Site icon Vistara News

David Warner : ಬಾಹುಬಲಿ ರಾಜಮೌಳಿ ನಿರ್ದೇಶನದಲ್ಲಿ ಕ್ರಿಕೆಟಿಗ ಡೇವಿಡ್​ ವಾರ್ನರ್ ಆ್ಯಕ್ಟಿಂಗ್​; ಇಲ್ಲಿದೆ ವಿಡಿಯೊ

David Warner

ಬೆಂಗಳೂರು: ಡೇವಿಡ್ ವಾರ್ನರ್ (David Warner) ಕ್ರಿಕೆಟ್​ ಕ್ಷೇತ್ರದ ಮಹಾನ್​ ದಂತಕಥೆ. ಮೂರು ಮಾದರಿಯ ಕ್ರಿಕೆಟ್​ನಲ್ಲಿ ಜಾಗತಿಕ ಸೂಪರ್​ಸ್ಟಾರ್​. ಜತೆಗೆ ಅವರು ವಿನೋದ ಪ್ರಿಯ ಕೂಡ. ಎಲ್ಲದಕ್ಕಿಂತ ಹೆಚ್ಚಾಗಿ ಭಾರತದ ಬಗ್ಗೆ ಹೆಚ್ಚು ಅಭಿಮಾನ ಇಟ್ಟುಕೊಂಡವರು. ಅದರಲ್ಲೂ ಐಪಿಎಲ್​ನಲ್ಲಿ ತಾವು ಪ್ರತಿನಿಧಿಸಿರುವ ಸನ್ ರೈಸರ್ಸ್​ ಹೈದಾರಾಬಾದ್ ಬಗ್ಗೆ ಹೆಚ್ಚು ಒಲವು. ಇದೇ ಕಾರಣಕ್ಕೆ ಅವರು ತೆಲುಗು ಸಿನಿಮಾ ಕ್ಷೇತ್ರ ಅದರಲ್ಲೂ ಅಲ್ಲು ಅರ್ಜುನ್ ಅಪ್ಪಟ ಅಭಿಮಾನಿ. ಆಗಿದ್ದಾರೆ. ಅಲ್ಲು ನಟಿಸಿದ ಪುಷ್ಟ ಸಿನಿಮಾದ ಸ್ಟೈಲ್​ಗಳನ್ನು ಆಟದ ನಡುವೆ ಮೈದಾನದಲ್ಲಿ ತೋರಿಸುವುದುಂಟು.

ವಾರ್ನರ್ ಈಗ ಎಸ್​ಆರ್​​ಎಚ್​ ತಂಡದಲ್ಲಿ ಇಲ್ಲ. ಅವರೀಗ ಡೆಲ್ಲಿಯ ಆರಂಭಿಕ ಬ್ಯಾಟರ್​. ಆದಾಗ್ಯೂ ಅವರು ತೆಲುಗು ಸಿನಿಮಾದ ಕಾರಣಕ್ಕೆ ನಟನೆಯಲ್ಲೂ ಹೆಚ್ಚು ಆಸಕ್ತಿ ವಹಿಸಿಕೊಂಡಿದ್ದಾರೆ. ಇಂಥ ಆಟಗಾರ ಇದೀಗ ಬಾಹುಬಲಿ ನಿರ್ದೇಶಕ ಎಸ್​. ಎಸ್​ ರಾಜಮೌಳಿ ಜತೆಗೊಂದು ಜಾಹೀರಾತಿನಲ್ಲಿ ನಟಿಸಿದ್ದಾರೆ. ಆ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಾರ್ನರ್​​ ಆ್ಯಕ್ಟಿಂಗ್​ ಬಗ್ಗೆ ಮೆಚ್ಚುಗೆ ವ್ಯಕ್ತಗೊಂಡಿದೆ. ವಾರ್ನರ್ ಅವರು ಜಾಹೀರಾತಿನ ವಿಡಿಯೊವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ

CRED ಯುಪಿಐ ಜಾಹೀರಾತು

ವಾರ್ನರ್​ ಗೀ ಈಗ ತಮ್ಮ ನಟನಾ ಕೌಶಲವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದಾರೆ. CRED ಯುಪಿಐ ಜಾಹೀರಾತಿನಲ್ಲಿ ಎಸ್.ಎಸ್.ರಾಜಮೌಳಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಬ್ಲಾಕ್ಬಸ್ಟರ್ ಚಲನಚಿತ್ರ ಆರ್​ಆರ್​​ಆರ್​ ನಿರ್ದೇಶಿಸಿದ ಹಾಗೂ ಭಾರತದ ಅತ್ಯುತ್ತಮ ನಿರ್ದೇಶಕರಾದ ರಾಜಮೌಳಿ ಜತೆ ಅವರು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಜಾಹೀರಾತಿನಲ್ಲೂ ರಾಜಮೌಳಿ ಡೈರೆಕ್ಟರ್​ ಪಾತ್ರ ವಹಿಸಿದ್ದಾರೆ. ವಾರ್ನರ್ ಪೌರಾಣಿಕ ರೀತಿಯ ಪಾತ್ರವೊಂದನ್ನು ಮಾಡಿದ್ದಾರೆ. ಇದು ಸಂಪೂರ್ಣವಾಗಿ ವ್ಯಂಗ್ಯ ಭರಿತ ಜಾಹೀರಾತಾಗಿದೆ.

ಇದನ್ನೂ ಓದಿ: Sanju Samson : ರೋಹಿತ್​ ಶರ್ಮಾ ರೆಕಾರ್ಡ್​ ಬ್ರೇಕ್ ಮಾಡಿದ ಸಂಜು; ಏನಿದು ವಿಶೇಷ ದಾಖಲೆ?

ಭಾರತ ವಾರ್ನರ್​ಗೆ ಎರಡನೇ ಮನೆ

ವಾರ್ನರ್ ಅಲ್ಲು ಅರ್ಜುನ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಜನರು ಮತ್ತು ಚಲನಚಿತ್ರಗಳ ಮೇಲಿನ ಪ್ರೀತಿಯಿಂದ ಭಾರತವನ್ನು ಎರಡನೇ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ವಾರ್ನರ್ ಸನ್ರೈಸರ್ಸ್ ಹೈದರಾಬಾದ್ ತಂಡದ ಅವಿಭಾಜ್ಯ ಅಂಗವಾಗಿದ್ದರು. 2016 ರಲ್ಲಿ ಐಪಿಎಲ್ ಪ್ರಶಸ್ತಿ ಗೆಲುವಿನ ವೇಳೆ ತಂಡವನ್ನು ಮುನ್ನಡೆಸಿದ್ದರು. ಇದು ಅವರನ್ನು ಭಾರತದ ದಕ್ಷಿಣ ಭಾಗದ ನೆಚ್ಚಿನ ವಿದೇಶಿ ಕ್ರಿಕೆಟಿಗರಲ್ಲಿ ಒಬ್ಬರನ್ನಾಗಿ ಮಾಡಿದೆ.

ಆಸೀಸ್ ಆಟಗಾರ ಪ್ರಸ್ತುತ ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ನ ಭಾಗವಾಗಿದ್ದಾರೆ. ಅಲ್ಲಿ ಅವರು ಅಗ್ರ ಕ್ರಮಾಂಕದಲ್ಲಿ ಅವರ ಆಟಗಾರರಲ್ಲಿ ಒಬ್ಬರು. ವಾರ್ನರ್ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ ಮತ್ತು ಐಪಿಎಲ್ ನಂತರ, ಅವರು ಟಿ 20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಪರ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

Exit mobile version