Site icon Vistara News

Viral Video: ರೇಸರ್​ಗಳಂತೆ ರಾಂಚಿಯಲ್ಲಿ ಬೈಕ್​ ಓಡಿಸಿದ ಧೋನಿ; ಬೈಕ್​ ಬೆಲೆ ಎಷ್ಟು?

Dhoni Rides Honda Repsol 150

ರಾಂಚಿ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(former India captain MS Dhoni) ಅವರು ತಮ್ಮ ತವರಾದ ರಾಂಚಿಯಲ್ಲಿ ಏಕಾಂಗಿಯಾಗಿ ಬೈಕ್​ ಓಡಿಸಿದ್ದಾರೆ. ಅವರು ಬೈಕ್​ನಲ್ಲಿ ಸುತ್ತಾಡಿಕೊಂಡು ವಾಪಸ್​ ಮನೆಗೆ ಬರುತ್ತಿದ್ದ ವೇಳೆ ಧೋನಿ ನಿವಾಸದ ಬಳಿ ಇದ್ದ ವ್ಯಕ್ತಿಯೊಬ್ಬರು ಧೋನಿ ಬೈಕ್​ ಓಡಿಸುತ್ತಿರುವುದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಧೋನಿ ಅವರು ಬೈಕ್​ ಓಡಿಸಿದ ವಿಡಿಯೊ ವೈರಲ್(Viral Video)​ ಆಗಿದ್ದು, ಅವರ ಅಭಿಮಾನಿಗಳು ಹಲವು ಕಮೆಂಟ್​ಗಳನ್ನು ಮಾಡಿದ್ದಾರೆ. ಧೋನಿಯ ಸೆಕ್ಯೂರಿಟಿ ಗಾರ್ಡ್​ ನಿಜಕ್ಕೂ ಅದೃಷ್ಟವಂತ, ಸೂಪರ್​ ರೈಡಿಂಗ್​ ಹೀಗೆ ಹತ್ತು ಹಲವು ಕಮೆಂಟ್​ಗಳನ್ನು ಮಾಡಿದ್ದಾರೆ.

ಹೋಂಡಾ ರೆಪ್ಸೋಲ್ 150

ಧೋನಿ ಅವರು ಓಡಿಸಿದ ಬೈಕ್​ ಹೋಂಡಾ ರೆಪ್ಸೋಲ್ 150(Honda Repsol 150). ಇದರ ಬೆಲೆ ಭಾರತದಲ್ಲಿ ಸುಮಾರು 1.70 ಲಕ್ಷ ರೂ. ಇದೆ. ಕೆಲವು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದರ ಬೆಲೆಯಲ್ಲಿ ಕೋಂಚ ಕಡಿಮೆ ಇದೆ. ಹಾಗೂ ಆಯಾ ರಾಜ್ಯದ ರೋಡ್​ ಟ್ಯಾಕ್ಸ್​ಗೆ ಅನುಗುಣವಾಗಿ ಏರಿಳಿತಗಳು ಇರಬಹುದು. ಆದರೂ ಧೋನಿ ಆದಾಯಕ್ಕೆ ಈ ಬೈಕ್​ ಬೆಲೆ ತೀರಾ ಕಡಿಮೆ. ಸಿಂಪಲ್​ ಲೈಫ್​ ಸ್ಟೈಲ್​ ಅವರ ಪ್ರಮುಖ ಗುಣ.

ಇದನ್ನೂ ಓದಿ MS Dhoni’s Daughter: ಧೋನಿ ಮಗಳ ಶಾಲಾ ಶುಲ್ಕ ಕೇಳಿದರೆ ಅಚ್ಚರಿ ಗ್ಯಾರಂಟಿ!

ಧೋನಿ ಬಳಿ ಇದೆ ದೊಡ್ಡ ಬೈಕ್​ ಗ್ಯಾರೇಜ್​

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಬಳಿಕ ವಿಶ್ರಾಂತ ಜೀವನವನ್ನು ಎಂಜಾಯ್​ ಮಾಡುತ್ತಿರುವ ಧೋನಿ ಅವರು ತಮ್ಮ ಬೈಕ್ ಮತ್ತು ಕಾರ್​ಗಳನ್ನು ಇರಿಸಲು ತಮ್ಮ ಮನೆಯ ಪಕ್ಕದಲ್ಲಿ ದೊಡ್ಡ ಕಟ್ಟಡವನ್ನೇ ಹೊಂದಿದ್ದಾರೆ. ಕೆಳವು ದಿನಗಳ ಹಿಂದೆ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ಧೋನಿಯ ರಾಂಚಿಯಲ್ಲಿರುವ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಧೋನಿ ಫಾರ್ಮ್ ಹೌಸ್​ನಲ್ಲಿರುವ ಬೈಕ್​(ms dhoni bike collection) ಮತ್ತು ಕಾರುಗಳ ವಿಡಿಯೊವನ್ನು ಹಂಚಿಕೊಂಡಿದ್ದರು. ಇದನ್ನು ಕಂಡ ಅನೇಕರು ಅಬ್ಬಾ… ಎಂದು ಆಶ್ಚರ್ಯವಾಗಿದ್ದರು. ಈ ಫಾರ್ಮ್​ಹೌಸ್​ನ ವಿಡಿಯೊ ವೈರಲ್​ ಆಗುತ್ತು.

ಮುಂದಿನ ಐಪಿಎಲ್​ನಲ್ಲೂ ಭಾಗಿ

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಧೋನಿ ಕೇವಲ ಐಪಿಎಲ್​ ಟೂರ್ನಿಯಲ್ಲಿ ಮಾತ್ರ ಆಡುತ್ತಿದ್ದಾರೆ. (Indian Premier League) 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 5ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿ ಐಪಿಎಲ್ ಬಳಿಕ​ ಧೋನಿ ನಿವೃತ್ತಿ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಆಸೆಯಂತೆ ಇನ್ನೊಂದು ಆವೃತ್ತಿಯ ಐಪಿಎಲ್ ಆಡುವುದಾಗಿ ಫೈನಲ್​ ಬಳಿಕ ಧೋನಿ ಹೇಳಿದ್ದರು. ಹೀಗಾಗಿ ಅವರ ಆಟವನ್ನು ಮುಂದಿನ ಆವೃತ್ತಿಯಲ್ಲಿಯೂ ಕಣ್ತುಂಬಿಕೊಳ್ಳಬಹುದಾಗಿದೆ.

Exit mobile version