ಹೈದರಾಬಾದ್: ಆರ್ಸಿಬಿ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತೆ ಬ್ಯಾಟಿಂಗ್ನಲ್ಲಿ ತಮ್ಮ ಅಬ್ಬರ ಪ್ರದರ್ಶಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ 100 ರನ್ ಬಾರಿಸಿದ ಅವರು ಐಪಿಎಲ್ ಇತಿಹಾಸದಲ್ಲಿ ತಮ್ಮ ಆರನೇ ಶತಕ ಬಾರಿಸಿದ್ದಾರೆ. ಈ ಮೂಲಕ ಅವರು ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಗರಿಷ್ಠ ಶತಕಗಳನ್ನು ಬಾರಿಸಿದ ಆಟಗಾರ ಎಂಬ ಕ್ರಿಸ್ ಗೇಲ್ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿಂಡೀಸ್ ದೈತ್ಯ ಆರು ಶತಕಗಳನ್ನು ಬಾರಿಸಿದ್ದರು. ಆರ್ಆರ್ ತಂಡ ಜೋಸ್ ಬಟ್ಲರ್ ಐದು ಶತಕಗಳನ್ನು ಬಾರಿಸಿ ಎರಡನೇ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ಮೂರು ವರ್ಷಗಳಿಂದ ಬ್ಯಾಟಿಂಗ್ನಲ್ಲಿ ಸೊರಗಿದ್ದ ವಿರಾಟ್ ಕೊಹ್ಲಿ ಹಾಲಿ ಆವೃತ್ತಿಯಲ್ಲಿ ಭರಪೂರ ರನ್ ಗಳಿಸಿದ್ದಾರೆ. ಎಲ್ಲದಕ್ಕಿಂತ ಮಿಗಿಲಾಗಿ ಇದು ನಾಲ್ಕು ವರ್ಷಗಳ ಬಳಿಕ ಬಾರಿಸಿದ ಐಪಿಎಲ್ ಶತಕವಾಗಿದೆ.
2019ನೇ ಅವೃತ್ತಿಯಲ್ಲಿ ವಿರಾಟ್ ಕೊಹ್ಲಿ ಕೋಲ್ಕೊತಾ ನೈಟ್ ರೈಡರ್ಸ್ ತಂಡ ವಿರುದ್ಧ ಶತಕ ಬಾರಿಸಿದ್ದರು. ಆ ಬಳಿಕದ ಮೂರು ಆವೃತ್ತಿಯಲ್ಲಿ ಅವರ ಬ್ಯಾಟಿಂಗ್ ವೈಖರಿ ಕಳೆಗುಂದಿತ್ತು. ಇದೀಗ ಎಸ್ಆರ್ಎಚ್ ವಿರುದ್ಧ ಮತ್ತೆ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ.
ಹಾಲಿ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಆರು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಒಟ್ಟಾರೆ ಆಡಿರುವ 13 ಪಂದ್ಯಗಳಲ್ಲಿ 538 ರನ್ ಬಾರಿಸಿದ್ದು ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಷ್ಟೊಂದು ಇನಿಂಗ್ಸ್ಗಳಲ್ಲಿ 52 ಫೊರ್ ಹಾಗೂ 15 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಪಂದ್ಯದಲ್ಲಿ ಏನಾಯಿತು?
ಹೈದರಾಬಾದ್: ವಿರಾಟ್ ಕೊಹ್ಲಿಯ ಐಪಿಎಲ್ ಇತಿಹಾಸದ ಆರನೇ ಶತಕ (100 ರನ್, 63 ಎಸೆತ, 12 ಫೋರ್, 4 ಸಿಕ್ಸರ್) ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ (71 ರನ್, 47 ರನ್, 2 ಸಿಕ್ಸರ್) ನೆರವು ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 16ನೇ ಆವೃತ್ತಿಯ 65ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ… ವಿಕೆಟ್ಗಳ ನಿರಾಯಾಸ ಗೆಲುವು ಪಡೆಯಿತು. ಈ ಗೆಲುವಿನೊಂದಿಗೆ ಆರ್ಸಿಬಿ ತಂಡ ಪ್ಲೇಆಫ್ ಹಾದಿಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸಿತು. ಅತ್ತ ಎಸ್ಆರ್ಎಚ್ ತಂಡ ಹ್ಯಾಟ್ರಿಕ್ ಸೋಲಿಗೆ ಒಳಗಾಯಿತು.
