Site icon Vistara News

Virat Kohli Birthday: 35ನೇ ವಸಂತಕ್ಕೆ ಕಾಲಿಟ್ಟ ಕಿಂಗ್ ​ಕೊಹ್ಲಿ; ಶುಭಾಶಯಗಳ ಸುರಿಮಳೆ

Virat Kohli

ಕೋಲ್ಕೊತಾ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​, ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.(Virat Kohli Birthday) ಅವರ ಜನ್ಮದಿನಕ್ಕೆ ಅನೇಕ ಹಾಲಿ ಮತ್ತು ಮಾಜಿ ಆಟಗಾರರು ಶುಭಾಶಯ ಕೋರಿದ್ದಾರೆ. ಇನ್ನೂ ಕೂಡ ಕ್ರಿಕೆಟ್​ನಲ್ಲಿ ಮಹೋನ್ನತ ಸಾಧನೆ ಮಾಡುವಂತಾಗಲಿ ಎಂದು ಹರಸಿದ್ದಾರೆ.

ಬಿಸಿಸಿಐ ವಿರಾಟ್​ ಕೊಹ್ಲಿಗೆ ವಿಶೇಷವಾಗಿ ಶುಭ ಹಾರೈಸಿದೆ. “514 ಪಂದ್ಯಗಳು ಮತ್ತು ಎಣಿಕೆ 🙌 26,209 ರನ್ ಮತ್ತು ಎಣಿಕೆ” ಎಂದು ಬರೆದು ಹಾರೈಸಿದೆ. ಜತೆಗೆ 2011ರ ವಿಶ್ವಕಪ್​ನಿಂದ 2013ರ ಚಾಂಪಿಯನ್ಸ್​ ಟ್ರೋಫಿ ವಿನ್ನರ್​ ಎಂದು ಬರೆದು “ಇಂಡಿಯಾದ ಮಾಜಿ ಕ್ಯಾಪ್ಟನ್ ಹಾಗೂ ಆಧುನಿಕ ಕ್ರಿಕೆಟ್​ನ ಶ್ರೇಷ್ಠ ಬ್ಯಾಟರ್‌ ಕಿಂಗ್​ ಕೊಹ್ಲಿಗೆ ಜನ್ಮದಿನದ ಶುಭಾಶಯಗಳು” ಎಂದು ಬಿಸಿಸಿಐ ತನ್ನ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಶುಭ ಕೋರಿದೆ

ಮಾಜಿ ಆಟಗಾರರಾದ ಸಚಿನ್​ ತೆಂಡೂಲ್ಕರ್​, ವಿರೇಂದ್ರ ಸೆಹವಾಗ್​, ಎಬಿಡಿ ವಿಲಿಯರ್ಸ್​, ಕಾಮೆಂಟ್ರೇಟರ್​ ಹರ್ಷ ಬೋಗ್ಲೆ, ರಾಯಲ್​ ಚಾಲೆಂಜ್​ ಬೆಂಗಳೂರು ಸೇರಿ ಅನೇಕರು ಕೊಹ್ಲಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ ಆಸೀಸ್​-ಪಾಕ್​ಗೆ ಗೆಲುವು; ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ; ಬವುಮಾ ಪಡೆ ಸೆಮಿಗೆ ಲಗ್ಗೆ

