IPL 2023 : ಸತತವಾಗಿ ಸುರಿದ ಮಳೆ, ಐಪಿಎಲ್​ ಫೈನಲ್ ಮೀಸಲು ದಿನಕ್ಕೆ ಮುಂದೂಡಿಕೆ - Vistara News

ಕ್ರೀಡೆ

IPL 2023 : ಸತತವಾಗಿ ಸುರಿದ ಮಳೆ, ಐಪಿಎಲ್​ ಫೈನಲ್ ಮೀಸಲು ದಿನಕ್ಕೆ ಮುಂದೂಡಿಕೆ

ಕಟ್​ಆಫ್​ ಸಮಯದ ತನಕವೂ ಮಳೆ ಸುರಿದ ಕಾರಣ ಫೀಲ್ಡ್​ ಅಂಪೈರ್​ಗಳು ಮ್ಯಾಚ್​ ರೆಫರಿ ಪಂದ್ಯವನ್ನು ಮುಂದೂಡಿಕೆ ಮಾಡಲು ನಿರ್ಧಾರ ಕೈಗೊಂಡರು.

VISTARANEWS.COM


on

IPL 2023 Final
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​: ಐಪಿಎಲ್​ 16ನೇ ಆವೃತ್ತಿಯ ಫೈನಲ್ ಪಂದ್ಯ ಮೀಸಲು ದಿನಕ್ಕೆ ಮುಂದೂಡಿಕೆಯಾಗಿದೆ. ಮೇ 29 ಸೋಮವಾರ ಮೀಸಲು ದಿನ. ಅಂದು ಪೂರ್ಣ 20 ಓವರ್​ಗಳ ಪಂದ್ಯ ನಡೆಯುವ ನಿರೀಕ್ಷೆಯಿದೆ. ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಹಾಗೂ ಗುಜರಾತ್​ ಟೈಟನ್ಸ್​ ತಂಡಗಳ ನಡುವೆ ಪ್ರಶಸ್ತಿ ಸುತ್ತಿನ ಪಂದ್ಯ ಆಯೋಜನೆಗೊಂಡಿತ್ತು. ಆದರೆ, ರಾತ್ರಿ 11 ಗಂಟೆಯವರೆಗೂ ಮಳೆ ನಿರಂತರವಾಗಿ ಗುಡುಗು ಸಹಿತ ಮಳೆ ಸುರಿದ ಕಾರಣ ಪಂದ್ಯವನ್ನು ಮುಂದೂಡಿಕೆ ಮಾಡಲು ರೆಫರಿ ಸೂಚಿಸಿದರು.

ಐಪಿಎಲ್​ನ 16 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಮೊದಲ ಬಾರಿಗೆ ಋತುವಿನ ಚಾಂಪಿಯನ್​ ತಂಡವನ್ನು ನಿರ್ಧರಿಸಲು ಮೀಸಲು ದಿನದ ಮೊರೆ ಹೋಗಲಾಯಿತು. ಸೋಮವಾರವೂ ಮಳೆ ಸುರಿಯುವ ಮುನ್ಸೂಚನೆಯಿದ್ದು , ಅದು ನಿಜವಾದರೆ ಚಾಂಪಿಯನ್​ಗಳ ನಿರ್ಧಾರ ಮತ್ತಷ್ಟು ಕ್ಲಿಷ್ಟವಾಗಬಹುದು.

ಭಾನುವಾರ ಸಂಜೆ ಸಂಜೆ 7 ರಿಂದ ರಾತ್ರಿ 11 ರವರೆಗೆ ಅಭಿಮಾನಿಗಳು, ಆಟಗಾರರು, ಕ್ರಿಕೆಟ್​​ ತಜ್ಞರು ಫಲಿತಾಂಶದ ನಿರೀಕ್ಷೆಯಲ್ಲಿದ್ದರು. ರಾತ್ರಿ 9 ಗಂಟೆಗೆ ಒಂದು ಬಾರಿ ಮಳೆ ನಿಂತಾಗಲೂ ಪಂದ್ಯ ನಡೆಯುವ ಸೂಚನೆ ದೊರೆಯಿತು. ಪಿಚ್​​ಗೆ ಹೊದಿಸಲಾಗಿದ್ದ ಟಾರ್ಪಾಲ್​ ಕವರ್​ಗಳನ್ನು ಹೊರಕ್ಕೆ ತೆಗೆಯಲಾಗಿತ್ತು. ಆಟಗಾರರೂ ವಾರ್ಮ್​ಅಪ್​ಗಾಗಿ ಮೈದಾನಕ್ಕೆ ಇಳಿದಿದ್ದರು. ಈ ಸಕಾರಾತ್ಮಕ ವಾತಾವರಣ ಹಚ್ಚು ಹೊತ್ತು ಇರಲಿಲ್ಲ. ತುಂತುರು ಮಳೆ ದೊಡ್ಡ ದೊಡ್ಡ ಹನಿಯಾಗಿ ಪರಿವರ್ತನೆಗೊಂಡಿತು. ನಾಲ್ಕು ಗಂಟೆಗಳ ದೀರ್ಘ ಕಾಯುವಿಕೆ ಬಳಿಕ ಮುಂದೂಡಿಕೆ ನಿರ್ಧಾರ ಕೈಗೊಳ್ಳಲಾಯಿತು.

