Virat kohli : ಪುತ್ರಿಯ ಫೋಟೊ ತೆಗೆದವನ ಮೇಲೆ ಕಿರುಚಾಡಿ ರೇಗಿದ ಕೊಹ್ಲಿ, ವಿಡಿಯೊ ವೈರಲ್​​ Vistara News

ಕ್ರಿಕೆಟ್

Virat kohli : ಪುತ್ರಿಯ ಫೋಟೊ ತೆಗೆದವನ ಮೇಲೆ ಕಿರುಚಾಡಿ ರೇಗಿದ ಕೊಹ್ಲಿ, ವಿಡಿಯೊ ವೈರಲ್​​

ತಮ್ಮ ಪುತ್ರಿ ವಾಮಿಕಾಳ ಚಿತ್ರವನ್ನು ತೆಗೆಯದಂತೆ ಕೊಹ್ಲಿ (Virat kohli) ಅನುಷ್ಕಾ ಜೋಡಿ ಆಗಾಗ ಫೋಟೋಗ್ರಾಫರ್​​ಗಳಿಗೆ ಮನವಿ ಮಾಡುತ್ತಿದ್ದಾರೆ.

VISTARANEWS.COM


on

Virat kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದಹೆಲಿ: ಪುತ್ರಿ ವಾಮಿಕಾಳ ಖಾಸಗಿತನ ಹಾಗೂ ಆಕೆಯ ಬಾಲ್ಯದ ಬದುಕನ್ನು ಆನಂದಿಸಲು ಬಿಡಿ ಎಂಬುದಾಗಿ ಟೀಮ್​ ಇಂಡಿಯಾದ ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿ (Virat kohli) ಆಗಾಗ ನೆಟ್ಟಿಗರಿಗೆ ಮನವಿ ಮಾಡುತ್ತಿರುತ್ತಾರೆ. ಆದರೆ ಪಾಪರಾಜಿಗಳು ಇಂಥದ್ದಕ್ಕೆಲ್ಲ ಕ್ಯಾರೇ ಮಾಡುವುದಿಲ್ಲ. ಮನವಿಯ ನಡುವೆಯೂ ಅವರು ಕದ್ದು ಮುಚ್ಚಿ ಫೊಟೊ ತೆಗೆಯಲು ಯತ್ನಿಸುತ್ತಾರೆ. ಅಂತೆಯೇ ಅಹಮದಾಬಾದ್​​ ಏರ್​ಪೋರ್ಟ್​​ನಲ್ಲಿ ತಮ್ಮ ಪುತ್ರಿಯ ವಿಡಿಯೊ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಕೊಹ್ಲಿ ರೇಗಾಡಿದ ಘಟನೆ ನಡೆದಿದೆ. ಮೊದಲೇ ವಿಶ್ವ ಕಪ್ ಸೋತ ಬೇಸರದಲ್ಲಿದ್ದ ಕೊಹ್ಲಿ ಕೈ ತೋರಿಸಿ ಜೋರಾಗಿ ಕೂಗಾಡಿ ಎಚ್ಚರಿಕೆ ಕೊಟ್ಟಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಈ ಹಿಂದೆ ಹಲವು ಬಾರಿ ತಮ್ಮ ಮಗಳು ವಾಮಿಕಾಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳದಂತೆ ಜನರನ್ನು ಮನವಿ ಮಾಡಿಕೊಂಡಿದ್ದರು. ಅವಳು ಹುಟ್ಟಿದಾಗಿನಿಂದಲೂ ಅದೇ ರೀತಿ ಮಾಡುವಂತೆ ಫೋಟೋಗ್ರಾಫರ್​ಗಳ ಬಳಿ ಬೇಡಿಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಸೋಲಿನ ನಂತರ ಅಹಮದಾಬಾದ್​ನಿಂದ ಕೊಹ್ಲಿ ಹಾಗೂ ಅನುಷ್ಕಾ ಹೊರಟಿದ್ದರು. ಅವರು ಕಲಿನಾ ವಿಮಾನ ನಿಲ್ದಾಣಕ್ಕೆ ಬಂದಾಗ ಪಾಪರಾಜಿಗಳು ಫೋಟೋಗೆ ಯತ್ನಿಸಿದರು. ಈ ವೇಳೆ ಅವರು ಕೋಪಗೊಂಡರು.

ಆದರೂ ಕೆಲವು ಛಾಯಾಗ್ರಾಹಕರು ವಾಮಿಕಾಳ ಚಿತ್ರಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಲೇ ಇದ್ದರು. ತಂದೆಯಾಗಿ ಕೊಹ್ಲಿಗೆ ತಪ್ಪಿನ ಪುನರಾವರ್ತನೆ ಇಷ್ಟವಾಗಲಿಲ್ಲ

ತಾಯಿಯಾಗುತ್ತಿದ್ದಾರೆ ಅನುಷ್ಕಾ

ಅನುಷ್ಕಾ ಮತ್ತೆ ತಾಯಿಯಾಗಲಿದ್ದಾರೆ ಎಂಬ ವದಂತಿಗಳು ಹಬ್ಬಿದೆ. ಅದರ ಚಿತ್ರಗಳನ್ನು ಸೆರೆ ಹಿಡಿಯಲೂ ಅವರು ಪ್ರಯತ್ನಿಸುತ್ತಲೇ ಇದ್ದರು. ಕೊಹ್ಲಿ ಛಾಯಾಗ್ರಾಹಕರು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುತ್ತಲೇ ಇದ್ದರು. ಆ ಸಮಯದಲ್ಲಿ, ಅವರಲ್ಲಿ ಒಬ್ಬರು ವಮಿಕಾ ಅವರ ಚಿತ್ರವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಂಡು ಕೊಹ್ಲಿ ಕೆರಳಿದರು.

ಕೋಪದ ನೋಟದೊಂದಿಗೆ, ಕೊಹ್ಲಿ ಛಾಯಾಗ್ರಾಹಕನ ಮೇಲೆ ಕಿರುಚಲು ಪ್ರಾರಂಭಿಸಿದರು. ಮತ್ತೆ ಅದನ್ನು ಮಾಡದಂತೆ ಬೆರಳಿನಿಂದ ಸನ್ನೆ ಮಾಡಿದರು. ಆಶ್ಚರ್ಯಕರವಾಗಿ, ಅವರ ಸನ್ನೆ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಅನೇಕರು ಛಾಯಾಗ್ರಾಹಕರು ಅವರ ನಡವಳಿಕೆಯನ್ನು ಟೀಕಿಸಿದರು. ನವೆಂಬರ್ 23ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.

