Virat kohli : ಐಪಿಎಲ್​ನಲ್ಲಿ 8000 ರನ್ ಬಾರಿಸಿ ದಾಖಲೆ ಬರೆದ ಕೊಹ್ಲಿ - Vistara News

ಕ್ರೀಡೆ

Virat kohli : ಐಪಿಎಲ್​ನಲ್ಲಿ 8000 ರನ್ ಬಾರಿಸಿ ದಾಖಲೆ ಬರೆದ ಕೊಹ್ಲಿ

Virat Kohli: ಅನುಭವಿ ಬ್ಯಾಟರ್​​ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೊಹ್ಲಿ 252 ಪಂದ್ಯಗಳಲ್ಲಿ ಆಡಿ ಈ ಸಾಧನೆ ಮಾಡಿದ್ದಾರೆ. ಐಪಿಎಲ್ ಆರಂಭದಿಂದ ಒಂದೇ ತಂಡದಲ್ಲಿ ಆಡುತ್ತಿರುವ ಅವರು ಈ ಅವಧಿಯಲ್ಲಿ ಬೃಹತ್​ ಸಾಧನೆ ಮಾಡಿದ್ದಾರೆ. ಅವರು 38.69 ರ ಪ್ರಭಾವಶಾಲಿ ಸರಾಸರಿ ಮತ್ತು 131.94 ಸ್ಟ್ರೈಕ್ ರೇಟ್​​ನಲ್ಲಿ ರನ್​ ಗಳಿಸಿದ್ದಾರೆ. ಇದರಲ್ಲಿ 8 ಶತಕಗಳು ಮತ್ತು 55 ಅರ್ಧಶತಕಗಳು ಸೇರಿವೆ.

VISTARANEWS.COM


on

Virat kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​: ಆಧುನಿಕ ಕ್ರಿಕೆಟ್​​ನ ಅತ್ಯಂತ ಶ್ರೇಷ್ಠ ಬ್ಯಾಟರ್​ ವಿರಾಟ್​ ಕೊಹ್ಲಿ (Virat Khli) ವಿಶ್ವ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಅವರು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿಯಾಗಿರುವ ಐಪಿಎಲ್​ನಲ್ಲಿ ಒಟ್ಟು 8000 ರನ್​ಗಳನ್ನು ಬಾರಿಸಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್​ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 29 ರನ್​ ಬಾರಿಸಿದ ತಕ್ಷಣ ಅವರು ಈ ಮೈಲುಗಲ್ಲು ಸ್ಥಾಪಿಸಿದರು. ಪಂದ್ಯದಕ್ಕೆ ಮೊದಲು ಅವರು ಒಟ್ಟು 7971 ರನ್ ಹೊಂದಿದ್ದರು. ಪ್ರಮುಖ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಲು ಆರಂಭಿಸಿರುವ ಟೂರ್ನಿಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದರು.

ಅನುಭವಿ ಬ್ಯಾಟರ್​​ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೊಹ್ಲಿ 252 ಪಂದ್ಯಗಳಲ್ಲಿ ಆಡಿ ಈ ಸಾಧನೆ ಮಾಡಿದ್ದಾರೆ. ಐಪಿಎಲ್ ಆರಂಭದಿಂದ ಒಂದೇ ತಂಡದಲ್ಲಿ ಆಡುತ್ತಿರುವ ಅವರು ಈ ಅವಧಿಯಲ್ಲಿ ಬೃಹತ್​ ಸಾಧನೆ ಮಾಡಿದ್ದಾರೆ. ಅವರು 38.69 ರ ಪ್ರಭಾವಶಾಲಿ ಸರಾಸರಿ ಮತ್ತು 131.94 ಸ್ಟ್ರೈಕ್ ರೇಟ್​​ನಲ್ಲಿ ರನ್​ ಗಳಿಸಿದ್ದಾರೆ. ಇದರಲ್ಲಿ 8 ಶತಕಗಳು ಮತ್ತು 55 ಅರ್ಧಶತಕಗಳು ಸೇರಿವೆ.

ಇದನ್ನೂ ಓದಿ: Virat kohli : ಕೊಹ್ಲಿಗೆ ಭಯೋತ್ಪಾದಕರ ಬೆದರಿಕೆ ಸುದ್ದಿ; ಸ್ಪಷ್ಟನೆ ನೀಡಿದ ಗುಜರಾತ್​ ಕ್ರಿಕೆಟ್​​ ಸಂಸ್ಥೆ

222 ಪಂದ್ಯಗಳಲ್ಲಿ 35.25ರ ಸರಾಸರಿಯಲ್ಲಿ 6769 ರನ್ ಗಳಿಸಿರುವ ಶಿಖರ್ ಧವನ್ ಎರಡನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ಮತ್ತು ಸುರೇಶ್ ರೈನಾ ನಂತರದ ಸ್ಥಾನದಲ್ಲಿದ್ದಾರೆ. ಈ ಬ್ಯಾಟ್ಸ್ಮನ್ಗಳು ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ದಾಖಲೆ ಮುರಿಯುವ ಸಾಧ್ಯತೆಯಿಲ್ಲ.

ವಿರಾಟ್ ಕೊಹ್ಲಿ ಮೂರು ಬಾರಿ (2009, 2011 ಮತ್ತು 2016 ರಲ್ಲಿ) ಐಪಿಎಲ್ ಫೈನಲ್ ತಲುಪಿದ್ದಾರೆ. 2016ರಲ್ಲಿ ಕೊಹ್ಲಿ 16 ಪಂದ್ಯಗಳಲ್ಲಿ 81ರ ಸರಾಸರಿಯಲ್ಲಿ 973 ರನ್ ಗಳಿಸಿದ್ದರು. 113 ಅವರ ಅತ್ಯುತ್ತಮ ಸ್ಕೋರ್ ನೊಂದಿಗೆ ನಾಲ್ಕು ಶತಕಗಳು ಮತ್ತು ಏಳು ಅರ್ಧಶತಕಗಳನ್ನು ಬಾರಿಸಿದ್ದರು.

