Virat Kohli : ವಿರಾಟ್​ ಕೊಹ್ಲಿಗೆ ಐಸಿಸಿಯಿಂದ ಸಿಕ್ಕಿತು ಮತ್ತೊಂದು ಗೌರವ - Vistara News

ಕ್ರಿಕೆಟ್

Virat Kohli : ವಿರಾಟ್​ ಕೊಹ್ಲಿಗೆ ಐಸಿಸಿಯಿಂದ ಸಿಕ್ಕಿತು ಮತ್ತೊಂದು ಗೌರವ

Virat Kohli : ವಿರಾಟ್ ಕೊಹ್ಲಿ ನಾಲ್ಕು ಬಾರಿ ಐಸಿಸಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆಯುವಲ್ಲೂ ನೂತನ ದಾಖಲೆ ಬರೆದಿದ್ದಾರೆ.

VISTARANEWS.COM


on

Virat Kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 2023ನೇ ಸಾಲಿನ ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಭಾಜನರಾಗಿದ್ದಾರೆ. ಅವರು ತಂಡದ ಸಹ ಆಟಗಾರರಾದ ಶುಬ್ಮನ್ ಗಿಲ್ ಮತ್ತು ಮೊಹಮ್ಮದ್ ಶಮಿ ಅವರನ್ನು ಹಿಂದಿಕ್ಕಿ ನಾಲ್ಕನೇ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ 2012, 2017 ಮತ್ತು 2018 ರಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದ ಕೊಹ್ಲಿ ಈಗ ಮತ್ತೊಮ್ಮೆ ಪ್ರತಿಷ್ಠಿತ ಗೌರ ಪಡೆದುಕೊಂಡಿದ್ದಾರೆ. ಇಲ್ಲಿಯೂ ವಿರಾಟ್​ ಕೊಹ್ಲಿಯದ್ದು ಸಾಧನೆಯಾಗಿದೆ. ನಾಲ್ಕು ಬಾರಿ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ಅವರ ಮೂರು ಪ್ರಶಸ್ತಿಗಳನ್ನು ಪಡೆದಿದ್ದು, ಆರ್​​ಸಿಬಿ ಸಹ ಆಟಗಾರನ ದಾಖಲೆಯನ್ನು ಮೀರಿದ್ದಾರೆ.

ಕೊಹ್ಲಿ 2023ರಲ್ಲಿ ಸ್ಮರಣೀಯ ಪುನರಾಗಮನವನ್ನು ಮಾಡಿದ್ದರು. 36 ಅಂತರರಾಷ್ಟ್ರೀಯ ಇನ್ನಿಂಗ್ಸ್​ಗಳಲ್ಲಿ 2,048 ರನ್ ಗಳಿಸಿದ್ದಾರೆ. ಅವರು ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. ಇದು ಅವರಿಗೆ ‘ಪಂದ್ಯಾವಳಿಯ ಅತ್ಯುತ್ತಮ ಆಟಗಾರ’ ಪ್ರಶಸ್ತಿಯನ್ನು ತಂದುಕೊಟ್ಟಿತ್ತು.

2023ರಲ್ಲಿ ಭಾರತೀಯ ಬ್ಯಾಟಿಂಗ್ ದೈತ್ಯ ಎಂಟು ಶತಕಗಳನ್ನು ಬಾರಿಸಿದ್ದರು. ಇದು ಅಗ್ರ ರನ್ ಸ್ಕೋರರ್ ಶುಭ್ಮನ್ ಗಿಲ್​​ಗಿಂತ ಒಂದು ಹೆಚ್ಚು. ಕೊಹ್ಲಿ ಮತ್ತು ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 2,000 ರನ್​ಗಳ ಗಡಿ ದಾಟಿದವರು. ಅದರಲ್ಲಿ ಗಿಲ್ ಏಕದಿನ ಪಂದ್ಯಗಳಲ್ಲಿ 1584 ರನ್​ಗಳೊಂದಿಗೆ ಪ್ರಾಬಲ್ಯ ಸಾಧಿಸಿದ್ದಾರೆ.

ಒಂದು ವಿಕೆಟ್​ ಪಡೆದ ಕೊಹ್ಲಿ

ಕೊಹ್ಲಿ 50 ಓವರ್​ಗಳ ಕ್ರಿಕೆಟ್​ನಲ್ಲಿ ಅತ್ಯುತ್ತಮ ರನ್ ಗಳಿಸಿದ್ದು, 24 ಇನ್ನಿಂಗ್ಸ್​ಗಳಲ್ಲಿ ಆರು ಶತಕಗಳು ಮತ್ತು ಎಂಟು ಅರ್ಧಶತಕಗಳು ಸೇರಿದಂತೆ 1377 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, 2023ರ ಏಕದಿನ ವಿಶ್ವಕಪ್​​ನಲ್ಲಿ ಬಾಂಗ್ಲಾದೇಶ ವಿರುದ್ಧ ವಿಕೆಟ್ ಪಡೆದ ಅವರು ಈ ವರ್ಷ ತಮ್ಮ ಹೆಸರಿಗೆ ಒಂದು ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ : Joe Root: ಕ್ರಿಕೆಟ್​ ದೇವರು ಸಚಿನ್​ ದಾಖಲೆ ಮುರಿದ ಜೋ ರೂಟ್​

ವಿಶ್ವಕಪ್​ನಲ್ಲಿ ಅತಿ ಹೆಚ್ಚು ಏಕದಿನ ಶತಕಗಳನ್ನು ಬಾರಿಸಿದ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನು ಮೀರಿದ್ದರು. ಈ ಮೂಲಕ 50 ಶತಕಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 27 ಪಂದ್ಯಗಳಲ್ಲಿ 12 ಕ್ಯಾಚ್​ಗಳನ್ನೂ ಪಡೆದಿದ್ದಾರೆ.

ಭಾರತದಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಭಾಗವಾಗಿದ್ದ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಕ್ಕೆ ಮೊದಲ ಎರಡು ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ. ತಮ್ಮ ನಿರ್ಧಾರದ ಹಿಂದಿನ ಕಾರಣಗಳ ಬಗ್ಗೆ ಊಹಾಪೋಹಗಳಿಂದ ದೂರವಿರಲು ಅವರು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup 2026: ಆತಿಥೇಯ ಭಾರತಕ್ಕೆ ಬೆದರಿಕೆಯೊಡ್ಡಿದ ಪಾಕಿಸ್ತಾನ ಕ್ರಿಕೆಟ್​ ಮಂಡಳಿ​

T20 World Cup 2026: 2026ರ ಟಿ20 ವಿಶ್ವಕಪ್​ ಟೂರ್ನಿಗೆ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯ ವಹಿಸಿಕೊಂಡಿದೆ. ಭಾರತ ತಂಡ ಪಾಕ್​ ನೆಲದಲ್ಲಿ ಚಾಂಪಿಯನ್ಸ್​ ಟ್ರೋಫಿ ಆಡದೇ ಹೋದರೆ, ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್​ ಪಂದ್ಯವನ್ನು ಆಡಲು ಪಾಕ್ ತಂಡ ಸಿದ್ಧವಿಲ್ಲ ಎಂದು ಪಿಸಿಬಿ ಹೇಳಿರುವುದಾಗಿ ವರದಿಯಾಗಿದೆ.

VISTARANEWS.COM


on

T20 World Cup 2026: Pakistan to boycott 2026 T20 World Cup in India
Koo

ನವದೆಹಲಿ: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿಯಲ್ಲಿ(Champions Trophy 2025) ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲಿದೆಯಾ? ಅಥವಾ ಟೂರ್ನಿಯಿಂದ ಹಿಂದೆ ಸರಿಯಲಿದೆಯಾ? ಹೀಗೆ ಕಳೆದ ಹಲವು ದಿನಗಳಿಂದ ಚರ್ಚೆಗಳು ನಡೆಯುತ್ತಿವೆ. ಟೂರ್ನಿಯನ್ನು ಹೈಬ್ರೀಡ್​ ಮಾದರೊಯಲ್ಲಿ ನಡೆಸುವಂತೆ ಬಿಸಿಸಿಐ, ಐಸಿಸಿಗೆ ಒತ್ತಡ ಹಾಕುತ್ತಿದೆ ಎಂದು ಕೂಡ ವರದಿಯಾಗಿತ್ತು. ಇದೀಗ ಭಾರತ ಪಾಕ್​ಗೆ ತೆರಳದೇ ಇದ್ದರೆ, 2026ರಲ್ಲಿ(T20 World Cup 2026) ನಡೆಯುವ ಟಿ20 ವಿಶ್ವಕಪ್​ ಟೂರ್ನಿಯಿಂದ ಪಾಕ್​ ಹಿಂದೆ ಸರಿಯಲಿದೆ(Pakistan to boycott 2026 T20 World Cup) ಎಂದು ವರದಿಯಾಗಿದೆ.

2026ರ ಟಿ20 ವಿಶ್ವಕಪ್​ ಟೂರ್ನಿಗೆ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯ ವಹಿಸಿಕೊಂಡಿದೆ. ಭಾರತ ತಂಡ ಪಾಕ್​ ನೆಲದಲ್ಲಿ ಚಾಂಪಿಯನ್ಸ್​ ಟ್ರೋಫಿ ಆಡದೇ ಹೋದರೆ, ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್​ ಪಂದ್ಯವನ್ನು ಆಡಲು ಪಾಕ್ ತಂಡ ಸಿದ್ಧವಿಲ್ಲ ಎಂದು ಪಿಸಿಬಿ ಹೇಳಿರುವುದಾಗಿ ವರದಿಯಾಗಿದೆ.

ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಭಾರತ ತಂಡ ಪಾಕ್​ಗೆ ಹೋಗುವುದಿಲ್ಲ ಎಂಬ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ಬಿಸಿಸಿಐ ಅಥವಾ ಸರ್ಕಾರ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

‘ಮುಂದಿನ ವರ್ಷ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ಭಾಗವಹಿಸುವುದಿಲ್ಲ ಎಂದು ಕೆಲವು ವರದಿಗಳನ್ನು ನೋಡಿದ್ದೇನೆ. ಜತೆಗೆ ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ನಡೆಸುವಂತೆ ಬಿಸಿಸಿಐ, ಐಸಿಸಿ ಬಳಿ ಕೇಳಿಕೊಂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ, ಬಿಸಿಸಿಐ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ’ ಎಂದು ಹೇಳುವ ಮೂಲಕ ಶುಕ್ಲಾ ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ Champions Trophy 2025: ಚಾಂಪಿಯನ್ಸ್‌ ಟ್ರೋಫಿಯಿಂದ ಭಾರತ ಹಿಂದೆ ಸರಿದರೆ ಯಾವ ತಂಡಕ್ಕೆ ಸಿಗಲಿದೆ ಅವಕಾಶ?

ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತ ತಂಡವು ಪ್ರಯಾಣಿಸಲು ನಿರಾಕರಿಸಿದ ನಂತರ, ಕಳೆದ ವರ್ಷದ ಏಷ್ಯಾಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು.

ಚಾಂಪಿಯನ್ಸ್​ ಟ್ರೋಫಿಯ ಯಶಸ್ಸಿಗೆ ಪಿಸಿಬಿ ಬದ್ಧವಾಗಿದ್ದರೂ, ಭದ್ರತಾ ಕಾರಣಗಳಿಂದಾಗಿ ಭಾರತವು ಭಾಗವಹಿಸದಿದ್ದರೆ, ಆಗ ಏಷ್ಯಾ ಕಪ್​ನಂತೆ​ ಹೈಬ್ರಿಡ್ ಮಾದರಿಯ ಮೊರೆ ಹೋಗಬೇಕಿದೆ. ಆದರೆ ಸ್ವತಂತ್ರ ಏಜೆನ್ಸಿಯೊಂದಿಗೆ ಸಮಾಲೋಚಿಸಿ ಸಮಗ್ರ ಭದ್ರತಾ ಮೌಲ್ಯಮಾಪನವನ್ನು ನಡೆಸಿ ಪಾಕಿಸ್ತಾನದಲ್ಲಿಯೇ ಟೂರ್ನಿ ನಡೆಸಿ ಎಂದು ಪಿಸಿಬಿ ಹೇಳುವ ಸಾಧ್ಯತೆಗಳಿವೆ. ಐಸಿಸಿ ಈ ವಿನಂತಿಯನ್ನು ಒಪ್ಪಿಕೊಂಡಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ಭಾರತ ಪಾಕ್​ನಲ್ಲಿ ಆಡಲಿದೆಯಾ ಅಥವಾ ಬಿಸಿಸಿಐ ಒತ್ತಾಯಕ್ಕೆ ಮಣಿದು ಟೂರ್ನಿ ಪಾಕ್​ ನಿಂದ ಶಿಫ್ಟ್​ ಆಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

Continue Reading

ಕ್ರಿಕೆಟ್

Yashasvi Jaiswal : ಇನಿಂಗ್ಸ್​​ನ ಮೊದಲ ಎಸೆತಕ್ಕ 13 ರನ್​, ವಿನೂತನ ದಾಖಲೆ ಬರೆದ ಯಶಸ್ವಿ ಜೈಸ್ವಾಲ್​

Yashasvi Jaiswal : ನೋಬಾಲ್ ಕಾರಣಕ್ಕೆ ಫ್ರೀಹಿಟ್ ದೊರೆಯಿತು. ಅದನ್ನು ಜೈಸ್ವಾಲ್​ ಬೌಲರ್​ ತಲೆ ಮೇಲಿಂದ ಸಿಕ್ಸರ್ ಆಗಿ ಪರಿವರ್ತಿಸಿದರು. ಹೀಗಾಗಿ ಜೈಸ್ವಾಲ್​ ಒಂದೇ ಒಂದು ನಿಯಮ ಬದ್ಧ ಎಸೆತದಲ್ಲಿ 12 ಹಾಗೂ ಒಂದು ನೋಬಾಲ್ ಸೇರಿ 13 ರನ್ ಗಳಿಸಿದಂತಾಯಿತು. ಆದಾಗ್ಯೂ, ಬ್ಯಾಟರ್ ಹೆಚ್ಚಿನ ರನ್​ ಗಳಿಸಲು ಸಾಧ್ಯವಾಗಲಿಲ್ಲ. ರಾಜಾ ಅದೇ ಓವರ್​ನಲ್ಲಿ ಜೈಸ್ವಾಲ್ ಅವರನ್ನು ಔಟ್ ಮಾಡಿದರು.

VISTARANEWS.COM


on

Yashasvi Jaiswal
Koo

`ಬೆಂಗಳೂರು : ಜಿಂಬಾಬ್ವೆ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ (INDvsZIM) ಭಾರತ ತಂಡದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಭಾರತ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್​​ ಯಶಸ್ವಿ ಜೈಸ್ವಾಲ್ (Yashasvi Jaiswal ) 13 ರನ್ ಬಾರಿಸಿ ಔಟಾಗಿದ್ದಾರೆ. ಆದರೆ ಅದಕ್ಕಿಂತ ಮೊದಲು ಅವರು ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಈ ಸಾಧನೆ ಮಾಡಿದ ಮೊಟ್ಟ ಮೊದಲ ಕ್ರಿಕೆಟರ್ ಎಂಬ ದಾಖಲೆಗ ಸೃಷ್ಟಿಸಿದ್ದಾರೆ.

