Avesh Khan expresses regret over wild celebration against RCB IPL 2023 : ಆರ್​ಸಿಬಿ ತಂಡದ ಕ್ಷಮೆ ಕೋರಿದ ಲಕ್ನೊ ಸೂಪರ್​ ಜೈಂಟ್ಸ್​ ವೇಗಿ! - Vistara News

ಕ್ರಿಕೆಟ್

IPL 2023 : ಆರ್​ಸಿಬಿ ತಂಡದ ಕ್ಷಮೆ ಕೋರಿದ ಲಕ್ನೊ ಸೂಪರ್​ ಜೈಂಟ್ಸ್​ ವೇಗಿ!

ಬೆಂಗಳೂರಿನಲ್ಲಿ ನಡೆದ ಆರ್​​ಸಿಬಿ ವಿರುದ್ಧದ ಮ್ಯಾಚ್​ ಗೆದ್ದ ಬಳಿಕ ಆವೇಶ್ ಖಾನ್​ ಹೆಲ್ಮೆಟ್​ ನೆಲಕ್ಕೆಸೆದು ಮಿತಿಮೀರಿ ಸಂಭ್ರಮಿಸಿದ್ದರು.

VISTARANEWS.COM


on

Avesh Khan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ 2023ರ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಒಂದು ವಿಕೆಟ್​ ರೋಚಕ ಜಯ ದಾಖಲಿಸಿತ್ತು. ಈ ಗೆಲುವಿನ ಬಳಿಕ ವೇಗದ ಬೌಲರ್ ಅವೇಶ್ ಖಾನ್ ವಿಚಿತ್ರ ರೀತಿಯಲ್ಲಿಸ ಸಂಭ್ರಮಿಸಿದ್ದರು. ಹೆಲ್ಮೆಟ್​ ನೆಲಕ್ಕೆ ಬಡಿದು ಕುಣಿದು ಕುಪ್ಪಳಿಸಿದ್ದರು. ಇದು ಕ್ರಿಕೆಟ್​ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಆವೇಶ್​ ಖಾನ್​ ಅತಿರೇಕದ ವರ್ತನೆ ಟ್ರೋಲ್​ಗೂ ಗುರಿಯಾಗಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಭಾರತೀಯ ವೇಗಿ ಈ ಘಟನೆಯನ್ನು ನೆನಪಿಸಿಕೊಂಡು ತಮ್ಮ ವರ್ತನೆಗೆ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ.

26 ವರ್ಷದ ಭಾರತದ ವೇಗದ ಬೌಲರ್ ಅವೇಶ್ ಖಾನ್ ಆ ಪಂದ್ಯದಲ್ಲಿ ರನ್​ ಬಾರಿಸಿರಲಿಲ್ಲ. ಆದರೆ ಕ್ರೀಸ್​ನಲ್ಲಿದ್ದ ಅವರು ಬೈ ರನ್​ಗಾಗಿ ಓಡಿದ್ದರು. ಈ ರನ್​ನಿಂತ ತಂಡ ವಿಜಯ ಸಾಧಿಸಿತ್ತು. ನಾನ್​ ಸ್ಟ್ರೈಕ್​ ಎಂಡ್​ ಕಡೆಗೆ ಓಡಿ ಹೋದ ಅವರು ಹೆಲ್ಮೆಟ್​ ನೆಲಕ್ಕೆ ಬಡಿದಿದ್ದರು. ಅವರ ಸಂಭ್ರಮಾಚರಣೆಯು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್​ಗೆ ಗುರಿಯಾಗಿತ್ತು. ಸಾಕಷ್ಟು ಮೀಮ್​ಗಳು ಸೃಷ್ಟಿಯಾಗಿದ್ದವರು. ಭಾರತೀಯ ವೇಗಿಯನ್ನು ಕಂಡ ಕಂಡಲ್ಲಿ ತಮಾಷೆ ಮಾಡಲು ಶುರು ಮಾಡಿದ್ದರು.

ಈ ಬಗ್ಗೆ ಮಾತನಾಡಿದ ಅವರು ತಮ್ಮ ವರ್ತನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ತಮ್ಮದು ಅತಿರೇಕದ ವರ್ತನೆ ಎಂಬುದಾಗಿ ಅವರು ಹೇಳಿಕೊಂಡರು. ನನ್ನ ನಡವಳಿಕೆ ಬಗ್ಗೆ ಬೇಸರವಿದೆ ಎಂದು ಹೇಳಿದರು.

ಸೋಷಿಯಲ್ ಮೀಡಿಯಾದಲ್ಲಿ ಹೆಲ್ಮೆಟ್ ಘಟನೆ ಬಗ್ಗೆ ಟೀಕೆಗಳು ವ್ಯಕ್ತಗೊಂಡಿವೆ. ನಾನು ಅದನ್ನು ಮಾಡಬಾರದಿತ್ತು ಎಂದು ನಾನು ನಂತರ ಅರಿತುಕೊಂಡೆ. ಇದು ಆ ಕ್ಷಣದ ಖುಷಿಯಲ್ಲಿ ನಡೆದ ಘಟನೆ ಎಂದು ಇಂಡಿಯನ್ಸ್ ಎಕ್ಸ್​ಪ್ರೆಸ್​ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಐಪಿಎಲ್​​ನ 16 ನೇ ಆವೃತ್ತಿ ಬೌಲರ್​​ಗಳು ಅದರಲ್ಲೂ ವೇಗದ ಬೌಲರ್​​ಗಳಿಗೆ ದುಸ್ವಪ್ನವಾಗಿತ್ತು. ಆಗಾಗ್ಗೆ ತಂಡಗಳು 200 ರನ್​​ಗಳ ಗಡಿಯನ್ನು ದಾಟಿದ್ದರಿಂದ ಬೌಲರ್​​ಗಳು ಕಠಿಣ ಸಮಯವನ್ನು ಎದುರಿಸಬೇಕಾಯಿತು. ವಿಕೆಟ್​ಗಳು ಕಡಿಮೆ ಪಡೆದಿರುವ ಹೊರತಾಗಿಯೂ ಅವರು ತಂಡದ ಪರವಾಗಿ ಉತ್ತಮವಾಗಿ ಆಡಿದ್ದರು ಆವೇಶ್​ ಖಾನ್​. ಡೆತ್ ಓವರ್​​ ಬೌಲಿಂಗ್​ನಲ್ಲಿ ಮಿಂಚಿದ್ದರು.

