Padma Award Return: ಕುಸ್ತಿಪಟುಗಳ ಬೆಂಬಲಕ್ಕಾಗಿ ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡಿದ 'ಗೂಂಗಾ ಪೈಲ್ವಾನ್'! - Vistara News

ಕ್ರೀಡೆ

Padma Award Return: ಕುಸ್ತಿಪಟುಗಳ ಬೆಂಬಲಕ್ಕಾಗಿ ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡಿದ ‘ಗೂಂಗಾ ಪೈಲ್ವಾನ್’!

Padma Award Return: ಕುಸ್ತಿಪಟು ಬಜರಂಗ ಪುನಿಯಾ ಅವರು ನಿನ್ನೆಯಷ್ಟೇ ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡುತ್ತಿರುವುದಾಗಿ ಘೋಷಿಸಿದ್ದರು. ಈಗ ಆ ಸಾಲಿಗೆ ಮತ್ತೊಬ್ಬ ಕ್ರೀಡಾಳು ಸೇರಿದ್ದಾರೆ.

VISTARANEWS.COM


on

Wrestler Virender Singh returns padma award in Solidarity With Wrestlers
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬ್ರಿಜ್‌ ಭೂಷಣ್ ಸಿಂಗ್‌ (Brij Bhushan Sharan Singh) ನಿಕಟವರ್ತಿಯೊಬ್ಬರು ಕುಸ್ತಿ ಫೆಡರೇಷನ್‌ಗೆ (WFI President) ಆಯ್ಕೆಯಾಗಿರುವುದನ್ನು ವಿರೋಧಿಸಿ ಕುಸ್ತಿಪಟು ಬಜರಂಗ ಪುನಿಯಾ (Bajrang Punia) ತಮ್ಮ ಪದ್ಮಶ್ರೀ ಪ್ರಶಸ್ತಿ ವಾಪಸ್ (Padma Award Return) ಮಾಡಿದ ಬೆನ್ನಲ್ಲೇ, ಗೂಂಗಾ ಪೈಲ್ವಾನ್(ಮೂಕ ಕುಸ್ತಿಪಟು) ಎಂದು ಹೇಳಿಕೊಳ್ಳುವ ವಿರೇಂದ್ರ ಸಿಂಗ್ (Virender Singh) ಅವರೂ ತಮ್ಮ ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡುವುದಾಗಿ ಘೋಷಿಸಿದ್ದಾರೆ. ಅನ್ಯಾಯವನ್ನು ವಿರೋಧಿಸಿ ನಿವೃತ್ತಿ ಘೋಷಿಸಿದ ಸಾಕ್ಷಿ ಮಲಿಕ್ (sakshi malik) ಅವರಿಗೆ ಬೆಂಬಲ ನೀಡುವುದಕ್ಕಾಗಿ ಪದ್ಮಶ್ರೀ ಪ್ರಶಸ್ತಿ ವಾಪಸ್ ನೀಡುತ್ತಿರುವುದಾಗಿ ವೀರೇಂದ್ರ ಸಿಂಗ್ ಅವರು ಹೇಳಿದ್ದಾರೆ.

ನನ್ನ ಸಹೋದರಿ ಹಾಗೂ ದೇಶ ಪುತ್ರಿ ಸಾಕ್ಷಿ ಮಲಿಕ್‌ಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡುತ್ತಿದ್ದೇನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ನಿಮ್ಮ ಮಗಳು ಹಾಗೂ ನನ್ನ ಸಹೋದರಿ ಸಾಕ್ಷಿ ಮಲಿಕ್‌ಗಾಗಿ ಹೆಮ್ಮೆ ಪಡುತ್ತೇನೆ. ಆದರೆ, ನಾನು ಪ್ರಮುಖ ಆಟಗಾರರಿಗೂ ನಾನು ಮನವಿ ಮಾಡುತ್ತೇನೆ; ನಿಮ್ಮ ನಿರ್ಧಾರಗಳನ್ನು ತಿಳಿಸಿ ಎಂದು ರೇಂದರ ಸಿಂಗ್ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ಟ್ವೀಟ್‌ ಅನ್ನು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹಾಗೂ ಒಲಂಪಿಕ್ ಪದಕ ವಿಜೇತ ನೀರಜ್ ಛೋಪ್ರಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಬಾಕ್ಸರ್ ವಿಜೇಂದರ್ ಸಿಂಗ್ ಕೂಡ ನಿನ್ನೆ ಮಲಿಕ್‌ಗೆ ಬೆಂಬಲ ಘೋಷಿಸಿದ್ದಾರೆ. ಒಲಿಂಪಿಕ್ ಪದಕ ವಿಜೇತರಿಗೆ ನ್ಯಾಯ ದೊರೆಯದಿದ್ದರೆ, ನ್ಯಾಯ ಪಡೆಯಲು ಎಂದು ಹೆಣ್ಣುಮಕ್ಕಳ ಪೋಷಕರು ಚಿಂತಿಸುತ್ತಾರೆ? ಪ್ರಧಾನಿ, ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿ ಎಲ್ಲರೂ ಏಕೆ ಹೀಗಾಯ್ತು ಎಂದು ಉತ್ತರಿಸಬೇಕು. ನ್ಯಾಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಈ ಪ್ರಕರಣವು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ ಎಂದು ವಿಜೇಂದರ್ ಸಿಂಗ್ ಹೇಳಿದ್ದಾರೆ.