ಟಾಸ್ ಸೋತ ನಂತರ ಮೊದಲು ಬ್ಯಾಟಿಂಗ್ ಮಾಡಲು ಭಾರತ ಆಹ್ವಾನ ಪಡೆಯಿತು. ಅಂತೆಯೇ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮೊದಲ ಎಸೆತದಲ್ಲೇ ಸ್ಟ್ರೈಕ್ ತೆಗೆದುಕೊಂಡು ಜಿಂಬಾಬ್ವೆ ನಾಯಕ ಸಿಕಂದರ್ ರಾಜಾ ಅವರನ್ನು ಎದುರಿಸಿದರು. ಕಳೆದ ಪಂದ್ಯದಲ್ಲಿ 93*(53) ರನ್ ಗಳಿಸಿದ ನಂತರ ಜೈಸ್ವಾಲ್ ಸರಣಿಯ ಕೊನೆಯ ಪಂದ್ಯದಲ್ಲೂ ಆತ್ಮವಿಶ್ವಾಸದಿಂದ ಆಡಲು ಮುಂದಾದರು. ರಾಜಾ ಆಫ್ ಸ್ಟಂಪ್ ಕಡೆಗೆ ಫುಲ್ ಟಾಸ್ ಎಸೆತ ಹಾಕಿದರು. ಯಶಸ್ವಿ ಅದನ್ನು ಮಿಡ್ ವಿಕೆಟ್​ ಕಡೆಗೆ ಸ್ಲಾಗ್ ಸ್ವೀಪ್ ಮಾಡುವ ಅದನ್ನು ಸಿಕ್ಸರ್​ಗೆ ಅಟ್ಟಿದರು. ಮೂರನೇ ಅಂಪೈರ್ ರಾಜಾ ನೊಬಾಲ್ ಹಾಕಿರುವುದನ್ನು ಗುರುತಿಸಿದರು. ಒಂದು ಎಸೆತ ಪೂರ್ತಿಯಾಗದೇ ಜೈಸ್ವಾಲ್​ 6 ರನ್ ಗಳಸಿಕೊಂಡರು.

ನೋಬಾಲ್ ಕಾರಣಕ್ಕೆ ಫ್ರೀಹಿಟ್ ದೊರೆಯಿತು. ಅದನ್ನು ಜೈಸ್ವಾಲ್​ ಬೌಲರ್​ ತಲೆ ಮೇಲಿಂದ ಸಿಕ್ಸರ್ ಆಗಿ ಪರಿವರ್ತಿಸಿದರು. ಹೀಗಾಗಿ ಜೈಸ್ವಾಲ್​ ಒಂದೇ ಒಂದು ನಿಯಮ ಬದ್ಧ ಎಸೆತದಲ್ಲಿ 12 ಹಾಗೂ ಒಂದು ನೋಬಾಲ್ ಸೇರಿ 13 ರನ್ ಗಳಿಸಿದಂತಾಯಿತು. ಆದಾಗ್ಯೂ, ಬ್ಯಾಟರ್ ಹೆಚ್ಚಿನ ರನ್​ ಗಳಿಸಲು ಸಾಧ್ಯವಾಗಲಿಲ್ಲ. ರಾಜಾ ಅದೇ ಓವರ್​ನಲ್ಲಿ ಜೈಸ್ವಾಲ್ ಅವರನ್ನು ಔಟ್ ಮಾಡಿದರು.

ಪಂದ್ಯದಲ್ಲಿ ಏನಾಯಿತು?

ಹರಾರೆ: ಸಂಜು ಸ್ಯಾಮ್ಸನ್​ (55) ಬಾರಿಸಿದ ಅಮೋಘ ಅರ್ಧ ಶತಕ ಹಾಗೂ ಮುಕೇಶ್ ಕುಮಾರ್ ಅವರ 4 ವಿಕೆಟ್​ ಸಾಧನೆಯೊಂದಿಗೆ ಮಿಂಚಿದ ಭಾರತ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧದ (IND vs ZIM ) ಟಿ20 ಸರಣಿಯ ಐದನೇ ಪಂದ್ಯದಲ್ಲೂ ವಿಜಯ ಸಾಧಿಸಿದೆ. ಇದರೊಂದಿಗೆ ಭಾರತ ತಂಡ ಸರಣಿಯನ್ನು 4-1 ಅಂತರದಿಂದ ತನ್ನದಾಗಿಸಿಕೊಂಡಿದೆ. ಆರಂಭಿಕ ಪಂದ್ಯದಲ್ಲಿ ಅಚ್ಚರಿಯ ಸೋಲನ್ನು ಕಂಡ ಕಾರಣ ಕ್ಲೀನ್ ಸ್ವೀಪ್ ಮಾಡುವ ಅವಕಾಶವನ್ನು ಶುಬ್ಮನ್​ ಗಿಲ್ ನೇತೃತ್ವದ ಬಳಗ ಕಳೆದುಕೊಂಡಿತು. ಆದಾಗ್ಯೂ ಮೊದಲ ನಾಯಕತ್ವದಲ್ಲಿಯೇ ಶುಬ್ಮನ್​ ಗಿಲ್​ ತಮ್ಮ ಸಾಮರ್ಥ್ಯವನ್ನು ಸಾಬೀತಪಡಿಸಿಕೊಂಡಿದ್ದಾರೆ.