ಇದನ್ನೂ ಓದಿ : Ashes 2023 : ಐಪಿಎಲ್​ನಲ್ಲಿ ಫೇಲ್​, ಆ್ಯಶಸ್​​ನಲ್ಲೂ ವಿಚಿತ್ರ ರೀತಿಯಲ್ಲಿ ಔಟ್​; ಇಂಗ್ಲೆಂಡ್​ ಬ್ಯಾಟರ್​ನ ಬ್ಯಾಡ್​ಲಕ್​!

ನನ್ನ ಹಿಂದಿನ ಎರಡು ಐಪಿಎಲ್ ಋತುಗಳ ಬಗ್ಗೆ ಹೇಳುವುದಾದರೆ ನಾನು ಬಯಸಿದ ರೀತಿಯಲ್ಲಿಯೇ ನಡೆಯಿತು. ಆದಾಗ್ಯೂ, ನನ್ನ ನಿರೀಕ್ಷೆ ಪ್ರಕಾರ ಋತುವು ಉತ್ತಮವಾಗಿ ಹೋಗದಿದ್ದರೂ, ನಾನು ನನ್ನ ಎಕಾನಮಿ ಉಳಿಸಿಕೊಂಡಿದ್ದೇನೆ, ಇದು 10ಕ್ಕಿಂತ ಕಡಿಮೆಯಾಗಿದೆ. ನಾನು ನಿರ್ಣಾಯಕ ಒವರ್​​ಗಳನ್ನು ಎಸೆಯುತ್ತಿದ್ದೆ ಎಂದು ಆವೇಶ್​ ಖಾನ್​ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024: ನಾಯಕ ಹಾರ್ದಿಕ್​ ಪಾಂಡ್ಯ ಸೇರಿ ಮುಂಬೈ ತಂಡದ ಆಟಗಾರರಿಗೆ ಬಿತ್ತು ಭಾರೀ ದಂಡ

IPL 2024: “ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್​ನ 48ನೇ ಪಂದ್ಯದಲ್ಲಿ ನಿಧಾನ ಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ದಂಡ ವಿಧಿಸಲಾಗಿದೆ. ಈ ಸೀಸನ್‍ನಲ್ಲಿ ಇದು ತಂಡದ ಎರಡನೇ ಅಪರಾಧವಾಗಿದ್ದು, ಐಪಿಎಲ್ ನೀತಿಸಂಹಿತೆ ಅನ್ವಯ, ಕನಿಷ್ಠ ಓವರ್ ದರವನ್ನು ನಿರ್ವಹಿಸಬೇಕಾಗುತ್ತದೆ” ಎಂದು ಐಪಿಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

VISTARANEWS.COM


on

IPL 2024
Koo

ಲಕ್ನೋ: ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧದ ಪಂದ್ಯದಲ್ಲಿ (IPL 2024) ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣಕ್ಕೆ ಮುಂಬೈ ನಾಯಕ ಹಾರ್ದಿಕ್​ ಪಾಂಡ್ಯ(Hardik Pandya)​ಗೆ 24 ಲಕ್ಷ ರೂ. ದಂಡ ವಿಧಿಸಿದೆ. ಇದು ಪಾಂಡ್ಯ ಅವರ 2ನೇ ಪ್ರಕರಣವಾಗಿದೆ. ನಾಯಕನ ಈ ತಪ್ಪಿನಿಂದ ಇಂಪ್ಯಾಕ್ಟ್ ಆಟಗಾರ ಸೇರಿದಂತೆ ಇತರ ಎಲ್ಲ ಆಟಗಾರರಿಗೆ ವೈಯಕ್ತಿಕವಾಗಿ 6 ಲಕ್ಷ ಅಥವಾ ಅವರ ಪಂದ್ಯದ ಸಂಭಾವನೆಯ ಶೇ. 25ರಷ್ಟು ದಂಡ ವಿಧಿಸಲಾಗಿದೆ.

“ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್​ನ 48ನೇ ಪಂದ್ಯದಲ್ಲಿ ನಿಧಾನ ಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ದಂಡ ವಿಧಿಸಲಾಗಿದೆ. ಈ ಸೀಸನ್‍ನಲ್ಲಿ ಇದು ತಂಡದ ಎರಡನೇ ಅಪರಾಧವಾಗಿದ್ದು, ಐಪಿಎಲ್ ನೀತಿಸಂಹಿತೆ ಅನ್ವಯ, ಕನಿಷ್ಠ ಓವರ್ ದರವನ್ನು ನಿರ್ವಹಿಸಬೇಕಾಗುತ್ತದೆ. ಈ ಅಪರಾಧಕ್ಕಾಗಿ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ” ಎಂದು ಐಪಿಎಲ್ ಹೇಳಿಕೆ ನೀಡಿದೆ.

ಇಂಪ್ಯಾಕ್ಟ್ ಆಟಗಾರ ಸೇರಿದಂತೆ ಆಡಿದ ಎಲ್ಲ ಇತರ 11 ಮಂದಿ ಆಟಗಾರರಿಗೆ 6 ಲಕ್ಷ ರೂ. ಅಥವಾ ಪಂದ್ಯದ ಸಂಭಾವನೆಯ ಶೇ. 25 ದಂಡ ವಿಧಿಸಲಾಗಿದೆ ಎಂದು ಪ್ರಕಟಣೆ ವಿವರಿಸಿದೆ. ಕಳೆದ ಏಪ್ರಿಲ್​ 18ರಂದು ನಡೆದಿದ್ದ ಪಂಜಾಬ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿಯೂ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣಕ್ಕೆ ಪಾಂಡ್ಯಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿತ್ತು.

ಇದನ್ನೂ ಓದಿ IPL 2024 Points Table: 3ನೇ ಸ್ಥಾನಕ್ಕೇರಿದ ಲಕ್ನೋ; ಕುಸಿತ ಕಂಡ ಹಾಲಿ ಚಾಂಪಿಯನ್​ ಚೆನ್ನೈ