ಐಪಿಎಲ್​​ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಮ್ಮದೇ ದಾಖಲೆಯನ್ನು ಮುರಿಯಲು ಏಸ್ ಬ್ಯಾಟರ್​ಗೆ ಇನ್ನೂ 266 ರನ್​ಗಳ ಅಗತ್ಯಿವಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಫೈನಲ್​ ತಲುಪಿದರೆ ಒಟ್ಟು ಮೂರು ಪಂದ್ಯಗಳು ಬಾಕಿ ಉಳಿದಿದ್ದು, ಫೈನಲ್ ತಲುಪಿದರೆ ಈ ಮೈಲಿಗಲ್ಲನ್ನು ತಲುಪುವ ಅವಕಾಶವಿದೆ.

ಆರ್​ಸಿಬಿ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೊಹ್ಲಿ

ಸತತ ಆರು ಸೋಲುಗಳ ನಂತರ ಬೆಂಗಳೂರು ಮೂಲದ ತಂಡದ ಚೇತರಿಕೆಯಲ್ಲಿ 35 ವರ್ಷದ ಬ್ಯಾಟ್ಸ್ಮನ್ ನಿರ್ಣಾಯಕ ಪಾತ್ರ ವಹಿಸಿದ್ದರು. ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಸತತ ಆರು ಗೆಲುವುಗಳನ್ನು ಗಳಿಸಿ ಐಪಿಎಲ್ 2024 ರ ಪ್ಲೇಆಫ್ ಹಂತವನ್ನು ತಲುಪಿದೆ. ಬೆಂಗಳೂರು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಮತ್ತು +0.459 ನೆಟ್ ರನ್ ರೇಟ್ (ಎನ್ಆರ್ಆರ್) ಹೊಂದಿದೆ.

ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್​ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಆರ್​ಸಿಬಿ ತನ್ನ ಗೆಲುವಿನ ಹಾದಿಯನ್ನು ವಿಸ್ತರಿಸಲು ಮತ್ತು ಕ್ವಾಲಿಫೈಯರ್ 2 ಅನ್ನು ತಲುಪಲು ಯೋಜನೆ ರೂಪಿಸಿದೆ. ಸ್ಯಾಮ್ಸನ್ ನೇತೃತ್ವದ ತಂಡವು ಕಳೆದ ಐದು ಪಂದ್ಯಗಳಲ್ಲಿ ನಾಲ್ಕು ಸೋಲುಗಳನ್ನು ಅನುಭವಿಸಿದೆ ಮತ್ತು ಒಂದು ಮಳೆಯಿಂದಾಗಿ ರದ್ದಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Kapil Dev : ಅಂಶುಮಾನ್ ಗಾಯಕ್ವಾಡ್​ಗೆ ಕ್ಯಾನ್ಸರ್​, ಬೇಸರ ವ್ಯಕ್ತಪಡಿಸಿದ ಕಪಿಲ್​ ದೇವ್​

Kapil Dev : ಇದು ದುಃಖಕರ ಮತ್ತು ತುಂಬಾ ನಿರಾಶಾದಾಯಕ. ನಾನು ಅಂಶುಮಾನ್ ಅವರೊಂದಿಗೆ ಆಡಿದ್ದೆ. ಅವರನ್ನು ಈ ಸ್ಥಿತಿಯಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ. ಯಾರೂ ತೊಂದರೆ ಅನುಭವಿಸಬಾರದು. ಮಂಡಳಿಯು ಅವರನ್ನು ನೋಡಿಕೊಳ್ಳುತ್ತದೆ ಎಂದು ನಾನು ಭರವಸೆ ಇಟ್ಟಿದ್ದೇನೆ ಎಂಬುದಾಗಿ “ಎಂದು ಕಪಿಲ್ ಹೇಳಿದ್ದಾರೆ.

VISTARANEWS.COM


on

Kapil Dev
Koo

ನವದೆಹಲಿ: ಭಾರತದ ಮಾಜಿ ಸಹ ಆಟಗಾರ ಅಂಶುಮಾನ್ ಗಾಯಕ್ವಾಡ್ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವುದನ್ನು ನೋಡಿ ದಂತಕಥೆ ಕಪಿಲ್ ದೇವ್ (Kapil Dev) ಬೇಸರ ವ್ಯಕ್ತಪಡಿಸಿದ್ದಾರೆ. ಅವರಿಗೆ ಆರ್ಥಿಕ ನೆರವು ನೀಡುವಂತೆ ಬಿಸಿಸಿಐಗೆ ವಿನಂತಿಸಿದ್ದಾರೆ. ಗಾಯಕ್ವಾಡ್ ಅವರಿಗೆ ನೆರವಾಗಲು ಮೊಹಿಂದರ್ ಅಮರನಾಥ್, ಸುನಿಲ್ ಗವಾಸ್ಕರ್, ಸಂದೀಪ್ ಪಾಟೀಲ್, ದಿಲೀಪ್ ವೆಂಗ್ಸರ್ಕಾರ್, ಮದನ್ ಲಾಲ್, ರವಿ ಶಾಸ್ತ್ರಿ ಮತ್ತು ಕೀರ್ತಿ ಆಜಾದ್ ಅವರಂತಹ ಭಾರತೀಯ ಕ್ರಿಕೆಟ್​ ಆಟಗಾರರ ಜತೆ ಕಪಿಲ್ ದೇವ್​ ಶ್ರಮವಹಿಸುತ್ತಿದ್ದಾರೆ. ಹಣವನ್ನು ಸಂಗ್ರಹಿಸಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಹುಡುಕಿದ್ದಾರೆ ಮತ್ತು ಬಿಸಿಸಿಐ ಮಧ್ಯಪ್ರವೇಶಿಸಿ ಅನಾರೋಗ್ಯದಿಂದ ಬಳಲುತ್ತಿರುವ ಗಾಯಕ್ವಾಡ್ ಅವರಿಗೆ ನೆರವಾಗಲಿ ಎಂದು ಕೋರಿದ್ದಾರೆ.

