Rishabh Pant | ಅವಘಡಕ್ಕೆ ಒಳಗಾದ ರಿಷಭ್​ ಪಂತ್​ ಪ್ರಯಾಣಿಸುತ್ತಿದ್ದ ಕಾರು ಯಾವುದು? ಅದರ ಬೆಲೆ ಎಷ್ಟು? - Vistara News

ಆಟೋಮೊಬೈಲ್

Rishabh Pant | ಅವಘಡಕ್ಕೆ ಒಳಗಾದ ರಿಷಭ್​ ಪಂತ್​ ಪ್ರಯಾಣಿಸುತ್ತಿದ್ದ ಕಾರು ಯಾವುದು? ಅದರ ಬೆಲೆ ಎಷ್ಟು?

ಅಪಘಾತಕ್ಕೆ ಒಳಗಾದ ರಿಷಭ್​ ಪಂತ್​ ಅವರು ಪ್ರಯಾಣಿಸುತ್ತಿದ್ದ ಕಾರು ಮರ್ಸಿಡೀಸ್ ಬೆಂಜ್​ ಕಂಪನಿಗೆ ಸೇರಿದ್ದು ಎಂದು ಹೇಳಲಾಗಿದೆ.

VISTARANEWS.COM


on

Rishabh pant
ಪ್ರಾತಿನಿಧಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತ ಕ್ರಿಕೆಟ್​ ತಂಡದ ಸದಸ್ಯ ರಿಷಭ್​ ಪಂತ್ (Rishabh Pant)​ ಅವರು ಶುಕ್ರವಾರ ಮುಂಜಾನೆ ಡೆಲ್ಲಿ- ಡೆಹ್ರಾಡೂನ್​ ಎಕ್ಸ್​ಪ್ರೆಸ್ ಹೈವೆನಲ್ಲಿ ಅಪಘಾತಕ್ಕೆ ಒಳಗಾಗಿದ್ದಾರೆ. ಅವರು ಚಾಲನೆ ಮಾಡುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಗುದ್ದಿದ್ದು, ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಘಟನೆಯಲ್ಲಿ ಅವರಿಗೆ ಸಾಧಾರಣ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಾರು ಸುಟ್ಟು ಹೋಗಿರುವ ರೀತಿಯನ್ನು ನೋಡಿದರೆ ಅವರು ಬದುಕಿ ಉಳಿದಿರುವುದೇ ಆಶ್ಚರ್ಯ ಎನ್ನುವಂತಿದೆ. ಹೀಗಾಗಿ ಕ್ರಿಕೆಟಿಗ ರಿಷಭ್ ಅವರು ಪ್ರಯಾಣಿಸುತ್ತಿದ್ದ ಕಾರು ಯಾವುದು ಎಂಬ ಕುತೂಹಲ ಹುಟ್ಟಿಕೊಂಡಿದೆ.

ಅವಘಡದ ಸ್ಥಳದಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ದೃಶ್ಯಗಳ ಪರಿಶೀಲನೆ ವೇಳೆ ಪಂತ್ ಪ್ರಯಾಣಿಸುತ್ತಿದ್ದ ಕಾರು ಮರ್ಸಿಡೀಸ್​ ಬೆಂಜ್ ಎಸ್​ಯುವಿ ಎಂದು ಗೊತ್ತಾಗಿದೆ. ಕಾರು ಸುಟ್ಟು ಹೋಗಿರುವ ಕಾರಣ ಅದರ ಮಾಡೆಲ್​ ಯಾವುದೆಂಬುದು ಪತ್ತೆಯಾಗಿಲ್ಲ. ಆದರೆ, ಅವರಿದ್ದ ಕಾರು ಮರ್ಸಿಡೀಸ್​ ಎಎಮ್​ಜಿ ಜಿಎಲ್​ಇ ಎಂದು ಹೇಳಲಾಗುತ್ತಿದೆ. 2017ರಲ್ಲಿ ರಿಷಭ್ ಪಂತ್​ ಮರ್ಸಿಡೀಸ್​ ಬೆಂಜ್​ ಜಿಎಲ್​ಸಿ ಕಾರನ್ನು ಖರೀದಿ ಮಾಡಿದ್ದರು. ಆದರೆ, ಜಿಎಲ್​ಇ ಕೂಪ್​ ಕಾರು ಖರೀದಿ ಮಾಡಿದ ಮಾಹಿತಿ ಇಲ್ಲ.

ಭಾರತದಲ್ಲಿ ಮರ್ಸಿಡೀಸ್​ ಬೆಂಜ್​ ಜಿಎಲ್​ಇ ಕೂಪ್​ ಕಾರು ಎರಡು ಅವೃತ್ತಿಯಲ್ಲಿ ಸಿಗುತ್ತದೆ. ಒಂದು ಜಿಎಲ್​ಇ 53 ಹಾಗೂ ಜಿಎಲ್​ಇ 63. ಈ ಕಾರಿಗೆ 1.5 ಕೋಟಿ ರೂಪಾಯಿ ಇದೆ.

2017ರಲ್ಲಿ ರಿಷಭ್ ಪಂತ್​ ಜಿಎಲ್ಇ ಎಸ್​ಯುವಿ ಖರೀದಿ ಮಾಡಿದ ಬಳಿಕ 120 ಕಿ.ಮೀ ವೇಗದಲ್ಲಿ ಚಾಲನೆ ಮಾಡಿದ್ದರು. ಅದಕ್ಕಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಛೀಮಾರಿ ಹಾಕಿಸಿಕೊಂಡಿದ್ದರು.

ಮರ್ಸಿಡೀಸ್​ ಎಎಮ್​ಜಿ ಜಿಎಲ್​ಇ ಕೊಪ್ ಸುರಕ್ಷತೆ

ಜರ್ಮನಿ ಮೂಲದ ಕಾರು ತಯಾರಿಕಾ ಕಂಪನಿ ಮರ್ಸಿಡೀಸ್​ ಏಳು ಏರ್​ಬ್ಯಾಗ್​ಗಳನ್ನು ಹೊಂದಿದೆ. ಇದರಲ್ಲಿ ಬ್ಲೈಂಡ್ ಸ್ಪಾಟ್​ ಮಾನಿಟರ್, 360 ಡಿಗ್ರಿ ಕ್ಯಾಮೆರಾ, ಎಬಿಎಸ್​, ಇಬಿಡಿ, ಇಎಸ್​ಪಿ, ಅಡಾಪ್ಟಿವ್​ ಹೆಡ್​ಲೈಟ್​ ಹೊಂದಿದ್ದು. ಭಾರತದ ಅತ್ಯಂತ ಸುರಕ್ಷಿತ ಕಾರು ಎನಿಸಿಕೊಂಡಿದೆ.

ಫೀಚರ್​ಗಳು?

