Site icon Vistara News

VISTARA TOP 10 NEWS : ಸ್ತಬ್ಧವಾಗಲಿದೆ ಕರುನಾಡು, ಕೇಸರಿ ಶಾಲಲ್ಲಿ ಪಾಕ್‌ ಕ್ರಿಕೆಟಿಗರ ನೋಡು!

vistara top 10 News 2809

1 ಕಾವೇರಿ ನ್ಯಾಯಕ್ಕಾಗಿ ನಾಳೆ ಸಂಪೂರ್ಣ ಬಂದ್‌; ಸ್ತಬ್ಧವಾಗಲಿದೆ ಕರುನಾಡು; ಏನಿದೆ? ಏನಿಲ್ಲ?
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮತ್ತು ನ್ಯಾಯಕ್ಕಾಗಿ ಆಗ್ರಹಿಸಿ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್‌ಗೆ (Karnataka Bandh) ವೇದಿಕೆ ಸಜ್ಜಾಗಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಕಾವೇರಿ ನ್ಯಾಯದ ಕೂಗೆದ್ದಿದ್ದು, ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಡೆಯುವ ಬಂದ್‌ನ್ನು ಸಂಪೂರ್ಣ ಯಶಸ್ವಿಗೊಳಿಸಲು ಸಂಘಟನೆಗಳು ಸಜ್ಜಾಗಿವೆ. ಜತೆಗೆ ಜನರು ಸ್ವಯಂಪ್ರೇರಣೆಯಿಂದ ಬಂದ್‌ಗೆ ಬೆಂಬಲ ನೀಡಲಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ1: ಕರ್ನಾಟಕ ಬಂದ್‌ಗೆ ನೂರಾರು ಸಂಘಟನೆ ಬೆಂಬಲ; ಯಾವ ಸೇವೆ ಲಭ್ಯ? ಯಾವುದು ಅಲಭ್ಯ?
ಪೂರಕ ಸುದ್ದಿ2: ಬಸ್‌ ಬಂದ್‌ ಇಲ್ಲ; ನೌಕರರು ಕಡ್ಡಾಯವಾಗಿ ಡ್ಯೂಟಿಗೆ ಬರಲೇಬೇಕು
ಪೂರಕ ಸುದ್ದಿ3: ನಾಳೆ ರಸ್ತೆಗಿಳಿಯಬೇಡಿ, ಬೆಂಗಳೂರು-ಮೈಸೂರು ಸೇರಿದಂತೆ ಎಲ್ಲ ಹೆದ್ದಾರಿ ಬಂದ್‌ಗೆ ಪ್ಲ್ಯಾನ್‌
ಪೂರಕ ಸುದ್ದಿ4: ಕರ್ನಾಟಕ ಬಂದ್‌ ಬಿಸಿ ನಡುವೆ ಈ 8 ನಿಲ್ದಾಣಗಳಲ್ಲಿ ಮೆಟ್ರೊ ರೈಲು ಓಡಾಟವಿಲ್ಲ

2. ನಾಳೆ ಬಂದ್‌ ಮಾಡಿದ್ರೆ ಹುಷಾರ್‌ ಎಂದ ಪರಮೇಶ್ವರ್‌; ಹೋರಾಟ ಹತ್ತಿಕ್ಕಲು ಮುಂದಾಯಿತಾ ಸರ್ಕಾರ?
ಕರ್ನಾಟಕ ಬಂದ್ ಮಾಡುವವರಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ. ಪ್ರತಿಭಟನೆಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಬಂದ್‌ಗೆ ಅವಕಾಶ ಇಲ್ಲ ಬಂದ್‌ಗೆ ಕರೆ ಕೊಟ್ಟವರಿಗೆ ತಿಳಿಸುತ್ತಿದ್ದೇನೆ ಎಂದು ವಾರ್ನಿಂಗ್‌ ನೀಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ1. ಪ್ರತಿಭಟನೆ ಮಾಡಬಹುದು, ಬಂದ್‌ ಮಾಡುವಂತಿಲ್ಲ: ಡಿ ಕೆ ಶಿವಕುಮಾರ್‌
ಪೂರಕ ಸುದ್ದಿ2: ಇಂದು ರಾತ್ರಿಯಿಂದಲೇ ಸೆಕ್ಷನ್‌ 144 ಜಾರಿ; ರ‍್ಯಾಲಿ, ಮೆರವಣಿಗೆಗೆ ಅವಕಾಶವಿಲ್ಲ