ಇದು ದುಃಖಕರ ಮತ್ತು ತುಂಬಾ ನಿರಾಶಾದಾಯಕ. ನಾನು ಅಂಶುಮಾನ್ ಅವರೊಂದಿಗೆ ಆಡಿದ್ದೆ. ಅವರನ್ನು ಈ ಸ್ಥಿತಿಯಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ. ಯಾರೂ ತೊಂದರೆ ಅನುಭವಿಸಬಾರದು. ಮಂಡಳಿಯು ಅವರನ್ನು ನೋಡಿಕೊಳ್ಳುತ್ತದೆ ಎಂದು ನಾನು ಭರವಸೆ ಇಟ್ಟಿದ್ದೇನೆ ಎಂಬುದಾಗಿ “ಎಂದು ಕಪಿಲ್ ಹೇಳಿದ್ದಾರೆ.

ನಾವು ಯಾರನ್ನೂ ಸಹಾಯ ಮಾಡುವಂತೆ ಒತ್ತಾಯಿಸುತ್ತಿಲ್ಲ. ಅವರಿಗೆ ನೀಡುವ ಸಹಾಯವು ನಿಮ್ಮ ಹೃದಯದಿಂದ ಬರಲಿ. ಆಘಾತಕಾರಿ ವೇಗದ ಬೌಲಿಂಗ್​ಗೆ ಅವರು ಹಲವು ಬಾರಿ ಮೈಯೊಡ್ಡಿದ್ದರು. ಈಗ ನಾವು ಅವರ ಪರವಾಗಿ ನಿಲ್ಲುವ ಸಮಯ ಬಂದಿದೆ. ನಮ್ಮ ಕ್ರಿಕೆಟ್ ಅಭಿಮಾನಿಗಳು ಅವರನ್ನು ಸೋಲಿಸುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಅವರು ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನ ಓದಿ: Gautam Gambhir : ಸ್ಯಾಲರಿ ಫಿಕ್ಸ್​ ಮಾಡದೇ ಗಂಭೀರ್​ಗೆ ಕೋಚಿಂಗ್​ ಕೆಲಸ ಕೊಟ್ಟ ಬಿಸಿಸಿಐ!

ಗಾಯಕ್ವಾಡ್ ಅವರಿಗೆ ರಕ್ತದ ಕ್ಯಾನ್ಸರ್​​ ಸುದ್ದಿಯನ್ನು ಅವರ ಮಾಜಿ ಸಹ ಆಟಗಾರ ಸಂದೀಪ್ ಪಾಟೀಲ್ ಈ ತಿಂಗಳ ಆರಂಭದಲ್ಲಿ ದಿ ಮಿಡ್-ಡೇಗೆ ಬರೆದ ಅಂಕಣದಲ್ಲಿ ಬಹಿರಂಗಪಡಿಸಿದ್ದರು. ಗಾಯಕ್ವಾಡ್ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಸಮಸ್ಯೆ ವಿರುದ್ಧ ಹೋರಾಡುತ್ತಿದ್ದಾರೆ. ಅದರ ಚಿಕಿತ್ಸೆಗಾಗಿ ಲಂಡನ್​ನಲ್ಲಿದ್ದರು. ಗಾಯಕ್ವಾಡ್ ಅವರು ಆರ್ಥಿಕ ಬೆಂಬಲದ ಅಗತ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಪಾಟೀಲ್ ಹೇಳಿದ್ದಾರೆ. ಭಾರತದ ಮಾಜಿ ಆಲ್​ರೌಂಡರ್​ ಮತ್ತು ವೆಂಗ್​ಸರ್ಕರ್​ ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್ ಅವರೊಂದಿಗೆ ಮಾತನಾಡಿದ್ದಾರೆ.

ಕಪಿಲ್ ಅಸಮಾಧಾನ

ಅಗತ್ಯದ ವೇಳೆಯಲ್ಲಿ ಭಾರತದ ಮಾಜಿ ಕ್ರಿಕೆಟಿಗರು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕುವ ಬಗ್ಗೆ ಕಪಿಲ್​ ಬೇಸರ ವ್ಯಕ್ತಪಡಿಸಿದ್ದಾರೆ. ಮಾಜಿ ಆಟಗಾರರಿಗೆ ಅಗತ್ಯದ ಸಮಯದಲ್ಲಿ ಸಹಾಯ ಮಾಡುವ ವ್ಯವಸ್ಥೆಯ ಕೊರತೆಯಿದೆ ಎಂದು ಕಪಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ದಿನಗಳಲ್ಲಿ ಕ್ರಿಕೆಟ್ ಈಗಿರುವಷ್ಟು ಆರ್ಥಿಕವಾಗಿ ಬಹುಮಾನ ಪಡೆಯುವ ಹತ್ತಿರದಲ್ಲಿರಲಿಲ್ಲ, ಅದಕ್ಕಾಗಿಯೇ ಬಿಸಿಸಿಐ ಈ ಸಮಯದಲ್ಲಿ ನೆರವು ನೀಡಬೇಕು ಎಂದು ಹೇಳಿದ್ದಾರೆ.

ದುರದೃಷ್ಟವಶಾತ್ ನಮ್ಮಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಈ ತಲೆಮಾರಿನ ಆಟಗಾರರು ಉತ್ತಮ ಹಣವನ್ನು ಗಳಿಸುವುದನ್ನು ನೋಡುತ್ತಿದ್ದಾರೆ. ಈಗಿನ ಸಹಾಯಕ ಸಿಬ್ಬಂದಿ ಸದಸ್ಯರಿಗೂ ಉತ್ತಮ ವೇತನ ನೀಡುವುದನ್ನು ನೋಡುವುದು ಖುಷಿ. ನಮ್ಮ ಕಾಲದಲ್ಲಿ ಮಂಡಳಿಯ ಬಳಿ ಹಣವಿರಲಿಲ್ಲ. ಇಂದು ಇದು ಹಿಂದಿನ ಹಿರಿಯ ಆಟಗಾರರನ್ನು ನೋಡಿಕೊಳ್ಳಬೇಕು” ಎಂದು ಕಪಿಲ್ ಹೇಳಿದರು.

