IND vs AUS | ಮಳೆಯಿಂದ ತೇವಗೊಂಡ ಪಿಚ್; ಎರಡನೇ ಏಕ ದಿನ ಪಂದ್ಯದ ಟಾಸ್‌ ಸಮಯ ಮುಂದೂಡಿಕೆ - Vistara News

ಕ್ರಿಕೆಟ್

IND vs AUS | ಮಳೆಯಿಂದ ತೇವಗೊಂಡ ಪಿಚ್; ಎರಡನೇ ಏಕ ದಿನ ಪಂದ್ಯದ ಟಾಸ್‌ ಸಮಯ ಮುಂದೂಡಿಕೆ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ ಟಾಸ್‌ ಮುಂದೂಡಿಕೆಯಾಗಿದೆ.

VISTARANEWS.COM


on

ind vs aus
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾಗ್ಪುರ : ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ೨೦ ಪಂದ್ಯಗಳ ಸರಣಿಯ ಎರಡನೇ ಪಂದ್ಯದ ಟಾಸ್ ಸಮಯ ಮಳೆಯಿಂದಾಗಿ ವಿಳಂಬಗೊಂಡಿದೆ. ನಾಗ್ಪುರದಲ್ಲಿ ಸತತವಾಗಿ ಮಳೆ ಬರುತ್ತಿರುವ ಕಾರಣ ಪಿಚ್‌ ತೇವಗೊಂಡಿದೆ. ಹೀಗಾಗಿ ತಡವಾಗಿ ಪಂದ್ಯ ಆರಂಭಿಸಲು ನಿರ್ಧರಿಸಲಾಗಿದೆ. ಅಂಪೈರ್‌ಗಳು ಮೈದಾನದ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ರೋಹಿತ್‌ ಶರ್ಮ ಬಳಗ ಸರಣಿಯಲ್ಲಿ ೦-೧ ಹಿನ್ನಡೆಗೆ ಒಳಗಾಗಿರುವ ಕಾರಣ, ಸರಣಿ ಗೆಲುವಿನ ಭರವಸೆ ಉಳಿಸಿಕೊಳ್ಳಬೇಕಾರೆ ಈ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕು.

ನಾಗ್ಪುರದ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಇಲ್ಲಿ ಒಟ್ಟಾರೆ ೧೨ ಪಂದ್ಯಗಳು ನಡೆದಿದೆ. ೨೦೧೯ರಲ್ಲಿ ಬಾಂಗ್ಲಾದೇಶ ಹಾಗೂ ಭಾರತ ನಡುವೆ ಕೊನೇ ಟಿ೨೦ ಪಂದ್ಯ ನಡೆದಿತ್ತು. ಒಟ್ಟಾರೆ ನಡೆದಿರುವ ೧೨ ಪಂದ್ಯಗಳಲ್ಲಿ ಮೊದಲ ಬ್ಯಾಟ್‌ ಮಾಡಿರುವ ತಂಡ ೯ ಬಾರಿ ಜಯ ಸಾಧಿಸಿದೆ.

ಸಂಭಾವ್ಯ ತಂಡಗಳು

ಭಾರತ:  ರೋಹಿತ್ ಶರ್ಮ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಯಜ್ವೇಂದ್ರ ಚಹಲ್‌, ಉಮೇಶ್‌ ಯಾದವ್‌.

ಆಸ್ಟ್ರೇಲಿಯಾ : ಆರೋನ್ ಫಿಂಚ್, ಕೆಮೆರಾನ್‌ ಗ್ರೀನ್‌, ಸ್ಟ್ರೀವ್ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಜೋಶ್‌ ಇಂಗ್ಲಿಸ್‌, ಟಿಮ್‌ ಡೇವಿಡ್‌, ಮ್ಯಾಥ್ಯೂ ವೇಡ್‌, ಪ್ಯಾಟ್‌ ಕಮಿನ್ಸ್, ನಥಾನ್‌ ಎಲ್ಲಿಸ್‌, ಆಡಂ ಜಂಪಾ, ಜೋಶ್‌ ಹೇಜಲ್‌ವುಡ್‌.