ಹರಾರೆ: ಸಂಜು ಸ್ಯಾಮ್ಸನ್​ (55) ಬಾರಿಸಿದ ಅಮೋಘ ಅರ್ಧ ಶತಕ ಹಾಗೂ ಮುಕೇಶ್ ಕುಮಾರ್ ಅವರ 4 ವಿಕೆಟ್​ ಸಾಧನೆಯೊಂದಿಗೆ ಮಿಂಚಿದ ಭಾರತ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧದ (IND vs ZIM ) ಟಿ20 ಸರಣಿಯ ಐದನೇ ಪಂದ್ಯದಲ್ಲೂ ವಿಜಯ ಸಾಧಿಸಿದೆ. ಇದರೊಂದಿಗೆ ಭಾರತ ತಂಡ ಸರಣಿಯನ್ನು 4-1 ಅಂತರದಿಂದ ತನ್ನದಾಗಿಸಿಕೊಂಡಿದೆ. ಆರಂಭಿಕ ಪಂದ್ಯದಲ್ಲಿ ಅಚ್ಚರಿಯ ಸೋಲನ್ನು ಕಂಡ ಕಾರಣ ಕ್ಲೀನ್ ಸ್ವೀಪ್ ಮಾಡುವ ಅವಕಾಶವನ್ನು ಶುಬ್ಮನ್​ ಗಿಲ್ ನೇತೃತ್ವದ ಬಳಗ ಕಳೆದುಕೊಂಡಿತು. ಆದಾಗ್ಯೂ ಮೊದಲ ನಾಯಕತ್ವದಲ್ಲಿಯೇ ಶುಬ್ಮನ್​ ಗಿಲ್​ ತಮ್ಮ ಸಾಮರ್ಥ್ಯವನ್ನು ಸಾಬೀತಪಡಿಸಿಕೊಂಡಿದ್ದಾರೆ.

Continue Reading

ಕ್ರೀಡೆ

Hardik Pandya : ಪತ್ನಿ ಜತೆ ವಿಚ್ಛೇದನ ಸುದ್ದಿ ನಡುವೆ ರಷ್ಯನ್ ಮಾಡೆಲ್​ ಜತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ; ಯಾರವರು?

Hardik Pandya: ರಷ್ಯಾದ ರೂಪದರ್ಶಿ ಮತ್ತು ನಟಿ ಎಲೆನಾ ತುತೇಜಾ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಕೆಲವೊಂದು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಎಲೆನಾ ತುತೇಜಾ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​​ನಲ್ಲಿ ಹಂಚಿಕೊಂಡಿದ್ದಾರೆ. ಅವರು ‘ವಿಶೇಷ ಟಿಪ್ಪಣಿ’ ಬರೆದು ಹಾರ್ದಿಕ್ ಪಾಂಡ್ಯ ಅವರೊಂದಿಗಿನ ಫೋಟೋಶೂಟ್​ ಎಂದು ಬರೆದುಕೊಂಂಡಿದ್ದಾರೆ.

VISTARANEWS.COM


on

Hardik Pandya
Koo

ನವದೆಹಲಿ: ಭಾರತೀಯ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಇತ್ತೀಚೆಗೆ ಮುಕ್ತಾಯಗೊಂಡ ಟಿ 20 ವಿಶ್ವಕಪ್ 2024 ರಲ್ಲಿ ತಮ್ಮ ಕ್ರಿಕೆಟ್ ಸಾಧನೆಗಳಿಂದ ಸುದ್ದಿಯಾಗಿದ್ದರು. ಅದಕ್ಕಿಂತ ಮೊದಲು ಅವರು ವೈಯಕ್ತಿಕ ಜೀವನ ಮತ್ತು ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನದ ವದಂತಿಗಳಿಂದಾಗಿಯೂ ಸುದ್ದಿಯಲ್ಲಿದ್ದರು. ಅನಂತ್​ ಅಂಬಾನಿ ಜತೆ ಮದುವೆಯ ಪಾರ್ಟಿಯಲ್ಲೂ ಹಾರ್ದಿಕ್ ಪಾಂಡ್ಯ ಜತೆ ನತಾಶ ಕಾಣಿಸಿಕೊಂಡಿಲ್ಲ. ಏಕಾಂಗಿಯಾಗಿ ಬಂದು ಕುಣಿದು ಕುಪ್ಪಳಿಸಿದ್ದರು.

