Site icon Vistara News

Padma Award Return: ಕುಸ್ತಿಪಟುಗಳ ಬೆಂಬಲಕ್ಕಾಗಿ ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡಿದ ‘ಗೂಂಗಾ ಪೈಲ್ವಾನ್’!

Wrestler Virender Singh returns padma award in Solidarity With Wrestlers

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬ್ರಿಜ್‌ ಭೂಷಣ್ ಸಿಂಗ್‌ (Brij Bhushan Sharan Singh) ನಿಕಟವರ್ತಿಯೊಬ್ಬರು ಕುಸ್ತಿ ಫೆಡರೇಷನ್‌ಗೆ (WFI President) ಆಯ್ಕೆಯಾಗಿರುವುದನ್ನು ವಿರೋಧಿಸಿ ಕುಸ್ತಿಪಟು ಬಜರಂಗ ಪುನಿಯಾ (Bajrang Punia) ತಮ್ಮ ಪದ್ಮಶ್ರೀ ಪ್ರಶಸ್ತಿ ವಾಪಸ್ (Padma Award Return) ಮಾಡಿದ ಬೆನ್ನಲ್ಲೇ, ಗೂಂಗಾ ಪೈಲ್ವಾನ್(ಮೂಕ ಕುಸ್ತಿಪಟು) ಎಂದು ಹೇಳಿಕೊಳ್ಳುವ ವಿರೇಂದ್ರ ಸಿಂಗ್ (Virender Singh) ಅವರೂ ತಮ್ಮ ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡುವುದಾಗಿ ಘೋಷಿಸಿದ್ದಾರೆ. ಅನ್ಯಾಯವನ್ನು ವಿರೋಧಿಸಿ ನಿವೃತ್ತಿ ಘೋಷಿಸಿದ ಸಾಕ್ಷಿ ಮಲಿಕ್ (sakshi malik) ಅವರಿಗೆ ಬೆಂಬಲ ನೀಡುವುದಕ್ಕಾಗಿ ಪದ್ಮಶ್ರೀ ಪ್ರಶಸ್ತಿ ವಾಪಸ್ ನೀಡುತ್ತಿರುವುದಾಗಿ ವೀರೇಂದ್ರ ಸಿಂಗ್ ಅವರು ಹೇಳಿದ್ದಾರೆ.

ನನ್ನ ಸಹೋದರಿ ಹಾಗೂ ದೇಶ ಪುತ್ರಿ ಸಾಕ್ಷಿ ಮಲಿಕ್‌ಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡುತ್ತಿದ್ದೇನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ನಿಮ್ಮ ಮಗಳು ಹಾಗೂ ನನ್ನ ಸಹೋದರಿ ಸಾಕ್ಷಿ ಮಲಿಕ್‌ಗಾಗಿ ಹೆಮ್ಮೆ ಪಡುತ್ತೇನೆ. ಆದರೆ, ನಾನು ಪ್ರಮುಖ ಆಟಗಾರರಿಗೂ ನಾನು ಮನವಿ ಮಾಡುತ್ತೇನೆ; ನಿಮ್ಮ ನಿರ್ಧಾರಗಳನ್ನು ತಿಳಿಸಿ ಎಂದು ರೇಂದರ ಸಿಂಗ್ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ಟ್ವೀಟ್‌ ಅನ್ನು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹಾಗೂ ಒಲಂಪಿಕ್ ಪದಕ ವಿಜೇತ ನೀರಜ್ ಛೋಪ್ರಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಬಾಕ್ಸರ್ ವಿಜೇಂದರ್ ಸಿಂಗ್ ಕೂಡ ನಿನ್ನೆ ಮಲಿಕ್‌ಗೆ ಬೆಂಬಲ ಘೋಷಿಸಿದ್ದಾರೆ. ಒಲಿಂಪಿಕ್ ಪದಕ ವಿಜೇತರಿಗೆ ನ್ಯಾಯ ದೊರೆಯದಿದ್ದರೆ, ನ್ಯಾಯ ಪಡೆಯಲು ಎಂದು ಹೆಣ್ಣುಮಕ್ಕಳ ಪೋಷಕರು ಚಿಂತಿಸುತ್ತಾರೆ? ಪ್ರಧಾನಿ, ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿ ಎಲ್ಲರೂ ಏಕೆ ಹೀಗಾಯ್ತು ಎಂದು ಉತ್ತರಿಸಬೇಕು. ನ್ಯಾಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಈ ಪ್ರಕರಣವು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ ಎಂದು ವಿಜೇಂದರ್ ಸಿಂಗ್ ಹೇಳಿದ್ದಾರೆ.

