Site icon Vistara News

Mallika Sagar: ಐಪಿಎಲ್‌ನ ಮೊದಲ ಮಹಿಳಾ ಹರಾಜುಗಾರ್ತಿ ಮಲ್ಲಿಕಾ ಸಾಗರ್ ಯಾರು?

Mallika Sagar

ದುಬೈ: ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್ ಲೀಗ್​ನ ಹರಾಜು ಪ್ರಕ್ರಿಯೆ ಇಂದು (ಡಿ.19) ಮಧ್ಯಾಹ್ನ ದುಬೈನಲ್ಲಿ ನಡೆಯಲಿದೆ. ಒಟ್ಟು 333 ಆಟಗಾರರು ಹರಾಜು ಪಟ್ಟಿಯಲ್ಲಿದ್ದು, 10 ತಂಡಗಳಲ್ಲಿ 77 ಸ್ಥಾನ ಮಾತ್ರ ಖಾಲಿ ಉಳಿದಿದೆ. ಐಪಿಎಲ್​ ಹರಾಜಿನಲ್ಲಿ ಪ್ರಮುಖ ಆಕರ್ಷಣೆಯಾಗಲಿರುವುದು ಹರಾಜುಗಾರ್ತಿ ಮಲ್ಲಿಕಾ ಸಾಗರ್(Mallika Sagar).

mallika sagar


ಯಾರು ಈ ಮಲ್ಲಿಕಾ ಸಾಗರ್​

ಇತ್ತೀಚೆಗೆ ನಡೆದಿದ್ದ ವನಿತಾ ಪ್ರೀಮಿಯರ್ ಲೀಗ್​ನ ಹರಾಜು ಪ್ರಕ್ರಿಯೆಯಲ್ಲಿಯೂ ಮಲ್ಲಿಕಾ ಸಾಗರ್ ಪ್ರಮುಖ ಹೈಲೆಟ್ಸ್​ ಆಗಿದ್ದರು. ಮುಂಬೈ ಮೂಲದವರಾದ ಮಲ್ಲಿಕಾ ಆರ್ಟ್ ಕಲೆಕ್ಟರ್ ಆಗಿದ್ದವರು. ಈಗ ಕಳೆದೆರಡು ದಶಕಗಳಿಂದ ಹರಾಜುಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. 2021 ರಲ್ಲಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹರಾಜಿನ ಭಾಗವಾಗಿದ್ದರು. ಅಲ್ಲದೆ ಬ್ರಿಟೀಷ್ ಆಕ್ಷನ್ ಹೌಸ್ ಕ್ರಿಸ್ಟೀಸ್​ನಲ್ಲಿ ಹರಾಜು ನಡೆಸಿದ ಮೊದಲ ಭಾರತೀಯ ಮಹಿಳೆ ಎನ್ನುವ ಖ್ಯಾತಿಯನ್ನು ಹೊಂದಿದ್ದಾರೆ. ಮಲ್ಲಿಕಾ ಕಳೆದ ವರ್ಷ ಮತ್ತು ಈ ವರ್ಷದ ಡಬ್ಲ್ಯೂಪಿಎಲ್ ಹರಾಜನ್ನು ಸಹ ನಡೆಸಿದ್ದಾರೆ.

mallika sagar


ಐಪಿಎಲ್ ಮೊದಲ ಬಾರಿ

ಮಲ್ಲಿಕಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಇದೇ ಮೊದಲ ಬಾರಿ. ಈ ಹಿಂದೆ ಹರಾಜುದಾರರಾಗಿದ್ದ ಹಗ್ ಎಡ್ಮೀಡ್ಸ್ ಬದಲಿಗೆ ಮಲ್ಲಿಕಾ ಆಯ್ಕೆಯಾಗಿದ್ದಾರೆ.

mallika sagar


ಹರಾಜು ಪ್ರಕ್ರಿಯೆಯ ಹೈಲೆಟ್ಸ್​

ಹರಾಜಿನಲ್ಲಿರುವ ಒಟ್ಟು ಆಟಗಾರರು: 333

ಹರಾಜಿನಲ್ಲಿರುವ ಭಾರತದ ಆಟಗಾರರು: 214

ಹರಾಜಿನಲ್ಲಿರುವ ವಿದೇಶಿ ಆಟಗಾರರು: 119

ವಿದೇಶಿ ಆಟಗಾರರ ಮೀಸಲು ಕೋಟಾ: 30

10 ತಂಡಗಳಿಗೆ ಬೇಕಿರುವ ಆಟಗಾರರು: 77

ಅಂತಾರಾಷ್ಟ್ರೀಯ ಪಂದ್ಯ ಆಡಿದವರು: 116

ಅನ್​ಕ್ಯಾಪ್ಡ್​ ಆಟಗಾರರು: 215

ಅಸೋಸಿಯೇಟ್‌ ರಾಷ್ಟ್ರದ ಆಟಗಾರರು: 02

ಆರಂಭ: ಭಾರತೀಯ ಕಾಲಮಾನದಂತೆ ಮಧ್ಯಾಹ್ನ 1.00 ಗಂಟೆ

ಇದನ್ನೂ ಓದಿ IPL 2024 : ಐಪಿಎಲ್​ ಹರಾಜು ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು

ಸ್ಟಾರ್​​ ಸ್ಪೋರ್ಟ್ಸ್​ನಲ್ಲಿ ಪ್ರಸಾರ

ಐಪಿಎಲ್​ನ ನೇರ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್​​ ಸ್ಪೋರ್ಟ್ಸ್​ನಲ್ಲಿ ಹರಾಜು ಪ್ರಕ್ರಿಯೆ ಪ್ರಸಾರವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ 2 ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 1, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ ಹಿಂದಿ, ಸ್ಟಾರ್ ಸ್ಪೋರ್ಟ್ಸ್ 3, ಸ್ಟಾರ್ ಸ್ಪೋರ್ಟ್ಸ್ ಫಸ್ಟ್, ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ವೀಕ್ಷಕರು ಹರಾಜನ್ನು ಲೈವ್ ಆಗಿ ವೀಕ್ಷಿಸಬಹುದು. ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ ತೆಲುಗು, ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ. ಇವುಗಳಲ್ಲಿ ನೇರ ಪ್ರಸಾರ ಇರಲಿದೆ. ಲೈವ್ ಸ್ಟ್ರೀಮಿಂಗ್ ಜಿಯೋ ಸಿನೆಮಾ(JioCinema) ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

Exit mobile version