Site icon Vistara News

Viral Video: ಆ್ಯಂಡರ್ಸನ್ ಬೌಲಿಂಗ್​ಗೆ ನೆಟ್​ ಫ್ರಾಕ್ಟೀಸ್ ಮಾಡಿ ತಂಡ ಸೇರುವ ಬಯಕೆ ವ್ಯಕ್ತಪಡಿಸಿದ ಬ್ರಿಟನ್​ ಪ್ರಧಾನಿ

Viral Video

ಲಂಡನ್​: ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ, ಬ್ರಿಟನ್​ ಪ್ರಧಾನಿ ರಿಷಿ ಸುನಕ್‌(Rishi Sunak) ಅವರಿಗೆ ಕ್ರಿಕೆಟ್​ ಎಂದರೆ ಅಚ್ಚುಮೆಚ್ಚು. ಈಗಾಗಲೇ ಈ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ. ಇದೀಗ ಇಂಗ್ಲೆಂಡ್​ ತಂಡದೊಂದಿಗೆ ಪ್ಯಾಡ್, ಗ್ಲೌಸ್​ ತೊಟ್ಟು ಬ್ಯಾಟಿಂಗ್​ ಅಭ್ಯಾಸ ನಡೆಸಿದ ವಿಡಿಯೊವೊಂದು ವೈರಲ್​(Viral Video) ಆಗಿದೆ. ಈ ವಿಡಿಯೊವನ್ನು ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಮಂಡಳಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.​

ಟೆಸ್ಟ್​ ಕ್ರಿಕೆಟ್​ನ 700 ವಿಕೆಟ್​ ಸಾಧಕ, 41ರ ಹರೆಯದ ಘಾತಕ ವೇಗಿ ಜೇಮ್ಸ್​ ಆ್ಯಂಡರ್ಸನ್​ ಅವರ ಬೌಲಿಂಗ್​ಗೆ ಸುನಕ್ ಅವರು ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದು ನಿಜಕ್ಕೂ ಅಚ್ಚರಿಯಾಗಿದೆ. ಬ್ಯಾಟಿಂಗ್​ ಅಭ್ಯಾಸದ ಬಳಿಕ ಆಟಗಾರರೊಂದಿಗೆ ಮಾತುಕತೆ ನಡೆಸಿದರು. ಕ್ರಿಕೆಟ್​ ಆಡಿದ ವಿಡಿಯೊವನ್ನು ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿಗೆ ಟ್ಯಾಗ್​ ಮಾಡಿ ತಾನು ಕೂಡ ಇಂಗ್ಲೆಂಡ್​ ಪರ ಆಡಲು ಸಿದ್ಧನಿದ್ದೇನೆ?” ಎಂದು ಬರೆದು ಟ್ಯಾಗ್​ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಕ್ರಿಕೆಟ್​ ಮಂಡಳಿ, “ಬಹುಶಃ ನೀವು ಇನ್ನೂ ಕೆಲವು ನೆಟ್ ಸೆಷನ್​ಗಳಲ್ಲಿ ಭಾಗವಹಿಸಬೇಕಾಗಬಹುದು” ಎಂದು ನಗುವ ಎಮೊಜಿಯೊಂದಿಗೆ ಬರೆದುಕೊಂಡಿದೆ.

ಸುನಕ್​ ಅವರು ಇಂಗ್ಲೆಂಡ್​ ಆಟಗಾರರೊಂದಿಗೆ ಕ್ರಿಕೆಟ್​ ಆಡುತ್ತಿರುವುದು ಇದೇ ಮೊದಲೇನಲ್ಲ. 2022ರ ಟಿ20 ವಿಶ್ವಕಪ್ ವಿಜೇತ ಇಂಗ್ಲೆಂಡ್​ ತಂಡದೊಂದಿಗೂ ಆಟವಾಡಿದ್ದರು. ಪ್ರಧಾನಿ ಕಚೇರಿಯಲ್ಲೇ ಕ್ರಿಕೆಟ್​ ಆಡಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಮೂಲಕ ಗಮನ ಸೆಳೆದಿದ್ದರು. ಈ ವಿಡಿಯೊ ಎಲ್ಲಡೆ ವೈರಲ್ ಆಗಿತ್ತು. ಎಡಗೈ ಆಲ್​​ರೌಂಡರ್​ ಸ್ಯಾಮ್​ ಕರನ್(Sam Curran)​ ಬೌಲಿಂಗ್​ ಎದುರಿಸಿದ ಸುನಕ್​ ಉತ್ತಮ ಬ್ಯಾಟಿಂಗ್​ ಕೌಶಲ್ಯ ತೋರಿದ್ದರು.