ಇನ್ನೊಂದು ಬಾರಿ ತಪ್ಪು ಮರುಕಳಿಸಿದರೆ ಒಂದು ಪಂದ್ಯ ನಿಷೇಧ


ಸ್ಲೋ ಓವರ್​ ರೇಟ್​ ನಿಯಮದ ಪ್ರಕಾರ ಮೊದಲ ತಪ್ಪಿಗೆ ನಾಯಕನನ್ನು ದೋಷಿಯನ್ನಾಗಿ ಮಾಡಲಾಗುತ್ತದೆ. ಮೊದಲ ಬಾರಿಯ ತಪ್ಪಿಗೆ 12 ಲಕ್ಷ ರೂ. ದಂಡ ಹಾಕಲಾಗುತ್ತದೆ. ಇದು ಪುನರಾವರ್ತನೆಯಾದಲ್ಲಿ 24 ಲಕ್ಷ ರೂ. ದಂಡ ನಿಗದಿ ಮಾಡಲಾಗಿದೆ. ಅಲ್ಲದೆ ತಂಡದ ಇತರೆ ಆಟಗಾರರು ಪಂದ್ಯದ ಶುಲ್ಕದ ಶೇ.25 ರಷ್ಟು ಮೊತ್ತವನ್ನು ದಂಡವಾಗಿ ನೀಡಬೇಕು. ಒಂದೊಮ್ಮೆ ಮೂರನೇ ಬಾರಿ ಮತ್ತೆ ಇದೇ ತಪ್ಪು ಮರುಕಳಿಸಿದರೆ ಆಗ ನಾಯಕ ಒಂದು ಪಂದ್ಯದ ನಿಷೇಧಕ್ಕೆ ಗುರಿಯಾಗಲಿದ್ದಾರೆ.

ಮುಂಬೈಗೆ ಸೋಲು

ಶ್ರೀ ಅಟಲ್​ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಮುಂಬೈ ಬ್ಯಾಟರ್​ಗಳು ಲಕ್ನೋ ಬೌಲರ್​ಗಳ ಬಿಗು ದಾಳಿಗೆ ಕುಸಿದು 7 ವಿಕೆಟ್ ನಷ್ಟಕ್ಕೆ 144 ರನ್ ಬಾರಿಸಿತು. ಜವಾಬಿತ್ತ ಲಕ್ನೊ ತಂಡ 19.2 ಓವರ್​ಗಳು 6 ವಿಕೆಟ್​ಗೆ 145 ರನ್ ಬಾರಿಸಿ ಗೆಲುವು ಸಾಧಿಸಿತು.

Continue Reading

ಕ್ರೀಡೆ

IPL 2024 Points Table: 3ನೇ ಸ್ಥಾನಕ್ಕೇರಿದ ಲಕ್ನೋ; ಕುಸಿತ ಕಂಡ ಹಾಲಿ ಚಾಂಪಿಯನ್​ ಚೆನ್ನೈ

IPL 2024 Points Table: ಇಂದು ನಡೆಯುವ ಪಂದ್ಯದಲ್ಲಿ ಚೆನ್ನೈ ಮತ್ತು ಪಂಜಾಬ್​ ಕಿಂಗ್ಸ್​ ಮುಖಾಮುಖಿಯಾಗಲಿವೆ. ಚೆನ್ನೈ ಗೆದ್ದರೆ ಮತ್ತೆ 2ನೇ ಮೂರನೇ ಸ್ಥಾನ ಪಡೆಯಬಹುದು. 8ನೇ ಸ್ಥಾನದಲ್ಲಿರುವ ಪಂಜಾಬ್​ ಇದುವರೆಗೆ 9 ಪಂದ್ಯ ಆಡಿ ಕೇವಲ ಮೂರು ಗೆಲುವಿನೊಂದಿಗೆ 6 ಅಂಕ ಗಳಿಸಿದೆ.

VISTARANEWS.COM


on

IPL 2024 Points Table
Koo

ಲಕ್ನೋ: ಮಂಗಳವಾರ ರಾತ್ರಿ ನಡೆದ ಐಪಿಎಲ್​ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ತಂಡ ಮುಂಬೈ ಇಂಡಿಯನ್ಸ್(Mumbai Indians)​ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ(IPL 2024 Points Table) ಮೂರನೇ ಸ್ಥಾನಕ್ಕೇರಿದೆ. ಲಕ್ನೋ ಗೆಲುವಿನಿಂದ ಮೂರನೇ ಸ್ಥಾನದಲ್ಲಿದ್ದ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಒಂದು ಸ್ಥಾನಗಳ ಕುಸಿತ ಕಂಡು ನಾಲ್ಕನೇ ಸ್ಥಾನ ಪಡೆದಿದೆ. ಇಂದು ನಡೆಯುವ ಪಂದ್ಯದಲ್ಲಿ ಚೆನ್ನೈ ಮತ್ತು ಪಂಜಾಬ್​ ಕಿಂಗ್ಸ್​ ಮುಖಾಮುಖಿಯಾಗಲಿವೆ. ಚೆನ್ನೈ ಗೆದ್ದರೆ ಮತ್ತೆ 2ನೇ ಮೂರನೇ ಸ್ಥಾನ ಪಡೆಯಬಹುದು.

8ನೇ ಸ್ಥಾನದಲ್ಲಿರುವ ಪಂಜಾಬ್​ ಇದುವರೆಗೆ 9 ಪಂದ್ಯ ಆಡಿ ಕೇವಲ ಮೂರು ಗೆಲುವಿನೊಂದಿಗೆ 6 ಅಂಕ ಗಳಿಸಿದೆ. ಪ್ಲೇ ಆಫ್​ ಆಸೆ ಜೀವಂತವಿರಿಸಬೇಕಿದ್ದರೆ ಇಂದು ನಡೆಯುವ ಚೆನ್ನೈ ವಿರುದ್ಧದ ಪಂದ್ಯ ಸೇರಿ ಉಳಿದ ಎಲ್ಲ ಪಂದ್ಯಗಳಲ್ಲಿಯೂ ಗೆಲುವು ಕಾಣಬೇಕಿದೆ. ಜತೆಗೆ ರನ್​ರೇಟ್​ ಕೂಡ ಉತ್ತಮ ಪಡಿಸಿಕೊಳ್ಳಬೇಕಿದೆ. ಒಂದೊಮ್ಮೆ ಇಂದು ಸೋತರೆ ಪ್ಲೇ ಆಫ್​ ಅವಕಾಶ ಕ್ಷೀಣಗೊಳ್ಳಲಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​98116 (+0.694)
ಕೆಕೆಆರ್​​96312 (+1.096)
ಲಕ್ನೋ​​106412 (+0.094)
ಚೆನ್ನೈ​95410 (+0.810)
ಹೈದರಾಬಾದ್​95410 (+0.075)
ಡೆಲ್ಲಿ115610 (-0.442)
ಗುಜರಾತ್​10468 (-1.113)
ಪಂಜಾಬ್9368 (-0.187)
ಮುಂಬೈ10376 (-0.272)
ಆರ್​ಸಿಬಿ10376 (-0.415)

ಶ್ರೀ ಅಟಲ್​ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಮುಂಬೈ ಬ್ಯಾಟರ್​ಗಳು ಲಕ್ನೋ ಬೌಲರ್​ಗಳ ಬಿಗು ದಾಳಿಗೆ ಕುಸಿದು 7 ವಿಕೆಟ್ ನಷ್ಟಕ್ಕೆ 144 ರನ್ ಬಾರಿಸಿತು. ಜವಾಬಿತ್ತ ಲಕ್ನೊ ತಂಡ 19.2 ಓವರ್​ಗಳು 6 ವಿಕೆಟ್​ಗೆ 145 ರನ್ ಬಾರಿಸಿ ಗೆಲುವು ಸಾಧಿಸಿತು.