ಇದನ್ನೂ ಓದಿ : IPL 2023 : ಎರಡನೇ ಮಗಳು ಹುಟ್ಟಿದ ಸಂತಸ ಹಂಚಿಕೊಂಡ ಅಂಬಾಟಿ ರಾಯುಡು

ರಾತ್ರಿ 10:30 ರ ಸುಮಾರಿಗೆ ಮೀಸಲು ದಿನದ ಸಾಧ್ಯತೆಯ ಚರ್ಚೆ ಆರಂಭಗೊಂಡಿತ್ತು. ಫೀಲ್ಡ್​ ಅಂಪೈರ್​​ಗಳಾದ ನಿತಿನ್ ಮೆನನ್ ಮತ್ತು ರಾಡ್ ಟಕರ್ ಅವರು ಪರಿಸ್ಥಿತಿಗಳನ್ನು ಉದ್ದೇಶಿಸಿ ಮಾತನಾಡಿ, ಇಷ್ಟೊಂದು ಮಳೆಯಾದರೆ ಆಟವಾಡಿಸಲು ಮೈದಾನ ಅನುಕೂಲಕರವಾಗಿರುವುದಿಲ್ಲ ಎಂದು ಹೇಳಿದರು. ಈ ವೇಳೆಯೇ ಮುಂದೂಡಿಕೆ ನಿರ್ಧಾರವಾಯಿತು.

ರಾತ್ರಿ 9 ಗಂಟೆ ಸುಮಾರಿಗೆ ಮಳೆ ಕಡಿಮೆಯಾದಾಗ, ಪರಿಷ್ಕೃತ ಆಟದ ಪರಿಸ್ಥಿತಿಗಳನ್ನು ವಿವರಿಸಲಾಯಿತು. ಒಂದು ವೇಳೆ ರಾತ್ರಿ 9.35ಕ್ಕೆ ಮುಂಚಿತವಾಗಿ ಫೈನಲ್ ಪಂದ್ಯ ಆರಂಭವಾಗಿದ್ದರೆ 20 ಓವರ್​ಗಳ ಪೂರ್ಣ ಪಂದ್ಯ ನಡೆಯುತ್ತಿತ್ತು. ರಾತ್ರಿ 9:45 ಕ್ಕೆ ಪ್ರಾರಂಭವಾಗಿದ್ದರೆ ತಲಾ 19 ಓವರ್​ಗಳ ಪಂದ್ಯ ನಡೆಯುತ್ತಿತ್ತು. ರಾತ್ರಿ 10 ಗಂಟೆಗಾಧರೆ 17 ಓವರ್​ಗಳ ಪಂದ್ಯ ಮತ್ತು ರಾತ್ರಿ 10:15 ಮತ್ತು 10:30 ರವರೆ ಪ್ರತಿ ತಂಡಕ್ಕೆ 15 ಓವರ್​ಗಳ ಪಂದ್ಯ ನಡೆಸುವ ತೀರ್ಮಾನ ಕೈಗೊಳ್ಳಲಾಗಿತ್ತು. 12:06ಕ್ಕೆ ಆರಂಭಗೊಂಡಿದ್ದರೆ ಐದು ಓವರ್​ಗಳ ಶೂಟೌಟ್ ಮೂಲಕ ವಿಜೇತರ ನಿರ್ಧಾರವಾಗುತ್ತಿತ್ತು. ಅಚ್ಚರಿ ಎಂಬಂತೆ ರಾತ್ರಿ 10:50ಕ್ಕೆ ಮಳೆ ನಿಂತಿತು. ಆದರೆ, ಅಧಿಕಾರಿಗಳ ಆಸಕ್ತಿ ಮೀಸಲು ದಿನಕ್ಕೆ ಪಂದ್ಯವನ್ನು ಮುಂದೂಡುವುದಾಗಿತ್ತು.

ಮೀಸಲು ದಿನ (ಅಂದರೆ ಮೇ 29) ರದ್ದಾದರೆ, ಗುಜರಾತ್ ಟೈಟಾನ್ಸ್ ಐಪಿಎಲ್ 2023 ರ ಚಾಂಪಿಯನ್ ಆಗಲಿದೆ, ಏಕೆಂದರೆ ಗುಂಪು ಹಂತದ ನಂತರ ಚೆನ್ನೈ ಸೂಪರ್ ಕಿಂಗ್ಸ್ (2) ಗಿಂತ ಹೆಚ್ಚಿನ (1) ಸ್ಥಾನವನ್ನು ಗಳಿಸಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Champions Trophy: ಪಾಕಿಸ್ತಾನದಲ್ಲೇ ಚಾಂಪಿಯನ್ಸ್​ ಟ್ರೋಫಿ; ಪಿಸಿಬಿ ಅಧ್ಯಕ್ಷ ನಖ್ವಿ ವಿಶ್ವಾಸ

