ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ 2023ರ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಒಂದು ವಿಕೆಟ್ ರೋಚಕ ಜಯ ದಾಖಲಿಸಿತ್ತು. ಈ ಗೆಲುವಿನ ಬಳಿಕ ವೇಗದ ಬೌಲರ್ ಅವೇಶ್ ಖಾನ್ ವಿಚಿತ್ರ ರೀತಿಯಲ್ಲಿಸ ಸಂಭ್ರಮಿಸಿದ್ದರು. ಹೆಲ್ಮೆಟ್ ನೆಲಕ್ಕೆ ಬಡಿದು ಕುಣಿದು ಕುಪ್ಪಳಿಸಿದ್ದರು. ಇದು ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಆವೇಶ್ ಖಾನ್ ಅತಿರೇಕದ ವರ್ತನೆ ಟ್ರೋಲ್ಗೂ ಗುರಿಯಾಗಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಭಾರತೀಯ ವೇಗಿ ಈ ಘಟನೆಯನ್ನು ನೆನಪಿಸಿಕೊಂಡು ತಮ್ಮ ವರ್ತನೆಗೆ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ.
26 ವರ್ಷದ ಭಾರತದ ವೇಗದ ಬೌಲರ್ ಅವೇಶ್ ಖಾನ್ ಆ ಪಂದ್ಯದಲ್ಲಿ ರನ್ ಬಾರಿಸಿರಲಿಲ್ಲ. ಆದರೆ ಕ್ರೀಸ್ನಲ್ಲಿದ್ದ ಅವರು ಬೈ ರನ್ಗಾಗಿ ಓಡಿದ್ದರು. ಈ ರನ್ನಿಂತ ತಂಡ ವಿಜಯ ಸಾಧಿಸಿತ್ತು. ನಾನ್ ಸ್ಟ್ರೈಕ್ ಎಂಡ್ ಕಡೆಗೆ ಓಡಿ ಹೋದ ಅವರು ಹೆಲ್ಮೆಟ್ ನೆಲಕ್ಕೆ ಬಡಿದಿದ್ದರು. ಅವರ ಸಂಭ್ರಮಾಚರಣೆಯು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ಗೆ ಗುರಿಯಾಗಿತ್ತು. ಸಾಕಷ್ಟು ಮೀಮ್ಗಳು ಸೃಷ್ಟಿಯಾಗಿದ್ದವರು. ಭಾರತೀಯ ವೇಗಿಯನ್ನು ಕಂಡ ಕಂಡಲ್ಲಿ ತಮಾಷೆ ಮಾಡಲು ಶುರು ಮಾಡಿದ್ದರು.
ಈ ಬಗ್ಗೆ ಮಾತನಾಡಿದ ಅವರು ತಮ್ಮ ವರ್ತನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ತಮ್ಮದು ಅತಿರೇಕದ ವರ್ತನೆ ಎಂಬುದಾಗಿ ಅವರು ಹೇಳಿಕೊಂಡರು. ನನ್ನ ನಡವಳಿಕೆ ಬಗ್ಗೆ ಬೇಸರವಿದೆ ಎಂದು ಹೇಳಿದರು.
ಸೋಷಿಯಲ್ ಮೀಡಿಯಾದಲ್ಲಿ ಹೆಲ್ಮೆಟ್ ಘಟನೆ ಬಗ್ಗೆ ಟೀಕೆಗಳು ವ್ಯಕ್ತಗೊಂಡಿವೆ. ನಾನು ಅದನ್ನು ಮಾಡಬಾರದಿತ್ತು ಎಂದು ನಾನು ನಂತರ ಅರಿತುಕೊಂಡೆ. ಇದು ಆ ಕ್ಷಣದ ಖುಷಿಯಲ್ಲಿ ನಡೆದ ಘಟನೆ ಎಂದು ಇಂಡಿಯನ್ಸ್ ಎಕ್ಸ್ಪ್ರೆಸ್ ಜತೆ ಮಾತನಾಡುತ್ತಾ ಹೇಳಿದ್ದಾರೆ.
ಐಪಿಎಲ್ನ 16 ನೇ ಆವೃತ್ತಿ ಬೌಲರ್ಗಳು ಅದರಲ್ಲೂ ವೇಗದ ಬೌಲರ್ಗಳಿಗೆ ದುಸ್ವಪ್ನವಾಗಿತ್ತು. ಆಗಾಗ್ಗೆ ತಂಡಗಳು 200 ರನ್ಗಳ ಗಡಿಯನ್ನು ದಾಟಿದ್ದರಿಂದ ಬೌಲರ್ಗಳು ಕಠಿಣ ಸಮಯವನ್ನು ಎದುರಿಸಬೇಕಾಯಿತು. ವಿಕೆಟ್ಗಳು ಕಡಿಮೆ ಪಡೆದಿರುವ ಹೊರತಾಗಿಯೂ ಅವರು ತಂಡದ ಪರವಾಗಿ ಉತ್ತಮವಾಗಿ ಆಡಿದ್ದರು ಆವೇಶ್ ಖಾನ್. ಡೆತ್ ಓವರ್ ಬೌಲಿಂಗ್ನಲ್ಲಿ ಮಿಂಚಿದ್ದರು.
ಇದನ್ನೂ ಓದಿ : Ashes 2023 : ಐಪಿಎಲ್ನಲ್ಲಿ ಫೇಲ್, ಆ್ಯಶಸ್ನಲ್ಲೂ ವಿಚಿತ್ರ ರೀತಿಯಲ್ಲಿ ಔಟ್; ಇಂಗ್ಲೆಂಡ್ ಬ್ಯಾಟರ್ನ ಬ್ಯಾಡ್ಲಕ್!
ನನ್ನ ಹಿಂದಿನ ಎರಡು ಐಪಿಎಲ್ ಋತುಗಳ ಬಗ್ಗೆ ಹೇಳುವುದಾದರೆ ನಾನು ಬಯಸಿದ ರೀತಿಯಲ್ಲಿಯೇ ನಡೆಯಿತು. ಆದಾಗ್ಯೂ, ನನ್ನ ನಿರೀಕ್ಷೆ ಪ್ರಕಾರ ಋತುವು ಉತ್ತಮವಾಗಿ ಹೋಗದಿದ್ದರೂ, ನಾನು ನನ್ನ ಎಕಾನಮಿ ಉಳಿಸಿಕೊಂಡಿದ್ದೇನೆ, ಇದು 10ಕ್ಕಿಂತ ಕಡಿಮೆಯಾಗಿದೆ. ನಾನು ನಿರ್ಣಾಯಕ ಒವರ್ಗಳನ್ನು ಎಸೆಯುತ್ತಿದ್ದೆ ಎಂದು ಆವೇಶ್ ಖಾನ್ ಹೇಳಿದ್ದಾರೆ.