ಕೊಹ್ಲಿಗೆ ಮತ್ತೊಂದು ಆಘಾತ; ದೀರ್ಘ ಕಾಲ ಜತೆಗಿದ್ದ ಮ್ಯಾನೇಜರ್ ಜತೆಗಿನ ಸಂಬಂಧ ಅಂತ್ಯ

2023 ರ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಬಳಿಕ ಭಾರತ ತಂಡ ಆಘಾತಕ್ಕೆ ಒಳಗಾಗಿದೆ. ಇದೇ ವೇಳೆ ಟೀಮ್ ಇಂಡಿಯಾದ ಬ್ಯಾಟರ್​ ವಿರಾಟ್​ ಕೊಹ್ಲಿ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅವರ ದೀರ್ಘ ಕಾಲದ ಜತೆಗಾರ, ಮ್ಯಾನೇಜರ್ ಹಾಗೂ ಉದ್ಯಮ ಪಾಲುದಾರ ಬಂಟಿ ಸಜ್ದೇ ಅವರಿಂದ ಪ್ರತ್ಯೇಕಗೊಂಡಿದ್ದಾರೆ. ಜೆರ್ರಿ ಮ್ಯಾಗೈರ್, ಕಾರ್ನರ್ ಸ್ಟೋನ್ ಸಂಸ್ಥಾಪಕರಾಗಿರುವ ಬಂಟಿ ಕೊಹ್ಲಿಯ ಪಾಲುದಾರಿಕೆಯನ್ನು ಬಿಟ್ಟು ಹೋಗುವುದಕ್ಕೆ ಕಾರಣ ಗೊತ್ತಿಲ್ಲ. ಆದರೆ ಕೊಹ್ಲಿ ಶೀಘ್ರದಲ್ಲೇ ತಮ್ಮದೇ ಆದ ಕಂಪನಿಯನ್ನು ಪ್ರಾರಂಭಿಸಲಿದ್ದಾರೆ ಮತ್ತು ಅದನ್ನು ನೋಂದಾಯಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ : Mitchell Marsh : ವಿಶ್ವ ಕಪ್​ ಮೇಲೆಯೇ ಕಾಲಿಟ್ಟ ಮಿಚೆಲ್ ಮಾರ್ಷ್​ಗೆ ಕ್ರಿಕೆಟ್ ಪ್ರೇಮಿಗಳ ತಪರಾಕಿ

“ಹೌದು, ಕೊಹ್ಲಿ ಮತ್ತು ಬಂಟಿ ಬಹಳ ದೀರ್ಘ ಮತ್ತು ಯಶಸ್ವಿನ ಪಾಲುದಾರಿಕೆ ಬಳಿಕ ಇದೀಗ ಬೇರ್ಪಟ್ಟಿದ್ದಾರೆ. ಕಾರ್ನರ್ ಸ್ಟೋನ್ ಸಂಸ್ಥೆಯಿಂದ ಬೇರ್ಪಟ್ಟ ಇತರ ಬಹಳಷ್ಟು ಕ್ರಿಕೆಟಿಗರು ಇದ್ದಾರೆ. ರೋಹಿತ್, ಕೆಎಲ್ ರಾಹುಲ್, ಅಜಿಂಕ್ಯ ರಹಾನೆ, ಶುಭ್ಮನ್ ಗಿಲ್ ಆ ಸಂಸ್ಥೆಯಿಂದ ಬೇರ್ಪಟ್ಟಿದ್ದರು. ಆದರೆ ಕೊಹ್ಲಿ ಈ ಸಂಸ್ಥೆ ಜತೆ ದೀರ್ಘ ಕಾಲದ ನಂಟು ಹೊಂದಿದ್ದರು. ಹೀಗಾಗಿ ಬಿಟ್ಟು ಹೋಗುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇದೀಗ ಅವರ ಆ ಸಂಬಂಧವೂ ಮುಗಿದಿದೆ” ಎಂದು ಉದ್ಯಮದ ಮೂಲವೊಂದು ತಿಳಿಸಿದೆ.

2020ರಲ್ಲಿ, ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್. ಕಾರ್ನ್​ ರ್ಸ್ಟೋನ್ ಸಹಭಾಗಿತ್ವದಲ್ಲಿ ಧರ್ಮ ಕಾರ್ನರ್ಸ್ಟೋನ್ ಏಜೆನ್ಸಿ (ಡಿಸಿಎ) ಎಂಬ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನು ಸ್ಥಾಪಿಸಿತ್ತು. ಆದಾಗ್ಯೂ, ಕಾರ್ನರ್ ಸ್ಟೋನ್ ಅವರೊಂದಿಗಿನ ಕೊಹ್ಲಿಯ ಪಾಲುದಾರಿಕೆ ಪ್ರತ್ಯೇಕವಾಗಿ ಮುಂದುವರಿದಿತ್ತು ಜೆವಿ ಎಂಬ ಹೊಸ ಸಂಸ್ಥೆಯ ಮೂಲಕ ಉದ್ಯಮದಲ್ಲಿತ್ತು.

ಕಾರ್ನರ್ ಸ್ಟೋನ್​ ಸಂಸ್ಥೆಯಲ್ಲಿ ಬಂಟಿ ಇದ್ದರೂ ಅದನ್ನು ಕೊಹ್ಲಿಯೇ ನಡೆಸುತ್ತಿದ್ದಾರೆ ಎಂಬ ಜೋಕ್​ ಉದ್ಯಮ ಕ್ಷೇತ್ರದಲ್ಲಿ ಇದೆ. ಆದರೀಗ ಇಂಥ ಒಪ್ಪಂದ ಮುರಿದು ಹೋಗಿದೆ.

