ಉಬರ್ ಕಪ್: ಬ್ಯಾಡ್‌ಮಿಂಟನ್ ಉಬರ್ ಕಪ್‌ನಲ್ಲಿ ಅಮೆರಿಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಪಿ.ವಿ. ಸಿಂಧೂ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಮಂಗಳವಾರ ನಡೆದ ಉಬರ್ ಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಮಹಿಳಾ ಬ್ಯಾಡ್ಮಿಂಟನ್ ತಂಡವು ಯುಎಸ್‌ಎ ತಂಡವನ್ನು ಸೋಲಿಸಿತು. ಡಿ ಗುಂಪಿನ ಟೈ ಸರಣಿಯಲ್ಲಿ ಭಾರತ 4 ಪಂದ್ಯ ಗೆದ್ದಿದೆ ಹಾಗೂ ಅಮೆರಿಕ ಕೇವಲ 1 ಪಂದ್ಯ ಗೆದ್ದಿದೆ. ಸಿಂಧೂ ತನ್ನ ಆರಂಭಿಕ ಟೈ ಮ್ಯಾಚ್‌ನ ಸರಣಿಯಲ್ಲಿ ಕೆನಡಾದ ಕೋ ಕ್ಲಿಂಚ್ ಅವರನ್ನು 4-1 ಅಂತರದಲ್ಲಿ ಸೋಲಿಸಿದರು. ಸತತ ಎರಡನೇ ಬಾರಿ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.
ಪ್ರತಿಷ್ಠಿತ ಥಾಮಸ್ ಹಾಗೂ ಉಬರ್ ಕಪ್ ಬ್ಯಾಡ್ಮಿಂಟನ್ ಫೈನಲ್ ಪಂದ್ಯಾವಳಿ ನಡೆಯುತ್ತಿದ್ದು, ಲಕ್ಷ್ಯ ಸೆನ್ ಹಾಗೂ ಪಿ.ವಿ. ಸಿಂಧೂ ಭಾರತ ತಂಡಗಳನ್ನು ಮುನ್ನಡೆಸುತ್ತಿದ್ದಾರೆ.
ಇದನ್ನೂ ಓದಿ: ಟೆನ್ನಿಸ್‌ಗೂ ತಟ್ಟಿದ Match Fixing ಬಿಸಿ: 6 ಫಿಕ್ಸರ್ಸ್ ಬ್ಯಾನ್!
ಪಿ.ವಿ. ಸಿಂಧು ಮತ್ತೊಮ್ಮೆ ಜೆನ್ನಿ ಗೈ ವಿರುದ್ಧ 21-10, 21-11 ಸ್ಕೋರ್ ಮಾಡಿ ಜಯಗಳಿಸಿದರು. ನಂತರ ಡಬಲ್ಸ್ ಜೋಡಿ ತನಿಶಾ ಕ್ರಾಸ್ಟೊ ಮತ್ತು ಟ್ರೀಸಾ ಜಾಲಿ ಜತೆಯಾಟದಲ್ಲಿ ಫ್ರಾನ್ಸೆಸ್ಕಾ ಕಾರ್ಬೆಟ್ ಮತ್ತು ಆಲಿಸನ್ ಲೀ ಅವರ ವಿರುದ್ಧ 21-19, 21-10 ಅಂತರದಲ್ಲಿ ಪಂದ್ಯ ಗೆದ್ದರು. ಎಸ್ತರ್ ಶಿ ವಿರುದ್ಧ ಆಕಾಶಿ ಕಶ್ಯಪ್ ವಿರುದ್ದ ರೋಚಕ ಜಯ ಸಾಧಿಸಿದ್ದು ಭಾರತದ 3-0 match ನಿಂದ ಮುನ್ನಡೆ ಸಾಧಿಸಿತು.
ಪಂದ್ಯದ ಸ್ಕೋರ್ :
ಪಿ.ವಿ. ಸಿಂಧು | ಜೆನ್ನಿ ಗೈ |
21 | 10 |
21 | 11 |
ತನಿಶಾ ಕ್ರಾಸ್ಟೊ & ಟ್ರೀಸಾ ಜಾಲಿ | ಆಲಿಸನ್ ಲೀ & ಫ್ರಾನ್ಸೆಸ್ಕಾ ಕಾರ್ಬೆಟ್ |
21 | 19 |
21 | 10 |
ಯುವ ಡಬಲ್ಸ್ ಶ್ರೇಣಿಯ ಆಟದಲ್ಲಿ ಸಿಮ್ರಾನ್ ಸಿಂಘಿ ಮತ್ತು ರಿತಿಕಾ ಠಾಕರ್ ಜತೆಯಾಟ ನಡೆಸಿ ಲಾರೆನ್ ಲ್ಯಾಮ್ ಮತ್ತು ಕೊಡಿ ಟ್ಯಾಂಗ್ ಲೀ ವಿರುದ್ಧದ ಪಂದ್ಯದಲ್ಲಿ 21-12, 21-17, 21-13 ಅಂಕಗಳಿಂದ ಗೆಲುವು ಸಾಧಿಸಿದ್ದಾರೆ. ಸಿಮ್ರಾನ್ ಹಾಗೂ ರಿತಿಕಾ ಅವರ ಗೆಲುವು ಅಮೆರಿಕಾ ತಂಡದ ಗೌರವವನ್ನು ಕಾಪಾಡಿದಿದೆ. ಆದರೆ ಅಂತಿಮ ಪಂದ್ಯದಲ್ಲಿ ನತಾಲಿ ಚಿ ವಿರುದ್ಧ ಅಶ್ಮಿತಾ ಚಲಿಹಾ ಮೇಲುಗೈ ಸಾಧಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಸಿಮ್ರಾನ್ ಸಿಂಘಿ & ರಿತಿಕಾ ಠಾಕರ್ | ಲ್ಯಾಮ್ & ಕೊಡಿ ಟ್ಯಾಂಗ್ ಲೀ |
21 | 12 |
21 | 17 |
21 | 13 |
ಅಶ್ಮಿತಾ ಚಲಿಹಾ | ನತಾಲಿ ಚಿ |
21 | 18 |
21 | 13 |
ಉಬರ್ ಕಪ್‌ನ ನಾಕೌಟ್ ಹಂತಕ್ಕೆ ಸಾಗಿದ್ದರು
ಈ ಹಿಂದೆ ಎರಡು ಕಂಚಿನ ಪದಕ ಗೆದ್ದಿರುವ ಭಾರತದ ತಂಡ ಬುಧವಾರ ಕೊರಿಯಾವನ್ನು ಎದುರಿಸಲಿದೆ. ಈ ಪಂದ್ಯವು ಡಿ ಗುಂಪಿನ ಕೊನೆಯ ಪಂದ್ಯವಾಗಿದೆ. ಭಾರತ ಪುರುಷರ ತಂಡವು ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಖಚಿತಪಡಿಸಿಕೊಂಡು ನಾಕೌಟ್ ಹಂತಕ್ಕೆ ತಲುಪಿದೆ.
ಇದನ್ನೂ ಓದಿ | IPL 2022: ಕೆಕೆಆರ್ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಹಸರಂಗ: ಆರ್‌ಸಿಬಿ ಗೆಲುವು