ಹಾರ್ದಿಕ್ ಪಾಂಡ್ಯ ವೆಸ್ಟ್​ ಇಂಡೀಸ್​​ನ ಬಾರ್ಬಡೋಸ್​​ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್​ನ ಅಂತಿಮ ಓವರ್ ಎಸೆದು ಡೇವಿಡ್ ಮಿಲ್ಲರ್ ಅವರ ಪ್ರಮುಖ ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಹಲವರು ಕಾರಣಗಳಿಂದ ಸುದ್ದಿಯಲ್ಲಿರುವ ಅವರೀಗ ರಷ್ಯಾದ ರೂಪದರ್ಶಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

ರಷ್ಯಾದ ರೂಪದರ್ಶಿ ಮತ್ತು ನಟಿ ಎಲೆನಾ ತುತೇಜಾ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಕೆಲವೊಂದು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಎಲೆನಾ ತುತೇಜಾ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​​ನಲ್ಲಿ ಹಂಚಿಕೊಂಡಿದ್ದಾರೆ. ಅವರು ‘ವಿಶೇಷ ಟಿಪ್ಪಣಿ’ ಬರೆದು ಹಾರ್ದಿಕ್ ಪಾಂಡ್ಯ ಅವರೊಂದಿಗಿನ ಫೋಟೋಶೂಟ್​ ಎಂದು ಬರೆದುಕೊಂಂಡಿದ್ದಾರೆ.

“ಭಾರತವು ತಮ್ಮ ಚಾಂಪಿಯನ್​ಗಳ ಬಗ್ಗೆ ತುಂಬಾ ಹೆಮ್ಮೆಪಡುತ್ತಿರುವಾಗ, ಅವರಲ್ಲಿ ಒಬ್ಬರೊಂದಿಗಿನ ನನ್ನ ಫೋಟೋಶೂಟ್​​ ನಡೆಸಿಕೊಳ್ಳುವುದಕ್ಕೆ ನಾನು ನಿರ್ಧರಿಸಿದೆ . ಬಾಡಿ ಎಕ್ಸ್ ಬ್ರಾಂಡ್​ನ ಫೋಟೊ ಶೂಟ್​​. ಅವರ ತಂಡದೊಂದಿಗೆ ನಮಗೆ ಹೆಮ್ಮೆ ಯಿದೆ ಎಂದು ಬರೆದುಕೊಂಡಿದ್ದಾರೆ.

ಎಲೆನಾ ತುತೇಜಾ ಯಾರು?

ಎಲೆನಾ ಟುತೇಜಾ ರಷ್ಯಾದ ರೂಪದರ್ಶಿ ಮತ್ತು ನಟಿ ಮಾಸ್ಕೋದಲ್ಲಿ ಜನಿಸಿದ್ದಾರೆ. ನಟನೆ ಮತ್ತು ಮಾಡೆಲಿಂಗ್​​ನಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಲು ಅವರು ಮುಂಬೈಗೆ ಸ್ಥಳಾಂತರಗೊಂಡಿದ್ದರು. ಅವರು ಮಿಸೆಸ್ ಇಂಡಿಯಾ ಅರ್ಥ್ ಸ್ಪರ್ಧೆಯಲ್ಲಿ ಭಾಗವಹಿಸುವವರಲ್ಲಿ ಒಬ್ಬರಾಗಿದ್ದರು. 2017 ರಲ್ಲಿ 2 ನೇ ರನ್ನರ್ ಅಪ್ ಆಗಿದ್ದರು.

ಇದನ್ನೂ ಓದಿ: Wimbledon 2024 : ಜೊಕೊವಿಕ್ ಮಣಿಸಿದ 2ನೇ ವಿಂಬಲ್ಡನ್​ ಟ್ರೋಫಿ ಗೆದ್ದ ಕಾರ್ಲೋಸ್ ಅಲ್ಕರಾಜ್

ಟಿವಿ ಸರಣಿ ‘ಪಾರ್ಟ್ನರ್ಸ್’ ಮೂಲಕ ಭಾರತದಲ್ಲಿ ತಮ್ಮ ನಟನಾ ವೃತ್ತಿಜೀವನ ಪ್ರಾರಂಭಿಸಿದ್ದರು. 2020 ರಲ್ಲಿ, ಅವರು ‘ಕೆಹ್ತಾ ಹೈ ಯೇ ದಿಲ್’ ಎಂಬ ಬಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಂಡರು. ಅವರು ‘ಸಾವಧಾನ್ ಇಂಡಿಯಾ’ ಟಿವಿ ಸರಣಿಯ ಭಾಗವಾಗಿದ್ದರು. ಇತ್ತೀಚಿನ ಟಿವಿ ಸರಣಿ ‘ಬದ್ದಮೀಜ್ ದಿಲ್’ ನಲ್ಲಿ ಅವರು 2023 ರಲ್ಲಿ ಬಿಡುಗಡೆಯಾದ ‘ಕರಣ್ಸ್​ ಗರ್ಲ್​ಫ್ರೆಂಡ್ ಚಿತ್ರದಲ್ಲಿ ಪಾತ್ರ ವಹಿಸಿದ್ದರು.