.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Rahul Dravid : ರಿಚ್ಮಂಡ್​ ಸರ್ಕಲ್ ಫ್ಲೈಓವರ್​ ಕೆಳಗಡೆ ಕ್ರಿಕೆಟ್​ ಅಡಿದ ದ್ರಾವಿಡ್​, ಕುಂಬ್ಳೆ, ಶ್ರೀನಾಥ್​…

Rahul Dravid: ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಹಲವರ ಚಿತ್ರಗಳನ್ನು ಫೈಓವರ್​ಗಳ ಪಿಲ್ಲರ್​ಗಳಲ್ಲಿ ಬಿಡಿಸಿ ಅಭಿಮಾನಿಗಳಿಗೆ ಖುಷಿ ಕೊಡಲಾಗಿದೆ.

VISTARANEWS.COM


on

Rahul Dravid
Koo

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ರಿಕೆಟ್​ ಸಂಸ್ಕೃತಿ ವ್ಯಾಪಕವಾಗಿದೆ. ಈ ನಗರದಲ್ಲಿ ಕ್ರಿಕೆಟ್ ಆಟವನ್ನು ಆಟವನ್ನು ಹಾಗೂ ಆಟಗಾರರನ್ನು ಆರಾಧಿಸುತ್ತಾರೆ. ಹೀಗಾಗಿ ಬೆಂಗಳೂರು ಕೇಂದ್ರಿದವಾಗಿ ಕರ್ನಾಟಕದಿಂದ ಹಲವಾರು ಅಂತಾರಾಷ್ಟ್ರಿಯ ಕ್ರಿಕೆಟಿಗರು ಮೂಡಿ ಬಂದಿದ್ದಾರೆ. ಅವರೆಲ್ಲರೂ ಕ್ರಿಕೆಟ್​ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು. ಗುಂಡಪ್ಪ ವಿಶ್ವನಾಥ್​, ಜಾವಗಲ್​ ಶ್ರೀನಾಥ್​, ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್, ಅನಿಲ್​ ಕುಂಬ್ಳೆ ಈ ಪಟ್ಟಿಯ ಅಗ್ರಗಣ್ಯರು. ಇವರೆಲ್ಲರೂ ಸೇರಿಕೊಂಡು ಈಗ ಬೆಂಗಳೂರಿನ ಹೃದಯ ಭಾಗದಲ್ಲಿರುವ ರಿಚ್ಮಂಡ್​ ಸರ್ಕಲ್​ ಬಳಿ ಇರುವ ಫ್ಳೈಓವರ್​ ಕೆಳಗೆ ಆಡಿದರೆ ಹೇಗಿರುತ್ತದೆ. ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅದು ಖಂಡಿತವಾಗಿಯೂ ಹಬ್ಬ. ಹಾಗಾದರೆ ಖಂಡಿತ ಬಂದು ನೋಡಿ. ಅವರೆಲ್ಲರೂ ಇಲ್ಲಿ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ.

ಅಂದ ಹಾಗೆ ಅವರು ನಿಜವಾಗಿಯೂ ಕ್ರಿಕೆಟ್​​ ಆಡುತ್ತಿಲ್ಲ. ಅವರ ಚಿತ್ರವನ್ನು ಅಲ್ಲಿನ ಪಿಲ್ಲರ್​ಗಳಲ್ಲಿ ಬಿಡಿಸಲಾಗಿದೆ. ಹಾಗೆಂದು ನಿರಾಸೆಯಾಗುವುದು ಬೇಡ. ಆ ಚಿತ್ರಗಳನ್ನು ನೋಡುವುದು ಕೂಡ ಖುಷಿಯ ವಿಚಾರವೇ ಸರಿ. ಫ್ಲೈಓವರ್ ಗಳ ಕೆಳಗಿರುವ ಜಾಗವನ್ನು ಹೆಚ್ಚಿಸುವ ಉದ್ದೇಶದಿಂದ ‘ಬ್ರಾಂಡ್ ಬೆಂಗಳೂರು’ ಉಪಕ್ರಮದ ಭಾಗವಾಗಿ ಬೆಂಗಳೂರಿನ ಫ್ಲೈಓವರ್ ನ ಕಂಬಗಳ ಮೇಲೆ ರಾಜ್ಯದ ಕ್ರಿಕೆಟ್ ಐಕಾನ್ ಗಳನ್ನು ಭಿತ್ತಿಚಿತ್ರಗಳನ್ನು ಬರೆಯಲಾಗಿದೆ. ರೋಜರ್ ಬಿನ್ನಿ, ಸೈಯದ್ ಕಿರ್ಮಾನಿ, ವಿ ಸುಬ್ರಮಣ್ಯ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಜಾವಗಲ್ ಶ್ರೀನಾಥ್ ಅವರಂತಹ ಪೂಜ್ಯ ಆಟಗಾರರಿಗೆ ಈ ಭಿತ್ತಿಚಿತ್ರಗಳ ಮೂಲಕ ಗೌರವ ಸಲ್ಲಿಸಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಹೊರತುಪಡಿಸಿ ಸಾರ್ವಜನಿಕ ಸ್ಥಳದಲ್ಲಿ ಇಂತಹ ಉಪಕ್ರಮ ಕೈಗೊಂಡಿರುವುದು ಇದೇ ಮೊದಲು. ಹೀಗಾಗಿ ಬೆಂಗಳೂರಿನ ಕ್ರಿಕೆಟ್​ ಪ್ರೇಮಿಗಳಿಗೆ ಇದು ಖುಷಿಯ ವಿಚಾರವಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದೊಂದಿಗೆ ಲಾಭರಹಿತ ಸಂಸ್ಥೆಯಾದ ಇಂಡಿಯಾ ರೈಸಿಂಗ್ ಟ್ರಸ್ಟ್ (ಐಆರ್​ಟಿ) ಈ ಭಿತ್ತಿಚಿತ್ರಗಳನ್ನು ಬಿಡಿಸಿದೆ. ಕರ್ನಾಟಕದ ಪ್ರಸಿದ್ಧ ಕ್ರಿಕೆಟಿಗರ ಅಸಾಧಾರಣ ಕೌಶಲ್ಯ ಮತ್ತು ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಈ ಚಿತ್ರಗಳನ್ನು ಮಾಡಲಾಗಿದೆ.