ಕುಟುಂಬವು ನಮಗೆ ಅನುಮತಿಸಿದರೆ ನಮ್ಮ ಪಿಂಚಣಿ ಮೊತ್ತವನ್ನು ದಾನ ಮಾಡುವ ಮೂಲಕ ಕೊಡುಗೆ ನೀಡಲು ನಾವು ಸಿದ್ಧರಿದ್ದೇವೆ. 71 ವರ್ಷದ ಗಾಯಕ್ವಾಡ್ 1990 ರ ದಶಕದ ಕೊನೆಯಲ್ಲಿ ಭಾರತೀಯ ಕ್ರಿಕೆಟ್ ತಂಡದ ತರಬೇತುದಾರರಾಗುವ ಮೊದಲು ತಮ್ಮ 12 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 40 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅವರ ನಾಯಕತ್ವದಲ್ಲಿ ಭಾರತವು ಶಾರ್ಜಾದಲ್ಲಿ ನಡೆದ ಪ್ರಸಿದ್ಧ ಕೋಕಾ-ಕೋಲಾ ಕಪ್ ಮತ್ತು ಪಾಕಿಸ್ತಾನ ವಿರುದ್ಧದ ದೆಹಲಿ ಟೆಸ್ಟ್ ಅನ್ನು ಗೆದ್ದಿತು, ಅಲ್ಲಿ ಅನಿಲ್ ಕುಂಬ್ಳೆ ಇನ್ನಿಂಗ್ಸ್​ಗಳಲ್ಲಿ ಎಲ್ಲಾ 10 ವಿಕೆಟ್​​ಗಳನ್ನು ಪಡೆದರು.

Continue Reading

ದೇಶ

Anant Ambani Wedding: ಅಂಬಾನಿ ಪುತ್ರನ ಮದುವೆಯಲ್ಲಿ ಹಾರ್ದಿಕ್‌ ಪಾಂಡ್ಯ-ಅನನ್ಯಾ ಪಾಂಡೆ ಮಸ್ತ್‌ ಡಾನ್ಸ್‌! ವಿಡಿಯೋ ಇದೆ

Anant Ambani Wedding:ಕ್ರಿಕೆಟ್‌ ತಾರೆ ಆಲ್‌ ರೌಂಡರ್‌ ಹಾರ್ದಿಕ್‌ ಪಾಂಡೆ ಮತ್ತು ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಭರ್ಜರಿ ಸ್ಟೆಪ್‌ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದ ಹಾರ್ದಿಕ್‌ ಅನನ್ಯಾ ಜೊತೆ ಬಾಲಿವುಡ್‌ ಹಾಡಿಗೆ ತಮ್ಮದೇ ಶೈಲಿನಲ್ಲಿ ಡಾನ್ಸ್‌ ಮಾಡಿ ಸಂಭ್ರಮಿಸಿದರು.

VISTARANEWS.COM


on

Anant Ambani Wedding
Koo

ಮುಂಬೈ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ(Anant Ambani Wedding). ಈ ಅಭೂತಪುರ್ಣ ಕ್ಷಣಕ್ಕೆ ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರು ಸಾಕ್ಷಿಯಾದರು. ಸಿನಿ ತಾರೆಯರಿಂದ ಹಿಡಿದು ಕ್ರಿಕೆಟ್‌ ಸ್ಟಾರ್ಸ್‌ವರೆಗೆ, ಎಲ್ಲಾ ರಂಗದ ಗಣ್ಯರು ಅಂಬಾನಿ ಮನೆ ಮದುವೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದರು.

ಇನ್ನು ಈ ಸಂದರ್ಭದಲ್ಲಿ ಕ್ರಿಕೆಟ್‌ ತಾರೆ ಆಲ್‌ ರೌಂಡರ್‌ ಹಾರ್ದಿಕ್‌ ಪಾಂಡೆ ಮತ್ತು ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಭರ್ಜರಿ ಸ್ಟೆಪ್‌ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದ ಹಾರ್ದಿಕ್‌ ಅನನ್ಯಾ ಜೊತೆ ಬಾಲಿವುಡ್‌ ಹಾಡಿಗೆ ತಮ್ಮದೇ ಶೈಲಿನಲ್ಲಿ ಡಾನ್ಸ್‌ ಮಾಡಿ ಸಂಭ್ರಮಿಸಿದರು. ಇನ್ನು ಈ ಅದ್ದೂರಿ ಸಮಾರಂಭಕ್ಕೆ ಸೂರ್ಯಕುಮಾರ್‌ ಯಾದವ್‌, ಜಸ್ಪ್ರಿತ್‌ಬುಮ್ರಾ, ಕೆ.ಎಲ್‌. ರಾಹುಲ್‌, ಅಜಿಂಖ್ಯಾ ರಹಾಣೆ, ಯೆಜುವೆಂದರ್‌ ಚಹಲ್‌ ಮತ್ತು ಶ್ರೇಯಸ್‌ ಐಯ್ಯರ್‌ ಸೇರಿದಂತೆ ಅನೇಕ ಕ್ರಿಕೆಟ್‌ ತಾರಾಯರು ಭಾಗಿಯಾಗಿದ್ದರು.