ಇಲ್ಲಿನ ರಾಜೀವ್ಗಾಂಧಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆಯೋಜನೆಗೊಂಡಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಪ್ ಡು ಪ್ಲೆಸಿಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟ ಮಾಡಿಕೊಂಡು 186 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್ಸಿಬಿ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಕೇವಲ 2 ವಿಕೆಟ್ ನಷ್ಟ ಮಾಡಿಕೊಂಡು 187 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು. ಈ ಸೋಲಿನೊಂದಿಗೆ ಎಸ್ಆರ್ಎಚ್ ತಂಡದ ವಿಕೆಟ್ಕೀಪರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ (104 ರನ್, 51 ಎಸೆತ, 6 ಸಿಕ್ಸರ್, 8 ಫೋರ್) ಬಾರಿಸಿದ ವಿಸ್ಫೋಟಕ ಶತಕ ವ್ಯರ್ಥವಾಯಿತು.
ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಆರ್ಸಿಬಿ ಅತ್ಯಂತ ನಿರಾಳವಾಗಿ ಆಡಿತು. ಆರಂಭಿಕರಾದ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ನಿರಂತರವಾಗಿ ರನ್ ಬಾರಿಸಿಕೊಂಡು ಬಂದರು. 25 ಎಸೆತಗಳಲ್ಲಿ 50 ರನ್ ಕಲೆ ಹಾಕಿದ ಈ ಇಬ್ಬರು ಆಟಗಾರರು. 68 ಎಸೆತಗಳಲ್ಲಿ 100ಗ ಗಡಿ ತಲುಪಿಸಿದರು. ಅದಕ್ಕಿಂತ ಮೊದಲು ಫಾಫ್ ಡು ಪ್ಲೆಸಿಸ್ 34 ಎಸೆತಗಳಲ್ಲಿ ತಮ್ಮ ಹಾಳಿ ಆವೃತ್ತಿಯಲ್ಲಿ ಎಂಟನೇ ಅರ್ಧ ಶತಕ ಬಾರಿಸಿದರು. ಸ್ವಲ್ಪ ಹೊತ್ತಿನಲ್ಲೇ ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ ಹಾಲಿ ಆವೃತ್ತಿಯ ಏಳನೇ ಅರ್ಧ ಶತಕ ಬಾರಿಸಿದರು. ಆದರೆ, ಅವರು ಅದನ್ನು ಶತಕವಾಗಿ ಪರಿವರ್ತಿಸಿದರು.
ಇದನ್ನೂ ಓದಿ :
ಅರ್ಧ ಶತಕದ ಬಳಿಕ ಏಕಾಏಕಿ ಗಳಿಕೆಗೆ ವೇಗ ಕೊಟ್ಟ ವಿರಾಟ್ ಕೊಹ್ಲಿ 62 ಎಸೆತದಲ್ಲಿ 100 ರನ್ ಬಾರಿಸಿದರು. ಈ ಜೋಡಿ 91 ಎಸೆತಕ್ಕೆ 150 ರನ್ ಬಾರಿಸಿದರು. ಆದರೆ, ಭುವೇಶ್ವರ್ ಕುಮಾರ್ ಎಸೆತ ಬೌನ್ಸರ್ಗೆ ಸಿಕ್ಸರ್ ಬಾರಿಸಲು ಮುಂದಾದ ವಿರಾಟ್ ಕೊಹ್ಲಿ ಕ್ಯಅಚ್ ನೀಡಿ ಔಟಾದರು. ತಂಡದ ಮೊತ್ತ 177 ಆಗುಷ್ಟರಲ್ಲಿ ಫಾಫ್ ಡು ಪ್ಲೆಸಿಸ್ ಔಟಾದರು. ಗ್ಲೆನ್ಮ್ಯಾಕ್ಸ್ವೆಲ್ 5 ರನ್ ಹಾಗೂ ಮೈಕೆಲ್ ಬ್ರಾಸ್ವೆಲ್ ಗೆಲುವಿನ ಗುರಿ ಮುಟ್ಟಿಸಿದರು.