ಇದನ್ನೂ ಓದಿ IPL 2024 : ‘ಆಲ್​ರೌಂಡರ್​’ ಪಾಂಡ್ಯ ನೇತೃತ್ವದ ಮುಂಬೈ ತಂಡವನ್ನು ಸೋಲಿಸಿದ ರಾಹುಲ್ ನಾಯಕತ್ವದ ಲಕ್ನೊ

ಗುರಿ ಬೆನ್ನಟ್ಟಲು ಆರಂಭಿಸಿದ ಲಕ್ನೊ ತಂಡವೂ ಆರಂಭಿಕ ಆಘಾತ ಎದುರಿಸಿತು. ಪದಾರ್ಪಣೆ ಬ್ಯಾಟರ್ ಅರ್ಶಿನ್ ಕುಲಕರ್ಣಿ ಶೂನ್ಯಕ್ಕೆ ಔಟಾದರು. ಆದರೆ ರಾಹುಲ್​ 28 ರನ್ ಬಾರಿಸಿ ತಂಡಕ್ಕೆ ಚೈತನ್ಯ ತಂದರು. ಬಳಿಕ ಆಡಲು ಇಳಿದ ಸ್ಟೊಯ್ನಿಸ್​ ಅಗತ್ಯ ಅರ್ಧ ಶತಕ ಗಳಿಸಿದರು. ದೀಪಕ್​ ಹೂಡ 18 ರನ್ ಬಾರಿಸಿದರೆ ನಿಕೋಲಸ್ ಪೂರನ್​ 14 ರನ್ ಕೊಡುಗೆ ಕೊಟ್ಟರು.

Continue Reading

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಅನುಭವಿ ಸ್ಮಿತ್​ಗೆ ಅವಕಾಶವಿಲ್ಲ

T20 World Cup 2024: ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್, ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ಡೇವಿಡ್ ವಾರ್ನರ್, ಟಿಮ್‌ ಡೇವಿಡ್ ಅವರನ್ನು ಬ್ಯಾಟಿಂಗ್​ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ. ಗ್ಲೆನ್​ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೊಯಿನಿಸ್, ಕ್ಯಾಮರೂನ್ ಗ್ರೀನ್ ತಂಡದ ಸ್ಟಾರ್​ ಆಲ್​ರೌಂಡರ್​ಗಳಾಗಿದ್ದಾರೆ.

VISTARANEWS.COM


on

australia t20 world cup
Koo

ಸಿಡ್ನಿ: ಕ್ರಿಕೆಟ್​ ಆಸ್ಟ್ರೇಲಿಯಾ ಇದೇ ಜೂನ್​ನಲ್ಲಿ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್​ಗೆ(T20 World Cup 2024) ತನ್ನ 15 ಸದಸ್ಯರ ತಂಡವನ್ನು(T20 World Cup Australia squad) ಬುಧವಾರ ಪ್ರಕಟಿಸಿದೆ. ಆದರೆ, ಅನುಭವಿ ಬ್ಯಾಟರ್ ಸ್ಟೀವನ್​ ಸ್ಮಿತ್(Steve Smith) ಮತ್ತು ಈ ಬಾರಿಯ ಐಪಿಎಲ್​ನಲ್ಲಿ ಡೆಲ್ಲಿ ತಂಡದ ಪರ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ಸಂಚಲನ ಸೃಷ್ಟಿಸಿದ್ದ ಯುವ ಆಟಗಾರ ಜೇಕ್ ಫ್ರೇಸರ್-ಮೆಕ್‌ಗುರ್ಕ್​ಗೆ(Jake Fraser-McGurk) ಕೊಕ್​ ನೀಡಲಾಗಿದೆ. ಕಳೆದ ಒಂದು ವರ್ಷಗಳಿಂದ ಆಸ್ಟ್ರೇಲಿಯಾ ಟಿ20 ತಂಡವನ್ನು ಹಂಗಾಮಿಯಾಗಿ ಮುನ್ನಡೆಸುತ್ತಿದ್ದ ಮಿಚೆಲ್​ ಮಾರ್ಷ್​ ತಂಡದ ನಾಯಕನಾಗಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ರಿಕಿ ಪಾಂಟಿಂಗ್​, ಗಿಲ್​ಕ್ರಿಸ್ಟ್​, ಮೈಕಲ್​ ಹಸ್ಸಿ, ಮ್ಯಾಥ್ಯೂ ಹೇಡನ್​, ಮೈಕಲ್​ ಕ್ಲಾರ್ಕ್​, ಮೆಗ್ರಾತ್​ ಸೇರಿ ಕೆಲ ಮಕ್ಕಳು ಆಟಗಾರರ ಕ್ಯಾಪ್​ ಸಂಖ್ಯೆಯನ್ನು ಹೇಳುವ ಮೂಲಕ ಟಿ20ಗೆ ತಂಡವನ್ನು ಪ್ರಕಟಿಸಿದರು. ಇದಕ್ಕೂ ಮುನ್ನ ಸೋಮವಾರ ನ್ಯೂಜಿಲ್ಯಾಂಡ್ ತಂಡವನ್ನು​ ಇಬ್ಬರು ಮಕ್ಕಳು ಸುದ್ದಿಗೋಷ್ಠಿ ನಡೆಸಿ ಟಿ20ಗೆ ತಂಡ ಪ್ರಕಟಿಸಿ ಎಲ್ಲರ ಗಮನಸೆಳೆದಿದ್ದರು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಕನ್ನಡಿಗ ರಾಹುಲ್​ಗೆ ಕೊಕ್​

ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್, ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ಡೇವಿಡ್ ವಾರ್ನರ್, ಟಿಮ್‌ ಡೇವಿಡ್ ಅವರನ್ನು ಬ್ಯಾಟಿಂಗ್​ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ. ಗ್ಲೆನ್​ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೊಯಿನಿಸ್, ಕ್ಯಾಮರೂನ್ ಗ್ರೀನ್ ತಂಡದ ಸ್ಟಾರ್​ ಆಲ್​ರೌಂಡರ್​ಗಳಾಗಿದ್ದಾರೆ. ಸ್ಪಿನ್ಸ್‌ ಬೌಲರ್​ಗಳಾಗಿ ಆ್ಯಡಂ ಝಂಪಾ ಮತ್ತು ಆ್ಯಶ್ಟನ್​ ಅಗರ್ ಸ್ಥಾನ ಪಡೆದಿದ್ದಾರೆ. ವೇಗಿಗಳಾಗಿ ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್ ಅವರನ್ನು ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯವನ್ನು ಜೂನ್​ 3ರಂದು ಉಗಾಂಡ ವಿರುದ್ಧ ಆಡಲಿದೆ.

ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿತ್ತು. ಹೀಗಾಗಿ ಅಂತಿಮ ದಿನದಂದೆ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿತು. ಏಪ್ರಿಲ್​ 30ರಂದು ಹಾಲಿ ಚಾಂಪಿಯನ್​ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಭಾರತ ತನ್ನ ತಂಡವನ್ನು ಪ್ರಕಟಿಸಿತ್ತು. ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಆ್ಯಶ್ಟನ್​ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ.

Continue Reading

ಅಂಕಣ

ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್- ಆಯ್ಕೆ ಮಂಡಳಿ ನಿರ್ಧಾರ ಸರಿ ಇದೆಯೇ?

ರಾಜಮಾರ್ಗ ಅಂಕಣ: ಸ್ಟ್ರಾಟಜಿಯ ದೃಷ್ಟಿಯಿಂದ ಈ ಬಾರಿ ವಿಶ್ವಕಪ್‌ ಟಿ20 ಪಂದ್ಯಾಟಗಳಿಗೆ ಆರಿಸಿದ ಭಾರತ ಕ್ರಿಕೆಟ್ ತಂಡವು ಹೆಚ್ಚು ಸಮತೋಲಿತ ಎಂದು ಖಂಡಿತವಾಗಿ ಹೇಳಬಹುದು.‌ ಆದರೆ ಅದರಲ್ಲಿ ಒಂದಿಷ್ಟು ಅಪಸ್ವರ, ಒಂದಿಷ್ಟು ಭಿನ್ನ ಧ್ವನಿಗಳು ಬರುವುದು ಸಹಜವೇ ಆಗಿದೆ.

VISTARANEWS.COM


on

rajamarga column t20 world cup team
Koo

ಕೆ.ಎಲ್ ರಾಹುಲ್, ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ಮಿಸ್ ಆದದ್ದು ಹೇಗೆ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಆಲ್ ದ ಬೆಸ್ಟ್ ಟೀಮ್ ಇಂಡಿಯಾ!

ಐಪಿಎಲ್ (IPL) ಕಾರಣಕ್ಕೆ ಭಾರತದಲ್ಲಿ ನೂರಾರು ಕ್ರಿಕೆಟ್ (Cricket) ಪ್ರತಿಭೆಗಳು ಪ್ರಕಾಶನಕ್ಕೆ ಬಂದಿವೆ. ಹತ್ತು ಕ್ರಿಕೆಟ್ ಟೀಮ್ ರಚಿಸಲು ಸಾಧ್ಯ ಇರುವಷ್ಟು ಆಟಗಾರರು ಈಗ ಭಾರತದಲ್ಲಿ ಇದ್ದಾರೆ! ಅದರಿಂದಾಗಿ ಈ ಬಾರಿ ಕ್ರಿಕೆಟ್ ಆಯ್ಕೆ ಮಂಡಳಿಯು ಸಾಕಷ್ಟು ಅಳೆದು ತೂಗಿ ಒಂದು ಬಲಿಷ್ಠವಾದ ಟಿ 20 (T20) ತಂಡವನ್ನು ವಿಶ್ವಕಪ್‌ಗೆ (World Cup) ಆಯ್ಕೆ ಮಾಡಿದೆ. ಅದರಲ್ಲಿ ಒಂದಿಷ್ಟು ಅಪಸ್ವರ, ಒಂದಿಷ್ಟು ಭಿನ್ನ ಧ್ವನಿಗಳು ಬರುವುದು ಸಹಜವೇ ಆಗಿದೆ.

ಆದರೆ ಸ್ಟ್ರಾಟಜಿಯ ದೃಷ್ಟಿಯಿಂದ ಈ ಬಾರಿ ಆರಿಸಿದ ತಂಡವು ಹೆಚ್ಚು ಸಮತೋಲಿತ ಎಂದು ಖಂಡಿತವಾಗಿ ಹೇಳಬಹುದು.

ರೋಹಿತ್ ಶರ್ಮ – ಉತ್ತಮ ಕ್ಯಾಪ್ಟನ್

ರೋಹಿತ್ ಶರ್ಮ (Rohit Sharama) ಸದ್ಯಕ್ಕೆ ಭಾರತದ ಯಶಸ್ವೀ ಕ್ಯಾಪ್ಟನ್. ಐದು ಬಾರಿ ಐಪಿಲ್ ಟ್ರೋಫಿ ಎತ್ತಿದ ಸಾಧನೆ ಆತನದ್ದು. ಹಾಗೆಯೇ ಮೊನ್ನೆ ನಡೆದ ಕ್ರಿಕೆಟ್ ವಿಶ್ವಕಪ್ಪಿನಲ್ಲಿ ಅದ್ಭುತವಾಗಿ ಆಡಿ ಫೈನಲ್ ತನಕ ಬಂದ ಸಾಧನೆಯು ಸಣ್ಣದಲ್ಲ. ಆರಂಭಿಕ ಆಟಗಾರನಾಗಿ ಸಲೀಸಾಗಿ ಬೌಂಡರಿ, ಸಿಕ್ಸರ್ ಎತ್ತುವ ಛಾತಿ ಆತನಿಗೆ ಇದೆ. ಆದ್ದರಿಂದ ರೋಹಿತ್ ಶರ್ಮಾ ಆಯ್ಕೆಯು ನಿರ್ವಿವಾದ.