ಇದೇ ವೇಳೆ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ʼಚೋಲಿ ಕೆ ಪೀಚೆ ಕ್ಯಾ ಹೈ’ ಹಾಡಿಗೆ ಸಖತ್‌ ಡಾನ್ಸ್‌ ಮಾಡಿದ್ದಾರೆ. ಅನಂತ್‌ ಮದುವೆ ಸಮಾರಂಭದಲ್ಲಿ ಕುಪ್ಪಳಿಸಿದ ಮಾಧುರಿ ದೀಕ್ಷಿತ್‌ ಜೊತೆ ಅವರ ಪತಿ ಶ್ರೀರಾಮ್‌ ನೇನೆ ಮತ್ತು ಇತರೆ ಅತಿಥಿಗಳು ಹೆಜ್ಜೆ ಹಾಕಿದರು. 1993ರಲ್ಲಿ ಬಿಡುಗಡೆಯಾದ ತಮ್ಮ ಕಳನಾಯಕ್‌ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದ ಮಾಧುರಿ ತಮ್ಮ ಹಾವ-ಭಾವ, ನಗು ಮುಖ, ನೃತ್ಯ ಶೈಲಿ ಮೂಲಕ ಎಲ್ಲರ ಗಮನ ಸೆಳೆದರು. ಅವರ ಹಿಂದೆ ನಿಂತಿದ್ದ ಅವರ ಪತಿ ಕೂಡ ಡಾನ್ಸ್‌ಗೆ ಹೆಜ್ಜೆ ಹಾಕುವ ಪ್ರಯತ್ನ ಮಾಡಿದರು. ಬಳಿಕ ಅವರು ಸುಮ್ಮನೆ ನಿಂತು ಪತ್ನಿ ಡಾನ್ಸ್‌ ಅನ್ನು ಎಂಜಾಯ್‌ ಮಾಡಿದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಮಾಧುರಿಯ ಡಾನ್ಸ್‌ಗೆ ಫಿದಾ ಆಗಿದ್ದಾರೆ. ಮಾಧುರಿಯ ನೃತ್ಯಕ್ಕೆ ಅವರ ಪತಿ ಮಂತ್ರಮುಗ್ಧರಾಗಿದ್ದಾರೆ ಎಂದು ಕಮೆಂಟ್‌ ಮಾಡಿದ್ದಾರೆ.

ಮತ್ತೊಂದೆಡೆ ಅನಂತ್‌-ರಾಧಿಕಾ ಮದುವೆಯಲ್ಲಿ ಬಾಲಿವುಡ್‌ ಬಾದ್‌ ಶಾ ಶಾರೂಖ್‌ ಖಾನ್‌ ಮತ್ತು ಸಲ್ಮಾನ್‌ ಖಾನ್‌ ಕೂಡ ಭಾಗಿಯಾಗಿ ಸಂಭ್ರಮಿಸಿದರು. ಅನಂತ್‌ ಅಂಬಾನಿ ಬಾರಾತ್‌(ಮದುವೆ ಮಂಟಪಕ್ಕೆ ಮದುಮನ ಆಗಮನ)ನಲ್ಲಿ ಇಬ್ಬರೂ ಬಾಲಿವುಡ್‌ನ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಅವರ ಜೊತೆ ಇತರೆ ವಿಕ್ಕಿ ಕೌಶಲ್‌, ವರುಣ್‌ ಧವನ್‌ ಸೇರಿದಂತೆ ಅನೇಕ ನಟ-ನಟಿಯರು ಹೆಜ್ಜೆ ಹಾಕಿದರು. ಇವರ ಜೊತೆ ನೀತಾ ಅಂಬಾನಿ ಕೂಡ ಸಖತ್‌ ಸ್ಟೆಪ್‌ ಹಾಕಿದರು.

ಇದನ್ನೂ ಓದಿ:Nita Ambani: ನೀತಾ ಅಂಬಾನಿ ಕೈಯಲ್ಲಿದೆ ಇಡೀ ಫ್ಯಾಮಿಲಿ; ಮೆಹೆಂದಿಯಲ್ಲಿ ಬಯಲಾಯ್ತು ರಹಸ್ಯ!

Continue Reading

ಕ್ರೀಡೆ

James Anderson: 22 ವರ್ಷಗಳ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ಜೇಮ್ಸ್​ ಆ್ಯಂಡರ್ಸನ್; ಭಾವನಾತ್ಮಕವಾಗಿ ಹಾರೈಸಿದ ಸಚಿನ್

James Anderson: 2003ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್ಸನ್‌, ಈವರೆಗೂ 188 ಪಂದ್ಯಗಳಲ್ಲಿ 704 ವಿಕೆಟ್‌ ಗಳಿಸಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಹಾಗೂ ಆಸ್ಟ್ರೇಲಿಯಾದ ಶೇನ್‌ ವಾರ್ನ್‌ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಸ್ಥಾನದಲ್ಲಿ ಆ್ಯಂಡರ್ಸನ್‌ ಇದ್ದಾರೆ

VISTARANEWS.COM


on

James Anderson
Koo

ಲಂಡನ್​: ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್(James Anderson)​ ಅವರು ತಮ್ಮ 22 ವರ್ಷಗಳ ಸುದೀರ್ಘ ಅಂತಾರಾಷ್ಟೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ತೆರೆ ಎಳೆದಿದ್ದಾರೆ. ವೆಸ್ಟ್​ ಇಂಡೀಸ್​ ವಿರುದ್ಧ ಇಂದು(ಶುಕ್ರವಾರ) ಮುಕ್ತಾಯ ಕಂಡ ಟೆಸ್ಟ್​ ಪಂದ್ಯ ಅವರಿಗೆ ಕೊನೆಯ ಪಂದ್ಯವಾಯಿತು. ಈ ಪಂದ್ಯವನ್ನು ಇಂಗ್ಲೆಂಡ್​ ಇನಿಂಗ್ಸ್​ ಹಾಗೂ 114 ರನ್​ಗಳಿಂದ ಗೆದ್ದು ಬೀಗಿತು. ಆ್ಯಂಡರ್ಸನ್​ಗೂ ಗೆಲುವಿನ ವಿದಾಯ ಲಭಿಸಿತು. ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ 41 ವರ್ಷದ ಆ್ಯಂಡರ್ಸನ್, ವಿದಾಯಕ್ಕೆ ಸಚಿನ್​ ತೆಂಡೂಲ್ಕರ್(Sachin Tendulkar) ಭಾವನಾತ್ಮಕ​ ಟ್ವೀಟ್​ ಮೂಲಕ ಶುಭ ಹಾರೈಸಿದ್ದಾರೆ.

