ಪೋರ್ಟ್ ಆಫ್ ಸ್ಪೇನ್: ವಿರಾಟ್ ಕೊಹ್ಲಿ (112) ದಾಖಲೆಯ ಶತಕ ಹಾಗೂ ರವೀಂದ್ರ ಜಡೇಜಾ (61) ಅರ್ಧ ಶತಕದ ನೆರವು ಪಡೆದ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಎರಡನೇ ದಿನದ ಟಿ ವಿರಾಮದ ವೇಳೆಗೆ ಭಾರತ ತಂಡ 128 ಓವರ್ಗಳ ಆಟವಾಡಿ 438 ರನ್ಗಳ ಉತ್ತಮ ಮೊತ್ತ ಪೇರಿಸಿದೆ. ವೆಸ್ಟ್ ಇಂಡೀಸ್ ತಂಡದ ಬೌಲರ್ಗಳನ್ನು ಎರಡನೇ ದಿನ ಸತತವಾಗಿ ಕಾಡಿಸುತ್ತಿರುವ ಭಾರತೀಯ ಬ್ಯಾಟರ್ಗಳು ಪಂದ್ಯದಲ್ಲಿ ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಿದೆ. ಕೊನೆ ಹಂತದಲ್ಲಿ ಆಲ್ರೌಂಡರ್ ಆರ್ ಅಶ್ವಿನ್ 56 ರನ್ ಬಾರಿಸುವ ಮೂಲಕ ಭಾರತ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಲು ನೆರವಾದರು.
ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿತ್ತು. ಆದರೆ, ಶುಭ್ ಮನ್ ಗಿಲ್ ಹಾಗೂ ಅಜಿಂಕ್ಯ ರಹಾನೆ ಸಣ್ಣ ಮೊತ್ತಕ್ಕೆ ಔಟಾಗುವ ಮೂಲಕ ಹಿನ್ನಡೆ ಉಂಟಾಯಿತು. ಆ ಹಿನ್ನಡೆಯನ್ನು ಸರಿದೂಗಿಸಿದ ವಿರಾಟ್ ಕೊಹ್ಲಿ ಭಾರತಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವಾದರು. ಅರ್ಧ ಶತಕಗಳನ್ನು ಬಾರಿಸಿದ ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಕೂಡ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್ನಲ್ಲಿ ಮೇಲುಗೈ ಸಾಧಿಸಲು ನೆರವಾದರು.
In 📸📸@imVkohli celebrates his 29th Test ton 🫡#WIvIND pic.twitter.com/H0DdmUrBm0
— BCCI (@BCCI) July 21, 2023
ಭಾರತ ತಂಡ ಮೊದಲ ದಿನದ ಆಟದಲ್ಲಿ 84 ಓವರ್ಗಳಲ್ಲಿ 4 ವಿಕೆಟ್ಗಳನ್ನು 288 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 87 ರನ್ ಬಾರಿಸಿದ್ದರೆ ರವೀಂದ್ರ ಜಡೇಜಾ 36 ರನ್ ಬಾರಿಸಿದ್ದರು. ಎರಡನೇ ದಿನವೂ ಅದೇ ಲಯದಲ್ಲಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ 29ನೇ ಟೆಸ್ಟ್ ಶತಕ ಹಾಗೂ ಒಟ್ಟಾರೆ 76ನೇ ಅಂತಾರಾಷ್ಟ್ರೀಯ ಶತಕವನ್ನು ಬಾರಿಸಿ ಮಿಂಚಿದರು. 180 ಎಸೆತಗಳನ್ನು ಎದುರಿಸಿದ ಕೊಹ್ಲಿ ಶತಕ ಬಾರಿಸಿ ಸಂಭ್ರಮಿಸಿದರು. ಇದು ವಿದೇಶಿ ನೆಲದಲ್ಲಿ ಐದು ವರ್ಷಗಳ ಬಳಿಕ ಅವರು ದಾಖಲಿಸಿದ ಶತಕ ಎಂಬುದು ವಿಶೇಷ.
