mercedes benz : 90 ಲಕ್ಷ ರೂಪಾಯಿಯ ಐಷಾರಾಮಿ ಕಾರು ಖರೀದಿಸಿದ ಕ್ರಿಕೆಟಿಗ ಉನಾದ್ಕಟ್​, ಇಲ್ಲಿದೆ ವಿಡಿಯೊ Vistara News
Connect with us

ಆಟೋಮೊಬೈಲ್

mercedes benz : 90 ಲಕ್ಷ ರೂಪಾಯಿಯ ಐಷಾರಾಮಿ ಕಾರು ಖರೀದಿಸಿದ ಕ್ರಿಕೆಟಿಗ ಉನಾದ್ಕಟ್​, ಇಲ್ಲಿದೆ ವಿಡಿಯೊ

VISTARANEWS.COM


on

Jayadev undkat
Koo

ಅಹಮದಾಬಾದ್​: ಭಾರತ ತಂಡದ ಕ್ರಿಕೆಟಿಗರಿಗೆ ಐಷಾರಾಮಿ ಕಾರುಗಳ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ಅಂತೆಯೇ ಪ್ರತಿಭಾವಂತ ಎಡಗೈ ವೇಗದ ಬೌಲರ್​ ಜಯದೇವ್ ಉನಾದ್ಕಟ್ ಇತ್ತೀಚೆಗೆ ತಮ್ಮ ಆಕರ್ಷಕ ಕಾರು ಸಂಗ್ರಹಕ್ಕೆ ಹೊಳೆಯುವ ಮರ್ಸಿಡಿಸ್ ಬೆಂಝ್ ಜಿಎಲ್ಇ 300 ಡಿ ಎಸ್ ಯುವಿಯನ್ನು (mercedes benz) ಸೇರಿಸಿಕೊಂಡಿದ್ದಾರೆ. ಸುಮಾರು 90 ಲಕ್ಷ ರೂ.ಗಳ ಬೆಲೆಯ ಸೊಗಸಾದ ಎಸ್​​ಯುವಿ ಖರೀದಿಯ ಮಾಹಿತಿಯನ್ನು ಡೀಲರ್​ಶಿಪ್​ ಹಂಚಿಕೊಂಡಿದೆ. ಕಾರನ್ನು ಡೆಲಿವರಿ ತೆಗೆದುಕೊಳ್ಳುವ ಚಿತ್ರಗಳನ್ನು ಕ್ರಿಕೆಟಿಗ ಸ್ವತಃ ತಮ್ಮ ವೈಯಕ್ತಿಕ ಇನ್ಸ್ಟಾಗ್ರಾಮ್ ಪ್ರೊಫೈಲ್​ನಲ್ಲಿ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಡೆಲಿವರಿ ವೀಡಿಯೊದಲ್ಲಿ, ಜಯದೇವ್ ಉನಾದ್ಕಟ್ ತಮ್ಮ ಪತ್ನಿ ಮತ್ತು ಕುಟುಂಬದೊಂದಿಗೆ ಮರ್ಸಿಡಿಸ್ ಬೆಂಜ್​ ಡೀಲರ್​ಶಿಪ್​ ಆಗಮಿಸುತ್ತಿರುವುದು ಕಂಡುಬಂದಿದೆ. ಈ ವೀಡಿಯೊದಲ್ಲಿ ಕ್ರಿಕೆಟ್ ತಾರೆ ತನ್ನ ಹೊಸ ಕಾರಿನ ಕವರ್​ ತೆಗೆಯುವ ಮೂಲಕ ಅನಾವರಣಗೊಳಿಸಿದ್ದಾರೆ. ಅದ್ಭುತವಾದ ಜಿಎಲ್ಇ 300 ಡಿ ಎಸ್​​ಯುವಿ ಕಪ್ಪು ಬಣ್ಣದ ಕ್ಲಾಸಿ ಶೇಡ್​ನಲ್ಲಿ ಹೊಂದಿದೆ. ಶೋರೂಮ್​ ಒಳಗೆ ಕಾಲಿಡುತ್ತಿದ್ದಂತೆ ಜಯದೇವ್ ಅವರ ಉತ್ಸಾಹವು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಈ ಸಂದರ್ಭದ ನೆನಪಿಗಾಗಿ, ಅವರು ಕ್ರಿಕೆಟ್ ಚೆಂಡಿಗೆ ಸಹಿ ಹಾಕಿ ಶೋ ರೂಮ್​ಗೆ ನೀಡಿದರು.

ಜಯದೇವ್ ಉನಾದ್ಕಟ್ ತಮ್ಮ ಇನ್​ಸ್ಟಾಗ್ರಾಮ್ ಹ್ಯಾಂಡಲ್​​ನಲ್ಲಿ ಕಾರು ವಿತರಣೆಯ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕ್ರಿಕೆಟಿಗ ಮತ್ತು ಅವರ ಪತ್ನಿ ತಮ್ಮ ಹೊಚ್ಚ ಹೊಸ ಮರ್ಸಿಡಿಸ್ ಜಿಎಲ್ಇ 300 ಡಿ ಯೊಂದಿಗೆ ಪೋಸ್ ನೀಡಿದ್ದರೆ. ಸಹ ಕ್ರಿಕೆಟಿಗರು, ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಜನಪ್ರಿಯ ಎಸ್​​ಯುವಿ

ಜಯದೇವ್ ಉನಾದ್ಕಟ್ ಆಯ್ಕೆ ಮಾಡಿದ ಎಸ್​​ಯುವಿ ಮರ್ಸಿಡಿಸ್ ಬೆಂಝ್ ಜಿಎಲ್ ಇ 300ಡಿ. ಜರ್ಮನ್ ಐಷಾರಾಮಿ ಕಾರು ತಯಾರಕರು ಪ್ರಸ್ತುತ ಭಾರತದಲ್ಲಿ ನೀಡುವ ಅತ್ಯಂತ ಜನಪ್ರಿಯ ಎಸ್​ಯುವಿಗಳಲ್ಲಿ ಇದು ಒಂದಾಗಿದೆ. ಇದು ಹೆಚ್ಚು ಬೇಡಿಕೆಯ ಮರ್ಸಿಡಿಸ್ ವಾಹನ. ಜಿಎಲ್​​ ಸಿ ಮತ್ತು ಜಿಎಲ್​​ಎಸ್ ನಡುವೆ ಸ್ಥಾನ ಪಡೆದಿರುವ ಜಿಎಲ್ ಇ 300ಡಿ ತನ್ನ ಉನ್ನತ ವಿನ್ಯಾಸ ಮತ್ತು ಆಧುನಿಕ ಐಷಾರಾಮಿ ಚಾಲನಾ ಅನುಭವವನ್ನು ವ್ಯಾಖ್ಯಾನಿಸುವ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ.