‘ಹೇ ಜಿಮ್ಮಿ!.. ನಿಮ್ಮ ಆ ನಂಬಲಾಗದ 22 ವರ್ಷಗಳ ಕ್ರಿಕೆಟ್​ ವೃತ್ತಿ ಜೀವನದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದೀರಿ. ನೀಮ್ಮ ವಿದಾಯದ ಸಂದರ್ಭದಲ್ಲಿ ನನ್ನದೊಂದು ಸಣ್ಣ ಹಾರೈಕೆ ಇದೆ. ನೀವು ಬೌಲಿಂಗ್ ಮಾಡುವುದನ್ನು ವೀಕ್ಷಿಸುವುದೇ ಒಂದು ರೀತಿಯ ಸಂತೋಷ. ಆ ನಿಮ್ಮ ಶೈಲಿ, ವೇಗ, ನಿಖರತೆ, ಸ್ವಿಂಗ್ ಮತ್ತು ಫಿಟ್ನೆಸ್ ಮುಂದಿನ ಪೀಳಿಗೆಯ ಬೌಲರ್​ಗಳಿಗೆ ಸ್ಫೂರ್ತಿ. ಮುಂದಿನ ಜೀವನವನ್ನು ಕುಟುಂಬದೊಂದಿಗೆ ಆನಂದಿಸಿ” ಎಂದು ಹಾರೈಸಿದ್ದಾರೆ.

ಆ್ಯಂಡರ್ಸನ್​ ಇಂಗ್ಲೆಂಡ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದ, ಟೆಸ್ಟ್ ಕ್ರಿಕೆಟ್‌ನಲ್ಲಿ 700ಕ್ಕೂ ಅಧಿಕ ವಿಕೆಟ್‌ ಪಡೆದ ವಿಶ್ವದ ಮೊದಲ ವೇಗಿ ಹಾಗೂ ಒಟ್ಟಾರೆ ಮೂರನೇ ಬೌಲರ್‌ ಎನಿಸಿಕೊಂಡಿದ್ದಾರೆ. ವಿದಾಯ ಪಂದ್ಯದಲ್ಲೇ ಆ್ಯಂಡರ್ಸನ್​ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದು ಕೂಡ ವಿಶೇಷ. ದ್ವಿತೀಯ ಇನಿಂಗ್ಸ್​ನಲ್ಲಿ 10 ಓವರ್​ ಪೂರ್ತಿಗೊಳಿಸುವ ಮೂಲಕ ಜೇಮ್ಸ್​ ಆ್ಯಂಡರ್ಸನ್ 40 ಸಾವಿರ ಚೆಂಡೆಸೆದ ದಾಖಲೆ ನಿರ್ಮಿಸಿದರು. ಈ ದಾಖಲೆ ಮಾಡಿದ ವಿಶ್ವದ ಮೊದಲ ವೇಗಿ ಎನಿಸಿಕೊಂಡರು. ಅತಿ ಹೆಚ್ಚು ಎಸೆತಗಳನ್ನು ಎಸೆದ ವಿಶ್ಚ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಮುರಳೀಧರನ್ 44039 ಎಸೆತಗಳನ್ನು ಎಸೆದಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ 40850 ಎಸೆತಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ವಿದಾಯ ಪಂದ್ಯದಲ್ಲಿ ಆ್ಯಂಡರ್ಸನ್​ ಒಟ್ಟು 4 ವಿಕೆಟ್​ ಕಿತ್ತು ಮಿಂಚಿದರು.

ಇದನ್ನೂ ಓದಿ Viral Video: ಆ್ಯಂಡರ್ಸನ್ ಬೌಲಿಂಗ್​ಗೆ ನೆಟ್​ ಫ್ರಾಕ್ಟೀಸ್ ಮಾಡಿ ತಂಡ ಸೇರುವ ಬಯಕೆ ವ್ಯಕ್ತಪಡಿಸಿದ ಬ್ರಿಟನ್​ ಪ್ರಧಾನಿ

3 ತಿಂಗಳ ಹಿಂದೆ ಆ್ಯಂಡರ್ಸನ್​ ಅವರು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದ್ದರು. “ಎಲ್ಲರಿಗೂ ನಮಸ್ಕಾರ, ಈ ಬೇಸಿಗೆಯಲ್ಲಿ ಲಾರ್ಡ್ಸ್‌ನಲ್ಲಿ ನಡೆಯುವ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್ ಪಂದ್ಯ, ನನ್ನ ಕೊನೆಯ ಪಂದ್ಯವಾಗಿರಲಿದೆ. ಬಾಲ್ಯದಿಂದ ಇಷ್ಟಪಟ್ಟಿದ ಆಟವನ್ನು ಆಡಲು, ನನ್ನ ದೇಶವನ್ನು ಪ್ರತಿನಿಧಿಸಿದ 20 ಅದ್ಭುತ ವರ್ಷಗಳಿವು. ಇಂಗ್ಲೆಂಡ್ ತಂಡಕ್ಕಾಗಿ ಆಡುವುದನ್ನು ನಾನು ಮಿಸ್‌ ಮಾಡಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದರು. 

2003ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್ಸನ್‌, ಈವರೆಗೂ 188 ಪಂದ್ಯಗಳಲ್ಲಿ 704 ವಿಕೆಟ್‌ ಗಳಿಸಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಹಾಗೂ ಆಸ್ಟ್ರೇಲಿಯಾದ ಶೇನ್‌ ವಾರ್ನ್‌ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಸ್ಥಾನದಲ್ಲಿ ಆ್ಯಂಡರ್ಸನ್‌ ಇದ್ದಾರೆ. 194 ಏಕದಿನ ಪಂದ್ಯಗಳನ್ನು ಆಡಿರುವ ಅವರು, 269 ವಿಕೆಟ್‌ಗಳನ್ನು ಪಡೆದಿದ್ದಾರೆ.

 

Continue Reading

ಕ್ರೀಡೆ

Champions Trophy 2025: ಚಾಂಪಿಯನ್ಸ್‌ ಟ್ರೋಫಿಯಿಂದ ಭಾರತ ಹಿಂದೆ ಸರಿದರೆ ಯಾವ ತಂಡಕ್ಕೆ ಸಿಗಲಿದೆ ಅವಕಾಶ?

