Site icon Vistara News

Wazhma Ayoubi: ಯಾರು ಈ ವಾಜ್ಮಾ ಅಯೂಬಿ? ಕ್ರಿಕೆಟ್‌ನೊಂದಿಗೆ ಆಕೆಯ ನಂಟೇನು?

Who Is Wazhma Ayoubi and Why she is trending in ICC World Cup 2023

ನವದೆಹಲಿ: ಬುಧವಾರ ನಡೆದ ಐಸಿಸಿ ವಿಶ್ವಕಪ್ (ICC World Cup 2023) ಸೆಮಿಫೈನಲ್ (Semi Final) ಪಂದ್ಯದಲ್ಲಿ ಭಾರತ (Indian Cricket Team) ತಂಡ ನ್ಯೂಜಿಲೆಂಡ್ ವಿರುದ್ಧ 70 ರನ್‌ಗಳ ಜಯ ದಾಖಲಿಸಿದೆ. ಟೂರ್ನಿಯಲ್ಲಿ ಆಡಿದ ಎಲ್ಲ ಹತ್ತು ಪಂದ್ಯಗಳಲ್ಲೂ ತಂಡ ಗೆಲುವು ಸಾಧಿಸಿ ವಿಶಿಷ್ಟ ಸಾಧನೆ ಮಾಡಿದೆ. ಈ ಮಧ್ಯೆ, ಆಫ್ಘಾನಿಸ್ತಾನ ಮೂಲದ ವಜ್ಮಾ ಅಯೂಬಿ (Wazhma Ayoubi) ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿದ್ದು, ಬಹಳಷ್ಟು ಜನರಿಗೆ ಕುತೂಹಲ ಕೆರಳಿಸಿದೆ. ವಿಶ್ವಕಪ್‌ ಆರಂಭವಾದಾಗಿನಿಂದಲೂ ಅಯೂಬಿ ಅವರು ಸೋಷಿಯಲ್ ಮೀಡಿಯಾದಲ್ಲಿ (Social Media) ಪ್ರಮುಖ ಆಕರ್ಷಣೆಯಾಗಿದ್ದಾರೆ.

ವಿಶ್ವಕಪ್ ಪಂದ್ಯಾವಳಿಗೂ ಮುಂಚೆ ನಡೆದ ಏಷ್ಯಾ ಕಪ್ ಪಂದ್ಯಾವಳಿಯ ವೇಳೆಯೂ ಅಯೂಬಿ ಕಾಣಿಸಿಕೊಂಡಿದ್ದರು. ಆಫ್ಘಾನಿಸ್ತಾನದ ಮೂಲದ ಅಯೂಬಿ ಅವರು ಮಹಿಳಾ ಉದ್ಯಮಿ, ಇನ್‌ಫ್ಲುಯೆನ್ಸರ್ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದು ದುಬೈನಲ್ಲಿ ವಾಸವಾಗಿದ್ದಾರೆ. ಅವರ ಎಕ್ಸ್ ವೇದಿಕೆಯ ಬಯೋ ಪ್ರಕಾರ, ಅಯೂಬಿ ಅವರು ರಿಯಲ್ ಎಸ್ಟೇಟ್, ಸಸ್ಟೇನಬಲ್/ಎಥಿಕಲ್ ಫ್ಯಾಶನ್ ಮತ್ತು ಪಿತೃಪ್ರಭುತ್ವದ ವಿರುದ್ಧ ಸಂಗತಿಗಳಲ್ಲಿ ಹೆಚ್ಚು ಆಸಕ್ತಿ ಎಂದು ಬರೆದುಕೊಂಡಿದ್ದಾರೆ.

ಆಫ್ಘಾನಿಸ್ತಾನ ಟೀಮ್‌ಗೆ ಬೆಂಬಲ ನೀಡುವುದರೊಂದಿಗೆ ಅಯೂಬಿ ಅವರು ಭಾರತೀಯ ಕ್ರಿಕೆಟ್ ತಂಡಕ್ಕೂ ಬೆಂಬಲ ನೀಡುತ್ತಾರೆ. ಕ್ರಿಕೆಟ್ ಆಟಗಾರರು ಮತ್ತು ಆಟದ ಮೇಲಿನ ತನ್ನ ಪ್ರೀತಿಯ ಬಗ್ಗೆ ಅವರು ತುಂಬಾ ಬಾರಿ ಪ್ರದರ್ಶನ ಮಾಡಿದ್ದಾರೆ. ಇತ್ತೀಚೆಗೆ, ಅವರು ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಐತಿಹಾಸಿಕ ಪ್ರದರ್ಶನಕ್ಕಾಗಿ ಮೊಹಮ್ಮದ್ ಶಮಿಯನ್ನು ಅಭಿನಂದಿಸಿದರು. ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್‌ನಲ್ಲಿನ ಪೋಸ್ಟ್ ಮಾಡಿದ ಅಯೂಬಿ ಅವರು, ಓ ಮೈ ಗಾಡ್ 7 ವಿಕೆಟ್‌ಗಳು! ಏನು ಪ್ರಭಾವ ಮತ್ತು ಯಾವ ಕ್ರಿಕೆಟಿಗ ಇವರು. ಮೊಹಮ್ಮದ ಶಮಿ, ಟೀಮ್ ಇಂಡಿಯಾಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದರು.