ಇದನ್ನೂ ಓದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

MS Dhoni : ಮಹೇಂದ್ರ ಸಿಂಗ್​ ಧೋನಿಗೆ ಗಾಯ, ಆಂತರಿಕ ಮಾಹಿತಿ ಬಹಿರಂಗ

MS Dhoni: ‘ಯೆಲ್ಲೊ ಆರ್ಮಿ’ ಗೆ ಪೂರಕವಾಗಿರದ ವಿಷಯವೆಂದರೆ ಗಾಯದ ಸಮಸ್ಯೆಗಳು. ಋತುರಾಜ್​ ನೇತೃತ್ವದ ಶಿಬಿರವು ಈ ಋತುವಿನಲ್ಲಿ ಗಾಯಗಳ ಸರಮಾಲೆಯನ್ನು ಎದುರಿಸುತ್ತಿದೆ. ಪಂದ್ಯಾವಳಿಯ ಆರಂಭಿಕ ಹಂತದಲ್ಲಿ, ಅವರು ಗಾಯಗೊಂಡ ಡೆವೊನ್ ಕಾನ್ವೇ ಅವರನ್ನು ಕಳೆದುಕೊಂಡಿದ್ದರು. ನಂತರ ದೀಪಕ್ ಚಾಹರ್, ಮಥೀಶಾ ಪತಿರಾನಾ ಅವರ ಸೇವೆಯಿಂದ ವಂಚಿತವಾಯಿತು.

VISTARANEWS.COM


on

MS Dhoni
Koo

ಚೆನ್ನೈ: ಹೊಸ ನಾಯಕ ಋತುರಾಜ್ ಗಾಯಕ್ವಾಡ್ ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪ್ರಶಂಸನೀಯ ಅಭಿಯಾನ ನಡೆಸುತ್ತಿದೆ. ತಂಡವು ಹನ್ನೊಂದು ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದಿದೆ ಮತ್ತು 12 ಅಂಕಗಳೊಂದಿಗೆ ಪ್ರಸ್ತುತ ಪಾಯಿಂಟ್ಸ್ ಟೇಬಲ್​ನಲ್ಲಿ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇಆಫ್​ಗೆ ಪ್ರವೇಶ ಪಡೆಯುವ ಎಲ್ಲ ಅವಕಾಶಗಳನ್ನು ಹೊಂದಿದೆ. ಆದರೆ, ಧೋನಿಗೂ (MS Dhoni) ಗಾಯವಾಗಿದೆ ಎಂಬ ವಿಚಾರ ಆ ಬಳಗವನ್ನು ಆತಂಕ್ಕೆ ತಳ್ಳಿದೆ.

‘ಯೆಲ್ಲೊ ಆರ್ಮಿ’ ಗೆ ಪೂರಕವಾಗಿರದ ವಿಷಯವೆಂದರೆ ಗಾಯದ ಸಮಸ್ಯೆಗಳು. ಋತುರಾಜ್​ ನೇತೃತ್ವದ ಶಿಬಿರವು ಈ ಋತುವಿನಲ್ಲಿ ಗಾಯಗಳ ಸರಮಾಲೆಯನ್ನು ಎದುರಿಸುತ್ತಿದೆ. ಪಂದ್ಯಾವಳಿಯ ಆರಂಭಿಕ ಹಂತದಲ್ಲಿ, ಅವರು ಗಾಯಗೊಂಡ ಡೆವೊನ್ ಕಾನ್ವೇ ಅವರನ್ನು ಕಳೆದುಕೊಂಡಿದ್ದರು. ನಂತರ ದೀಪಕ್ ಚಾಹರ್, ಮಥೀಶಾ ಪತಿರಾನಾ ಅವರ ಸೇವೆಯಿಂದ ವಂಚಿತವಾಯಿತು. ಬಳಿಕ ಮುಸ್ತಾಫಿಜುರ್ ರಹಮಾನ್ ಪಂದ್ಯಾವಳಿಯ ಎರಡನೇ ಹಂತದಲ್ಲಿ ಗಾಯದಿಂದಾಗಿ ಐಪಿಎಲ್ 2024 ರಿಂದ ಹೊರಗುಳಿದಿದ್ದರು. ನಂತರ ತಂಡಕ್ಕೆ ಪ್ರವೇಶ ಪಡೆದರೂ ರಾಷ್ಟ್ರೀಯ ಬದ್ಧತೆಗಾಗಿ ತವರಿಗೆ ಮರಳಿದ್ದರು.

ಮಹತ್ವದ ಬೆಳವಣಿಗೆಯೊಂದರಲ್ಲಿ, ಎಂಎಸ್ ಧೋನಿ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಸಮಯದಲ್ಲಿ ಸ್ವಲ್ಪ ಸಮಯದವರೆಗೆ ಗಾಯವನ್ನು ಎದುರಿಸಿದರು. ಆದರೆ ಲೆಜೆಂಡರಿ ಕ್ರಿಕೆಟಿಗ ಆಟವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ ಮತ್ತು ವಿರಾಮ ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