ಮರ್ಸಿಡಿಸ್ ಬೆಂಝ್ ಜಿಎಲ್ಇ 300ಡಿ ಎಸ್​​ಯುವಿಯಲ್ಲಿ ಏಳು ಏರ್ ಬ್ಯಾಗ್​​ಗಳು, ನಾಲ್ಕು ಜೋನ್​ ಕ್ಲೈಮೇಟ್​ ಕಂಟ್ರೋಲ್​​, 12.3-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಮತ್ತು ಅದೇ ಗಾತ್ರದ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಎಲೆಕ್ಟ್ರಿಕ್ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಸೀಟ್ ಗಳು, ಪನೋರಮಿಕ್ ಸನ್ ರೂಫ್, ಎಲ್ಇಡಿ ಹೆಡ್ ಲ್ಯಾಂಪ್ ಗಳು, ಹ್ಯಾಂಡ್ಸ್-ಫ್ರೀ ಪಾರ್ಕಿಂಗ್, ಪವರ್ಡ್ ಟೈಲ್ ಗೇಟ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಎಸ್​​ಯುವಿಯು ಲೆದರ್ಸೀ ಟುಗಳು, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಕ್ರೂಸ್ ಕಂಟ್ರೋಲ್ ಮತ್ತು ಇನ್ನೂ ಅನೇಕ ವೈಶಿಷ್ಟ್ಯಗಳನ್ನು ನೀಡುತ್ತದೆ.

ಇದನ್ನೂ ಓದಿ : Viral News : ಶೋರೂಮ್​ನಿಂದ ಫೋಕ್ಸ್​ವ್ಯಾಗನ್​ ಕಾರನ್ನು ಕದ್ದ, ಪೆಟ್ರೋಲ್ ಹಾಕಲು ಹೋಗಿ ಸಿಕ್ಕಿ ಬಿದ್ದ!

ಪವರ್​ಟ್ರೇನ್ ಹೇಗಿದೆ?

ಮರ್ಸಿಡಿಸ್ ಬೆಂಝ್ ಜಿಎಲ್ಇ 300ಡಿ ಕಾರಿನಲ್ಲಿ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಸ್ ಯುವಿ 2.0-ಲೀಟರ್​ ಸಾಮರ್ಥ್ದ ನಾಲ್ಕು ಸಿಲಿಂಡರ್, ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಬಳಸುತ್ತದೆ. ಇದು 245 ಪಿಎಸ್ ಮತ್ತು 500 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 9 ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಎಸ್ ಯುವಿ 0-100 ಕಿ.ಮೀ ವೇಗವನ್ನು 7.2 ಸೆಕೆಂಡುಗಳಲ್ಲಿ ಕ್ರಮಿಸಬಲ್ಲದು. ಒದರ ಟಾಪ್ ಸ್ಪೀಡ್ ಅನ್ನು 225 ಕಿ.ಮೀ. ಜಿಎಲ್ಇಯ ಇನ್ನೂ ಎರಡು ದುಬಾರಿ ವೇರಿಯೆಂಟ್​ ಹೊಂದಿದೆ. 400 ವೇರಿಯೆಂಟ್​ ಮತ್ತು ಜಿಎಲ್ಇ 450 ವೇರಿಯೆಂಟ್​. ಈ ವೇರಿಯೆಂಟ್​​ಗಳು ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ಕ್ರಮವಾಗಿ ರೂ.1.05 ಕೋಟಿ ಮತ್ತು ರೂ.1.04 ಕೋಟಿ.

ಜಿಎಲ್ಇ 400 3.0-ಲೀಟರ್ ಆರು ಸಿಲಿಂಡರ್ ಎಂಜಿನ್ ಅನ್ನು ಬಳಸಿದರೆ, 450 3.0-ಲೀಟರ್ ವಿ 6 ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ/ ಇದು 365 ಪಿಎಸ್ ಮತ್ತು 500 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಸಾಮಾನ್ಯ ವೇರಿಯೆಂಟ್​​ಗಳನ್ನು ಹೊರತುಪಡಿಸಿ, ಮರ್ಸಿಡಿಸ್ ಬೆಂಝ್ ಮಾರುಕಟ್ಟೆಯಲ್ಲಿ ಜಿಎಲ್ಇಯ ಎಎಂಜಿ ಆವೃತ್ತಿಯನ್ನು ಸಹ ನೀಡುತ್ತದೆ. ಈ ಟ್ರಿಮ್​ ಸಾಮಾನ್ಯ ಆವೃತ್ತಿಗಳಿಗಿಂತ ಭಿನ್ನವಾದ ಕೂಪ್​ ವಿನ್ಯಾಸವನ್ನು ಪಡೆಯುತ್ತದೆ. ಇದು 3.0-ಲೀಟರ್, ಆರು ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಇದು 435 ಬಿಹೆಚ್ ಪಿ ಮತ್ತು 520 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.64 ಕೋಟಿಗಳಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಆಟೋಮೊಬೈಲ್

Hydrogen fuel cell Bus : ದೆಹಲಿಯಲ್ಲಿ ಸಂಚರಿಸಲಿದೆ ಅತ್ಯಾಧುನಿಕ ಹೈಡ್ರೋಜನ್ ಬಸ್​, ಏನಿದರ ಪ್ರಯೋಜನ?

ದೆಹಲಿಯಲ್ಲಿ ಮೊದಲ ಗ್ರೀನ್​ ಹೈಡ್ರೋಜನ್ ಫ್ಯೂಯಲ್ ಸೆಲ್ (Hydrogen fuel cell) ಬಸ್​ಗೆ ಕೇಂದ್ರ ಸಚಿವರು ಹಸಿರು ನಿಶಾನೆ ತೋರಲಿದ್ದಾರೆ. ಇಂಡಿಯನ್ ಆಯಿಲ್ 15 ಫ್ಯೂಯಲ್ ಸೆಲ್ ಬಸ್ ಗಳ ಪ್ರಯೋಗಗಳನ್ನು ನಡೆಸಲಿದೆ.

VISTARANEWS.COM


on

Indian Oil
Koo

ನವ ದೆಹಲಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ದೆಹಲಿಯ ಕರ್ತವ್ಯ ಪಥದಲ್ಲಿ ಭಾರತದ ಮೊದಲ ಹಸಿರು ಹೈಡ್ರೋಜನ್ ಇಂಧನ ಕೋಶ ಚಾಲಿತ ಬಸ್​ (Hydrogen fuel cell Bus) ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ನಿಗಿದತ ಮಾರ್ಗಗಳಲ್ಲಿ ಹಸಿರು ಹೈಡ್ರೋಜನ್ ನಿಂದ ಚಾಲಿತ 15 ಬಸ್ ಗಳ ಕಾರ್ಯಾಚರಣೆ ನಡೆಯಲಿದೆ. ಇಂಡಿಯನ್ ಆಯಿಲ್ ಸಂಸ್ಥೆಯು ಪ್ರಯೋಗಾರ್ಥವಾಗಿ ಈ ಬಸ್​ಗಳ ಸಂಚಾರವನ್ನು ನಡೆಸಲಿದೆ. ಇಂಡಿಯಾ ಗೇಟ್ ನಲ್ಲಿ ಮೊದಲ ಎರಡು ಫ್ಯೂಯಲ್ ಸೆಲ್ ಬಸ್​ಗಳಿಗೆ ಚಾಲನೆ ಸಿಗಲಿದೆ.

