನ್ನನ್ನು ಸಂಪರ್ಕಿಸದಿದ್ದರೆ ನಾನು ಅರ್ಜಿ ಸಲ್ಲಿಸುತ್ತಿರಲಿಲ್ಲ. ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ ನಡುವೆ ಹೊಂದಾಣಿಕೆ ಇಲ್ಲ ಎಂದು ಹೇಳಿದ್ದರು. 2017 ರ ಚಾಂಪಿಯನ್ಸ್ ಟ್ರೋಫಿ ನಂತರ ಕುಂಬ್ಳೆ ಅವರ ಒಪ್ಪಂದವು ಮುಕ್ತಾಯಗೊಳ್ಳುತ್ತದೆ ಮತ್ತು ನಂತರ ನೀವು ತಂಡದೊಂದಿಗೆ ವೆಸ್ಟ್ ಇಂಡೀಸ್ ಪ್ರಯಾಣಿಸಬಹುದು ಎಂದು ಅವರು ನನಗೆ ಹೇಳಿದ್ದರು, ಎಂದು ಸೆಹ್ವಾಗ್ ಬಹಿರಂಗ ಮಾಡಿದ್ದಾರೆ.
ಕ್ರಿಕೆಟ್
WPL 2023 : ಯುಪಿ ವಿರುದ್ಧ ಟಾಸ್ ಗೆದ್ದ ಡೆಲ್ಲಿ ತಂಡದಿಂದ ಫೀಲ್ಡಿಂಗ್ ಆಯ್ಕೆ
ಡೆಲ್ಲಿ ಹಾಗೂ ಯುಪಿ ವಾರಿಯರ್ಸ್ ತಂಡ ಮಹಿಳೆಯರ ಪ್ರೀಮಿಯರ್ ಲೀಗ್ನ ಪ್ಲೇ ಆಫ್ ಹಂತಕ್ಕೆ ತಲುಪಿದೆ.
ಮುಂಬಯಿ: ಮಹಿಳೆಯರ ಪ್ರೀಮಿಯರ್ ಲೀಗ್ 20ನೇ ಪಂದ್ಯದಲ್ಲಿ ಯುಪಿ ವಿರುದ್ಧ ಟಾಸ್ ಗೆದ್ದಿರುವ ಡೆಲ್ಲಿ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಸೋಮವಾರ ನಡೆದ ಹಣಾಹಣಿಯಲ್ಲಿ ಮುಂಬಯಿ ವಿರುದ್ಧ ಭರ್ಜರಿ 9 ವಿಕೆಟ್ ವಿಜಯ ಸಾಧಿಸಿತ್ತು. ಆ ಪಂದ್ಯದಲ್ಲೂ ಡೆಲ್ಲಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ಮತ್ತೆ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್.
ಬ್ರಬೊರ್ನ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಈ ಪಂದ್ಯ ಆಯೋಜನೆಗೊಂಡಿದೆ. ಡೆಲ್ಲಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆಧರೆ, ಆದರೆ, ಯುಪಿ ವಾರಿಯರ್ಸ್ ತಂಡದ ಗ್ರೇಸ್ ಹ್ಯಾರಿಸ್, ರಾಜೇಶ್ವರಿ ಗಾಯಕ್ವಾಡ್, ದೇವಿಕಾ ವೈದ್ಯ ಆಡುತ್ತಿಲ್ಲ. ಎಸ್ ಯಶಶ್ರೀ, ಶ್ವೇತಾ ಸೆಹ್ರಾವತ್, ಶಬ್ನಿಮ್ ಇಸ್ಮಾಯಿಲ್ ತಂಡಕ್ಕೆ ಸೇರಿಕೊಂಡಿದ್ದಾರೆ.