ಪದ್ಮ ಶ್ರೀ ಪ್ರಶಸ್ತಿಯನ್ನು ಫುಟ್​ಪಾತ್​ ಮೇಲೆ ಇಟ್ಟು ಹೋದ ಬಜರಂಗ್ ಪುನಿಯಾ

ಭಾರತೀಯ ಕುಸ್ತಿ ಒಕ್ಕೂಟಕ್ಕೆ ಮಾಜಿ ಅಧ್ಯಕ್ಷ ಬ್ರಿಜ್​ಭೂಷಣ್​ ಸಿಂಗ್ ಅವರ ಆಪ್ತ ಸಂಜಯ್​ ಸಿಂಗ್ ಆಯ್ಕೆಯಾದ ಬಳಿಕ ಅಂತಾರಾಷ್ಟ್ರೀಯ ಕುಸ್ತಿಪಟುಗಳ ಬಣವೊಂದು ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದಿದೆ. ಮಾಜಿ ಒಲಿಂಪಿಯನ್​ ಸಾಕ್ಷಿ ಮಲಿಕ್​ ಗುರವಾರ ತಮ್ಮ ಬೂಟ್​ ಮೇಜಿನ ಮೇಲಿಟ್ಟು ನಿವೃತ್ತಿ ಘೋಷಿಸಿದ್ದರೆ, ಶುಕ್ರವಾರ ವಿಶ್ವ ಚಾಂಪಿಯನ್​ ಬಜ್​ರಂಗ್​ ಪೂನಿಯಾ (Bajrang Punia) ತಮಗೆ ಸಿಕ್ಕ ಪದ್ಮಶ್ರೀ ಪ್ರಶಸ್ತಿಯನ್ನು ಮರಳಿಸುವುದಾಗಿ ಘೋಷಿಸಿದ್ದಾರೆ. ಪ್ರಶಸ್ತಿಯನ್ನು ನೀಡಲು ಹೋಗುತ್ತಿದ್ದ ಅವರಿಗೆ ತಡೆಯೊಡ್ಡಿದ್ದ ಕಾರಣ ಪದಕವನ್ನು ಅವರು ನವದೆಹಲಿಯ ಕರ್ತವ್ಯ ಪಥದ ಫುಟ್​ಪಾತ್​ನಲ್ಲಿಟ್ಟು ಮರಳಿದ್ದಾರೆ.

ಕರ್ತವ್ಯ ಪಥದಲ್ಲಿ ಪದ್ಮಶ್ರೀ ಬಿಟ್ಟು ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುನಿಯಾ, ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ, ಆದರೆ ಪದಕವನ್ನು ಮನೆಗೆ ಕೊಂಡೊಯ್ಯುವುದಿಲ್ಲ. ಹೀಗಾಗಿ ಅಲ್ಲಿಯೇ ಬಿಟ್ಟು ಬಂದಿದ್ದೇನೆ ಎಂದು ಹೇಳಿದ್ದಾರೆ.

ನಾನು ಮೊದಲೇ ಹೇಳಿದಂತೆ ನಾವು ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರಿಗಾಗಿ ಹೋರಾಡುತ್ತಿದ್ದೆವು. ಅವರಿಗೆ ನ್ಯಾಯ ದೊರಕಿಸಿಕೊಡಲು ನನಗೆ ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ, ನಾನು ಈ ಗೌರವಕ್ಕೆ ಅರ್ಹನಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಶಸ್ತಿಯನ್ನು ಹಿಂದಿರುಗಿಸಲು ನಾನು ಇಲ್ಲಿಗೆ ಬಂದಿದ್ದೇನೆ/ ಆದಾಗ್ಯೂ, ನನಗೆ ಭೇಟಿಗೆ ಅವಕಾಶ ನೀಡಿದ ಕಾರಣ ನಾನು ಪ್ರಧಾನಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಪ್ರಧಾನಿಗೆ ಬಿಡುವಿಲ್ಲದ ವೇಳಾಪಟ್ಟಿ ಇದೆ. ಆದ್ದರಿಂದ ನಾನು ಪ್ರಧಾನಿಗೆ ಬರೆದ ಪತ್ರದ ಜತೆ ನನ್ನ ಪ್ರಶಸ್ತಿಯನ್ನು ಇಡುತ್ತಿದ್ದೇನೆ. ನಾನು ಈ ಪದಕವನ್ನು ನನ್ನ ಮನೆಗೆ ಕೊಂಡೊಯ್ಯುವುದಿಲ್ಲ” ಎಂದು ಪುನಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Sakshi Malik : ಕುಸ್ತಿ ಕ್ಷೇತ್ರ ತೊರೆಯುವ ಬೆದರಿಕೆ ಒಡ್ಡಿದ ಒಲಿಂಪಿಕ್ಸ್​ ಪದಕ ವಿಜೇತೆ ಸಾಕ್ಷಿ ಮಲಿಕ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

RCB: ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ಸೋಲಿಗೆ ವಿಜಯ್​ ಮಲ್ಯ ಕಾರಣವಂತೆ!

RCB: ನೆಟ್ಟಿಗರು ಮಲ್ಯ ಶುಭ ಹಾರೈಕೆಯಿಂದಲೇ ಆರ್​ಸಿಬಿ ಸೋಲು ಕಂಡಿದೆ ಎಂದು ಹೇಳಲಾರಂಭಿಸಿದ್ದಾರೆ. ಮಲ್ಯ ಹಾರೈಕೆಗೂ ಮುನ್ನ ಆರ್​​ಸಿಬಿ ಉತ್ತಮವಾಗಿ ಆಡುತ್ತಿತ್ತು. ಮಲ್ಯ ಹಾರೈಕೆಯಿಂದ ಆರ್​ಸಿಬಿ ಆಟಗಾರರಿಗೆ ಹಳೆಯ ಪಾರ್ಟಿಗಳು ನೆನೆಪಿಗೆ ಬಂದಿರಬೇಕು ಇದೇ ಗುಂಗಿನಲ್ಲಿ ಪಂದ್ಯ ಸೋತುರು ಎಂದು ಕಾಲೆಳೆದಿದ್ದಾರೆ.

