Site icon Vistara News

Virat Kohli: ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದಿದ್ದ ರಾಹುಲ್ ಗಾಂಧಿಯ ಸುದ್ದಿಗೋಷ್ಠಿ ವೀಕ್ಷಿಸಿದ ವಿರಾಟ್​ ಕೊಹ್ಲಿ

Virat Kohli WATCHING Rahul Gandhi Press Conference

ಚೆನ್ನೈ: ಲೋಕಸಭೆ ಚುನಾವಣೆ(Lok Sabha Election 2024) ಎದುರಿಸಲು ಕಾಂಗ್ರೆಸ್‌ ಪಕ್ಷದ ಬಳಿ ದುಡ್ಡಿಲ್ಲ, ಕಾಂಗ್ರೆಸ್‌ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸಿರುವ ನಡೆಯ ವಿರುದ್ಧ ರಾಹುಲ್ ಗಾಂಧಿ ಅವರು ಗುರುವಾರ ಕೇಂದ್ರದ ವಿರುದ್ಧ ಕಿಡಿಕಾರಿದ್ದರು. ಈ ವಿಡಿಯೊವನ್ನು ವಿರಾಟ್​ ಕೊಹ್ಲಿ(Virat Kohli) ತಮ್ಮ ಮೊಬೈಲ್​ನಲ್ಲಿ ವೀಕ್ಷಿಸಿದ್ದಾರೆ. ಕೊಹ್ಲಿ ಅವರು ರಾಹುಲ್​ ಗಾಂಧಿ(Rahul Gandhi) ನಡೆಸಿದ ಸುದ್ದಿಗೋಷ್ಠಿಯನ್ನು(Rahul Gandhi Press Conference) ವೀಕ್ಷಿಸುತ್ತಿರುವ ಫೋಟೊ ವೈರಲ್​ ಆಗಿದೆ.

ಗುರುವಾರ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್​ ಗಾಂಧಿ, ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ಎನ್ನುವುದು ಕೇಲವ ಕಲ್ಪನೆಯಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲ, ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಕಲ್ಪನೆಯೇ ಸುಳ್ಳು, ಇದು ಸಂಪೂರ್ಣ ಸುಳ್ಳು ಎಂದು ಕಿಡಿಕಾರಿದ್ದರು.

ಪರ-ವಿರೋಧ ಚರ್ಚೆ


ರಾಹುಲ್​ ಅವರ ಈ ಸುದ್ದಿಗೋಷ್ಠಿಯನ್ನು ವಿರಾಟ್​ ಕೊಹ್ಲಿ ಅವರು ಆರ್​ಸಿಬಿ ಜೆರ್ಸಿ ತೊಟ್ಟು ತಮ್ಮ ಮೊಬೈಲ್​ನಲ್ಲಿ ವೀಕ್ಷಿಸುತ್ತಿರುವ ಫೋಟೊವೊಂದು ಈಗ ವೈರಲ್​ ಆಗುತ್ತಿದೆ. ಕೊಹ್ಲಿಯ ಈ ಫೋಟೊ ವೈರಲ್​ ಆಗುತ್ತಿದ್ದಂತೆರ ಕೆಲವು ನೆಟ್ಟಿಗರು ಪರ ಮತ್ತು ವಿರೋಧದ ಕಮೆಂಟ್​ಗಳನ್ನು ಮಾಡಲಾರಂಭಿಸಿದ್ದಾರೆ. ಕೆಲವರು ಕೊಹ್ಲಿಯನ್ನು ಕಾಂಗ್ರೆಸ್​ ಬೆಂಬಲಿಗ ಎಂದರೆ ಇನ್ನು ಕೆಲವರು ಸುದ್ದಿಗೋಷ್ಠಿ ನೋಡಿದ ತಕ್ಷಣ ಒಬ್ಬ ವ್ಯಕ್ತಿ ಯಾವುದೇ ಪಕ್ಷಕ್ಕೆ ಸೀಮಿತವಲ್ಲ ಎಂದು ಹೇಳಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಹ್ಲಿ ಈ ವಿಡಿಯೊ ನೋಡಿರುವುದಾಗಿ ಕೆಲವರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ IPL 2024: ಐಪಿಎಲ್​ ಜಾತ್ರೆ ಶುರು; ಇನ್ನು ದೇಶದಲ್ಲಿ ಕ್ರಿಕೆಟ್​ ಪ್ರಿಯರದ್ದೇ ಹವಾ

ಪಕ್ಷದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ನಮಗೆ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಲು, ಪಕ್ಷದ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳನ್ನು ಬೆಂಬಲಿಸಲು ಸಾಧ್ಯವಾಗುತ್ತಿಲ್ಲ. ಚುನಾವಣಾ ಪ್ರಚಾರಕ್ಕೆ ಎರಡು ತಿಂಗಳಿರುವಾಗಲೇ ಇದು ನಡೆದಿದೆ. ಇವರು ನಮ್ಮ ಬ್ಯಾಂಕ್ ಖಾತೆಗಳನ್ನಷ್ಟೇ ಸ್ಥಗಿತಗೊಳಿಸಿಲ್ಲ, ಭಾರತದ ಪ್ರಜಾಪ್ರಭುತ್ವವನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಚುನಾವಣಾ ಆಯೋಗ ಸೇರಿದಂತೆ ಎಲ್ಲರೂ ಮೌನ ತಳೆದರು. ಚುನಾವಣಾ ಆಯೋಗ ಮಧ್ಯಪ್ರವೇಶಿಸಲು ವಿಫಲವಾಗಿದೆ. ಭಾರತದ ಶೇಕಡಾ ಇಪ್ಪತ್ತು ಜನರು ನಮಗೆ ಮತ ಹಾಕುತ್ತಾರೆ ಆದರೆ ನಾವು ಎರಡು ರೂಪಾಯಿ ನೀಡಲು ಸಾಧ್ಯವಾಗುತ್ತಿಲ್ಲ ಎಂದಿದ್ದರು.

ಬ್ಯಾಂಕ್ ಖಾತೆ ಫ್ರೀಜ್ ಆಗಿರುವುದರಿಂದ ನಾವು ಪ್ರಚಾರ ಮಾಡಲು ಸಾಧ್ಯವಿಲ್ಲ. ನಮ್ಮ ನಾಯಕರು ವಿಮಾನದಲ್ಲಿ ಹೋಗಲು ಆಗುತ್ತಿಲ್ಲ, ರೈಲಿನಲ್ಲಿಯೂ ಹೋಗುವಂತಿಲ್ಲ. ಪಕ್ಷದ ಸದಸ್ಯರು ಪತ್ರಿಕೆಗಳಲ್ಲಿ ಜಾಹೀರಾತು ನೀಡಲು ಸಾಧ್ಯವಾಗುತ್ತಿಲ್ಲ. ಕಳೆದ ಎರಡು ತಿಂಗಳಿಂದ ಇದನ್ನೇ ಮಾಡಲಾಗುತ್ತಿದೆ. ನಮ್ಮ ಸಂಪೂರ್ಣ ಆರ್ಥಿಕತೆಯನ್ನು ನಾಶಪಡಿಸಲಾಗಿದೆ. ಇದನ್ನು ಪ್ರಧಾನಿ ಮತ್ತು ಗೃಹ ಸಚಿವರು ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

Exit mobile version