ಧೋನಿಗೆ ಆಗಿರುವ ಗಾಯದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ವೈದ್ಯರು ಧೋನಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂಬುದಾಗಿ ಹೇಳಲಾಗಿದೆ. ಸಿಎಸ್​ಕೆ ಮಾಜಿ ನಾಯಕನಿಗೆ ಐಪಿಎಲ್​​ನಿಂದ ವಿರಾಮ ತೆಗೆದುಕೊಳ್ಳಲು ಬಯಸಿಲ್ಲ. , ಬದಲಿಗೆ, ಪಂದ್ಯಾವಳಿಯ ಉಳಿದ ಭಾಗಕ್ಕೆ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಅವರು ಔಷಧಗಳ ಮೂಲಕ ನೋವಿನಿಂದ ಮುಕ್ತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಆಟಕ್ಕೆ ಬದ್ಧತೆ

ಎಂಎಸ್ ಧೋನಿ ಗಾಯವನ್ನು ಎದುರಿಸುವ ಬದಲು ತಮ್ಮ ಆಟ ಮುಂದುವರಿಸಲು ಬಯಸುತ್ತಾರೆ ಎಂದು
ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಸಿಎಸ್​ಕೆ ಮಾಜಿ ನಾಯಕ ಈ ಪ್ರಸ್ತುತ ಐಪಿಎಲ್ ಋತುವಿನಲ್ಲಿ ಈ ಗಾಯವನ್ನು ಎದುರಿಸಿದ್ದಾರೆ. ಆದರೆ ದಂತಕಥೆ ನೋವಿನ ನಡುವೆಯೂ ಆಡಲು ಹಠಮಾರಿ ಮತ್ತು ದೃಢನಿಶ್ಚಯ ತೆಗೆದುಕೊಂಡಿರುವುದು ಅಚ್ಚರಿ.

ಇದನ್ನೂ ಓದಿ: ICC Ban : ಮ್ಯಾಚ್​ ಫಿಕಿ ವೆಸ್ಟ್ ಇಂಡೀಸ್​ ಆಟಗಾರನಿಗೆ ಐದು ವರ್ಷ ಬ್ಯಾನ್​

ಐಪಿಎಲ್ ಪ್ರಾರಂಭವಾದಾಗಿನಿಂದ ಎಂಎಸ್ ಧೋನಿ ಚರ್ಚೆಯ ವಿಷಯವಾಗಿದ್ದಾರೆ. ಈ ಆಟಗಾರ ಕೆಲವೊಂದು ಬಾರಿ ಗಮನಾರ್ಹ ಫಾರ್ಮ್​ ತೋರಿದ್ದಾರೆ. ಆದರೆ ತೀರಾ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಿದ್ದಾರೆ. ಇತ್ತೀಚೆಗೆ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಧೋನಿ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು.

ಈ ಕ್ರಮವನ್ನು ಭಾರತದ ಮಾಜಿ ಕ್ರಿಕೆಟಿಗರು ತೀವ್ರವಾಗಿ ಟೀಕಿಸಿದರು. ಎಂಎಸ್ ಧೋನಿ ಅವರ ಬ್ಯಾಟಿಂಗ್ ಕ್ರಮಾಂಕವು ಸಿಎಸ್​ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿಲ್ಲ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ. ಹರ್ಭಜನ್ ಸಿಂಗ್ ಸಿಎಸ್​ಕೆ ಹೆಚ್ಚುವರಿ ಬ್ಯಾಟರ್​​ ಮೂಲಕ ಆಡಬಹುದು ಎಂದು ಸಲಹೆ ನೀಡಿದೆ.

ಧೋನಿಯು ಅನುಭವಿಸುತ್ತಿರುವ ಗಾಯದ ಬಗ್ಗೆ ನಿಜವಾದ ವಿಚಾರ ಯಾರಿಗೂ ತಿಳಿದಿರಲಿಲ್ಲ. ಸಿಎಸ್ಕೆ ಮಾಜಿ ನಾಯಕ 11 ಪಂದ್ಯಗಳಲ್ಲಿ 224.49 ಸ್ಟ್ರೈಕ್ ರೇಟ್ನೊಂದಿಗೆ 110 ರನ್ ಗಳಿಸಿದ್ದಾರೆ.

Continue Reading

ಕ್ರೀಡೆ

Viral News: ದೆಹಲಿ To ಗೋವಾ ವಿಮಾನ ಟಿಕೆಟ್​​ ಬೆಲೆಗಿಂತ ದುಬಾರಿ ಟೀಮ್​ ಇಂಡಿಯಾದ ಟಿ20 ವಿಶ್ವಕಪ್​ ಜೆರ್ಸಿ

Viral News: ದೆಹಲಿಯಿಂದ ಗೋವಾಕ್ಕೆ ಇರುವ ವಿಮಾನ ಪ್ರಯಾಣದ ದರ 5,134 ರೂ. ಆದರೆ, ಟೀಮ್​ ಇಂಡಿಯಾದ ಆಟಗಾರರ ಹೊಸ ಜೆರ್ಸಿಯ ಬೆಲೆ 5,999 ರೂ. ಇದೆ. ಇದೀಗ ಜೆರ್ಸಿ ಮತ್ತು ವಿಮಾನ ಟಿಕೆಟ್​ ದರದ ಫೋಟೊಗಳನ್ನು ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿ ಅಚ್ಚರಿ ಪಟ್ಟಿದ್ದಾರೆ.