ಇದನ್ನೂ ಓದಿ Viral Video: ಕೊಹ್ಲಿ ಅಭಿಮಾನಕ್ಕಾಗಿ ರಾಜಸ್ಥಾನ್​ ಜೆರ್ಸಿ ಬಿಟ್ಟು ಆರ್​ಸಿಬಿ ಜೆರ್ಸಿ ತೊಟ್ಟ ಯುವತಿ

ದ್ರಾವಿಡ್​ ನೆಚ್ಚಿನ ಆಟಗಾರ


ಸುನಕ್​ ಅವರಿಗೆ ಕನ್ನಡಿಗ, ಟೀಮ್​ ಇಂಡಿಯಾದ ಮಾಜಿ ನಾಯಕ, ಪ್ರಸ್ತುತ ಮುಖ್ಯ ಕೋಚ್ ಆಗಿರುವ​ ರಾಹುಲ್​ ಡ್ರಾವಿಡ್ ಅವರು ನೆಚ್ಚಿನ ಆಟಗಾರನಂತೆ. ಈ ವಿಚಾರವನ್ನು ಸ್ವತಃ ಅವರೇ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. ‘ರಾಹುಲ್ ದ್ರಾವಿಡ್ (Rahul Dravid) ನನ್ನ ನೆಚ್ಚಿನ ಕ್ರಿಕೆಟಿಗ. ನಾನು ಅವರ ಆಟವನ್ನು ಇಷ್ಟಪಡುತ್ತೇನೆ. ತಾಳ್ಮೆಯಿಂದಲೇ ಬ್ಯಾಟಿಂಗ್​ ನಡೆಸುವ ಮೂಲಕ ಎದುರಾಳಿಗಳಿಗೆ ತಕ್ಕ ಉತ್ತರ ಕೊಡುವ ಅವರ ಕ್ರಿಕೆಟ್​ ತಂತ್ರಗಾರಿಗೆ ನಿಜಕ್ಕೂ ಮೆಚ್ಚಲೇ ಬೇಕು. ಅವರ ವ್ಯಕ್ತಿತ್ವವೂ ಇಷ್ಟ” ಎಂದು ಹೇಳಿದ್ದರು. ಇಂಗ್ಲೆಂಡ್​ ಪ್ರಧಾನಿಯಾಗಿದ್ದರೂ, ಭಾರತದ ಆಟಗಾರನನ್ನೇ ಫೇವರಿಟ್​ ಎಂದು ಹೇಳುವ ಮೂಲಕ ಸುನಕ್​ ಭಾರತೀಯರ ಮನ ಗೆದ್ದಿದ್ದರು.

ಸೌತಾಂಪ್ಟನ್‌ನಲ್ಲಿ 2008ರಲ್ಲಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್​​ ವಿರುದ್ಧದ ಪಂದ್ಯವನ್ನು ವೀಕ್ಷಿಸಿದ ಕುರಿತು ಅನುಭವ ಹಂಚಿಕೊಂಡ ಸುನಕ್​, ಅಂದಿನ ಪಂದ್ಯವನ್ನು ನೋಡು ನಾನು ಹೋಗಿದ್ದೆ, ಆ ಪಂದ್ಯದಲ್ಲಿ ಭಾರತ ಗೆಲುವು ಕಂಡಿತ್ತು. ಸಚಿನ್ ಬ್ಯಾಟಿಂಗ್ ನೋಡಿ ಖಷಿಪಟ್ಟಿದೆ. ಭಾರತ ಗೆದ್ದ ಬಳಿಕ ನಾನು ಕೂಡ ಸಂಭ್ರಮ ಆಚರಿಸಿದ್ದೆ ಎಂದು ಹಳೆಯ ಘಟನೆಯನ್ನು ನೆನಪುಮಾಡಿಕೊಂಡಿದ್ದರು.

Exit mobile version