ಜಿ.ಆರ್.ವಿಶ್ವನಾಥ್ ಅವರ ಸೊಗಸಾದ ಸ್ಕ್ವೇರ್​ ಜಟ್, ಬಿ.ಎಸ್.ಚಂದ್ರಶೇಖರ್ ಅವರ ಅಸಾಮಾನ್ಯ ಲೆಗ್ ಸ್ಪಿನ್, ಶಾಂತಾ ರಂಗಸ್ವಾಮಿ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮತ್ತು ಇಎಎಸ್ ಪ್ರಸನ್ನ ಅವರ ಅಪರೂಪದ ಸ್ಪಿನ್ ಬೌಲಿಂಗ್​ ಕೌಶಲವನ್ನು ಚಿತ್ರಗಳ ಮೂಲಕ ವಿವರಿಸಲಾಗಿದೆ.

ಇದನ್ನೂ ಓದಿ : Chetan Sakariya : ಹರಾಜಿಗೆ ಮೊದಲೇ ಎಂಗೇಜ್ಮೆಂಟ್​ ಮಾಡಿಕೊಂಡ ಐಪಿಎಲ್​ನ ಸ್ಟಾರ್​ ಬೌಲರ್​

ಡಬಲ್ ರೋಡ್ (ಕೆಎಚ್ ರಸ್ತೆ) ಫ್ಲೈಓವರ್ ಮೂಲಕ ಹಾದುಹೋಗುವಾಗ, ಜನರು ಕರ್ನಾಟಕದ ಈ ಪ್ರಸಿದ್ಧ ಕ್ರಿಕೆಟಿಗರ ಪ್ರಯಾಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಹೆಚ್ಚುವರಿಯಾಗಿ. ಈ ಹಿಂದೆ ಡಬಲ್ ರೋಡ್ ಜಂಕ್ಷನ್ ಎಂದು ಕರೆಯಲ್ಪಡುತ್ತಿದ್ದ ರಿಚ್ಮಂಡ್ ಸರ್ಕಲ್ ಫ್ಲೈಓವರ್ ಕೆಳಗಿರುವ ಜಾಗವನ್ನು ‘ಕ್ರೀಡಾ ಜಂಕ್ಷನ್’ ಎಂದು ಮರುನಾಮಕರಣ ಮಾಡಲಾಗಿದೆ.

ಈ ಸ್ಥಳ ಏಕೆ?

ಚಿನ್ನಸ್ವಾಮಿ ಕ್ರೀಡಾಂಗಣ (ಕೆಎಸ್ ಸಿಎ), ಕಂಠೀರವ ಕ್ರೀಡಾಂಗಣ, ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ (ಕೆಎಸ್ ಎಚ್ ಎ), ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣ ಮತ್ತು ಕಬ್ಬನ್ ಪಾರ್ಕ್ ನಲ್ಲಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ (ಕೆಎಸ್ ಎಲ್ ಟಿಎ) ನಗರದ ಐದು ಪ್ರಮುಖ ಕ್ರೀಡಾ ಸ್ಥಳಗಳು ಫ್ಲೈಓವರ್ ನ ಒಂದು ಮೈಲಿ ವ್ಯಾಪ್ತಿಯಲ್ಲಿವೆ. ಕ್ರೀಡಾ ಜಂಕ್ಷನ್ ಎಂಬ ಹೆಸರು ಅದಕ್ಕೆ ಸೂಕ್ತವಾಗಿದೆ. ಇಲ್ಲಿಂದ ಹಾದು ಹೋಗುವ ಎಲ್ಲ ರಸ್ತೆಗಳು ನಾನಾ ಕ್ರೀಡಾಂಗಣಗಳಿಗೆ ಹೋಗುತ್ತವೆ. ಬಲವಾದ ಕ್ರೀಡಾ ಸಂಸ್ಕೃತಿ ಹೊಂದಿರುವ ಹಲವಾರು ಶಾಲೆಗಳು (ಪ್ರತಿಷ್ಠಿತ ಅಂತರ-ಶಾಲಾ ಪಂದ್ಯಾವಳಿಗಳನ್ನು ಆಯೋಜಿಸುತ್ತವೆ), ಮತ್ತು ರಾಜ್ಯದ ಅನೇಕ ಐಕಾನ್​​ ಓದಿರುವ ಶಾಲೆಗಳು ಜಂಕ್ಷನ್​ನ ಹತ್ತಿರದಲ್ಲಿವೆ. ಸೇಂಟ್ ಜೋಸೆಫ್ಸ್ ಬಾಯ್ಸ್ & ಇಂಡಿಯನ್ ಹೈಸ್ಕೂಲ್ಸ್, ಬಿಷಪ್ ಕಾಟನ್, ಬಾಯ್ಸ್ & ಗರ್ಲ್ಸ್, ಬಾಲ್ಡ್ವಿನ್ ಹುಡುಗರು ಮತ್ತು ಹುಡುಗಿಯರು, ಕ್ಯಾಥೆಡ್ರಲ್, ಸೇಕ್ರೆಡ್ ಹಾರ್ಟ್ ಗರ್ಲ್ಸ್​​ ಈ ಪಟ್ಟಿಯಲ್ಲಿದೆ.

Continue Reading

ಕ್ರಿಕೆಟ್

Chetan Sakariya : ಹರಾಜಿಗೆ ಮೊದಲೇ ಎಂಗೇಜ್ಮೆಂಟ್​ ಮಾಡಿಕೊಂಡ ಐಪಿಎಲ್​ನ ಸ್ಟಾರ್​ ಬೌಲರ್​

‘ಮುಂದಿನ ಹೆಜ್ಜೆಯನ್ನು ಒಟ್ಟಿಗೆ ಇಡುವ ಅಚಲ ನಿರ್ಧಾರ ‘ ಎಂದು ಚೇತನ್ ಸಕಾರಿಯಾ (Chetan Sakariya) ತಮ್ಮ ಇನ್​ಸ್ಟಾಗ್ರಾಮ್​ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ.