VISTARANEWS.COM


on

RCB
Koo

ಬೆಂಗಳೂರು: ಬುಧವಾರ ರಾತ್ರಿ ನಡೆದ ಐಪಿಎಲ್​ನ(IPL 2024) ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB) ತಂಡ ರಾಜಸ್ಥಾನ್​(Rajasthan Royals) ವಿರುದ್ಧ 4 ವಿಕೆಟ್​ ಅಂತರದ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಈ ಸೋಲಿಗೆ ತಂಡದ ಮಾಜಿ ಮಾಲಿಕ ವಿಜಯ್​ ಮಲ್ಯ(Vijay Mallya) ಎಂದು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

ಹೌದು, ಆರ್​ಸಿಬಿ ತಂಡ ಆರಂಭಿಕ ಹಂತದಲ್ಲಿ ಸತತವಾಗಿ ಸೋಲಿಗೆ ಸಿಲುಕಿ ಇನ್ನೇನು ಟೂರ್ನಿಯಿಂದ ಹೊರಬೀಳುತ್ತದೆ ಎನ್ನುವಷ್ಟರಲ್ಲಿ ಪುಟಿದೆದ್ದು ಸತತವಾಗಿ 6 ಪಂದ್ಯ ಗೆದ್ದು ಅಚ್ಚರಿ ಎಂಬಂತೆ ಪ್ಲೇ ಆಫ್​ ಪ್ರವೇಶಿಸಿತ್ತು. ಇದೇ ಖುಷಿಯಲ್ಲಿ ವಿಜಯ್​ ಮಲ್ಯ ತಂಡಕ್ಕೆ ಶುಭ ಹಾರೈಸಿದ್ದರು.

“ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ತಂಡಕ್ಕೆ ಹೃದಯ ಪೂರಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸತತ ಸೋಲುಗಳಿಂದ ಗೆಲುವಿನ ಟ್ರ್ಯಾಕ್​ಗೆ ಮರಳಿರುವುದು ಅದ್ಭುತ. ಟ್ರೋಫಿ ಗೆಲ್ಲುವ ಕಡೆಗೆ ಆರ್​ಸಿಬಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಬೇಕು” ಎಂದು ಮುಂದಿನ ಪಂದ್ಯಗಳಿಗೂ ಶುಭ ಹಾರೈಸಿದ್ದರು.

ಎಲಿಮಿನೇಟರ್​ ಪಂದ್ಯ ಆರಂಭಕ್ಕೂ ಕೂಡ ಮಲ್ಯ ಟ್ವೀಟ್​ ಮೂಲಕ ಶುಭ ಹಾರೈಸಿ, ‘ನಾನು ಆರ್‌ಸಿಬಿ ಫ್ರಾಂಚೈಸಿಗಾಗಿ ಬಿಡ್ ಮಾಡಿದಾಗ, ವಿರಾಟ್‌ ಕೊಹ್ಲಿಗೆ ಬಿಡ್ ಮಾಡಿದಾಗ, ನಾನು ಇದಕ್ಕಿಂತ ಉತ್ತಮ ಆಯ್ಕೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ನನ್ನ ಆಂತರಾತ್ಮ ಹೇಳಿತ್ತು. ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲು ಆರ್‌ಸಿಬಿಗೆ ಉತ್ತಮ ಅವಕಾಶವಿದೆ ಎಂದು ನನ್ನ ಮನಸ್ಸು ಹೇಳುತ್ತಿದೆ. ತಂಡಕ್ಕೆ ಶುಭವಾಗಲಿ’ ಎಂದು ಹಾರೈಸಿದ್ದರು.

ಇದನ್ನೂ ಓದಿ Virat Kohli: ಅಂದು ವಿಶ್ವಕಪ್​ನಲ್ಲಿ, ಇಂದು ಐಪಿಎಲ್​ನಲ್ಲಿ ವಿಕೆಟ್​ ಬೇಲ್ಸ್​ ಹಾರಿಸಿ ಬೇಸರದಿಂದ ಮೈದಾನ ತೊರೆದ ಕೊಹ್ಲಿ

ಇದೀಗ ನೆಟ್ಟಿಗರು ಮಲ್ಯ ಶುಭ ಹಾರೈಕೆಯಿಂದಲೇ ಆರ್​ಸಿಬಿ ಸೋಲು ಕಂಡಿದೆ ಎಂದು ಹೇಳಲಾರಂಭಿಸಿದ್ದಾರೆ. ಮಲ್ಯ ಹಾರೈಕೆಗೂ ಮುನ್ನ ಆರ್​​ಸಿಬಿ ಉತ್ತಮವಾಗಿ ಆಡುತ್ತಿತ್ತು. ಮಲ್ಯ ಹಾರೈಕೆಯಿಂದ ಆರ್​ಸಿಬಿ ಆಟಗಾರರಿಗೆ ಹಳೆಯ ಪಾರ್ಟಿಗಳು ನೆನೆಪಿಗೆ ಬಂದಿರಬೇಕು ಇದೇ ಗುಂಗಿನಲ್ಲಿ ಪಂದ್ಯ ಸೋತುರು ಎಂದು ಕಾಲೆಳೆದಿದ್ದಾರೆ. ಮಲ್ಯ ಅವರು ಆರ್​ಸಿಬಿಯ ಮಾಲಿಕರಾಗಿದ್ದಾಗ ಪಂದ್ಯ ಗೆದ್ದ ಬಳಿಕ ಆಟಗಾರರಿಗೆ ಫುಲ್​ ಪಾರ್ಟಿ ನೀಡುತ್ತಿದ್ದರು. ಶುಭ ಹಾರೈಸದೇ ಇದ್ದಿದ್ದರೆ ಆಟಗಾರರಿಗೆ ಹಳೆಯ ನೆನಪು ಮತ್ತೆ ಮರುಕಳಿಸುತ್ತಿರಲ್ಲಿ. ಜತೆಗೆ ಪಂದ್ಯವನ್ನೂ ಕೂಡ ಗೆಲ್ಲುತ್ತಿದ್ದರು ಎಂದು ಕಮೆಂಟ್​ ಮಾಡಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಆಟಗಾರ ತುಷಾರ್‌ ದೇಶ್‌ಪಾಂಡೆ ಕೂಡ ಆರ್‌ಸಿಬಿಯನ್ನು ಟ್ರೋಲ್​ ಮಾಡಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ನ ಫ್ಯಾನ್ಸ್ ಪೇಜ್‌ವೊಂದು ಬೆಂಗಳೂರು ದಂಡು ರೈಲ್ವೇ ನಿಲ್ದಾಣದ (Bangalore cant) ಫೋಟೋವನ್ನು ಹಂಚಿಕೊಂಡಿದೆ. ಈ ಮೂಲಕ ಬೆಂಗಳೂರು ತಂಡದಿಂದ ಕಪ್‌ ಗೆಲ್ಲಲು ಸಾಧ್ಯವಿಲ್ಲ ಎಂಬರ್ಥದಲ್ಲಿ ಈ ಮೀಮ್ಸ್ ಅನ್ನು ಸಿಎಸ್‌ಕೆ ಫ್ಯಾನ್ ಪೇಜ್‌ ಹಂಚಿಕೊಂಡಿದೆ. ಈ ಮೀಮ್ಸ್‌ ಅನ್ನು ತುಷಾರ್‌ ದೇಶ್‌ಪಾಂಡೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ.