VISTARANEWS.COM


on

viral news
Koo

ಮುಂಬಯಿ: ಟಿ20 ವಿಶ್ವಕಪ್(T20 World Cup 2024)​ ಟೂರ್ನಿಗೆ ಟೀಮ್​ ಇಂಡಿಯಾದ ಹೊಸ ಜೆರ್ಸಿ(India’s Jersey T20 World Cup) ಪ್ರಕಟಗೊಂಡಿದೆ. ಸೋಮವಾರ ಭಾರತ ತಂಡದ ಕಿಟ್​ ಪ್ರಯೋಜಕತ್ವ ಪಡೆದಿರುವ ಕ್ರೀಡಾ ಉಡುಪುಗಳ ಅಡಿಡಾಸ್​ ಕಂಪೆನಿ, ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಡಾಂಗಣದಲ್ಲಿ ಹೆಲಿಕಾಪ್ಟರ್ ಮೂಲಕ ದೈತ್ಯ ಗಾತ್ರದ ಹೊಸ ಜೆರ್ಸಿಯನ್ನು ಅನಾವರಣ ಮಾಡಿತ್ತು. ರೋಹಿತ್​ ಶರ್ಮ, ರವೀಂದ್ರ ಜಡೇಜಾ ಮತ್ತು ಕುಲ್​ದೀಪ್​ ಯಾದವ್​ ಒಳಗೊಂಡ ವಿಶೇಷ ವಿಡಿಯೊ ಇದಾಗಿತ್ತು. ಇದೀಗ ಆಟಗಾರರ ಜೆರ್ಸಿ ಬೆಲೆ ದೆಹಲಿಯಿಂದ ಗೋವಾಕ್ಕೆ ಪ್ರಯಾಣಿಸುವ ವಿಮಾನದ ಟಿಕೆಟ್​ ಬೆಲೆಗಿಂತಲೂ ಅಧಿಕವಾಗಿದೆ.(Viral News)

ಹೌದು, ದೆಹಲಿಯಿಂದ ಗೋವಾಕ್ಕೆ ಇರುವ ವಿಮಾನ ಪ್ರಯಾಣದ ದರ 5,134 ರೂ. ಆದರೆ, ಟೀಮ್​ ಇಂಡಿಯಾದ ಆಟಗಾರರ ಹೊಸ ಜೆರ್ಸಿಯ ಬೆಲೆ 5,999 ರೂ. ಇದೆ. ಇದೀಗ ಜೆರ್ಸಿ ಮತ್ತು ವಿಮಾನ ಟಿಕೆಟ್​ ದರದ ಫೋಟೊಗಳನ್ನು ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿ ಅಚ್ಚರಿ ಪಟ್ಟಿದ್ದಾರೆ.

ದೆಹಲಿಯಿಂದ ಗೋವಾಕ್ಕೆ ಇರುವ ವಿಮಾನ ದರದ ಫೋಟೊ

ನೀಲಿ ಮತ್ತು ಕಿತ್ತಳೆ ಬಣ್ಣ ಮಿಶ್ರಿತ ಜೆರ್ಸಿಯಲ್ಲಿ ಅಂಗಿಯ ಭುಜಗಳು ಕಿತ್ತಳೆ ಬಣ್ಣದಲ್ಲಿದ್ದು, ಮೂರು ಬಿಳಿ ಬಣ್ಣದ ಪಟ್ಟಿಯನ್ನು ಹೊಂದಿದೆ. ಉಳಿದ ಭಾಗವು ನೀಲಿ ಬಣ್ಣದ್ದಾಗಿದೆ. ಶರ್ಟ್​ನ ಕಾಲರ್​ ಸುತ್ತಲೂ ತ್ರಿವರ್ಣದ ಪಟ್ಟಿ ಹೊಂದಿದೆ.