ಚಾಂಪಿಯನ್ಸ್​ ಟ್ರೋಫಿ(Champions Trophy) ಕ್ರಿಕೆಟ್​ ಟೂರ್ನಿಯೂ ಪಾಕಿಸ್ತಾನದಲ್ಲೇ ನಡೆಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್(PCB) ಮಂಡಳಿ(Pakistan Cricket Board) ಮುಖ್ಯಸ್ಥ ಮೊಹ್ಸಿನ್ ನಖ್ವಿ(Mohsin Naqvi) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

VISTARANEWS.COM


on

IND vs PAK
Koo

ಕರಾಚಿ: ಮುಂದಿನ ವರ್ಷ(Champions Trophy 2025) ಪಾಕಿಸ್ತಾನದ(Pakistan) ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿ(Champions Trophy) ಕ್ರಿಕೆಟ್​ ಟೂರ್ನಿಯೂ ಪಾಕಿಸ್ತಾನದಲ್ಲೇ ನಡೆಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್(PCB) ಮಂಡಳಿ(Pakistan Cricket Board) ಮುಖ್ಯಸ್ಥ ಮೊಹ್ಸಿನ್ ನಖ್ವಿ(Mohsin Naqvi) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಸೂಪರ್ ಲೀಗ್ ಫೈನಲ್‌ನ ಪಂದ್ಯ ಮುಕ್ತಾಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಖ್ವಿ, ಕಳೆದ ವಾರ ದುಬೈನಲ್ಲಿ ನಡೆದ ಐಸಿಸಿ ಸಭೆಗಳಲ್ಲಿ ಟೂರ್ನಿಯ ಬಗ್ಗೆ ಚರ್ಚೆಗಳು ನಡೆದಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಟೂರ್ನಿಯನ್ನು ತನ್ನ ದೇಶದಿಂದ ಸ್ಥಳಾಂತರಿಸುವ ಸಾಧ್ಯತೆಯನ್ನು ಮಂಡಳಿಯು ಪರಿಗಣಿಸುತ್ತಿಲ್ಲ ಎಂದು ನಖ್ವಿ ದೃಢವಾದ ಹೇಳಿಕೆ ನೀಡಿದ್ದಾರೆ.

“ಜಯ್ ಶಾ ಜತೆ ಸ್ವಲ್ಪ ಸಮಯದವರೆಗೆ ಮಾತನಾಡಿದ್ದೇವೆ. ಈ ಮಾತುಕತೆಯೂ ಸೌಹಾರ್ದಯುತವಾಗಿತ್ತು. ಆದರೆ, ಚರ್ಚಿಸಿದ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ಮೊಹ್ಸಿನ್ ನಖ್ವಿ ಹೇಳಿದರು. ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಒಪ್ಪದಿದ್ದರೆ ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸಲಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಖ್ವಿ,”ಆ ಮಾರ್ಗಗಳ ಬಗ್ಗೆ ನಾನು ಯೋಚಿಸುವುದಿಲ್ಲ, ನಾವು ಪಾಕಿಸ್ತಾನದಲ್ಲಿ ನಿಗದಿತ ಸಮಯದಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುತ್ತೇವೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.

ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತ ತಂಡವು ಪ್ರಯಾಣಿಸಲು ನಿರಾಕರಿಸಿದ ನಂತರ, ಕಳೆದ ವರ್ಷದ ಏಷ್ಯಾಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು.

ಇದನ್ನೂ ಓದಿ Champions Trophy : ಯುಎಇನಲ್ಲಿ ಚಾಂಪಿಯನ್ಸ್ ಟ್ರೋಫಿ, ಪಾಕಿಸ್ತಾನಕ್ಕೆ ಹಿನ್ನಡೆ

ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್​ ಟ್ರೋಫಿಯ ಯಶಸ್ಸಿಗೆ ಪಿಸಿಬಿ ಬದ್ಧವಾಗಿದ್ದರೂ, ಭದ್ರತಾ ಕಾರಣಗಳಿಂದಾಗಿ ಭಾರತವು ಭಾಗವಹಿಸದಿದ್ದರೆ, ಆಗ ಏಷ್ಯಾ ಕಪ್​ನಂತೆ​ ಹೈಬ್ರಿಡ್ ಮಾದರಿಯ ಮೊರೆ ಹೋಗಬೇಕಿದೆ. ಆದರೆ ಸ್ವತಂತ್ರ ಏಜೆನ್ಸಿಯೊಂದಿಗೆ ಸಮಾಲೋಚಿಸಿ ಸಮಗ್ರ ಭದ್ರತಾ ಮೌಲ್ಯಮಾಪನವನ್ನು ನಡೆಸಿ ಪಾಕಿಸ್ತಾನದಲ್ಲಿಯೇ ಟೂರ್ನಿ ನಡೆಸಿ ಎಂದು ಪಿಸಿಬಿ ಹೇಳುವ ಸಾಧ್ಯತೆಗಳಿವೆ. ಐಸಿಸಿ ಈ ವಿನಂತಿಯನ್ನು ಒಪ್ಪಿಕೊಂಡಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ಭಾರತ ಪಾಕ್​ನಲ್ಲಿ ಆಡಲಿದೆಯಾ ಅಥವಾ ಬಿಸಿಸಿಐ ಒತ್ತಾಯಕ್ಕೆ ಮಣಿದು ಟೂರ್ನಿ ಪಾಕ್​ ನಿಂದ ಶಿಫ್ಟ್​ ಆಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