Continue Reading

ಕ್ರೀಡೆ

Virat Kohli: ಅಂದು ವಿಶ್ವಕಪ್​ನಲ್ಲಿ, ಇಂದು ಐಪಿಎಲ್​ನಲ್ಲಿ ವಿಕೆಟ್​ ಬೇಲ್ಸ್​ ಹಾರಿಸಿ ಬೇಸರದಿಂದ ಮೈದಾನ ತೊರೆದ ಕೊಹ್ಲಿ

Virat Kohli: ವಿಶ್ವಕಪ್​ ಸರಣಿಯಲ್ಲೂ ಕೊಹ್ಲಿ ಟೂರ್ನಿಯ ಅತ್ಯಧಿಕ ರನ್​ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಈ ಬಾರಿ ಐಪಿಎಲ್​ನಲ್ಲಿಯೂ ಕೊಹ್ಲಿ ಅತ್ಯಧಿಕ ರನ್​ ಬಾರಿಸಿದ ಆಟಗಾರನಾಗಿದ್ದಾರೆ. ಆದರೆ ಕಪ್​ ಗೆಲ್ಲಲು ಮಾತ್ರ ಅವರಿಂದ ಸಾಧ್ಯವಾಗಿಲ್ಲ

VISTARANEWS.COM


on

Virat Kohli
Koo

ಅಹಮದಾಬಾದ್​: ಆರ್​ಸಿಬಿಯ(RCB) ಹೊಸ ಅಧ್ಯಾಯ ಎಲಿಮಿನೇಟರ್​ ಪಂದ್ಯಕ್ಕೆ ಮುಕ್ತಾಯ ಕಂಡಿದೆ. ಬುಧವಾರ ನಡೆದ ರಾಜಸ್ಥಾನ್(Rajasthan Royals)​ ವಿರುದ್ಧದ ಎಲಿಮಿನೇಟರ್​ ಪಂದ್ಯದಲ್ಲಿ 4 ವಿಕೆಟ್​ ಸೋಲು ಕಾಣವ ಮೂಲಕ ಟೂರ್ನಿಯಿಂದ ಹೊರಬಿದ್ದಿತು. ಜತೆಗೆ ಅಭಿಮಾನಿಗಳ ಈ ಸಲ ಕಪ್​ ನಮ್ದೇ ಎನ್ನುವ ಕನಸು ಮತ್ತೆ ಕನಸಾಗಿಯೇ ಉಳಿಯಿತು. ಪಂದ್ಯದ ಸೋಲಿನ ಬಳಿಕ ವಿರಾಟ್​ ಕೊಹ್ಲಿ(Virat Kohli) ಭಾವುಕರಾಗಿ ಕಂಡು ಬಂದರು. ಈ ಫೋಟೊ ವೈರಲ್​ ಆಗಿದೆ.

ಕಳೆದ ವರ್ಷ ಭಾರತದಲ್ಲೇ, ಅದು ಕೂಡ ಅಹಮದಾಬಾದ್​ನಲ್ಲೇ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಾಣುವ ಮೂಲಕ ಟ್ರೋಫಿ ಗೆಲ್ಲಲು ವಿಫಲವಾಗಿತ್ತು. ಪಂದ್ಯ ಸೋಲುನ ಬಳಿಕ ವಿರಾಟ್​ ಕೊಹ್ಲಿ ಭಾವುಕರಾಗಿ ತಮ್ಮ ಕ್ಯಾಪ್​ನಿಂದ ವಿಕೆಟ್​ ಬೇಲ್ಸ್​ ಹಾರಿಸಿ ಬೇಸರದಿಂದ ಡಗೌಟ್​ ಕಡೆಗೆ ಹೆಜ್ಜೆ ಹಾಕಿದ್ದರು. ಐಪಿಎಲ್​ನಲ್ಲಿಯೂ ಕೊಹ್ಲಿ ಇದೇ ಮೈದಾನದಲ್ಲಿ ಮತ್ತೆ ಸೋಲು ಕಂಡಿದ್ದಾರೆ. ರಾಜಸ್ಥಾನ್​ ವಿರುದ್ಧ ಸೋತ ಹತಾಶೆಯಲ್ಲಿ ಕೊಹ್ಲಿ ಮತ್ತೆ ವಿಕೆಟ್​ ಬೇಲ್ಸ್​ ಹಾರಿಸಿ ಬೇಸರದಿಂದ ಹೆಜ್ಜೆ ಹಾಕಿದರು. ಈ ಫೋಟೊ ಕಂಡು ಕೊಹ್ಲಿಯ ಅಭಿಮಾನಿಗಳು ಭಾವುಕರಾಗಿದ್ದಾರೆ.

ವಿಶ್ವಕಪ್​ ಸರಣಿಯಲ್ಲೂ ಕೊಹ್ಲಿ ಟೂರ್ನಿಯ ಅತ್ಯಧಿಕ ರನ್​ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಈ ಬಾರಿ ಐಪಿಎಲ್​ನಲ್ಲಿಯೂ ಕೊಹ್ಲಿ ಅತ್ಯಧಿಕ ರನ್​ ಬಾರಿಸಿದ ಆಟಗಾರನಾಗಿದ್ದಾರೆ. ಆದರೆ ಕಪ್​ ಗೆಲ್ಲಲು ಮಾತ್ರ ಅವರಿಂದ ಸಾಧ್ಯವಾಗಿಲ್ಲ. ಕೊಹ್ಲಿ ನಿರ್ಣಾಯ ಪಂದ್ಯಗಳಲ್ಲಿ ಬ್ಯಾಟಿಂಗ್​ ವೈಫಲ್ಯ ಕಾಣುವುದು ನಿಶ್ಚಿತ. ಇದಕ್ಕೆ ಹಲವು ನಿದರ್ಶನ ಕೂಡ ಇದೆ. ಲೀಗ್​ ಹಂತದಲ್ಲಿ ಪ್ರಚಂಡ ಬ್ಯಾಟಿಂಗ್​ ನಡೆಸಿದ್ದರೂ ಕೂಡ ನಿರ್ಣಾಯ ಪಂದ್ಯದಲ್ಲಿ ಅವರು ಯಾವತ್ತೂ ಕೂಡ ವಿಫಲರಾಗುತ್ತಾರೆ. ಈ ಬಾರಿ ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್​ ನಡೆಸಿದ್ದ ಕೊಹ್ಲಿ, ಎಲಿಮಿನೇಟರ್​ ಪಂದ್ಯದಲ್ಲಿ 33 ರನ್​ಗೆ ವಿಕೆಟ್ ಕಳೆದುಕೊಂಡರು.