ಐಷಾರಾಮಿ ಜಿಎಲ್​ಇ ಕೂಪ್​ ಕಾರಿನಲ್ಲಿ ಎಡ್​ಅಪ್​ ಡಿಸ್​ಪ್ಲೆ, ಫೋರ್​ ಝೋನ್ ಕ್ಲೈಮೇಟ್​ ಕಂಟ್ರೋಲ್​, 13 ಸ್ಪೀಕರ್​ಗಳ ಬರ್ಮೆಸ್ಟರ್​ ಸೌಂಡ್ ಸಿಸ್ಟಮ್​, ವೆಂಟಿಲೇಟೆಡ್​ ಸೀಟ್​, ಕನೆಕ್ಟೆಡ್​ ಕಾರ್​ಟೆಕ್​, ಪನೋರಮಿಕ್​ ಸನ್​ರೂಪ್​ ವ್ಯವಸ್ಥೆಗಳನ್ನು ಹೊಂದಿದೆ.

ಮರ್ಸಿಡೀಸ್​ ಬೆಂಜ್​ ಎಎಮ್​ಜಿ ಸಾಮರ್ಥ್ಯ

ಮರ್ಸಿಡೀಸ್​ ಬೆಂಜ್​ ಕಾರು 3.0 ಲೀಟರ್​ನ ಸಿಕ್ಸ್​ ಸಿಲಿಂಡರ್ ಎಂಜಿನ್​ ಹೊಂದಿದೆ. ಇದು ಟ್ವಿನ್​ ಟರ್ಬೊ ಎಂಜಿನ್. ಇದರಲ್ಲಿ ಮೈಲ್ಡ್​ ಹೈಬ್ರಿಡ್​ ಸಿಸ್ಟಮ್​ ಕೂಡ ಇದೆ. ಇದು 435 ಬಿಎಚ್​ಪಿ ಪವರ್ ಉತ್ಪಾದನೆ ಮಾಡುತ್ತದೆ. ಇದರ ಗರಿಷ್ಠ ಟಾರ್ಕ್​ 250 ಎನ್ಎಮ್​. ಇದರಲ್ಲಿ 9 ಸ್ಪೀಡ್​ನ ಆಟೋಮ್ಯಾಟಿಕ್ ಗೇರ್​ ಬಾಕ್ಸ್​ ಇದೆ.

ಇದನ್ನೂ ಓದಿ | Rishabh Pant | ರಿಷಭ್​ ಪಂತ್​ ಆರೋಗ್ಯ ಸ್ಥಿತಿ ಕುರಿತು ಮ್ಯಾಕ್ಸ್​​ ಆಸ್ಪತ್ರೆಯ ವೈದ್ಯರು ಕೊಟ್ಟ ಹೇಳಿಕೆಗಳೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಟೋಮೊಬೈಲ್

Mahindra Discount Offers: ಎಕ್ಸ್‌ಯುವಿ 700, 400 ಇವಿ ಮತ್ತು ಸ್ಕಾರ್ಪಿಯೋ ಮೇಲೆ ಭರ್ಜರಿ ರಿಯಾಯಿತಿ!

2023ರಲ್ಲಿ ತಯಾರಿಸಲಾದ ಎಕ್ಸ್ ಯುವಿ 400 ಇವಿ, ಎಕ್ಸ್ ಯುವಿ 700 ಮತ್ತು ಸ್ಕಾರ್ಪಿಯೋ ಎನ್ ನಂತಹ ಮಾದರಿಗಳು ಕಳೆದ ತಿಂಗಳಂತೆಯೇ ಗಣನೀಯ ಉಳಿತಾಯದೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮಹೀಂದ್ರ ಎಸ್‌ಯುವಿಗಳಲ್ಲಿ ಲಭ್ಯವಿರುವ ರಿಯಾಯಿತಿಗಳ (Mahindra Discount Offers) ವಿವರ ಇಲ್ಲಿದೆ.

VISTARANEWS.COM


on

By

Mahindra Discount Offers
Koo

ಹೊಸ ವರ್ಷ ಬಂದು ಆರು ತಿಂಗಳಾದರೂ ಮಹೀಂದ್ರಾದ (Mahindra) 2023ರ ಕೆಲವು ಮಾದರಿಗಳು (2023 models) ಸ್ಟಾಕ್‌ನಲ್ಲಿ (stock) ಉಳಿದಿವೆ. ಈ ದಾಸ್ತಾನು ತೆರವುಗೊಳಿಸಲು ಬ್ರ್ಯಾಂಡ್ ಗಮನಾರ್ಹ ರಿಯಾಯಿತಿ ಮತ್ತು ವಿಶೇಷ ಪ್ರಯೋಜನಗಳನ್ನು (Mahindra Discount Offers) ನೀಡುವುದಾಗಿ ಘೋಷಿಸಿದೆ.

2023ರಲ್ಲಿ ತಯಾರಿಸಲಾದ ಎಕ್ಸ್ ಯುವಿ 400 ಇವಿ, ಎಕ್ಸ್ ಯುವಿ 700 ಮತ್ತು ಸ್ಕಾರ್ಪಿಯೋ ಎನ್‌ನಂತಹ ಮಾದರಿಗಳು ಕಳೆದ ತಿಂಗಳಂತೆಯೇ ಗಣನೀಯ ಉಳಿತಾಯದೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮಹೀಂದ್ರ ಎಸ್‌ಯುವಿಗಳಲ್ಲಿ ಲಭ್ಯವಿರುವ ರಿಯಾಯಿತಿಗಳ ವಿವರ ಇಲ್ಲಿದೆ.

ಮಹೀಂದ್ರ ಎಕ್ಸ್ ಯುವಿ 700

ಮಹೀಂದ್ರಾ ಎಕ್ಸ್ ಯುವಿ 700 ಖರೀದಿಯ ಮೇಲೆ 1.5 ಲಕ್ಷ ರೂ.ವರೆಗೆ ರಿಯಾಯಿತಿಗಳನ್ನು ನೀಡುವುದನ್ನು ಮುಂದುವರೆಸಿದೆ. ಎಎಕ್ಸ್ 5 7-ಸೀಟರ್ ಡೀಸೆಲ್-ಎಂಟಿ, ಡೀಸೆಲ್-ಎಟಿ ಮತ್ತು ಪೆಟ್ರೋಲ್-ಎಂಟಿ ರೂಪಾಂತರಗಳನ್ನು ಹೊರತುಪಡಿಸಿ ಎಲ್ಲಾ ರೂಪಾಂತರಗಳು 1.5 ಲಕ್ಷ ರೂ. ವರೆಗೆ ಫ್ಲಾಟ್ ನಗದು ರಿಯಾಯಿತಿಯನ್ನು ಘೋಷಿಸಲಾಗಿದೆ.

