IPL 2022: ಕೆಕೆಆರ್ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಹಸರಂಗ: ಆರ್‌ಸಿಬಿ ಗೆಲುವು - Vistara News

ಐಪಿಎಲ್ 2024

IPL 2022: ಕೆಕೆಆರ್ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಹಸರಂಗ: ಆರ್‌ಸಿಬಿ ಗೆಲುವು

ಐಪಿಲ್ 2022ನೇ ಆವೃತ್ತಿಯ 6ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರು ವಿಕೆಟ್ಗಳ ರೋಚಕ ಗೆಲುವು ಸಾಧಿಸಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆರ್‌ಸಿಬಿ ಬೌಲರ್ಸ್ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದರು. ಬೆಂಗಳೂರು ಬಾಯ್ಸ್ ಬೆಂಕಿ ಬೌಲಿಂಗ್ಗೆ ತತ್ತರಿಸಿದ ಕೆಕೆಆರ್ 128 ರನ್ ಗಳಿಸಿತು. ಆರ್‌ಸಿಬಿ ತಂಡದ ಸ್ಪಿನ್ ಬೌಲರ್ ವನಿಂದು ಹಸರಂಗ ಕೆಕೆಆರ್ ವಿರುದ್ಧ ೪ ವಿಕೆಟ್ ಕಬಳಿಸಿ ಅಬ್ಬರಿಸಿದರು.

ಆರ್‌ಸಿಬಿ ತಂಡದ ಸ್ಟಾರ್ ಬೌಲರ್ ಹರ್ಷಲ್ ಪಟೇಲ್ 2 ಮೇಡನ್ ಓವರ್ ಮಾಡಿ ಹೊಸ ದಾಖಲೆ ಬರೆದರು. ಮತ್ತೊಬ್ಬ ವೇಗದ ಬೌಲರ್ ಆಕಾಶ್ ದೀಪ್ 3 ವಿಕೆಟ್ ಪಡೆಯುವ ಮೂಲಕ ಕೆಕೆಆರ್ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಕೆಕೆಆರ್ ಪರ ಬ್ಯಾಟಿಂಗ್ ಮಾಡಿದ ಆಂಡ್ರೆ ರಸೆಲ್ 25 ರನ್ ಗಳಿಸಿ ತಂಡದ ಟಾಪ್ ಸ್ಕೋರರ್ ಎನಿಸಿಕೊಂಡರು.  

129 ರನ್‌ ಟಾರ್ಗೆಟ್ ಬೆನ್ನತ್ತಿದ ಆರ್‌ಸಿಬಿ ಮೊದಲ ಮೂರು ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡಿತು. ಆರಂಭದಿಂದಲೇ ಟಿಮ್ ಸೌಥಿ ಹಾಗೂ ಉಮೇಶ್ ಯಾದವ್ ಬೌಲಿಂಗ್ ದಾಳಿಗೆ ನಲುಗಿದ ಆರ್‌ಸಿಬಿ ಬ್ಯಾಟ್ಸ್ ಮನ್‌ಗಳು ರನ್ ಕದಿಯಲು ಪರದಾಡಿದರು. ಟಿಮ್ ಸೌಥಿ 3 ವಿಕೆಟ್ ಪಡೆಯುವ ಮೂಲಕ ಆರ್‌ಸಿಬಿ ತಂಡವನ್ನು ಸಂಕಷ್ಟಕ್ಕೆ ತಳ್ಳಿದರು.

ಆರ್‌ಸಿಬಿ ಆಟಗಾರರಾದ ಶೆರ್ಪೇನ್ ರುಥರ್ಫೋರ್ಡ್ ಹಾಗೂ ಶಹಬ್ಬಾಸ್ ಅಹ್ಮದ್ ತಲಾ 28 ರನ್ ಹಾಗೂ 27 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂದ್ಯದ ಕೊನೆಯಲ್ಲಿ ದಿನೇಶ್ ಕಾರ್ತಿಕ್ ರೋಚಕ ಆಟ ಪ್ರದರ್ಶಿಸಿದರು ಹಾಗೂ ಆರ್‌ಸಿಬಿ ತಂಡ ಜಯಭೇರಿ ಸಾಧಿಸಿತು. 

ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿ ಆರ್‌ಸಿಬಿ ತಂಡಕ್ಕೆ ಆಸರೆಯಾದ ಸ್ಪಿನ್ ಬೌಲರ್ ವನಿಂದು ಹಸರಂಗ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಐಪಿಎಲ್ 2024

IPL 2024: ಎಸ್‌ಆರ್‌ಎಚ್‌ ಫ್ಯಾನ್ಸ್‌ ಬಾಯಿಮುಚ್ಚಿಸಿ ಸೇಡು ತೀರಿಸಿಕೊಂಡ ಆರ್‌ಸಿಬಿ ಫ್ಯಾನ್ಸ್;‌ ವಿಡಿಯೊ ವೈರಲ್

IPL 2024: IPL 2024: ಹೈದರಾಬಾದ್‌ನ ರಾಜೀವ್​ಗಾಂಧಿ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 206 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಹೈದರಾಬಾದ್ ಬಳಗ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 181 ರನ್ ಬಾರಿಸಿ ಸೋತಿತು. ಇದರ ಮಧ್ಯೆಯೇ, ಹೈದರಾಬಾದ್‌ ಫ್ಯಾನ್ಸ್‌ಗೆ ಆರ್‌ಸಿಬಿ ಫ್ಯಾನ್ಸ್‌ ತಿರುಗೇಟು ನೀಡಿದ್ದಾರೆ.