VISTARANEWS.COM


on

Chetan Sakariya
Koo

ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮಾಜಿ ವೇಗಿ ಚೇತನ್ ಸಕಾರಿಯಾ ಮಂಗಳವಾರ (ಡಿಸೆಂಬರ್ 5) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಡಗೈ ವೇಗಿ ತನ್ನ ಸಂಗಾತಿಯೊಂದಿಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮ ಹ್ಯಾಂಡಲ್​ಗಳಲ್ಲಿ ಅಪ್ಲೋಡ್ ಮಾಡಿದ್ದಾರೆ, ಅವರು ತಮ್ಮ ಪೋಸ್ಟ್​ಗೆ . ಮುಂದಿನ ಹೆಜ್ಜೆಯನ್ನು ಜತೆಯಾಗಿ ಇಡುವ ಅಚಲ ನಿರ್ಧಾರ ಎಂದು ಶೀರ್ಷಿಕೆ ನೀಡಿದ್ದಾರೆ. ವಿಶೇಷವೆಂದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂ​ ಇತ್ತೀಚೆಗೆ ಬಿಡುಗಡೆ ಮಾಡಿದ ನಂತರ ಚೇತನ್ ಸಕಾರಿಯಾ ಮುಂಬರುವ ಐಪಿಎಲ್ 2024 ರ ಹರಾಜಿನಲ್ಲಿ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.

2021ರ ಐಪಿಎಲ್ ಮೆಗಾ ಹರಾಜಿನಲ್ಲಿ ಚೇತನ್ ಸಕಾರಿಯಾ ಡೆಲ್ಲಿ ಕ್ಯಾಪಿಟಲ್ಸ್​ನೊಂದಿಗೆ 4.2 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದ್ದರು. ಆದಾಗ್ಯೂ, ಎಡಗೈ ವೇಗಿಗೆ ಐಪಿಎಲ್​ನಲ್ಲಿ ಡಿಸಿಯನ್ನು ಪ್ರತಿನಿಧಿಸಲು ಬಹಳ ಕಡಿಮೆ ಅವಕಾಶಗಳು ಪಡೆದುಕೊಂಡರು. ಕ್ಯಾಪಿಟಲ್ಸ್ ಪರ ಆಡುವ ಮೊದಲು ಸಕಾರಿಯಾ ತಮ್ಮ ಚೊಚ್ಚಲ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು.

ಐಪಿಎಲ್​​ನಲ್ಲಿ ಚೇತನ್ ಸಕಾರಿಯಾ ಅವರ ಅಂಕಿ ಅಂಶಗಳ ಬಗ್ಗೆ ಮಾತನಾಡಿವುದಾದರೆ ಎಡಗೈ ವೇಗಿ 19 ಪಂದ್ಯಗಳನ್ನು ಆಡಿದ್ದಾರೆ ಮತ್ತು 29.95 ಸರಾಸರಿಯಲ್ಲಿ 20 ವಿಕೆಟ್​​ಗಳನ್ನು ಪಡೆದಿದ್ದಾರೆ. ಸಕಾರಿಯಾ 8.44 ಎಕಾನಮಿ ರೇಟ್ ಹೊಂದಿದೆ. ಅಂತಾರಾಷ್ಟ್ರೀಯ ಪಂದ್ಯಗಳ ವಿಚಾರಕ್ಕೆ ಬಂದರೆ 25 ವರ್ಷದ ವೇಗಿ ಎರಡು ಟಿ 20 ಮತ್ತು ಒಂದು ಏಕದಿನ ಪಂದ್ಯವನ್ನು ಆಡಿದ್ದು, ಒಟ್ಟು ಮೂರು ವಿಕೆಟ್​ಗಳನ್ನು ಪಡೆದಿದ್ದಾರೆ.

ಸಕಾರಿಯಾ ಮುಂಬರುವ ಐಪಿಎಲ್ 2024 ಹರಾಜಿನಲ್ಲಿ ಲಭ್ಯವಿರುತ್ತಾರೆ. ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳಲ್ಲಿ ಉತ್ತಮ ಎಡಗೈ ವೇಗದ ಬೌಲರ್​ಗಳ ಕೊರತೆಯಿದೆ. ಇದರ ಪರಿಣಾಮವಾಗಿ, ಮುಂಬರುವ ಐಪಿಎಲ್ ಹರಾಜಿನಲ್ಲಿ ಅವರು ಚೇತನ್ ಸಕಾರಿಯಾ ಅವರನ್ನು ಗುರಿಯಾಗಿಸಬಹುದು.

ಇದನ್ನೂ ಓದಿ : BCCI : ಬಿಸಿಸಿಐಗೆ ದೊಡ್ಡ ಮೊತ್ತ ಬಾಕಿ, ಬೈಜೂಸ್​ಗೆ ಮತ್ತೊಂದು ಸಂಕಷ್ಟ

ಸಕಾರಿಯಾ ಹೊರತುಪಡಿಸಿ, ಒಟ್ಟು 1166 ಆಟಗಾರರು ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ/ ಅದರಲ್ಲಿ 830 ಭಾರತೀಯರು ಮತ್ತು ಉಳಿದ 336 ವಿದೇಶಿ ಆಟಗಾರರು. ಈ ಪಟ್ಟಿಯಲ್ಲಿ 212 ಕ್ಯಾಪ್ಡ್ ಆಟಗಾರರು, 909 ಅನ್ಕ್ಯಾಪ್ಡ್ ಆಟಗಾರರು ಮತ್ತು 45 ಅಸೋಸಿಯೇಟ್ ಆಟಗಾರರು ಸೇರಿದ್ದಾರೆ. ಐಪಿಎಲ್ ಹರಾಜು ಡಿಸೆಂಬರ್ 19, 2023 ರಂದು ದುಬೈನ ಕೋಕಾ ಕೋಲಾ ಅರೆನಾದಲ್ಲಿ ನಡೆಯಲಿದೆ.

Continue Reading

ಕ್ರಿಕೆಟ್

BCCI : ಬಿಸಿಸಿಐಗೆ ದೊಡ್ಡ ಮೊತ್ತ ಬಾಕಿ, ಬೈಜೂಸ್​ಗೆ ಮತ್ತೊಂದು ಸಂಕಷ್ಟ

ಪ್ರಾಯೋಜಕತ್ವದ 158 ಕೋಟಿ ರೂಪಾಯಿಗಳನ್ನು ಪಾವತಿ ಮಾಡಲು ವಿಫಲಗೊಂಡಿರುವ ಬೈಜೂಸ್​ ಸಂಸ್ಥೆ ಕಾನೂನು ತೊಡಕುಗಳನ್ನು ಎದುರಿಸಲಿದೆ.