ಉಪನಾಯಕನಾಗಿ ಸಂಜು ಸ್ಯಾಮ್ಸನ್ ಅಥವಾ ರಿಷಭ್ ಪಂತ್ ಅವರಿಗೆ ಹೊಣೆ ನೀಡುವ ನಿರೀಕ್ಷೆ ಇತ್ತು. ಆದರೆ ಆಯ್ಕೆ ಮಂಡಳಿ ರಿಸ್ಕ್ ತೆಗೆದುಕೊಳ್ಳಲು ಹೋಗದೆ ಪಾಂಡ್ಯ ಅವರನ್ನೇ ಮುಂದುವರೆಸಿದೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಆತನ ನಾಯಕತ್ವದ ಹೆಚ್ಚಿನ ನಿರ್ಧಾರಗಳು ಟೀಕೆಗೆ ಗುರಿಯಾಗಿವೆ. ಆದರೆ ಪಾಂಡ್ಯ ಒಬ್ಬ ಆಲರೌಂಡರ್ ಮತ್ತು ಹೋರಾಟಗಾರ ಎಂಬ ಕಾರಣಕ್ಕೆ ಆತನಿಗೆ ತಂಡದಲ್ಲಿ ಸ್ಥಾನ ದೊರೆತಿದೆ ಎನ್ನುತ್ತದೆ ಆಯ್ಕೆ ಮಂಡಳಿ. ಆತನ ಬದಲಿಗೆ ತಿಲಕ್ ವರ್ಮ, ಸಾಯಿ ಸುದರ್ಶನ್ ಅಥವಾ ರುಥುರಾಜ್ ಗಾಯಕವಾಡ್ ಆಯ್ಕೆ ಆಗಿದ್ದರೆ ಚೆನ್ನಾಗಿತ್ತು ಎಂದು ಕ್ರಿಕೆಟ್ ಪ್ರೇಮಿಗಳು ಗಟ್ಟಿಯಾಗಿ ಹೇಳುತ್ತಿದ್ದಾರೆ. ಒಬ್ಬ ಬೌಲಿಂಗ್ ಆಲ್ರೌಂಡರ್ ಎಂಬ ದೃಷ್ಟಿಯಿಂದ ಹಾರ್ದಿಕ್ ಆಯ್ಕೆ ಆಗಿರಬಹುದು.

rajamarga column t20 world cup team

ಯಶಸ್ವೀ ಜೈಸ್ವಾಲ್ ಆಯ್ಕೆಯಲ್ಲಿ ಯಾರಿಗೂ ಅಚ್ಚರಿ ಆಗಲು ಸಾಧ್ಯವೇ ಇಲ್ಲ. ಕ್ರಿಕೆಟಿನ ಮೂರೂ ಫಾರ್ಮಾಟಗಳಲ್ಲಿ ಆತನ ನಿರ್ವಹಣೆಯು ತುಂಬಾ ಚೆನ್ನಾಗಿದೆ. ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಆತ ವಿಫಲನಾದರೂ ಈಗ ನಿಧಾನಕ್ಕೆ ಫಾರ್ಮ್ ಕಂಡು ಕೊಂಡಿದ್ದಾರೆ. ಆತನ ಆಕ್ರಮಣಶೀಲತೆ ಮತ್ತು ಹೊಡೆತಗಳ ಆಯ್ಕೆ ಚೆನ್ನಾಗಿರುವ ಕಾರಣ ಆತನ ಮೇಲೆ ಆಯ್ಕೆ ಮಂಡಳಿ ಭರವಸೆ ಇಟ್ಟ ಹಾಗಿದೆ.

ಕೊಹ್ಲಿ ಆಯ್ಕೆಯು ನಿರೀಕ್ಷಿತ

ವಿಶ್ವ ಕ್ರಿಕೆಟಿನ ಅತ್ಯದ್ಭುತ ಆಟಗಾರ ವಿರಾಟ್ ಕೊಹ್ಲಿ ಆಯ್ಕೆ ನಿರೀಕ್ಷಿತ. ಅದರೆ ಈ ಬಾರಿಯ ಐಪಿಲ್ ಪಂದ್ಯಗಳಲ್ಲಿ ಆತನ ಆಕ್ರಮಣಶೀಲತೆಯು ಕಡಿಮೆ ಆಗಿದೆ(?) ಎಂಬಂತೆ ಕಾಣುತ್ತಿರುವ ಕಾರಣ ಆತನನ್ನು ನಂಬರ್ 3 ಸ್ಥಾನಕ್ಕೆ ಆಡಿಸಬಹುದು ಅಥವಾ ನಂಬರ್ 3 ಸ್ಥಾನಕ್ಕೆ ಸಂಜು ಸಾಮ್ಸನ್ ಆಯ್ಕೆ ಪಡೆಯಬಹುದು. ಆದರೂ 90% ಭಾರತದ ಕ್ರಿಕೆಟ್ ಪ್ರೇಮಿಗಳು ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಬೇಕು ಎಂದು ಆಸೆ ಪಡುತ್ತಾರೆ.

ಸೂರ್ಯಕುಮಾರ್ ಯಾದವ್ ಟಿ 20 ಫಾರ್ಮಾಟಿಗೆ ಹೇಳಿ ಮಾಡಿಸಿದ ಆಟಗಾರ. ಒಮ್ಮೆ ಕುದುರಿಕೊಂಡರೆ ಸರಾಸರಿಯನ್ನು ಸಲೀಸಾಗಿ 200 ದಾಟಿಸುವ ಶಕ್ತಿ ಇದೆ. ಆದರೆ ದೀರ್ಘ ಅವಧಿಗೆ ಗಾಯಾಳು ಆಗಿ ಹೊರಗೆ ಕೂತ ಕಾರಣ ಆತನ ತಲೆಯ ಮೇಲೆ ತೂಗುಕತ್ತಿ ಇದ್ದೇ ಇತ್ತು. ಆದರೆ ಆಯ್ಕೆ ಮಂಡಳಿ ಆತನ ಹಿಂದಿನ ಸಾಧನೆಯ ಮೇಲೆ ಭರವಸೆ ಇಟ್ಟ ಹಾಗಿದೆ. ನಂಬರ್ 3 ಸ್ಥಾನಕ್ಕೆ ಆಯ್ಕೆಗಳು ಹೆಚ್ಚಿದ್ದ ಕಾರಣ ಸಹಜವಾಗಿ ಕೆ ಎಲ್ ರಾಹುಲ್ ಹೊರಗೆ ಕೂರಬೇಕಾಯಿತು ಅಷ್ಟೇ.