ಸೋಲಿನೊಂದಿಗೆ ಅಭಿಯಾನ ಮುಗಿಸಿದ ಆರ್ಸಿಬಿ
ದಿನದ ಮೊದಲ ಪಂದ್ಯದಲ್ಲಿ ಆರ್ಸಿಬಿ ತಂಡ ಸೋಲು ಕಂಡಿತು. ಮುಂಬೈ ಇಂಡಿಯನ್ಸ್ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ 4 ವಿಕೆಟ್ಗಳ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್ ಈ ಗೆಲುವಿನೊಂದಿಗೆ ಮತ್ತೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಮುಂಬಯಿಯ ಡಿ.ವೈ. ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಡಬಲ್ ಹೆಡರ್ ಮುಖಾಮುಖಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ರಿಚಾ ಘೋಷ್ ಮತ್ತು ಎಲ್ಲಿಸ್ ಪೆರ್ರಿ ಅವರ ಸಣ್ಣ ಹೋರಾಟದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಬಾರಿಸಿತು. ಮುಂಬೈ ಇಂಡಿಯನ್ಸ್ 16.3 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 129 ರನ್ ಬಾರಿಸಿ ಗೆಲುವು ದಾಖಲಿಸಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆರ್ಸಿಬಿ ಆರಂಭಿಕ ಆಘಾತ ಕಂಡಿತು. ಗುಜರಾತ್ ಜೈಂಟ್ಸ್ ವಿರುದ್ಧ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿ ನಡುಕ ಹುಟ್ಟಿಸಿದ್ದ ನ್ಯೂಜಿಲ್ಯಾಂಡ್ನ ಸ್ಟಾರ್ ಆಲ್ ರೌಂಡರ್ ಸೋಫಿ ಡಿವೈನ್ ಅವರು ಈ ಪಂದ್ಯದಲ್ಲಿ ರನೌಟ್ ಸಂಕಟಕ್ಕೆ ಸಿಲುಕಿದರು. ಇಲ್ಲದ ರನ್ ಕದಿಯಲೆತ್ನಿಸಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು.
ನಾಯಕಿ ಸ್ಮೃತಿ ಮಂಧಾನ ಅವರ ಆಟ ಈ ಪಂದ್ಯದಲ್ಲಿಯೂ ಮಂದ ಗತಿಯಿಂದ ಕೂಡಿತ್ತು. 25 ಎಸೆತ ಎದುರಿಸಿ 24 ರನ್ ಗಳಿಸಿದರು. ಇದರೊಂದಿಗೆ ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಮಂಧಾನ ಸಂಪೂರ್ಣ ವೈಫಲ್ಯ ಕಂಡಂತಾಯಿತು. ಈ ಮೂಲಕ ಮುಂದಿನ ಬಾರಿಯ ಆವೃತ್ತಿಯಲ್ಲಿ ಅವರು ಆರ್ಸಿಬಿ ತಂಡದಲ್ಲಿಯೇ ಉಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಕ್ರಿಕೆಟ್
WPL 2023: ಸೋಲಿನೊಂದಿಗೆ ಅಭಿಯಾನ ಮುಗಿಸಿದ ಆರ್ಸಿಬಿ
ಮುಂಬೈ ಇಂಡಿಯನ್ಸ್ ವಿರುದ್ಧದ ಮಂಗಳವಾರದ ಅಂತಿಮ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ವಿಕೆಟ್ಗಳ ಸೋಲಿಗೆ ತುತ್ತಾಗಿದೆ.
ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಸ್ಮೃತಿ ಮಂಧಾನ ಸಾರಥ್ಯದ ಆರ್ಸಿಬಿ(Royal Challengers Bangalore) ತಂಡ ಇದೀಗ ಸೋಲಿನೊಂದಿಗೆಯೇ ತನ್ನ ಅಭಿಯಾನವನ್ನು ಮುಗಿಸಿದೆ. ಮಂಗಳವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ 4 ವಿಕೆಟ್ಗಳ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್ ಈ ಗೆಲುವಿನೊಂದಿಗೆ ಮತ್ತೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಮುಂಬಯಿಯ ಡಿ.ವೈ. ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಡಬಲ್ ಹೆಡ್ಡರ್ ಮುಖಾಮುಖಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ರಿಚಾ ಘೋಷ್ ಮತ್ತು ಎಲ್ಲಿಸ್ ಪೆರ್ರಿ ಅವರ ಸಣ್ಣ ಹೋರಾಟದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಬಾರಿಸಿತು. ಜಬಾಬಿತ್ತ ಮುಂಬೈ ಇಂಡಿಯನ್ಸ್ 16.3 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 129 ರನ್ ಬಾರಿಸಿ ಗೆಲುವು ದಾಖಲಿಸಿತು.
ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈಗೆ ಯಾಸ್ತಿಕಾ ಭಾಟಿಯಾ ಮತ್ತು ಹೇಲಿ ಮ್ಯಾಥ್ಯೂಸ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ಗೆ 53 ರನ್ಗಳ ಜತೆಯಾಟ ನಡೆಸಿತು. ಯಾಸ್ತಿಕಾ 30 ರನ್ ಗಳಿಸಿದರೆ, ಮ್ಯಾಥ್ಯೂಸ್ 24 ರನ್ ಬಾರಿಸಿದರು. ಉಭಯ ಆಟಗಾರ್ತಿಯ ವಿಕೆಟ್ ಪತನದ ಬೆನ್ನಲ್ಲೇ ತಂಡ ನಾಯಕೀಯ ಕುಸಿತ ಕಂಡಿತು. ನಾಯಕಿ ಹರ್ಮನ್ಪ್ರೀತ್ ಕೌರ್(2), ನ್ಯಾಟ್ ಸ್ಕಿವರ್-ಬ್ರಂಟ್ (13) ಅಲ್ಪ ಮೊತ್ತಕ್ಕೆ ಔಟಾದರು. ತಂಡದ ಮೊತ್ತ 74 ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಮುಂಬೈ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತು.