ಜೆರ್ಸಿ ಕಂಡು ಟ್ರೋಲ್​ ಮಾಡಿದ ನೆಟ್ಟಿಗರು

ಹೊಸ ಜೆರ್ಸಿಯಲ್ಲಿ ರೋಹಿತ್​ ಶರ್ಮ, ವಿರಾಟ್ ಕೊಹ್ಲಿ, ಸೂರ್ಯಕುಮಾರ್​ ಯಾದವ್​, ಉಪನಾಯಕ ಹಾರ್ದಿಕ್​ ಪಾಂಡ್ಯ ಅವರ ಎಡಿಟೆಡ್​ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಫೊಟೊ ಕಂಡ ಕೆಲ ನೆಟ್ಟಿಗರು ಇದು ಇಂಡಿಯನ್​ ಆಯಿಲ್​ ಕಂಪೆನಿಯ ಡ್ರೆಸ್​ನಂತಿದೆ,, ಹಾರ್ಫಿಕ್​ ಬಾಟಲ್​ ತರಾ ಇದೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಜೀತಾ​ಲಾಲ್​ ಚಂಪಕ್ಲಾಲ್ ಅವರಿಂದ ಸ್ಫೂರ್ತಿ ಪಡೆದು ಈ ಜೆರ್ಸಿ ಮಾಡಲಾಗಿದೆ ಎಂದು ಹೇಳಿದ್ದಾರೆ.


ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

2013ರಲ್ಲಿ ಎಂಎಸ್ ಧೋನಿ ನಾಯಕರಾಗಿದ್ದಾಗ ಭಾರತ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಗೆದ್ದಿತ್ತು. ಅಂದಿನಿಂದ, ಭಾರತವು ಏಕದಿನ ವಿಶ್ವಕಪ್, ಟಿ 20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಲು ವಿಫಲವಾಗಿದೆ. ಇದೀಗ ಈ ಬಾರಿಯ ಟಿ20 ವಿಶ್ವಕಪ್​ ಗೆದ್ದು ಐಸಿಸಿ ಟ್ರೋಫಿ ಬರ ನೀಗಿಸಲು ರೋಹಿತ್​ ಪಡೆ ಪಣತೊಟ್ಟಿದೆ.

Continue Reading

ಕ್ರೀಡೆ

ICC Ban : ಮ್ಯಾಚ್​ ಫಿಕಿ ವೆಸ್ಟ್ ಇಂಡೀಸ್​ ಆಟಗಾರನಿಗೆ ಐದು ವರ್ಷ ಬ್ಯಾನ್​

ICC Ban: ಐಸಿಸಿ ಜನರಲ್ ಮ್ಯಾನೇಜರ್ ಅಲೆಕ್ಸ್ ಮಾರ್ಷಲ್ ಸಾರ್ವಜನಿಕ ಹೇಳಿಕೆಯಲ್ಲಿ, ಡೆವೊನ್ ಹಲವಾರು ಭ್ರಷ್ಟಾಚಾರ ವಿರೋಧಿ ಅರಿವು ಮೂಡಿಸುವ ಅಧಿವೇಶನಗಳಲ್ಲಿ ಭಾಗವಹಿಸಿದ್ದರು. ಸಂಹಿತೆಗಳ ಅಡಿಯಲ್ಲಿ ಅವರ ಬಾಧ್ಯತೆಗಳ ಬಗ್ಗೆ ತಿಳಿದಿದ್ದರು ಎಂದು ಹೇಳಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ವೆಸ್ಟ್ ಇಂಡೀಸ್ ಕ್ರಿಕೆಟಿಗ ಡೆವೊನ್ ಥಾಮಸ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC Ban) ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ಐದು ವರ್ಷಗಳ ನಿಷೇಧ ಹೇರಿದೆ. ಕೆಲವು ಪ್ರಮುಖ ಟಿ 20 ಫ್ರ್ಯಾಂಚೈಸ್ ಲೀಗ್​​ಗಳ ಭ್ರಷ್ಟಾಚಾರ ವಿರೋಧಿ ಸಂಹಿತೆಗಳ ಏಳು ಸಂಹಿತೆಗಳನ್ನು ಉಲ್ಲಂಘಿಸಲು 34 ವರ್ಷದ ಆಟಗಾರ ಒಪ್ಪಿಕೊಂಡ ನಂತರ ಮೇ 2 ರಂದು ಉನ್ನತ ಸಂಸ್ಥೆ ತನ್ನ ನಿರ್ಧಾರ ದೃಢಪಡಿಸಿದೆ.

