Site icon Vistara News

MS Dhoni smoking hookah: ಧೋನಿ ಹುಕ್ಕಾ ಸೇದುವ ವಿಡಿಯೊ ಕಂಡು ದಂಗಾದ ಫ್ಯಾನ್ಸ್​

MS Dhoni smoking hookah

ಬೆಂಗಳೂರು: ಕೂಲ್​ ಕ್ಯಾಪ್ಟನ್​ ಎಂದು ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅದೆಷ್ಟೋ ಜನರಿಗೆ ಸ್ಫೂರ್ತಿ. ಮೈದಾನಲ್ಲಿ ಅವರ ನಡತೆಯಿಂದಲೇ ಅವರು ಕೂಲ್​ ​ಕ್ಯಾಪ್ಟನ್ ಎಂಬ ಬಿರುದು ಪಡೆದಿದ್ದಾರೆ. ಧೋನಿ ಎಂದರೆ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ಒಂದು ಎಮೋಷನ್​. ಆದರೆ. ಧೋನಿ ಹುಕ್ಕಾ ಸೇದುವ(MS Dhoni smoking hookah) ವಿಡಿಯೊ ಕಂಡು ಅವರ ಅಭಿಮಾನಿಗಳು ದಂಗಾಗಿದ್ದಾರೆ.

ಬೈಕ್​ ಮತ್ತು ಕಾರುಗಳ ಮೇಲೆ ಅಪಾರ ಕ್ರೇಜ್​ ಇರುವ ಧೋನಿಗೆ ಹುಕ್ಕಾ ಸೇದುವ ಚಟವಿದೆ ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಹಿಂದೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಜಾರ್ಜ್​ ಬೈಲಿ ಸಂದರ್ಶನವೊಂದರಲ್ಲಿ ಧೋನಿಗೆ ಅಪಾರ ಹುಕ್ಕಾ ಸೇದುವ ಚಟವಿದೆ ಎಂದು ಹೇಳಿದ್ದರು. ಯುವ ಕ್ರಿಕೆಟಿಗರೊಂದಿಗೆ ತಮ್ಮ ಕೊಠಡಿಯಲ್ಲಿ ಕೂತು ಮಾತನಾಡುವ ವೇಳೆ ಧೋನಿ ಹುಕ್ಕಾ ಸೇದುತ್ತಾರೆ ಎಂದು ಹೇಳಿದ್ದರು. ಆದರೆ ಬೈಲಿಯ ಈ ಮಾತನ್ನು ಯಾರು ಕೂಡ ನಂಬಿರಲಿಲ್ಲ. ಬೈಲಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಧೋನಿ ಹುಕ್ಕಾ ಸೇದುವಾಗಲೇ ಸಿಕ್ಕಿ ಬಿದ್ದಿದ್ದಾರೆ.


ಕ್ರಿಸ್​ಮಸ್​ ಮತ್ತು ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಧೋನಿ ತಮ್ಮ ಪರಿವಾರ ಮತ್ತು ಸ್ನೇಹಿತರೊಂದಿಗೆ ಸೇರಿ ದುಬೈನಲ್ಲಿ ಬೀಡು ಬಿಟ್ಟಿದ್ದರು. ಈ ವೇಳೆ ಅವರು ತಮ್ಮ ಗೆಳೆಯರೊಂದಿಗಿನ ಪಾರ್ಟಿಯಲ್ಲಿ ಹುಕ್ಕಾ ಸೇದಿದ್ದಾರೆ. ಇದನ್ನು ಅಲ್ಲಿದ ಕೆಲವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ಕಂಡು ಅವರ ಅಭಿಮಾನಿಗಳು ಪರ ಮತ್ತು ವಿರೋಧದ ಕಮೆಂಟ್​ಗಳನ್ನು ಮಾಡಲಾರಂಭಿಸಿದ್ದಾರೆ.

ಇದನ್ನೂ ಓದಿ ಧೋನಿಯೇ ಮಹಾ ವಂಚಕ; ಸಾಕ್ಷಿ ಸಮೇತ ಆರೋಪ ಮಾಡಿದ ಮಾಜಿ ಬಿಸಿನೆಸ್ ಪಾರ್ಟ್ನರ್

ಕೊನೆಯ ಐಪಿಎಲ್​ ಆಡಲಿರುವ ಧೋನಿ


ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಅವರು ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ನಿವೃತ್ತಿ ಬಳಿಕ ಏನು ಮಾಡಲಿದ್ದೀರ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಧೋನಿ. ಸದ್ಯಕ್ಕೆ ನಾನು ಕ್ರಿಕೆಟ್​ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ಆದರೆ ಒಂದಂತು ನಿಜ, ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಕೆಲ ಕಾಲ ಆರ್ಮಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಅದು ನನ್ನ ಜೀವನದ ಪ್ರಮುಖ ಗುರಿ ಮಾಹಿ ಹೇಳಿದ್ದರು.

Exit mobile version