ಅರ್ಹತೆ ಪಡೆದ ತಂಡಗಳು

ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ಟೂರ್ನಿಗೆ ಅರ್ಹತೆ ಪಡೆದಿದೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್​, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್​ ಮತ್ತು ಬಾಂಗ್ಲಾದೇಶ ಅರ್ಹತೆ ಪಡೆದ ತಂಡಗಳಾಗಿವೆ.

Continue Reading

ಕ್ರೀಡೆ

IPL 2024: ಎಲ್ಲ ಅನುಮಾನಗಳಿಗೂ ತೆರೆ; ಆರ್​ಸಿಬಿ ಸೇರಿದ ಇಂಗ್ಲೆಂಡ್​ ಆಲ್​ರೌಂಡರ್​

ಮೊಣಕಾಲಿನ( Knee Injury) ಗಾಯಕ್ಕೆ ತುತ್ತಾಗಿದ್ದ ಟಾಮ್​ ಕರನ್(Tom Curran) ಸಂಪೂರ್ಣ ಚೇತರಿಕೆ ಕಂಡು ಐಪಿಎಲ್​ ಆಡಲು ಆರ್​ಸಿಬಿ ತಂಡ ಸೇರಿದ್ದಾರೆ.

VISTARANEWS.COM


on

Tom Curran
Koo

ಬೆಂಗಳೂರು: ಬಿಗ್ ಬ್ಯಾಷ್ ಲೀಗ್​ನಲ್ಲಿ ಮೊಣಕಾಲಿನ( Knee Injury) ಗಾಯಕ್ಕೆ ತುತ್ತಾಗಿದ್ದ ಟಾಮ್​ ಕರನ್(Tom Curran) ಅವರು ಈ ಬಾರಿಯ ಐಪಿಎಲ್(IPL 2024) ಆಡುವುದು ಅನುಮಾನ ಎನ್ನಲಾಗಿತ್ತು. ಇದರಿಂದ ಆರ್​ಸಿಬಿ(RCB) ತಂಡಕ್ಕೆ ಆತಂಕವೊಂದು ಸೃಷ್ಟಿಯಾಗಿತ್ತು. ಆದರೆ. ಇದೀಗ ಈ ಆತಂಕ ದೂರ ಆಗಿದೆ. ಟಾಮ್​ ಕರನ್ ಅವರು ಫುಲ್​ ಫಿಟ್​ ಆ್ಯಂಡ್​ ಫೈನ್​ ಆಗಿ ತಂಡ ಸೇರಿದ್ದಾರೆ.

ಕಳೆದ ವರ್ಷ ಡಿಸೆಂಬರ್​ನಲ್ಲಿ ದುಬೈನಲ್ಲಿ ನಡೆದಿದ್ದ ಆಟಗಾರರ ಮಿನಿ ಹರಾಜಿನಲ್ಲಿ ಆರ್​ಸಿಬಿ ಫ್ರಾಂಚೈಸಿ ಕರನ್ ಅವರನ್ನು 1.5 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಬಿಗ್ ಬ್ಯಾಷ್ ಲೀಗ್​ನಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿ ಈ ಟೂರ್ನಿಯಿಂದ ಅವರು ಹೊರಬಿದ್ದಿದ್ದರು. ಈ ವೇಳೆ ಅವರು ಐಪಿಎಲ್​ನಿಂದಲೂ ಹೊರಬೀಳಲಿದ್ದಾರೆ ಎಂದು ವರದಿಯಾಗಿತ್ತು. ಅವರು ಆರ್​ಸಿಬಿ ತಂಡ ಸೇರುವ ಮೂಲಕ ಎಲ್ಲ ಅನುಮಾನಗಳಿಗೂ ತೆರೆ ಬಿದ್ದಿದೆ. ಸೋಮವಾರ ತಡರಾತ್ರಿ ಆರ್​ಸಿಬಿ ತಂಡ ಸೇರಿದ್ದಾರೆ. ಅವರನ್ನು ಫ್ರಾಂಚೈಸಿಯು ಕ್ಯಾಪ್​ ನೀಡಿ ಸ್ವಾಗತಿಸಿದ ಫೋಟೊ ವೈರಲ್​ ಆಗಿದೆ.