rajamarga column t20 world cup team

ಸಂಜು ಸ್ಯಾಮ್ಸನ್ ದಶಕಗಳಿಂದ ಐಪಿಲ್ ಆಡುತ್ತಾ ಇದ್ದಾರೆ. ಈ ಐಪಿಎಲ್ ಟೂರ್ನಿಯಲ್ಲಿ ಆತನ ಸರಾಸರಿ ಮತ್ತು ಕನ್ಸಿಸ್ಟೇನ್ಸಿಗಳು ತುಂಬಾ ಚೆನ್ನಾಗಿ ಇದ್ದ ಕಾರಣ ಅವರ ಆಯ್ಕೆ ಸಲೀಸಾಯ್ತು. ರಾಹುಲ್ ಬ್ಯಾಟಿಂಗ್ ಮತ್ತು ಕೀಪಿಂಗ್ ಚೆನ್ನಾಗಿದ್ದರೂ ಡ್ರಾಪ್ ಆದರು. ಈ ನೋವು ಕನ್ನಡಿಗರನ್ನು ಕಾಡದೇ ಇರದು. ಸಂಜು ಸ್ಯಾಮ್ಸನ್ ಅವರಿಗೊಂದು ಅವಕಾಶ ಕೊಡಲೇಬೇಕು ಎಂದು ದೀರ್ಘಕಾಲದಿಂದ ಭಾರತ ಆಸೆ ಪಡುತ್ತಿತ್ತು.

ಬಲಿಷ್ಠ ಮಿಡಲ್ ಆರ್ಡರ್

ಭಾರತಕ್ಕೆ ಅಗತ್ಯವಾಗಿ ಬೇಕಾಗಿದ್ದ ಬಲಿಷ್ಠ ಮಿಡಲ್ ಆರ್ಡರ್ ಈ ಬಾರಿ ನಿಸ್ಸಂಶಯವಾಗಿಯೂ ದೊರೆತಿದೆ. ರಿಶಭ್ ಪಂತ್ ಮತ್ತು ಶಿವಂ ದುಬೆ ಅಲ್ಲಿ ಮಿಂಚು ಹರಿಸುವುದು ಖಂಡಿತ. ಇನ್ನಷ್ಟು ಬಲಿಷ್ಠ ಮಾಡಲು ರವೀಂದ್ರ ಜಡೇಜಾ ಇದ್ದೇ ಇರುತ್ತಾರೆ.

ಇಡೀ ಐಪಿಲ್ ಪಂದ್ಯಾಟದಲ್ಲಿ ಮಿಂಚಿದ ತಿಲಕ್ ವರ್ಮ, ರಥುರಾಜ್ ಗಾಯಕವಾಡ, ಅಭಿಷೇಕ್ ಶರ್ಮಾ, ಸಾಯಿ ಸುದರ್ಶನ್, ರಿಯಾನ್ ಪರಾಗ್ ಯಾಕೆ ಮಿಸ್ ಆದರು?ಎಂಬ ಪ್ರಶ್ನೆಯು ನಿಮ್ಮ ಮನಸಿಗೆ ಕೂಡ ಬಂದಿರಬಹುದು. ಅವರು ಮುಂದಿನ ವಿಶ್ವಕಪ್ ತನಕ ಕಾಯಲೇಬೇಕು ಅನ್ನುವುದು ವಾಸ್ತವ.

rajamarga column t20 world cup team

ಬೌಲಿಂಗ್ ವಿಭಾಗ ಅಚ್ಚರಿ ಇಲ್ಲ

ಜಸ್ಪ್ರೀತ್ ಬುಮ್ರಾ, ಆರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗದ ಅಸ್ತ್ರಗಳು. ಖಲೀಲ್ ಅಹ್ಮದ್ ಮತ್ತು ಆವೇಶ್ ಖಾನ್ ಅವರು ಮೀಸಲು ಆಟಗಾರರಾಗಿ ಇರುವ ಕಾರಣ ಇಲ್ಲಿ ಅಚ್ಚರಿಯ ಮುಖಗಳು ಇಲ್ಲ. ಹಾರ್ದಿಕ ಪಾಂಡ್ಯ ಕೂಡ ಮಿದು ವೇಗದ ಬೌಲಿಂಗ್ ಮಾಡಬಲ್ಲರು. ದಾಖಲೆ ವೇಗದಲ್ಲಿ ಎಸೆಯಬಲ್ಲ ಮಯಾಂಕ್ ಯಾದವ್ ಫಿಟ್ನೆಸ್ ಕಾರಣಕ್ಕೆ ಡ್ರಾಪ್ ಆದ ಕಾರಣ ಸಿರಾಜ್ ಆಯ್ಕೆ ಸುಲಭ ಆಯ್ತು. ಸ್ಪಿನ್ ವಿಭಾಗದಲ್ಲಿ ಐಪಿಎಲನ ಗರಿಷ್ಠ ವಿಕೆಟ್ ಕಿತ್ತಿರುವ ಯಜುವೇಂದ್ರ ಚಹಲ್, ಯಾವ ಮೈದಾನದಲ್ಲಿಯೂ ಬಾಲ್ ಸ್ಪಿನ್ ಮಾಡುವ ಶಕ್ತಿ ಇರುವ ಕುಲದೀಪ್ ಯಾದವ್, ಆಕ್ಷರ್ ಪಟೇಲ್ ಇರುತ್ತಾರೆ. ರವಿ ಬಿಷ್ಣೊಯಿ ಇರಬೇಕಿತ್ತು ಎಂಬುದು ಹಲವರ ಅಭಿಪ್ರಾಯ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

ಭಾರತವು ಮೂರು ವೇಗ ಪ್ಲಸ್ ಎರಡು ಸ್ಪಿನ್ ಸಂಯೋಜನೆಯ ಜೊತೆಗೆ ಆಡಲು ಇಳಿಯಬಹುದು. ಇನ್ನು ಫಿನಿಶರ್ ಸ್ಥಾನಕ್ಕೆ ಶಿವಂ ದುಬೆ, ರಿಶಬ್ ಪಂತ್, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಘ್ (ಮೀಸಲು) ಇರುವ ಕಾರಣ ದಿನೇಶ್ ಕಾರ್ತಿಕ್ ಡ್ರಾಪ್ ಆದರು ಅನ್ನಿಸುತ್ತದೆ. ಆತನ ಪ್ರಾಯ ಕೂಡ ಇಲ್ಲಿ ನಿರ್ಣಾಯಕ ಆಗಿರಬಹುದು.