Continue Reading

ಪ್ರಮುಖ ಸುದ್ದಿ

Team India : ಆಸ್ಟ್ರೇಲಿಯಾ ಪ್ರವಾಸಕ್ಕೆ 18 ಸದಸ್ಯರ ಭಾರತ ‘ಎ’ ಮಹಿಳಾ ತಂಡ ಪ್ರಕಟ

Team India : ಮಿನ್ನು ಮಣಿ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದ್ದು, ಶ್ವೇತಾ ಶೆರಾವತ್ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಮಹಿಳಾ ಪ್ರೀಮಿಯರ್ ಲೀಗ್ 2024 ರಲ್ಲಿ ಮಿಂಚಿದ ಸಜನಾ ಸಜೀವನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

VISTARANEWS.COM


on

Team India
Koo

ಬೆಂಗಳೂರು: ಭಾರತ ‘ಎ’ ಮಹಿಳಾ ತಂಡ ಆಸ್ಟ್ರೇಲಿಯಾ ‘ಎ’ ವಿರುದ್ಧದ ಬಹು ಮಾದರಿಯ ಕ್ರಿಕೆಟ್​​ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದೆ. ಆಸ್ಟ್ರೇಲಿಯಾ ‘ಎ’ ವಿರುದ್ಧ ಭಾರತ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ. ಈ ಬಹು-ಸ್ವರೂಪದ ಪ್ರವಾಸವು ಆಗಸ್ಟ್ 7 ರಂದು ಬ್ರಿಸ್ಬೇನ್​​​ ಅಲನ್ ಬಾರ್ಡರ್ ಫೀಲ್ಡ್ (ಎಬಿಎಫ್) ನಲ್ಲಿ ಪ್ರಾರಂಭವಾಗಲಿದೆ. ಈ ತಾಣವು ಮೂರು ಟಿ 20 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ಏಕದಿನ ಪಂದ್ಯಗಳು ಮ್ಯಾಕೆಯಲ್ಲಿ ನಡೆಯಲಿದ್ದು, ಗೋಲ್ಡ್ ಕೋಸ್ಟ್ ನಾಲ್ಕು ದಿನಗಳ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಮುನ್ನ ಮಹಿಳಾ ಆಯ್ಕೆ ಸಮಿತಿಯು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ 18 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮಿನ್ನು ಮಣಿ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದ್ದು, ಶ್ವೇತಾ ಶೆರಾವತ್ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಮಹಿಳಾ ಪ್ರೀಮಿಯರ್ ಲೀಗ್ 2024 ರಲ್ಲಿ ಮಿಂಚಿದ ಸಜನಾ ಸಜೀವನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮಹಿಳೆಯರ ತಂಡದ ಪ್ರಭಾವ ಅಧಿಕ


ಹಿರಿಯ ಭಾರತ ಮಹಿಳಾ ತಂಡದ ಬಗ್ಗೆ ಮಾತನಾಡುವುದಾದರೆ, ಜೂನ್ 16 ರಂದು ಪ್ರಾರಂಭವಾದ ಬಹು-ಸ್ವರೂಪದ ಪ್ರವಾಸದಲ್ಲಿ ಅವರು ದಕ್ಷಿಣ ಆಫ್ರಿಕಾ ಮಹಿಳೆಯರ ವಿರುದ್ಧ ಪ್ರಾಬಲ್ಯ ಸಾಧಿಸಿದ್ದರು. ಮೊದಲಿಗೆ ಭಾರತವು ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್​ ಮಾಡಿತ್ತು. ನಂತರ ಚೆನ್ನೈನಲ್ಲಿ ನಡೆದ ಏಕೈಕ ಟೆಸ್ಟ್​​ನಲ್ಲಿ ಪ್ರವಾಸಿ ದ. ಆಫ್ರಿಕಾ ತಂಡದ ವಿರುದ್ಧ ಐತಿಹಾಸಿಕ ಗೆಲುವ ಸಾಧಿಸಿತು. ಆದಾಗ್ಯೂ, ಪ್ರವಾಸದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಸ್ವಲ್ಪ ಪ್ರಬಲವಾಯಿತು. ಅವರು ಟಿ 20 ಐ ಸರಣಿಯನ್ನು 1-1 ರಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: IND vs ZIM : ಜಿಂಬಾಬ್ವೆ ವಿರುದ್ಧದ ಐದನೇ ಪಂದ್ಯದಲ್ಲಿಯೂ ವಿಜಯ, 4-1 ಅಂತರದಲ್ಲಿ ಸರಣಿ ಭಾರತದ ಕೈವಶ

ಭಾರತ ‘ಎ’ ಮಹಿಳಾ ತಂಡ

ಮಿನ್ನು ಮಣಿ (ನಾಯಕಿ), ಶ್ವೇತಾ ಸೆಹ್ರಾವತ್ (ಉಪನಾಯಕಿ), ಪ್ರಿಯಾ ಪೂನಿಯಾ, ಶುಭಾ ಸತೀಶ್, ತೇಜಲ್ ಹಸಬ್ನಿಸ್, ಕಿರಣ್ ನವಗಿರೆ, ಸಜ್ನಾ ಸಜೀವನ್, ಉಮಾ ಚೆಟ್ರಿ (ಯುಕೆ), ಶಿಪ್ರಾ ಗಿರಿ (ಯುಕೆ), ರಾಘವಿ ಬಿಶ್ತ್, ಸೈಕಾ ಇಶಾಕ್, ಮನ್ನತ್ ಕಶ್ಯಪ್, ತನುಜಾ ಕನ್ವರ್, ಪ್ರಿಯಾ ಮಿಶ್ರಾ, ಮೇಘನಾ ಸಿಂಗ್, ಸಯಾಲಿ ಸತ್ಘರೆ, ಶಬ್ನಮ್ ಶಕೀಲ್*, ಎಸ್.