ಈ ಯೋಜನೆಯು ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಲಿದೆ. ಫ್ಯೂಯಲ್ ಸೆಲ್ ಬಸ್ ಕಾರ್ಯಾಚರಣೆಗಾಗಿ 350 ಬಾರ್ ಒತ್ತಡದಲ್ಲಿ ಗ್ರೀನ್​ ಹೈಡ್ರೋಜನ್ ಒದಗಿಸುವ ಭಾರತದ ಮೊದಲ ಯೋಜನೆಯಾಗಿದೆ. ಇಂಡಿಯನ್ ಆಯಿಲ್ ಫರಿದಾಬಾದ್​ನಲ್ಲಿರುವ ತನ್ನ ಆರ್ &ಡಿ ಕ್ಯಾಂಪಸ್​ನಲ್ಲಿ ಇಂಧನ ತುಂಬಿಸುವ ಸೌಲಭ್ಯವನ್ನು ಸ್ಥಾಪಿಸಿದೆ, ಇದು ಸೌರ ಪಿವಿ ಫಲಕಗಳನ್ನು ಬಳಸಿಕೊಂಡು ವಿದ್ಯುದ್ವಿಭಜನೆಯ ಮೂಲಕ ಉತ್ಪಾದಿಸಿದ ಹಸಿರು ಹೈಡ್ರೋಜನ್​ ಅನ್ನು ತುಂಬಿಸಲಿದೆ.

ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಂಡು ಉತ್ಪಾದಿಸುವ ಹಸಿರು ಹೈಡ್ರೋಜನ್ ಅನ್ನು ಕಡಿಮೆ ಇಂಗಾಲದ ಇಂಧನ ಮತ್ತು ಆಮದು ಮಾಡಲಾಗುವ ಪೆಟ್ರೋಲಿಯಂ ಇಂಧನಗಳಿಗೆ ಪರ್ಯಾಯವೆಂದು ಹೇಳಲಾಗಿದೆ . ಇದು ಭಾರತದ ಹೇರಳವಾದ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತದೆ. ಪೆಟ್ರೋಲಿಯಂ ಸಂಸ್ಕರಣೆ, ರಸಗೊಬ್ಬರ ಉತ್ಪಾದನೆ ಮತ್ತು ಉಕ್ಕು ಉತ್ಪಾದನೆಯಂತಹ ಕ್ಷೇತ್ರಗಳಿಗೂ ಪೂರಕವಾಗಿದೆ.

ಇದನ್ನೂ ಓದಿ : Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್​ನ ಚಕ್ರದ​ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !

ಸಂಭಾವ್ಯ ಇಂಧನ, ಶೂನ್ಯ ಮಾಲಿನ್ಯ

ಇ-ಮೊಬಿಲಿಟಿ ಕ್ಷೇತ್ರದಲ್ಲಿ ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನವು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಹೈಡ್ರೋಜನ್ ಕೋಶಗಳನ್ನು ಇಂಧನವಾಗಿ ಪರಿವರ್ತಿಸುವ ತಾಂತ್ರಿಕತೆ ಇದಾಗಿದೆ. ಇಂಧನ ಕೋಶಗಳಲ್ಲಿನ ಎಲೆಕ್ಟ್ರೋ-ರಾಸಾಯನಿಕ ಪ್ರಕ್ರಿಯೆಯು ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕರೆಂಟ್​ ಮೂಲಕ ಬಸ್​ಗಳಲ್ಲಿ ಅಳವಡಿಸಿರುವ ಬ್ಯಾಟರಿಗಳನ್ನು ಚಾರ್ಜ್​ ಮಾಡಲಾಗುತ್ತದೆ. ಅದರ ಮೂಲಕ ಬಸ್​ನ ಮೋಟಾರ್​ಗೆ ಚಾಲನೆ ನೀಡಲಾಗುತ್ತದೆ.

ಬ್ಯಾಟರಿ ಚಾಲಿತ ವಾಹನಗಳಿಗೆ ಹೋಲಿಸಿದರೆ ಫ್ಯೂಯಲ್ ಸೆಲ್ ವಾಹನಗಳು ಕಡಿಮೆ ಸಮಯದಲ್ಲಿ ಇಂಧನ ತುಂಬಿಸುವ ಅನುಕೂಲಗಳನ್ನು ಹೊಂದಿವೆ. ಹೈಡ್ರೋಜನ್ ಅನಿಲವನ್ನು ಹೆಚ್ಚಿನ ಒತ್ತಡದಲ್ಲಿ ಸಂಗ್ರಹಿಸಲಾಗುತ್ತದೆ. ಸಾಮಾನ್ಯವಾಗಿ 350 ಬಾರ್​ನಲ್ಲಿ ಇರುತ್ತದೆ. ಬ್ಯಾಟರಿ ಚಾಲಿತ ವಾಹನಗಳನ್ನು ಚಾರ್ಜ್​ ಮಾಡಲೆಂದು ದೀರ್ಘ ಕಾಲ ನಿಲ್ಲಿಸಬೇಕಾಗುತ್ತದೆ. ಆದರೆ, ಇದರಲ್ಲಿ ಪೆಟ್ರೋಲ್​ನಂತೆಯೇ ಹೈಡ್ರೋಜನ್ ತುಂಬಿಸಬಹುದಾಗಿದೆ.

ಈ ಮೊದಲ ಎರಡು ಬಸ್ಸುಗಳು ಬಿಡುಗಡೆಯಾದ ನಂತರ, ದೀರ್ಘಕಾಲೀನ ಕಾರ್ಯಕ್ಷಮತೆ ಮತ್ತು ಬಾಳಿಕೆಯನ್ನು ಪರಿಶೀಲಿಸಲು 300,000 ಕಿಲೋಮೀಟರ್ ಸಂಚಾರ ನಡೆಸಲಿದೆ. ಇದು ಶೂನ್ಯ ಹೊರ ಸೂಸುವಿಕೆಯನ್ನು ಹೊಂದಿದೆ.

Continue Reading

ಆಟೋಮೊಬೈಲ್

HSRP Number Plate: ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್‌ ಪ್ಲೇಟ್‌ ಪಡೆಯೋದು ಹೇಗೆ? ಅಳವಡಿಸದಿದ್ರೆ ಭಾರಿ ದಂಡ!

HSRP Number Plate: ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ದ್ವಿಚಕ್ರ, ತ್ರಿಚಕ್ರ ಸೇರಿ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸುವುದು ಕಡ್ಡಾಯವಾಗಿದೆ. ಎಚ್‌ಎಸ್‌ಆರ್‌ಪಿ ಪಡೆಯುವುದು ಹೇಗೆ ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

VISTARANEWS.COM


on

Edited by

HSRP Number Plate
Koo

ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಕಡ್ಡಾಯವಾಗಿ ಅಳವಡಿಸಬೇಕು ಎಂದು ಈಗಾಗಲೇ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗಾಗಿ ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನಗಳು ಅವಕಾಶವಿದೆ. ಹೀಗಾಗಿ ಗಡುವಿನೊಳಗೆ ವಾಹನ ಮಾಲೀಕರು ಹೊಸ ಮಾದರಿಯ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಬೇಕು, ಇಲ್ಲದಿದ್ದರೆ 500ರಿಂದ 1000 ರೂ. ದಂಡ ಕಟ್ಟಬೇಕಾಗುತ್ತದೆ.

2019ರ ಏಪ್ರಿಲ್‌ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು (High Security Registration Plate-ಎಚ್‌ಎಸ್‌ಆರ್‌ಪಿ) ಕಡ್ಡಾಯವಾಗಿ ಅಳವಡಿಸಬೇಕು ಎಂದು ಆಗಸ್ಟ್‌ 17ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದೇ ರೀತಿ ಆ.18ರಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಹೀಗಾಗಿ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ.

