Site icon Vistara News

Virat kohli : ಪುತ್ರಿಯ ಫೋಟೊ ತೆಗೆದವನ ಮೇಲೆ ಕಿರುಚಾಡಿ ರೇಗಿದ ಕೊಹ್ಲಿ, ವಿಡಿಯೊ ವೈರಲ್​​

Virat kohli

ನವ ದಹೆಲಿ: ಪುತ್ರಿ ವಾಮಿಕಾಳ ಖಾಸಗಿತನ ಹಾಗೂ ಆಕೆಯ ಬಾಲ್ಯದ ಬದುಕನ್ನು ಆನಂದಿಸಲು ಬಿಡಿ ಎಂಬುದಾಗಿ ಟೀಮ್​ ಇಂಡಿಯಾದ ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿ (Virat kohli) ಆಗಾಗ ನೆಟ್ಟಿಗರಿಗೆ ಮನವಿ ಮಾಡುತ್ತಿರುತ್ತಾರೆ. ಆದರೆ ಪಾಪರಾಜಿಗಳು ಇಂಥದ್ದಕ್ಕೆಲ್ಲ ಕ್ಯಾರೇ ಮಾಡುವುದಿಲ್ಲ. ಮನವಿಯ ನಡುವೆಯೂ ಅವರು ಕದ್ದು ಮುಚ್ಚಿ ಫೊಟೊ ತೆಗೆಯಲು ಯತ್ನಿಸುತ್ತಾರೆ. ಅಂತೆಯೇ ಅಹಮದಾಬಾದ್​​ ಏರ್​ಪೋರ್ಟ್​​ನಲ್ಲಿ ತಮ್ಮ ಪುತ್ರಿಯ ವಿಡಿಯೊ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಕೊಹ್ಲಿ ರೇಗಾಡಿದ ಘಟನೆ ನಡೆದಿದೆ. ಮೊದಲೇ ವಿಶ್ವ ಕಪ್ ಸೋತ ಬೇಸರದಲ್ಲಿದ್ದ ಕೊಹ್ಲಿ ಕೈ ತೋರಿಸಿ ಜೋರಾಗಿ ಕೂಗಾಡಿ ಎಚ್ಚರಿಕೆ ಕೊಟ್ಟಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಈ ಹಿಂದೆ ಹಲವು ಬಾರಿ ತಮ್ಮ ಮಗಳು ವಾಮಿಕಾಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳದಂತೆ ಜನರನ್ನು ಮನವಿ ಮಾಡಿಕೊಂಡಿದ್ದರು. ಅವಳು ಹುಟ್ಟಿದಾಗಿನಿಂದಲೂ ಅದೇ ರೀತಿ ಮಾಡುವಂತೆ ಫೋಟೋಗ್ರಾಫರ್​ಗಳ ಬಳಿ ಬೇಡಿಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಸೋಲಿನ ನಂತರ ಅಹಮದಾಬಾದ್​ನಿಂದ ಕೊಹ್ಲಿ ಹಾಗೂ ಅನುಷ್ಕಾ ಹೊರಟಿದ್ದರು. ಅವರು ಕಲಿನಾ ವಿಮಾನ ನಿಲ್ದಾಣಕ್ಕೆ ಬಂದಾಗ ಪಾಪರಾಜಿಗಳು ಫೋಟೋಗೆ ಯತ್ನಿಸಿದರು. ಈ ವೇಳೆ ಅವರು ಕೋಪಗೊಂಡರು.

ಆದರೂ ಕೆಲವು ಛಾಯಾಗ್ರಾಹಕರು ವಾಮಿಕಾಳ ಚಿತ್ರಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಲೇ ಇದ್ದರು. ತಂದೆಯಾಗಿ ಕೊಹ್ಲಿಗೆ ತಪ್ಪಿನ ಪುನರಾವರ್ತನೆ ಇಷ್ಟವಾಗಲಿಲ್ಲ

ತಾಯಿಯಾಗುತ್ತಿದ್ದಾರೆ ಅನುಷ್ಕಾ

ಅನುಷ್ಕಾ ಮತ್ತೆ ತಾಯಿಯಾಗಲಿದ್ದಾರೆ ಎಂಬ ವದಂತಿಗಳು ಹಬ್ಬಿದೆ. ಅದರ ಚಿತ್ರಗಳನ್ನು ಸೆರೆ ಹಿಡಿಯಲೂ ಅವರು ಪ್ರಯತ್ನಿಸುತ್ತಲೇ ಇದ್ದರು. ಕೊಹ್ಲಿ ಛಾಯಾಗ್ರಾಹಕರು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುತ್ತಲೇ ಇದ್ದರು. ಆ ಸಮಯದಲ್ಲಿ, ಅವರಲ್ಲಿ ಒಬ್ಬರು ವಮಿಕಾ ಅವರ ಚಿತ್ರವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಂಡು ಕೊಹ್ಲಿ ಕೆರಳಿದರು.

ಕೋಪದ ನೋಟದೊಂದಿಗೆ, ಕೊಹ್ಲಿ ಛಾಯಾಗ್ರಾಹಕನ ಮೇಲೆ ಕಿರುಚಲು ಪ್ರಾರಂಭಿಸಿದರು. ಮತ್ತೆ ಅದನ್ನು ಮಾಡದಂತೆ ಬೆರಳಿನಿಂದ ಸನ್ನೆ ಮಾಡಿದರು. ಆಶ್ಚರ್ಯಕರವಾಗಿ, ಅವರ ಸನ್ನೆ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಅನೇಕರು ಛಾಯಾಗ್ರಾಹಕರು ಅವರ ನಡವಳಿಕೆಯನ್ನು ಟೀಕಿಸಿದರು. ನವೆಂಬರ್ 23ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.

