ಅಹಮದಾಬಾದ್: ಭಾರತ ತಂಡದ ಕ್ರಿಕೆಟಿಗರಿಗೆ ಐಷಾರಾಮಿ ಕಾರುಗಳ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ಅಂತೆಯೇ ಪ್ರತಿಭಾವಂತ ಎಡಗೈ ವೇಗದ ಬೌಲರ್ ಜಯದೇವ್ ಉನಾದ್ಕಟ್ ಇತ್ತೀಚೆಗೆ ತಮ್ಮ ಆಕರ್ಷಕ ಕಾರು ಸಂಗ್ರಹಕ್ಕೆ ಹೊಳೆಯುವ ಮರ್ಸಿಡಿಸ್ ಬೆಂಝ್ ಜಿಎಲ್ಇ 300 ಡಿ ಎಸ್ ಯುವಿಯನ್ನು (mercedes benz) ಸೇರಿಸಿಕೊಂಡಿದ್ದಾರೆ. ಸುಮಾರು 90 ಲಕ್ಷ ರೂ.ಗಳ ಬೆಲೆಯ ಸೊಗಸಾದ ಎಸ್ಯುವಿ ಖರೀದಿಯ ಮಾಹಿತಿಯನ್ನು ಡೀಲರ್ಶಿಪ್ ಹಂಚಿಕೊಂಡಿದೆ. ಕಾರನ್ನು ಡೆಲಿವರಿ ತೆಗೆದುಕೊಳ್ಳುವ ಚಿತ್ರಗಳನ್ನು ಕ್ರಿಕೆಟಿಗ ಸ್ವತಃ ತಮ್ಮ ವೈಯಕ್ತಿಕ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಡೆಲಿವರಿ ವೀಡಿಯೊದಲ್ಲಿ, ಜಯದೇವ್ ಉನಾದ್ಕಟ್ ತಮ್ಮ ಪತ್ನಿ ಮತ್ತು ಕುಟುಂಬದೊಂದಿಗೆ ಮರ್ಸಿಡಿಸ್ ಬೆಂಜ್ ಡೀಲರ್ಶಿಪ್ ಆಗಮಿಸುತ್ತಿರುವುದು ಕಂಡುಬಂದಿದೆ. ಈ ವೀಡಿಯೊದಲ್ಲಿ ಕ್ರಿಕೆಟ್ ತಾರೆ ತನ್ನ ಹೊಸ ಕಾರಿನ ಕವರ್ ತೆಗೆಯುವ ಮೂಲಕ ಅನಾವರಣಗೊಳಿಸಿದ್ದಾರೆ. ಅದ್ಭುತವಾದ ಜಿಎಲ್ಇ 300 ಡಿ ಎಸ್ಯುವಿ ಕಪ್ಪು ಬಣ್ಣದ ಕ್ಲಾಸಿ ಶೇಡ್ನಲ್ಲಿ ಹೊಂದಿದೆ. ಶೋರೂಮ್ ಒಳಗೆ ಕಾಲಿಡುತ್ತಿದ್ದಂತೆ ಜಯದೇವ್ ಅವರ ಉತ್ಸಾಹವು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಈ ಸಂದರ್ಭದ ನೆನಪಿಗಾಗಿ, ಅವರು ಕ್ರಿಕೆಟ್ ಚೆಂಡಿಗೆ ಸಹಿ ಹಾಕಿ ಶೋ ರೂಮ್ಗೆ ನೀಡಿದರು.
ಜಯದೇವ್ ಉನಾದ್ಕಟ್ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಕಾರು ವಿತರಣೆಯ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕ್ರಿಕೆಟಿಗ ಮತ್ತು ಅವರ ಪತ್ನಿ ತಮ್ಮ ಹೊಚ್ಚ ಹೊಸ ಮರ್ಸಿಡಿಸ್ ಜಿಎಲ್ಇ 300 ಡಿ ಯೊಂದಿಗೆ ಪೋಸ್ ನೀಡಿದ್ದರೆ. ಸಹ ಕ್ರಿಕೆಟಿಗರು, ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಜನಪ್ರಿಯ ಎಸ್ಯುವಿ
ಜಯದೇವ್ ಉನಾದ್ಕಟ್ ಆಯ್ಕೆ ಮಾಡಿದ ಎಸ್ಯುವಿ ಮರ್ಸಿಡಿಸ್ ಬೆಂಝ್ ಜಿಎಲ್ ಇ 300ಡಿ. ಜರ್ಮನ್ ಐಷಾರಾಮಿ ಕಾರು ತಯಾರಕರು ಪ್ರಸ್ತುತ ಭಾರತದಲ್ಲಿ ನೀಡುವ ಅತ್ಯಂತ ಜನಪ್ರಿಯ ಎಸ್ಯುವಿಗಳಲ್ಲಿ ಇದು ಒಂದಾಗಿದೆ. ಇದು ಹೆಚ್ಚು ಬೇಡಿಕೆಯ ಮರ್ಸಿಡಿಸ್ ವಾಹನ. ಜಿಎಲ್ ಸಿ ಮತ್ತು ಜಿಎಲ್ಎಸ್ ನಡುವೆ ಸ್ಥಾನ ಪಡೆದಿರುವ ಜಿಎಲ್ ಇ 300ಡಿ ತನ್ನ ಉನ್ನತ ವಿನ್ಯಾಸ ಮತ್ತು ಆಧುನಿಕ ಐಷಾರಾಮಿ ಚಾಲನಾ ಅನುಭವವನ್ನು ವ್ಯಾಖ್ಯಾನಿಸುವ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ.