1.3 ಲಕ್ಷ ರಿಯಾಯಿತಿಯೊಂದಿಗೆ ಎಕ್ಸ್ ಯುವಿ 700 ಟಾಟಾ ಸಫಾರಿ ಮತ್ತು ಎಮ್ ಜಿ ಹೆಕ್ಟರ್ ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿದೆ. ಇದರಲ್ಲಿ ಎಂಜಿನ್ ಆಯ್ಕೆಗಳೊಂದಿಗೆ ಹಲವು ವೈಶಿಷ್ಟ್ಯಗಳಿವೆ.

2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅಥವಾ 2.2 ಲೀಟರ್ ಟರ್ಬೊ- ಡೀಸೆಲ್ ಎಂಜಿನ್. ಎಕ್ಸ್ ಯುವಿ 700 ಎಕ್ಸ್ ಶೋ ರೂಂ ಬೆಲೆಗಳು 13.99 ಲಕ್ಷದಿಂದ ರೂ 27.14 ಲಕ್ಷ ರೂ. ವರೆಗೆ ಇದೆ.

ಮಹೀಂದ್ರ ಎಕ್ಸ್ ಯುವಿ 400

2023ರ ಹೆಚ್ಚಿನ ಮಹೀಂದ್ರಾ ಎಕ್ಸ್ ಯುವಿ 400 ಇವಿ ರೂಪಾಂತರಗಳಲ್ಲಿ 4.4 ಲಕ್ಷ ರೂ. ವರೆಗಿನ ರಿಯಾಯಿತಿಗಳು ಲಭ್ಯವಿದೆ. ಅದರ ದೊಡ್ಡ 39.4ಕೆ ಡಬ್ಲ್ಯೂ ಹೆಚ್ ಬ್ಯಾಟರಿ, 7.2ಕೆ ಡಬ್ಲ್ಯೂ ವೇಗದ ಚಾರ್ಜರ್ ಮತ್ತು ಇಎಸ್ ಸಿ ನೊಂದಿಗೆ ಹೆಚ್ಚಿನ-ಸ್ಪೆಕ್ ಇಎಲ್ ರೂಪಾಂತರವು 3.4 ಲಕ್ಷ ರೂ. ಗಳ ರಿಯಾಯಿತಿಯನ್ನು ಹೊಂದಿದೆ. ಎಕ್ಸ್ ಯುವಿ ಎಕ್ಸ್ ಯುವಿ 400 ಬೆಲೆಯು 15.49 ಲಕ್ಷ ಮತ್ತು 17.49 ಲಕ್ಷ ರೂ.ಗಳ ನಡುವೆ ಮತ್ತು ಇಸಿ ಮತ್ತು ಇಎಲ್ ಟ್ರಿಮ್‌ಗಳಲ್ಲಿ ಲಭ್ಯವಿದೆ.

ಮಹೀಂದ್ರ ಸ್ಕಾರ್ಪಿಯೋ ಎನ್

ಮಹೀಂದ್ರಾ ಸ್ಕಾರ್ಪಿಯೊ ಎನ್ ಉನ್ನತ-ಸ್ಪೆಕ್ ಝೆಡ್ 8 ಮತ್ತು ಟಾಪ್-ಸ್ಪೆಕ್ ಝೆಡ್ 8 ಎಲ್ ರೂಪಾಂತರಗಳಿಗೆ 1 ಲಕ್ಷ ರೂ. ವರೆಗೆ ರಿಯಾಯಿತಿಗಳನ್ನು ನೀಡುತ್ತದೆ. 4ಡಬ್ಲ್ಯೂ ಡಿ ಡೀಸೆಲ್ ರೂಪಾಂತರಗಳು 1 ಲಕ್ಷ ರೂ. ವರೆಗೆ ನಗದು ರಿಯಾಯಿತಿಯನ್ನು ಹೊಂದಿದ್ದರೆ, 2ಡಬ್ಲ್ಯೂ ಡಿ ಪೆಟ್ರೋಲ್ ಮತ್ತು ಡೀಸೆಲ್ ಟ್ರಿಮ್‌ಗಳು 60,000 ರೂ.ವರೆಗೆ ರಿಯಾಯಿತಿಯನ್ನು ನೀಡುತ್ತವೆ.

ಇದನ್ನೂ ಓದಿ: Upcoming Vehicles: ಈ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿರುವ ಹೊಸ ಕಾರು, ಬೈಕ್‌ಗಳಿವು!

ಟಾಟಾ ಸಫಾರಿ, ಮಹೀಂದ್ರಾ ಎಕ್ಸ್‌ಯುವಿ700, ಎಂಜಿ ಹೆಕ್ಟರ್ ಪ್ಲಸ್ ಮತ್ತು ಹ್ಯುಂಡೈ ಅಲ್ಕಾಜರ್‌ನಂತಹ ಮಾದರಿಗಳೊಂದಿಗೆ ಸ್ಪರ್ಧಿಸುವ ಇದರ ಎಕ್ಸ್-ಶೋರೂಂ ಬೆಲೆಗಳು 13.60 ಲಕ್ಷದಿಂದ 24.54 ಲಕ್ಷ ರೂ. ವರೆಗೆ ಇರುತ್ತದೆ.

Continue Reading

ಆಟೋಮೊಬೈಲ್

Upcoming Vehicles: ಈ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿರುವ ಹೊಸ ಕಾರು, ಬೈಕ್‌ಗಳಿವು!

ಹೊಸ ಮಾದರಿ, ತಂತ್ರಜ್ಞಾನ, ವೈಶಿಷ್ಟ್ಯಗಳೊಂದಿಗೆ ಹಲವು ಸುಪ್ರಸಿದ್ದ ಕಂಪೆನಿಯ ಕಾರು, ಬೈಕುಗಳು ಜೂನ್ ತಿಂಗಳಲ್ಲಿ ಮಾರುಕಟ್ಟೆ (Upcoming Vehicles) ಪ್ರವೇಶಿಸಲಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೆಲವು ವಾಹನಗಳ ಬಿಡುಗಡೆ ದಿನಾಂಕವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದೆ.

VISTARANEWS.COM


on

By

Upcoming Vehicles
Koo

ಹೊಸದಿಲ್ಲಿ: ಆಟೋಮೊಬೈಲ್ (automobile) ಮತ್ತು ಮೋಟಾರು ವಾಹನಗಳ (motorcycle) ಕಂಪನಿಗಳು ಮೇ ತಿಂಗಳಲ್ಲಿ ಹಲವು ಹೊಸ ಮಾದರಿಗಳನ್ನು ಭಾರತ (India) ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ (international markets) ಪರಿಚಯಿಸಿವೆ. ಕೆಲವು ನಿರೀಕ್ಷಿತ ವಾಹನಗಳ ಬಿಡುಗಡೆಯನ್ನು ಮುಂದೂಡಲಾಗಿದ್ದು ಕೆಲವನ್ನು ಮೊದಲೇ ಘೋಷಿಸಲಾಗಿತ್ತು.

