Site icon Vistara News

IPL 2023 : ಐಪಿಎಲ್​ನ ಆರೆಂಜ್​ ಕ್ಯಾಪ್​, ಪರ್ಪಲ್​ ಕ್ಯಾಪ್​ ಪಡೆದವರು ಯಾರು?

Shubhman gill IPL 2023

#image_title

ಅಹಮದಾಬಾದ್​​: ಐಪಿಎಲ್​ 16ನೇ ಆವೃತ್ತಿಯು ಮುಕ್ತಾಯಗೊಂಡಿದ್ದು ಧೋನಿ ನಾಯಕತ್ವದ ಸಿಎಸ್​ಕೆ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಟೂರ್ನಿ ಆರಂಭದಲ್ಲಿ ಹಲವಾರು ಆಟಗಾರರು ಗಾಯದ ಸಮಸ್ಯೆಯಿಂದ ಬಳಲಿದ್ದ ಕಾರಣ ಕಳೆಗುಂದುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿತ್ತು. ಆದರೆ ಎಲ್ಲರ ನಿರೀಕ್ಷೆ ಸುಳ್ಳಾಗುವಂತೆ ಹಾಲಿ ಆವೃತ್ತಿ ಅತ್ಯಂತ ರೋಮಾಂಚಕಾರಿಯಾಗಿ ನಡೆಯಿತು. ಕೆಲವೊಂದು ಆಟಗಾರರು ಅದ್ಭುತ ಪ್ರದರ್ಶನಗಳನ್ನು ನೀಡಿದ್ದಾರೆ. ಹೀಗೆ ಹಾಲಿ ಅವೃತ್ತಿಯಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ತಲಾ ಐವರು ಆಟಗಾರರ ವಿವರ ಇಲ್ಲಿದೆ.

ಉತ್ತಮ ಸಾಧನೆ ತೋರಿದ ಬ್ಯಾಟರ್​​ಗಳು

ಶುಭ್​ಮನ್​ ಗಿಲ್​: ಒಟ್ಟು 17 ಪಂದ್ಯಗಳನ್ನು ಆಡಿರುವ ಶುಭ್​ಮನ್ ಗಿಲ್​ 890 ರನ್​ಗಳನ್ನು ಬಾರಿಸಿದ್ದಾರೆ 59.33 ಸರಾಸರಿಯಂತೆ 157 ಸ್ಟ್ರೈಕ್​ರೇಟ್​ನಲ್ಲಿ ರನ್ ಬಾರಿಸಿದ್ದಾರೆ. ಅವರ ಗರಿಷ್ಠ ಸ್ಕೋರ್​​ 3 ಶತಕಗಳು ಹಾಗೂ 4 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಅವರು ಆರೆಂಜ್​ ಕ್ಯಾಪ್​ ತಮ್ಮದಾಗಿಸಿಕೊಂಡಿದ್ದಾರೆ.

ಫಾಫ್​ ಡು ಪ್ಲೆಸಿಸ್​: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ 14 ಪಂದ್ಯಗಳನ್ನು ಆಡಿದ್ದು, 730 ರನ್​ ಬಾರಿಸಿದ್ದಾರೆ. 56.15 ಸರಾಸರಿ, 153.68 ಸ್ಟ್ರೈಕ್​ರೇಟ್​ನಂತೆ ಅವರು ಬ್ಯಾಟ್​ ಬೀಸಿದ್ದಾರೆ. ಇದರಲ್ಲಿ ಎಂಟು ಅರ್ಧ ಶತಕಗಳು ಸೇರಿಕೊಂಡಿವೆ.

ವಿರಾಟ್​ ಕೊಹ್ಲಿ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರಾಟ್​ ಕೊಹ್ಲಿ ಒಟ್ಟು 14 ಪಂದ್ಯಗಳಲ್ಲಿ ಆಡಿದ್ದಾರೆ. 53.25 ಸರಾಸರಿ ಹಾಗೂ 139.82 ಸ್ಟ್ರೈಕ್​ರೇಟ್​ನಂತೆ ಒಟ್ಟು 639 ರನ್​ ಬಾರಿಸಿದ್ದಾರೆ ಬಲಗೈ ಬ್ಯಾಟರ್​. ಇದರಲ್ಲಿ ಒಂದು ಶತಕ ಹಾಗೂ 6 ಅರ್ಧ ಶತಕಗಳು ಸೇರಿಕೊಂಡಿದ್ದಾರೆ.

ಯಶಸ್ವಿ ಜೈಸ್ವಾಲ್​: ರಾಜಸ್ಥಾನ್​ ರಾಯಲ್ಸ್​ ತಂಡದ ಯಶಸ್ವಿ ಜೈಸ್ವಾಲ್​ 14 ಪಂದ್ಯಗಳಲ್ಲಿ ಆಡಿದ್ದು ಒಟ್ಟು 625 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಪಂದ್ಯವನ್ನು ಆಡದ ಆಟಗಾರನೊಬ್ಬ ಐಪಿಎಲ್​ ಆವೃತ್ತಿಯೊಂದರಲ್ಲಿ ಗರಿಷ್ಠ ರನ್​ ಬಾರಿಸಿದ ದಾಖಲೆ ಬರೆದಿದ್ದಾರೆ. 49.08 ಸರಾಸರಿ ಹಾಗೂ 163.61 ಸ್ಟ್ರೈಕ್​ರೇಟ್​ನಂತೆ ಅವರು ಬ್ಯಾಟಿಂಗ್ ಮಾಡಿದ್ದಾರೆ. ಅವರ ಗರಿಷ್ಠ ಸ್ಕೋರ್​ 124. ಇದರಲ್ಲಿ ಐದು ಅರ್ಧ ಶತಕ ಹಾಗೂ 1 ಶತಕ ಸೇರಿಕೊಂಡಿದೆ.

