Site icon Vistara News

ವಿರಾಟ್‌ ಕೊಹ್ಲಿ ಆಫ್ ಫೀಲ್ಡ್‌ನಲ್ಲೂ ದಾಖಲೆ!

ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ 20 ಕೋಟಿ ಫಾಲೊವರ್ಸ್‌ ಪಡೆದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ!

ವಿರಾಟ್‌ ಕೊಹ್ಲಿ ಕ್ರಿಕೆಟ್‌ನಲ್ಲಿ ಹಳೆಯ ದಾಖಲೆಗಳನ್ನು ಮುರಿದು ಹೊಸ ದಾಖಲೆ ಬರೆಯುವುದರಲ್ಲಿ ಸದಾ ಮುಂದೆ. ಈಗ ಇನ್‌ಸ್ಟಾಗ್ರಾಂ ರೆಕಾರ್ಡ್ಸ್‌ ಕೂಡ ಮುರಿದಿದ್ದಾರೆ. ವಿರಾಟ್ ಆನ್‌ ಫೀಲ್ಡ್ ಅಷ್ಟೇ ಅಲ್ಲ, ಆಫ್‌ ಫೀಲ್ಡ್‌ನಲ್ಲಿ ಕೂಡ ರೆಕಾರ್ಡ್‌ ಮಾಡಲು ಸೈ! ಅನಿಸಿಕೊಂಡಿದ್ದಾರೆ!

20 ಕೋಟಿ ಫಾಲೊವರ್ಸ್‌ ಪಡೆದಿರುವ ವಿರಾಟ್‌, ಎಲ್ಲರಿಗೂ ವಿಡಿಯೊ ಮೂಲಕ ಧನ್ಯವಾದ ಹೇಳಿ ಸಂತಸ ವ್ಯಕ್ತಪಡಿಸಿದ್ದಾರೆ. ʼ20 ಕೋಟಿಯ ಇನ್‌ಸ್ಟಾಗ್ರಾಂ ಕುಟುಂಬಕ್ಕೆ ಧನ್ಯವಾದʼ ಎಂದು ವಿರಾಟ್ ಬರೆದಿದ್ದಾರೆ. 

ವಿಶ್ವದ ಅತಿ ಹೆಚ್ಚು ಇನ್‌ಸ್ಟಾಗ್ರಾಂ ಫಾಲೊವರ್ಸ್‌ ಪಡೆದವರ ಪಟ್ಟಿಯಲ್ಲಿ ವಿರಾಟ್‌ 14ನೇ ಸ್ಥಾನದಲ್ಲಿದ್ದಾರೆ. 45 ಕೋಟಿ ಹಿಂಬಾಲಕರನ್ನು ಹೊಂದಿರುವ ಫುಟ್‌ಬಾಲ್‌ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದಾರೆ. ಅಮೆರಿಕದ ಮಾಡೆಲ್‌ ಕೈಲೆ ಜೆನ್ನರ್‌ 34.5 ಕೋಟಿ ಫಾಲೊವರ್ಸ್‌ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. 

ಅತಿ ಹೆಚ್ಚು ಫಾಲೊವರ್ಸ್‌ ಪಡೆದ ಟಾಪ್‌ 8 ಸ್ಥಾನದಲ್ಲಿರುವವರ ಪಟ್ಟಿ:

ಇದನ್ನೂ ಓದಿ: Kohli plan: ಟೀಕೆಗಳಿಂದ ತಪ್ಪಿಸಿಕೊಳ್ಳಲು ಟಿವಿ ಮ್ಯೂಟ್‌ ಮಾಡುತ್ತೇನೆ ಎಂದ ವಿರಾಟ್‌

Exit mobile version