ಪದ್ಮ ಶ್ರೀ ಪ್ರಶಸ್ತಿಯನ್ನು ಫುಟ್​ಪಾತ್​ ಮೇಲೆ ಇಟ್ಟು ಹೋದ ಬಜರಂಗ್ ಪುನಿಯಾ

ಭಾರತೀಯ ಕುಸ್ತಿ ಒಕ್ಕೂಟಕ್ಕೆ ಮಾಜಿ ಅಧ್ಯಕ್ಷ ಬ್ರಿಜ್​ಭೂಷಣ್​ ಸಿಂಗ್ ಅವರ ಆಪ್ತ ಸಂಜಯ್​ ಸಿಂಗ್ ಆಯ್ಕೆಯಾದ ಬಳಿಕ ಅಂತಾರಾಷ್ಟ್ರೀಯ ಕುಸ್ತಿಪಟುಗಳ ಬಣವೊಂದು ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದಿದೆ. ಮಾಜಿ ಒಲಿಂಪಿಯನ್​ ಸಾಕ್ಷಿ ಮಲಿಕ್​ ಗುರವಾರ ತಮ್ಮ ಬೂಟ್​ ಮೇಜಿನ ಮೇಲಿಟ್ಟು ನಿವೃತ್ತಿ ಘೋಷಿಸಿದ್ದರೆ, ಶುಕ್ರವಾರ ವಿಶ್ವ ಚಾಂಪಿಯನ್​ ಬಜ್​ರಂಗ್​ ಪೂನಿಯಾ (Bajrang Punia) ತಮಗೆ ಸಿಕ್ಕ ಪದ್ಮಶ್ರೀ ಪ್ರಶಸ್ತಿಯನ್ನು ಮರಳಿಸುವುದಾಗಿ ಘೋಷಿಸಿದ್ದಾರೆ. ಪ್ರಶಸ್ತಿಯನ್ನು ನೀಡಲು ಹೋಗುತ್ತಿದ್ದ ಅವರಿಗೆ ತಡೆಯೊಡ್ಡಿದ್ದ ಕಾರಣ ಪದಕವನ್ನು ಅವರು ನವದೆಹಲಿಯ ಕರ್ತವ್ಯ ಪಥದ ಫುಟ್​ಪಾತ್​ನಲ್ಲಿಟ್ಟು ಮರಳಿದ್ದಾರೆ.

ಕರ್ತವ್ಯ ಪಥದಲ್ಲಿ ಪದ್ಮಶ್ರೀ ಬಿಟ್ಟು ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುನಿಯಾ, ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ, ಆದರೆ ಪದಕವನ್ನು ಮನೆಗೆ ಕೊಂಡೊಯ್ಯುವುದಿಲ್ಲ. ಹೀಗಾಗಿ ಅಲ್ಲಿಯೇ ಬಿಟ್ಟು ಬಂದಿದ್ದೇನೆ ಎಂದು ಹೇಳಿದ್ದಾರೆ.

ನಾನು ಮೊದಲೇ ಹೇಳಿದಂತೆ ನಾವು ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರಿಗಾಗಿ ಹೋರಾಡುತ್ತಿದ್ದೆವು. ಅವರಿಗೆ ನ್ಯಾಯ ದೊರಕಿಸಿಕೊಡಲು ನನಗೆ ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ, ನಾನು ಈ ಗೌರವಕ್ಕೆ ಅರ್ಹನಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಶಸ್ತಿಯನ್ನು ಹಿಂದಿರುಗಿಸಲು ನಾನು ಇಲ್ಲಿಗೆ ಬಂದಿದ್ದೇನೆ/ ಆದಾಗ್ಯೂ, ನನಗೆ ಭೇಟಿಗೆ ಅವಕಾಶ ನೀಡಿದ ಕಾರಣ ನಾನು ಪ್ರಧಾನಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಪ್ರಧಾನಿಗೆ ಬಿಡುವಿಲ್ಲದ ವೇಳಾಪಟ್ಟಿ ಇದೆ. ಆದ್ದರಿಂದ ನಾನು ಪ್ರಧಾನಿಗೆ ಬರೆದ ಪತ್ರದ ಜತೆ ನನ್ನ ಪ್ರಶಸ್ತಿಯನ್ನು ಇಡುತ್ತಿದ್ದೇನೆ. ನಾನು ಈ ಪದಕವನ್ನು ನನ್ನ ಮನೆಗೆ ಕೊಂಡೊಯ್ಯುವುದಿಲ್ಲ” ಎಂದು ಪುನಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Sakshi Malik : ಕುಸ್ತಿ ಕ್ಷೇತ್ರ ತೊರೆಯುವ ಬೆದರಿಕೆ ಒಡ್ಡಿದ ಒಲಿಂಪಿಕ್ಸ್​ ಪದಕ ವಿಜೇತೆ ಸಾಕ್ಷಿ ಮಲಿಕ್​

Exit mobile version