ಐಸಿಸಿ ಜನರಲ್ ಮ್ಯಾನೇಜರ್ ಅಲೆಕ್ಸ್ ಮಾರ್ಷಲ್ ಸಾರ್ವಜನಿಕ ಹೇಳಿಕೆಯಲ್ಲಿ, ಡೆವೊನ್ ಹಲವಾರು ಭ್ರಷ್ಟಾಚಾರ ವಿರೋಧಿ ಅರಿವು ಮೂಡಿಸುವ ಅಧಿವೇಶನಗಳಲ್ಲಿ ಭಾಗವಹಿಸಿದ್ದರು. ಸಂಹಿತೆಗಳ ಅಡಿಯಲ್ಲಿ ಅವರ ಬಾಧ್ಯತೆಗಳ ಬಗ್ಗೆ ತಿಳಿದಿದ್ದರು. ಆದರೂ ಅವರು ತಪ್ಪು ಮಾಡಿದ್ದಾರೆ ಎಂದು ಹೇಳಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್ (ಎಲ್​ಪಿಎಲ್), ಅಭಿ ಧಾಬಿ ಟಿ 10 ಮತ್ತು ಕ್ಯಾರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಎಂಬ ಮೂರು ವಿಭಿನ್ನ ಫ್ರ್ಯಾಂಚೈಸ್ ಲೀಗ್​​ಗಳ ಕ್ರಿಕೆಟಿಗ ತನ್ನ ಬಾಧ್ಯತೆಗಳನ್ನು ಪೂರೈಸಲು ವಿಫಲರಾಗಿದ್ದಾರೆ ಎಂದು ಮಾರ್ಷಲ್ ದೃಢಪಡಿಸಿದರು.

ಥಾಮಸ್ ಅವರನ್ನು ಎಲ್ಲಾ ರೀತಿಯ ಸ್ಪರ್ಧಾತ್ಮಕ ಕ್ರಿಕೆಟ್​​ನಿಂದ ಐದು ವರ್ಷಗಳ ನಿಷೇಧವನ್ನು ವಿಧಿಸಲಾಗಿದೆ ಎಂದು ಐಸಿಸಿ ಗುರುವಾರ ದೃಢಪಡಿಸಿದೆ. ಆಂಟಿಗುವಾ ಬ್ಯಾಟರ್​ 2009 ರಲ್ಲಿ ಬಾಸೆಟೆರೆಯಲ್ಲಿ ಬಾಂಗ್ಲಾದೇಶ ವಿರುದ್ಧದ ಟಿ 20 ಐ ಪಂದ್ಯದ ಮೂಲಕ ವೆಸ್ಟ್ ಇಂಡೀಸ್ ಪರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಅವರು ಒಂದು ಟೆಸ್ಟ್, 21 ಏಕದಿನ ಮತ್ತು 12 ಟಿ 20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ 34 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೊನೆಯದ್ದು ಡಿಸೆಂಬರ್ 2022 ರಲ್ಲಿ ಅಡಿಲೇಡ್ ಓವಲ್​ನಲ್ಲಿ ನಡೆದಿತ್ತು.

ಇದನ್ನೂ ಓದಿ: India’s Jersey T20 World Cup: ಭಾರತ ತಂಡದ ಹೊಸ ಜೆರ್ಸಿ ಕಂಡು ಟ್ರೋಲ್​ ಮಾಡಿದ ನೆಟ್ಟಿಗರು

ಮೂರು ಫ್ರಾಂಚೈಸಿ ಲೀಗ್​ಗಳ ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದಕ್ಕಾಗಿ ಕ್ರಿಕೆಟಿಗನನ್ನು ಐಸಿಸಿ ಈಗಾಗಲೇ ಮೇ 2023 ರಲ್ಲಿ ಅಮಾನತುಗೊಳಿಸಿತ್ತು. ಎಲ್ಪಿಎಲ್​​ನಲ್ಲಿ 2021 ರ ಆವೃತ್ತಿಯಲ್ಲಿ, ಥಾಮಸ್ ಗಂಭೀರ ಆರೋಪವನ್ನು ಎದುರಿಸಿದ್ದರು.

2021ರ ಅಬುಧಾಬಿ ಟಿ 10 ಲೀಗ್​ನಲ್ಲಿ ಪುಣೆ ಡೆವಿಲ್ಸ್​​ ತಂಡದಲ್ಲಿದ್ದಾಗ ಮಾಡಿದ ವಿಧಾನದ ವಿವರಗಳನ್ನು ವರದಿ ಮಾಡಲು ಅವರು ವಿಫಲರಾಗಿದ್ದಾರೆ.

Continue Reading

ಕ್ರೀಡೆ

Champions Trophy 2025: ಇವರಿಂದ ಒಪ್ಪಿಗೆ ಸಿಕ್ಕರೆ ಪಾಕಿಸ್ತಾನದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಆಡಲು ಸಿದ್ಧ ಎಂದ ಬಿಸಿಸಿಐ ಉಪಾಧ್ಯಕ್ಷ

Champions Trophy 2025: ಚಾಂಪಿಯನ್ ಟ್ರೋಫಿಯ ಸಂದರ್ಭದಲ್ಲಿ, ಭಾರತ ಸರ್ಕಾರ ನಮಗೆ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇವೆ. ಭಾರತ ಸರ್ಕಾರ ನಮಗೆ ಅನುಮತಿ ನೀಡಿದಾಗ ಮಾತ್ರ ನಾವು ನಮ್ಮ ತಂಡವನ್ನು ಕಳುಹಿಸುತ್ತೇವೆ. ಹಾಗಾಗಿ ಭಾರತ ಸರ್ಕಾರದ ನಿರ್ಧಾರದ ಮೇಲೆ ತಂಡದ ಪ್ರಯಾಣದ ಭವಿಷ್ಯ ಅಡಗಿದೆ” ಎಂದು ಶುಕ್ಲಾ ಹೇಳಿದರು.

