ಕಳೆದ ವರ್ಷ ಅತಿ ಹೆಚ್ಚು ಸಂಭಾವನೆ ಪಡೆದ ಕ್ರೀಡಾಪಟುಗಳಲ್ಲಿ ಜರ್ಮನಿಯ ಲಿಯಾನಲ್ ಮೆಸ್ಸಿಗೆ ಅಗ್ರಸ್ಥಾನ. ಇತ್ತೀಚೆಗೆ ಫೋರ್ಬ್ಸ್ ನಿಯತಕಾಳಿಕೆ ಅತಿ ಹೆಚ್ಚು ಸಂಭಾವನೆ ಪಡೆದ ಟಾಪ್ 10 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. NBA ಚಾಂಪಿಯನ್ ಲೆ ಬ್ರಾನ್ ಜೇಮ್ಸ್ ಎರಡನೇ ಸ್ಥಾನದಲ್ಲಿದ್ದಾರೆ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಮೂರನೇ ಸ್ಥಾನದಲ್ಲಿದ್ದಾರೆ.
ವಿಶ್ವದ ಪ್ರಖ್ಯಾತ ಫುಟ್‌ಬಾಲ್ ಆಟಗಾರ ಲಿಯಾನಲ್ ಮೆಸ್ಸಿ ಕಳೆದ 12 ತಿಂಗಳಲ್ಲಿ ಪಡೆದ ಸಂಭಾವನೆ ಸುಮಾರು ₹1000 ಕೋಟಿ. ಪಟ್ಟಿಯ ಎರಡನೇ ಸ್ಥಾನದಲ್ಲಿರುವ ಲಾಸ್ ಏಂಜಲ್ಸ್‌ನ ಜೇಮ್ಸ್ ಬರೋಬ್ಬರಿ ₹938 ಕೋಟಿ ಸಂಭಾವನೆ ಪಡೆದಿದ್ದಾರೆ. ಇನ್ನು ಸ್ಟಾರ್ ಫುಟ್‌ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೊ ₹891 ಕೋಟಿ ಸಂಭಾವನೆ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.
ಬ್ರಜಿಲ್ ತಂಡದ ಅಗ್ರೆಸ್ಸಿವ್ ಫುಟ್‌ಬಾಲರ್ ನೇಮಾರ್ ಹಾಗೂ ಮೂರು ಬಾರಿ NBA ಚಾಂಪಿಯನ್ ಆಗಿರುವ ಗೋಲ್ಡನ್ ಸ್ಟೇಟ್ ವಾರಿಯರ್ಸ್‌ನ ಸ್ಟೀಫನ್ ಕರ‍್ರಿ ಟಾಪ್ 5ರಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಸಿದ್ಧ ಬಾಸ್ಕೆಟ್‌ಬಾಲ್ ಪ್ಲೇಯರ್ ಕೆವಿನ್ ದುರಂತ್, ಹಾಗೂ ಟೆನ್ನಿಸ್ ದಿಗ್ಗಜ ರೊಜರ್ ಫೆಡರರ್ ಕ್ರಮವಾಗಿ 6 ಹಾಗೂ 7ನೇ ಸ್ಥಾನದಲಿದ್ದಾರೆ. ಇನ್ನು ಮೆಕ್ಸಿಕನ್ ಬಾಕ್ಸರ್ ಕ್ಯಾನೆಲೊ ಅಲ್ವರೆಜ್, 7 ಬಾರಿ ಸೂಪರ್ ಬೌಲ್ ಚಾಂಪಿಯನ್ ಆಗಿರುವ ಟಾಮ್ ಬಾರ್ಡಿ ಹಾಗೂ NBA ವಾಲ್ಯುಯೇಬಲ್ ಬಾಸ್ಕೆಟ್‌ಬಾಲ್ ಆಟಗಾರ ಜಿಯಾನಿಸ್ ಅಂಟೆಂಟೊಕುಂಪೊ ಕೊನೆಯ ಮೂರು ಸ್ಥಾನದಲ್ಲಿದ್ದಾರೆ.
ಪಟ್ಟಿ ಹೀಗಿದೆ:
ಆಟಗಾರರು | ಆನ್-ಫೀಲ್ಡ್ ಸಂಭಾವನೆ | ಆಫ್-ಫೀಲ್ಡ್ ಸಂಭಾವನೆ | ಒಟ್ಟು ಸಂಭಾವನೆ |
ಲಿಯಾನೆಲ್ ಮೆಸ್ಸಿ | ₹580 ಕೋಟಿ | ₹420 ಕೋಟಿ | ₹1,000 ಕೋಟಿ |
ಲೆಬ್ರಾನ್ ಜೇಮ್ಸ್ | ₹318 ಕೋಟಿ | ₹620 ಕೋಟಿ | ₹938 ಕೋಟಿ |
ಕ್ರಿಸ್ಟಿಯಾನೊ ರೊನಾಲ್ಡೊ | ₹470 ಕೋಟಿ | ₹420 ಕೋಟಿ | ₹890 ಕೋಟಿ |
ನೇಮರ್ | ₹542 ಕೋಟಿ | ₹193 ಕೋಟಿ | ₹735 ಕೋಟಿ |
ಸ್ಟೀಫನ್ ಕರ್ರಿ | ₹354 ಕೋಟಿ | ₹364 ಕೋಟಿ | ₹718 ಕೋಟಿ |
ಕೆವಿನ್ ಡುರಂಟ್ | ₹331 ಕೋಟಿ | ₹385 ಕೋಟಿ | ₹716 ಕೋಟಿ |
ರೋಜರ್ ಫೆಡರರ್ | ₹6 ಕೋಟಿ | ₹696 ಕೋಟಿ | ₹702 ಕೋಟಿ |
ಕ್ಯಾನೆಲೊ ಆಲ್ವರೀಸ್ | ₹658 ಕೋಟಿ | ₹38 ಕೋಟಿ | ₹696 ಕೋಟಿ |
ಟಾಮ್ ಬ್ರ್ಯಾಡಿ | ₹247 ಕೋಟಿ | ₹402 ಕೋಟಿ | ₹649 ಕೋಟಿ |
ಜಿಯಾನಿಸ್ ಅಂಟೆಂಟೊಕುಂಪೊ | ₹239 ಕೋಟಿ | ₹387 ಕೋಟಿ | ₹626 ಕೋಟಿ |
ಇದನ್ನೂ ಓದಿ: NEERAJ CHOPRA ಎಂಬ ಏಕಲವ್ಯನಿಗೆ ಗುರುವಾದ ದ್ರೋಣಾಚಾರ್ಯ ಯಾರು?