ಬೆಂಗಳೂರು: 2023ನೇ ಸಾಲಿನ ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಭಾಜನರಾಗಿದ್ದಾರೆ. ಅವರು ತಂಡದ ಸಹ ಆಟಗಾರರಾದ ಶುಬ್ಮನ್ ಗಿಲ್ ಮತ್ತು ಮೊಹಮ್ಮದ್ ಶಮಿ ಅವರನ್ನು ಹಿಂದಿಕ್ಕಿ ನಾಲ್ಕನೇ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ 2012, 2017 ಮತ್ತು 2018 ರಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದ ಕೊಹ್ಲಿ ಈಗ ಮತ್ತೊಮ್ಮೆ ಪ್ರತಿಷ್ಠಿತ ಗೌರ ಪಡೆದುಕೊಂಡಿದ್ದಾರೆ. ಇಲ್ಲಿಯೂ ವಿರಾಟ್ ಕೊಹ್ಲಿಯದ್ದು ಸಾಧನೆಯಾಗಿದೆ. ನಾಲ್ಕು ಬಾರಿ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ಅವರ ಮೂರು ಪ್ರಶಸ್ತಿಗಳನ್ನು ಪಡೆದಿದ್ದು, ಆರ್ಸಿಬಿ ಸಹ ಆಟಗಾರನ ದಾಖಲೆಯನ್ನು ಮೀರಿದ್ದಾರೆ.
𝗜𝗖𝗖 𝗠𝗲𝗻'𝘀 𝗢𝗗𝗜 𝗖𝗿𝗶𝗰𝗸𝗲𝘁𝗲𝗿 𝗼𝗳 𝘁𝗵𝗲 𝗬𝗲𝗮𝗿 𝟮𝟬𝟮𝟯
— BCCI (@BCCI) January 25, 2024
It goes to none other than Virat Kohli! 👑🫡
Congratulations 👏👏#TeamIndia | @imVkohli pic.twitter.com/1mfzNwRfrH
ಕೊಹ್ಲಿ 2023ರಲ್ಲಿ ಸ್ಮರಣೀಯ ಪುನರಾಗಮನವನ್ನು ಮಾಡಿದ್ದರು. 36 ಅಂತರರಾಷ್ಟ್ರೀಯ ಇನ್ನಿಂಗ್ಸ್ಗಳಲ್ಲಿ 2,048 ರನ್ ಗಳಿಸಿದ್ದಾರೆ. ಅವರು ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. ಇದು ಅವರಿಗೆ ‘ಪಂದ್ಯಾವಳಿಯ ಅತ್ಯುತ್ತಮ ಆಟಗಾರ’ ಪ್ರಶಸ್ತಿಯನ್ನು ತಂದುಕೊಟ್ಟಿತ್ತು.
2023ರಲ್ಲಿ ಭಾರತೀಯ ಬ್ಯಾಟಿಂಗ್ ದೈತ್ಯ ಎಂಟು ಶತಕಗಳನ್ನು ಬಾರಿಸಿದ್ದರು. ಇದು ಅಗ್ರ ರನ್ ಸ್ಕೋರರ್ ಶುಭ್ಮನ್ ಗಿಲ್ಗಿಂತ ಒಂದು ಹೆಚ್ಚು. ಕೊಹ್ಲಿ ಮತ್ತು ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 2,000 ರನ್ಗಳ ಗಡಿ ದಾಟಿದವರು. ಅದರಲ್ಲಿ ಗಿಲ್ ಏಕದಿನ ಪಂದ್ಯಗಳಲ್ಲಿ 1584 ರನ್ಗಳೊಂದಿಗೆ ಪ್ರಾಬಲ್ಯ ಸಾಧಿಸಿದ್ದಾರೆ.
ಒಂದು ವಿಕೆಟ್ ಪಡೆದ ಕೊಹ್ಲಿ
ಕೊಹ್ಲಿ 50 ಓವರ್ಗಳ ಕ್ರಿಕೆಟ್ನಲ್ಲಿ ಅತ್ಯುತ್ತಮ ರನ್ ಗಳಿಸಿದ್ದು, 24 ಇನ್ನಿಂಗ್ಸ್ಗಳಲ್ಲಿ ಆರು ಶತಕಗಳು ಮತ್ತು ಎಂಟು ಅರ್ಧಶತಕಗಳು ಸೇರಿದಂತೆ 1377 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, 2023ರ ಏಕದಿನ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧ ವಿಕೆಟ್ ಪಡೆದ ಅವರು ಈ ವರ್ಷ ತಮ್ಮ ಹೆಸರಿಗೆ ಒಂದು ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ : Joe Root: ಕ್ರಿಕೆಟ್ ದೇವರು ಸಚಿನ್ ದಾಖಲೆ ಮುರಿದ ಜೋ ರೂಟ್
ವಿಶ್ವಕಪ್ನಲ್ಲಿ ಅತಿ ಹೆಚ್ಚು ಏಕದಿನ ಶತಕಗಳನ್ನು ಬಾರಿಸಿದ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನು ಮೀರಿದ್ದರು. ಈ ಮೂಲಕ 50 ಶತಕಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 27 ಪಂದ್ಯಗಳಲ್ಲಿ 12 ಕ್ಯಾಚ್ಗಳನ್ನೂ ಪಡೆದಿದ್ದಾರೆ.
ಭಾರತದಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಭಾಗವಾಗಿದ್ದ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಕ್ಕೆ ಮೊದಲ ಎರಡು ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ. ತಮ್ಮ ನಿರ್ಧಾರದ ಹಿಂದಿನ ಕಾರಣಗಳ ಬಗ್ಗೆ ಊಹಾಪೋಹಗಳಿಂದ ದೂರವಿರಲು ಅವರು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.