Site icon Vistara News

ಕೊಹ್ಲಿಗೆ ಮಗ ಹುಟ್ಟಿದ್ದೇ ತಡ‌, ನಿವೃತ್ತಿಯ ಭವಿಷ್ಯ ನುಡಿದ ಜ್ಯೋತಿಷಿ; ಏನಿದು ವೈರಲ್‌ ಪೋಸ್ಟ್?

Virat Kohli

Virat Kohli to Retire in 2028: Astrologer's Verdict from 2016 Goes Viral

ನವದೆಹಲಿ: ರನ್‌ ಮಷೀನ್‌ ವಿರಾಟ್‌ ಕೊಹ್ಲಿ (Virat Kohli) ಅವರು ಮಗ ಹುಟ್ಟಿದ ಸಂಭ್ರಮದಲ್ಲಿದ್ದಾರೆ. ವಿರುಷ್ಕಾ ಜೋಡಿಯು ಮಗನಿಗೆ ಅಕಾಯ್‌ (Akaay) ಎಂದು ಹೆಸರಿಟ್ಟಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದೆ. ಇದರ ಬೆನ್ನಲ್ಲೇ, 2016ರಲ್ಲಿಯೇ ವಿರಾಟ್‌ ಕೊಹ್ಲಿ ಅವರ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಏನೆಲ್ಲ ಆಗಲಿದೆ? ಅವರ ಕರಿಯರ್‌ ಹೇಗಿರಲಿದೆ? ಅವರು ಯಾವಾಗ ನಿವೃತ್ತರಾಗುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜ್ಯೋತಿಷಿಯೊಬ್ಬರು ನುಡಿದ ಭವಿಷ್ಯದ ಪೋಸ್ಟ್‌ ಈಗ ವೈರಲ್‌ ಆಗಿದೆ.

ಜ್ಯೋತಿಷದಂತೆಯೇ ವಿರಾಟ್‌ ಕೊಹ್ಲಿ ಅವರಿಗೆ 2024ರಲ್ಲಿ ಎರಡನೇ ಮಗುವಾಗುತ್ತದೆ ಎಂಬ ಅಂಶವು ನಿಜವಾದ ಹಿನ್ನೆಲೆಯಲ್ಲಿ ಈಗ ಫೇಸ್‌ಬುಕ್‌ ಪೋಸ್ಟ್‌ ವೈರಲ್‌ ಆಗಿದೆ. 2016ರಲ್ಲಿ ಸ್ಟಾರ್ಸ್‌ ಆ್ಯಂಡ್‌ ಅಸ್ಟ್ರಾಲಜಿ ಎಂಬ ಖಾತೆಯಿಂದ ವಿರಾಟ್‌ ಕೊಹ್ಲಿ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದ ಏಳು-ಬೀಳಿನ ಕುರಿತು ಪೋಸ್ಟ್‌ ಮಾಡಲಾಗಿತ್ತು. ಹಾಗಾದರೆ, 2016ರಲ್ಲಿ ನುಡಿದ ಭವಿಷ್ಯದಂತೆ ವಿರಾಟ್‌ ಕೊಹ್ಲಿ ಜೀವನದಲ್ಲಿ ಏನೆಲ್ಲ ನಡೆದಿದೆ? ಯಾವೆಲ್ಲ ಅಂಶಗಳು ಭವಿಷ್ಯದಂತೆ ನಿಜವಾಗಿದೆ ಎಂಬುದರ ಮಾಹಿತಿ ಇಂತಿದೆ.

2016ರಲ್ಲಿ ಮಾಡಲಾದ ಪೋಸ್ಟ್‌

2016ರಲ್ಲಿ ನುಡಿದ ಭವಿಷ್ಯ ಏನೇನು?