ಮೇ ತಿಂಗಳು ಹೆಚ್ಚಿನ ಕಾರು ಮತ್ತು ಬೈಕ್ ಬಿಡುಗಡೆಯಾಗಿದ್ದು, ಜೂನ್‌ನಲ್ಲಿ ಕೆಲವು ಹೊಸ ಮಾದರಿಗಳು ಭಾರತಕ್ಕೆ ಆಗಮಿಸುತ್ತಿದೆ. ದೇಶೀಯ ಮಾರುಕಟ್ಟೆಗೆ ಅತ್ಯಾಕರ್ಷಕ ಹೊಸ ವೈಶಿಷ್ಟ್ಯಗಳು, ಅನನ್ಯ ವಿನ್ಯಾಸಗಳು, ಸುಧಾರಿತ ತಂತ್ರಜ್ಞಾನ ಮತ್ತು ಅನನ್ಯ ವಿಶೇಷಣಗಳನ್ನುಇದು ಒಳಗೊಂಡಿದೆ ಎಂಬುದು ಎಲ್ಲರ ನಿರೀಕ್ಷೆ.

ಬಜಾಜ್ ಆಟೋ ತನ್ನ ಹೊಸ ಬಜಾಜ್ ಸಿ ಎನ್ ಜಿ ಮೋಟಾರ್‌ಸೈಕಲ್ ಅನ್ನು 2024ರ ಜೂನ್ 18ರಂದು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಅದೇ ರೀತಿ ಎಂಜಿ ಗ್ಲೊಸ್ಟರ್ ಸ್ಟ್ರೋಮ್ ಆವೃತ್ತಿಯನ್ನು 2024ರ ಜೂನ್ 4ರಂದು ಭಾರತದಲ್ಲಿ ಪರಿಚಯಿಸುವುದನ್ನು ಮೋರಿಸ್ ಗ್ಯಾರೇಜಸ್ ಇಂಡಿಯಾ ಖಚಿತಪಡಿಸಿದೆ.

ಒಟ್ಟಿನಲ್ಲಿ ಈ ತಿಂಗಳು ಸಾಲುಸಾಲು ಅತ್ಯಾಕರ್ಷಕ ವಾಹನಗಳು ಬಿಡುಗಡೆಗೆ ಸಜ್ಜಾಗಿದೆ. ಹಲವಾರು ಇತರ ಆಟೋಮೊಬೈಲ್ ಕಂಪೆನಿಗಳು ತಮ್ಮ ಇತ್ತೀಚಿನ ಕೊಡುಗೆಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ.

ಜೂನ್ ನಲ್ಲಿ ಬಿಡುಗಡೆಯಾಗಲಿರುವ ಕಾರುಗಳು

ಆಟೋಮೊಬೈಲ್ ಕಂಪನಿಗಳು ಮೇ ತಿಂಗಳಲ್ಲಿ ಹೊಸ ಮಾದರಿಗಳಾದ ಬಿಎಂಡಬ್ಲ್ಯೂ 220ಐ ಎಂ ಸ್ಪೋರ್ಟ್ ಶ್ಯಾಡೋ ಆವೃತ್ತಿ, ನಿಸ್ಸಾನ್ ಮ್ಯಾಗ್ನೈಟ್ ಗೆಜಾ ಸಿವಿಟಿ ವಿಶೇಷ ಆವೃತ್ತಿ, ಆಡಿ ಕ್ಯೂ7 ಬೋಲ್ಡ್ ಆವೃತ್ತಿ, ಮಹೀಂದ್ರಾ ಎಕ್ಸ್ ಯುವಿ700 Aಎಕ್ಸ್5 ಮತ್ತು ಇತರವುಗಳನ್ನು ಪರಿಚಯಿಸಿದವು. ಇದು ಕಿಯಾ ಇವಿ3 ನಂತಹ ಕೆಲವು ಮಾದರಿಗಳಿಗೆ ಸಡ್ಡು ಹೊಡೆಯಲಿದೆ. ಈ ತಿಂಗಳು ಇನ್ನು ಕೆಲವು ಹೊಸ ಕಾರುಗಳು ಬಿಡುಗಡೆಯಾಗಲಿದೆ. ಎಂಜಿ ಗ್ಲೋಸ್ಟರ್ ಸ್ಟಾರ್ಮ್ ಆವೃತ್ತಿಯು 2024ರ ಜೂನ್ 4ರಂದು ಬಿಡುಗಡೆಯಾಗಿದೆ.

ಜೂನ್ 7ರಂದು ಟಾಟಾ ಆಲ್ಟ್ರೋಜ್ ರೇಸರ್ ಬಿಡುಗಡೆಯಾಗಲಿದೆ. ಬಿಎಂಡಬ್ಲ್ಯೂ ನ ಹೊಸ ಕಾರು ಜಾಗತಿಕವಾಗಿ ಬಿಡುಗಡೆಯಾಗಲಿದ್ದು, ಮಾದರಿ, ದಿನಾಂಕವನ್ನು ದೃಢೀಕರಿಸಲಾಗಿಲ್ಲ. ಮರ್ಸಿಡಿಸ್ ಬೆನ್ಜ್ ಜಿಎಲ್ ಬಿ 2024 ಜೂನ್ 14 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.

ಜೂನ್ 15 ರಂದು ಸ್ಕೋಡಾ ಸೂಪರ್ಬ್, ಜೂನ್ 14ರಂದು ಸ್ಕೋಡಾ ಕೊಡಿಯಾಕ್, ಜೂನ್ 19 ರಂದು ಮಿನಿ ಕೂಪರ್ ಎಸ್ಇ, ಪೋರ್ಷೆ ಟೇಕಾನ್ ಜೂನ್ ಅಥವಾ ಜುಲೈನಲ್ಲಿ, ಜೂನ್ 15 ರಂದು ಆಡಿ ಕ್ಯೂ8, ಜೂನ್ 14 ರಂದು ಟೊಯೋಟಾ ಲ್ಯಾಂಡ್ ಕ್ರೂಸರ್ 250, ಜೂನ್‌ನಲ್ಲಿ ವೋಲ್ವೋ ಇಎಕ್ಸ್ 90 ಬಿಡುಗಡೆಯಾಗುವ ನಿರೀಕ್ಷೆ ಇದೆ.

