ನವದೆಹಲಿ: ಭಾರತದ ಕುಸ್ತಿಪಟು ಸಂಗೀತಾ ಫೋಗಟ್ (Sangeeta Phogat) ಮತ್ತು ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಶುಕ್ರವಾರ ರಾತ್ರಿ ಝಲಕ್ ದಿಖ್ಲಾ ಜಾ ಪಾರ್ಟಿಯಲ್ಲಿ ಭರ್ಜರಿ ಡಾನ್ಸ್ ಮಾಡಿದ್ದು ವೈರಲ್ ಆಗಿದೆ. ಈ ವೇಳೆ ಚಹಲ್ ಅವರನ್ನು ಸಂಗೀತಾ ಎತ್ತಿ ಬೆನ್ನಿಗೆ ಕೂರಿಸಿದ ಪ್ರಸಂಗವೂ ನಡೆದಿದೆ.
ಯಜುವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಈ ಜನಪ್ರಿಯ ನೃತ್ಯ ಕಾರ್ಯಕ್ರಮದ ಅಂತಿಮ ಐದು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಸಂಗೀತಾ ಫೋಗಟ್ ಈಗಾಗಲೇ ಸ್ಪರ್ಧೆಯಿಂದ ಹೊರಗೆ ಬಿದ್ದಿದ್ದಾರೆ . ಝಲಕ್ ದಿಖ್ಲಾ ಜಾ ನೃತ್ಯ ಪ್ರದರ್ಶನದಲ್ಲಿ ಚಾಹಲ್ ತಮ್ಮ ಪತ್ನಿಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ಏಕೆಂದರೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ಗಳು ಮತ್ತು ವೀಡಿಯೊಗಳ ಮೂಲಕ ವರ್ಮಾಗೆ ಮತ ಚಲಾಯಿಸುವಂತೆ ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಸಂಗೀತಾ ಫೋಗಟ್ ಅವರು ಯುಜ್ವೇಂದ್ರ ಚಹಲ್ ಅವರನ್ನು ಎತ್ತಿ ಬೆನ್ನ ಮೇಲೆ ಕೂರಿಸಿ ಗಿರ, ಗಿರ ತಿರುಗಿಸುತ್ತಾರೆ. ಗಲಿಬಿಲಿಗೊಂಡ ಚಹಲ್ ತಲೆ ಸುತ್ತುತ್ತಿದೆ ಕೆಳಕ್ಕೆ ಇಳಿಸು ಎಂದು ಮನವಿ ಮಾಡುತ್ತಲೇ ಇರುತ್ತಾರೆ. ಆದರೂ ಅವರು ಇಳಿಸುವುದಿಲ್ಲ. ಕೊನೆಗೆ ಅವರು ಇಳಿಸುತ್ತಾರೆ.
ಧನಶ್ರೀ ಫೇವರಿಟ್ ಸ್ಪರ್ಧಿ
ಯಜುವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು ಝಲಕ್ ದಿಖ್ಲಾ ಜಾದ ಪ್ರಸ್ತುತ ಸೀಸನ್ ಅನ್ನು ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರು . ಕಾರ್ಯಕ್ರಮದ ಅಂತಿಮ ಕಂತು ಶನಿವಾರ ಸೋನಿ ಟಿವಿಯಲ್ಲಿ ನೇರ ಪ್ರಸಾರವಾಗಿದೆ.
ಧನಶ್ರೀ ಗ್ರ್ಯಾಂಡ್ ಫಿನಾಲೆಯ ಫೈನಲ್ನಲ್ಲಿ ಜನಪ್ರಿಯ ನಟ ಶೋಯೆಬ್ ಇಬ್ರಾಹಿಂ ಮತ್ತು ಮಾಜಿ ಇಂಡಿಯನ್ ಐಡಲ್ ವಿಜೇತ ಶ್ರೀರಾಮ ಚಂದ್ರ ಅವರಿಗೆ ಕಠಿಣ ಸ್ಪರ್ಧೆ ಎದುರಿಸಿದ್ದಾರೆ. ಚಾಹಲ್ ಅವರ ಪತ್ನಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿದ್ದರೂ ಜನಪ್ರಿಯ ನೃತ್ಯ ಪ್ರದರ್ಶನದಲ್ಲಿ ಟಾಪ್ 5 ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಏತನ್ಮಧ್ಯೆ, ಭಾರತದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಟಗಾರರ ಕೇಂದ್ರ ಒಪ್ಪಂದದಿಂದ ಹೊರಗಿಡಲಾಗಿದೆ. 32 ವರ್ಷದ ಅವರು ಹಿಂದಿನ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿದ್ದರು ಹಾಗೂ ವಾರ್ಷಿಕ 1 ಕೋಟಿ ರೂ. ಪಡೆಯುತ್ತಿದ್ದರು.
ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ 20 ಐ ಸರಣಿಯಲ್ಲಿ ಚಾಹಲ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಅವರು ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತ ತಂಡದೊಂದಿಗೆ ಇದ್ದರು ಆದರೆ ಇಡೀ ಪ್ರವಾಸದಲ್ಲಿ ಒಂದು ಪಂದ್ಯವನ್ನೂ ಆಡಿರಲಿಲ್ಲ . ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ತಂಡಗಳಿಗೆ 32 ವರ್ಷದ ಆಟಗಾರನನ್ನು ಆಯ್ಕೆ ಮಾಡಲಾಗಿಲ್ಲ.