3. ಶೀಘ್ರದಲ್ಲೇ ಸರ್ಕಾರದಿಂದ ಧನ ಭಾಗ್ಯಕ್ಕೆ ಬ್ರೇಕ್‌! ಅಕ್ಟೋಬರ್‌ನಿಂದಲೇ 10 ಕೆಜಿ ಅಕ್ಕಿ
ಅನ್ನಭಾಗ್ಯ ಯೋಜನೆಯ ಅಡಿ 10 ಕೆ.ಜಿ. ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿದ್ದ ಕಾಂಗ್ರೆಸ್‌, 5 ಕೆ.ಜಿ. ಅಕ್ಕಿ ಮಾತ್ರ ನೀಡಿ ಉಳಿದ 5 ಕೆಜಿಯ ಹಣವನ್ನು ವರ್ಗಾವಣೆ ಮಾಡುತ್ತಲಿತ್ತು. ಈಗ ಆ ಧನ ಭಾಗ್ಯಕ್ಕೆ ಬ್ರೇಕ್‌ ಬೀಳಲಿದೆ. ಅಕ್ಟೋಬರ್‌ ತಿಂಗಳಿನಿಂದಲೇ 10 ಕೆಜಿ ಅಕ್ಕಿ ನೀಡಲು ಮುಂದಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ಭಾರತಕ್ಕೆ ಬಂದ ಪಾಕ್‌ ಕ್ರಿಕೆಟ್‌ ತಂಡಕ್ಕೆ ಕೇಸರಿ ಶಾಲು ಹಾಕಿ ಸ್ವಾಗತ!
ಭಾರತದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್(ICC World Cup)​ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಕ್ರಿಕೆಟ್​ ತಂಡ ಬುಧವಾರ ತಡರಾತ್ರಿ ಹೈದರಾಬಾದ್​ಗೆ ಬಂದಿಳಿದಿದೆ. ಆದರೆ ಪಾಕಿಸ್ತಾನಆಟಗಾರರಿಗೆ ಕೇಸರಿ ಶಾಲು ಹಾಕಿ ಸ್ವಾಗತಿಸಿದ್ದು ಇದೀಗ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಪಾಕ್‌ ಭಿಕಾರಿ; ವಿಶ್ವಸಂಸ್ಥೆಯಲ್ಲಿ ಬಣ್ಣ ಬಯಲು ಮಾಡಿದ ಕಾಶ್ಮೀರದ ದಿಟ್ಟೆ
ಜಮ್ಮು-ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ಜಾಗತಿಕ ವೇದಿಕೆಗಳಲ್ಲಿ ಮೂಗು ತೂರಿಸುವ ಪಾಕಿಸ್ತಾನಕ್ಕೆ ಭಾರತ ಅಲ್ಲಲ್ಲೇ ಏಟು ನೀಡುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಜಮ್ಮು-ಕಾಶ್ಮೀರದ ರಾಜಕೀಯ-ಸಾಮಾಜಿಕ ಕಾರ್ಯಕರ್ತೆಯಾದ ತಸ್ಲೀಮಾ ಅಖ್ತರ್‌ (Tasleema Akhtar) ಅವರು ವಿಶ್ವಸಂಸ್ಥೆಯಲ್ಲಿಯೇ ಪಾಕಿಸ್ತಾನದ ನಿಜ ಬಣ್ಣವನ್ನು ಬಯಲು ಮಾಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಚಾಟ್‌ ಜಿಪಿಟಿಯಲ್ಲೀಗ ಇಂಟರ್ನೆಟ್‌ ಬ್ರೌಸ್‌ ಮಾಡಬಹುದು! ಹೊಸ ಫೀಚರ್‌ನ ಲಾಭ ಏನು?
 ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ (Artificial Intelligence Technology) ಕ್ರಾಂತಿ ಮಾಡಿರುವ ಚಾಟ್‌ಜಿಪಿಟಿಗೆ (ChatGPT) ಹೊಸ ಫೀಚರ್ ಪರಿಚಯಿಸಲಾಗಿದೆ. ಈಗ ಇದನ್ನೂ ಇಂಟರ್ನೆಟ್ ಬ್ರೌಸ್ ಮಾಡಬಹುದು ಎಂದು ಹೇಳಿದೆ. ಹಾಗಿದ್ದರೆ ಇದರಿಂದ ಏನೇನು ಲಾಭ? ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವವನ್ನು ತಲುಪಿಯೇ ಇಲ್ಲ ಎಂದ ಚೀನಾ ವಿಜ್ಞಾನಿ