ಜೂನ್ 2024ರಲ್ಲಿ ಬಿಡುಗಡೆಯಾಗುವ ಬೈಕ್ ಗಳು

ಮೇ ತಿಂಗಳಲ್ಲಿ ಮೋಟಾರ್‌ಸೈಕಲ್ ಕಂಪೆನಿಗಳು ಕವಾಸಕಿ ನಿಂಜಾ ZX-4RR, Jawa 42 Bobber ಮತ್ತು BMW S 1000 XR ನಂತಹ ಹೊಸ ಮಾದರಿಗಳನ್ನು ಬಿಡುಗಡೆ ಮಾಡಿದೆ. BMW R 1300 GS ಮತ್ತು ಹೋಂಡಾ ಸ್ಟೈಲೋ 160 ಗೆ ಇದು ಸಡ್ಡು ಹೊಡೆಯಲಿದೆ. ಜೂನ್‌ನಲ್ಲಿ, ಬಜಾಜ್ ಆಟೋ, BMW, ಕವಾಸಕಿ ಮತ್ತು ಇತರ ಕಂಪನಿಗಳು ತಮ್ಮ ಹೊಸ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ, ಹೊಸ ತಂತ್ರಜ್ಞಾನ, ವೈಶಿಷ್ಟ್ಯಗಳು ಮತ್ತು ಇತ್ತೀಚಿನ ವಿನ್ಯಾಸಗಳನ್ನು ಇದು ಒಳಗೊಂಡಿದೆ.

ಬಜಾಜ್ ಸಿ ಎನ್ ಜಿ ಬೈಕ್, ಬಜಾಜ್ ಬ್ರೂಜರ್ ಸಿ ಎನ್ ಜಿ ಎಂದು ಕರೆಯಲ್ಪಡುವ ಇದು ಜೂನ್ 18ರಂದು ಬಿಡುಗಡೆಯಾಗಲಿದೆ.

ಜೂನ್‌ನಲ್ಲಿ ಬಿಎಂಡಬ್ಲ್ಯೂ ಆರ್ 1300 S ಬಿಡುಗಡೆ ದಿನಾಂಕವನ್ನು ದೃಢೀಕರಿಸಲಾಗಿಲ್ಲ. ಕವಾಸಕಿ ವರ್ಸಿಸ್-ಎಕ್ಸ್ 300, ಹೋಂಡಾ PCX160 ಜೂನ್‌ನಲ್ಲಿ ಬಿಡುಗಡೆಯಾಗಲಿದ್ದು, ದಿನಾಂಕ ದೃಢೀಕರಿಸಲಾಗಿಲ್ಲ.
ವೆಸ್ಪಾ ಎಲೆಕ್ಟ್ರಿಕಾ ಇವಿ ಸ್ಕೂಟರ್, ಹೋಂಡಾ ರೆಬೆಲ್ 500 ಹೋಂಡಾ ರೆಬೆಲ್ 1100 ಮೋಟಾರ್ ಸೈಕಲ್‌ಗಳು ಜೂನ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Electric Scooters : ದೊಡ್ಡ ಬೂಟ್​ ಸ್ಪೇಸ್ ಇರುವಂಥ 5 ಎಲೆಕ್ಟ್ರಿಕ್​ ಸ್ಕೂಟರ್​ಗಳು ಇವು

ಹಲವು ನಿರೀಕ್ಷಿತ ಮಾದರಿಗಳು ಮುಂದಿನ ತಿಂಗಳುಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೂ ಆಟೋಮೊಬೈಲ್ ಮತ್ತು ಮೋಟಾರ್‌ಸೈಕಲ್ ಕಂಪೆನಿಗಳು ತಮ್ಮ ಹೊಸ ಮಾದರಿಗಳ ಬಿಡುಗಡೆ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ. ಕೆಲವು ಕಂಪೆನಿಗಳು ವಾರ ಅಥವಾ ದಿನಗಳ ಮೊದಲು ಅನಿರೀಕ್ಷಿತವಾಗಿ ಬಿಡುಗಡೆ ಮಾಡುವ ದಿನಾಂಕವನ್ನು ಘೋಷಿಸಬಹುದು.

Continue Reading

ಬೆಂಗಳೂರು

Yamaha: ಬೆಂಗಳೂರಿನಲ್ಲಿ ಹೊಸ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್ ತೆರೆದ ಯಮಹಾ

India Yamaha: ಬೆಂಗಳೂರಿನಲ್ಲಿ ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈ. ಲಿಮಿಟೆಡ್‌ನ ಹೊಸ ಅತ್ಯಾಧುನಿಕ “ಬ್ಲೂ ಸ್ಕ್ವೇರ್” ಔಟ್‌ಲೆಟ್ ಅನ್ನು ತೆರೆದಿದೆ. ಬೆಂಗಳೂರು ವರ್ತೂರು ಹೋಬಳಿಯ ಅಂಬಲಿಪುರದಲ್ಲಿ ಮೋಟೋ ವರ್ಲ್ಡ್ ಹೆಸರಿನಲ್ಲಿ ಈ ಹೊಸ ಔಟ್‌ಲೆಟ್ ಅನ್ನು ಪ್ರಾರಂಭಿಸಲಾಗಿದೆ.ಯಮಹಾ ಬ್ಲೂ ಸ್ಕ್ವೇರ್ ಶೋರೂಮ್‌ಗಳನ್ನು ಗ್ರಾಹಕರಿಗೆ ವೈಯಕ್ತೀಕರಿಸಿದ ವಿಧಾನದಲ್ಲಿ ಅತ್ಯುತ್ತಮ ಮಾರಾಟ, ಸರ್ವೀಸ್ ಮತ್ತು ನೆರವನ್ನು ನೀಡುವ ಮೂಲಕ ಉತ್ತಮ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