VISTARANEWS.COM


on

IPL 2024
Koo

ಹೈದರಾಬಾದ್:‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2024) ಎಂದರೆ, ಅದು ಸ್ಟೇಡಿಯಂನಲ್ಲಿ ಕೇವಲ ಆಟಗಾರರ ನಡುವಿನ ಕಾಳಗ ಅಲ್ಲ. ಮೈದಾನದಲ್ಲಿ ಪಂದ್ಯ ಕುತೂಹಲ ಹಂತ ತಲುಪಿದಾಗ, ಯಾವುದೇ ತಂಡ ಸೋತಾಗ ಎದುರಾಳಿ ತಂಡದ ಅಭಿಮಾನಿಗಳು ಕೂಡ ತಿರುಗೇಟು ನೀಡುತ್ತಾರೆ. ಅದರಲ್ಲೂ, ಆರ್‌ಸಿಬಿ ಅಭಿಮಾನಿಗಳ ಅಬ್ಬರ ಮೈದಾನದಲ್ಲೂ ಅಥವಾ ಹೊರಗೂ ಜೋರಾಗಿರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳು (RCB Fans) ಎಸ್‌ಆರ್‌ಎಚ್‌ ಅಭಿಮಾನಿಗಳ (SRH Fans) ಬಾಯಿಮುಚ್ಚಿಸಿ ಸೇಡು ತೀರಿಸಿಕೊಂಡಿದ್ದಾರೆ.

ಹೌದು, ಪ್ರಸಕ್ತ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಎಸ್‌ಆರ್‌ಎಚ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸೋಲನುಭವಿಸಿದ್ದಾಗ ಎಸ್‌ಆರ್‌ಎಚ್‌ ಅಭಿಮಾನಿಗಳು ಸುಮ್ಮನಿರಿ, ಬಾಯಿಮುಚ್ಚಿ ಎಂಬ ರೀತಿಯಲ್ಲಿ ಸನ್ನೆ ಮಾಡಿದ್ದರು. ಇದು ಸಹಜವಾಗಿಯೇ ಆರ್‌ಸಿಬಿ ಅಭಿಮಾನಿಗಳನ್ನು ಕೆರಳಿಸಿತ್ತು. ಆದರೆ, ಗುರುವಾರ (ಏಪ್ರಿಲ್‌ 25) ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಇದಾದ ಬಳಿಕ ಆರ್‌ಸಿಬಿ ಅಭಿಮಾನಿಗಳು ಕೂಡ ಗಪ್‌ ಚುಪ್‌ ಎಂಬ ಸನ್ನೆ ಮಾಡುವ ಮೂಲಕ ಎಸ್‌ಆರ್‌ಎಚ್‌ ಅಭಿಮಾನಿಗಳಿಗೆ ಟಾಂಗ್‌ ಕೊಟ್ಟಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ರಾಜೀವ್​ಗಾಂಧಿ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 206 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಹೈದರಾಬಾದ್ ಬಳಗ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 181 ರನ್ ಬಾರಿಸಿ ಸೋತಿತು. ಈ ಗೆಲುವಿನೊಂದಿಗೆ ಆರ್​ಸಿಬಿಗೆ ಒಟ್ಟು ನಾಲ್ಕು ಅಂಕಗಳು ದೊರಕಿದವು.

ಕೊಹ್ಲಿ, ಪಾಟೀದಾರ್ ಅರ್ಧ ಶತಕ

ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿಯ ಪ್ರದರ್ಶನವೇನೂ ಉತ್ತಮವಾಗಿರಲಿಲ್ಲ. ಆರಂಭಿಕ ಬ್ಯಾಟರ್​ ವಿರಾಟ್ ಕೊಹ್ಲಿ ಮತ್ತೆ ಸ್ಟ್ರೈಕ್​ ರೇಟ್​ ಟೀಕೆಯನ್ನು ಮರೆತು 43 ಎಸೆತಕ್ಕೆ 51 ರನ್ ಬಾರಿಸಿದರು. ಅದಕ್ಕೆ ಅವರು ಟೀಕೆಯನ್ನೂ ಎದುರಿಸಿದರು. ಆದರೆ, ರಜತ್ ಪಾಟೀದಾರ್​ 20 ಎಸೆತಕ್ಕೆ 50 ರನ್ ಬಾರಿಸಿ ತಂಡಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾದರು. ಕ್ಯಾಮೆರೂನ್ ಗ್ರೀನ್​ 37 ರನ್ ಬಾರಿಸಿದರೆ ಫಾಫ್​​ ಡು ಪ್ಲೆಸಿಸ್​ 25 ಕೊಡುಗೆ ಕೊಟ್ಟರು. ಹೀಗಾಗಿ ಪೇಚಾಡಿ 200 ರನ್​ಗಳ ಗಡಿ ದಾಟಿತು. ಬೌಲಿಂಗ್‌ನಲ್ಲಿ ಪರಾಕ್ರಮ ತೋರಿದ ಆರ್‌ಸಿಬಿ ಬೌಲರ್‌ಗಳು ತಂಡಕ್ಕೆ 35 ರನ್‌ಗಳ ಗೆಲುವು ತಂದುಕೊಟ್ಟರು.

