ಮುಂಬಯಿ: ನಿರ್ಗಮನದ ಬಾಗಿಲಲ್ಲಿ ಬಂದು ನಿಂತಿರುವ ಆರ್ಸಿಬಿ ಮತ್ತು ಯುಪಿ ವಾರಿಯರ್ಸ್ ಇಂದು(ಬುಧವಾರ ಮಾರ್ಚ್ 15) ನಡೆಯುವ ಮಹಿಳಾ ಪ್ರೀಮಿಯರ್ ಲೀಗ್ನ(WPL 2023) ಪಂದ್ಯದಲ್ಲಿ ಸೆಣಸಾಡಲಿವೆ. ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಅಲಿಸ್ಸಾ ಹೀಲಿ(Alyssa Healy) ಪಡೆ ಭರ್ಜರಿ 10 ವಿಕೆಟ್ಗಳ ಗೆಲುವು ಸಾಧಿಸಿತ್ತು.
ಸತತ 5 ಸೋಲಿನಿಂದ ಕಂಗೆಟ್ಟಿರುವ ಸ್ಮೃತಿ ಮಂಧಾನ(Smriti Mandhana) ಸಾರಥ್ಯದ ಆರ್ಸಿಬಿ ಈಗಾಗಲೇ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಆದರೆ ಗೆಲುವಿನ ಖಾತೆ ತೆರೆಯುವ ನಿಟ್ಟಿನಲ್ಲಿ ಆರ್ಸಿಬಿಗೆ ಇಂದೊಂದು ಮಹತ್ವದ ಪಂದ್ಯ ಅಷ್ಟೆ. ಎದುರಾಳಿ ಯುಪಿ ವಾರಿಯರ್ಸ್ಗೆ ಈ ಪಂದ್ಯದಲ್ಲಿ ಗೆಲ್ಲವು ಅತ್ಯಗತ್ಯ. ಏಕೆಂದರೆ ಪ್ಲೇ-ಅಪ್ ರೇಸ್ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇ ಬೇಕು.
ಸದ್ಯ ಯುಪಿ ವಾರಿಯರ್ಸ್ ಆಡಿದ 4 ಪಂದ್ಯಗಳಲ್ಲಿ ತಲಾ ಎರಡು ಗೆಲುವು ಮತ್ತು ಸೋಲು ಕಾಣುವ ಮೂಲಕ 4 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ಪಂದ್ಯಲ್ಲಿ ಗೆದ್ದರೂ 6 ಅಂಕ ಸಂಪಾದಿಸಿ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಈ ಮೂಲಕ ಮೂರನೇ ತಂಡವಾಗಿ ಎಲಿಮಿನೇಟರ್ ಪ್ರವೇಶ ಪಡೆಯುವ ಯೋಜನೆಯಲ್ಲಿದೆ.
ಇದನ್ನೂ ಓದಿ WPL 2023 : ಮುಂಬಯಿ ತಂಡಕ್ಕೆ ಐದನೇ ಗೆಲುವು, ಗುಜರಾತ್ ಜಯಂಟ್ಸ್ಗೆ 55 ರನ್ ಹೀನಾಯ ಸೋಲು
ಒಂದೊಮ್ಮೆ ಆರ್ಸಿಬಿ ಈ ಪಂದ್ಯದಲ್ಲಿಯೂ ಸೋತರೆ ಮುಂದಿನ ಆವೃತ್ತಿಗೆ ಸ್ಮೃತಿ ಮಂಧಾನ ಅವರು ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯೂ ದಟ್ಟವಾಗಿದೆ. ಇನ್ನೊಂದೆಡೆ ತಂಡದ ಬೌಲರ್ ರೇಣುಕಾ ಸಿಂಗ್ ಠಾಕೂರ್ ಅವರನ್ನು ಮುಂದಿನ ಬಾರಿ ತಂಡದಿಂದ ಕೈಬಿಡುವ ಸಾಧ್ಯತೆ ಇದೆ.