ಇದನ್ನೂ ಓದಿ IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

ಎಲಿಮಿನೇಟರ್​ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ 8 ವಿಕೆಟಿಗೆ 172 ರನ್‌ ಗಳಿಸಿತು. ರಾಜಸ್ಥಾನ್‌ 19 ಓವರ್‌ಗಳಲ್ಲಿ 6 ವಿಕೆಟಿಗೆ 174 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಚೇಸಿಂಗ್​ ವೇಳೆ ರಾಜಸ್ಥಾನ್‌ ಬಿರುಸಿನ ಆಡವಾಡಿತು. ಜೈಸ್ವಾಲ್‌ (45)-ಕ್ಯಾಡ್‌ಮೋರ್‌ (20) ಮೊದಲ ವಿಕೆಟ್​ಗೆ 46 ರನ್‌ ಜತೆಯಾಟ ನಿಭಾಯಿಸಿದರು. ಆ ಬಳಿಕ ಜೈಸ್ವಾಲ್‌-ಸ್ಯಾಮ್ಸನ್‌ ಜತೆಗೂಡಿ 35 ರನ್‌ ಕಲೆಹಾಕಿದರು. 112ಕ್ಕೆ 4 ವಿಕೆಟ್‌ ಬಿದ್ದಾಗ ಪಂದ್ಯ ಕುತೂಹಲ ಘಟ್ಟ ತಲುಪಿತು. ಆದರೆ ಪರಾಗ್‌-ಹೆಟ್‌ಮೈರ್‌ ಸಿಡಿದು ನಿಂತು 45 ರನ್‌ ಜತೆಯಾಟ ನಿಭಾಯಿಸಿ ಆರ್‌ಸಿಬಿಗೆ ಸೋಲುಣಿಸಿದರು. ಮೂರು ಓವರ್​ ತನಕ ಉತ್ತಮ ಲಯದಲ್ಲಿದ್ದ ಕ್ಯಾಮರೂನ್​ ಗ್ರೀನ್​ ನಾಲ್ಕನೇ ಓವರ್​ನಲ್ಲಿ ದುಬಾರಿಯಾದರು. ಹೆಟ್‌ಮೈರ್‌ ಈ ಓವರ್​ನಲ್ಲಿ ಸಿಕ್ಸರ್​ ಮತ್ತು ಬೌಂಡರಿಗಳ ಮೂಲಕ ಬಿಸಿ ಮುಟ್ಟಿಸಿದರು.

Continue Reading

ಕ್ರೀಡೆ

Dinesh Karthik: ಕೊಹ್ಲಿಯೊಂದಿಗೆ ಭಾವುಕ ಆಲಿಂಗನ; ಕ್ರಿಕೆಟ್​ ಜರ್ನಿ ಮುಗಿಸಿದ ದಿನೇಶ್​ ಕಾರ್ತಿಕ್​

Dinesh Karthik: ರಾಜಸ್ಥಾನದದ ರಾಯಲ್ಸ್​ ವಿರುದ್ಧದ ಎಲಿಮಿನೇಟರ್​ ಪಂದ್ಯವೇ ದಿನೇಶ್ ಕಾರ್ತಿಕ್(Dinesh Karthik) ವಿದಾಯ(dinesh karthik retirement) ಪಂದ್ಯ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಪಂದ್ಯ ಮುಕ್ತಾಯದ ಬಳಿಕ ಸಹ ಆಟಗಾರರು ಭಾವುಕರಾಗಿ ಕಾರ್ತಿಕ್​ಗೆ ಮೈದಾನದಲ್ಲಿಯೇ ತಬ್ಬಿಕೊಂಡು ವಿದಾಯ ಹೇಳಿದಂತಿತ್ತು. ಅದರಲ್ಲೂ ವಿರಾಟ್ ಕೊಹ್ಲಿಯೊಂದಿಗೆ(virat kohli) ಭಾವುಕ ಆಲಿಂಗನವನ್ನು ಹಂಚಿಕೊಂಡರು.

VISTARANEWS.COM


on

Dinesh Karthik
Koo

ಬೆಂಗಳೂರು: ಭಾರತ ಕ್ರಿಕೆಟ್​ ತಂಡದ ಹಿರಿಯ ವಿಕೆಟ್‌ ಕೀಪರ್ ಕಮ್​ ಬ್ಯಾಟರ್ ದಿನೇಶ್ ಕಾರ್ತಿಕ್(Dinesh Karthik) ಅವರು ಐಪಿಎಲ್​ಗೆ(IPL 2024) ನಿವೃತ್ತಿ ಹೇಳಿದ್ದಾರೆ ಎಂದು ವರದಿಯಾಗಿದೆ. ಅವರು ಅಧಿಕೃತವಾಗಿ ಕ್ರಿಕೆಟ್​ಗೆ ವಿದಾಯ ಹೇಳದಿದ್ದರೂ ಕೂಡ ನಿನ್ನೆ ನಡೆದ ರಾಜಸ್ಥಾನದದ ರಾಯಲ್ಸ್​ ವಿರುದ್ಧದ ಎಲಿಮಿನೇಟರ್​ ಪಂದ್ಯವೇ ಅವರಿಗೆ ವಿದಾಯ(dinesh karthik retirement) ಪಂದ್ಯ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಪಂದ್ಯ ಮುಕ್ತಾಯದ ಬಳಿಕ ಸಹ ಆಟಗಾರರು ಭಾವುಕರಾಗಿ ಕಾರ್ತಿಕ್​ಗೆ ಮೈದಾನದಲ್ಲಿಯೇ ತಬ್ಬಿಕೊಂಡು ವಿದಾಯ ಹೇಳಿದಂತಿತ್ತು. ಅದರಲ್ಲೂ ವಿರಾಟ್ ಕೊಹ್ಲಿಯೊಂದಿಗೆ(virat kohli) ಭಾವುಕ ಆಲಿಂಗನವನ್ನು ಹಂಚಿಕೊಂಡರು.