ಇದನ್ನೂ ಓದಿ: Yuzvendra Chahal : ​ ಚಾಹಲ್ ಕೈಬಿಟ್ಟಿರುವುದರ ಹಿಂದಿನ ಕಾರಣ ಬಹಿಂಗ ಮಾಡಿದ ಆರ್​ಸಿಬಿ ಮಾಜಿ ಡೈರೆಕ್ಟರ್​

Continue Reading

ಮಂಡ್ಯ

IPL‌ Betting: ಸಾಲಗಾರರ ಕಾಟ; ಹೆಂಡತಿ-ಮಕ್ಕಳಿಗೆ ವಿಷವಿಕ್ಕಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪಾಪಿ

Self Harming: ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಲಕ್ಷ ಲಕ್ಷ ಕಳೆದುಕೊಂಡ ಪತಿಯೊಬ್ಬ ಸಾಲಗಾರರ ಕಾಟಕ್ಕೆ ಪತ್ನಿ ಹಾಗೂ ಮಕ್ಕಳಿಬ್ಬರಿಗೆ ವಿಷವಿಕ್ಕಿ ಕೊಂದಿದ್ದಾನೆ. ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥನಾಗಿದ್ದು, ಆಸ್ಪತ್ರೆಪಾಲಾಗಿದ್ದಾನೆ.

VISTARANEWS.COM


on

By

IPL Betting
Koo

ಮಂಡ್ಯ: ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ (IPL‌ Betting) ಲಕ್ಷಾಂತರ ರೂಪಾಯಿ ಕಳೆದುಕೊಂಡ ವ್ಯಕ್ತಿಯೊಬ್ಬ ಸಾಲಗಾರರ ಕಾಟಕ್ಕೆ ಬೇಸತ್ತು, ಹೆಂಡತಿ, ಮಕ್ಕಳಿಗೆ ವಿಷ ನೀಡಿ (Self Harming) ಕೊಂದಿದ್ದಾನೆ. ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಂಡ್ಯದ ನಾಗಮಂಗಲ ಪಟ್ಟಣದಲ್ಲಿ ಘಟನೆ ನಡೆದಿದೆ.

ನರಸಿಂಹ ಎಂಬಾತ ಈ ಕೃತ್ಯವೆಸಗಿದ್ದಾನೆ. ಪತ್ನಿ ಕೀರ್ತನ (23) ಮಕ್ಕಳಾದ ಜಯಸಿಂಹ (4) ದೀಪಿಕಾ (1) ಮೃತ ದುರ್ದೈವಿ. ಅಸ್ವಸ್ಥನಾಗಿರುವ ನರಸಿಂಹನನ್ನು ನಾಗಮಂಗಲ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಐಪಿಎಲ್ ಕ್ರಿಕೆಟ್‌ ನೋಡುತ್ತಿದ್ದ ನರಸಿಂಹ ಬೆಟ್ಟಂಗ್‌ನ ಹಿಂದೆ ಬಿದ್ದಿದ್ದ. ಇದರಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿದ್ದ ಎಂದು ತಿಳಿದು ಬಂದಿದೆ. ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಳ್ಳುತ್ತಿದ್ದರೂ ಇವತ್ತಲ್ಲ ನಾಳೆ ಮರಳಿ ಬರುತ್ತದೆ ಎನ್ನುವ ಭರವಸೆಯೊಂದಿಗೆ ಮೇಲಿಂದ ಮೇಲೆ ಸಾಲ ಮಾಡಿ ಲಕ್ಷಾಂತರ ರೂ. ಕಳೆದುಕೊಂಡಿದ್ದ.

