ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರ ಟ್ವಿಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ಅವರ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಹ್ಯಾಕ್ ಮಾಡಿದ ಅವರ ಟ್ವಿಟರ್ ಖಾತೆಯಲ್ಲಿ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಮಾಹಿತಿ ಹಾಗೂ ಅದರ ಲಿಂಕ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
ಒಟ್ಟು ಇದುವರೆಗೆ ವಾಷಿಂಗ್ಟನ್ ಸುಂದರ್ ಅವರ ಖಾತೆಯಿಂದ 3 ಪೋಸ್ಟ್‌ಗಳನ್ನು ಮಾಡಲಾಗಿದೆ. ತಮ್ಮ ಟ್ವಿಟರ್ ಹ್ಯಾಕ್ ಆದ ವಿಷಯ ತಿಳಿದ ಕೂಡಲೇ ವಾಷಿಂಗ್ಟನ್ ಸುಂದರ್ ಅವರು ಪೋಸ್ಟ್‌ಗಳ ಮೇಲಿನ ಕಾಮೆಂಟ್‌ಗಳನ್ನು ಬ್ಲಾಕ್ ಮಾಡಲಾಗಿದೆ. ಜತೆಗೆ ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿರುವ ವಿಚಾರವನ್ನು ಸ್ವತಃ ವಾಷಿಂಗ್ಟನ್ ಖಚಿತ ಪಡಿಸಿದ್ದು ಇದರಲ್ಲಿ ಪೋಸ್ಟ್ ಆದ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ಹೇಳಿದ್ದಾರೆ.
ಕ್ರಿಕೆಟಿಗರ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದು ಇದೇ ಮೊದಲೇನಲ್ಲ ಇದಕ್ಕೂ ಮೊದಲು ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರ ಖಾತೆಯನ್ನು ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು ಅದರಲ್ಲಿ ಬಿಟ್‌ಕಾಯಿನ್ ಬಗ್ಗೆ ಮಾಹಿತಿ ನೀಡುವ ಲಿಂಗ್ಗಳನ್ನು ಅಪ್ಡೇಟ್ ಮಾಡಿದ್ದರು. ಇದೇ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ವಿಟರ್ ಖಾತೆಯನ್ನು ಕೂಡ ಹ್ಯಾಕ್ ಮಾಡಲಾಗಿತ್ತು.
ಇದನ್ನೂ ಓದಿ IPL 2023 : ಮಾಲ್ಡೀವ್ಸ್ನಲ್ಲಿ ಶರ್ಟ್ ಬಿಚ್ಚಿ ಸಿಕ್ಸ್ ಪ್ಯಾಕ್ ತೋರಿಸಿದ ಐಪಿಎಲ್ ಸ್ಟಾರ್ ರಿಂಕು ಸಿಂಗ್
Biggest AIRDROP of FF6000 NFT holders! People who have this NFT can claim $BEN and $LOYAL coin.
— Washington Sundar (@Sundarwashi5) June 4, 2023
Claim you AIRDROP via official website:https://t.co/sjPiaPtASN pic.twitter.com/DsXjr1aSzu
ಗಾಯದಿಂದಾಗಿ ವಾಷಿಂಗ್ಟನ್ ಸುಂದರ್ ಅವರು ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು. ಅವರು ಸನ್ರೈಸರ್ಸ್ ಹೈದಾರಾಬಾದ್ ತಂಡದ ಸದಸ್ಯರಾಗಿದ್ದರು. ಇದಕ್ಕೂ ಮುನ್ನ ಆರ್ಸಿಬಿ ಪರ ಅವರು ಆಡಿದ್ದರು. ಸದ್ಯ ಅವರು ಗಾಯದಿಂದ ಚೇತರಿಕೆ ಕಾಣುತ್ತಿದ್ದು ಮುಂಬರುವ ಸರಣಿಗಳಲ್ಲಿ ಭಾರತ ತಂಡದ ಪರ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ.