ನವ ದೆಹಲಿ: ಭಾರತ ಕ್ರಿಕೆಟ್ ತಂಡದ ಸದಸ್ಯ ರಿಷಭ್ ಪಂತ್ (Rishabh Pant) ಅವರು ಶುಕ್ರವಾರ ಮುಂಜಾನೆ ಡೆಲ್ಲಿ- ಡೆಹ್ರಾಡೂನ್ ಎಕ್ಸ್ಪ್ರೆಸ್ ಹೈವೆನಲ್ಲಿ ಅಪಘಾತಕ್ಕೆ ಒಳಗಾಗಿದ್ದಾರೆ. ಅವರು ಚಾಲನೆ ಮಾಡುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಗುದ್ದಿದ್ದು, ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಘಟನೆಯಲ್ಲಿ ಅವರಿಗೆ ಸಾಧಾರಣ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಾರು ಸುಟ್ಟು ಹೋಗಿರುವ ರೀತಿಯನ್ನು ನೋಡಿದರೆ ಅವರು ಬದುಕಿ ಉಳಿದಿರುವುದೇ ಆಶ್ಚರ್ಯ ಎನ್ನುವಂತಿದೆ. ಹೀಗಾಗಿ ಕ್ರಿಕೆಟಿಗ ರಿಷಭ್ ಅವರು ಪ್ರಯಾಣಿಸುತ್ತಿದ್ದ ಕಾರು ಯಾವುದು ಎಂಬ ಕುತೂಹಲ ಹುಟ್ಟಿಕೊಂಡಿದೆ.
ಅವಘಡದ ಸ್ಥಳದಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ದೃಶ್ಯಗಳ ಪರಿಶೀಲನೆ ವೇಳೆ ಪಂತ್ ಪ್ರಯಾಣಿಸುತ್ತಿದ್ದ ಕಾರು ಮರ್ಸಿಡೀಸ್ ಬೆಂಜ್ ಎಸ್ಯುವಿ ಎಂದು ಗೊತ್ತಾಗಿದೆ. ಕಾರು ಸುಟ್ಟು ಹೋಗಿರುವ ಕಾರಣ ಅದರ ಮಾಡೆಲ್ ಯಾವುದೆಂಬುದು ಪತ್ತೆಯಾಗಿಲ್ಲ. ಆದರೆ, ಅವರಿದ್ದ ಕಾರು ಮರ್ಸಿಡೀಸ್ ಎಎಮ್ಜಿ ಜಿಎಲ್ಇ ಎಂದು ಹೇಳಲಾಗುತ್ತಿದೆ. 2017ರಲ್ಲಿ ರಿಷಭ್ ಪಂತ್ ಮರ್ಸಿಡೀಸ್ ಬೆಂಜ್ ಜಿಎಲ್ಸಿ ಕಾರನ್ನು ಖರೀದಿ ಮಾಡಿದ್ದರು. ಆದರೆ, ಜಿಎಲ್ಇ ಕೂಪ್ ಕಾರು ಖರೀದಿ ಮಾಡಿದ ಮಾಹಿತಿ ಇಲ್ಲ.
ಭಾರತದಲ್ಲಿ ಮರ್ಸಿಡೀಸ್ ಬೆಂಜ್ ಜಿಎಲ್ಇ ಕೂಪ್ ಕಾರು ಎರಡು ಅವೃತ್ತಿಯಲ್ಲಿ ಸಿಗುತ್ತದೆ. ಒಂದು ಜಿಎಲ್ಇ 53 ಹಾಗೂ ಜಿಎಲ್ಇ 63. ಈ ಕಾರಿಗೆ 1.5 ಕೋಟಿ ರೂಪಾಯಿ ಇದೆ.
2017ರಲ್ಲಿ ರಿಷಭ್ ಪಂತ್ ಜಿಎಲ್ಇ ಎಸ್ಯುವಿ ಖರೀದಿ ಮಾಡಿದ ಬಳಿಕ 120 ಕಿ.ಮೀ ವೇಗದಲ್ಲಿ ಚಾಲನೆ ಮಾಡಿದ್ದರು. ಅದಕ್ಕಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಛೀಮಾರಿ ಹಾಕಿಸಿಕೊಂಡಿದ್ದರು.
ಮರ್ಸಿಡೀಸ್ ಎಎಮ್ಜಿ ಜಿಎಲ್ಇ ಕೊಪ್ ಸುರಕ್ಷತೆ
ಜರ್ಮನಿ ಮೂಲದ ಕಾರು ತಯಾರಿಕಾ ಕಂಪನಿ ಮರ್ಸಿಡೀಸ್ ಏಳು ಏರ್ಬ್ಯಾಗ್ಗಳನ್ನು ಹೊಂದಿದೆ. ಇದರಲ್ಲಿ ಬ್ಲೈಂಡ್ ಸ್ಪಾಟ್ ಮಾನಿಟರ್, 360 ಡಿಗ್ರಿ ಕ್ಯಾಮೆರಾ, ಎಬಿಎಸ್, ಇಬಿಡಿ, ಇಎಸ್ಪಿ, ಅಡಾಪ್ಟಿವ್ ಹೆಡ್ಲೈಟ್ ಹೊಂದಿದ್ದು. ಭಾರತದ ಅತ್ಯಂತ ಸುರಕ್ಷಿತ ಕಾರು ಎನಿಸಿಕೊಂಡಿದೆ.
ಫೀಚರ್ಗಳು?
ಐಷಾರಾಮಿ ಜಿಎಲ್ಇ ಕೂಪ್ ಕಾರಿನಲ್ಲಿ ಎಡ್ಅಪ್ ಡಿಸ್ಪ್ಲೆ, ಫೋರ್ ಝೋನ್ ಕ್ಲೈಮೇಟ್ ಕಂಟ್ರೋಲ್, 13 ಸ್ಪೀಕರ್ಗಳ ಬರ್ಮೆಸ್ಟರ್ ಸೌಂಡ್ ಸಿಸ್ಟಮ್, ವೆಂಟಿಲೇಟೆಡ್ ಸೀಟ್, ಕನೆಕ್ಟೆಡ್ ಕಾರ್ಟೆಕ್, ಪನೋರಮಿಕ್ ಸನ್ರೂಪ್ ವ್ಯವಸ್ಥೆಗಳನ್ನು ಹೊಂದಿದೆ.
ಮರ್ಸಿಡೀಸ್ ಬೆಂಜ್ ಎಎಮ್ಜಿ ಸಾಮರ್ಥ್ಯ
ಮರ್ಸಿಡೀಸ್ ಬೆಂಜ್ ಕಾರು 3.0 ಲೀಟರ್ನ ಸಿಕ್ಸ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು ಟ್ವಿನ್ ಟರ್ಬೊ ಎಂಜಿನ್. ಇದರಲ್ಲಿ ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಕೂಡ ಇದೆ. ಇದು 435 ಬಿಎಚ್ಪಿ ಪವರ್ ಉತ್ಪಾದನೆ ಮಾಡುತ್ತದೆ. ಇದರ ಗರಿಷ್ಠ ಟಾರ್ಕ್ 250 ಎನ್ಎಮ್. ಇದರಲ್ಲಿ 9 ಸ್ಪೀಡ್ನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದೆ.
ಇದನ್ನೂ ಓದಿ | Rishabh Pant | ರಿಷಭ್ ಪಂತ್ ಆರೋಗ್ಯ ಸ್ಥಿತಿ ಕುರಿತು ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ಕೊಟ್ಟ ಹೇಳಿಕೆಗಳೇನು?