ಇದರಿಂದ ಮನನೊಂದ ನರಸಿಂಹ ಪತ್ನಿ ಹಾಗೂ ಪುಟ್ಟ ಮಕ್ಕಳಿಬ್ಬರಿಗೆ ವಿಷ ನೀಡಿ ಹತ್ಯೆ ಮಾಡಿದ್ದಾನೆ. ಅವರೆಲ್ಲೂ ಮೃತಪಟ್ಟ ಬಳಿಕ ತಾನೂ ವಿಷ ಸೇವಿಸಿದ್ದಾನೆ. ಸದ್ಯ ನಾಗಮಂಗಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Road Accident : ಸೈಕಲ್‌ಗೆ ಗುದ್ದಿದ ಕಾರು, ನರಳಾಡಿ ವ್ಯಕ್ತಿ ಸಾವು; ಹಿಟ್‌ ಆ್ಯಂಡ್‌ ರನ್‌ಗೆ ಬೈಕ್‌ ಸವಾರ ಬಲಿ

ರೈಲಿಗೆ ತಲೆ ಕೊಟ್ಟು ಮಣಿಪಾಲ್‌ ಆಸ್ಪತ್ರೆಯ ಸ್ಟಾಫ್ ನರ್ಸ್ ಸೂಸೈಡ್‌

ಬೆಂಗಳೂರು: ರೈಲಿಗೆ ಸಿಲುಕಿ ಯುವಕನೊಬ್ಬ ಆತ್ಮಹತ್ಯೆಗೆ (Student death) ಶರಣಾಗಿದ್ದಾರೆ. ಬೆಂಗಳೂರಿನ ದೀಪಾಂಜಲಿನಗರ ರೈಲ್ವೆ ಟ್ರಾಕ್ ಬಳಿ ಘಟನೆ ನಡೆದಿದೆ. ವಿಜಯಪುರ ಮೂಲದ ಚನ್ನಬಸು ಅಶೋಕ್ (22) ಮೃತ ದುರ್ದೈವಿ.

ಚನ್ನಬಸು ಅಶೋಕ್‌ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನ ತನ್ನ ಚಿಕ್ಕಮ್ಮನೊಟ್ಟಿಗೆ ವಾಸವಾಗಿದ್ದ. ಇಂದು ಗುರುವಾರ ಮನೆಯಿಂದ ಹೊರಟವನು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಟಿ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Summer Special Trains: ಹಾಲಿಡೇ ಟ್ರಿಪ್‌ಗೆ ರೆಡಿನಾ? ಬೆಂಗಳೂರು-ಮೈಸೂರಿನಿಂದ ಈ ರಾಜ್ಯಗಳಿಗೆ ಸ್ಪೆಷಲ್‌ ಟ್ರೈನ್‌

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಬೆಂಗಳೂರಿನ ಕಮ್ಮನಹಳ್ಳಿ ಮುಖ್ಯರಸ್ತೆಯ ಸುಖಸಾಗರ್ ಬಳಿ ವೃದ್ಧರೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ಕೊಟ್ಟಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತರ ಗುರುತು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಮಕ್ಕಳಾಗಿಲ್ಲವೆಂದು ಕಿರುಕುಳ; ಶೌಚಾಲಯದಲ್ಲಿ ನೇಣು ಬಿಗಿದುಕೊಂಡ ಗೃಹಿಣಿ

ಚಿತ್ರದುರ್ಗ: ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಮತ್ತೋಡು ಗ್ರಾಮದಲ್ಲಿ ಘಟನೆ ನಡೆದಿದೆ. ಆಶಾ (26) ಮೃತ ದುರ್ದೈವಿ.

ಮಕ್ಕಳಾಗಿಲ್ಲ ಎಂಬ ಕಾರಣವನ್ನೇ ನೆಪವನ್ನಾಗಿ ಇಟ್ಟುಕೊಂಡು ಪತಿ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಆಶಾಗೆ, ಮದುವೆ ಆಗಿ 5 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಈ ಕಾರಣಕ್ಕೆ ಆಶಾಗೆ ತವರು ಮನೆಗೆ ವಾಪಸ್‌ ಕಳಿಸುತ್ತೇನೆ ಎಂದು ಅತ್ತೆ ಹಿಂಸೆ ನೀಡುತ್ತಿದ್ದರು.

ಪತಿ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ಆಶಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಶಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರಿಕೆಟ್

Ruturaj Gaikwad: ಅಬ್ಬರದ ಫಿಫ್ಟಿ ಜತೆಗೆ ಕನ್ನಡಿಗನ ದಾಖಲೆ ಮುರಿದ ಋತುರಾಜ್‌ ಗಾಯಕ್ವಾಡ್!

Ruturaj Gaikwad: ಟಾಸ್‌ ಸೋತು ಮೊದಲು ಬ್ಯಾಟಿಂಗ್​ ಮಾಡಲು ಆಹ್ವಾನ ಪಡೆದ ಚೆನ್ನೈ ತಂಡದ ಅತ್ಯುತ್ತಮವಾಗಿ ಬ್ಯಾಟ್ ಮಾಡಿತು. ಋತುರಾಜ್‌ ಗಾಯಕ್ವಾಡ್‌, ಶಿವಂ ದುಬೆ ಹಾಗೂ ಧೋನಿ ಬ್ಯಾಟಿಂಗ್‌ ನೆರವಿನಿಂದ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟ ಮಾಡಿಕೊಂಡು 206 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬಯಿ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಳ್ಳುವಾಗ 6 ವಿಕೆಟ್​ ನಷ್ಟಕ್ಕೆ 186 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