ಇದನ್ನೂ ಓದಿ Virat Kohli: ಧೋನಿಯ ಹೇರ್‌ಸ್ಟೈಲ್‌ ಕಾಪಿ ಮಾಡಿದ ವಿರಾಟ್​ ಕೊಹ್ಲಿ

ಹರಾಜಿನಲ್ಲಿ ಆರ್​ಸಿಬಿ ಖರೀದಿಸಿದ ಆಟಗಾರರು

ಅಲ್ಜಾರಿ ಜೋಸೆಫ್ (11.5 ಕೋಟಿ), ಯಶ್ ದಯಾಳ್ (5 ಕೋಟಿ), ಟಾಮ್ ಕರ್ರನ್ (1.5 ಕೋಟಿ), ಲಾಕಿ ಫರ್ಗುಸನ್ (2 ಕೋಟಿ), ಸ್ವಪ್ನಿಲ್ ಸಿಂಗ್ (0.2 ಕೋಟಿ), ಸೌರವ್ ಚೌಹಾಣ್ (0.2 ಕೋಟಿ).

ಆರ್​ಸಿಬಿ ತಂಡ


ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್​ವೆಲ್​, ವಿರಾಟ್ ಕೊಹ್ಲಿ, ಕ್ಯಾಮರಾನ್ ಗ್ರೀನ್, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಯಾಂಕ್ ದಾಗರ್, ಮಹಿಪಾಲ್ ಲೊಮ್ರೊರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್.

ಚೆನ್ನೈ ಮೊದಲ ಎದುರಾಳಿ


ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2024) 17ನೇ ಆವೃತ್ತಿ ಆರಂಭವಾಗಲು ಇನ್ನು ಕೇವಲ 3 ದಿನ ಮಾತ್ರ ಬಾಕಿ ಉಳಿದಿದೆ. ಮಾರ್ಚ್ 22ರಂದು ಲೀಗ್​ನ ಸಾಂಪ್ರದಾಯಿಕ ಬದ್ದ ಎದುರಾಳಿಗಳಾದ ಆರ್‌ಸಿಬಿ(Royal Challengers Bangalore) ಮತ್ತು ಸಿಎಸ್‌ಕೆ(rcb vs csk) ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಈ ಪಂದ್ಯಕ್ಕೆ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ. ಪಂದ್ಯವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಉಭಯ ತಂಡಗಳ ಅಭಿಮಾನಿಗಳು ಕಾದು ಕುಳಿತಿದ್ದಾರೆ.

Continue Reading

ಕ್ರೀಡೆ

Virat Kohli: ಧೋನಿಯ ಹೇರ್‌ಸ್ಟೈಲ್‌ ಕಾಪಿ ಮಾಡಿದ ವಿರಾಟ್​ ಕೊಹ್ಲಿ

17ನೇ ಆವೃತ್ತಿಯ ಐಪಿಎಲ್(IPL 2024)​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ನೂತನ ಹೇರ್​ ಸ್ಟೈಲ್​ ಮೂಲಕ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ

VISTARANEWS.COM


on

Virat Kohli's new look
Koo

ಬೆಂಗಳೂರು: ಪ್ರತಿ ಬಾರಿಯ ಐಪಿಎಲ್(IPL 2024)​ ಟೂರ್ನಿಯಲ್ಲಿ ಆಟಗಾರರು ಒಂದಲ್ಲ ಒಂದು ವಿಭಿನ್ನ ಶೈಲಿಯ ಗಡ್ಡ, ಹೇರ್​ ಸ್ಟೈಲ್​ಗಳನ್ನು ಮಾಡಿ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ 17ನೇ ಆವೃತ್ತಿಯಲ್ಲಿ ವಿರಾಟ್​ ಕೊಹ್ಲಿ ಕೂಡ ನೂತನ ಹೇರ್​ ಸ್ಟೈಲ್​ ಮೂಲಕ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಕೊಹ್ಲಿಯ ಹೊಸ ಲುಕ್​ಗೆ(Virat Kohli’s new look) ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ, ನೆಟ್ಟಿಗರು ಮಾತ್ರ ಕೊಹ್ಲಿಯ ಕಾಲೆಳೆದಿದ್ದಾರೆ. ಇದು ಧೋನಿ(ms dhoni hairstyle) ಹಾಗೂ ಇಶಾನ್​ ಕಿಶನ್​ ಅವರ ಕಾಪಿ ಎಂದು ಕಮೆಂಟ್​ ಮಾಡಿದ್ದಾರೆ.

