Site icon Vistara News

IPL 2023 : ಸಿಎಸ್​ಕೆ ಅಭಿಮಾನಿಗಳು ರೈಲ್ವೇ ಸ್ಟೇಷನ್​ನಲ್ಲಿ ಮಲಗಿದ್ದೇಕೆ?

CSK Fans

#image_title

ಅಹಮದಾಬಾದ್​: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಐಪಿಎಲ್ ಫೈನಲ್ ಪಂದ್ಯ ಮಳೆಯಿಂದಾಗಿ ಭಾನುವಾರ ನಡೆದಿಲ್ಲ. ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಇದು ಅಭಿಮಾನಿಗಳ ಪಾಲಿಗೆ ಅತ್ಯಂತ ಬೇಸರದ ಸಂಗತಿ ಎನಿಸಿಕೊಂಡಿತ್ತು. ಅದರಲ್ಲೂ ಪಂದ್ಯ ನೋಡಲು ಚೆನ್ನೈನಿಂದ ಅಹಮದಾಬಾದ್​ಗೆ ಹೋಗಿದ್ದ ಸಿಎಸ್​ಕೆ ಅಭಿಮಾನಿಗಳಿಗಂತೂ ಮಳೆಯಿಂದ ಅತಂತ್ರರಾದರು. ಪಂದ್ಯ ಮುಕ್ತಾಯಗೊಂಡ ತಕ್ಷಣ ಊರಿಗೆ ಮರಳುವ ಅವರ ಯೋಜನೆ ಸಂಪೂರ್ಣ ವಿಫಲವಾಯಿತು. ಹೀಗಾಗಿ ಅವರೆಲ್ಲರೂ ಉಳಿದುಕೊಳ್ಳುವುದಕ್ಕೆ ಜಾಗವಿಲ್ಲದೆ, ಹೋಗಲು ಸ್ಥಳವಿಲ್ಲದೆ ಹತ್ತಿರದ ರೈಲ್ವೆ ನಿಲ್ದಾಣದ ನೆಲದ ಮೇಲೆ ಮಲಗಿ ರಾತ್ರಿ ಕಳೆಯಬೇಕಾಯಿತು. ದೇಶದಾದ್ಯಂತ ಮತ್ತು ವಿಶೇಷವಾಗಿ ಚೆನ್ನೈನಿಂದ ಪ್ರಯಾಣಿಸಿದ ಸಾವಿರಾರು ಜನರು ಅಹಮದಾಬಾದ್​ನಲ್ಲಿ ವಾಸ್ತವ್ಯ ವಿಸ್ತರಿಸಬೇಕಾಯಿ.

ಸಿಎಸ್​ಕೆ ಅಭಿಮಾನಿಗಳು ನೆಲದ ಮೇಲೆ ಮಲಗಿರುವ ಚಿತ್ರಗಳು ಮತ್ತು ವೀಡಿಯೊಗಳು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಎಂಎಸ್ ಧೋನಿಗಾಗಿ ಮಾತ್ರ ಪಂದ್ಯವನ್ನು ವೀಕ್ಷಿಸಲು ಬಂದಿದ್ದೇವೆ ಎಂದು ಸಿಎಸ್​ಕೆ ಅಭಿಮಾನಿಗಳು ಹೇಳಿದ್ದಾರೆ. ಧೋನಿಯ ಹೆಸರಿರುವ ಜೆರ್ಸಿ ಧರಿಸಿದ ಅನೇಕ ಅಭಿಮಾನಿಗಳು ರೈಲ್ವೇ ಸ್ಟೇಷನ್​ನಲ್ಲಿ ಕಂಡು ಬಂದರು. ಧೋನಿಗೆ ಇದು ಕಡೇ ಪಂದ್ಯ ಎಂಬ ವರ್ತಮಾನಗಳು ಕೇಳಿ ಬಂದಿರುವ ಕಾರಣ ಹೆಚ್ಚು ಅಭಿಮಾನಿಗಳು ಈ ಪಂದ್ಯಕ್ಕೆ ಸಾಕ್ಷಿಯಾಗಲು ಬಂದಿದ್ದರು.

ಮತ್ತೊಂದೆಡೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೀಸಲು ದಿನದಂದು ಪಂದ್ಯಕ್ಕೆ ಹಾಜರಾಗಲು ಅಭಿಮಾನಿಗಳಿಗೆ ಹಾರ್ಡ್​ ಕಾಪಿಯನ್ನು ಜತೆಗಿಟ್ಟುಕೊಳ್ಳುವಂತೆ ಹೇಳಿದೆ. ಮಳೆ ಸೇರಿದಂತೆ ಆಗಿರುವ ಗೊಂದಲದಿಂದ ಟಿಕೆಟ್ ಹರಿದು ಹೋಗಿದ್ದರೂ ಸ್ವೀಕರಿಸುತ್ತಾರೆ. ಆದರೆ, ಮಾಹಿತಿ ಸಂಪೂರ್ಣವಾಗಿ ಕಾಣುತ್ತಿರಬೇಕು ಎಂದು ಹೇಳಿದೆ. ಮೀಸಲು ದಿನದಂದು ಡಿಜಿಟಲ್​ ಟಿಕೆಟ್​ ಸ್ವೀಕರಿಸಲಾಗುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು.

ಟಾಟಾ ಐಪಿಎಲ್​​ 2023ರ ಫೈನಲ್​ ಪಂದ್ಯದ ಟಿಕೆಟ್​ಗಳು ಮೇ 29ಕ್ಕೂ ಮಾನ್ಯವಾಗಿರುತ್ತವೆ. ಟಿಕೆಟ್​​ಗಳನ್ನು ಹಾಗೆಯೇ ಇರಿಸಿಕೊಂಡಿರಬೇಕು ಎಂದು ಐಪಿಎಲ್​ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು.

ಇದನ್ನೂ ಓದಿ : IPL 2023 : ಸತತವಾಗಿ ಸುರಿದ ಮಳೆ, ಐಪಿಎಲ್​ ಫೈನಲ್ ಮೀಸಲು ದಿನಕ್ಕೆ ಮುಂದೂಡಿಕೆ

ಐಪಿಎಲ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯವನ್ನು ಮೀಸಲು ದಿನಕ್ಕೆ ವಿಸ್ತರಿಸಲಾಗಿದೆ ಬಿಸಿಸಿಐನ ಲಾಜಿಸ್ಟಿಕ್ ತಂಡ ಮತ್ತು ಮೈದಾನದ ಸಿಬ್ಬಂದಿ ಕೂಡ ಮೇ 28 ರಂದು ಸುರಿದ ಮಳೆಯಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಿದರು. ಏತನ್ಮಧ್ಯೆ, ಹವಾಮಾನ ವರದಿಯ ಪ್ರಕಾರ ಮೀಸಲು ದಿನದಂದು ಮಳೆಯಾಗುವ ಸಣ್ಣ ಅವಕಾಶವಿದೆ. ಆದರೆ ಪಂದ್ಯ ನಡೆಯುವ ನಿರೀಕ್ಷೆಯಿದೆ.

Exit mobile version