ಅರ್ಜಿ ಸಲ್ಲಿಕೆಗೆ ನವೆಂಬರ್‌ 17 ಕೊನೇ ದಿನ

ಯೋಗೇಶ್ ಎ ಎಂ

ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನ, ಪ್ರಯಾಣಿಕ ಕಾರು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಯೋಗೇಶ್ ಎ.ಎಂ ಅವರು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

ಏನಿದು ಎಚ್ಎಸ್ಆರ್‌ಪಿ ನಂಬರ್‌ ಪ್ಲೇಟ್‌?

ಎಚ್‌ಎಸ್‌ಆರ್‌ಪಿ ಎಂದರೆ ಅತಿ ಸುರಕ್ಷಿತ ನೋಂದಣಿ ಫಲಕವಾಗಿದೆ. ಇವುಗಳನ್ನು ಅಲ್ಯೂಮಿನಿಯಂ ಲೋಹದಿಂದ ಮಾಡಿರುತ್ತಾರೆ. ಈ ಪ್ಲೇಟ್‌ನ ಮೇಲ್ಭಾಗದ ಎಡಬದಿಯಲ್ಲಿ ಅಶೋಕ ಚಕ್ರ ಮುದ್ರೆಯ 20X20 ಮಿ.ಮೀ ಅಳತೆಯ ಕ್ರೋಮಿಯಂ ಹೋಲೋಗ್ರಾಮ್‌ ಇರುತ್ತದೆ. ಇಂಗ್ಲಿಷ್ ಅಕ್ಷರಗಳು ಹಾಗೂ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತವೆ. ಈ ನಂಬರ್‌ ಪ್ಲೇಟ್‌ಗಳನ್ನು ಎರಡು ಲಾಕ್‌ ಪಿನ್‌ಗಳನ್ನು ಬಳಸಿ ಅಳವಡಿಸುತ್ತಾರೆ. ಇದರಿಂದ ಒರಿಜಿನಲ್‌ ಯಾವುದು, ನಕಲಿ ಯಾವುದು ಎಂದು ಸುಲಭವಾಗಿ ಗುರುತಿಸಬಹುದು.

ಎಚ್ಎಸ್ಆರ್‌ಪಿ ಪಡೆಯುವುದು ಹೇಗೆ?

  1. ಕರ್ನಾಟಕ ಸಾರಿಕೆ ಇಲಾಖೆ ವೆಬ್‌ಸೈಟ್‌ ಅಥವಾ ಸೊಸೈಟಿ ಆಫ್‌ ಇಂಡಿಯನ್‌ ಆಟೋಮೊಬೈಲ್‌ ಮ್ಯಾನುಫ್ಯಾಕ್ಚರರ್ಸ್‌ (ಎಸ್‌ಐಎಎಂ) ವೆಬ್‌ಸೈಟ್‌ ಭೇಟಿ ನೀಡಿ ಮತ್ತು Book HSRP ಅನ್ನು ಕ್ಲಿಕ್‌ ಮಾಡಿ.
  2. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.
  3. ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
  4. HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ.
  5. HSRP ಶುಲ್ಕವನ್ನು ಅನ್‌ಲೈನ್‌ನಲ್ಲಿ ಪಾವತಿಸಿ, ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
  6. ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ ರವಾನಿಸಲಾಗುವುದು.
  7. ನಿಮ್ಮ ಅನುಕೂಲಕ್ಕೆ ತಕ್ಕಂತಹ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.
  8. ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಿ.
  9. ವಾಹನ ಮಾಲೀಕರ ಕಚೇರಿ ಆವರಣ / ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆ.

ಇದನ್ನೂ ಓದಿ | HSRP Number Plate : ಹಳೆ ವಾಹನಗಳಿಗೂ ಇನ್ನು HSRP ನಂಬರ್‌ ಪ್ಲೇಟ್‌ ಕಡ್ಡಾಯ; ನ. 17ರ ನಂತ್ರ ಬೀಳುತ್ತೆ ದಂಡ!

ಪ್ರಮುಖ ಅಂಶಗಳು

  1. ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟ್‌ ಅಥವಾ ಎಸ್‌ಐಎಎಂ ವೆಬ್‌ಸೈಟ್‌ ಮೂಲಕ HSRP ಅಳವಡಿಕೆಗೆ ಕಾಯ್ದಿರಿಸಿಕೊಳ್ಳಿ.
  2. ಯಾವುದೇ ತೆರೆದ ಮಾರುಕಟ್ಟೆಯ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹೊಲೊಗ್ರಾಮ್ / IND ಮಾರ್ಕ್ ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ HSRP, ಒಂದೇ ರೀತಿಯ ಪ್ಲೇಟ್‌ಗಳು, ಸ್ಮಾರ್ಟ್ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ. ಅವುಗಳು HSRP ಫಲಕಗಳಾಗಿರುವುದಿಲ್ಲ.
  3. HSRP ಅಳವಡಿಸದ ಹೊರತು, ವಾಹನ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು, ನಮೂದು, ರದ್ದತಿ, ಅರ್ಹತಾಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳಿಗೆ ಅನುಮತಿಸುವುದಿಲ್ಲ.
  4. ಶುಲ್ಕ ಪಾವತಿಸಿರುವ ಪ್ರಕರಣದಲ್ಲಿ HSRP ಅಳವಡಿಕೆಗೆ ನಿಗದಿತ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ ಎಚ್‌ಎಸ್‌ಆರ್‌ಪಿ ರಸೀದಿಯನ್ನು ಪ್ರಸ್ತುತಪಡಿಸುವ ವಾಹನಗಳಿಗೆ ಯಾವುದೇ ದಂಡವಿರುವುದಿಲ್ಲ.
  5. HSRP ಅಳವಡಿಕೆಗೆ ನವೆಂಬರ್‌ 17 ಆಗಿದ್ದು, ಕೂಡಲೇ ಅರ್ಜಿ ಸಲ್ಲಿಸಿ.

Continue Reading

ಆಟೋಮೊಬೈಲ್

Nissan Motors : ಕ್ರಿಕೆಟ್​ ವಿಶ್ವ ಕಪ್​ ಹಿನ್ನೆಲೆಯಲ್ಲಿ ಮ್ಯಾಗ್ನೈಟ್​ ಕುರೊ ಆವೃತ್ತಿ ಬಿಡುಗಡೆ

ನಿಸ್ಸಾನ್​ ಮ್ಯಾಗ್ನೈಟ್​​ ಕುರೊ ಅವೃತ್ತಿಯು ಪುರುಷರ ಏಕದಿನ ವಿಶ್ವ ಕಪ್​ ಹಿನ್ನೆಲೆಯಲ್ಲಿ ನಿಸಾನ್ ಮೋಟರ್​​​ (Nissan Motors) ಬಿಡುಗಡೆ ಮಾಡಿದೆ.