ಧೋನಿ ಶೈಲಿ ಅನುಕರಣೆ ಮಾಡಿದ್ದ ಇಶಾನ್‌


ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್‌ ಧೋನಿ ಅವರು ಇದೇ ರೀತಿಯ ಶೈಲಿಯಲ್ಲಿ ಹೇರ್‌ಸ್ಟೈಲ್‌ ಮಾಡಿದ್ದರು. ಧೋನಿ ಅವರ ಶೈಲಿ ಕೊಂಚ ಸಿಂಪಲ್‌ ಆಗಿತ್ತು. ಇದೇ ರೀತಿಯಲ್ಲಿ ಕಳೆದ ವರ್ಷ ಇಶಾನ್‌ ಕಿಶನ್​ ಕೂಡ ಹೇರ್‌ಸ್ಟೈಲ್‌ ಮಾಡಿದ್ದರು. ಇಶಾನ್ದ ಅವರ ಈ ಹೊಸ ಲುಕ್​ ಕಂಡು ಸೂರ್ಯಕುಮಾರ್‌ ಯಾದವ್‌ ಅವರ ಪತ್ನಿ ದೇವಿಶಾ ಶೆಟ್ಟಿ ಇದು ಮುಳ್ಳು ಹಂದಿ ತರ ಕಾಣುತ್ತಿದೆ ಎಂದು ಕಮೆಂಟ್‌ ಮಾಡಿದ್ದರು. ಇದೀಗ ಕೊಹ್ಲಿಯ ಲುಕ್​​ ಕೂಡ ಧೋನಿ ಮತ್ತು ಇಶಾನ್ ಅವರ ಹೇರ್‌ಸ್ಟೈಲ್​ ನಂತೆ ಕಾಣಿಸಿದೆ. ಹಲವು ನೆಟ್ಟಿಗರು ಕಮೆಂಟ್‌ ಮಾಡಿದ್ದು ಇದು ಧೋನಿಯಿಂದ ಪಡೆದ ಪ್ರೇರಣೆಯಾಗಿದೆ ಎಂದಿದ್ದಾರೆ. ಧೋನಿ ಈ ಬಾರಿ ರೆಟ್ರೊ ಶೈಲಿಯ ಉದ್ದನೆಯ ಕೂದಲಿನ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಸಂದರ್ಭದಲ್ಲಿ ಇದೇ ಶೈಲಿಯಲ್ಲಿ ಕಾಣಿಸಿಕೊಳಡಿದ್ದರು.

ಇದನ್ನೂ ಓದಿ IPL 2024: ರೋಹಿತ್ ಬ್ಯಾಟಿಂಗ್​​ ಅಭ್ಯಾಸದ ವಿಡಿಯೊ ಹಂಚಿಕೊಂಡ ಮುಂಬೈ ಇಂಡಿಯನ್ಸ್

ಮಾರ್ಚ್ 22ರಂದು ಲೀಗ್​ನ ಸಾಂಪ್ರದಾಯಿಕ ಬದ್ದ ಎದುರಾಳಿಗಳಾದ ಆರ್‌ಸಿಬಿ(Royal Challengers Bangalore) ಮತ್ತು ಸಿಎಸ್‌ಕೆ(rcb vs csk) ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಈ ಪಂದ್ಯಕ್ಕೆ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ. ಪಂದ್ಯವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಉಭಯ ತಂಡಗಳ ಅಭಿಮಾನಿಗಳು ದುಬಾರಿ ಬೆಲೆ ನೀಡಿ ಟಿಕೆಟ್​ ಖರೀದಿಸಿದ್ದಾರೆ. 

ವಿರಾಟ್‌ ಕೊಹ್ಲಿ ಸೋಮವಾರ ಬೆಂಗಳೂರಿನಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡು ಅಭ್ಯಾಸ ಆರಂಭಿಸಿದ್ದಾರೆ. ಅಕಾಯ್‌ ಜನನವಾದ ಬಳಿಕ ಭಾನುವಾರವಷ್ಟೇ ಕೊಹ್ಲಿ ಭಾರತಕ್ಕೆ ಮರಳಿದ್ದರು. ವಿರಾಟ್‌ ಕೊಹ್ಲಿ ಕಳೆದ ಐಪಿಎಲ್‌ನಲ್ಲಿ 2 ಶತಕ ಸೇರಿದಂತೆ 639 ರನ್‌ ಪೇರಿಸಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು. ಈ ಬಾರಿಯೂ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ. ವಿರಾಟ್ ಕೊಹ್ಲಿ ಇದುವರೆಗೆ 237 ಐಪಿಎಲ್ ಮ್ಯಾಚ್​ಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 7 ಶತಕ ಹಾಗೂ 50 ಅರ್ಧಶತಕಗಳೊಂದಿಗೆ ಒಟ್ಟು 7263 ರನ್ ಕಲೆಹಾಕಿದ್ದಾರೆ.

ಆರ್​ಸಿಬಿ ತಂಡ


ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್​ವೆಲ್​, ವಿರಾಟ್ ಕೊಹ್ಲಿ, ಕ್ಯಾಮರಾನ್ ಗ್ರೀನ್, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಯಾಂಕ್ ದಾಗರ್, ಮಹಿಪಾಲ್ ಲೊಮ್ರೊರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್.

Continue Reading

ಕ್ರೀಡೆ

Imad Wasim: ಡ್ರೆಸ್ಸಿಂಗ್‌ ರೂಮ್​ನಲ್ಲೇ ರಾಜಾರೋಷವಾಗಿ ಸಿಗರೇಟ್‌ ಸೇದಿದ ಪಾಕ್​ ಆಟಗಾರ

ಇಮಾದ್ ವಾಸಿಂ(Imad Wasim) ಅವರು ಡ್ರೆಸ್ಸಿಂಗ್‌ ರೂಮ್‌ ನಲ್ಲಿ ಸಿಗರೇಟ್‌ ಸೇದುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅವರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