VISTARANEWS.COM


on

Yamaha has opened a new Blue Square outlet in Bengaluru
Koo

ಬೆಂಗಳೂರು: ಇಂಡಿಯಾ ಯಮಹಾ ಮೋಟಾರ್ (India Yamaha Motor Pvt Ltd) ಪ್ರೈ. ಲಿಮಿಟೆಡ್, ಬೆಂಗಳೂರಿನಲ್ಲಿ ಹೊಸ ಅತ್ಯಾಧುನಿಕ “ಬ್ಲೂ ಸ್ಕ್ವೇರ್” ಔಟ್‌ಲೆಟ್ ಅನ್ನು ತೆರೆದಿದೆ. ಬೆಂಗಳೂರು ವರ್ತೂರು ಹೋಬಳಿಯ ಅಂಬಲಿಪುರದಲ್ಲಿ ಮೋಟೋ ವರ್ಲ್ಡ್ ಹೆಸರಿನಲ್ಲಿ ಈ ಹೊಸ ಔಟ್‌ಲೆಟ್ ಅನ್ನು ಪ್ರಾರಂಭಿಸಲಾಗಿದ್ದು, ಈ ಔಟ್‌ಲೆಟ್ 7,100 ಚದರ ಅಡಿಯಷ್ಟು ವಿಶಾಲವಾಗಿದೆ. ಯಮಹಾ ಬ್ಲೂ ಸ್ಕ್ವೇರ್ ಶೋರೂಮ್‌ಗಳನ್ನು ಗ್ರಾಹಕರಿಗೆ ವೈಯಕ್ತೀಕರಿಸಿದ ವಿಧಾನದಲ್ಲಿ ಅತ್ಯುತ್ತಮ ಮಾರಾಟ, ಸರ್ವೀಸ್ ಮತ್ತು ನೆರವನ್ನು ನೀಡುವ ಮೂಲಕ ಉತ್ತಮ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಈ ಬ್ಲೂ ಸ್ಕ್ವೇರ್ ಔಟ್‌ಲೆಟ್ ಯಮಹಾ ಬ್ರ್ಯಾಂಡ್‌ನ ಹುಮ್ಮಸ್ಸನ್ನು ದಾಟಿಸುತ್ತದೆ ಮತ್ತು ಗ್ರಾಹಕರಿಗೆ ಸಂಪೂರ್ಣ ಸೇವೆಯನ್ನು ಒದಗಿಸುವಂತೆ ವಿನ್ಯಾಸಗೊಂಡಿದೆ. ವೈಯಕ್ತೀಕರಿಸಿದ ವಿಧಾನದ ಮೂಲಕ ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತಿದ್ದು, ಪ್ರತಿಯೊಬ್ಬ ಗ್ರಾಹಕರು ತೃಪ್ತಿಕರ ಸೇವೆ ಪಡೆಯಲಿದ್ದಾರೆ. ಈ ವಿಶೇಷವಾದ ಔಟ್‌ಲೆಟ್‌ಗಳನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಅನುವು ಮಾಡಿಕೊಟ್ಟಿರುವ ಬ್ರ್ಯಾಂಡ್ ಗ್ರಾಹಕರಿಗೆ ಯಮಹಾ ರೇಸಿಂಗ್ ಜಗತ್ತಿಗೆ ಪ್ರವೇಶಿಸುವ ಅವಕಾಶವನ್ನೂ ನೀಡುತ್ತಿದೆ.

ಇದನ್ನೂ ಓದಿ: Koppala News: ವಿಜೃಂಭಣೆಯಿಂದ ಜರುಗಿದ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

ಈ ಪ್ರೀಮಿಯಂ ಔಟ್‌ಲೆಟ್‌ಗಳ ಪ್ರತಿಯೊಂದು ವಿಭಾಗವನ್ನೂ ಅಂತರರಾಷ್ಟ್ರೀಯ ಮೋಟಾರ್‌ ಸ್ಪೋರ್ಟ್‌ಗಳಲ್ಲಿ ತೊಡಗಿಸಿಕೊಂಡಿರುವ ಜಾಗತಿಕ ಬ್ರ್ಯಾಂಡ್‌ ಆದ ಯಮಹಾ ಜತೆಗೆ ಸಂಬಂಧ ಹೊಂದುವ ಹೆಮ್ಮೆಯ ಭಾವವನ್ನು ಮೂಡಿಸುವಂತೆ ಚಿಂತನಶೀಲವಾಗಿ ರಚಿಸಲಾಗಿದೆ. ಯಮಹಾ, ಬ್ರ್ಯಾಂಡ್‌ನ ಹೆಮ್ಮೆಯ ರೇಸಿಂಗ್ ಪರಂಪರೆಯನ್ನು ಪ್ರತಿನಿಧಿಸುವ “ಬ್ಲೂ (ನೀಲಿ)” ಬಣ್ಣ ಮತ್ತು ಗ್ರಾಹಕರು ಯಮಹಾದ ಹರ್ಷದಾಯಕ ಮತ್ತು ಸೊಗಸಾದ ಶ್ರೇಣಿಯ ದ್ವಿಚಕ್ರ ವಾಹನಗಳೊಂದಿಗೆ ಸಂಪರ್ಕ ಸಾಧಿಸಲು ರಚಿಸಲಾದ ಪ್ಲಾಟ್‌ಫಾರ್ಮ್ ಅನ್ನು ಸಂಕೇತಿಸುವ “ಸ್ಕ್ವೇರ್” ಸಂಯೋಜನೆಯ ಮೂಲಕ ಗ್ರಾಹಕರೊಂದಿಗೆ ಉತ್ತಮ ಸಂಪರ್ಕವನ್ನು ಸಾಧಿಸಿದೆ.

ಉದ್ಯಮ-ಪ್ರಧಾನ ಅನುಭವವನ್ನು ಒದಗಿಸುವುದರ ಜತೆಗೆ, ಈ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳು ಬ್ಲೂ ಸ್ಟ್ರೀಕ್ಸ್ ರೈಡರ್‌ಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ. ಯಮಹಾದ ವಿಶೇಷ ಬೈಕರ್ ಸಮುದಾಯದ ಸವಾರರು ಇತರ ಸವಾರರನ್ನು ಭೇಟಿ ಮಾಡಲು ಮತ್ತು ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಹೊಸ ಔಟ್‌ಲೆಟ್ ಸೇರಿದಂತೆ ಈಗ ಕರ್ನಾಟಕ ಮಾರುಕಟ್ಟೆಯಲ್ಲಿ ಯಮಹಾ 23 ಎಕ್ಸ್‌ಕ್ಲೂಸಿವ್ ಬ್ಲೂ ಸ್ಕ್ವೇರ್ ಶೋ ರೂಂಗಳನ್ನು ಹೊಂದಿದೆ.

ಯಮಹಾದ ಸೂಪರ್‌ಸ್ಪೋರ್ಟ್ ಆರ್3 (321ಸಿಸಿ), ಟಾರ್ಕ್-ರಿಚ್ ಎಂಟಿ -03 (321 ಸಿಸಿ) ಮತ್ತು ಮ್ಯಾಕ್ಸಿ-ಸ್ಪೋರ್ಟ್ಸ್ ಏರಾಕ್ಸ್(155 ಸಿಸಿ) ಮತ್ತು ಏರಾಕ್ಸ್ ವರ್ಷನ್ ಎಸ್ (155 ಸಿಸಿ)ಗಳನ್ನು ಬ್ಲೂ ಸ್ಕ್ವೇರ್ ಶೋರೂಮ್‌ಗಳ ಮೂಲಕ ವಿಶೇಷವಾಗಿ ಮಾರಾಟ ಮಾಡಲಾಗುತ್ತದೆ. ಈ ಪ್ರೀಮಿಯಂ ಔಟ್‌ಲೆಟ್‌ಗಳು ವೈಝಡ್‌ಎಫ್‌-ಆರ್‌15 ಎಂ (155 ಸಿಸಿ), ವೈಝಡ್‌ಎಫ್‌-ಆರ್‌15 ವಿ4 (155ಸಿಸಿ), ವೈಝಡ್‌ಎಫ್‌-ಆರ್‌15ಎಸ್ ವಿ3 (155 ಸಿಸಿ), ಎಂಟಿ-15 ವಿ2 (155 ಸಿಸಿ), ಬ್ಲೂ ಕೋರ್ ತಂತ್ರಜ್ಞಾನ ಆಧರಿತ ಮಾಡೆಲ್ ಗಳಾದ ಎಫ್‌ಝಡ್‌ಎಸ್‌-ಎಫ್‌ಐ ವರ್ಷನ್ 4.0 (149 ಸಿಸಿ), ಎಫ್‌ಝಡ್‌ಎಸ್‌-ಎಫ್‌ಐ ವರ್ಷನ್ 3.0 (149 ಸಿಸಿ), ಎಫ್‌ಝಡ್‌-ಎಫ್‌ಐ ವರ್ಷನ್ 3.0 (149 ಸಿಸಿ), ಎಫ್‌ಝಡ್‌-ಎಕ್ಸ್ (149 ಸಿಸಿ), ಮತ್ತು ಸ್ಕೂಟರ್ ಗಳಾದ ಫ್ಯಾಸಿನೋ 125 ಎಫ್ಐ ಹೈಬ್ರಿಡ್ (125 ಸಿಸಿ), ರೇ ಝಡ್ಆರ್ 125 ಎಫ್ಐ ಹೈಬ್ರಿಡ್ (125 ಸಿಸಿ), ರೇ ಝಡ್ಆರ್ ಸ್ಟ್ರೀಟ್ ರಾಲಿ 125 ಎಫ್ಐ ಹೈಬ್ರಿಡ್ (125 ಸಿಸಿ) ಮುಂತಾದ ನವೀಕರಿಸಿದ ಲೈನ್-ಅಪ್‌ಗಳನ್ನು ಪ್ರದರ್ಶಿಸಲಾಗುತ್ತದೆ.