Ruturaj Gaikwad
Koo

ಮುಂಬೈ: ಮಹಾರಾಷ್ಟ್ರದ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ (ಏಪ್ರಿಲ್‌ 14) ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡವು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಆಡಿದ 6 ಪಂದ್ಯಗಳಲ್ಲಿ 4 ಪಂದ್ಯ ಗೆಲ್ಲುವ ಮೂಲಕ ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ನೇತೃತ್ವದಲ್ಲಿ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಭದ್ರವಾಗಿದೆ. ಇನ್ನು, ಮುಂಬೈ ವಿರುದ್ಧದ ಪಂದ್ಯದಲ್ಲಿ ಅಮೋಘ 69 ರನ್‌ ಬಾರಿಸಿದ ಋತುರಾಜ್‌ ಗಾಯಕ್ವಾಡ್‌, ಐಪಿಎಲ್‌ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 2 ಸಾವಿರ ರನ್‌ ಗಳಿಸಿದ ಭಾರತದ ಮೊದಲ ಆಟಗಾರ ಎಂಬ ಖ್ಯಾತಿಗೆ ಭಾಜನರಾದರು.

ಋತುರಾಜ್‌ ಗಾಯಕ್ವಾಡ್‌ ಅವರು 57 ಇನ್ನಿಂಗ್ಸ್‌ಗಳಲ್ಲಿಯೇ 2 ಸಾವಿರ ರನ್‌ ಪೂರೈಸಿದ್ದು, ಭಾರತದಲ್ಲಿಯೇ ವೇಗವಾಗಿ ಇಷ್ಟು ರನ್‌ ಗಳಿಸಿದ ಮೊದಲ ಆಟಗಾರ ಎನಿಸಿದ್ದಾರೆ. ಇದುವರೆಗೆ ಕಡಿಮೆ ಪಂದ್ಯಗಳಲ್ಲಿ 2 ಸಾವಿರ ರನ್‌ ಗಳಿಸಿದ ದಾಖಲೆಯು ಕನ್ನಡಿಗ, ಲಕ್ನೋ ಸೂಪರ್‌ ಜೈಂಟ್ಸ್‌ ಕ್ಯಾಪ್ಟನ್‌ ಕೆ.ಎಲ್.ರಾಹುಲ್‌ ಹೆಸರಲ್ಲಿತ್ತು. ರಾಹುಲ್‌ ಅವರು 60 ಇನ್ನಿಂಗ್ಸ್‌ಗಳಲ್ಲಿ 2 ಸಾವಿರ ರನ್‌ ಗಳಿಸಿದ ಸಾಧನೆ ಮಾಡಿದ್ದರು.

ಮುಂಬೈ ವಿರುದ್ಧ ಋತುರಾಜ್‌ ಗಾಯಕ್ವಾಡ್‌ 40 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಐದು ಸಿಕ್ಸರ್‌ ಸಮೇತ 69 ರನ್‌ ಗಳಿಸಿದರು. ಶಿವಂ ದುಬೆ ಕೂಡ 38 ಎಸೆತಗಳಲ್ಲಿ 66 ರನ್‌ ಗಳಿಸಿದ್ದು ಸಿಎಸ್‌ಕೆ 206 ರನ್‌ಗಳ ಬೃಹತ್‌ ಮೊತ್ತ ದಾಖಲಿಸಲು ಸಾಧ್ಯವಾಯಿತು. ಈ ಮೊತ್ತ ಬೆನ್ನತ್ತಿದ ಮುಂಬೈ 20 ಓವರ್‌ಗಳಲ್ಲಿ 186 ರನ್‌ ಅಷ್ಟೇ ಕಲೆಹಾಕಲು ಸಾಧ್ಯವಾಯಿತು.

Ruturaj Gaikwad becomes fastest Indian to 2000 IPL runs during 69-run knock vs MI

ರೋಹಿತ್‌ ಶರ್ಮಾ ರೆಕಾರ್ಡ್

ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿಯೇ ಮುಂಬೈ ಇಂಡಿಯನ್ಸ್‌ ತಂಡದ ರೋಹಿತ್‌ ಶರ್ಮಾ ಕೂಡ ಮತ್ತೊಂದು ದಾಖಲೆ ಬರೆದರು. ಟಿ20 ಕ್ರಿಕೆಟ್​​ನಲ್ಲಿ 500 ಸಿಕ್ಸರ್​ಗಳನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಇನಿಂಗ್ಸ್​ನಲ್ಲಿ ಐದು ಸಿಕ್ಸರ್ ಬಾರಿಸುವ ಮೂಲಕ ಈ ಗಡಿಯನ್ನು ದಾಟಿದ್ದಾರೆ. ರವೀಂದ್ರ ಜಡೇಜಾ ಅವರ ಬೌಲಿಂಗ್​ನಲ್ಲಿ ಬಂದ ಮೂರನೇ ಸಿಕ್ಸರ್​ಗಳೊಂದಿಗೆ ರೋಹಿತ್ 500 ಟಿ 20 ಸಿಕ್ಸರ್​​ ಪೂರೈಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.‌