ಈ ಬಾರಿಯ ಐಪಿಎಲ್​ ಆರಂಭಕ್ಕೂ ಮುನ್ನವೇ ತಮ್ಮ ನಿವೃತ್ತಿಯ ಬಗ್ಗೆ ದಿನೇಶ್​ ಕಾರ್ತಿಕ್ ತುಟಿಬಿಚ್ಚಿದ್ದರು. 17 ವರ್ಷಗಳ ಐಪಿಎಲ್​ ಜರ್ನಿಯಲ್ಲಿ ದಿನೇಶ್ ಕಾರ್ತಿಕ್ ಒಟ್ಟು 6 ತಂಡಗಳ ಪರ ಕಣಕ್ಕಿಳಿದಿದ್ದಾರೆ. ಈ ವೇಳೆ 2013 ರಲ್ಲಿ ಮುಂಬೈ ಇಂಡಿಯನ್ಸ್ ಪರ ಅವರು ಟ್ರೋಫಿ ಗೆದ್ದಿದ್ದರು. ಇದಾದ ಬಳಿಕ ಹಲವು ತಂಡಗಳ ಪರ ಆಡಿದರೂ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿಲ್ಲ.

2022ರ ಹರಾಜಿನಲ್ಲಿ ಕಾರ್ತಿಕ್​ ಅವರು ಬರೋಬ್ಬರಿ 5.5 ಕೋಟಿ ರೂ. ಪಡೆದು ಆರ್​ಸಿಬಿ ಕ್ಯಾಂಪ್ ಸೇರಿದ್ದರು. ಆ ಆವೃತ್ತಿಯಲ್ಲಿ ಕಾರ್ತಿಕ್ 14 ಇನ್ನಿಂಗ್ಸ್ ಗಳಲ್ಲಿ 287 ರನ್ ಬಾರಿಸಿದ್ದರು. ಜತೆಗೆ ತಂಡದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಿದ್ದರು. ಇದೇ ಪ್ರದರ್ಶನ ಕಂಡು ಆಸ್ಟ್ರೇಲಿಯಾದಲ್ಲಿ ನಡೆದ ಕಂಡು ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಆಡಿಸಲಾಗಿತ್ತು. ಆದರೆ ಇಲ್ಲಿ ಕಾರ್ತಿಕ್​ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಜತೆಗೆ ಕಳೆದ ಐಪಿಎಲ್​ ಟೂರ್ನಿಯಲ್ಲಿ ಘೋರ ವೈಫಲ್ಯ ಎದುರಿಸಿದ್ದರು.

ಐಪಿಎಲ್​ನಲ್ಲಿ ಧೋನಿ ಬಳಿಕ ಅತೀ ಹೆಚ್ಚು ಪಂದ್ಯವಾಡಿದ ದಾಖಲೆ ಕೂಡ ದಿನೇಶ್ ಕಾರ್ತಿಕ್ ಹೆಸರಿನಲ್ಲಿದೆ. ಆರ್​ಸಿಬಿಗೆ​ ಟ್ರೋಫಿ ಗೆದ್ದು ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದ ಡಿಕೆ ಕನಸಿಗೆ ರಾಜಸ್ಥಾನ್​ ರಾಯಲ್ಸ್​ ಅಡ್ಡಗಾಲಿಕ್ಕಿತು. ದಿನೇಶ್ ಕಾರ್ತಿಕ್ 257 ಪಂದ್ಯಗಳಲ್ಲಿ 22 ಅರ್ಧಶತಕಗಳನ್ನು ಬಾರಿಸಿ 4,842 ರನ್‌ ಬಾರಿಸಿದ್ದಾರೆ. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 15 ಪಂದ್ಯಗಳಲ್ಲಿ 326 ರನ್​ ಬಾರಿಸಿದ್ದಾರೆ.

ಇದನ್ನೂ ಓದಿ IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ಕಾರ್ತಿಕ್​ ಭಾರತ ಪರ 26 ಟೆಸ್ಟ್‌ಗಳನ್ನು ಆಡಿ 1025 ರನ್ ಗಳಿಸಿದ್ದಾರೆ. 57 ಕ್ಯಾಚ್‌ಗಳು ಮತ್ತು 6 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಅವರು ತಮ್ಮ ಕೊನೆಯ ಟೆಸ್ಟ್ ಆಡಿದ್ದು 2018 ರಲ್ಲಿ. ಏಕದಿನದಲ್ಲಿ 94 ಪಂದ್ಯಗಳನ್ನು ಆಡಿ 1752 ರನ್ ಗಳಿಸಿದ್ದಾರೆ. 64 ಕ್ಯಾಚ್‌ಗಳು ಮತ್ತು 7 ಸ್ಟಂಪಿಂಗ್‌ಗಳನ್ನು ನಿರ್ವಹಿಸಿದ್ದಾರೆ. 60 ಟಿ20 ಪಂದ್ಯಗಳಿಂದ 686 ರನ್ ಗಳಿಸಿ, 30 ಕ್ಯಾಚ್‌ಗಳು ಮತ್ತು 8 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.

