ಅಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಡಮ್ ಜಂಪಾ ಅವರು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಲೆಗ್ ಸ್ಪಿನ್ನರ್ ಜಂಪಾ ಈಗ 2023 ರ ವಿಶ್ವಕಪ್ನಲ್ಲಿ 23 ವಿಕೆಟ್ಗಳನ್ನು ಉರುಳಿಸುವ ಮೂಲಕ ಅಗ್ರ ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದ್ದಾರೆ. ಅವರೀಗ 2007 ರ ಆವೃತ್ತಿಯಲ್ಲಿ ಮುರಳೀಧರನ್ ಅವರ 23 ವಿಕೆಟ್ಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.
ಏಕದಿನ ವಿಶ್ವಕಪ್ ನ ಒಂದು ಆವೃತ್ತಿಯಲ್ಲಿ ಸ್ಪಿನ್ನರ್ಗಳ ಗರಿಷ್ಠ ವಿಕೆಟ್
- 1) ಆಡಮ್ ಜಂಪಾ – 2023 ರಲ್ಲಿ 23 ವಿಕೆಟ್
- 2) ಮುತ್ತಯ್ಯ ಮುರಳೀಧರನ್ – 2007ರಲ್ಲಿ 23 ವಿಕೆಟ್
- 3) ಶಾಹಿದ್ ಅಫ್ರಿದಿ – 2011ರಲ್ಲಿ 21 ವಿಕೆಟ್
- 4) ಬ್ರಾಡ್ ಹಾಗ್ – 2007ರಲ್ಲಿ 21 ವಿಕೆಟ್
- 5) ಶೇನ್ ವಾರ್ನ್ – 1999ರಲ್ಲಿ 20 ವಿಕೆಟ್
ಕೋಚ್ ರಾಹುಲ್ ದಾಖಲೆ ಮುರಿದ ಕೆ. ಎಲ್ ರಾಹುಲ್!
ಅಹಮದಾಬಾದ್: ಏಕದಿನ ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಎಂಬ ಹೆಗ್ಗಳಿಕೆಗೆ ಕೆ.ಎಲ್ ರಾಹುಲ್ (KL Rahul) ಪಾತ್ರರಾಗಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ನಲ್ಲಿ ಮಿಚೆಲ್ ಮಾರ್ಷ್ ಕ್ಯಾಚ್ ಪಡೆಯುವ ಮೂಲಕ ರಾಹುಲ್ 2023 ರ ವಿಶ್ವಕಪ್ನಲ್ಲಿ ತಮ್ಮ 17 ನೇ ಬಲಿಯನ್ನು ಪಡೆದುಕೊಂಡರು. ಅವರು ಹಾಲಿ ಕೋಚ್ ಹಾಗೂ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಇದನ್ನೂ ಓದಿ : ICC World Cup 2023 : ವಿಶ್ವ ಕಪ್ ಫೈನಲ್ ಇತಿಹಾಸದಲ್ಲಿ ಕನಿಷ್ಠ ಮೊತ್ತ ರಕ್ಷಿಸಿ ಗೆದ್ದಿತ್ತು ಭಾರತ
2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ನಲ್ಲಿ ದ್ರಾವಿಡ್ 15 ಕ್ಯಾಚ್ಗಳು ಹಾಗೂ 1 ಸ್ಟಂಪಿಂಗ್ ದಾಖಲೆಯನ್ನು ಮಾಡಿದ್ದರು. ಭಾನುವಾರ ನಡೆದ ಫೈನಲ್ನಲ್ಲಿ ರಾಹುಲ್ 107 ಎಸೆತಗಳಲ್ಲಿ 66 ರನ್ ಗಳಿಸಿದರು. ಮೂರು ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿ ಅನಿಶ್ಚಿತತೆಯಲ್ಲಿದ್ದ ಭಾರತ ತಂಡಕ್ಕೆ ಚೇತರಿಸಿಕೊಳ್ಳಲು ಸಹಾಯ ಮಾಡಿದರು.
ವಿಶ್ವ ಕಪ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತ ವಿಕೆಟ್ ಕೀಪರ್ಗಳ ವಿವರ
- ಕೆಎಲ್ ರಾಹುಲ್ 11 ಪಂದ್ಯ, 17 ವಿಕೆಟ್, 16 ಕ್ಯಾಚ್, 1 ಸ್ಪಂಪ್, 2023 ವರ್ಷ
- ರಾಹುಲ್ ದ್ರಾವಿಡ್ 11 ಪಂದ್ಯ 16 ವಿಕೆಟ್ 15 ಕ್ಯಾಚ್ 1 ಸ್ಟಂಪ್ 2003 ವರ್ಷ
- ಎಂಎಸ್ ಧೋನಿ 8 ಪಂದ್ಯ 15 ವಿಕೆಟ್ 15 ಕ್ಯಾಚ್ 0 ಸ್ಟಂಪ್ 2015 ವರ್ಷ
- ಸೈಯದ್ ಕಿರ್ಮಾನಿ 8 ಪಂದ್ಯ 14 ವಿಕೆಟ್ 12 ಕ್ಯಾಚ್ 2 ಸ್ಟಂಪ್ಡ್ 1983 ವರ್ಷ
- ಕಿರಣ್ ಮೋರೆ 6 ಪಂದ್ಯ 11 ವಿಕೆಟ್ 6 ಕ್ಯಾಚ್ 5 ಸ್ಟಂಪ್ 1987 ವರ್ಷ