VISTARANEWS.COM


on

NIssan KURO
Koo

ಬೆಂಗಳೂರು: ಐಸಿಸಿ ಪುರುಷರ ಕ್ರಿಕೆಟ್ ವಿಶ್ವ ಕಪ್ 2023ನ ಅಧಿಕೃತ ಪಾಲುದಾರಿಕೆ ಪಡೆದಿರುವ ನಿಸಾನ್ (Nissan Motors) ತನ್ನ ಮ್ಯಾಗ್ಹೈಟ್​ ಕಾರಿನ ಕುರೊ (KURO)) ವಿಶೇಷ ಆವೃತ್ತಿಯ ಕಾರನ್ನು ಮಾರುಕಟ್ಟೆಗೆ ಇಳಿಸಿದೆ. ಐಸಿಸಿ ವಿಶ್ವಕಪ್​​ನೊಂದಿಗಿನ ಒಡಂಬಡಿಕೆಯನ್ನು ಎತ್ತಿ ತೋರಿಸುವ ಉದ್ದೇಶದಿಂದ ಗ್ರಾಹಕರಿಗೆ ಪ್ರೀಮಿಯಂ ಆಯ್ಕೆ ಎನಿಸುವ Magnite KURO ಪರಿಚಯಿಸಲಾಗಿದೆ ಎಂದು ನಿಸಾನ್ ಮೋಟರ್ ಇಂಡಿಯಾ (NMIPL) ಹೇಳಿದೆ.

ಸೆಪ್ಟೆಂಬರ್​ 14ರಿಂದ ಈ ವಿಶೇಷ ಆವೃತ್ತಿಯ ಕಾರಿನ ಮುಂಗಡ ಬುಕಿಂಗ್ ಅನ್ನು ಆರಂಭಿಸಲಾಗಿದೆ. ‘ ಕುರೊ ಎಂದರೆ ಜಪಾನಿ ಭಾಷೆಷಯಲ್ಲಿ ಕಪ್ಪು ಎಂದರ್ಥ. ಹೀಗಾಗಿ ಕಪ್ಪು ಬಣ್ಣದ ಕುರೊ ಆವೃತ್ತಿಯಲ್ಲಿ ನಿಸಾನ್​ ಬಿಡುಗಡೆ ಮಾಡಿದೆ. KURO ಥೀಮ್ ಹೊಂದಿರುವ ಎಸ್​​ಯುವಿ ಪ್ರೀಮಿಯಂ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಯ ಪ್ರತೀಕವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ನಿಸಾನ್ ಮ್ಯಾಗ್ನೈಟ್ KURO ವಿಶೇಷ ಆವೃತ್ತಿಯು ಈಗಾಗಲೇ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಆರಂಭಿಸಿದೆ. ಈ ಬಹುನಿರೀಕ್ಷಿತ ವಾಹನವನ್ನು ಅಕ್ಟೋಬರ್ 2023 ರಲ್ಲಿ ಅಧಿಕೃತವಾಗಿ ರಸ್ತೆಗಿಳಿಯಲಿದೆ. ಆ ಸಂದರ್ಭದಲ್ಲಿಯೇ ಇದರ ಬೆಲೆಯೂ ಪ್ರಕಟವಾಗಲಿದೆ. ಮ್ಯಾಗ್ನೈಟ್ XV MT, ಮ್ಯಾಗ್ನೈಟ್ ಟರ್ಬೋ XV MT ಮತ್ತು ಮ್ಯಾಗ್ನೈಟ್ ಟರ್ಬೋ XV CVT ಸೇರಿದಂತೆ ಎಲ್ಲಾ ವೇರಿಯೆಂಟ್​ಗಳಿಎ 11,000 ರೂಪಾಯಿ ಪಾವತಿಸಿ ಮುಂಗಡ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ.

ನಿಸಾನ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಅವರು ಮಾತನಾಡಿ “ಮೌಲ್ಯ ಮತ್ತು ನಾವೀನ್ಯತೆಯನ್ನು ಬಯಸುವ ವಿವೇಚನಾಶೀಲ ಗ್ರಾಹಕರಿಗಾಗಿ ಈ ಹಬ್ಬದ ಸೀಸನ್ ನಲ್ಲಿ ನಿಸಾನ್ ಮ್ಯಾಗ್ನೈಟ್ KURO ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಇದು ಅಸಾಧಾರಣ ಚಾಲನಾ ಅನುಭವಕ್ಕಾಗಿ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ. ಪ್ರೀಮಿಯಂ ಫೀಚರ್​ಗಳನ್ನು ನೀಡಲಾಗಿದೆ ಎಂದು ಹೇಳಿದರು.

ಕಪ್ನು ನೋಟ

ನಿಸಾನ್ ಮ್ಯಾಗ್ನೈಟ್ KURO ಆವೃತ್ತಿಯು ಆಕರ್ಷಕ ಆಲ್-ಬ್ಲ್ಯಾಕ್ ಎಕ್ಸ್​ಟೀರಿಯರ್​ ಹಾಗೂ ಇಂಟೀರಿಯರ್​ ಹೊಂದಿದೆ. ಪ್ರೀಮಿಯಂ ಲುಕ್ ಇರುವ ಇದು ಸ್ಟೈಲಿಶ್ ಆಗಿರಲಿದೆ. ಪ್ರಭಾವಶಾಲಿ ಮತ್ತು ಬೋಲ್ಡ್ ವಿನ್ಯಾಸವನ್ನು ಹೊಂದಿರುವ ಕಾರಿನ ಹೊರ ಭಾಗದಲ್ಲಿ ಬ್ಲ್ಯಾಕ್ ಗ್ರಿಲ್, ಸ್ಕಿಡ್ ಪ್ಲೇಟ್, ರೂಫ್ ರೇಲ್ಸ್, ಬ್ಲ್ಯಾಕ್ ಅಲಾಯ್ಸ್, ಬ್ಲ್ಯಾಕ್ ಫಿನಿಶರ್ ಅನ್ನು ಹೊಂದಿರುವ ಹೆಡ್ ಲ್ಯಾಂಪ್​ಗಳಿವೆ ವಿಶಿಷ್ಟವಾದ ಬ್ಯಾಡ್ಜ್ ಕೂಡ ನೀಡಲಾಗಿದೆ.

ಮ್ಯಾಗ್ನೈಟ್ KURO ವಿಶೇಷ ಆವೃತ್ತಿಯು ಪ್ರೀಮಿಯಂ ಗ್ಲಾಸ್ ಬ್ಲ್ಯಾಕ್ ಇನ್ ಸ್ಟ್ರುಮೆಂಟ್ ಪ್ಯಾನೆಲ್, ಬ್ಲ್ಯಾಕ್ ಇಂಟೀರಿಯರ್ ಅಸೆಂಟ್ಸ್, ಬ್ಲ್ಯಾಕ್ ಡೋರ್ ಟ್ರಿಮ್ ಇನ್ವರ್ಟ್ಸ್​ಗಳಿವೆ ವಿಶಿಷ್ಟವಾದ ಇಂಟೀರಿಯರ್ ಅನ್ನು ಇದು ಒಳಗೊಂಡಿದೆ. ಈ ವಿಶೇಷ ಆವೃತ್ತಿಯು 360 ಡಿಗ್ರಿ ಅರೌಂಡ್ ವ್ಯೂವ್ ಮಾನಿಟರ್ (AVM), ವಿಶಾಲವಾದ IRVM, ಥೀಮ್ಡ್ ಫ್ಲೋರ್ ಮ್ಯಾಟ್​​ಗಳಿವೆ. ಸೆಂಟರ್ ಕನ್ಸೋಲ್ ಆರ್ಮ್ ರೆಸ್ಟ್ ಮತ್ತು ಹೆಚ್ಚು ಅನುಕೂಲತೆ ಹಾಗೂ ಸ್ಟೈಲ್ ಗಾಗಿ ವೈರ್ ಲೆಸ್ ಚಾರ್ಜರ್ ಸೇರಿದಂತೆ ಅನೇಕ ಫೀಚರ್​ಗಳನ್ನು ಕೊಡಲಾಗಿದೆ.