VISTARANEWS.COM


on

viral video
Koo

ಕರಾಚಿ: ಪಾಕಿಸ್ತಾನ್ ಸೂಪರ್ ಲೀಗ್ (PSL) ಫೈನಲ್(PSL Final)​ ಪಂದ್ಯದ ವೇಳೆ ಇಮಾದ್ ವಾಸಿಂ(Imad Wasim) ಅವರು ಡ್ರೆಸ್ಸಿಂಗ್‌ ರೂಮ್‌ ನಲ್ಲಿ ಸಿಗರೇಟ್‌ ಸೇದುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅವರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼಪಾಕಿಸ್ತಾನ್‌ ಸ್ಮೋಕಿಂಗ್‌ ಲೀಗ್‌ʼ(Pakistan Smoking League) ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

ಇಸ್ಲಾಮಾಬಾದ್ ಯುನೈಟೆಡ್ ತಂಡದ ಆಲ್​ರೌಂಡರ್​ ಆಟಗಾರನಾಗಿರುವ ಇಮಾದ್ ವಾಸಿಂ ಅವರು ಫೈನಲ್​ ಪಂದ್ಯದಲ್ಲಿ 4 ಓವರ್​ ಎಸೆದು ಕೇವಲ 23 ರನ್​ ವೆಚ್ಚದಲ್ಲಿ 5 ವಿಕೆಟ್​ ಕಿತ್ತು ತಂಡ ಚಾಂಪಿಯನ್​ ಆಗುವಲ್ಲಿ ಪ್ರಮುಖ ಪಾತ್ರಬಹಿಸಿದ್ದರು. ಗೆಲುವಿನ ಹೀರೊ ಎನಿಸಿದ್ದ ಅವರು ಈ ಒಂದು ಘಟನೆಯಿಂದ ನೆಟ್ಟಗರ ಪಾಲಿಗೆ ವಿಲನ್ ಆಗಿದ್ದಾರೆ. ಡ್ರೆಸಿಂಗ್​ ರೂಮ್​ನಲ್ಲಿ ರಾಜಾರೋಷವಾಗಿ ಸಿಗರೇಟ್​ ಸೇದಿರುವ ಬಗ್ಗೆ ಪಾಕ್​ ತಂಡದ ಹಲವು ಹಾಲಿ ಮತ್ತು ಮಾಜಿ ಆಟಗಾರರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ IPL 2024: ರೋಹಿತ್ ಬ್ಯಾಟಿಂಗ್​​ ಅಭ್ಯಾಸದ ವಿಡಿಯೊ ಹಂಚಿಕೊಂಡ ಮುಂಬೈ ಇಂಡಿಯನ್ಸ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಮೊಹಮ್ಮದ್​ ರಿಜ್ವಾನ್‌ ಸಾರಥ್ಯದ ಮುಲ್ತಾನ್ ಸುಲ್ತಾನ್‌ 9 ವಿಕೆಟ್‌ ವಿಕೆಟ್​​ಗೆ 159 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಇಸ್ಲಾಮಾಬಾದ್ ಯುನೈಟೆಡ್ 8 ವಿಕೆಟ್​ಗೆ 163 ರನ್​ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಆದರೆ ಈ ಗೆಲುವಿಗಾಗಿ ಅಂತಿಮ ಎಸೆತದ ವರೆಗೂ ಹೋರಾಟ ನಡೆಸಿತು. ತಂಡದ ಪರ ಮಾರ್ಟಿನ್ ಗಪ್ಟಿಲ್(50) ಅರ್ಧಶತಕ ಬಾರಿಸಿ ಮಿಂಚಿದರು. ಅಜಂ ಖಾನ್(30) ಬಾರಿಸಿದರು. ಇಮಾದ್ ವಾಸಿಂ ಅಜೇಯ 19 ರನ್​ ಹೊಡೆದರು.

ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲೂ ನಡೆದಿತ್ತು


ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ಅಫಫ್ಘಾನಿಸ್ತಾನ ತಂಡದ ವಿಕೆಟ್ ಕೀಪರ್ ಬ್ಯಾಟರ್​ ಮೊಹಮ್ಮದ್ ಶಹಜಾದ್​ ಮೈದಾನದಲ್ಲಿ ಸಿಗರೇಟ್​ ಸೇದಿ ಶಿಕ್ಷೆಗೂ ಗುರಿಯಾಗಿದ್ದರು. ಜತೆಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಿಂದಲೂ ಛೀಮಾರಿಗೊಳಗಾಗಿದ್ದರು.


ಮಳೆಯ ಕಾರಣ ಪಂದ್ಯ ಆರಂಭ ತಡವಾಗಿತ್ತು. ಈ ವೇಳೆ ಮೈದಾನದಕ್ಕೆ ಇತರೆ ಆಟಗಾರರ ಜತೆ ಆಗಮಿಸಿದ್ದ ಶಹಜಾದ್​​ ಸಿಗರೇಟ್​ ಸೇದಿದ್ದರು. ಈ ಫೋಟೋ ಹಲವು ಸಾಮಾಜಿಕ ಜಾಲಾತಾಣದಲ್ಲಿ ಚರ್ಚೆಯಾಗಿತ್ತು. ಮೈದಾನದಲ್ಲಿ ಧೂಮಪಾನ ಮಾಡುವ ಮೂಲಕ ಬಿಸಿಬಿ ನೀತಿ ಸಂಹಿತೆ ಆರ್ಟಿಕಲ್​ 2.20 ಅನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿತ್ತು. ಶಹಜಾದ್​ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. ಅವರ ಈ ವರ್ತನೆಗೆ ಒಂದು ಡಿಮೆರಿಟ್​ ಅಂಕವನ್ನು ಸೇರಿಸಲಾಗಿತ್ತು.

