ಲಾಹೋರ್: ಪಾಕಿಸ್ತಾನದ ಮಾಜಿ ಆಟಗಾರ ವಾಸಿಂ ಅಕ್ರಂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆ ಕುರಿತಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಯ್ ಶಾ ಈ ರೀತಿಯಲ್ಲಿ ಹೇಳಿಕೆ ನೀಡುವ ಮೊದಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಅಧ್ಯಕ್ಷ ರಮೀಜ್ ರಾಜಾ ಅವರನ್ನ ಸಂಪರ್ಕಿಸಿ ಚರ್ಚೆ ಮಾಡಬೇಕಾಗಿತ್ತು. ಆದರೆ ಅದನ್ನು ಹೊರತುಪಡಿಸಿ ಜಯ್ ಶಾ ಈ ರೀತಿಯಾಗಿ ನೇರವಾಗಿ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಹೇಳಿಕೆ ನೀಡಿರುವುದು ನ್ಯಾಯಯುತವಲ್ಲ ಎಂದು ಹೇಳಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಅಕ್ಟೋಬರ್ 18ರಂದು, ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್ನಲ್ಲಿ ಭಾರತ ತಂಡ ಆಡುವುದಿಲ್ಲ, ತಟಸ್ಥ ಸ್ಥಳದಲ್ಲಿ ಟೂರ್ನಮೆಂಟ್ ನಡೆಯಲಿದೆ ಎಂದು ಹೇಳಿದ್ದರು. ಇದಕ್ಕೆ ಹಲವಾರು ಮಾಜಿ ಪಾಕ್ ಕ್ರಿಕೆಟಿಗರು ಜಯ್ ಶಾ ಮತ್ತು ಬಿಸಿಸಿಐ ವಿರುದ್ಧ ಕಿಡಿಕಾರಿದ್ದರು. ಈ ಸಾಲಿಗೆ ವಾಸಿಂ ಅಕ್ರಂ ಕೂಡ ಇದೀಗ ಸೇರಿದ್ದಾರೆ.
“ಮಿಸ್ಟರ್ ಜಯ್ ಶಾ ನಿಮಗೆ ಏನಾದರೂ ಹೇಳಬೇಕು ಎಂದೆನಿಸಿದ್ದಲ್ಲಿ, ನೀವು ಕನಿಷ್ಠ ನಮ್ಮ ಬೋರ್ಡ್ ಅಧ್ಯಕ್ಷರನ್ನು ಕರೆದು ಮಾತನಾಡಬೇಕಿತ್ತು. ಏಷ್ಯನ್ ಕೌನ್ಸಿಲ್ ಸಭೆ ಕರೆದು ನಿಮ್ಮ ಗುರಿ ಅಥವಾ ಸಮಸ್ಯೆ ಏನೆಂಬುದನ್ನು ನೀವು ತಿಳಿಸಬಹುದಿತ್ತು. ಆದರೆ ಏಕಪಕ್ಷೀಯವಾಗಿ ನಾವು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವುದಿಲ್ಲ” ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ.
ಇದನ್ನೂ ಓದಿ | T20 World Cup| ಅಭಿಮಾನಿಗಳಿಗೆ ಡೋಂಟ್ ಡಿಸ್ಟರ್ಬ್ ಎಂದ ವಿರಾಟ್ ಕೊಹ್ಲಿ, ವಿಡಿಯೊ ವೈರಲ್