ನಾಟಕೀಯ ಕುಸಿತ ಕಂಡ ಮುಂಬೈ ತಂಡಕ್ಕೆ ಬೌಲಿಂಗ್ನಲ್ಲಿ ಮೂರು ವಿಕೆಟ್ ಕಿತ್ತು ಪ್ರಮುಖ ಪಾತ್ರ ನಿರ್ವಹಿಸಿದ್ದ ಅಮೇಲಿಯಾ ಕೆರ್ ಮತ್ತು ಪೂಜಾ ವಸ್ತ್ರಾಕರ್ ಕೆಳ ಕ್ರಮಾಂಕದಲ್ಲಿ ತಾಳ್ಮೆಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ತಂಡದ ಗೆಲುವಿಗೆ 6 ರನ್ ಅಗತ್ಯವಿದ್ದಾಗ ಪೂಜಾ ವಿಕೆಟ್ ಕೈಚೆಲ್ಲಿದರು. ಅವರು 19 ರನ್ ಗಳಿಸಿದರು. ಅಮೇಲಿಯಾ ಕೆರ್ ಅಜೇಯ 31 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಈ ಅಜೇಯ ಇನಿಂಗ್ಸ್ ಆಟದ ವೇಳೆ 4 ಬೌಂಡರಿ ಸಿಡಿಯಿತು.
ಮಂದ ಗತಿಯ ಬ್ಯಾಟಿಂಗ್ ನಡೆಸಿದ ಮಂಧಾನ ಪಡೆ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆರ್ಸಿಬಿ ಆರಂಭಿಕ ಆಘಾತ ಕಂಡಿತು. ಗುಜರಾತ್ ಜೈಂಟ್ಸ್ ವಿರುದ್ಧ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿ ನಡುಕ ಹುಟ್ಟಿಸಿದ್ದ ನ್ಯೂಜಿಲ್ಯಾಂಡ್ನ ಸ್ಟಾರ್ ಆಲ್ ರೌಂಡರ್ ಸೋಫಿ ಡಿವೈನ್ ಅವರು ಈ ಪಂದ್ಯದಲ್ಲಿ ರನೌಟ್ ಸಂಕಟಕ್ಕೆ ಸಿಲುಕಿದರು. ಇಲ್ಲದ ರನ್ ಕದಿಯಲೆತ್ನಿಸಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭಸಿದರು.
ನಾಯಕಿ ಸ್ಮೃತಿ ಮಂಧಾನ ಅವರ ಆಟ ಈ ಪಂದ್ಯದಲ್ಲಿಯೂ ಮಂದ ಗತಿಯಿಂದ ಕೂಡಿತ್ತು. 25 ಎಸೆತ ಎದುರಿಸಿ 24 ರನ್ ಗಳಿಸಿದರು. ಇದರೊಂದಿಗೆ ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಮಂಧಾನ ಸಂಪೂರ್ಣ ವೈಫಲ್ಯ ಕಂಡಂತಾಯಿತು. ಈ ಮೂಲಕ ಮುಂದಿನ ಬಾರಿಯ ಆವೃತ್ತಿಯಲ್ಲಿ ಅವರು ಆರ್ಸಿಬಿ ತಂಡದಲ್ಲಿಯೇ ಉಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಆರಂಭಿಕ ಆಟಗಾರ್ತಿಯರ ವಿಕೆಟ್ ಪತನದ ಬಳಿಕ ಆಡಲಿಳಿದ ಆಸ್ಟ್ರೇಲಿಯಾದ ಆಲ್ರೌಂಡರ್ ಎಲ್ಲಿಸ್ ಪೆರ್ರಿ ತಂಡಕ್ಕೆ ಆಸರೆಯಾದರು. ಪ್ರತಿ ಓವರ್ನಲ್ಲಿ ಒಂದು ಬೌಂಡರಿ ಬಾರಿಸುವ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸಲಾರಂಭಿಸಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಯಾರು ಕೂಡ ಉತ್ತಮ ಸಾಥ್ ನೀಡಲಿಲ್ಲ. ಹೀತರ್ ನೈಟ್ ಮತ್ತು ಕನಿಕಾ ಅಹುಜಾ ತಲಾ 12 ರನ್ಗೆ ಆಟ ಮುಗಿಸಿದರು. ಇದರ ಬೆನ್ನಲ್ಲೇ ಎಲ್ಲಿಸ್ ಪೆರ್ರಿ ಕೂಡ ನ್ಯಾಟ್ ಸ್ಕಿವರ್ ಬ್ರಂಟ್ ಎಸೆತದಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. 38 ಎಸೆತ ಎದುರಿಸಿದ ಅವರು ಮೂರು ಬೌಂಡರಿ ನೆರವಿನಿಂದ 29 ರನ್ ಬಾರಿಸಿದರು. ಸ್ಕಿವರ್ ಬ್ರಂಟ್ 24 ರನ್ಗೆ 2 ವಿಕೆಟ್ ಉರುಳಿಸಿದರು.