Continue Reading
Advertisement
MP Tejaswi surya participate at Nagarthapet protest and KPCC Legal Cell complaint against him
ಬೆಂಗಳೂರು13 mins ago

Hanuman Chalisa: ನಗರ್ತಪೇಟೆ ಹಲ್ಲೆ ಕೇಸ್‌; ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್‌ ದೂರು!

IND vs PAK
ಕ್ರೀಡೆ16 mins ago

Champions Trophy: ಪಾಕಿಸ್ತಾನದಲ್ಲೇ ಚಾಂಪಿಯನ್ಸ್​ ಟ್ರೋಫಿ; ಪಿಸಿಬಿ ಅಧ್ಯಕ್ಷ ನಖ್ವಿ ವಿಶ್ವಾಸ

Hanuman Chalisa Warning
ಪ್ರಮುಖ ಸುದ್ದಿ19 mins ago

Hanuman Chalisa : ಇವತ್ತು ಜೈಲ್, ನಾಳೆ ಬೇಲ್, ಮತ್ತೆ ಅದೇ ಖೇಲ್‌; ನಗರ್ತ ಪೇಟೆ ಕಿರಾತಕರ ಸ್ಟೇಟಸ್‌

Hanuman Chalisa Prakash Raj reacted to the attack on a Hindu youth in Nagarthapet
ಬೆಂಗಳೂರು20 mins ago

Hanuman Chalisa: ನಗರ್ತಪೇಟೆಯಲ್ಲಿ ಹಿಂದೂ ಯುವಕನ ಮೇಲಿನ ಹಲ್ಲೆಗೆ ಪ್ರಕಾಶ್ ರೈ ಪ್ರತಿಕ್ರಿಯೆ ಹೀಗಿದೆ!

cp radhakrishnan
ಪ್ರಮುಖ ಸುದ್ದಿ24 mins ago

Governor: ಸಿ.ಪಿ ರಾಧಾಕೃಷ್ಣನ್‌ಗೆ ತೆಲಂಗಾಣ ರಾಜ್ಯಪಾಲ ಹುದ್ದೆ ಉಸ್ತುವಾರಿ

Self Harming fire
ಚಿತ್ರದುರ್ಗ1 hour ago

Self Harming : ಇಬ್ಬರು ಮಕ್ಕಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ತಾನೂ ಆಹುತಿಯಾದ ತಾಯಿ

BY Vijayendra meets HD Kumaraswamy
Lok Sabha Election 20241 hour ago

Lok Sabha Election 2024: ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರ; ಮೋದಿ ಪ್ರವಾಸದ ಬಗ್ಗೆ ಬಿ.ವೈ. ವಿಜಯೇಂದ್ರ ಹೇಳಿದ್ದೇನು?

Acid Attack Anekal coupleAcid Attack Anekal couple
ಬೆಂಗಳೂರು2 hours ago

Acid Attack : ಕೌಟುಂಬಿಕ ಕಲಹ; ಹೆಂಡತಿ ಮೇಲೆ ಆಸಿಡ್‌ ದಾಳಿ ನಡೆಸಿದ ಧೂರ್ತ ಗಂಡ

nitin gadkari ashiwini vaishnav
ಪ್ರಮುಖ ಸುದ್ದಿ2 hours ago

Lok Sabha Election 2024: ಮೋದಿ ಮತ್ತೆ ಪ್ರಧಾನಿ, ಎನ್‌ಡಿಗೆ 400: ನಿತಿನ್‌ ಗಡ್ಕರಿ; 2026ರಲ್ಲಿ ಬುಲೆಟ್‌ ಟ್ರೇನ್:‌ ಅಶ್ವಿನಿ ವೈಷ್ಣವ್

Tom Curran
ಕ್ರೀಡೆ2 hours ago

IPL 2024: ಎಲ್ಲ ಅನುಮಾನಗಳಿಗೂ ತೆರೆ; ಆರ್​ಸಿಬಿ ಸೇರಿದ ಇಂಗ್ಲೆಂಡ್​ ಆಲ್​ರೌಂಡರ್​

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Nagarthpet protest by BJP
ಬೆಂಗಳೂರು3 hours ago

Hanuman Chalisa: ನಗರ್ತಪೇಟೆ ಉದ್ವಿಗ್ನ; ಜೈಶ್ರೀರಾಮ್‌ ಕೂಗಿದ ಹಿಂದು ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಪೊಲೀಸ್‌ ವಶಕ್ಕೆ

dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು21 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ1 day ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ3 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ4 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ5 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

ಟ್ರೆಂಡಿಂಗ್‌