ಅತಿ ಹೆಚ್ಚು ಪಂದ್ಯ; ಧೋನಿ 2ನೇ ಆಟಗಾರ ಎಂಬ ಹೆಗ್ಗಳಿಕೆ

ಆರ್‌ಸಿಬಿ ಪರವಾಗಿ 250 ಪಂದ್ಯಗಳನ್ನು ಆಡುವ ಮೂಲಕ ಐಪಿಎಲ್‌ ಇತಿಹಾಸದಲ್ಲಿಯೇ ಒಂದೇ ಫ್ರಾಂಚೈಸ್‌ ಪರ ಇಷ್ಟು ಪಂದ್ಯಗಳನ್ನು ಆಡಿದ ಏಕೈಕ ಬ್ಯಾಟ್ಸ್‌ಮನ್‌ ಎನಿಸಿದ್ದರು. ಈಗ ಧೋನಿ ಅವರು ಕೂಡ 250 ಪಂದ್ಯಗಳನ್ನು ಆಡುವಾಗ ಮೂಲಕ ಅತಿ ಹೆಚ್ಚು ಪಂದ್ಯವಾಡಿದ ಎರಡನೇ ಆಟಗಾರ ಎನಿಸಿದ್ದಾರೆ. 2008ರಲ್ಲಿ ಸಿಎಸ್‌ಕೆ ಪರವಾಗಿ ಧೋನಿ ಆಡಲು ಆರಂಭಿಸಿದರು. ಎರಡು ವರ್ಷ ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ಪರವಾಗಿ ಹೊರತುಪಡಿಸಿದರೆ ಧೋನಿ ಅವರು ಸಿಎಸ್‌ಕೆ ಪರವಾಗಿಯೇ ಆಡಿದ್ದಾರೆ.

ಇದನ್ನೂ ಓದಿ: MS Dhoni: ಕೊಹ್ಲಿ ನಂತರ ಈ ದಾಖಲೆ ಬರೆದ ಎರಡನೇ ಆಟಗಾರ ಎನಿಸಿದ ಧೋನಿ; ಏನದು?

Continue Reading

ಐಪಿಎಲ್ 2024

MS Dhoni: ಕೊಹ್ಲಿ ನಂತರ ಈ ದಾಖಲೆ ಬರೆದ ಎರಡನೇ ಆಟಗಾರ ಎನಿಸಿದ ಧೋನಿ; ಏನದು?

MS Dhoni: IPL 2024 : ಮೊದಲು ಬ್ಯಾಟಿಂಗ್​ ಮಾಡಲು ಆಹ್ವಾನ ಪಡೆದ ಚೆನ್ನೈ ತಂಡದ ಅತ್ಯುತ್ತಮವಾಗಿ ಬ್ಯಾಟ್ ಮಾಡಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟ ಮಾಡಿಕೊಂಡು 206 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬಯಿ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಳ್ಳುವಾಗ 6 ವಿಕೆಟ್​ ನಷ್ಟಕ್ಕೆ 186 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಇನ್ನು, ಸಿಎಸ್‌ಕೆ ಕೊನೆಯ ಓವರ್‌ನಲ್ಲಿ ಮೂರು ಸಿಕ್ಸ್‌ ಬಾರಿಸಿದ ಮಹೇಂದ್ರ ಸಿಂಗ್‌ ಧೋನಿ ಅವರು ವಿಶೇಷ ದಾಖಲೆಯನ್ನೂ ಬರೆದರು.

VISTARANEWS.COM


on

MS Dhoni
Koo

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪಂದ್ಯವು ಗೆಲುವು (IPL 2024) ಸಾಧಿಸಿದೆ. ಅದರಲ್ಲೂ, ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಮಹೇಂದ್ರ ಸಿಂಗ್‌ ಧೋನಿ (MS Dhoni) ಅವರು ಬಾರಿಸಿದ ಮೂರು ಸಿಕ್ಸರ್‌ಗಳು ತಂಡದ ಗೆಲುವಿಗೆ ಕಾರಣವಾಗುವ ಜತೆಗೆ ಅಭಿಮಾನಿಗಳ ಮನವನ್ನೂ ತಣಿಸಿವೆ. ಧೋನಿ ಅವರು ಮೂರು ಸಿಕ್ಸರ್‌ ಮೂಲಕ ಗಮನ ಸೆಳೆದಿದ್ದಲ್ಲದೆ, ವಿರಾಟ್‌ ಕೊಹ್ಲಿ (Virat Kohli) ನಂತರ ಐಪಿಎಲ್‌ನಲ್ಲಿ ಒಂದೇ ಫ್ರಾಂಚೈಸ್‌ ಪರವಾಗಿ 250 ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎನಿಸಿದ್ದಾರೆ.