ಇದನ್ನೂ ಓದಿ WPL 2023 : ಸೇಡು ತೀರಿಸಿಕೊಂಡ ಡೆಲ್ಲಿ ಪಡೆ, ಮುಂಬಯಿ ವಿರುದ್ಧ 9 ವಿಕೆಟ್ ಸುಲಭ ಜಯ
ಅಂತಿಮ ಹಂತದಲ್ಲಿ ರಿಚಾ ಘೋಷ್ ಬಿರುಸಿನ ಬ್ಯಾಟಿಂಗ್ ನಡೆಸಿದ ಪರಿಣಾಮ ಆರ್ಸಿಬಿ 100ರ ಗಡಿ ದಾಟಿತು. ಕ್ರೀಸ್ ಗಿಳಿದ ಆರಂಭದಿಂದಲೇ ಸಿಕ್ಸರ್, ಬೌಂಡರಿಗಳ ಮೂಲಕ ಮುಂಬೈ ಬೌಲರ್ಗಳ ಸಣ್ಣ ಮೊತ್ತದ ಯೋಜನೆಯನ್ನು ತಲೆಕೆಳಗಾಗಿಸಿದರು. ಆದರೆ ಅಂತಿಮ ಓವರ್ ಮೊದಲ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು. ಅವರ ವಿಕೆಟ್ ಉರುಳಿದ ಬಳಿಕ ತಂಡದ ಮೊತ್ತವೂ ಕುಸಿಯಿತು. ಒಟ್ಟು 13 ಎಸೆತ ಎದುರಿಸಿದ ಅವರು ಮೂರು ಬೌಂಡರಿ 2 ಸಿಕ್ಸರ್ ಬಾರಿಸಿ 29 ರನ್ ಕಲೆಹಾಕಿದರು. ಮುಂಬೈ ಪರ ಅಮೇಲಿಯಾ ಕೆರ್ 22 ರನ್ ವೆಚ್ಚದಲ್ಲಿ ಮೂರು ವಿಕೆಟ್ ಪಡೆದರು. ಸೈಕಾ ಇಶಾಖ್ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಆರ್ಸಿಬಿ; 20 ಓವರ್ಗಳಲ್ಲಿ 9 ವಿಕೆಟ್ಗೆ 125( ಎಲ್ಲಿಸ್ ಪೆರ್ರಿ 29, ರಿಚಾ ಘೋಷ್ 29, ಅಮೇಲಿಯಾ ಕೆರ್ 22ಕ್ಕೆ 3). ಮುಂಬೈ ಇಂಡಿಯನ್ಸ್: 16.3 ಓವರ್ಗಳಲ್ಲಿ 6 ವಿಕೆಟ್ಗೆ 129( ಅಕೇಲಿಯಾ ಕೆರ್ ಅಜೇಯ 31, ಮ್ಯಾಥ್ಯೂಸ್ 24, ಯಾಸ್ತಿಕಾ ಭಾಟಿಯಾ 30)
ಕ್ರೀಡೆ
Rani Rampal: ರಾಯ್ ಬರೇಲಿ ಸ್ಟೇಡಿಯಂಗೆ ಹಾಕಿ ಆಟಗಾರ್ತಿ ರಾಣಿ ರಾಂಪಾಲ್ ಹೆಸರು
ಎಂಸಿಎಫ್ ರಾಯ್ಬರೇಲಿ ಹಾಕಿ ಕ್ರೀಡಾಂಗಣವನ್ನು “ರಾಣಿ ಗರ್ಲ್ಸ್ ಹಾಕಿ ಟರ್ಫ್” ಎಂದು ಮರುನಾಮಕರಣ ಮಾಡಲಾಗಿದೆ.