ಇದನ್ನೂ ಓದಿ: Vastu Tips: ನೆಲ ಒರೆಸುವಾಗಲೂ ವಾಸ್ತು ನಿಯಮ ಪಾಲಿಸಲೇಬೇಕು!

ಹೆಚ್ಚು ಸಮಗ್ರವಾದ ಅನುಭವವನ್ನು ಒದಗಿಸುವ ಭರವಸೆಯನ್ನು ನೀಡುತ್ತಾ, ಈ ಪ್ರೀಮಿಯಂ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳು ಯಮಹಾದ ನಿಜವಾದ ಆ್ಯಕ್ಸೆಸರೀಸ್‌ಗಳು, ಅಧಿಕೃತ ಉಡುಪುಗಳು ಮತ್ತು ಯಮಹಾ ನಿಜವಾದ ಬಿಡಿಭಾಗಗಳನ್ನು ಗ್ರಾಹಕರಿಗೆ ಪ್ರದರ್ಶನ ಮತ್ತು ಮಾರಾಟ ಮಾಡುತ್ತವೆ.

Continue Reading

ಕರ್ನಾಟಕ

Toyota: ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024; ಟಿಟಿಟಿಐ ವಿದ್ಯಾರ್ಥಿಗಳ ಉತ್ತಮ ಸಾಧನೆ

Toyota: ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ದಿಂದ ನವದೆಹಲಿಯ ಯಶೋಭೂಮಿ ದ್ವಾರಕಾದಲ್ಲಿ ಆಯೋಜಿಸಿದ್ದ ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024 ರಲ್ಲಿ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

VISTARANEWS.COM


on

Toyota Technical Training Institute students Excellent performance in India Skills Competition 2024
Koo

ರಾಮನಗರ: ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ದಿಂದ ನವದೆಹಲಿಯ ಯಶೋಭೂಮಿ ದ್ವಾರಕಾದಲ್ಲಿ ಆಯೋಜಿಸಿದ್ದ ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024 ರಲ್ಲಿ ಟೊಯೊಟಾ (Toyota) ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಸಂಯೋಜಿತ ಉತ್ಪಾದನೆ (ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್ ) ವಿಭಾಗದ ವೈಯಕ್ತಿಕ ಪ್ರತಿಸ್ಪರ್ಧಿಯಾಗಿ ಪ್ರೇಮ್. ವಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ಮ್ಯಾನುಫ್ಯಾಕ್ಚರಿಂಗ್ ಟೀಮ್ ಚಾಲೆಂಜ್‌ನಲ್ಲಿ ಮೋಹಿತ್ ಎಂ.ಯು, ಹರೀಶ್ ಆರ್, ಮತ್ತು ನೆಲ್ಸನ್ ವಿ ತಂಡ ಚಿನ್ನದ ಪದಕಗಳನ್ನು ಪಡೆದುಕೊಂಡಿದೆ.

ಮೆಕಾಟ್ರಾನಿಕ್ಸ್ ವಿಭಾಗದಲ್ಲಿ ದರ್ಶನ್ ಗೌಡ ಸಿ.ಎಸ್. ಮತ್ತು ಭಾನು ಪ್ರಸಾದ್ ಎಸ್.ಎಂ ತಂಡ ಚಿನ್ನದ ಪದಕ ಗಳಿಸಿದೆ. ಹೇಮಂತ್ ಕೆ.ವೈ ಮತ್ತು ಉದಯ್ ಕುಮಾರ್ ಬಿ ತಂಡ ಬೆಳ್ಳಿ ಪದಕ ಗಳಿಸಿದೆ. ಇದಲ್ಲದೆ, ರೋಹನ್ ಎ.ಎಸ್. ಬೆಳ್ಳಿ ಪದಕ ಮತ್ತು ಸುದೀಪ್ ಎಸ್.ಎಂ. ಅವರು ಕಾರ್ ಪೇಂಟಿಂಗ್‌ನಲ್ಲಿ ವೈಯಕ್ತಿಕ ಸ್ಪರ್ಧಿಯಾಗಿ ಮೆಡಲಿಯನ್ ಆಫ್ ಎಕ್ಸಲೆನ್ಸ್ ಪಡೆದಿದ್ದಾರೆ.

ಇದನ್ನೂ ಓದಿ: Credit Card Safety Tips: ಕ್ರೆಡಿಟ್‌ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ

ನವದೆಹಲಿಯ ಯಶೋಭೂಮಿ ದ್ವಾರಕಾದಲ್ಲಿ ನಡೆದ ಸ್ಪರ್ಧೆಯ “ಆಫ್-ಸೈಟ್” ಭಾಗದ ನಾಲ್ಕು ವಿಭಾಗಗಳಲ್ಲಿ ಟಿಟಿಟಿಐ ಭಾಗವಹಿಸಿತ್ತು. ಮ್ಯಾನುಫ್ಯಾಕ್ಚರಿಂಗ್ ಟೀಮ್ ಚಾಲೆಂಜ್, ಮೆಕಾಟ್ರಾನಿಕ್ಸ್, ಕಾರ್ ಪೇಂಟಿಂಗ್ ಮತ್ತು ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಟಿಟಿಟಿಐನ ವಿದ್ಯಾರ್ಥಿಗಳು ಅದ್ಭುತ ಕೌಶಲ್ಯ ಮತ್ತು ಡೆಡಿಕೇಷನ್ ಅನ್ನು ಪ್ರದರ್ಶಿಸಿದ್ದಾರೆ.