ಇದನ್ನೂ ಓದಿ : Tata Nexon EV : ಟಾಟಾ ನೆಕ್ಸಾನ್ ಇವಿ ಫೇಸ್​ಲಿಫ್ಟ್ ಭಾರತದಲ್ಲಿ ಬಿಡುಗಡೆ

ನಿಸಾನ್ ಮ್ಯಾಗ್ನೈಟ್ ಅತ್ಯುತ್ತಮ ಸುರಕ್ಷತಾ ಮಾನದಂಡಗಳನ್ನು ಹೊಂದಿದೆ. ಇದು ಗ್ಲೋಬಲ್ NCAP ಯಿಂದ ಸೇಫ್ಟಿ ರೇಟಿಂಗ್ ಫಾರ್ ಅಡಲ್ಟ್ ಆಕ್ಯುಪೆಂಟ್ ಮಾನದಂಡದಲ್ಲಿ 4 ಸ್ಟಾರ್ ಗಳನ್ನು ಪಡೆದುಕೊಂಡಿದೆ. ಇತ್ತೀಚೆಗೆ ನಿಸಾನ್ ಅನ್ನು ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯತೆಗಳನ್ನು ಪರಿಚಯಿಸುವ ಮೂಲಕ ಮ್ಯಾಗ್ನೈಟ್ ಅನ್ನು ಮೇಲ್ದರ್ಜೆಗೇರಿಸಿದೆ.

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), · ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ (TCS), ಹಿಲ್ ಸ್ಟಾರ್ಟ್ ಅಸಿಸ್ಟ್ (HAS), · ಟೈರ್ ಪ್ರೆಸರ್ ಮಾನಿಟರಿಂಗ್ ಸಿಸ್ಟಂ (TPMS) ಸೇರಿದಂತೆ ಅನೇಕ ಫೀಚರ್​ಗಳಿವೆ.

ಜಪಾನ್ ವಿನ್ಯಾಸ

ಭಾರತದ B-SUV ವಿಭಾಗದಲ್ಲಿ ಮ್ಯಾಗ್ನೈಟ್ ಅತ್ಯುತ್ತಮವಾದ ಆಯ್ಕೆಯಾಗಿ ಪರಿಗಣಿಸಲ್ಪಟ್ಟಿದೆ. ಈ ವಾಹನವನ್ನು ಡಿಸೆಂಬರ್ 2020 ರಲ್ಲಿ ಬಿಡುಗಡೆ ಮಾಡಲಾಗಿದ್ದು, ಜಪಾನ್ ನ ವಿನ್ಯಾಸವನ್ನು ಬಳಸಿಕೊಂಡು ಭಾರತದಲ್ಲಿ ಉತ್ಪಾದನೆ ಮಾಡುವುದರೊಂದಿಗೆ `ಮೇಕ್-ಇನ್-ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ತತ್ವವನ್ನು ಅಳವಡಿಸಿಕೊಂಡಿದೆ.

ನಿಸಾನ್ ಇತ್ತೀಚೆಗೆ ನಿಸಾನ್ ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಇದರ ಆರಂಭಿಕ ಬೆಲೆ 7,39,000 (ಎಕ್ಸ್ ಶೋರೂಂ, ದೆಹಲಿ) ರೂಪಾಯಿಗಳಾಗಿತ್ತು. ನಿಸಾನ್ ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯು ಸುಧಾರಿತ ಇನ್ಫೋಟೇನ್ಮೆಂಟ್ ಸಿಸ್ಟಂ, ಪವರ್ –ಪ್ಯಾಕ್ಡ್ ಪರ್ಫಾರ್ಮೆನ್ಸ್, ಸುಧಾರಿತ ವೈಶಿಷ್ಟ್ಯತೆಗಳು ಮತ್ತು ಸುರಕ್ಷತಾ ಅಂಶಗಳನ್ನು ಮೇಲ್ದರ್ಜೆಗೇರಿಸಿ ಭಾರತೀಯ ಗ್ರಾಹಕರ ಪ್ರಯಾಣವನ್ನು ಮತ್ತಷ್ಟು ಸುಖಕರವಾಗುವಂತೆ ಮಾಡಿತ್ತು.

Continue Reading

ಆಟೋಮೊಬೈಲ್

Tata Nexon EV : ಟಾಟಾ ನೆಕ್ಸಾನ್ ಇವಿ ಫೇಸ್​ಲಿಫ್ಟ್ ಭಾರತದಲ್ಲಿ ಬಿಡುಗಡೆ

ಟಾಟಾ ಮೋಟಾರ್ಸ್ ಅಪ್​ಡೇಟ್​ ಮಾಡಿರುವ ನೆಕ್ಸಾನ್ ಇವಿ ಫೇಸ್ ಲಿಫ್ಟ್ (Tata Nexon EV) ಅನ್ನು ಹೊಸ ವಿನ್ಯಾಸ, ಹೊಸ ವೈಶಿಷ್ಟ್ಯಗಳು ಮತ್ತು ಸುಧಾರಿತ ಎಲೆಕ್ಟ್ರಿಕ್ ಪವರ್ ಟ್ರೇನ್​ನೊಂದಿಗೆ ಪರಿಚಯಿಸಿದೆ. ಬೆಲೆ 14.74 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ.

VISTARANEWS.COM


on

Tata Nexon
Koo

ಬೆಂಗಳೂರು: ಟಾಟಾ ಮೋಟಾರ್ಸ್ ನೆಕ್ಸಾನ್ ಇವಿ (Tata Nexon EV) ಫೇಸ್ ಲಿಫ್ಟ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ (Ex Showroom) ದರದಂತೆ 14.74 ಲಕ್ಷ ರೂಪಾಯಿಗಳ ಈ ಪರಿಚಯಾತ್ಮಕ ಬೆಲೆಗಳು ಸೀಮಿತ ಅವಧಿಗೆ ಮಾತ್ರ ಇರುತ್ತದೆ. ನಿರ್ದಿಷ್ಟ ಸಂಖ್ಯೆಯ ಬುಕ್ಕಿಂಗ್​ ಆದ ಬಳಿಕ ಬೆಲೆಯೇ ಏರಿಕೆಯಾಗಲಿದೆ ಎಂಬ ಸೂಚನೆಯನ್ನು ಕಂಪನಿ ನೀಡಿದೆ. ಹೊಸ ವಿನ್ಯಾಸ, ಹಲವಾರು ಹೊಸ ಫೀಚರ್​ಗಳೊಂದಿಗೆ ಹೊಸ ನೆಕ್ಸಾನ್​ ಇವಿ ಫೇಸ್​ಲಿಫ್ಟ್​ ಬಂದಿದೆ.

ಟಾಟಾ ನೆಕ್ಸಾನ್ ಭಾರತದ ಮಾರುಕಟ್ಟೆಯ ಜನಪ್ರಿಯ ಕಾಂಪ್ಯಾಕ್ಟ್ ಎಸ್ ಯುವಿ (Compact SUV) . ಇದರ ಎಲೆಕ್ಟ್ರಿಕ್ ರೂಪಾಂತರವು ನವೀಕರಿಸಿದ ವಿನ್ಯಾಸ, ಹೊಸ ವೈಶಿಷ್ಟ್ಯಗಳು ಮತ್ತು ಸುಧಾರಿತ ಎಲೆಕ್ಟ್ರಿಕ್ ಪವರ್ ಟ್ರೇನ್ ಸೇರಿದಂತೆ ಹಲವು ಹೊಸತನಗಳೊಂದಿಗೆ ಬಂದಿದೆ.