  1. ವಿರಾಟ್‌ ಕೊಹ್ಲಿಯ ಖ್ಯಾತಿಯು 2016 ಹಾಗೂ 2017ರಲ್ಲಿ ಹೆಚ್ಚಾಗಲಿದೆ. ಅವರ ಕ್ರಿಕೆಟ್‌ ಕೌಶಲಗಳು, ಆಟವು ಜಗತ್ತಿನಾದ್ಯಂತ ಚರ್ಚೆಯಾಗಲಿದೆ. ಅವರ ಆಟವು 2016ಕ್ಕಿಂತ 2017ರಲ್ಲಿ ಉತ್ತುಂಗಕ್ಕೇರಲಿದೆ.
  2. ವಿರಾಟ್‌ ಕೊಹ್ಲಿಯ ಮದುವೆ ಕುರಿತು ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಚರ್ಚೆ ಶುರುವಾಗಲಿದೆ. ಅವರು 2017ರ ಡಿಸೆಂಬರ್‌ ಅಥವಾ 2018ರ ಜನವರಿಯಲ್ಲಿ ಮದುವೆಯಾಗಿದ್ದಾರೆ.
  3. ವಿರಾಟ್‌ ಕೊಹ್ಲಿಯು 2018ರ ಸೆಪ್ಟೆಂಬರ್‌ ಹಾಗೂ 2020ರ ಸೆಪ್ಟೆಂಬರ್‌ ಅವಧಿಯಲ್ಲಿ ತಂದೆಯಾಗಲಿದ್ದಾರೆ. ಆ ಮಗು ಅವರಿಗೆ ಹಚ್ಚಿನ ಅದೃಷ್ಟ ತರಲಿದೆ.
  4. 2020ರ ಸೆಪ್ಟೆಂಬರ್‌ನಿಂದ 2021ರ ಸೆಪ್ಟೆಂಬರ್‌ನಲ್ಲಿ ಕೊಹ್ಲಿ ಫಾರ್ಮ್‌ ಕೈಕೊಡಲಿದೆ.
  5. ವಿರಾಟ್‌ ಕೊಹ್ಲಿಯು 2021ರ ಸೆಪ್ಟೆಂಬರ್‌ನಿಂದ 2025ರ ಅವಧಿಯಲ್ಲಿ ಲಯಕ್ಕೆ ಮರಳಲಿದ್ದಾರೆ. ಅವರು ವೃತ್ತಿ ಬದುಕಿನಲ್ಲಿ ಮತ್ತಷ್ಟು ಯಶಸ್ವು ಕಾಣಲಿದ್ದಾರೆ. ಮಾನಸಿಕವಾಗಿಯೂ ಅವರು ಸದೃಢರಾಗಲಿದ್ದಾರೆ.
  6. 2021ರಿಂದ 2024ರ ಅವಧಿಯಲ್ಲಿ ವಿರಾಟ್‌ ಕೊಹ್ಲಿಗೆ ಎರಡನೇ ಮಗು ಆಗಲಿದೆ.
  7. 2025ರ ಆಗಸ್ಟ್‌ನಿಂದ 2027ರ ಫೆಬ್ರವರಿವರೆಗೆ ಅವರ ವೃತ್ತಿಜೀವನ ಇಳಿಜಾರಿನತ್ತ ಸಾಗಲಿದೆ.
  8. ವಿರಾಟ್‌ ಕೊಹ್ಲಿಯು 2027ರಿಂದ 2028ರ ಮಾರ್ಚ್‌ನೊಳಗೆ ನಿವೃತ್ತರಾಗಲಿದ್ದಾರೆ.


ನುಡಿದ ಭವಿಷ್ಯದಲ್ಲಿ ಏನೆಲ್ಲ ನಿಜವಾಗಿದೆ?

  1. ಹೌದು ನಿಜ. 2016 ಹಾಗೂ 2017ರಲ್ಲಿ ವಿರಾಟ್‌ ಕೊಹ್ಲಿ ವೃತ್ತಿಜೀವನ ಉತ್ತುಂಗಕ್ಕೇರಿತ್ತು.
  2. ನಿಜ. ವಿರಾಟ್‌ ಕೊಹ್ಲಿ ಮದುವೆಯಾಗಿದ್ದು 2017ರ ಡಿಸೆಂಬರ್‌ನಲ್ಲಿ.
  3. ಮೂರನೇ ಪಾಯಿಂಟ್‌ ನಿಜವಾಗಿಲ್ಲ. ಕೊಹ್ಲಿಗೆ ಮಗಳು ಹುಟ್ಟಿದ್ದು 2021ರಲ್ಲಿ.
  4. ನಾಲ್ಕನೇ ಅಂಶ ನಿಜ. 2020-2021ರಲ್ಲಿ ಕೊಹ್ಲಿ ಒಂದೂ ಶತಕ ಬಾರಿಸಿಲ್ಲ.
  5. ಐದದೇ ಅಂಶ ನಿಜ. 2022ರಿಂದ ಕೊಹ್ಲಿ ಫಾರ್ಮ್‌ಗೆ ಮರಳಿದ್ದಾರೆ.
  6. ಆರನೇ ಪಾಯಿಂಟ್‌ ನಿಜ. 2024ರಲ್ಲಿ ಕೊಹ್ಲಿಗೆ ಎರಡನೇ ಮಗುವಾಗಿದೆ.

ಇದನ್ನೂ ಓದಿ: Sachin Tendulkar: ಕೊಹ್ಲಿ ಪುತ್ರನಿಗೆ ಸಚಿನ್ ತೆಂಡೂಲ್ಕರ್​ ಇಟ್ಟಿದ್ದಾರೆ ಈ ಕ್ಯೂಟ್ ಹೆಸರು!


ವಿರಾಟ್‌ ಕೊಹ್ಲಿ ಕುರಿತು 2016ರಲ್ಲಿ ಪ್ರಕಟವಾದ ಭವಿಷ್ಯದ ಪ್ರಕಾರ ಅವರು 2028ರಲ್ಲಿ ನಿವೃತ್ತರಾಗಲಿದ್ದಾರೆ. ಅಲ್ಲಿಗೆ, ವಿರಾಟ್‌ ಕೊಹ್ಲಿ ಇನ್ನೊಂದು ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಲಿದ್ದಾರೆ. 2027ರಲ್ಲಿ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ನಡೆಯಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version