ನವದೆಹಲಿ: ಭಾರತದ ಬ್ಯಾಟಿಂಗ್ ಸೂಪಸ್ಟಾರ್ ಹಾಗೂ ಆಧುನಿಕ ಯುಗದ ಕ್ರಿಕೆಟ್ನ ಮಹಾನ್ ಪ್ರತಿಭಾವಂತ ವಿರಾಟ್ ಕೊಹ್ಲಿ (Virat Kohli) ಆಗಸ್ಟ್ 18 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 16 ವರ್ಷಗಳ ಮೈಲಿಗಲ್ಲು ದಾಟಿದ್ದಾರೆ. ಇದು ಅವರ ಅಗಾಧ ಪ್ರತಿಭೆ ಹಾಗೂ ಶ್ರಮಕ್ಕೆ ಸಾಕ್ಷಿಯಾಗಿದೆ. ಕ್ರಿಕೆಟ್ ಆಟದಲ್ಲಿ ಅವರ ಪ್ರಾಬಲ್ಯದ ಬಗ್ಗೆ ಮೆಚ್ಚದವರೇ ಇಲ್ಲ. ಅಂತಾರಾಷ್ಟ್ರಿಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದಾಗಿನಿಂದ ಕೊಹ್ಲಿ ತಮ್ಮ ಅಭಿಮಾನಿಗಳು ಮತ್ತು ಕ್ರಿಕೆಟ್ ವಿಶ್ಲೇಷಕರನ್ನು ಮೋಡಿ ಮಾಡುತ್ತಿದ್ದಾರೆ. ಆದರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಾಸಿತ್ ಅಲಿ ಕೊಹ್ಲಿ ಬಗ್ಗೆ ಕಳಪೆ ಕಾಮೆಂಟ್ ಮಾಡಿದ್ದಾರೆ. ಅವರನ್ನು ಕಿಂಗ್ ಎಂದು ಕರೆಯಬಾರದು ಎಂದು ಹೇಳಿದ್ದಾರೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ತರಬೇತುದಾರ ಬಾಸಿತ್ ಅಲಿ ಅವರು ಕೊಹ್ಲಿಯ ಕ್ರಿಕೆಟ್ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಆದರೆ, ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ಸಯೀದ್ ಅನ್ವರ್, ಜಾವೇದ್ ಮಿಯಾಂದಾದ್ ಮತ್ತು ಇಂಜಮಾಮ್-ಉಲ್-ಹಕ್ ಅವರಂತಹ ದಂತಕಥೆಗಳಿಗೆ ಹೋಲಿಸುವ ಮೂಲಕ ಕೊಹ್ಲಿಯ ಸಾಧನೆ ಏನೂ ಅಲ್ಲ ಎಂದು ಹೇಳಿದ್ದಾರೆ.
ಬಾಸಿತ್ ಅಲಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡುತ್ತಾ, ಕೊಹ್ಲಿಯದ್ದು ದೊಡ್ಡ ಸಾಧನೆ. ಅವರು ಇನ್ನೂ 3 ವರ್ಷಗಳ ಕಾಲ ಆಡಲಿದ್ದಾರೆ. ಒಟ್ಟು 19 ವರ್ಷಗಳ ಕಾಲ ಆಡಲಿದ್ದಾರೆ. ಅವರು ತುಂಬಾ ಫಿಟ್ ಆಗಿದ್ದಾರೆ. ವಿರಾಟ್ ಕೊಹ್ಲಿಯ ಬದ್ಧತೆ ಉತ್ತಮವಾಗಿದೆ. ಸಚಿನ್, ಅನ್ವರ್, ಜಾವೇದ್, ಇಂಜಮಾಮ್, ಗವಾಸ್ಕರ್, ಮೊಹಮ್ಮದ್ ಯೂಸುಫ್ ಮತ್ತು ಯೂನಿಸ್ ಖಾನ್ ಅವರು ಬದ್ಧತೆಯಿಂದಲೇ ಆಡಿದ್ದಾರೆ ಎಂದು ಹೇಳಿದರು.