Champions Trophy 2025: ಭಾರತ ತಂಡ ಟೂರ್ನಿಯಿಂದ ಹಿಂದೆ ಸರಿದರೆ, 9ನೇ ಸ್ಥಾನಿಯಾಗಿರುವ ಶ್ರೀಲಂಕಾಗೆ ಅವಕಾಶ ಸಿಗಲಿದೆ. ಯಾವುದೇ ತಂಡವು ಐಸಿಸಿ ಟೂರ್ನಿಯಿಂದ ಹಿಂದೆ ಸರಿದರೆ ಅಂಕಪಟ್ಟಿಯಲ್ಲಿ ನಂತರದ ಸ್ಥಾನ ಪಡೆದಿರುವ ತಂಡ ತಂಡಕ್ಕೆ ಅರ್ಹತೆ ನೀಡಲಾಗುತ್ತದೆ

VISTARANEWS.COM


on

Champions Trophy 2025
Koo

ಮುಂಬಯಿ: ಮುಂದಿನ ವರ್ಷ(2025ರ) ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಬೇಕಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು(Champions Trophy 2025) ಪಾಕಿಸ್ತಾನದಿಂದ ಸ್ಥಳಾಂತರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ICC) ಮೇಲೆ ಬಿಸಿಸಿಐ(BCCI) ಒತ್ತಡ ಹೇರುತ್ತಿದೆ ಎಂಬ ಮಾತುಗಳು ಈಗಾಗಲೇ ಕೇಳಿಬಂದಿವೆ. ಭಾರತ ತಂಡ(Team India) ಪಾಕಿಸ್ತಾನಕ್ಕೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಹೇಳಲಾಗುತ್ತಿದ್ದು, ಇದೇ ಕಾರಣಕ್ಕೆ ಟೂರ್ನಿ ಸ್ಥಳಾಂತರಕ್ಕೆ ಒತ್ತಡ ಹೇರಲಾಗುತ್ತಿದೆ ಎಂದು ಗೊತ್ತಾಗಿದೆ. ಆದರೆ ಐಸಿಸಿ ಇದಕ್ಕೆ ಸಮ್ಮತಿ ನೀಡಲಿದೆಯಾ ಎಂದು ಕಾದು ನೋಡಬೇಕಿದೆ.

ಒಂದೊಮ್ಮೆ ಟೂರ್ನಿ ಪಾಕ್​ನಲ್ಲಿಯೇ ನಡೆದು, ಭಾರತ ತಂಡ ಪಾಲ್ಗೊಳ್ಳಲಿದ್ದರೆ ಆಗ ಯಾವ ತಂಡಕ್ಕೆ ಅವಕಾಶ ಸಿಗಲಿದೆ ಎಂಬ ಪ್ರಶ್ನೆ ಕ್ರಿಕೆಟ್​ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಉತ್ತರ ಇಲ್ಲಿದೆ. ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ. ಟೂರ್ನಿಯ ಆತಿಥೇಯ ದೇಶಕ್ಕೆ ನೇರವಾಗಿ ಅರ್ಹತೆ ಸಿಗುತ್ತದೆ. ಒಟ್ಟು 8 ತಂಡಗಳು ಅರ್ಹತೆ ಪಡೆದಿದೆ.

ಲಂಕಾಗೆ ಸಿಗಲಿದೆ ಅವಕಾಶ

ಭಾರತ ತಂಡ ಟೂರ್ನಿಯಿಂದ ಹಿಂದೆ ಸರಿದರೆ, 9ನೇ ಸ್ಥಾನಿಯಾಗಿರುವ ಶ್ರೀಲಂಕಾಗೆ ಅವಕಾಶ ಸಿಗಲಿದೆ. ಯಾವುದೇ ತಂಡವು ಐಸಿಸಿ ಟೂರ್ನಿಯಿಂದ ಹಿಂದೆ ಸರಿದರೆ ಅಂಕಪಟ್ಟಿಯಲ್ಲಿ ನಂತರದ ಸ್ಥಾನ ಪಡೆದಿರುವ ತಂಡ ತಂಡಕ್ಕೆ ಅರ್ಹತೆ ನೀಡಲಾಗುತ್ತದೆ. ಪ್ರಸ್ತುತ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್​, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್​ ಮತ್ತು ಬಾಂಗ್ಲಾದೇಶ ಅರ್ಹತೆ ಪಡೆದ ತಂಡಗಳಾಗಿವೆ.

ಇದನ್ನೂ ಓದಿ Champions Trophy 2025: ಪಾಕ್​ನಲ್ಲೇ ನಡೆಯಲಿದೆ ಚಾಂಪಿಯನ್ಸ್​ ಟ್ರೋಫಿ; ಸಾಗರೋತ್ತರ ತಟಸ್ಥ ತಾಣದಲ್ಲಿ ಭಾರತದ ಪಂದ್ಯ?

ಹಿಂದಿನ ನಿಯಮ ಹೇಗಿತ್ತು?

ಆರಂಭದಲ್ಲಿ ಅಂದರೆ 2013 ಮತ್ತು 2017ರ ಸಾಲಿನ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ವೇಳೆ ಅರ್ಹತೆಯ ನಿಯಮಗಳು ಬೇರೆ ರೀತಿಯಲ್ಲಿತ್ತು. ಟೂರ್ನಿ ಆರಂಭದ ನಿಗಧಿತ ಅವಧಿಯ ಅಂತ್ಯಕ್ಕೆ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 8ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಅರ್ಹತೆ ಪಡೆಯುತ್ತಿದ್ದವು. ಆದರೆ ಈ ಬಾರಿ ಮಾತ್ರ ವಿಶ್ವಕಪ್‌ ಟೂರ್ನಿಯ ಅಂಕಪಟ್ಟಿಯನ್ನು ಆಧರಿಸಿ ಅರ್ಹತೆಯನ್ನು ನೀಡಲಾಗಿದೆ.