ಆರ್‌ಸಿಬಿ ಪರವಾಗಿ 250 ಪಂದ್ಯಗಳನ್ನು ಆಡುವ ಮೂಲಕ ಐಪಿಎಲ್‌ ಇತಿಹಾಸದಲ್ಲಿಯೇ ಒಂದೇ ಫ್ರಾಂಚೈಸ್‌ ಪರ ಇಷ್ಟು ಪಂದ್ಯಗಳನ್ನು ಆಡಿದ ಏಕೈಕ ಬ್ಯಾಟ್ಸ್‌ಮನ್‌ ಎನಿಸಿದ್ದರು. ಈಗ ಧೋನಿ ಅವರು ಕೂಡ 250 ಪಂದ್ಯಗಳನ್ನು ಆಡುವಾಗ ಮೂಲಕ ಅತಿ ಹೆಚ್ಚು ಪಂದ್ಯವಾಡಿದ ಎರಡನೇ ಆಟಗಾರ ಎನಿಸಿದ್ದಾರೆ. 2008ರಲ್ಲಿ ಸಿಎಸ್‌ಕೆ ಪರವಾಗಿ ಧೋನಿ ಆಡಲು ಆರಂಭಿಸಿದರು. ಎರಡು ವರ್ಷ ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ಪರವಾಗಿ ಹೊರತುಪಡಿಸಿದರೆ ಧೋನಿ ಅವರು ಸಿಎಸ್‌ಕೆ ಪರವಾಗಿಯೇ ಆಡಿದ್ದಾರೆ.

ಸಿಎಸ್‌ಕೆ ಪರವಾಗಿ 250 ಪಂದ್ಯಗಳನ್ನು ಆಡುವುದಷ್ಟೇ ಕ್ಯಾಪ್ಟನ್‌ ಆಗಿಯೂ 200 ಪಂದ್ಯಗಳಲ್ಲಿ ಧೋನಿ ನಾಯಕರಾಗಿ ಮುನ್ನಡೆಸಿದ್ದಾರೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆಯು 2010, 2011, 2018, 2021 ಹಾಗೂ 2023ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈಗ ಋತುರಾಜ್‌ ಗಾಯಕ್ವಾಡ್‌ ಅವರು ಸಿಎಸ್‌ಕೆಯನ್ನು ಮುನ್ನಡೆಸುತ್ತಿದ್ದು, ಧೋನಿ ಮಾರ್ಗದರ್ಶನವು ಮುಂದುವರಿದಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಗೆಲುವು

ಮತೀಶ್​ ಪತಿರಾಣಾ (4 ವಿಕೆಟ್​, 28 ರನ್​​) ಅವರ ಮಾರಕ ಬೌಲಿಂಗ್ ಹಾಗೂ ಋತುರಾಜ್ ಗಾಯಕ್ವಾಡ್​ (69 ರನ್​, 40 ಎಸೆತ, 5 ಫೋರ್, 5 ಸಿಕ್ಸರ್​) , ಶಿವಂ ದುಬೆ (66 ರನ್​, 38 ರನ್​,10 ಫೋರ್​, 2 ಸಿಕ್ಸರ್​ ) ಅವರ ಅರ್ಧ ಶತಕಗಳ ನೆರವಿನಿಂದ ಮಿಂಚಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 20 ರನ್​ಗಳ ಅಂತರದಿಂದ ಗೆಲುವು ಸಾಧಿಸಿತು. ಅಂದ ಹಾಗೆ ಚೆನ್ನೈ ಪರ ಕೊನೇ ನಾಲ್ಕು ಎಸೆತಗಳನ್ನು ಎದುರಿಸಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ​ 20 ರನ್​ಗಳನ್ನು ಬಾರಿಸಿದ್ದರು. ಅದರಲ್ಲಿ 3 ಸಿಕ್ಸರ್​ಗಳಿದ್ದವು. ಅದೇ ರನ್​ಗಳ ಅಂತರದಿಂದ ಚೆನ್ನೈ ಗೆದ್ದು ಬೀಗಿದ್ದು ವಿಶೇಷ. ಆದರೆ, ಮುಂಬೈ ಪರ ಏಕಾಂಗಿ ಹೋರಾಟ ನಡೆಸಿ ಅಮೋಘ 105 ರನ್ ಬಾರಿಸಿದ ರೋಹಿತ್ ಶರ್ಮಾ ಅವರ ಶತಕದ ಹೋರಾಟ ವ್ಯರ್ಥಗೊಂಡಿತು.

ಈ ಗೆಲುವು ಚೆನ್ನೈ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ನಾಲ್ಕನೆಯದ್ದು. ಅದೇ ರೀತಿ ಮುಂಬೈ ಇಂಡಿಯನ್ಸ್​ ತಂಡಕ್ಕೆ ನಾಲ್ಕನೇ ಸೋಲು. ಹಾರ್ದಿಕ್ ಪಾಂಡ್ಯ ಬಳಗ ತವರಿನಲ್ಲಿ ನಡೆದ ಈ ಹಿಂದಿನ ಎರಡು ಪಂದ್ಯಗಳನ್ನು ಗೆದಿದ್ದರೆ ಮೂರನೇ ಪಂದ್ಯದಲ್ಲಿ ಸೋಲು ಕಂಡಿತು. ಅಲ್ಲದೆ ಪ್ಲೇ ಆಫ್ ಹಾದಿಯನ್ನು ಕಠಿಣಗೊಳಿಸಿತು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಚೆನ್ನೈ ಸೂಪರ್ ಕಿಂಗ್ಸ್ ಮೇಲಿನ ಗೆಲುವಿನ ಪಾರಮ್ಯದ ಅಂತರ ಕಡಿಮೆಯಾಯಿತು ಒಟ್ಟು 36 ಪಂದ್ಯಗಳಲ್ಲಿ ಮುಂಬೈ 20 ರಲ್ಲಿ ಗೆದ್ದಿದ್ದರೆ, ಚೆನ್ನೈ 17 ಪಂದ್ಯಗಳಲ್ಲಿ ಗೆದ್ದಂತಾಯಿತು.