VISTARANEWS.COM


on

Byjus
Koo

ನವದೆಹಲಿ: ಎಜುಟೆಕ್​ ದೈತ್ಯ ಬೈಜುಸ್ 158 ಕೋಟಿ ರೂ.ಗಳನ್ನು ಪಾವತಿಸಲು ವಿಫಲವಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ಘೋಷಿಸಿದೆ. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್​​ಸಿಎಲ್​​ಟಿ ) ವೆಬ್​ಸೈಟ್​​ನಲ್ಲಿ ಲಭ್ಯವಿರುವ ಮಾಹಿತಿಯ ಮೂಲಕ ಈ ಪ್ರಕಟಣೆ ಬೆಳಕಿಗೆ ಬಂದಿದೆ. ಇದು ಶಿಕ್ಷಣ ತಂತ್ರಜ್ಞಾನ ಸಂಸ್ಥೆಗೆ ದೊಡ್ಡ ಮಟ್ಟದ ಕಾನೂನು ಸಮಸ್ಯೆ ಎದುರಾಗುವ ಸುಳಿವು ನೀಡಿದೆ.

ಇದಕ್ಕೆ ಪ್ರತಿಕ್ರಿಯಿಸಲು ಎನ್​​ಸಿಎಲ್​ಟಿ ಬೈಜುಗೆ ಎರಡು ವಾರಗಳ ಅವಧಿಯನ್ನು ನೀಡಿದೆ. ನಂತರ ಬಿಸಿಸಿಐಗೆ ಪ್ರತಿಕ್ರಿಯೆ ಸಲ್ಲಿಸಲು ಹೆಚ್ಚುವರಿ ವಾರ ಕಾಲಾವಕಾಶ ನೀಡಲಾಗಿದೆ. ಆರಂಭದಲ್ಲಿ ಸೆಪ್ಟೆಂಬರ್ 8ರಂದು ದಾಖಲಾದ ಈ ಪ್ರಕರಣವನ್ನು ನವೆಂಬರ್ 15 ರಂದು ಅಧಿಕೃತವಾಗಿ ನೋಂದಾಯಿಸಲಾಗಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 22 ಕ್ಕೆ ನಿಗದಿಪಡಿಸಲಾಗಿದೆ.

ಬಿಸಿಸಿಐ, ಐಸಿಸಿ ಮತ್ತು ಫಿಫಾದೊಂದಿಗೆ ಗಮನಾರ್ಹ ಬ್ರ್ಯಾಂಡಿಂಗ್ ಪಾಲುದಾರಿಕೆಗೆ ಹೆಸರುವಾಸಿಯಾದ ಬೈಜುಸ್, 2023ರಲ್ಲಿ ನವೀಕರಣದ ಅವಧಿ ಬಂದಿದೆ. ಅವುಗಳಲ್ಲಿ ಯಾವುದನ್ನೂ ನವೀಕರಿಸುವುದಿಲ್ಲ ಎಂದು ಈ ಹಿಂದೆ ದೃಢಪಡಿಸಲಾಗಿತ್ತು. ಪ್ರಸ್ತುತ ಮೊಕದ್ದಮೆಯು ಈ ಪಾಲುದಾರಿಕೆಗಳಿಗೆ ಸಂಬಂಧಿಸಿದೆಯೇ ಅಥವಾ ಬೇರೆ ವಿಷಯವನ್ನು ಒಳಗೊಂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಬೈಜೂಗೆ ಕಾನೂನು ಸಮಸ್ಯೆ

ಈ ಆರ್ಥಿಕ ಹಿನ್ನಡೆಯು ಬೈಜೂಸ್​​​ಗೆ ಸವಾಲಿನ ಪಟ್ಟಿಯಲ್ಲಿನ ಹೊಸದು. ಫೆಮಾ ಉಲ್ಲಂಘನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಇತ್ತೀಚೆಗೆ ಬೈಜು ಅವರ ಮಾತೃ ಕಂಪನಿ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಶೋಕಾಸ್ ನೋಟಿಸ್ ಕಳುಹಿಸಿರುವ ನಂತರದ ಪ್ರಕರಣ. ವಜಾಗೊಂಡ ಉದ್ಯೋಗಿಗಳ ಇತ್ಯರ್ಥಗಳನ್ನು ವಿಳಂಬಗೊಳಿಸಿದ್ದಕ್ಕಾಗಿ ಕಂಪನಿಯು ಟೀಕೆಗಳನ್ನು ಎದುರಿಸಿತ್ತು ಮತ್ತು ಕಾರ್ಯತಂತ್ರದ ಪರಿಶೀಲನೆಗೆ ಒಳಗಾಗಿದೆ. ಹಣವನ್ನು ಸಂಗ್ರಹಿಸಲು ಗ್ರೇಟ್ ಲರ್ನಿಂಗ್ ಮತ್ತು ಎಪಿಕ್ ನಂತಹ ಸ್ವತ್ತುಗಳನ್ನು ಮಾರಾಟಕ್ಕೆ ಇಟ್ಟಿದೆ.

ಇದನ್ನೂ ಓದಿ : BCCI : ಲಂಕಾ ಮಂಡಳಿ ಬಳಿಕ ಇದೀಗ ಬಿಸಿಸಿಐಗೂ ಬ್ಯಾನ್ ಆಗುವ ಭಯ?

ಮಾರ್ಚ್ 2022 ರಲ್ಲಿ 22 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದ್ದ ಬೈಜುಸ್ ವಿಳಂಬವಾದ ಆರ್ಥಿಕ ಫಲಿತಾಂಶಗಳು ಅದರ ಲೆಕ್ಕಪರಿಶೋಧಕ ಡೆಲಾಲ್ಟ್​ ರಾಜೀನಾಮೆ ಮತ್ತು ಪ್ರಮುಖ ಮಂಡಳಿಯ ಸದಸ್ಯರ ನಿರ್ಗಮನ ಸೇರಿದಂತೆ ವಿವಿಧ ವಿಷಯಗಳಿಗಾಗಿ ಗಮನ ಸೆಳೆದಿದೆ. ಹಣಕಾಸಿನ ಸವಾಲುಗಳನ್ನು ನ್ಯಾವಿಗೇಟ್ ಮಾಡುವ ಕಂಪನಿಯ ಪ್ರಯತ್ನವು ಆರು ತಿಂಗಳೊಳಗೆ 1.2 ಬಿಲಿಯನ್ ಅವಧಿ ಸಾಲ ಬಿ ಅನ್ನು ಸಂಪೂರ್ಣವಾಗಿ ಮರುಪಾವತಿಸುವ ಪ್ರಸ್ತಾಪವನ್ನು ಒಳಗೊಂಡಿದೆ. ಜೊತೆಗೆ ಅಗತ್ಯ ನಿಧಿಗಳನ್ನು ಪಡೆಯಲು ಅದರ ಸ್ವತ್ತುಗಳ ಕಾರ್ಯತಂತ್ರದ ಪರಿಶೀಲನೆಯನ್ನು ಒಳಗೊಂಡಿದೆ.