VISTARANEWS.COM


on

Champions Trophy 2025
Koo

ನವದೆಹಲಿ: ಪಾಕಿಸ್ತಾನ ಆತಿಥ್ಯದಲ್ಲಿ ಮುಂದಿನ ವರ್ಷ(2025) ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ(Champions Trophy 2025) ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಮಾತ್ರ ಭಾರತ(India Travelling To Pakistan) ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajeev Shukla) ಹೇಳಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಂದಿನ ವರ್ಷ ಫೆಬ್ರವರಿಯಿಂದ ಮಾರ್ಚ್ 2025 ರವರೆಗೆ ಪಾಕಿಸ್ತಾನದಲ್ಲಿ ನಡೆಯಲಿದೆ. ಪಂದ್ಯಾವಳಿಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂಬ ಮಾಧ್ಯಮ ವರದಿಗಳ ಚರ್ಚೆಯ ಮಧ್ಯೆ ರಾಜೀವ್ ಶುಕ್ಲಾ ಅವರ ಈ ಹೇಳಿಕೆಯಿಂದ ಭಾರತ ತಂಡ ಪಾಕ್​ಗೆ ಪ್ರಯಾಣ ಬೆಳೆಸಲಿದೆಯಾ ಎಂಬ ಭಾರೀ ಕುತೂಹಲ ಮೂಡುವಂತೆ ಮಾಡಿದೆ.

ಎಎನ್‌ಐ ಜತೆ ಮಾತನಾಡಿದ ಶುಕ್ಲಾ, “ಚಾಂಪಿಯನ್ ಟ್ರೋಫಿಯ ಸಂದರ್ಭದಲ್ಲಿ, ಭಾರತ ಸರ್ಕಾರ ನಮಗೆ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇವೆ. ಭಾರತ ಸರ್ಕಾರ ನಮಗೆ ಅನುಮತಿ ನೀಡಿದಾಗ ಮಾತ್ರ ನಾವು ನಮ್ಮ ತಂಡವನ್ನು ಕಳುಹಿಸುತ್ತೇವೆ. ಹಾಗಾಗಿ ಭಾರತ ಸರ್ಕಾರದ ನಿರ್ಧಾರದ ಮೇಲೆ ತಂಡದ ಪ್ರಯಾಣದ ಭವಿಷ್ಯ ಅಡಗಿದೆ” ಎಂದು ಶುಕ್ಲಾ ಹೇಳಿದರು.

ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತದಲ್ಲಿ ಡಿಸೆಂಬರ್ 2012 ರಿಂದ ಜನವರಿ 2013 ರವರೆಗಿನ ದ್ವಿಪಕ್ಷೀಯ ಸರಣಿಯು ಎರಡು ರಾಷ್ಟ್ರಗಳ ನಡುವಿನ ಅಂತಿಮ ದ್ವಿಪಕ್ಷೀಯ ಸರಣಿಯಾಗಿದೆ. ಇದಾದ ಬಳಿಕ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಆಡುತ್ತವೆ.

ಇದನ್ನೂ ಓದಿ Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ಸ್ಥಳ ನಿಗದಿಪಡಿಸಿದ ಪಾಕಿಸ್ತಾನ