ಕೊಹ್ಲಿಗೆ ಮತ್ತೊಂದು ಆಘಾತ; ದೀರ್ಘ ಕಾಲ ಜತೆಗಿದ್ದ ಮ್ಯಾನೇಜರ್ ಜತೆಗಿನ ಸಂಬಂಧ ಅಂತ್ಯ

2023 ರ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಬಳಿಕ ಭಾರತ ತಂಡ ಆಘಾತಕ್ಕೆ ಒಳಗಾಗಿದೆ. ಇದೇ ವೇಳೆ ಟೀಮ್ ಇಂಡಿಯಾದ ಬ್ಯಾಟರ್​ ವಿರಾಟ್​ ಕೊಹ್ಲಿ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅವರ ದೀರ್ಘ ಕಾಲದ ಜತೆಗಾರ, ಮ್ಯಾನೇಜರ್ ಹಾಗೂ ಉದ್ಯಮ ಪಾಲುದಾರ ಬಂಟಿ ಸಜ್ದೇ ಅವರಿಂದ ಪ್ರತ್ಯೇಕಗೊಂಡಿದ್ದಾರೆ. ಜೆರ್ರಿ ಮ್ಯಾಗೈರ್, ಕಾರ್ನರ್ ಸ್ಟೋನ್ ಸಂಸ್ಥಾಪಕರಾಗಿರುವ ಬಂಟಿ ಕೊಹ್ಲಿಯ ಪಾಲುದಾರಿಕೆಯನ್ನು ಬಿಟ್ಟು ಹೋಗುವುದಕ್ಕೆ ಕಾರಣ ಗೊತ್ತಿಲ್ಲ. ಆದರೆ ಕೊಹ್ಲಿ ಶೀಘ್ರದಲ್ಲೇ ತಮ್ಮದೇ ಆದ ಕಂಪನಿಯನ್ನು ಪ್ರಾರಂಭಿಸಲಿದ್ದಾರೆ ಮತ್ತು ಅದನ್ನು ನೋಂದಾಯಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ : Mitchell Marsh : ವಿಶ್ವ ಕಪ್​ ಮೇಲೆಯೇ ಕಾಲಿಟ್ಟ ಮಿಚೆಲ್ ಮಾರ್ಷ್​ಗೆ ಕ್ರಿಕೆಟ್ ಪ್ರೇಮಿಗಳ ತಪರಾಕಿ

“ಹೌದು, ಕೊಹ್ಲಿ ಮತ್ತು ಬಂಟಿ ಬಹಳ ದೀರ್ಘ ಮತ್ತು ಯಶಸ್ವಿನ ಪಾಲುದಾರಿಕೆ ಬಳಿಕ ಇದೀಗ ಬೇರ್ಪಟ್ಟಿದ್ದಾರೆ. ಕಾರ್ನರ್ ಸ್ಟೋನ್ ಸಂಸ್ಥೆಯಿಂದ ಬೇರ್ಪಟ್ಟ ಇತರ ಬಹಳಷ್ಟು ಕ್ರಿಕೆಟಿಗರು ಇದ್ದಾರೆ. ರೋಹಿತ್, ಕೆಎಲ್ ರಾಹುಲ್, ಅಜಿಂಕ್ಯ ರಹಾನೆ, ಶುಭ್ಮನ್ ಗಿಲ್ ಆ ಸಂಸ್ಥೆಯಿಂದ ಬೇರ್ಪಟ್ಟಿದ್ದರು. ಆದರೆ ಕೊಹ್ಲಿ ಈ ಸಂಸ್ಥೆ ಜತೆ ದೀರ್ಘ ಕಾಲದ ನಂಟು ಹೊಂದಿದ್ದರು. ಹೀಗಾಗಿ ಬಿಟ್ಟು ಹೋಗುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇದೀಗ ಅವರ ಆ ಸಂಬಂಧವೂ ಮುಗಿದಿದೆ” ಎಂದು ಉದ್ಯಮದ ಮೂಲವೊಂದು ತಿಳಿಸಿದೆ.

2020ರಲ್ಲಿ, ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್. ಕಾರ್ನ್​ ರ್ಸ್ಟೋನ್ ಸಹಭಾಗಿತ್ವದಲ್ಲಿ ಧರ್ಮ ಕಾರ್ನರ್ಸ್ಟೋನ್ ಏಜೆನ್ಸಿ (ಡಿಸಿಎ) ಎಂಬ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನು ಸ್ಥಾಪಿಸಿತ್ತು. ಆದಾಗ್ಯೂ, ಕಾರ್ನರ್ ಸ್ಟೋನ್ ಅವರೊಂದಿಗಿನ ಕೊಹ್ಲಿಯ ಪಾಲುದಾರಿಕೆ ಪ್ರತ್ಯೇಕವಾಗಿ ಮುಂದುವರಿದಿತ್ತು ಜೆವಿ ಎಂಬ ಹೊಸ ಸಂಸ್ಥೆಯ ಮೂಲಕ ಉದ್ಯಮದಲ್ಲಿತ್ತು.

ಕಾರ್ನರ್ ಸ್ಟೋನ್​ ಸಂಸ್ಥೆಯಲ್ಲಿ ಬಂಟಿ ಇದ್ದರೂ ಅದನ್ನು ಕೊಹ್ಲಿಯೇ ನಡೆಸುತ್ತಿದ್ದಾರೆ ಎಂಬ ಜೋಕ್​ ಉದ್ಯಮ ಕ್ಷೇತ್ರದಲ್ಲಿ ಇದೆ. ಆದರೀಗ ಇಂಥ ಒಪ್ಪಂದ ಮುರಿದು ಹೋಗಿದೆ.

.

Exit mobile version