Continue Reading

ಕ್ರೀಡೆ

IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

IPL 2024: ವಿಶೇಷ ಎಂದರೆ ಎಲಿಮಿನೇಟರ್​​ನಲ್ಲಿ ಲಕ್ನೋವನ್ನು ಸೋಲಿಸಿದ ನಂತರ ಆರ್​ಸಿಬಿ ತಂಡವು 2022 ರ ಋತುವಿನಲ್ಲಿ ಕ್ವಾಲಿಫೈಯರ್ 2 ಹಂತದಲ್ಲಿ ರಾಲ್ಸ್​​ನಿಂದಲೇ ಹೊಡೆತ ತಿಂದು ಹೊರಕ್ಕೆ ಬಿದ್ದಿತ್ತು. 2020 ಮತ್ತು 2021ರಲ್ಲಿಯೂ ಆರ್​ಸಿಬಿ ಎಲಿಮಿನೇಟರ್​ನಲ್ಲಿ ಸೋಲು ಕಂಡಿತ್ತು. 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​​ಸಿಬಿ ಕೊನೆಯ ಬಾರಿ ಫೈನಲ್ ತಲುಪಿತ್ತು.

VISTARANEWS.COM


on

IPL 2024
Koo

ಬೆಂಗಳೂರು: ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಆರ್​ಸಿಬಿಯ (RCB) ಭರವಸೆಗಳು ಮೇ 22 ರ ಬುಧವಾರ ಕೊನೆಗೊಂಡವು. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ವಿರುದ್ಧ ಸೋತ ನಂತರ ಐಪಿಎಲ್ 2024 ರ (IPL 2024) ಎಲಿಮಿನೇಟರ್​ ಹಂತದಲ್ಲಿಯೇ ರೆಡ್​ಆರ್ಮಿ ಹೊರಕ್ಕೆ ಬಿತ್ತು. ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಪಂದ್ಯಾವಳಿಯ ನಾಕೌಟ್ ಹಂತದಲ್ಲಿ ತನ್ನ ಆವೇಗ ಉಳಿಸಿಕೊಳ್ಳಲಿಲ್ಲ. ಆರು ಪಂದ್ಯಗಳ ಗೆಲುವಿನ ನಂಬಲಾಗದ ಓಟವನ್ನು ಮುಂದುವರಿಸಲಿಲ್ಲ. ಮತ್ತದೇ ಹಳೆ ರಾಗವೆಂಬಂತೆ ಸೋಲಿನ ಸುಳಿಗೆ ಸಿಲುಕಿ ಕೋಟ್ಯಂತರ ಅಭಿಮಾನಿಗಳಿಗೆ ಬೇಸರ ಮೂಡಿಸಿದರು.

ನಾಕೌಟ್ ಹಂತದಲ್ಲಿ ಒತ್ತಡಕ್ಕೆ ಒಳಗಾಗುವ ಆರ್​​ಸಿಬಿ ಚಾಳಿ ಇಲ್ಲಿಯೂ ಮುಂದುವರಿಯಿತು. ಆರ್​ಆರ್​ ತಂಡದ ಹಿಂದೆ ಈ ಹಿಂದೆ ನಾಕೌಟ್​ ಹಂತದಲ್ಲಿ ಸೋತಂತೆ ಇಂದೂ ಸೋತಿತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ಇಬ್ಬನಿ ಪರಿಣಾಮ ಸೇರಿದಂತೆ ರನ್​ ಚೇಸ್ ಮಾಡುವ ತಂಡಕ್ಕೆ ಅನುಕೂಲವಾಗಿದ್ದ ಪರಿಸ್ಥಿತಿಯಲ್ಲಿ ಕಡಿಮೆ ಸ್ಕೋರ್ ಆಗಿತ್ತು. ಹೀಗಾಗಿ ಸೋಲು ಸಹಜವಾಗಿಯೇ ಬಂದಿದೆ. ಇದೇ 17 ಆವೃತ್ತಿಗಳು ಮುಗಿದರೂ ಆರ್​ಸಿಬಿಯ ಕಪ್​ ಬರ ನೀಗಲಿಲ್ಲ. ಕಪ್​ಗಾಗಿ ಕಾಯುವ ದಿನಗಳು ಮತ್ತಷ್ಟು ಮುಂದೂಡಿಕೆಯಾದವು.

ವಿಶೇಷ ಎಂದರೆ ಎಲಿಮಿನೇಟರ್​​ನಲ್ಲಿ ಲಕ್ನೋವನ್ನು ಸೋಲಿಸಿದ ನಂತರ ಆರ್​ಸಿಬಿ ತಂಡವು 2022 ರ ಋತುವಿನಲ್ಲಿ ಕ್ವಾಲಿಫೈಯರ್ 2 ಹಂತದಲ್ಲಿ ರಾಲ್ಸ್​​ನಿಂದಲೇ ಹೊಡೆತ ತಿಂದು ಹೊರಕ್ಕೆ ಬಿದ್ದಿತ್ತು. 2020 ಮತ್ತು 2021ರಲ್ಲಿಯೂ ಆರ್​ಸಿಬಿ ಎಲಿಮಿನೇಟರ್​ನಲ್ಲಿ ಸೋಲು ಕಂಡಿತ್ತು. 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​​ಸಿಬಿ ಕೊನೆಯ ಬಾರಿ ಫೈನಲ್ ತಲುಪಿತ್ತು.

ಪಂದ್ಯದಲ್ಲಿ ಏನಾಯಿತು?

ಬೌಲರ್​ಗಳ ಸಂಘಟಿತ ಹೋರಾಟ ಹಾಗೂ ಯಶಸ್ವಿ ಜೈಸ್ವಾಲ್ (45 ರನ್​) ಹಾಗೂ ರಿಯಾನ್ ಪರಾಗ್​ (36 ರನ್​) ಬ್ಯಾಟಿಂಗ್ ಬಲದಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್​ 2024ರ (IPL 2024) ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಲೀಗ್ ಹಂತದಲ್ಲಿ ಸತತ ನಾಲ್ಕು ಸೋಲು ಹಾಗೂ ಮಳೆಯಿಂದಾಗಿ ಒಂದು ಪಂದ್ಯ ರದ್ದುಗೊಂಡ ಕಾರಣ ಬೇಸರಕ್ಕೆ ಒಳಗಾಗಿದ್ದ ರಾಜಸ್ಥಾನ್ ಬಳಗ ಈ ಗೆಲುವಿನೊಂದಿಗೆ ಖುಷಿ ಕಂಡು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆಯಿತು. ಅಲ್ಲಿ ಸಂಜು ಬಳಗ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ಸನ್​ ರೈಸರ್ಸ್​ ಹೈದರಾಬಾದ್​ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ: IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