ಕಳೆದ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆದಿದ್ದ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ಪಾಕ್​ಗೆ ಹೋಗಲು ಒಪ್ಪದ ಕಾರಣ ಹೈಬ್ರೀಡ್​ ಮಾದರಿಯಲ್ಲಿ ಪಾಕ್​ ಮತ್ತು ಶ್ರೀಲಂಕಾದಲ್ಲಿ ಆಡಿಸಲಾಗಿತ್ತು. ಭಾರತ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಪಾಕಿಸ್ತಾನದಲ್ಲಿ ನಡೆದಿದ್ದ ಪಂದ್ಯವಾವಳಿಗೆ ಬಿಸಿಸಿಐ ಅಧ್ಯಕ್ಷ ರೋಜನ್​ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಹಾಜರಾಗಿದ್ದರು.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(PCB) ಈಗಾಗಲೇ ಟೂರ್ನಿಯ ಪಂದ್ಯಾವಳಿಗೆ ಸ್ಥಳ ನಿಗದಿಪಡಿಸಿದೆ. ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯನ್ನು ಆಯ್ಕೆ ಮಾಡಿಕೊಂಡಿದೆ. ಇದೇ ವೇಳೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಭಾರತ ಈ ಬಾರಿ ಪಾಕ್​ನಲ್ಲಿ ಕ್ರಿಕೆಟ್ ಆಡಲಿದೆ ಎಂದು ಬಲವಾದ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜೀವ್ ಶುಕ್ಲಾ ಕೇಂದ್ರ ಸಮ್ಮತಿ ನೀಡಿದರೆ ಪಾಕ್​ಗೆ ಹೋಗಲು ಸಿದ್ಧ ಎಂದು ಹೇಳಿರುವುದು ಅಚ್ಚರಿ ತಂದಿದೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್​, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್​ ಮತ್ತು ಬಾಂಗ್ಲಾದೇಶ ಟೂರ್ನಿಗೆ ಅರ್ಹತೆ ಪಡೆದ ತಂಡಗಳಾಗಿವೆ.

Continue Reading
Advertisement
MS Dhoni
ಪ್ರಮುಖ ಸುದ್ದಿ8 mins ago

MS Dhoni : ಮಹೇಂದ್ರ ಸಿಂಗ್​ ಧೋನಿಗೆ ಗಾಯ, ಆಂತರಿಕ ಮಾಹಿತಿ ಬಹಿರಂಗ

Lok sabha Election 2024
Lok Sabha Election 202411 mins ago

Lok Sabha Election 2024: ಮತದಾನಕ್ಕೆ ಬಂದು ಇವಿಎಂಗೆ ಬೆಂಕಿ ಹಾಕಿದ ಯುವಕ; ಸುರಪುರದಲ್ಲಿ ಕಲ್ಲು ತೂರಾಟ

Lok Sabha Election 2024
ಕರ್ನಾಟಕ13 mins ago

Lok Sabha Election 2024: ರಾಜ್ಯದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 54.20 ಮತದಾನ; ಯಾವ ಕ್ಷೇತ್ರದಲ್ಲಿ ಎಷ್ಟು?

viral news
ಕ್ರೀಡೆ15 mins ago

Viral News: ದೆಹಲಿ To ಗೋವಾ ವಿಮಾನ ಟಿಕೆಟ್​​ ಬೆಲೆಗಿಂತ ದುಬಾರಿ ಟೀಮ್​ ಇಂಡಿಯಾದ ಟಿ20 ವಿಶ್ವಕಪ್​ ಜೆರ್ಸಿ

Met Gala Fashion
ಫ್ಯಾಷನ್15 mins ago

Met Gala Fashion: ಮೆಟ್‌ ಗಾಲಾದಲ್ಲಿ ಹೈಲೈಟಾದ ಭಾರತೀಯ ಫ್ಯಾಷೆನಬಲ್‌ ತಾರೆಯರಿವರು!

Lalu Prasad Yadav
ದೇಶ16 mins ago

ಎಲ್ಲ ಮೀಸಲಾತಿಯನ್ನು ಮುಸ್ಲಿಮರಿಗೇ ಕೊಡಬೇಕು ಎಂದ ಲಾಲು ಪ್ರಸಾದ್‌ ಯಾದವ್;‌ ಕೆಂಡವಾದ ಮೋದಿ!

IPL 2024
ಕ್ರೀಡೆ30 mins ago

ICC Ban : ಮ್ಯಾಚ್​ ಫಿಕಿ ವೆಸ್ಟ್ ಇಂಡೀಸ್​ ಆಟಗಾರನಿಗೆ ಐದು ವರ್ಷ ಬ್ಯಾನ್​

lok sabha Election 2024
Lok Sabha Election 202435 mins ago

Lok Sabha Election 2024: ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ; ಮತದಾನಕ್ಕೆ ಬಂದು ಟ್ರೀಟ್‌ ಮಾಡಿದ ಡಾಕ್ಟರ್‌

West Bengal
ದೇಶ1 hour ago

West Bengal: ಬಂಗಾಳದಲ್ಲಿ ಮತದಾನದ ವೇಳೆ ಹಿಂಸೆ; ಬಿಜೆಪಿ ಅಭ್ಯರ್ಥಿ ಮೇಲೆ ಟಿಎಂಸಿ ಕಾರ್ಯಕರ್ತರ ದಾಳಿ!

Prajwal Revanna Case Government work against Revanna HD Kumaraswamy gives details of the case
ರಾಜಕೀಯ1 hour ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Government work against Revanna HD Kumaraswamy gives details of the case
ರಾಜಕೀಯ1 hour ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ22 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ23 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ23 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ4 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

ಟ್ರೆಂಡಿಂಗ್‌