ಈ ವೇಳೆ ಎನ್‌ಎಸ್‌ಡಿಸಿ ಯ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ಸ್ ಜನರಲ್ ಮ್ಯಾನೇಜರ್ ಮೋನಿಕಾ ನಂದಾ ಮಾತನಾಡಿ, “ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024 ರಲ್ಲಿ ಗಮನಾರ್ಹ ಸಾಧನೆ ಮಾಡಿದ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ (ಟಿಟಿಟಿಐ) ನ ವಿದ್ಯಾರ್ಥಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಅನುಕರಣೀಯ ಕೌಶಲ್ಯಗಳು ಮತ್ತು ಸಮರ್ಪಣೆ ಟಿಟಿಟಿಐನ ತರಬೇತಿ ಕಾರ್ಯಕ್ರಮಗಳ ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿದೆ. ಈ ವಿಜೇತರು ತಮ್ಮ ಸಂಸ್ಥೆಗೆ ಗೌರವವನ್ನು ತರುವುದಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತೀಯ ಕೌಶಲ್ಯ ಅಭಿವೃದ್ಧಿಯ ಖ್ಯಾತಿಯನ್ನು ಹೆಚ್ಚಿಸುತ್ತಾರೆ. ವಿಶ್ವ ಕೌಶಲ್ಯ ಸ್ಪರ್ಧೆಗೆ ಆಯ್ಕೆಯಾದವರು ಈ ಶ್ರೇಷ್ಠತೆಯ ಪರಂಪರೆಯನ್ನು ಮುಂದುವರಿಸುತ್ತಾರೆ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡುತ್ತಾರೆ ಎಂದು ನಮಗೆ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಹಣಕಾಸು ಮತ್ತು ಆಡಳಿತದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ.ಶಂಕರ ಮಾತನಾಡಿ, “ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024 ರಲ್ಲಿ ಟಿಟಿಟಿಐ ವಿದ್ಯಾರ್ಥಿಗಳ ಗಮನಾರ್ಹ ಸಾಧನೆಗಳ ಬಗ್ಗೆ ನಾವು ಅಪಾರ ಹೆಮ್ಮೆ ಪಡುತ್ತೇವೆ. ಅವರ ಯಶಸ್ವಿ ಪ್ರಯಾಣ ನಮಗೆ ಹೆಚ್ಚು ಆನಂದವನ್ನು ನೀಡಿದೆ. ಕಠಿಣ ಪರಿಶ್ರಮದಿಂದಾಗಿ ಈ ಮೈಲಿಗಲ್ಲನ್ನು ವಿದ್ಯಾರ್ಥಿಗಳು ತಲುಪಿದ್ದಾರೆ ಎಂದು ತಿಳಿಸಿದ್ದಾರೆ.

Continue Reading
Advertisement
World Brain Tumor Day
ಆರೋಗ್ಯ7 mins ago

World Brain Tumor Day: ಇಂದು ವಿಶ್ವ ಬ್ರೇನ್‌ ಟ್ಯೂಮರ್‌ ದಿನ; ಮೊದಲೇ ಎಚ್ಚೆತ್ತುಕೊಂಡರೆ ಈ ಕಾಯಿಲೆಯಿಂದ ಪಾರಾಗಬಹುದು

love Torture Man uploads private photo of young woman on social media
ಕೊಡಗು10 mins ago

Love‌ Torture : ಪ್ರೀತ್ಸೆ ಅಂತ ಪ್ರಾಣ ತಿಂದ; ಒಪ್ಪದೇ ಇದ್ದಾಗ ಯುವತಿಯ ಖಾಸಗಿ ಫೋಟೋ ಹರಿಬಿಟ್ಟ ಪಾಗಲ್‌ ಪ್ರೇಮಿ

Actress Sunaina To Get Married Soon
ಸ್ಯಾಂಡಲ್ ವುಡ್23 mins ago

Actress Sunaina: ಸದ್ದಿಲ್ಲದೇ ಎಂಗೇಜ್‌ ಆದ ‘ಗಂಗೆ ಬಾರೆ ತುಂಗೆ ಬಾರೆ’ ನಾಯಕಿ!

Bhavani Revanna
ಕರ್ನಾಟಕ60 mins ago

Bhavani Revanna: ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾದ ಭವಾನಿ ರೇವಣ್ಣ ಹೇಳಿದ್ದೇನು?

Niveditha Gowda reason behind srujan lokesh name
ಸ್ಯಾಂಡಲ್ ವುಡ್1 hour ago

Niveditha Gowda: ಚಂದನ್‌-ನಿವೇದಿತಾ ಡಿವೋರ್ಸ್‌ಗೆ ಸೃಜನ್ ಲೋಕೇಶ್ ಕಾರಣ? ಯಾಕೆ ಈ ಗಾಸಿಪ್‌?

Valmiki Corporation Scam
ಕರ್ನಾಟಕ1 hour ago

Valmiki Corporation Scam: ವಾಲ್ಮೀಕಿಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಪ್ರಕರಣ; ನಿಗಮ, ಮಂಡಳಿಗಳಿಗೆ ಪತ್ರ ಬರೆದ ಹಣಕಾಸು ಇಲಾಖೆ

Prashant Kishor
ದೇಶ2 hours ago

Prashant Kishor: “ಇನ್ನೆಂದೂ ಚುನಾವಣಾ ಭವಿಷ್ಯ ನುಡಿಯಲ್ಲ”; ಫಲಿತಾಂಶದ ಬಳಿಕ ಪ್ರಶಾಂತ್‌ ಕಿಶೋರ್‌ ಫಸ್ಟ್‌ ರಿಯಾಕ್ಷನ್‌

Fire Accident
ಕರ್ನಾಟಕ2 hours ago

Fire Accident: ಹಾವೇರಿಯಲ್ಲಿ ಧಗಧಗಿಸಿದ ಬೆಂಕಿ; ಸುಟ್ಟು ಭಸ್ಮವಾಯ್ತು 5 ಅಂಗಡಿ

Aamir Khan shooting for Sitaare Zameen Par in Vadodara
ಬಾಲಿವುಡ್2 hours ago

Aamir Khan: ವಡೋದರಾದಲ್ಲಿ ‘ಸಿತಾರೆ ಜಮೀನ್ ಪರ್’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾದ ಆಮೀರ್‌ ಖಾನ್‌!

CWC Meeting
ದೇಶ3 hours ago

CWC Meeting: ಇಂದು ದೆಹಲಿಯಲ್ಲಿ CWC ಸಭೆ; ಇಂದೇ ನಿರ್ಧಾರ ಆಗುತ್ತಾ ವಿಪಕ್ಷ ನಾಯಕ ಸ್ಥಾನ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ16 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ18 hours ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ5 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ5 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು7 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