ನಾಗ್ಪುರ : ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ೨೦ ಪಂದ್ಯಗಳ ಸರಣಿಯ ಎರಡನೇ ಪಂದ್ಯದ ಟಾಸ್ ಸಮಯ ಮಳೆಯಿಂದಾಗಿ ವಿಳಂಬಗೊಂಡಿದೆ. ನಾಗ್ಪುರದಲ್ಲಿ ಸತತವಾಗಿ ಮಳೆ ಬರುತ್ತಿರುವ ಕಾರಣ ಪಿಚ್ ತೇವಗೊಂಡಿದೆ. ಹೀಗಾಗಿ ತಡವಾಗಿ ಪಂದ್ಯ ಆರಂಭಿಸಲು ನಿರ್ಧರಿಸಲಾಗಿದೆ. ಅಂಪೈರ್‌ಗಳು ಮೈದಾನದ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ರೋಹಿತ್ ಶರ್ಮ ಬಳಗ ಸರಣಿಯಲ್ಲಿ ೦-೧ ಹಿನ್ನಡೆಗೆ ಒಳಗಾಗಿರುವ ಕಾರಣ, ಸರಣಿ ಗೆಲುವಿನ ಭರವಸೆ ಉಳಿಸಿಕೊಳ್ಳಬೇಕಾರೆ ಈ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕು.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಇಲ್ಲಿ ಒಟ್ಟಾರೆ ೧೨ ಪಂದ್ಯಗಳು ನಡೆದಿದೆ. ೨೦೧೯ರಲ್ಲಿ ಬಾಂಗ್ಲಾದೇಶ ಹಾಗೂ ಭಾರತ ನಡುವೆ ಕೊನೇ ಟಿ೨೦ ಪಂದ್ಯ ನಡೆದಿತ್ತು. ಒಟ್ಟಾರೆ ನಡೆದಿರುವ ೧೨ ಪಂದ್ಯಗಳಲ್ಲಿ ಮೊದಲ ಬ್ಯಾಟ್ ಮಾಡಿರುವ ತಂಡ ೯ ಬಾರಿ ಜಯ ಸಾಧಿಸಿದೆ.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಯಜ್ವೇಂದ್ರ ಚಹಲ್, ಉಮೇಶ್ ಯಾದವ್.
ಆಸ್ಟ್ರೇಲಿಯಾ : ಆರೋನ್ ಫಿಂಚ್, ಕೆಮೆರಾನ್ ಗ್ರೀನ್, ಸ್ಟ್ರೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ನಥಾನ್ ಎಲ್ಲಿಸ್, ಆಡಂ ಜಂಪಾ, ಜೋಶ್ ಹೇಜಲ್‌ವುಡ್.
ಇದನ್ನೂ ಓದಿ