ಎಕ್ಸ್ ವೇದಿಕೆಯಲ್ಲಿನ ಸದ್ಯದ ಚಟುವಟಿಕೆಗಳನ್ನು ಗಮನಿಸಿದರೆ ಅಯೂಬಿ ಅವರೀಗ ಭಾರತದಲ್ಲಿದ್ದಾರೆಂದು ಹೇಳಬಹುದು. ವಿಶ್ವ ಕಪ್ ಪಂದ್ಯಾವಳಿಯಲ್ಲಿ ಆಫ್ಘಾನಿಸ್ತಾನ ಆಡಿದ ಆಟವನ್ನು ಎಂಜಾಯ್ ಮಾಡಿದ್ದಾರೆ. ಅಲ್ಲದೇ, ಮೇಲಿಂದ ಮೇಲೆ ಅವರು ಎಕ್ಸ್ ವೇದಿಕೆಯಲ್ಲಿ ಆಫ್ಘಾನಿಸ್ತಾನ ಟೀಂ ಅನ್ನು ಹುರಿದುಂಬಿಸುವ ವಿಡಿಯೋವನ್ನು ಪೋಸ್ಟ್ ಮಾಡಿರುವುದನ್ನು ಕಾಣಬಹುದು.

ಇದಕ್ಕೂ ಮೊದಲು ಅಯೂಬಿ ಅವರು, ವಿರಾಟ್ ಕೊಹ್ಲಿ ಬರ್ತ್‌ಡೇ ದಿನಕ್ಕೂ ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಹಾಕಿದ್ದರು. ಕ್ರಿಕೆಟ್ ಜಗತ್ತಿನ ನಿಜವಾದ ಕ್ರಿಕೆಟ್‌ನ ರಾಯಭಾರಿ ಎಂದು ಬರೆದು ವಿಶ್ ಮಾಡಿದ್ದರು.

ವಿರಾಟ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನ ಸಂಪೂರ್ಣ ಅಚ್ಚುಮೆಚ್ಚಿನ ಇಂದಿನ ಪಂದ್ಯಕ್ಕಾಗಿ ನಿಮಗೆ ಅತ್ಯಂತ ಅದ್ಭುತವಾದ ವಿಶ್ ಮಾಡುತ್ತೇನೆ. ನೀವು ಕೇವಲ ವಿಶ್ವದ ಕ್ರಿಕೆಟ್‌ನ ನಿಜವಾದ ರಾಯಭಾರಿ ಮಾತ್ರವಲ್ಲ, ಮೋಡಿ ಮತ್ತು ವರ್ಚಸ್ಸಿನ ಮೂಲವೂ ಆಗಿದ್ದೀರಿ. ಮೈದಾನದಲ್ಲಿ ನಿಮ್ಮ ಪ್ರತಿ ಹೊಡೆತವೂ ಹಾಗೆಯೇ ಇರಲಿ ನಿಮ್ಮ ನಗುವಿನಂತೆ ಮಂತ್ರಮುಗ್ಧರನ್ನಾಗಿಸುತ್ತದೆ. ನಿಮ್ಮ ಅಸಾಧಾರಣ ಪ್ರತಿಭೆಯಿಂದ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯನ್ನು ಹುರಿದುಂಬಿಸುತ್ತಿದ್ದೀರಿ ಮತ್ತು ನಿಮ್ಮ ದಿನವನ್ನು ಆನಂದಿಸಿ ಎಂದು ಅಯೂಬಿ ಅವರು ಟ್ವೀಟ್ ಮಾಡಿದ್ದರು.

ಈ ಸುದ್ದಿಯನ್ನೂ ಓದಿ: ICC World Cup 2023 : ದಕ್ಷಿಣ ಆಫ್ರಿಕಾ ಔಟ್​; ಭಾರತ- ಆಸ್ಟ್ರೇಲಿಯಾ ಫೈನಲ್ ಫೈಟ್​

Exit mobile version