ಹೊಸ ವಿನ್ಯಾಸ

ಈ ಎಲೆಕ್ಟ್ರಿಕ್ ಎಸ್ ಯುವಿಯು ಹೊಸ ಬಾಹ್ಯ ವಿನ್ಯಾಸ, ನವೀಕರಿಸಿದ ಒಳಾಂಗಣ ಮತ್ತು ಹೊಸ ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿರುವ ಪೂರ್ತಿ ಮೇಕ್ ಓವರ್ ಗೆ ಒಳಗಾಗಿದೆ. ಟಾಟಾ ಮೋಟಾರ್ಸ್ ಈಗಾಗಲೇ ನೆಕ್ಸಾನ್ ಇವಿಯ 53,000ಕ್ಕೂ ಹೆಚ್ಚು ಯುನಿಟ್ ಗಳ ಮಾರಾಟ ಮಾಡಿದೆ. ಹೀಗಾಗಿ ಫೇಸ್ ಲಿಫ್ಟ್ ಮೂಲಕ ಯಶಸ್ಸನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದೆ.

2023ರ ಟಾಟಾ ನೆಕ್ಸಾನ್ ಇವಿ ಫೇಸ್ ಲಿಫ್ಟ್ ತನ್ನ ಆಂತರಿಕ ದಹನಕಾರಿ ಎಂಜಿನ್ (ಐಸಿಇ ಎಂಜಿನ್​) ಪ್ರತಿರೂಪದೊಂದಿಗೆ ಪಾದಾರ್ಪಣೆ ಮಾಡಿದೆ. ಪೆಟ್ರೋಲ್​ ಕಾರು ಬೆಲೆ 8.10 ಲಕ್ಷಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಐಸಿಇ ಚಾಲಿತ ನೆಕ್ಸಾನ್ ಫೇಸ್ ಲಿಫ್ಟ್ ನಂತೆಯೇ, ಇವಿ ರೂಪಾಂತರವು ಟಾಟಾದ ಕರ್ವ್ ಪರಿಕಲ್ಪನೆಯಿಂದ ವಿನ್ಯಾಸ ಸ್ಫೂರ್ತಿ ಪಡೆದಿದೆ. ಆದಾಗ್ಯೂ, ವಿಭಿನ್ನ ಏರ್ ಡ್ಯಾಮ್ ಮತ್ತು ಪೂರ್ಣ-ಅಗಲದ ಎಲ್ಇಡಿ ಲೈಟ್ ಬಾರ್ ಸೇರಿದಂತೆ ವಿಶಿಷ್ಟ ವೈಶಿಷ್ಟ್ಯಗಳಿವೆ. ಇದು ಏಳು ವಿಭಿನ್ನ ಪೇಂಟ್​ ಆಯ್ಕೆಯನ್ನು ನೀಡುತ್ತದೆ: ಎಂಪವರ್ಡ್ ಆಕ್ಸೈಡ್, ಪ್ರಿಸ್ಟೈನ್ ವೈಟ್, ಇಂಟೆನ್ಸಿ ಟೀಲ್, ಫ್ಲೇಮ್ ರೆಡ್, ಡೇಟೋನಾ ಗ್ರೇ, ಫಿಯರ್ಲೆಸ್ ಪರ್ಪಲ್ ಮತ್ತು ಕ್ರಿಯೇಟಿವ್ ಓಷನ್ ಎಂಬ ಬಣ್ಣಗಳಿವೆ.

12. ಇಂಚಿನ ಇನ್ಫೋಟೈನ್​ಮೆಂಟ್​ ಸಿಸ್ಟಮ್​

ನೆಕ್ಸಾನ್ ಇವಿ ಫೇಸ್ ಲಿಫ್ಟ್ ನ ಕ್ಯಾಬಿನ್ ನಲ್ಲಿ, ಹೊಸ ಫೀಚರ್​ಗಳನ್ನು ನೀಡಲಾಗಿದೆ. ವಿಶೇಷವೆಂದರೆ, ಎರಡು ದೊಡ್ಡ ಟಚ್​ಸ್ಕ್ರಿನ್​ ಸಿಸ್ಟಮ್​ಗಳಿವೆ. 12.3-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಇದರಲ್ಲಿದೆ. ಇದು ಕ್ಯಾಬಿನ್ ನ ಪ್ರೀಮಿಯಂ ಅನುಭವವನ್ನು ಹೆಚ್ಚಿಸುತ್ತದೆ.

ಹೊಸ ಸ್ಟೀರಿಂಗ್-ಮೌಂಟೆಡ್ ಪ್ಯಾಡಲ್ ಶಿಫ್ಟರ್, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್, ವೈರ್​​ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ವಾಯ್ಸ್ ಕಮಾಂಡ್ ಫಂಕ್ಷನಾಲಿಟಿ, ಎತ್ತರ-ಸರಿಹೊಂದಿಸಬಹುದಾದ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಏರ್ ಪ್ಯೂರಿಫೈಯರ್, ಸಬ್ ವೂಫರ್ ಹೊಂದಿರುವ ಜೆಬಿಎಲ್ ಆಡಿಯೊ ಸಿಸ್ಟಮ್ ಮತ್ತು ಸನ್ ರೂಫ್ ನೀಡಲಾಗಿದೆ.

ಆರು ಏರ್​ಬ್ಯಾಗ್​ಗಳು

ಸುರಕ್ಷತಾ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ 2023 ಟಾಟಾ ನೆಕ್ಸಾನ್ ಇವಿ ಫೇಸ್ ಲಿಫ್ಟ್ ಈಗ ಆರು ಏರ್ ಬ್ಯಾಗ್ ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ) ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ. ಹೆಚ್ಚುವರಿಯಾಗಿ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಆರೋಹಣ ಮತ್ತು ಇಳಿಯುವಿಕೆ ನಿಯಂತ್ರಣ, ಜೊತೆಗೆ ಹಿಂಭಾಗದ ಡಿಸ್ಕ್ ಬ್ರೇಕ್ ಗಳನ್ನು ಹೊಂದಿದೆ.

ಇದನ್ನೂ ಓದಿ :

ಪವರ್​ಟ್ರೇನ್​ ಹೇಗಿದೆ?