ಈ ಸೋಲಿನೊಂದಿಗೆ ಆರ್​ಸಿಬಿ ತಂಡದ 2024ರ ಐಪಿಎಲ್​ ಅಭಿಯಾನ ಮುಕ್ತಾಯಗೊಂಡಿತು. ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿರುವುದೇ ರೆಡ್​ ಆರ್ಮಿಯ ದೊಡ್ಡ ಸಾಧನೆ ಎನಿಸಿಕೊಂಡಿತು. ಜತೆಗೆ ಆರ್​​ಸಿಬಿಯ ಅಪಾರ ಅಭಿಮಾನಿಗಳ ಹೃದಯ ಛಿದ್ರಗೊಂಡಿತು. ಈ ಬಾರಿಯಾದರೂ ಕಪ್​ ಗೆಲ್ಲಬೇಕೆಂಬ ಆಸೆ ಕಮರಿತು. ಕಷ್ಟದಲ್ಲಿ ಪ್ಲೇಆಫ್​ ಹಂತಕ್ಕೇರಿದ ಹೊರತಾಗಿಯೂ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಚೆನ್ನೈ ವಿರುದ್ಧದ ಲೀಗ್ ಪಂದ್ಯದಲ್ಲಿ ಹೆಚ್ಚು ನಿಖರವಾಗಿ ಆಡಿದ್ದ ಆರ್​ಸಿಬಿ ಈ ಪಂದ್ಯದಲ್ಲಿ ನಿರ್ಲಕ್ಷ್ಯ ತೋರಿತು. ಬ್ಯಾಟಿಂಗ್​ನಲ್ಲಿ ಅನಗತ್ಯವಾಗಿ ವಿಕೆಟ್​ ಒಪ್ಪಿಸಿದರೆ ಬೌಲಿಂಗ್ ವೇಳೆಯೂ ಕ್ಯಾಚ್​ ಕೈಚೆಲ್ಲಿ, ಕಳಪೆ ಫೀಲ್ಡಿಂಗ್ ಮಾಡಿ, ರನ್​ಔಟ್​ ಚಾನ್ಸ್​ ಕಳೆದುಕೊಂಡಿತು. ಇದು ಸೋಲಿಗೆ ಕಾರಣವಾಯಿತು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 172 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 174 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

Continue Reading
Advertisement
Viral Video
ವೈರಲ್ ನ್ಯೂಸ್29 seconds ago

Viral Video: ಸುಡುವ ಮರಳಿನಲ್ಲಿ ಹಪ್ಪಳ ಸುಟ್ಟ ಬಿಎಸ್‌ಎಫ್‌ ಯೋಧ; ಎಲ್ಲೆಡೆ ಇದೇ ವಿಡಿಯೋ ವೈರಲ್‌

Hanuman Chalisa
ಧಾರ್ಮಿಕ21 mins ago

Hanuman Chalisa: ಹನುಮಾನ್ ಚಾಲೀಸಾ ಪಠಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

RCB
ಕ್ರೀಡೆ26 mins ago

RCB: ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ಸೋಲಿಗೆ ವಿಜಯ್​ ಮಲ್ಯ ಕಾರಣವಂತೆ!

Cyber Crime
ಕ್ರೈಂ44 mins ago

ಎಐ ತಂತ್ರಜ್ಞಾನದಿಂದ ಹಿಂದು ಯುವತಿಯ ಅಶ್ಲೀಲ ವಿಡಿಯೊ ಸೃಷ್ಟಿಸಿ ಇಸ್ಲಾಂಗೆ ಮತಾಂತರಗೊಳಿಸಲು ಯತ್ನ: ಫೈಜಲ್ ವಿರುದ್ಧ ದೂರು

vegetable rates increase
ಪ್ರಮುಖ ಸುದ್ದಿ1 hour ago

Vegetable Rates: ತರಕಾರಿ ಮುಟ್ಟಿದರೆ ಶಾಕ್‌, ಕಿಲೋಗೆ 320 ದಾಟಿದ ಬೀನ್ಸ್!‌

Phalodi satta market
ದೇಶ1 hour ago

Phalodi Satta Bazar: ಚುನಾವಣಾ ಫಲಿತಾಂಶದ ಬಗ್ಗೆ ಸಟ್ಟಾ ಬಜಾರ್‌ನ ಪಕ್ಕಾ ಭವಿಷ್ಯವಾಣಿ; ಈ ಮಾರ್ಕೆಟ್‌ನ ಹಿನ್ನೆಲೆ ಏನು?

Virat Kohli
ಕ್ರೀಡೆ1 hour ago

Virat Kohli: ಅಂದು ವಿಶ್ವಕಪ್​ನಲ್ಲಿ, ಇಂದು ಐಪಿಎಲ್​ನಲ್ಲಿ ವಿಕೆಟ್​ ಬೇಲ್ಸ್​ ಹಾರಿಸಿ ಬೇಸರದಿಂದ ಮೈದಾನ ತೊರೆದ ಕೊಹ್ಲಿ

vistara news impact medical negligence
ವಿಜಯನಗರ2 hours ago

Medical Negligence: ಅಮಾಯಕ ಬಾಲಕನ ಜೀವ ತೆಗೆದ ಆಸ್ಪತ್ರೆಗೆ ಬೀಗ!

Dinesh Karthik
ಕ್ರೀಡೆ2 hours ago

Dinesh Karthik: ಕೊಹ್ಲಿಯೊಂದಿಗೆ ಭಾವುಕ ಆಲಿಂಗನ; ಕ್ರಿಕೆಟ್​ ಜರ್ನಿ ಮುಗಿಸಿದ ದಿನೇಶ್​ ಕಾರ್ತಿಕ್​

Bangladesh MP Missing Case
ದೇಶ2 hours ago

Bangladesh MP Missing Case: ನಿಗೂಢವಾಗಿ ಕಣ್ಮರೆ ಆಗಿದ್ದ ಬಾಂಗ್ಲಾದೇಶ ಸಂಸದನ ಬರ್ಬರ ಕೊಲೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ5 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 day ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