ಹೊರಬೀಳುವ ಆತಂಕದಲ್ಲಿತ್ತು ಇಂಗ್ಲೆಂಡ್​!

ಕ್ರಿಕೆಟ್​ ಜನಕರ ನಾಡು ಎಂದು ಕರೆಸಿಕೊಳ್ಳುವ ಇಂಗ್ಲೆಂಡ್​ ತಂಡ ಕಳೆದ ಬಾರಿಯ ವಿಶ್ವಕಪ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ಸ್​ ಟ್ರೋಫಿಗೆ ಅರ್ಹತೆ ಕಳೆದುಕೊಳ್ಳುವ ಆತಂಕದಲ್ಲಿತ್ತು. ಆದರೆ ಅಂತಿಮ ಪಂದ್ಯದಲ್ಲಿ ನೆದರ್ಲೆಂಡ್ಸ್​ ವಿರುದ್ಧ ಗೆದ್ದು 7ನೇ ಸ್ಥಾನ ಸಂಪಾದಿಸಿ ಕೊನೆಯ ಹಂತದಲ್ಲಿ ಅವಕಾಶ ಗಿಟ್ಟಿಸಿಕೊಂಡಿತ್ತು.

ಕಳೆದ ವರ್ಷ ಪಾಕ್​ ಆತಿಥ್ಯದಲ್ಲಿಯೇ ನಡೆದಿದ್ದ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ತಂಡವು ಪಾಕ್​ಗೆ ಪ್ರಯಾಣಿಸಲು ನಿರಾಕರಿಸಿದ ಕಾರಣ, ಟೂರ್ನಿಯನ್ನು ಹೈಬ್ರಿಡ್(champions trophy hybrid model) ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು.

Continue Reading
Advertisement
Anant Ambani Wedding
ಪ್ರಮುಖ ಸುದ್ದಿ13 mins ago

ಅಂಬಾನಿಯನ್ನು ಟೀಕಿಸುತ್ತಿದ್ದ ದೀದಿ, ಅಖಿಲೇಶ್‌, ಲಾಲು ಸೇರಿ ಹಲವು ರಾಜಕಾರಣಿಗಳು ಅನಂತ್‌ ಮದುವೆಯಲ್ಲಿ ಭಾಗಿ

Self Harming
ಬೆಂಗಳೂರು20 mins ago

Self Harming : ಪತಿ ಅಗಲಿಕೆಯ ನೋವು; ಖಿನ್ನತೆಗೊಳಗಾದ ತಾಯಿ ಮತ್ತು ಮಗ ಆತ್ಮಹತ್ಯೆ

Shiva Rajkumar 131 cinema Look out
ಸ್ಯಾಂಡಲ್ ವುಡ್34 mins ago

Shiva Rajkumar: ಶಿವರಾಜ್ ಕುಮಾರ್ ಜನುಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್!

YouTuber Dhruv Rathee
ದೇಶ36 mins ago

YouTuber Dhruv Rathee: ಸ್ಪೀಕರ್‌ ಓಂ ಬಿರ್ಲಾ ಪುತ್ರಿ ಬಗ್ಗೆ ಪೋಸ್ಟ್‌; ಯೂಟ್ಯೂಬರ್‌ ಧೃವ್‌ ರಥೀ ವಿರುದ್ಧ FIR

Kapil Dev
ಪ್ರಮುಖ ಸುದ್ದಿ41 mins ago

Kapil Dev : ಅಂಶುಮಾನ್ ಗಾಯಕ್ವಾಡ್​ಗೆ ಕ್ಯಾನ್ಸರ್​, ಬೇಸರ ವ್ಯಕ್ತಪಡಿಸಿದ ಕಪಿಲ್​ ದೇವ್​

Smriti Singh
ದೇಶ48 mins ago

Smriti Singh: ಹುತಾತ್ಮ ಯೋಧನ ಪತ್ನಿ ಬಗ್ಗೆ ಅಶ್ಲೀಲ ಕಮೆಂಟ್;‌ ಅಹ್ಮದ್‌ ವಿರುದ್ಧ ಎಫ್‌ಐಆರ್

Murder case
ಹಾವೇರಿ1 hour ago

Murder case : ಪ್ರೀತಿ ವಿಷ್ಯಕ್ಕೆ ಯುವಕನಿಗೆ ಬೆಂಕಿ ಹಚ್ಚಿ ಕೊಂದವರ ವಿರುದ್ಧ ಚಾಜ್೯ ಶೀಟ್ ಸಲ್ಲಿಕೆ

Sexual Assault
ವೈರಲ್ ನ್ಯೂಸ್1 hour ago

Sexual Assault: ಐಸ್‌ಕ್ರೀಂ ಕೊಳ್ಳಲು ಬಂದ ಬಾಲಕಿಯ ಗುಪ್ತಾಂಗ ಮುಟ್ಟಿ ದೌರ್ಜನ್ಯ; ಮೊಹಮ್ಮದ್ ಖಾನ್ ಬಂಧನ

a poor fisherman family student Kalpana Masti Mogera passed the CA exam
ಉತ್ತರ ಕನ್ನಡ2 hours ago

Uttara Kannada News: ಬಡ ಮೀನುಗಾರನ ಮಗಳು ಸಿಎ ಪರೀಕ್ಷೆಯಲ್ಲಿ ಪಾಸ್‌; ಸ್ಫೂರ್ತಿಯುತ ಸಾಧನೆ

KSET-2024
ನೌಕರರ ಕಾರ್ನರ್2 hours ago

KSET- 2024: ಕೆಸೆಟ್‌ 2024ಕ್ಕೆ ಅರ್ಜಿ ಆಹ್ವಾನ; ಪರೀಕ್ಷೆ ದಿನಾಂಕ, ಶುಲ್ಕ, ಅರ್ಹತೆಯ ಸಂಪೂರ್ಣ ಮಾಹಿತಿ ಇಲ್ಲಿದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ4 hours ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ5 hours ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ4 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ4 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ4 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ5 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ5 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ5 days ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

ಟ್ರೆಂಡಿಂಗ್‌