70 ಸಾವಿರ ಮಾಸ್ಕ್​ ವಿತರಣೆ

ವಿರಾಟ್​ ಕೊಹ್ಲಿಯ ಜನ್ಮದಿನವಾದ ಕಾರಣ ಬಂಗಾಳ ಕ್ರಿಕೆಟ್‌ ಮಂಡಳಿ ವಿನೂತನ ಶೈಲಿಯ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಪಂದ್ಯ ನಡೆಯುವ ವೇಳೆ 70 ಸಾವಿರ ಕೊಹ್ಲಿಯ ಫೋಟೊ ಇರುವ ಮಾಸ್ಕ್​ಗಳನ್ನು ಅಭಿಮಾನಿಗಳಿಗೆ ಉಚಿತವಾಗಿ ವಿತರಿಸಲಿದೆ. ಬರುವ ಅಭಿಮಾನಿಗಳೆಲ್ಲ ಕೊಹ್ಲಿ ಅವರನ್ನು ಪ್ರೋತ್ಸಾಹಿಸಬೇಕೆನ್ನುವುದು ಇದರ ಉದ್ದೇಶವಾಗಿದೆ. ಇದು ಮಾತ್ರವಲ್ಲದೆ ಪಂದ್ಯ ಆರಂಭಕ್ಕೂ ಮುನ್ನ ಮೈದಾನದಲ್ಲಿ ಕೇಕ್‌ ಕತ್ತರಿಸುವ ಯೋಜನೆಯನ್ನೂ ಬಂಗಾಳ ಸಂಸ್ಥೆ ಮಾಡಿದೆ.

ಕೊಹ್ಲಿ ಸಾಧನೆ

ವಿರಾಟ್ ಕೊಹ್ಲಿ ಅವರು ಇದುವರೆಗೆ ಒಟ್ಟು 288* ಏಕದಿನ ಪಂದ್ಯಗಳನ್ನು ಆಡಿ 58.27 ರ ಸರಾಸರಿಯಲ್ಲಿ 13,525 ರನ್ ಗಳಿಸಿದ್ದಾರೆ. ಇದರಲ್ಲಿ 48* ಶತಕ ಮತ್ತು 71 ಅರ್ಧಶತಕ ಒಳಗೊಂಡಿದೆ. ಬೌಲಿಂಗ್​ನಲ್ಲೂ 4 ವಿಕೆಟ್ ಪಡೆದಿದ್ದಾರೆ. ಟೆಸ್ಟ್​ನಲ್ಲಿ 111 ಪಂದ್ಯಗಳಲ್ಲಿ 8676 ರನ್ ಗಳಿಸಿದ್ದು, 29 ಶತಕ, 7 ದ್ವಿಶತಕ ಮತ್ತು 29 ಅರ್ಧಶತಕ ಸಿಡಿಸಿದ್ದಾರೆ. 254 ಅವರ ಗರಿಷ್ಠ ವೈಯಲ್ತಿಕ ಮೊತ್ತಾವಾಗಿದೆ. 115 ಟಿ20 ಪಂದ್ಯವಾಡಿ 4,008 ರನ್ ಬಾರಿಸಿದ್ದಾರೆ. ಇದರಲ್ಲಿ 37 ಅರ್ಧಶತಕ ಮತ್ತು 1 ಶತಕ ದಾಖಲಾಗಿದೆ. ಮೂರು ಮಾದರಿಯ ಕ್ರಿಕೆಟ್​ನಲ್ಲಿ ಒಟ್ಟು 26,209 ರನ್ ಬಾರಿಸಿದ್ದಾರೆ.

ಸಚಿನ್ ದಾಖಲೆ ಸರಿಗಟ್ಟಲಿದ್ದಾರಾ ಕೊಹ್ಲಿ?

ಇದೇ ಆವೃತಿಯ ವಿಶ್ವಕಪ್​ನಲ್ಲಿ ಮೂರು ಶತಕ ವಂಚಿತವಾಗಿರುವ ವಿರಾಟ್​ ಕೊಹ್ಲಿ ಸದ್ಯ 48 ಏಕದಿನ ಶತಕ ಬಾರಿಸಿದ್ದಾರೆ. ತಮ್ಮ ಜನ್ಮದಿದಂದೇ ಶತಕ ಬಾರಿಸಿ ಸಚಿನ್​ ತೆಂಡೂಲ್ಕರ್​ ಅವರ ಸರ್ವಾಕಾಲಿಕ 49 ಶತಕದ ದಾಖಲೆಯನ್ನು ಸರಿಗಟ್ಟಲಿದ್ದಾರಾ ಎಂಬುವುದು ಪಂದ್ಯದ ಕುತೂಹಲ. ಶತಕ ಬಾರಿಸಲಿ ಎನ್ನುವುದು ಕೊಹ್ಲಿ ಅಭಿಮಾನಿಗಳ ಆಶಯವಾಶ.

Exit mobile version