2024ರ ವಿಶ್ವಕಪ್‌ಗೆ ಇದು ಡ್ರೀಮ್ ಟೀಮ್

ಧೋನಿ ನಾಯಕತ್ವದಲ್ಲಿ ಚೊಚ್ಚಲ T20 ವಿಶ್ವಕಪ್ ಗೆದ್ದು ಸಾಧನೆ ಮಾಡಿದ್ದ ಭಾರತ ಈ ಬಾರಿ ಇನ್ನೂ ಬಲಿಷ್ಠ ತಂಡದ ಜೊತೆಗೆ ಆಡಲು ಇಳಿಯುತ್ತಿದೆ. ಈ ತಂಡದಲ್ಲಿ ಆಕ್ರಮಣ, ಅನುಭವ, ಪರಿಣತಿ, ವೇಗ, ತಂತ್ರಗಾರಿಕೆ… ಎಲ್ಲವೂ ಇದೆ. ಉತ್ತಮ ಆಲ್ರೌಂಡರ್ ಆಟಗಾರರೂ ಇದ್ದಾರೆ. ಒತ್ತಡ ತಡೆಕೊಳ್ಳುವ ಶಕ್ತಿ ಇದ್ದವರು ಮಾತ್ರ ವಿಶ್ವಕಪ್ ಗೆಲ್ಲುತ್ತಾರೆ.

ಆದರೆ ಐಪಿಎಲ್ 2024ರಲ್ಲಿ ಸಖತ್ ಮಿಂಚುತ್ತಿರುವ ವಿದೇಶಿ ಆಟಗಾರರಾದ ಫಿಲ್ ಸಾಲ್ಟ್, ವಿಲ್ ಜಾಕ್ಸ್, ಮಾರ್ಕಸ್ ಸ್ಟಾಯಿನಿಸ್, ಟಿಮ್ ಡೇವಿಡ್, ಮೊಹಮ್ಮದ್ ನಬಿ, ಹೆನ್ರಿ ಕ್ಲಾಸೆನ್, ಜೋಸ್ ಬಟ್ಲರ್ ……ಮೊದಲಾದವರು ಬ್ಯಾಟ್ ಬೀಸುವ ವೇಗವನ್ನು ನೋಡುವಾಗ ಭಾರತೀಯರ ಎದೆಬಡಿತವು ಸ್ವಲ್ಪ ಹೆಚ್ಚಾಗಬಹುದು. ಏನಿದ್ದರೂ ಭಾರತಕ್ಕೆ ‘ಆಲ್ ದ ಬೆಸ್ಟ್’ ಹೇಳೋದಕ್ಕೆ ನಾವು ಖಂಡಿತ ಕಂಜೂಸ್ ಮಾಡುವುದಿಲ್ಲ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

Continue Reading
Advertisement
Hassan Pen Drive case Siddaramaiah writes to PM Modi seeking cancellation of Prajwal Revanna diplomatic passport
ಹಾಸನ7 mins ago

Hassan Pen Drive Case: ಪ್ರಜ್ವಲ್‌ ರೇವಣ್ಣರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದು ಕೋರಿ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ!

Prajwal Revanna related post By Rashmi Goutham
ಕ್ರೈಂ7 mins ago

Prajwal Revanna: ಮಹಿಳೆ ಹಸಿದಾಗ ಬಾಯಿಗೆ ಆಹಾರ ಹಾಕಿ…ʻಅದಲ್ಲʼ! ನಟಿಯ ಪೋಸ್ಟ್‌ ವೈರಲ್‌!

Diabetic Chutney
ಲೈಫ್‌ಸ್ಟೈಲ್11 mins ago

Diabetic Chutney: ಡಯಬಿಟಿಕ್‌ ಚಟ್ನಿ ನಿಮಗೆ ಗೊತ್ತೆ? ಇದು ಮಧುಮೇಹಿಗಳಿಗೆ ಉಪಯುಕ್ತ

Bathroom Cleaning Tips
ಲೈಫ್‌ಸ್ಟೈಲ್15 mins ago

Bathroom Cleaning Tips: ಬಾತ್‌ರೂಮ್‌ ಕನ್ನಡಿ ಕೊಳಕಾಗಿದೆಯೇ? ಚಿಂತೆ ಬಿಡಿ, ಈ ಟಿಪ್ಸ್ ಬಳಸಿ

Kalamma Devi Pooja Mahotsava in Kampli
ಧಾರ್ಮಿಕ20 mins ago

Ballari News: ಬಾಯಿಯೊಳಗೆ ತ್ರಿಶೂಲ; ಬೆನ್ನಿಗೆ ಕೊಕ್ಕೆ ಕಟ್ಟಿಕೊಂಡು ಕಾರು, ರಿಕ್ಷಾ ಎಳೆದ ಭಕ್ತರು!

Union Minister Pralhad Joshi election campaign in Sattur
ಕರ್ನಾಟಕ31 mins ago

Lok Sabha Election: 60 ವರ್ಷ ದೇಶವಾಳಿದ ನಕಲಿ ಗಾಂಧಿ ಕಂಪನಿಯಲ್ಲಿ ಪ್ರಧಾನಿ ಅಭ್ಯರ್ಥಿಗೆ ಬರ: ಜೋಶಿ ಲೇವಡಿ

IPL 2024
ಕ್ರೀಡೆ34 mins ago

IPL 2024: ನಾಯಕ ಹಾರ್ದಿಕ್​ ಪಾಂಡ್ಯ ಸೇರಿ ಮುಂಬೈ ತಂಡದ ಆಟಗಾರರಿಗೆ ಬಿತ್ತು ಭಾರೀ ದಂಡ

Salman Khan
ಸಿನಿಮಾ42 mins ago

Salman Khan: ಸಲ್ಮಾನ್‌ ಖಾನ್‌ ಮನೆ ಮೇಲೆ ಫೈರಿಂಗ್‌ ಕೇಸ್‌; ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ

Hassan Pen Drive Case HDK behind Prajwal Pen Drive release DK Brothers allegations
ಹಾಸನ44 mins ago

Hassan Pen Drive Case: ಪ್ರಜ್ವಲ್‌ ಪೆನ್‌ಡ್ರೈವ್‌ ರಿಲೀಸ್‌ ಹಿಂದೆ ಎಚ್‌ಡಿಕೆ? ಡಿಕೆ ಬ್ರದರ್ಸ್‌ ಹೇಳಿದ ಸ್ಫೋಟಕ ಮಾಹಿತಿ ಏನು?

SMART Missile
ಪ್ರಮುಖ ಸುದ್ದಿ46 mins ago

SMART Missile: ನೌಕೆಗಳನ್ನು ಧ್ವಂಸ ಮಾಡುವ ಸ್ಮಾರ್ಟ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ; ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ1 day ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