ನವದೆಹಲಿ: ಭಾರತ ಮಹಿಳಾ ಹಾಕಿ ತಂಡದ ಸ್ಟಾರ್ ಆಟಗಾರ್ತಿ ರಾಣಿ ರಾಂಪಾಲ್(Rani Rampal) ಅವರ ಹೆಸರನ್ನು ರಾಯ್ ಬರೇಲಿಯಲ್ಲಿರುವ ಕ್ರೀಡಾಂಗಣಕ್ಕೆ ಇಡಲಾಗಿದೆ. ಈ ಮೂಲಕ ಕ್ರೀಡೆಯಲ್ಲಿ ತಮ್ಮ ಹೆಸರಿನ ಕ್ರೀಡಾಂಗಣವನ್ನು ಹೊಂದಿರುವ ಮೊದಲ ಮಹಿಳೆ ಎಂಬ ಕೀರ್ತಿಗೆ ರಾಣಿ ಅವರು ಪಾತ್ರರಾಗಿದ್ದಾರೆ.
ಎಂಸಿಎಫ್ ರಾಯ್ ಬರೇಲಿ ಹಾಕಿ ಸ್ಟೇಡಿಯಮ್ ಇನ್ನು ಮುಂದೆ ‘ರಾಣಿ ಗರ್ಲ್ಸ್ ಹಾಕಿ ಟರ್ಫ್’ ಎಂದು ಮರುನಾಮಕರಣ ಮಾಡಲಾಗಿದೆ. ಈ ವಿಚಾರವನ್ನು ರಾಣಿ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಹಾಕಿ ಕ್ರೀಡೆಗೆ ನಾನು ನೀಡಿದ ಕೊಡುಗೆಯನ್ನು ಪರಿಗಣಿಸಿ ಎಂಸಿಎಫ್ ರಾಯ್ಬರೇಲಿ ಹಾಕಿ ಕ್ರೀಡಾಂಗಣವನ್ನು ರಾಣಿ ಗರ್ಲ್ಸ್ ಹಾಕಿ ಟರ್ಫ್ ಎಂದು ಮರುನಾಮಕರಣ ಮಾಡಲಾಗಿದೆ. ಇದು ನನಗೆ ಸಂದ ಅತ್ಯಂತ ಶ್ರೇಷ್ಠ ಗೌರವವಾಗಿದೆ” ಎಂದು ರಾಣಿ ರಾಂಪಾಲ್ ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ Hockey India: ಹಾರ್ದಿಕ್, ಸವಿತಾಗೆ ವರ್ಷದ ಹಾಕಿ ಆಟಗಾರ ಪ್ರಶಸ್ತಿ
“ನನ್ನ ಹೆಸರಲ್ಲಿ ಒಂದು ಕ್ರೀಡಾಂಗಣವನ್ನು ಹೊಂದಿರುವ ಮೊದಲ ಮಹಿಳಾ ಹಾಕಿ ಆಟಗಾರ್ತಿಯಾಗಿರುವುದು ನನಗೆ ಹೆಮ್ಮೆಯ ಕ್ಷಣವಾಗಿದೆ. ನಾನು ಇದನ್ನು ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅರ್ಪಿಸುತ್ತೇನೆ ಹಾಗೂ ಇದು ಮುಂದಿನ ತಲೆಮಾರಿನ ಹಾಕಿ ಆಟಗಾರ್ತಿಯರಿಗೆ ಸ್ಫೂರ್ತಿ ನೀಡಲಿ” ಎಂದು ರಾಣಿ ಹೇಳಿದರು. ಟೋಕಿಯೊ ಒಲಿಂಪಿಕ್ಸ್ ಆಡಿದ ಬಳಿಕ ರಾಣಿ ರಾಂಪಾಲ್ ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿದ್ದರು. ಕಾಮನ್ವೆಲ್ತ್ ಗೇಮ್ಸ್‌ಗೂ ಅವರು ಅಲಭ್ಯರಾಗಿದ್ದರು. ಭಾರತಕ್ಕಾಗಿ ಸುಮಾರು 250 ಪಂದ್ಯಗಳಲ್ಲಿ ಆಡಿದ್ದಾರೆ.
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಆಟೋಮೊಬೈಲ್22 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್6 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ10 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ9 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ10 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ
-
ಕರ್ನಾಟಕ11 hours ago
Drugs Mafia : ಸಾಗರದಲ್ಲಿ ಡ್ರಗ್ಸ್ ಮಾರಾಟ ಯತ್ನ: ಲಾಂಗ್ ಸಹಿತ ಇಬ್ಬರ ಅರೆಸ್ಟ್, ಕೊಲೆ ಸಂಚೂ ಬಯಲು