ಇದನ್ನೂ ಓದಿ : Virat Kohli : ವಿರಾಟ್ ಕೊಹ್ಲಿ ಶತಕ; ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳ ಸಂಭ್ರಮ
ವಿರಾಟ್ ಕೊಹ್ಲಿ ಜಡೇಜಾ ಐದನೇ ವಿಕೆಟ್ಗೆ 159 ರನ್ಗಳ ಜತೆಯಾಟ ಆಡುವ ಮೂಲಕ ಆರಂಭಿಕ ವಿಕೆಟ್ಗಳನ್ನು ತ್ವರಿತವಾಗಿ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಚೈತನ್ಯ ತಂದರು. ಈ ಜೋಡಿಯ ಆಟದಿಂದಾಗಿ ಭಾರತ ತಂಡ ಉತ್ತಮ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು. ಆದರೆ, ಅನಗತ್ಯ ರನ್ ಕದಿಯಲು ಮುಂದಾದ ವಿರಾಟ್ ಕೊಹ್ಲಿ ರನ್ಔಟ್ ಆಗಿ ಔಟಾದರು. ಆ ಬಳಿಕ ಸ್ವಲ್ಪ ಹೊತ್ತು ಆಡಿದ ಜಡೇಜಾ 61 ರನ್ ಬಾರಿಸಿ ಕೇಮರ್ ರೋಚ್ ಎಸೆತಕ್ಕೆ ವಿಕೆಟ್ ಕೀಪರ್ ಜೋಶುವಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ವಿಕೆಟ್ಕೀಪರ್ ಇಶಾನ್ ಕಿಶನ್ 25 ರನ್ ಬಾರಿಸಿ ಔಟಾದರು.
ಬ್ರಾಡ್ಮನ್ ದಾಖಲೆ ಮುರಿದ ಕೊಹ್ಲಿ
ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ 29 ಟೆಸ್ಟ್ ಶತಕಗಳನ್ನು ಬಾರಿಸಿದಂತಾಗಿದ್ದು. ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್ಮನ್ ಮತ್ತು ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಬ್ಯಾಟರ್ ಆಗಿದ್ದ ಸರ್ ಡೊನಾಲ್ಡ್ ಬ್ರಾಡ್ಮನ್ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ. ಇದೀಗ ಅವರು ಸಚಿನ್ ತೆಂಡೂಲ್ಕರ್, ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್ ನಂತರದ ಸ್ಥಾನದಲ್ಲಿದ್ದಾರೆ. ಹೆಚ್ಚುವರಿಯಾಗಿ, ಇದು ವೆಸ್ಟ್ ಇಂಡೀಸ್ನಲ್ಲಿ ಅವರ ಎರಡನೇ ಟೆಸ್ಟ್ ಶತಕವಾಗಿದೆ. ಅಲ್ಲದೆ ದೀರ್ಘ ಸ್ವರೂಪದ ಕ್ರಿಕೆಟ್ನಲ್ಲಿ ವಿಂಡೀಸ್ ತಂಡದ ವಿರುದ್ಧ ಒಟ್ಟಾರೆ 3ನೇ ಶತಕವಾಗಿದೆ.
ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್
ಕೆರಿಬಿಯನ್ ನೆಲದಲ್ಲಿ 2ನೇ ಶತಕ ಬಾರಿಸುವ ಮೂಲಕ ವೆಸ್ಟ್ ಇಂಡೀಸ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಕೊಹ್ಲಿ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದರು. ಸುನಿಲ್ ಗವಾಸ್ಕರ್ (7) ಮತ್ತು ರಾಹುಲ್ ದ್ರಾವಿಡ್, ದಿಲೀಪ್ ಸರ್ದೇಸಾಯಿ ಮತ್ತು ಪಾಲಿ ಉಮ್ರಿಗರ್ (ಎಲ್ಲರೂ 3 ಶತಕಗಳೊಂದಿಗೆ) ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ ;Virat Kohli : ವಿರಾಟ್ ಕೊಹ್ಲಿ ಶತಕ; ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳ ಸಂಭ್ರಮ
ವಿರಾಟ್ ಕೊಹ್ಲಿ ಇದು ಸುಲಭ ಸಾಧನೆಯಾಗಿರಲಿಲ್ಲ. , ಅವರು ಕ್ರೀಸ್ಗೆ ಬಂದಾಗ ತ್ವರಿತವಾಗಿ ವಿಕೆಟ್ಗಳು ಉರುಳಿದ್ದವು. ಕೊಹ್ಲಿ ಆಗಮನದ ನಂತರ ಭಾರತದ ನಾಯಕ ರೋಹಿತ್ ಶರ್ಮಾ (80) ನಿರ್ಗಮಿಸಿದ್ದರು. ಶುಭಮನ್ ಗಿಲ್ (10) ಮತ್ತು ಅಜಿಂಕ್ಯ ರಹಾನೆ (8) ಕೂಡ ಬೇಗನೆ ಪೆವಿಲಿಯನ್ ಕಡೆಗೆ ಸಾಗಿದ್ದರು. ಆದರೆ, ರವೀಂದ್ರ ಜಡೇಜಾ ಅವರೊಂದಿಗೆ ಜತೆಯಾಟ ನಿರ್ಮಿಸಿದ ಕೊಹ್ಲಿ ಮೊದಲ ಕೆಲವು ಓವರ್ಗಳಲ್ಲಿ ಎಚ್ಚರಿಕೆ ಆಡವಾಡಿ ಇನಿಂಗ್ಸ್ ಕಟ್ಟಿದರು.
ವಿರಾಟ್ ಲಯ ಕಂಡುಕೊಂಡ ಬಳಿಕ ರನ್ ಹರಿದು ಬರಲು ಪ್ರಾರಂಭಿಸಿದವು . ತಕ್ಷಣವೇ ಕೊಹ್ಲಿ ತಮ್ಮ ಅರ್ಧ ಶತಕವನ್ನು ತಲುಪಿದರು. ಇವರಿಬ್ಬರು ಭಾರತೀಯ ಇನ್ನಿಂಗ್ಸ್ ಅನ್ನು ಕಟ್ಟಿದರು ಬ್ಯಾಟರ್ 66ನೇ ಓವರ್ನಲ್ಲಿ ತಮ್ಮ ಅರ್ಧಶತಕವನ್ನು ಗಳಿಸಿ ಬಳಿಕ ಸ್ಕೋರ್ ಮಾಡುವ ವೇಗ ಹೆಚ್ಚಿಸಿದರು. ಹೀಗಾಗಿ ಮೊದಲ ದಿನದ ಅಂತ್ಯದ ವೇಳೆಗೆ ಅಜೇಯ 87 ರನ್ ಗಳಿಸಿದರು.
ನಾಲ್ಕನೇ ಓವರ್ ಕೊನೆಯ ಎಸೆತದಲ್ಲಿ ಕೊಹ್ಲಿ 2ನೇ ದಿನದ ಮೊದಲ ಬೌಂಡರಿಯನ್ನು ಬಾರಿಸಿದರು. ಕೇಮರ್ ರೋಚ್ ಅವರ ಎಸೆತಕ್ಕೆ ಈ ಸಾಧನೆ ಮಾಡಿದರು. ಅಂತಿಮವಾಗಿ ಶಾನನ್ ಗೇಬ್ರಿಯಲ್ ವಿರುದ್ಧ ಟ್ರೇಡ್ಮಾರ್ಕ್ ಕವರ್ ಡ್ರೈವ್ ಬಾರಿಸಿ ತಮ್ಮ ಶತಕ ಪೂರೈಸಿದರು.