Site icon Vistara News

Viral Pic: ನಾನು ನನ್ನ ಹೆಂಡತಿಗಿಂತ ಕೊಹ್ಲಿಯನ್ನು ಹೆಚ್ಚಾಗಿ ಪ್ರೀತಿಸುತ್ತೇನೆ! ಅಭಿಮಾನಿಯ ಈ ಭಿತ್ತಿಪತ್ರ ವೈರಲ್

Virat Kohli Fan Holding Hilarious Placard and goes viral pic

ನವದೆಹಲಿ: ಆಸ್ಟ್ರೇಲಿಯಾದ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯವನ್ನು ಭಾರತವು ಮೂರೇ ದಿನದಲ್ಲಿ ಗೆದ್ದು ಬೀಗಿದೆ. ಸಾಮಾನ್ಯವಾಗಿ ಟೆಸ್ಟ್ ಪಂದ್ಯಗಳು ಹಲವಾರು ರೋಚಕ ಸಂಗತಿಗಳಿಗೆ ಸಾಕ್ಷಿಯಾಗುತ್ತವೆ. ಅದೇ ರೀತಿ, ನಾಗ್ಪುರದಲ್ಲಿ ನಡೆದ ಟೆಸ್ಟ್‌ನ ಎರಡನೇ ದಿನ ಪ್ಷೇಕ್ಷಕರ ಗ್ಯಾಲರಿಯಿಂದ ಎದ್ದು ಕಂಡ ಭಿತ್ತಿ ಪತ್ರವು ಇಂಟರ್ನೆಟ್‌ನ ಗಮನ ಸೆಳೆದಿದೆ. ಕ್ರಿಕೆಟ್‌ನ ದೈತ್ಯ ಆಟಗಾರ ವಿರಾಟ್ ಕೊಹ್ಲಿಯ (Virat Kohli) ಕಟ್ಟಾ ಬೆಂಬಲಿಗರೊಬ್ಬರು ತೋರಿಸಿದ ಭಿತ್ತಿ ಪತ್ರವು ಸಾಕಷ್ಟು ವೈರಲ್ ಆಗಿದೆ(Viral Pic).

ಮೊದಲನೇ ಟೆಸ್ಟ್‌ನ ಎರಡನೇ ದಿನ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬ್ಯಾಂಟಿಂಗ್ ಮಾಡುತ್ತಿದ್ದರು. ಈ ವೇಳೆ, ಪ್ರೇಕ್ಷಕರ ಗ್ಯಾಲರಿಯಲ್ಲಿ ವ್ಯಕ್ತಿಯೊಬ್ಬ ಪ್ರದರ್ಶಿಸಿದ ಭಿತ್ತಿ ಪತ್ರವು ಗಮನ ಸೆಳೆಯಿತು. ಕೊಹ್ಲಿ ಫ್ಯಾನ್ ಈ ಭಿತ್ತಿ ಪತ್ರದಲ್ಲಿ ಬರೆದಿದ್ದ ಒಕ್ಕಣಿಕೆ ನಗೆ ತರಿಸುವಂತಿತ್ತು. ಕೊಹ್ಲಿಯ ಈ ಅಭಿಮಾನಿ, ”ನನ್ನ ಹೆಂಡತಿಗಿಂತ ಹೆಚ್ಚು ನಾನು ಕೊಹ್ಲಿಯನ್ನು ಪ್ರೀತಿಸುತ್ತೇನೆ(I love Virat Kohli more than my wife)” ಎಂದು ಬರೆದ ಪ್ಲಕಾರ್ಡ್ ಕ್ಯಾಮೆರಾ ಕಣ್ಣಿಗೆ ಬಿತ್ತು.

ಇದನ್ನೂ ಓದಿ: ವೈರಲ್‌ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!

ಆಸ್ಟ್ರೇಲಿಯನ್ ಪತ್ರಕರ್ತ ಆಡಮ್ ಕಾಲಿನ್ಸ್ ಅವರ ಟ್ವೀಟ್‌ನ ಪ್ರಕಾರ, ಭಿತ್ತಿ ಪ್ರದರ್ಶಿಸಿದ ಕೊಹ್ಲಿ ಅಭಿಮಾನಿಯ ಪತ್ನಿ ಅವನ ಪಕ್ಕದಲ್ಲಿ ನಿಂತಿದ್ದಳು ಮತ್ತು ಸ್ಟ್ಯಾಂಡ್‌ನಿಂದ ಟೀಮ್ ಇಂಡಿಯಾವನ್ನು ಜೋರಾಗಿ ಹುರಿದುಂಬಿಸುತ್ತಿದ್ದಳಂತೆ!

Exit mobile version