ಇದನ್ನೂ ಓದಿ: IPL 2024: ಅಬ್ಬರದ ಫೀಲ್ಡಿಂಗ್‌ ವೇಳೆ ಕಳಚಿದ ರೋಹಿತ್‌ ಶರ್ಮಾ ಪ್ಯಾಂಟ್;‌ ವಿಡಿಯೊ ವೈರಲ್!

Continue Reading
Advertisement
Covaxin
ದೇಶ14 mins ago

Covaxin: ಕೊವ್ಯಾಕ್ಸಿನ್‌ ಸುರಕ್ಷಿತ ಲಸಿಕೆ ಎಂದ ಭಾರತ್‌ ಬಯೋಟೆಕ್;‌ ಸೈಡ್‌ ಎಫೆಕ್ಟ್‌ ಆರೋಪದ ಬೆನ್ನಲ್ಲೇ ಸ್ಪಷ್ಟನೆ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ17 mins ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

KL Rahul
ಕ್ರೀಡೆ31 mins ago

KL Rahul : ವಿಶ್ವ ಕಪ್​ ತಂಡದಲ್ಲಿ ರಾಹುಲ್​ಗೆ ಸ್ಥಾನ ನೀಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಆಯ್ಕೆಗಾರ ಅಜಿತ್ ಅಗರ್ಕರ್​​

T20 World Cup
ಕ್ರೀಡೆ54 mins ago

T20 World Cup : ವಿಶ್ವ ಕಪ್​ ಗೆಲ್ಲುವುದು ಭಾರತ; ವಿಶ್ವ ಕಪ್​ ವಿಜೇತ ಲಂಕಾ ಆಟಗಾರನ ಸ್ಪಷ್ಟ ನುಡಿ

Shine Shetty Summer Fashion
ಫ್ಯಾಷನ್1 hour ago

Summer Fashion: ಉರಿ ಬಿಸಿಲಿನಲ್ಲಿ ಗಮನ ಸೆಳೆವ ನಟ ಶೈನ್‌ ಶೆಟ್ಟಿಯ ಕೂಲ್‌ ಸ್ಮೈಲ್‌ & ಸ್ಟೈಲ್‌!

IPL 2024
ಕ್ರೀಡೆ1 hour ago

IPL 2024 : ಐಪಿಎಲ್​ ಮಧ್ಯದಲ್ಲಿಯೇ ಕೆಕೆಆರ್​ ತಂಡ ತೊರೆದ ಆರಂಭಿಕ ಆಟಗಾರ

assault Case
ಬೆಂಗಳೂರು1 hour ago

Assault Case : ಪೊಲೀಸ್‌ ಸ್ಟೇಷನ್‌ನಲ್ಲೇ ಇನ್‌ಸ್ಪೆಕ್ಟರ್‌ ಕಪಾಳಕ್ಕೆ ಹೊಡೆದ ಮಹಿಳೆ

Prajwal Revanna Case Centre says it has no power to revoke Prajwal diplomatic passport Big relief for MP
ಕರ್ನಾಟಕ1 hour ago

Prajwal Revanna Case: ಪ್ರಜ್ವಲ್‌ರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದು ಮಾಡೋ ಅಧಿಕಾರ ನಮಗಿಲ್ಲ ಎಂದ ಕೇಂದ್ರ! ಸಂಸದನಿಗೆ ಬಿಗ್‌ ರಿಲೀಫ್‌?

Virat kohli
ಪ್ರಮುಖ ಸುದ್ದಿ2 hours ago

Virat Kohli : ಅಂಕಿ, ಅಂಶ ಪಂಡಿತರೇ ಬಾಯ್ಮುಚ್ಚಿ; ಕೊಹ್ಲಿಯನ್ನು ಟೀಕಿಸಿದವರ ಬೆಂಡೆತ್ತಿದ ಡಿ’ವಿಲಿಯರ್ಸ್​​

Brij Bhushan Singh
ದೇಶ2 hours ago

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ ಭೂಷಣ್‌ಗಿಲ್ಲ ಟಿಕೆಟ್‌; ಮಗನಿಗೆ ಮಣೆ, ರಾಯ್‌ಬರೇಲಿಗೂ ಅಭ್ಯರ್ಥಿ ಘೋಷಿಸಿದ ಬಿಜೆಪಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ17 mins ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ14 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