ಅಹಮದಾಬಾದ್: ಆಧುನಿಕ ಕ್ರಿಕೆಟ್ನ ಅತ್ಯಂತ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ (Virat Khli) ವಿಶ್ವ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಅವರು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿಯಾಗಿರುವ ಐಪಿಎಲ್ನಲ್ಲಿ ಒಟ್ಟು 8000 ರನ್ಗಳನ್ನು ಬಾರಿಸಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 29 ರನ್ ಬಾರಿಸಿದ ತಕ್ಷಣ ಅವರು ಈ ಮೈಲುಗಲ್ಲು ಸ್ಥಾಪಿಸಿದರು. ಪಂದ್ಯದಕ್ಕೆ ಮೊದಲು ಅವರು ಒಟ್ಟು 7971 ರನ್ ಹೊಂದಿದ್ದರು. ಪ್ರಮುಖ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಲು ಆರಂಭಿಸಿರುವ ಟೂರ್ನಿಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದರು.
𝗘𝗜𝗚𝗛𝗧 𝗧𝗛𝗢𝗨𝗦𝗔𝗡𝗗 𝗜𝗣𝗟 𝗥𝗨𝗡𝗦! 🤯
— IndianPremierLeague (@IPL) May 22, 2024
The first ever batter to reach this milestone 🫡🫡
Congratulations, Virat Kohli 👏👏
Follow the Match ▶️ https://t.co/b5YGTn7pOL #TATAIPL | #RRvRCB | #Eliminator | #TheFinalCall | @imVkohli pic.twitter.com/fZ1V7eow0X
ಅನುಭವಿ ಬ್ಯಾಟರ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೊಹ್ಲಿ 252 ಪಂದ್ಯಗಳಲ್ಲಿ ಆಡಿ ಈ ಸಾಧನೆ ಮಾಡಿದ್ದಾರೆ. ಐಪಿಎಲ್ ಆರಂಭದಿಂದ ಒಂದೇ ತಂಡದಲ್ಲಿ ಆಡುತ್ತಿರುವ ಅವರು ಈ ಅವಧಿಯಲ್ಲಿ ಬೃಹತ್ ಸಾಧನೆ ಮಾಡಿದ್ದಾರೆ. ಅವರು 38.69 ರ ಪ್ರಭಾವಶಾಲಿ ಸರಾಸರಿ ಮತ್ತು 131.94 ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದ್ದಾರೆ. ಇದರಲ್ಲಿ 8 ಶತಕಗಳು ಮತ್ತು 55 ಅರ್ಧಶತಕಗಳು ಸೇರಿವೆ.
ಇದನ್ನೂ ಓದಿ: Virat kohli : ಕೊಹ್ಲಿಗೆ ಭಯೋತ್ಪಾದಕರ ಬೆದರಿಕೆ ಸುದ್ದಿ; ಸ್ಪಷ್ಟನೆ ನೀಡಿದ ಗುಜರಾತ್ ಕ್ರಿಕೆಟ್ ಸಂಸ್ಥೆ
222 ಪಂದ್ಯಗಳಲ್ಲಿ 35.25ರ ಸರಾಸರಿಯಲ್ಲಿ 6769 ರನ್ ಗಳಿಸಿರುವ ಶಿಖರ್ ಧವನ್ ಎರಡನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ಮತ್ತು ಸುರೇಶ್ ರೈನಾ ನಂತರದ ಸ್ಥಾನದಲ್ಲಿದ್ದಾರೆ. ಈ ಬ್ಯಾಟ್ಸ್ಮನ್ಗಳು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ದಾಖಲೆ ಮುರಿಯುವ ಸಾಧ್ಯತೆಯಿಲ್ಲ.
ವಿರಾಟ್ ಕೊಹ್ಲಿ ಮೂರು ಬಾರಿ (2009, 2011 ಮತ್ತು 2016 ರಲ್ಲಿ) ಐಪಿಎಲ್ ಫೈನಲ್ ತಲುಪಿದ್ದಾರೆ. 2016ರಲ್ಲಿ ಕೊಹ್ಲಿ 16 ಪಂದ್ಯಗಳಲ್ಲಿ 81ರ ಸರಾಸರಿಯಲ್ಲಿ 973 ರನ್ ಗಳಿಸಿದ್ದರು. 113 ಅವರ ಅತ್ಯುತ್ತಮ ಸ್ಕೋರ್ ನೊಂದಿಗೆ ನಾಲ್ಕು ಶತಕಗಳು ಮತ್ತು ಏಳು ಅರ್ಧಶತಕಗಳನ್ನು ಬಾರಿಸಿದ್ದರು.
ಐಪಿಎಲ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಮ್ಮದೇ ದಾಖಲೆಯನ್ನು ಮುರಿಯಲು ಏಸ್ ಬ್ಯಾಟರ್ಗೆ ಇನ್ನೂ 266 ರನ್ಗಳ ಅಗತ್ಯಿವಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಫೈನಲ್ ತಲುಪಿದರೆ ಒಟ್ಟು ಮೂರು ಪಂದ್ಯಗಳು ಬಾಕಿ ಉಳಿದಿದ್ದು, ಫೈನಲ್ ತಲುಪಿದರೆ ಈ ಮೈಲಿಗಲ್ಲನ್ನು ತಲುಪುವ ಅವಕಾಶವಿದೆ.
ಆರ್ಸಿಬಿ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೊಹ್ಲಿ
ಸತತ ಆರು ಸೋಲುಗಳ ನಂತರ ಬೆಂಗಳೂರು ಮೂಲದ ತಂಡದ ಚೇತರಿಕೆಯಲ್ಲಿ 35 ವರ್ಷದ ಬ್ಯಾಟ್ಸ್ಮನ್ ನಿರ್ಣಾಯಕ ಪಾತ್ರ ವಹಿಸಿದ್ದರು. ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಸತತ ಆರು ಗೆಲುವುಗಳನ್ನು ಗಳಿಸಿ ಐಪಿಎಲ್ 2024 ರ ಪ್ಲೇಆಫ್ ಹಂತವನ್ನು ತಲುಪಿದೆ. ಬೆಂಗಳೂರು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಮತ್ತು +0.459 ನೆಟ್ ರನ್ ರೇಟ್ (ಎನ್ಆರ್ಆರ್) ಹೊಂದಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಆರ್ಸಿಬಿ ತನ್ನ ಗೆಲುವಿನ ಹಾದಿಯನ್ನು ವಿಸ್ತರಿಸಲು ಮತ್ತು ಕ್ವಾಲಿಫೈಯರ್ 2 ಅನ್ನು ತಲುಪಲು ಯೋಜನೆ ರೂಪಿಸಿದೆ. ಸ್ಯಾಮ್ಸನ್ ನೇತೃತ್ವದ ತಂಡವು ಕಳೆದ ಐದು ಪಂದ್ಯಗಳಲ್ಲಿ ನಾಲ್ಕು ಸೋಲುಗಳನ್ನು ಅನುಭವಿಸಿದೆ ಮತ್ತು ಒಂದು ಮಳೆಯಿಂದಾಗಿ ರದ್ದಾಗಿದೆ.