ಡೇವೋನ್​ ಕಾನ್ವೆ: ಡೇವೋನ್​ ಕಾನ್ವೆ ಸಿಎಸ್​ಕೆ ಪರ 15 ಪಂದ್ಯಗಳನ್ನು ಆಡಿದ್ದಾರೆ. ಅವರ ಒಟ್ಟು ಸ್ಕೋರ್​ 625. ಸರಾಸರಿ 52.08 ಹಾಗೂ 137.06 ಸ್ಟ್ರೈಕ್​ರೇಟ್​ನಂತೆ ಅವರು ಬ್ಯಾಟ್​ ಬೀಸಿದ್ದಾರೆ. ಅವರ ಗರಿಷ್ಠ ಸ್ಕೋರ್​ ಅಜೇಯ 92 ರನ್​. ಆರು ಅರ್ಧ ಶತಕಗಳು ಇವರ ಇನಿಂಗ್ಸ್​​ನಲ್ಲಿ ಸೇರಿಕೊಂಡಿವೆ.

ಉತ್ತಮ ಸಾಧನೆ ತೋರಿದ ಬೌಲರ್​ಗಳು

IPL 2023 purple Cap winner Mohammed Shami

ಮೊಹಮ್ಮದ್ ಶಮಿ: ಗುಜರಾತ್​ ತಂಡದ ವೇಗದ ಬೌಲರ್​ ಮೊಹಮ್ಮದ್​ ಶಮಿ 17 ಪಂದ್ಯಗಳಿಂದ 28 ವಿಕೆಟ್​ ಉರುಳಿಸಿದ್ದಾರೆ. ಅವರು 8.03 ಎಕಾನಮಿ ರೇಟ್​ನಂತೆ ಬೌಲಿಂಗ್ ಮಾಡಿದ್ದಾರೆ. 11 ರನ್​ಗಳಿಗೆ 4 ವಿಕೆಟ್​ ಅವರ ಅತ್ಯುತ್ತಮ ಬೌಲಿಂಗ್​ ಸಾಧನೆ. ಎರಡು ಬಾರಿ ನಾಲ್ಕು ವಿಕೆಟ್​​ಗಳ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ.

ಮೋಹಿತ್​ ಶರ್ಮಾ: ಗುಜರಾತ್ ಟೈಟನ್ಸ್ ತಂಡದ ಮೋಹಿತ್ ಶರ್ಮಾ 27 ವಿಕೆಟ್​ ಉರುಳಿಸಿ 2ನೇ ಸ್ಥಾನದಲ್ಲಿದ್ದಾರೆ. 8.17 ಎಕಾನಮಿಯಂತೆ ಬೌಲಿಂಗ್ ಮಾಡಿದ್ದಾರೆ. 10 ರನ್​ಗಳಿಗೆ 5 ವಿಕೆಟ್​ ಅವರ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ. ಎರಡು ಬಾರಿ 4 ವಿಕೆಟ್​ ಹಾಗೂ ಒಂದು ಬಾರಿ 5 ವಿಕೆಟ್ ಗೊಂಚಲಿನ ಸಾಧನೆ ಮಾಡಿದ್ದಾರೆ ಅವರು.

ರಶೀದ್​ ಖಾನ್​ : ಗುಜರಾತ್ ತಂಡದ ಸ್ಪಿನ್ನರ್ ರಶೀದ್ ಖಾನ್​ ಒಟ್ಟು 17 ಪಂದ್ಯಗಳನ್ನು ಆಡಿದ್ದು, 27 ವಿಕೆಟ್​ಗಳನ್ನು ಉರುಳಿಸಿದ್ದಾರೆ. 8.23 ಎಕಾನಮಿಯಂತೆ ಅವರು ಬೌಲಿಂಗ್ ಮಾಡಿದ್ದಾರೆ. ಒಂದು ಬಾರಿ ನಾಲ್ಕು ವಿಕೆಟ್​ ಗೊಂಚಲು ಪಡೆದಿದ್ದಾರೆ. 30 ರನ್​ಗಳಿಗೆ 4 ವಿಕೆ್ಟ್ ಅವರ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ.

ಪಿಯೂಷ್​ ಚಾವ್ಲಾ: 16 ಪಂದ್ಯಗಳನ್ನು ಆಡಿರುವ ಮುಂಬೈ ತಂಡದ ಬೌಲರ್​ ಪಿಯೂಷ್​ ಚಾವ್ಲಾ 22 ವಿಕೆಟ್​ ಉರುಳಿಸಿದ್ದಾರೆ. 8.11 ಎಕಾನಮಿಯಂತೆ ಅವರು ಬೌಲಿಂಗ್ ಮಾಡಿದ್ದಾರೆ. 22 ರನ್​ಗಳಿಗೆ 3 ವಿಕೆಟ್​ ಅವರ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ.

ಯಜ್ವೇಂದ್ರ ಚಹಲ್​: ರಾಜಸ್ಥಾನ್ ರಾಯಲ್ಸ್ ತಂಡದ ಯಜ್ವೇಂದ್ರ ಚಹಲ್​ 14 ಪಂದ್ಯಗಳಿಂದ 21 ವಿಕೆಟ್ ಉರುಳಿಸಿದ್ದಾರೆ. ಅವರು 8.17 ಎಕಾನಮಿಯಂತೆ ಬೌಲಿಂಗ್ ಮಾಡಿದ್ದಾರೆ. ಮೂರು ಬಾರಿ ನಾಲ್ಕು ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ.

Exit mobile version