ಕೊಹ್ಲಿಯ ಅವಿರತ ಕಠಿಣ ಪರಿಶ್ರಮವು ಅವರ ಯಶಸ್ಸಿಗೆ ನಿರ್ಣಾಯಕ ಎಂದು ಪಾಕಿಸ್ತಾನದ ಮಾಜಿ ಆಯ್ಕೆದಾರ ಉಲ್ಲೇಖಿಸಿದ್ದಾರೆ. ಇಂದಿನ ಮಕ್ಕಳು ಬಾಬರ್ ಅಜಮ್ ಕೊಹ್ಲಿಯ ರೀತಿ ಕವರ್ ಡ್ರೈವ್ ಹೊಡೆಯುತ್ತಾರೆ ಎಂದು ಹೇಳುತ್ತಾರೆ. ವಿರಾಟ್ ಕೊಹ್ಲಿ ಆ ರೀತಿ ಮಾಡಲು ಕೊಹ್ಲಿಯ ಸಾಕಷ್ಟು ಅಭ್ಯಾಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಎಂಎಸ್ ಧೋನಿ ಬೆಂಬಲದಿಂದ ಕೊಹ್ಲಿ ಕಿಂಗ್ ಆದರು
ಕೊಹ್ಲಿ ಅಂಡರ್ 19ನಲ್ಲಿ ಕಾಣಿಸಿಕೊಂಡಾಗಿನಿಂದ ಕಳೆದ 16 ವರ್ಷಗಳಿಂದ ಕ್ರಿಕೆಟ್ ಜಗತ್ತನ್ನು ಆಳಿದ್ದಾರೆ. ಆಟಕ್ಕೆ ಇಳಿದ ತಕ್ಷಣದ ಪ್ರಭಾವ ಬೀರಿದ್ದಾರೆ. ಇನ್ನೂ ಕ್ರಿಕೆಟ್ ಆಟವನ್ನು ಆಡುತ್ತಿದ್ದಾರೆ. ಕೊಹ್ಲಿಗೆ ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಅವರಂತಹ ಹಿರಿಯ ಆಟಗಾರರ ಬೆಂಬಲವಿದೆ. ಅವರಿಗೆ ಸಾಕಷ್ಟು ಸಹಾಯ ಮಾಡಿತು ಎಂದು ಅವರು ಹೇಳಿದ್ದಾರೆ. ಆದಾಗ್ಯೂ ಕೊಹ್ಲಿ ಕ್ರಿಕೆಟ್ನ “ಕಿಂಗ್” ಅಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Ishan Kishan : ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದು ಮೂಲಕ ಬಿಸಿಸಿಐಗೆ ಪ್ರತ್ಯುತ್ತರ ಕೊಟ್ಟ ಇಶಾನ್ ಕಿಶನ್
ವಿರಾಟ್ ಕೊಹ್ಲಿಯ ಅತ್ಯುನ್ನತ ಕೌಶಲ್ಯ ಮತ್ತು ಪ್ರಭಾವವನ್ನು ಬಸಿತ್ ಒಪ್ಪಿಕೊಂಡಿದ್ದಾರೆ. ಆದರೆ “ಕಿಂಗ್” ಎಂಬ ಬಿರುದು ಸ್ವತಃ ಭಾರತೀಯ ಬ್ಯಾಟಿಂಗ್ ಮಾಂತ್ರಿಕನಿಗೆ ಸರಿಹೊಂದುವುದಿಲ್ಲ ಎಂದು ಅವರು ಹೇಳಿದ್ದಾರೆ. ಕ್ರಿಕೆಟ್ ಬಗ್ಗೆ ಕೊಹ್ಲಿಯ ಉತ್ಸಾಹಕ್ಕೆ ಸಾಟಿಯಿಲ್ಲ. ಆದರೆ ಕ್ರಿಕೆಟ್ ನಿಜವಾದ ರಾಜ ಎಂದು ಅವರು ಒತ್ತಿಹೇಳಿದರು. ಶ್ರೇಷ್ಠ ಡಾನ್ ಬ್ರಾಡ್ಮನ್ ಅಥವಾ ಸಚಿನ್ ತೆಂಡೂಲ್ಕರ್ ಅವರನ್ನೂ ಕಿಂಗ್ ಎಂದು ಕರೆದಿಲ್ಲ. ಹೀಗಾಗಿ ಕೊಹ್ಲಿಯನ್ನು ಕಿಂಗ್ ಎಂದು ಕರೆಯಲಾಗಿಲ್ಲ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಕಿಂಗ್ ಅಲ್ಲ ಎಂದು ನಾನು ಭಾವಿಸುತ್ತೇನೆ: ಬಾಸಿತ್ ಅಲಿ
ನೀವು ಕಿಂಗ್ ಎಂದು ಕರೆದರೆ ನಾನು ಅಲ್ಲ ಎಂದು ಹೇಳುತ್ತೇನೆ. ಯಾಕೆಂದರೆ ಕ್ರಿಕೆಟ್ ಗಿಂತ ದೊಡ್ಡವರು ಯಾರೂ ಇಲ್ಲ. ಕ್ರಿಕೆಟ್ ದೊಡ್ಡ ವಿಷಯ. ವಿರಾಟ್ ಕೊಹ್ಲಿಯೇ ಈ ಹೇಳಿಕೆಯನ್ನು ಇಷ್ಟಪಡುವುದಿಲ್ಲ. ತಮ್ಮ ರನ್ ಮತ್ತು ಬ್ಯಾಟಿಂಗ್ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ ಎಂದು ಬಸಿತ್ ಅಲಿ ಹೇಳಿದ್ದಾರೆ.
ಡಾನ್ ಬ್ರಾಡ್ಮನ್, ಗವಾಸ್ಕರ್ ಮತ್ತು ಸಚಿನ್ ಅವರನ್ನೂ ಕಿಂಗ್ ಎಂದು ಕರೆಯಲಾಗಿಲ್ಲ. ಆದ್ದರಿಂದ, ವಿರಾಟ್ ಕೊಹ್ಲಿ ಕಿಂಗ್ ಅಲ್ಲ ಎಂದು ನಾನು ಭಾವಿಸುತ್ತೇನೆ. ಅವರೊಬ್ಬ ಶ್ರೇಷ್ಠ ಬ್ಯಾಟರ್. ಅದನ್ನೇ ಹೇಳುತ್ತೇನೆ. ತವರಿನಲ್ಲಿ ಮುಂಬರುವ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಭಾರತ 2-0 ಅಂತರದಲ್ಲಿ ಏಕದಿನ ಸರಣಿ ಸೋಲನುಭವಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.