ಮರ್ಸಿಡಿಸ್ ಬೆಂಝ್ ಜಿಎಲ್ಇ 300ಡಿ ಎಸ್ಯುವಿಯಲ್ಲಿ ಏಳು ಏರ್ ಬ್ಯಾಗ್ಗಳು, ನಾಲ್ಕು ಜೋನ್ ಕ್ಲೈಮೇಟ್ ಕಂಟ್ರೋಲ್, 12.3-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಮತ್ತು ಅದೇ ಗಾತ್ರದ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಎಲೆಕ್ಟ್ರಿಕ್ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಸೀಟ್ ಗಳು, ಪನೋರಮಿಕ್ ಸನ್ ರೂಫ್, ಎಲ್ಇಡಿ ಹೆಡ್ ಲ್ಯಾಂಪ್ ಗಳು, ಹ್ಯಾಂಡ್ಸ್-ಫ್ರೀ ಪಾರ್ಕಿಂಗ್, ಪವರ್ಡ್ ಟೈಲ್ ಗೇಟ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಎಸ್ಯುವಿಯು ಲೆದರ್ಸೀ ಟುಗಳು, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಕ್ರೂಸ್ ಕಂಟ್ರೋಲ್ ಮತ್ತು ಇನ್ನೂ ಅನೇಕ ವೈಶಿಷ್ಟ್ಯಗಳನ್ನು ನೀಡುತ್ತದೆ.
ಇದನ್ನೂ ಓದಿ : Viral News : ಶೋರೂಮ್ನಿಂದ ಫೋಕ್ಸ್ವ್ಯಾಗನ್ ಕಾರನ್ನು ಕದ್ದ, ಪೆಟ್ರೋಲ್ ಹಾಕಲು ಹೋಗಿ ಸಿಕ್ಕಿ ಬಿದ್ದ!
ಪವರ್ಟ್ರೇನ್ ಹೇಗಿದೆ?
ಮರ್ಸಿಡಿಸ್ ಬೆಂಝ್ ಜಿಎಲ್ಇ 300ಡಿ ಕಾರಿನಲ್ಲಿ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಸ್ ಯುವಿ 2.0-ಲೀಟರ್ ಸಾಮರ್ಥ್ದ ನಾಲ್ಕು ಸಿಲಿಂಡರ್, ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಬಳಸುತ್ತದೆ. ಇದು 245 ಪಿಎಸ್ ಮತ್ತು 500 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 9 ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಎಸ್ ಯುವಿ 0-100 ಕಿ.ಮೀ ವೇಗವನ್ನು 7.2 ಸೆಕೆಂಡುಗಳಲ್ಲಿ ಕ್ರಮಿಸಬಲ್ಲದು. ಒದರ ಟಾಪ್ ಸ್ಪೀಡ್ ಅನ್ನು 225 ಕಿ.ಮೀ. ಜಿಎಲ್ಇಯ ಇನ್ನೂ ಎರಡು ದುಬಾರಿ ವೇರಿಯೆಂಟ್ ಹೊಂದಿದೆ. 400 ವೇರಿಯೆಂಟ್ ಮತ್ತು ಜಿಎಲ್ಇ 450 ವೇರಿಯೆಂಟ್. ಈ ವೇರಿಯೆಂಟ್ಗಳು ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ಕ್ರಮವಾಗಿ ರೂ.1.05 ಕೋಟಿ ಮತ್ತು ರೂ.1.04 ಕೋಟಿ.
ಜಿಎಲ್ಇ 400 3.0-ಲೀಟರ್ ಆರು ಸಿಲಿಂಡರ್ ಎಂಜಿನ್ ಅನ್ನು ಬಳಸಿದರೆ, 450 3.0-ಲೀಟರ್ ವಿ 6 ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ/ ಇದು 365 ಪಿಎಸ್ ಮತ್ತು 500 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಸಾಮಾನ್ಯ ವೇರಿಯೆಂಟ್ಗಳನ್ನು ಹೊರತುಪಡಿಸಿ, ಮರ್ಸಿಡಿಸ್ ಬೆಂಝ್ ಮಾರುಕಟ್ಟೆಯಲ್ಲಿ ಜಿಎಲ್ಇಯ ಎಎಂಜಿ ಆವೃತ್ತಿಯನ್ನು ಸಹ ನೀಡುತ್ತದೆ. ಈ ಟ್ರಿಮ್ ಸಾಮಾನ್ಯ ಆವೃತ್ತಿಗಳಿಗಿಂತ ಭಿನ್ನವಾದ ಕೂಪ್ ವಿನ್ಯಾಸವನ್ನು ಪಡೆಯುತ್ತದೆ. ಇದು 3.0-ಲೀಟರ್, ಆರು ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಇದು 435 ಬಿಹೆಚ್ ಪಿ ಮತ್ತು 520 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.64 ಕೋಟಿಗಳಾಗಿದೆ.