ಶಬ್ನಮ್​ ಶಕೀಲ್ ಆಯ್ಕೆ ಫಿಟ್ನೆಸ್​ಗೆ ಒಳಪಟ್ಟಿರುತ್ತದೆ. ಸ್ಟ್ಯಾಂಡ್​ಬೈ ಆಟಗಾರ್ತಿ: ಸೈಮಾ ಠಾಕೂರ್

Continue Reading
Advertisement
Euro 2024 final
ಕ್ರೀಡೆ9 mins ago

Euro 2024 final: 4ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಸ್ಪೇನ್​

udupi fire tragedy bar owner
ಉಡುಪಿ17 mins ago

Fire Tragedy: ಅಗ್ನಿ ಆಕಸ್ಮಿಕಕ್ಕೆ ಮನೆ ಸುಟ್ಟು ಕರಕಲು, ಬಾರ್‌ ಮಾಲೀಕ ಸಾವು

Anant Ambani Wedding Tamannaah Bhatia is vintage beauty
ಬಾಲಿವುಡ್22 mins ago

Anant Ambani Wedding: ಅನಂತ್ ಅಂಬಾನಿ ಆರತಕ್ಷತೆಯಲ್ಲಿ ದುಬಾರಿ ಲೆಹೆಂಗಾ ಧರಿಸಿ ಅಪ್ಸರೆಯಂತೆ ಕಂಡ ತಮನ್ನಾ ಭಾಟಿಯಾ!

Katrina Kaif Visited Swamy Koragajja Aadisthala Kuthar
ಬಾಲಿವುಡ್38 mins ago

Katrina Kaif: ಕೊರಗಜ್ಜನ ಕ್ಷೇತ್ರದಲ್ಲಿ ಕತ್ರಿನಾ ಕೈಫ್; ದೈವದ ಬಳಿ ನಟಿ ಬೇಡಿಕೊಂಡಿದ್ದೇನು?

Trump Assassination Bid
ವಿದೇಶ42 mins ago

Trump Assassination Bid: ಟ್ರಂಪ್‌ ಮೇಲೆ ಗುಂಡಿನ ದಾಳಿ; ಶೂಟರ್‌ ಫೋಟೋ ರಿಲೀಸ್‌- ಆತನ ಸ್ನೇಹಿತರು ಹೇಳಿದ್ದೇನು?

Donald Trump
ವೈರಲ್ ನ್ಯೂಸ್45 mins ago

Donald Trump: ಜಗನ್ನಾಥನ ಕೃಪೆಯಿಂದ ಡೊನಾಲ್ಡ್‌ ಟ್ರಂಪ್‌ ಪಾರು; ಏನಿದು ದೈವಿಕ ಪವಾಡ? ವೈರಲ್‌ ಪೋಸ್ಟ್‌ ಇಲ್ಲಿದೆ

assembly session
ಪ್ರಮುಖ ಸುದ್ದಿ52 mins ago

Assembly Session: ಇಂದಿನಿಂದ ವಿಧಾನ ಮಂಡಲ ಅಧಿವೇಶನ, ರಂಗೇರಲಿರುವ ಕೈ- ಕಮಲ ಕದನ; ಚಕಮಕಿಗೆ ಅಸ್ತ್ರ- ಪ್ರತ್ಯಸ್ತ್ರಗಳು ಸಜ್ಜು

T20 World Cup 2026: Pakistan to boycott 2026 T20 World Cup in India
ಕ್ರೀಡೆ53 mins ago

T20 World Cup 2026: ಆತಿಥೇಯ ಭಾರತಕ್ಕೆ ಬೆದರಿಕೆಯೊಡ್ಡಿದ ಪಾಕಿಸ್ತಾನ ಕ್ರಿಕೆಟ್​ ಮಂಡಳಿ​

Kalki 2898 AD Prabhas thanks fans
ಟಾಲಿವುಡ್55 mins ago

Kalki 2898 AD: ನೀವಿಲ್ಲದೆ ನಾನು ಶೂನ್ಯ ಎಂದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನಟ ಪ್ರಭಾಸ್‌!

Mahanati Grand Finale priyanka from mysore is the winner season 1 dhanyashree runner up
ಕಿರುತೆರೆ1 hour ago

Mahanati Grand Finale: ʻಮಹಾನಟಿʼ ಚಿನ್ನದ ಕಿರೀಟ ಮುಡಿಗೇರಿಸಿಕೊಂಡ ಪ್ರಿಯಾಂಕಾ; ಧನ್ಯಶ್ರೀಗೆ ಎರಡನೇ ಸ್ಥಾನ, ಬಹುಮಾನ ಏನು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ16 hours ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ17 hours ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ21 hours ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ22 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ6 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

ಟ್ರೆಂಡಿಂಗ್‌