ಬೈಜುಸ್ ಈ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವಾಗ ಬಿಸಿಸಿಐನೊಂದಿಗಿನ ಕಾನೂನು ಪ್ರಕ್ರಿಯೆಗಳು ಭಾರತದ ಪ್ರಮುಖ ಎಜುಟೆಕ್​ ಕಂಪನಿಯನ್ನು ಅನಿಶ್ಚಿತತೆಗೆ ದೂಡಿದೆ.

Continue Reading

ಕ್ರಿಕೆಟ್

IPL 2024 : ರೋಹಿತ್​, ಪಾಂಡ್ಯ ಅಲ್ಲ; ಮುಂಬಯಿ ಇಂಡಿಯನ್ಸ್​ ತಂಡಕ್ಕೆ ಈ ಬಾರಿ ಹೊಸ ನಾಯಕ?

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಭಾರತ 4-1 ಅಂತರದಿಂದ ಗೆದ್ದುಕೊಂಡ ನಂತರ ನಾಯಕ ಸೂರ್ಯಕುಮಾರ್ ಯಾದವ್ ಐಪಿಎಲ್​ನಲ್ಲಿ (IPL 2024 ) ಮುಂಬಯಿ ತಂಡದ ನಾಯಕತ್ವದ ರೇಸ್​ನಲ್ಲಿ ನಿಂತಿದ್ದಾರೆ.

VISTARANEWS.COM


on

Rohit Sharma
Koo

ಮುಂಬಯಿ: ಐಪಿಎಲ್ 2024 ರ (IPL 2024) ಮಿನಿ ಹರಾಜಿಗೆ ಮುಂಚಿತವಾಗಿ ನಡೆದ ಹಾರ್ದಿಕ್ ಪಾಂಡ್ಯ ಅವರ ಟ್ರೇಡಿಂಗ್​​ ​ ಪ್ರಕ್ರಿಯೆ ಇಂಡಿಯನ್ಸ್​​ನಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ. ತಂಡಕ್ಕೆ ಯಾರು ನಾಯಕರಾಗುತ್ತಾರೆ ಎಂಬ ಚರ್ಚೆ ಶುರುವಾಗಿದೆ. ಕಾಯಂ ನಾಯಕ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಪಾಂಡ್ಯ ಅವರಿಗೆ ಪಟ್ಟ ಕಟ್ಟಲಾಗುತ್ತದೆ ಎಂದು ವರದಿಗಳು ಹೇಳಿವೆ. ಆದರೆ, ಭಾರತದ ಮಾಜಿ ಆಟಗಾರ ಅಜಯ್ ಜಡೇಜಾ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಪಿಎಲ್ 2024 ಋತುವಿನಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಜೂನ್ 04, 2024 ರಿಂದ ಪ್ರಾರಂಭವಾಗುವ ಟಿ 20 ವಿಶ್ವ ಕಪ್​ಗಾಗಿ ರೋಹಿತ್​ ಶರ್ಮಾ ಪೂರ್ಣ ಐಪಿಎಲ್ ಋತುವಿನಲ್ಲಿ ಆಡಬಾರದು. ಅವರು ಫಿಟ್ ಆಗಿರಬೇಕು. ಅದಕ್ಕಾಗಿ ಸೂರ್ಯಕುಮಾರ್ ಅವರಿಗೆ ನಾಯಕತ್ವ ನೀಡಬೇಕು ಎಂದು ಅವರು ಹೇಳಿದ್ದಾರೆ. “ಐಪಿಎಲ್ 2024 ರ ಋತುವಿನಲ್ಲಿ ರೋಹಿತ್ ಶರ್ಮಾ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದರೆ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ನಾಯಕನಾಗಬಹುದು” ಎಂದು ಜಡೇಜಾ ಕ್ರೀಡಾ ವೆಬ್​ಸೈಟ್​ಗೆ ಹೇಳಿದ್ದಾರೆ.

ಐಸಿಸಿ ಟೂರ್ನಮೆಂಟ್​ಗೆ ಫಿಟ್ ಮತ್ತು ಫ್ರೆಶ್​ ಆಗಿರವಲು ಭಾರತೀಯ ತಾರೆಯರು ಐಪಿಎಲ್ ಸಮಯದಲ್ಲಿ ವಿಶ್ರಾಂತಿ ಪಡೆಯಬೇಕು ಎಂದು ಜಡೇಜಾ ಅಭಿಪ್ರಾಯಪಟ್ಟಿದ್ದಾರೆ. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಬೆನ್ ಸ್ಟೋಕ್ಸ್ ಅವರಂತಹ ಸಾಕಷ್ಟು ವಿದೇಶಿ ಆಟಗಾರರು ರಾಷ್ಟ್ರೀಯ ಬದ್ಧತೆಗಳ ಕಾರಣಕ್ಕೆ ಐಪಿಎಲ್ ಋತುಗಳಿಂದ ಹೊರಗುಳಿದಿದ್ದಾರೆ. ಆದಾಗ್ಯೂ, ಭಾರತದಲ್ಲಿ ಐಪಿಎಲ್ ಋತುವಿನಲ್ಲಿ ಯಾವುದೇ ಆಟಗಾರರು ವಿಶ್ರಾಂತಿ ಪಡೆಯುವುದಿಲ್ಲ ಎಂಬುದಾಗಿ ಜಡೇಜಾ ಹೇಳಿದ್ದಾರೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸದ್ಯ ವೈಟ್ ಬಾಲ್ ಕ್ರಿಕೆಟ್​ನಿಂದ ಅನಿರ್ದಿಷ್ಟಾವಧಿ ವಿರಾಮದಲ್ಲಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಟಿ 20 ವಿಶ್ವಕಪ್​ನಲ್ಲಿ ಬಲಗೈ ಬ್ಯಾಟ್ಸ್ಮನ್ ಭಾರತವನ್ನು ಮುನ್ನಡೆಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲದೆ, ಐಪಿಎಲ್ 2024 ಋತುವಿನಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಗಮನ ಸೆಳೆದ ಸೂರ್ಯ