ಭಾರತ ಮತ್ತು ಚೀನಾಗಳ ನಡುವಿನ ಚಕಮಕಿ ಈಗ ಬಾಹ್ಯಾಕಾಶ ರೇಸ್‌ಗೂ (space race) ತಲುಪಿದೆ. ಚಂದ್ರಯಾನ 3ರ (Chandrayaan 3) ಲ್ಯಾಂಡಿಂಗ್ ಸೈಟ್ ಚಂದ್ರನ ದಕ್ಷಿಣ ಧ್ರುವದಲ್ಲಿಲ್ಲ (South pole) ಎಂದು ಚೀನಾದ ಉನ್ನತ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಒಂದಲ್ಲ ಒಂದಿನ ಸಿಎಂ ಆಗ್ತೀನಿ, ರಾಜ್ಯದಲ್ಲೂ ಜೆಸಿಬಿ ಓಡಿಸ್ತೀನಿ ಅಂದ್ರು ಯತ್ನಾಳ್‌!
ಒಂದಲ್ಲ ಒಂದು ದಿನ ನಾನು ಆ ಸ್ಥಾನಕ್ಕೆ ಬಂದೇ ಬರುತ್ತೇನೆ (ಮುಖ್ಯಮಂತ್ರಿ) ಆಗ ಕರ್ನಾಟಕದಲ್ಲೂ ಉತ್ತರ ಪ್ರದೇಶ ಮಾದರಿಯಲ್ಲಿ ಜೆಸಿಬಿ (UP Model JCB Operation) ಓಡಲಿದೆ ಎಂದು ಬಿಜೆಪಿ ಶಾಸಕ, ಫೈರ್‌ ಬ್ರಾಂಡ್‌ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಗುಡುಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಕನ್ನಡ ಸೀರಿಯಲ್‌ ಟಿಆರ್‌ಪಿ: 4ನೇ ಸ್ಥಾನಕ್ಕೆ ಕುಸಿತ ಕಂಡ ʼಸೀತಾರಾಮʼ, ಟಿಆರ್‌ಪಿ ರೇಸ್‌ಗೆ ಭಾಗ್ಯಲಕ್ಷ್ಮಿ ಬ್ಯಾಕ್‌!
‘ಪುಟ್ಟಕ್ಕನ ಮಕ್ಕಳು’ (Puttakkana Makkalu Serial) ಧಾರಾವಾಹಿಯು ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಸೀತಾರಾಮ ಧಾರಾವಾಹಿ ಭಾರಿ ಕುಸಿತ ಕಂಡಿದೆ. ಕಲರ್ಸ್‌ ಕನ್ನಡದ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಟಿಆರ್​ಪಿ ಹೆಚ್ಚಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಪಾಕಿಸ್ತಾನದ ಆರ್ಥಿಕ ಸ್ಥಿತಿ ಇನ್ನಷ್ಟು ಹೀನಾಯ- ಕತ್ತೆಗಳ ಬಳಿಕ ಮುಸ್ಲಿಂ ರಾಷ್ಟ್ರಗಳಿಗೆ ಭಿಕ್ಷುಕರ ರಫ್ತು
ಭಾರತಕ್ಕೆ (Terrorism To India) ‘ಭಯೋತ್ಪಾದನೆ’ ಮತ್ತು ಚೀನಾಗೆ ಕತ್ತೆಗಳ (Donkeys to China) ರಫ್ತು ಮಾಡುವ ಮೂಲಕ ಕುಖ್ಯಾತಿ ಗಳಿಸಿರುವ ಪಾಕಿಸ್ತಾನ ಈಗ ವಿಚಿತ್ರ ‘ರಫ್ತು’ ಮೂಲಕ ಮತ್ತೆ ಸುದ್ದಿ ಮಾಡುತ್ತಿದೆ. ಪಾಕಿಸ್ತಾನದ ರಫ್ತು ಪಟ್ಟಿಯಲ್ಲೀಗ ಭಿಕ್ಷುಕರೂ ಸೇರಿದ್ದಾರೆ! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version