ಪವರ್ ಟ್ರೇನ್ ಗೆ ಹೋಗುವುದಾದರೆ, ಎಲೆಕ್ಟ್ರಿಕ್ ಎಸ್ ಯುವಿ ಈಗ ಹೊಸ ಜೆನ್ 2 ಮೋಟರ್ ಹೊಂದಿದೆ, ಇದು ಅದರ ಹಿಂದಿನದಕ್ಕಿಂತ 20 ಕೆ.ಜಿ ಹಗುರವಾಗಿದೆ. ಈ ನವೀಕರಿಸಿದ ಎಲೆಕ್ಟ್ರಿಕ್ ವಾಹನವು ಒಂದು ಬಾರಿ ಚಾರ್ಜ್ ಮಾಡಿದರೆ 465 ಕಿ.ಮೀ ವರೆಗೆ ರೇಂಜ್​ ನೀಡುತ್ತದೆ. ಲಾಂಗ್ ರೇಂಜ್ ವೇರಿಯೆಂಟ್​ನಲ್ಲಿ ಇವಿ 143 ಬಿಹೆಚ್ ಪಿ ಗರಿಷ್ಠ ಶಕ್ತಿ ಮತ್ತು 215 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪವರ್ ಔಟ್ ಪುಟ್ ಸಣ್ಣ ಹೆಚ್ಚಳವನ್ನು ಕಂಡಿದೆ. ಅದೇ ರೀತಿ ಹೊಸ ಮಾಡೆಲ್​ನಲ್ಲಿ ಟಾರ್ಕ್ ಸ್ವಲ್ಪ ಕಡಿಮೆ ಮಾಡಲಾಗಿದೆ. ಇದು ಕೇವಲ 8.9 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆಯುತ್ತದೆ. ಸಿಟಿ, ಇಕೋ ಮತ್ತು ಸ್ಪೋರ್ಟ್ ಎಂಬ ಮೂರು ವಿಭಿನ್ನ ಚಾಲನಾ ಮೋಡ್ ಗಳನ್ನು ನೀಡಲಾಗಿದೆ.

ಕಾರ್ಯಕ್ಷಮತೆ ಹೆಚ್ಚಳ

ನೆಕ್ಸಾನ್ ಇವಿ ಸುಧಾರಿತ ವಾಯುಬಲವಿಜ್ಞಾನವನ್ನು ಪಡೆಯುತ್ತದೆ. ಇದರ ಪರಿಣಾಮವಾಗಿ ವರ್ಧಿತ ಕಾರ್ಯಕ್ಷಮತೆ ಉಂಟಾಗುತ್ತದೆ ಎಂದು ವಾಹನ ತಯಾರಕರು ಪ್ರತಿಪಾದಿಸುತ್ತಾರೆ. ಲಾಂಗ್ ರೇಂಜ್ ಫೇಸ್ ಲಿಫ್ಟ್ ಮಾದರಿಯು ನೆಕ್ಸಾನ್ ಇವಿ ಮ್ಯಾಕ್ಸ್​​ನಂತೆಯೆ 40.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಉಳಿಸಿಕೊಂಡಿದೆ. ಆದರೆ ಇದು ಹಿಂದಿನ 437 ಕಿ.ಮೀ ನಿಂದ ಈಗ 465 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.

ಟಾಟಾ ಹೊಸ ನೆಕ್ಸಾನ್ ಇವಿಯ ಬ್ಯಾಟರಿ ಮತ್ತು ಮೋಟರ್ ಎರಡಕ್ಕೂ ಎಂಟು ವರ್ಷಗಳ ಅಥವಾ 160,000 ಕಿ.ಮೀ ವಾರಂಟಿಯನ್ನು ನೀಡುತ್ತದೆ. ಹೆಚ್ಚುವರಿಯಾಗಿ, ನೆಕ್ಸಾನ್ ಇವಿ ಫೇಸ್ ಲಿಫ್ಟ್ ವಿ2 ಎಲ್ (ವೆಹಿಕಲ್-ಟು-ಲೋಡ್) ಮತ್ತು ವಿ 2 ವಿ (ವೆಹಿಕಲ್-ಟು-ವೆಹಿಕಲ್) ತಂತ್ರಜ್ಞಾನಗಳನ್ನು ಹೊಂದಿದೆ, ಇದು ವಿದ್ಯುತ್ ಉಪಕರಣಗಳಿಗೆ ಶಕ್ತಿ ನೀಡಲು ಮತ್ತು ಇತರ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಕಾರಿಗೆ ಅನುವು ಮಾಡಿಕೊಡುತ್ತದೆ.

Continue Reading
Advertisement
viral news kannada
ಕ್ರಿಕೆಟ್14 mins ago

Kapil Dev Kidnap: ವಿಶ್ವಕಪ್​ ವಿಜೇತ ನಾಯಕ ಕಪಿಲ್ ದೇವ್​ ಕಿಡ್ನಾಪ್​; ವಿಡಿಯೊ ವೈರಲ್​

bangalore Bandh kuruburu deatained
ಕರ್ನಾಟಕ15 mins ago

Bangalore Bandh : ಮೈಸೂರು ಬ್ಯಾಂಕ್‌ ಸರ್ಕಲ್‌ನಲ್ಲಿ ಪ್ರತಿಭಟನೆ: ಕುರುಬೂರು ಶಾಂತ ಕುಮಾರ್‌ ಪೊಲೀಸ್‌ ವಶಕ್ಕೆ

pakistan Team
ಕ್ರಿಕೆಟ್53 mins ago

Pakistan team: ಕೊನೆಗೂ ಬಗೆಹರಿದ ಪಾಕ್ ತಂಡದ​ ವೀಸಾ ಸಮಸ್ಯೆ; ಬುಧವಾರ ಭಾರತ ಪ್ರಯಾಣ

bus auto accident
ದಕ್ಷಿಣ ಕನ್ನಡ55 mins ago

Road Accident: ಆಟೋಗೆ ಶಾಲಾ ಬಸ್‌ ಡಿಕ್ಕಿ, ಐವರ ದುರ್ಮರಣ

home lizard
ಲೈಫ್‌ಸ್ಟೈಲ್1 hour ago

Lizards in home: ಹಲ್ಲಿಯನ್ನು ಮನೆಯಿಂದ ಓಡಿಸುವ ಕಲೆ ನಿಮಗೆ ಗೊತ್ತೇ? ಇಲ್ಲಿವೆ ಟಿಪ್ಸ್!

healthy children food
Relationship2 hours ago

Parenting Tips: ನಿಮ್ಮ ಮಕ್ಕಳು ಅಡ್ಡ ಬೆಳೆಯದೆ, ಉದ್ದ ಬೆಳೆಯಬೇಕೆಂದರೆ ಈ ಆಹಾರವನ್ನೇ ನೀಡಿ!

Reality Shows neads a break
ಅಂಕಣ2 hours ago

Raja Marga Column : ನಿಮ್ಮ ಮಕ್ಕಳನ್ನು ಸೂಪರ್‌ ಹೀರೊ ಮಾಡಲು ಹೋಗ್ಬೇಡಿ; ರಿಯಾಲಿಟಿ ಶೋಗಳಿಗೆ ಬೇಕು ಬ್ರೇಕ್!

bangalore bandh
Live News2 hours ago

Bangalore Bandh Live: ಬೆಂಗಳೂರು ಬಂದ್‌ ಆರಂಭ; ಎಲ್ಲೆಲ್ಲಿ ಏನೇನಾಗ್ತಿದೆ?

Vistara Editorial, Janata Darshan by CM must appreciated
ಕರ್ನಾಟಕ3 hours ago

ವಿಸ್ತಾರ ಸಂಪಾದಕೀಯ: ಜನತಾ ದರ್ಶನ ಪ್ರಶಂಸಾರ್ಹ, ಪರಿಹಾರವೂ ದೊರೆಯಲಿ

Dina Bhavishya
ಪ್ರಮುಖ ಸುದ್ದಿ4 hours ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina Bhavishya
ಪ್ರಮುಖ ಸುದ್ದಿ4 hours ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ16 hours ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ18 hours ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ20 hours ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ21 hours ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ2 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

ಟ್ರೆಂಡಿಂಗ್‌