ಸೂರ್ಯಕುಮಾರ್ ಯಾದವ್ ಬಗ್ಗೆ ಹೇಳುವುದಾದರೆ, ಮುಂಬೈ ಇಂಡಿಯನ್ಸ್ ಆಟಗಾರ ಆಸ್ಟ್ರೇಲಿಯಾ ವಿರುದ್ಧದದ ಟಿ20 ಸರಣಿಯಲ್ಲಿ ಭಾರತ ತಮಡದ ನಾಯಕನಾಗಿ ತಮ್ಮ ಚೊಚ್ಚಲ ಟಿ 20 ಸರಣಿಯಲ್ಲೇ ಗಮನ ಸೆಳೆದಿದ್ದಾರೆ. ಸರಣಿಯಲ್ಲಿ ಭಾರತ 4-1 ಅಂತರದ ಗೆಲುವು ಸಾಧಿಸಿದೆ. ಈ ಸರಣಿಯಲ್ಲಿ ರವಿ ಬಿಷ್ಣೋಯ್, ರಿಂಕು ಸಿಂಗ್ ಮತ್ತು ಮುಖೇಶ್ ಕುಮಾರ್ ಅವರಂತಹ ಕೆಲವು ಯುವ ಆಟಗಾರರಿಂದ ಉತ್ತಮ ಪ್ರದರ್ಶನ ನೀಡಿದ್ದಾರೆ.

ಇದನ್ನೂ ಓದಿ : MS Dhoni : ಐಪಿಎಲ್​ಗೆ ಮೊದಲು ಇಷ್ಟ ದೇವತೆಯ ದರ್ಶನ ಪಡೆದ ಎಂ ಎಸ್ ಧೋನಿ

ಪ್ರಸ್ತುತ, ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡದ ಉಪನಾಯಕರಾಗಿದ್ದಾರೆ. ರೋಹಿತ್ ಅನುಪಸ್ಥಿತಿಯಲ್ಲಿ ಕಳೆದ ಋತುವಿನಲ್ಲಿ ಕೆಲವು ಪಂದ್ಯಗಳಿಗೆ ಫ್ರಾಂಚೈಸಿಯನ್ನು ಮುನ್ನಡೆಸಿದ್ದರು. ಆದರೆ ಎಂಐ ಅವರಿಗೆ ಪೂರ್ಣಾವಧಿ ನಾಯಕತ್ವವನ್ನು ನೀಡುತ್ತದೆಯೇ ಎಂಬುದು ಪ್ರತಿಯೊಬ್ಬರೂ ತಿಳಿದುಕೊಳ್ಳಲು ಬಯಸುವ ಪ್ರಶ್ನೆಯಾಗಿದೆ.

Continue Reading
Advertisement
BJP knew the result two days earlier vote count Says Congress
ದೇಶ30 mins ago

ಬಿಜೆಪಿಗೆ ರಿಸಲ್ಟ್ ಎರಡು ದಿನ ಮೊದ್ಲೇ ಗೊತ್ತಿತ್ತು! ಕಾಂಗ್ರೆಸ್ ಹೊಸ ವರಾತ್

HD Kumaraswamy
ಕರ್ನಾಟಕ31 mins ago

HD Kumaraswamy: ವೈಯಕ್ತಿಕವಾಗಿ ಕೆಣಕಿದರೆ ನಾನು ಸುಮ್ಮನಿರಲ್ಲ ಎಂದ ಎಚ್‌ಡಿಕೆ

Rahul Dravid
ಕ್ರಿಕೆಟ್37 mins ago

Rahul Dravid : ರಿಚ್ಮಂಡ್​ ಸರ್ಕಲ್ ಫ್ಲೈಓವರ್​ ಕೆಳಗಡೆ ಕ್ರಿಕೆಟ್​ ಅಡಿದ ದ್ರಾವಿಡ್​, ಕುಂಬ್ಳೆ, ಶ್ರೀನಾಥ್​…

Minister Ramalinga Reddy statement
ಕರ್ನಾಟಕ49 mins ago

5 ಕೋಟಿ ವೆಚ್ಚದಲ್ಲಿ‌ ಇಟಗಿ-ಸಾಸಲವಾಡ ಏತ ನೀರಾವರಿ ಯೋಜನೆ ಪೂರ್ಣ: ಸಚಿವ ರಾಮಲಿಂಗಾ ರೆಡ್ಡಿ

Senior journalist Ravi Hegde spoke at the 10th anniversary program of Surabhivani newspaper in Soraba
ಶಿವಮೊಗ್ಗ50 mins ago

Shivamogga News: ಪ್ರಶಸ್ತಿ, ಸನ್ಮಾನಗಳಿಂದ ಸಮಾಜಮುಖಿ ಕಾರ್ಯಕ್ಕೆ ಪ್ರೇರಣೆ: ರವಿ ಹೆಗಡೆ

Crime Logo
ಕರ್ನಾಟಕ1 hour ago

Murder Case: ಮಚ್ಚಿನಿಂದ ಕೊಚ್ಚಿ ಮಗನನ್ನೇ ಕೊಲೆಗೈದ ತಂದೆ

CM Siddaramaiah and Black magic
ಕರ್ನಾಟಕ1 hour ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

Gautam adani wealth increased by 10 billion dollars in a week
ದೇಶ2 hours ago

Gautam Adani: ಒಂದೇ ವಾರದಲ್ಲಿ ಅದಾನಿ ಸಂಪತ್ತಿನಲ್ಲಿ 10 ಶತಕೋಟಿ ಡಾಲರ್ ಏರಿಕೆ!

onion flower
ಆರೋಗ್ಯ2 hours ago

Weight Loss Tips: ದೇಹ ತೂಕ ಇಳಿಸಲು ಸಹಕಾರಿ ಈ ಈರುಳ್ಳಿ ಹೂವು!

R Ashok in assembly session
ಕರ್ನಾಟಕ2 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

CM Siddaramaiah and Black magic
ಕರ್ನಾಟಕ1 hour ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ2 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ2 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ17 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

ಟ್ರೆಂಡಿಂಗ್‌